` sudeep - chitraloka.com | Kannada Movie News, Reviews | Image

sudeep

 • ಅಂಬಿ.. ಟೀಂಗೆ ನಿಫಾ ವೈರಸ್ ಭಯ ಇಲ್ಲವಾ..?

  ambi ninge vaisaito shooting image

  ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಶೂಟಿಂಗ್ ಈಗ ಕೇರಳದಲ್ಲಿದೆ. ಕೇರಳದಲ್ಲಿ ಈಗ ನಿಫಾ ವೈರಸ್ ಭಯ. ನಿಫಾ ವೈರಸ್ ಮೊದಲ ಬಲಿ ಪಡೆದಿರುವುದೇ ಕೇರಳದಲ್ಲಿ. ಹೀಗಾಗಿ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರತಂಡ ಕೇರಳದಲ್ಲೇ ಇರೋದ್ರಿಂದ ಇಲ್ಲಿರೋವ್ರಿಗೆ ಟೆನ್ಷನ್ ಶುರುವಾಗಿದೆ. ಸಹಜವಾಗಿಯೇ ಅಭಿಮಾನಿಗಳಲ್ಲಿಯೂ ಒಂದಿಷ್ಟು ಆತಂಕಗಳಿವೆ. ಇವುಗಳಿಗೆಲ್ಲ ಚಿತ್ರತಂಡವೇ ಉತ್ತರ ನೀಡಿದೆ. 

  ಆತಂಕಗೊಳ್ಳುವ ಅಗತ್ಯವಿಲ್ಲ. ನಾವು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಡೀ ತಂಡದ ಯಾರೊಬ್ಬರೂ ಈಗ ಹಣ್ಣು, ಜ್ಯೂಸ್ ಕುಡಿಯುತ್ತಿಲ್ಲ. ಪ್ರತಿಯೊಬ್ಬರೂ ಕುದಿಸಿ ಆರಿಸಿದ ನೀರನ್ನೇ ಕುಡಿಯುತ್ತಿದ್ದೇವೆ ಎಂದು ತಿಳಿಸಿದ್ದಾರೆ ಚಿತ್ರದ ನಿರ್ಮಾಪಕ ಜಾಕ್ ಮಂಜು.

  ನಿಫಾ ವೈರಸ್ ಬಲಿ ತೆಗೆದುಕೊಂಡ ಜಾಗಕ್ಕೂ, ಶೂಟಿಂಗ್ ಸ್ಪಾಟ್‍ಗೂ 250 ಕಿ.ಮೀ. ಅಂತರವಿದೆ. ಇಲ್ಲಿನ ಜನರೂ ಆರಾಮಾಗಿದ್ದಾರೆ. ಅವರು ಹಣ್ಣು, ಜ್ಯೂಸ್.. ಎಲ್ಲವನ್ನೂ ತಿಂತಾರೆ. ಕುಡೀತಾರೆ. ಅವರಿಗೇ ಭಯ ಇಲ್ಲ ಎಂದು ತಿಳಿಸಿದ್ದಾರೆ ಜಾಕ್ ಮಂಜು.

  ಎರಡು ಶಿಫ್ಟ್‍ಗಳಲ್ಲಿ ಕೆಲಸ ಮಾಡುತ್ತಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಮುಗಿಸುವ ಉತ್ಸಾಹದಲ್ಲಿದೆ. ಇದಾದ ನಂತರ ಸುದೀಪ್ ಮೇಲೊಂದು ಹಾಡು ಹಾಗೂ ಒಂದು ಫೈಟ್ ಸೀನ್ ಚಿತ್ರೀಕರಣ ಬಾಕಿ ಇರುತ್ತೆ.

 • ಅಂಬಿ.. ಟೀಂಗೆ ಸುದೀಪ್, ಶೃತಿ

  sudeep sruthi hariharan in ambi ninge vaisaito

  ರೆಬಲ್‍ಸ್ಟಾರ್ ಅಂಬರೀಷ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಅಂಬಿ ನಿಂಗೆ ವಯಸ್ಸಾಯ್ತೋ. ಕಿಚ್ಚ ಕ್ರಿಯೇಷನ್ಸ್‍ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾಗೆ ಈಗ ಸುದೀಪ್ ಮತ್ತು ಶೃತಿ ಹರಿಹರನ್ ಎಂಟ್ರಿ ಕೊಟ್ಟಿದ್ದಾರೆ.

  ಚಿತ್ರದಲ್ಲಿ ಸುದೀಪ್, ಯೌವ್ವನದ ಅಂಬರೀಷ್ ಆಗಿ ಕಾಣಿಸಿಕೊಳ್ತಾರೆ. ಜೋಡಿಯಾಗಿ ಶೃತಿ ಹರಿಹರನ್ ಇರ್ತಾರೆ. ಇಬ್ಬರ ಪಾತ್ರಗಳ ಶೂಟಿಂಗ್ ಶುರುವಾಗಿದೆ. ತಮಿಳಿನ ಪವರ್ ಪಾಂಡಿ ಚಿತ್ರದ ರೀಮೇಕ್ ಆಗಿರುವ ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನವಿದೆ. 

   

 • ಅಂಬಿಯನ್ನು ಮೆಚ್ಚಿಕೊಂಡ ಶಿವಣ್ಣ, ಕೆ.ಎಲ್.ರಾಹುಲ್..

  ambi ninge vaisaitho

  ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರ ಬಾಕ್ಸಾಫೀಸ್‍ನಲ್ಲಿ ಝೂಮ್‍ನಲ್ಲಿ ಹೋಗ್ತಾ ಇದೆ. ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿರೋದು ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗದ ತಾರೆಯರು, ವಿವಿಧ ಕ್ಷೇತ್ರದ ಸೆಲಬ್ರಿಟಿಗಳೂ ಸಿನಿಮಾ ನೋಡಿದ್ದಾರೆ.

  ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಓರಿಯನ್ ಮಾಲ್‍ನಲ್ಲಿ ಸಿನಿಮಾ ನೋಡಿ ಅಂಬಿಯ ಅಭಿನಯಕ್ಕೆ ಹ್ಯಾಟ್ಸಾಫ್ ಎಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಕೂಡಾ, ಕ್ರಿಕೆಟ್ ಮಧ್ಯೆಯೇ ಬಿಡುವು ಮಾಡಿಕೊಂಡು ಬಂದು ಸಿನಿಮಾ ನೋಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಸಿನಿಮಾ ನೋಡಿ, ಸೀದಾ ಅಂಬರೀಷ್ ಮನೆಗೇ ಹೋಗಿ ಸಿನಿಮಾ ಬಗ್ಗೆ ಮೆಚ್ಚುಗೆ ತಿಳಿಸಿದ್ದಾರೆ. ಮಂಡ್ಯದ ಹೈದ ಚಿಕ್ಕಣ್ಣ ಕೂಡಾ ಅಂಬರೀಷ್ ಅಣ್ಣನ ಮನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

  ನಿರ್ದೇಶಕ ಪವನ್ ಒಡೆಯರ್, ಬಾಲಿವುಡ್ ನಟ ಸುನಿಲ್ ಶೆಟ್ಟಿ, ಯಶ್, ರಾಧಿಕಾ ಪಂಡಿತ್, ಭಾವನಾ ರಾವ್, ಭಾರತಿ ವಿಷ್ಣುವರ್ಧನ್, ಶರತ್ ಕುಮಾರ್, ವಿಜಯಲಕ್ಷ್ಮೀ ಸಿಂಗ್, ಹರ್ಷಿಕಾ ಪೂಣಚ್ಚ, ಕವಿರಾಜ್, ಟಿ.ಎಸ್.ನಾಗಾಭರಣ, ಬಿ.ಸರೋಜಾ ದೇವಿ, ರವಿಶಂಕರ್ ಗೌಡ.. 

  ಪಟ್ಟಿ ತುಂಬಾ ದೊಡ್ಡದಿದೆ. ಅಂಬಿಯನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗದವರೂ ಕಾಯುತ್ತಿದ್ದರು ಅನ್ನೋಕೆ ಇದೇ ಸಾಕ್ಷಿ.

 • ಅಗಲಿದ ಪುಟ್ಟ ಅಭಿಮಾನಿಗೆ ಸುದೀಪ್ ಸಂತಾಪ

  sudeep mourns the death of his young fan

  ಆತನ ಹೆಸರು ಆದಿತ್ಯ. ಪುಟ್ಟ ಬಾಲಕ. ಹೆಸರಿನಲ್ಲಿ ಸೂರ್ಯನಿದ್ದರೂ ಡಿಎಂಡಿ (ಡ್ಯು ಕೇನ್ ಮುಸಲರ್ ಡಿಸ್ಟ್ರೋಫಿ) ಎಂಬ ಚಿಕಿತ್ಸೆಯಿಲ್ಲದ ಕಾಯಿಲೆ ಆತನಿಗೆ ಜನ್ಮತಃ ಬಂದಿತ್ತು. ಅದು ಮೂಳೆಗಳನ್ನು, ಮಾಂಸಖಂಡಗಳನ್ನು  ದುರ್ಬಲಗೊಳಿಸುತ್ತಾ ಹೋಗುವ ಕಾಯಿಲೆ. ಮೊದಲೇ ಗೊತ್ತಾಗುವುದು ಅಪರೂಪ. ಸಾಮಾನ್ಯವಾಗಿ ಬಾಲಕರಿಗೆ 4 ವರ್ಷದವರಿದ್ದಾಗ ಗೊತ್ತಾಗುತ್ತದಾದರೂ ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿರುತ್ತೆ. ಆದಿತ್ಯನಿಗಾಗಿದ್ದುದೂ ಅದೇ. ಹೆತ್ತವರು ಆತನನ್ನು ಬದುಕಿರುವವರೆಗೂ ಚೆನ್ನಾಗಿ ನೋಡಿಕೊಳ್ಳಲು ಪಣ ತೊಟ್ಟಿದ್ದರು.

  ಆದಿತ್ಯ ಸುದೀಪ್ ಅಭಿಮಾನಿಯಾಗಿದ್ದ. ಸುದೀಪ್ ಅವರನ್ನು ನೋಡಲು ತವಕಿಸುತ್ತಿದ್ದ. ಮೈಸೂರಿನ ಈ ಹುಡುಗನ ತಂದೆ ಭಾರತಿ ಶಂಕರ್, ಚಿತ್ರರಂಗದವರೇ. ಆಟೋಗ್ರಾಫ್ ಪ್ಲೀಸ್ ಎಂಬ ಚಿತ್ರ ನಿರ್ದೇಶಿಸಿದ್ದವರು. ಮೈಸೂರಿನಲ್ಲಿಯೇ ನೆಲೆಸಿರುವ ಅವರು ಸುದೀಪ್ ಅವರಿಗೆ ವಿಷಯ ತಿಳಿಸಿದ್ದರು. ಮೈಸೂರಿಗೆ ಹೋಗಿ ಆದಿತ್ಯನಿಗೆ ಸಾಂತ್ವನ ಹೇಳಿದ್ದ ಸುದೀಪ್, ನಂತರ ಆದಿತ್ಯ  ನೋಡಲು ಬಯಸಿದ್ದ ಪ್ರವಾಸಿ ತಾಣಗಳಿಗೆ ತಮ್ಮ ಖರ್ಚಿನಲ್ಲೇ ಹೋಗಿ ಬರಲು ವ್ಯವಸ್ಥೆ ಮಾಡಿದ್ದರು. 

  ಸತತ ಹೋರಾಟದ ನಂತರ ಆದಿತ್ಯ ಕೊನೆಯುಸಿರೆಳೆದಿದ್ದಾರೆ. ಬಾಲಕನ ನಿಧನಕ್ಕೆ ಸುದೀಪ್ ಕಂಬನಿ ಮಿಡಿದಿದ್ದಾರೆ. ಚಿತ್ರಲೋಕದ ವರದಿಯನ್ನು ನೋಡಿದ ಸುದೀಪ್, ಬಾಲಕನೊಂದಿಗೆ ಕಳೆದಿದ್ದ ಮಧುರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. 

 • ಅತಿರೇಕದ ಅಭಿಮಾನಿಗಳಿಗೆ ಈಗ ಯಶ್‍ರಿಂದಲೂ ಬುದ್ದಿವಾದ

  yash requests fans not to dlow things out of proportion

  ಕಿಚ್ಚ ಸುದೀಪ್, ಯಶ್‍ಗೆ ಫಿಟ್‍ನೆಸ್ ಚಾಲೆಂಜ್ ಹಾಕಿದ್ದೂ, ಅದನ್ನು ಸ್ವೀಕರಿಸಿ ಯಶ್ ಕೂಡಾ ಫಿಟ್‍ನೆಸ್ ವಿಡಿಯೋ ಮಾಡಿದ್ದು ಒಂದು ಹಂತವಾದರೆ, ಆ ವಿಡಿಯೋದಲ್ಲಿ ಸುದೀಪ್ ಅವರನ್ನು ಸುದೀಪ್ ಸರ್ ಎನ್ನಲಿಲ್ಲ ಎಂದು ಕಿಚ್ಚನ ಅಭಿಮಾನಿಗಳು ಸಿಟ್ಟಾಗಿದ್ದು ಇನ್ನೊಂದು ಕಥೆ. ಸ್ವತಃ ಸುದೀಪ್ ತಮ್ಮ ಅಭಿಮಾನಿಗಳಿಗೆ ಯಶ್‍ರನ್ನು ಬಯ್ಯಬೇಡಿ ಎಂದು ಕೇಳಿಕೊಂಡರೂ ವಾರ್ ನಿಲ್ಲಲಿಲ್ಲ. ಯಶ್ ಅಭಿಮಾನಿಗಳೂ ಅತಿರೇಕಕ್ಕೆ ಹೋಗಿಬಿಟ್ಟರು. ಈಗ ತಮ್ಮ ಅಭಿಮಾನಿಗಳಿಗೆ ಯಶ್ ಕೂಡಾ ಬುದ್ದಿವಾದ ಹೇಳಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ. ಕೆಲವು ಕಮೆಂಟ್ಸ್‍ಗಳನ್ನೂ ನಾನು ಗಮನಿಸಿದ್ದೇನೆ. ಸುದೀಪ್ ಅವರು ನನಗಿಂತ ಹಿರಿಯರು. ಅವರಿಗೆ ಗೌರವ ಕೊಡಲಿಲ್ಲ ಅಂದ್ರೆ, ನನಗೂ ನೀವು ಗೌರವ ಕೊಡದಂತೆಯೆ. ಘನತೆಯಿಂದ ವರ್ತಿಸಿ. ಇದನ್ನು ದೊಡ್ಡದು ಮಾಡಬೇಡಿ. 

  ನಾನು ಸಾರ್ ಅಂತ ಕರೆದರೆ ಮಾತ್ರ ಅವರಿಗೆ ಗೌರವ ಕೊಟ್ಟ ಹಾಗಲ್ಲ. ಅಥವಾ ನಾನು ಅಂತ ಕರೆಯದೇ ಇದ್ರೂ ಅವರ ಮೇಲಿನ ಗೌರವ ಕಮ್ಮಿಯಾಗಲ್ಲ. ನಾನು ಅವರನ್ನ ತುಂಬಾ ಗೌರವಿಸ್ತೀನಿ. ನನ್ನ ಮೇಲಿನ ಅಭಿಮಾನ ತೋರಿಸಿಕೊಳ್ಳೋಎಕ ಅವರನ್ನು ಅಗೌರವದಿಂದ ಕಾಣೋದು ಸರಿಯಲ್ಲ. ಇದನ್ನ ಇಲ್ಲಿಗೆ ಬಿಡಿ.

  ಈಗ ಇಬ್ಬರೂ ಸ್ಟಾರ್‍ಗಳು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ಧಾಗಿದೆ. ಅತಿರೇಕದ ಅಭಿಮಾನಿಗಳು ಈಗಲಾದರೂ ವಾಸ್ತವ ಅರ್ಥ ಮಾಡಿಕೊಳ್ತಾರಾ..?

 • ಅದೇ ಅಪ್ಪು.. ಅದೇ ಕಿಚ್ಚ.. ಅದೇ ಅಪ್ಪುಗೆ.. ಆಗ ಮಾಸ್ಟರ್.. ಈಗ ಮಿಸ್ಟರ್..!

  sudeep puneeth bromance is a must watch

  ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಅದ್ಧೂರಿಯೋ.. ಅದ್ಧೂರಿ. ಈ ಅದ್ಧೂರಿತನದಲ್ಲಿ ಅಭಿಮಾನಿಗಳ ಹೃದಯ ಕದ್ದ ಇನ್ನೊಂದು ದೃಶ್ಯ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಅಪ್ಪುಗೆ.

  ಸುದೀಪ್ ಮತ್ತು ಪುನೀತ್.. ಇಬ್ಬರೂ ಬಾಲ್ಯದ ಗೆಳೆಯರು. ಚಿತ್ರದ ಆಡಿಯೋ ಲಾಂಚ್‍ನಲ್ಲಿ ಅವರಿಬ್ಬರೂ ಚಿಕ್ಕ ವಯಸ್ಸಿನ ಹುಡುಗರಾಗಿದ್ದಾಗ ಅಪ್ಪಿಕೊಂಡಿದ್ದ ಫೋಟೋವೊಂದನ್ನು ಪ್ರದರ್ಶಿಸಲಾಯ್ತು. ಅದೇ ಸ್ಟೈಲಿನಲ್ಲಿ ಮತ್ತೆ ಸುದೀಪ್, ಅಪ್ಪು ಅಪ್ಪಿಕೊಂಡು ಖುಷಿಪಟ್ಟರು.

  ಸುದೀಪ್ ನನ್ನ ಗೆಳೆಯ. ನಾನು ಈ ಆಡಿಯೋವನ್ನು ಒಬ್ಬ ಪ್ರೇಕ್ಷಕನಾಗಿ ರಿಲೀಸ್ ಮಾಡುತ್ತಿದ್ದೇನೆ ಎಂದು ಪುನೀತ್ ಹೇಳಿದರೆ, ಪುನೀತ್ ಜೊತೆ ನಟಿಸುವ ಆಸೆಯಿದೆ. ಆದರೆ.. ಅವರ ಜೊತೆ ಡ್ಯಾನ್ಸ್ ಮಾಡೋದೇ ಕಷ್ಟ ಎಂದು ಕಿಚಾಯಿಸಿದರು ಕಿಚ್ಚ ಸುದೀಪ್.

  ಪುನೀತ್ ಮತ್ತು ಸುದೀಪ್ ಇಬ್ಬರೂ.. ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಹಾಡನ್ನು ಒಟ್ಟಿಗೇ ಹಾಡಿ ರಂಜಿಸಿದರು. ಪೈಲ್ವಾನ್ ಸಿನಿಮಾ ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿದೆ. ಸ್ವಪ್ನಾ ಕೃಷ್ಣ ನಿರ್ಮಾಣದ ಚಿತ್ರಕ್ಕೆ ಹೆಬ್ಬುಲಿ ಕೃಷ್ಣ ನಿರ್ದೇಶಕ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

 • ಅನು ಪ್ರಭಾಕರ್ ಕಂಡ ವಿಷ್ಣುವರ್ಧನ್-ಸುದೀಪ್ ಕನಸು..!

  anu prabhakar dreams of vishnuvardhan and sudeep

  ಅನುಪ್ರಭಾಕರ್ ವಿಷ್ಣುವರ್ಧನ್ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಂಗಿ ಹಾಗೂ ಮಗಳ ಪಾತ್ರದಲ್ಲಿ ನಟಿಸಿರುವ ಅನುಪ್ರಭಾಕರ್, ಕಿಚ್ಚ ಸುದೀಪ್ ಜೊತೆಯಲ್ಲಿಯೂ ನಟಿಸಿರುವ ಕಲಾವಿದೆ. ಇಂತಹ ಅನುಪ್ರಭಾಕರ್‍ಗೆ ಇತ್ತೀಚೆಗೆ ಒಂದು ಕನಸು ಬಿದ್ದಿದೆ. 

  ಅನುಪ್ರಭಾಕರ್‍ಗೆ ಬಿದ್ದ ಕನಸಲ್ಲಿ ವಿಷ್ಣು ಮತ್ತು ಅನುಪ್ರಭಾಕರ್ ನಟಿಸುತ್ತಿದ್ದಾರೆ. ಆ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಕಿಚ್ಚ ಸುದೀಪ್. ಕನಸಿನಲ್ಲಿ ಇಂಥಾದ್ದೊಂದು ಅದ್ಭುತ ಸನ್ನಿವೇಶ ಕಂಡು ಥ್ರಿಲ್ ಆದ ಅನುಪ್ರಭಾಕರ್, ಆ ಕನಸನ್ನು ಸುದೀಪ್ ಜೊತೆ ಹಂಚಿಕೊಂಡಿದ್ದಾರೆ.

  ಕಿಚ್ಚ ಸುದೀಪ್ ಕೂಡಾ ವಿಷ್ಣು ಅಭಿಮಾನಿ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದವರು. ಅನುಪ್ರಭಾಕರ್ ಕಂಡ ಕನಸಿಗೆ ಅವರೊಂದು ಪ್ರತಿಕ್ರಿಯೆ ನೀಡಿದ್ದಾರೆ.

  ಅನುಪ್ರಭಾಕರ್, ವಿಷ್ಣುವರ್ಧನ್ ಒಟ್ಟಿಗೇ ಇರುವ ದೃಶ್ಯವನ್ನು ಈಗಾಗಲೇ ಶೂಟ್ ಮಾಡಿದ್ದೇನೆ ಎಂದಿರುವ ಸುದೀಪ್, ಅಷ್ಟೇ ನವಿರಾಗಿ ಅದು ಗ್ರೀನ್‍ಮ್ಯಾಟ್ ಶೂಟ್ ಆಗಿತ್ತು ಎಂದಿದ್ದಾರೆ. ಅದು ಆಗಿದ್ದುದು #73ಶಾಂತಿನಿವಾಸ ಚಿತ್ರದಲ್ಲಿ. ಆ ಚಿತ್ರಕ್ಕೆ ಸ್ವತಃ ಸುದೀಪ್ ಅವರೇ ನಿರ್ದೇಶಕರಾಗಿದ್ದರು. ಅದು ಪುಟ್ಟ ದೃಶ್ಯವೇ ಇರಬಹುದು. ಎಲ್ಲೋ ಒಂದು ಕಡೆ ಅದು ನಿಜವಾಗಿದೆ ಎನ್ನುವುದೇ ನನಗೆ ಖುಷಿ. ನಿಮ್ಮನ್ನು ನಿರ್ದೇಶಿಸುವುದೂ ಕೂಡಾ ನನಗೆ ಸದಾ ಖುಷಿ ಕೊಡುವ ವಿಷಯ ಎಂದು ಹೇಳಿಕೊಂಡಿದ್ದಾರೆ ಸುದೀಪ್.

  ಇದು ವಿಷ್ಣುವರ್ಧನ್ ಅವರ ಇಬ್ಬರು ಅಭಿಮಾನಿಗಳ ಕಥೆ. ಒಬ್ಬರು ಕನಸು ಕಂಡು ಖುಷಿಯಾದರೆ, ಇನ್ನೊಬ್ಬರು ನೆನಪು ಹಂಚಿಕೊಂಡು ಖುಷಿಯಾಗಿದ್ದಾರೆ.

 • ಅಪ್ಪು ಡ್ಯಾನ್ಸ್‍ನ್ನು ಕಿಚ್ಚ ಹೊಗಳಿದ್ದು ಹೀಗೆ..

  sudeep praises puneeth's dancing skills

  `ನನಗೆ ಎರಡು ಆಪ್ಷನ್‍ಗಳನ್ನು ಕೊಡಲಾಗಿತ್ತು. ಒಂದು - ದೇಹವನ್ನು ದಂಡಿಸಿ ಟೋನ್ ಮಾಡಿಕೊಳ್ಳುವುದು. ಎರಡು - ಡ್ಯಾನ್ಸರ್ ಆಗುವುದು. ನನ್ನ ಆಯ್ಕೆ ಏನು ಎನ್ನುವುದು ಇಡೀ ಜಗತ್ತಿಗೇ ಗೊತ್ತು. ನಾನು ಇದ್ದುದರಲ್ಲಿ ಸುಲಭ ಎನ್ನಿಸಿದ ಮೊದಲನೆಯದನ್ನೇ ಆಯ್ಕೆ ಮಾಡಿಕೊಂಡೆ. ಜೀವನವನ್ನು ಸುಲಭ ಮಾಡಿಕೊಂಡಿದ್ದೇನೆ. ನೀವು ಡ್ಯಾನ್ಸ್ ಮಾಡೋದನ್ನು ನೋಡಿ ಖುಷಿಪಡುತ್ತೇನೆ'

  ಪುನೀತ್ ರಾಜ್‍ಕುಮಾರ್ ಡ್ಯಾನ್ಸ್ ಬಗ್ಗೆ ಕಿಚ್ಚ ಸುದೀಪ್ ಹೇಳಿರುವುದು ಹೀಗೆ. ನಟಸಾರ್ವಭೌಮ ರಿಲೀಸ್‍ಗೆ ಕಾಯುತ್ತಿದ್ದೇನೆ ಎಂದಿರುವ ಸುದೀಪ್, ಅಪ್ಪು ಚಿತ್ರಕ್ಕೆ ಶುಭ ಹಾರೈಸಿದ್ದಾರೆ. 

  ಸುದೀಪ್ ಅವರಿಗೆ ಥ್ಯಾಂಕ್ಸ್ ಹೇಳಿರುವ ಪುನೀತ್, `ಪೈಲ್ವಾನ್ ಚಿತ್ರದ ಟೀಸರ್ ಇಂಟರೆಸ್ಟಿಂಗ್ ಆಗಿದೆ' ಎಂದಿದ್ದಾರೆ. 

  ಕನ್ನಡದ ಇಬ್ಬರು ಸ್ಟಾರ್‍ಗಳ ನಡುವಿನ ಈ ಸ್ನೇಹ ಸಂಭಾಷಣೆ ಅಭಿಮಾನಿಗಳಿಗೆ ಹಬ್ಬ ಸೃಷ್ಟಿಸಿದೆ.

 • ಅಭಿಮಾನಿ ಸೋದರನ ಸಾವಿಗೆ ಮಿಡಿದ ಕಿಚ್ಚನ ಹೃದಯ

  sudeep upset over fan's death

  ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಪುನೀತ್ ಆರ್ಯ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಸುದೀಪ್ ಅವರ ಪ್ರತಿ ಹುಟ್ಟುಹಬ್ಬ, ಪ್ರತೀ ಸಿನಿಮಾ ಬಿಡುಗಡೆಗಳನ್ನು ಹಬ್ಬದಂತೆ ಆಚರಿಸುತ್ತಿದ್ದ ಪುನೀತ್ ಆರ್ಯ, ಸುದೀಪ್ ಅವರಿಗೆ ಆಪ್ತರೂ ಆಗಿದ್ದರು.

  ಅಭಿಮಾನಿಯ ಅಕಾಲಿಕ ಮರಣಕ್ಕೆ ಸುದೀಪ್ ಸಂತಾಪ ಸೂಚಿಸಿದ್ದಾರೆ. ಆತ ಕೇವಲ ಅಭಿಮಾನಿಯಷ್ಟೇ ಆಗಿರಲಿಲ್ಲ, ಹಲವು ವರ್ಷಗಳಿಂದ ಸಹೋದರನಂತೆ ಜೊತೆಯಲ್ಲಿದ್ದ. ಆತನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ದುಃಖ ತೋಡಿಕೊಂಡಿದ್ದಾರೆ ಸುದೀಪ್.

 • ಅಭಿಮಾನಿಗಳ ಅತಿರೇಕ - ಸುದೀಪ್ ಬುದ್ದಿವಾದ

  sudeep requests fans not to use harsh words against yash

  ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ನಿರಂತರವಾಗಿರುತ್ತಾರಷ್ಟೇ ಅಲ್ಲ, ಆಗಾಗ್ಗೆ ಬುದ್ದಿವಾದವನ್ನೂ ಹೇಳುತ್ತಿರುತ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ಕಿಚ್ಚ ಸುದೀಪ್, ಯಶ್‍ಗೆ ಫಿಟ್‍ನೆಸ್ ಚಾಲೆಂಜ್ ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಟ್ವಿಸ್ಟ್ ಕೊಟ್ಟ ಯಶ್, ತಮ್ಮ ಬಾಲ್ಯಸ್ನೇಹಿತನ ವ್ಯಾಯಾಮದ ವಿಡಿಯೋ ಹಾಕಿದ್ದರು. ಆದರೆ, ಆ ವಿಡಿಯೋದಲ್ಲಿ ಯಶ್ ಆಡಿರುವ ಮಾತು, ಸುದೀಪ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. 

  ಇಷ್ಟಕ್ಕೂ ಆಗಿರೋದೇನಂದ್ರೆ, ಯಶ್ ತಮ್ಮ ವಿಡಿಯೋದಲ್ಲಿ ಹಾಯ್ ಸುದೀಪ್.. ಎಂದಿರೋದು. ಇಷ್ಟಕ್ಕೆ ಕೆಲವು ಅಭಿಮಾನಿಗಳು ಯಶ್ ವಿರುದ್ಧ ಮುಗಿಬಿದ್ದರು. ಸುದೀಪ್ ಅವರನ್ನು ಏಕವಚನದಲ್ಲಿ ಕರೆಯೋದು ಸರೀನಾ..? ದೊಡ್ಡವರಿಗೆ ಗೌರವ ಕೊಡಬೇಕು ಎಂದೆಲ್ಲ ಯಶ್ ವಿರುದ್ಧ ಟೀಕೆಯ ಸುರಿಮಳೆಗೈದರು. ಕೆಲವು ಹತೋಟಿ ಮೀರಿಯೂ ಬಂದವು. ಆಗ ಕಿಚ್ಚ ಸುದೀಪ್ ಅವರೇ ಅಭಿಮಾನಿಗಳಿಗೆ ಬುದ್ದಿವಾದ ಹೇಳಿದ್ದಾರೆ.

  ನನ್ನ ಅಭಿಮಾನಿಗಳಿಗೆ ನನ್ನದೊಂದು ಮನವಿ. ದಯವಿಟ್ಟು ಯಶ್ ವಿರುದ್ಧ ಯಾರೂ ಕೆಟ್ಟ ಪದ ಬಳಸಬೇಡಿ. ಅವರು ವಿಡಿಯೋದಲ್ಲಿ ನನ್ನ ಹೆಸರು ಹೇಳಿರೋದ್ರಲ್ಲಿ ತಪ್ಪೇನೂ ಇಲ್ಲ. ನನ್ನ ಫಿಟ್‍ನೆಸ್ ಚಾಲೆಂಜ್‍ನ್ನು ಸ್ವೀಕರಿಸಿರುವುದೇ ಅವರು ನನಗೆ ನೀಡಿರುವ ಗೌರವ. ದಯವಿಟ್ಟು ನನ್ನ ಮನಸ್ಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಸುದೀಪ್.

  ಕಿಚ್ಚ ಸುದೀಪ್ ಸೇರಿದಂತೆ ಸ್ಯಾಂಡಲ್‍ವುಡ್ ತಾರೆಯರು ವೈಯಕ್ತಿಕ ಮಟ್ಟದಲ್ಲಿ ಸ್ನೇಹ, ಸೌಹಾರ್ದತೆ ಕಾಪಾಡಿಕೊಂಡು ಬಂದಿದ್ದಾರೆ. ಅದು ಅಭಿಮಾನಿಗಳಿಗೆ ಅರ್ಥವಾದರೆ ಸಾಕು.

  Related Articles :-

  ಕಿಚ್ಚನ ಚಾಲೆಂಜ್ ಸ್ವೀಕರಿಸಿದ ಯಶ್, ಪ್ರಿಯಾ ಸುದೀಪ್

 • ಅಭಿಮಾನಿಗಳ ಅತಿರೇಕ.. ಮತ್ತೊಮ್ಮೆ ಕಿಚ್ಚನ ಬುದ್ದಿವಾದ

  kiccha's befitting reply

  ಸ್ಟಾರ್‍ಗಳು ಏನು ಹೇಳಿದರೂ, ಅಭಿಮಾನಿಗಳು ಕಿವಿಗೊಟ್ಟು ಕೇಳ್ತಾರೆ. ಅವರು ಹೇಳಿದಂತೆಯೇ ಮಾಡ್ತಾರೆ. ಆದರೆ, ಅತಿರೇಕದ ಅಭಿಮಾನವೊಂದನ್ನು ಬಿಟ್ಟು. ಈ ಬಾರಿಯೂ ಹಾಗೆಯೇ ಆಗಿದೆ. ದಿ ವಿಲನ್ ಟೀಸರ್‍ಗಳು ರಿಲೀಸ್ ಆಗುತ್ತಿದ್ದಂತೆ, ಯೂಟ್ಯೂಬ್, ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಯ್ತು. ನೋಡಿದವರೆಲ್ಲರೂ ಮೆಚ್ಚಿ ಹೊಗಳಿದರೆ, ಅದರಲ್ಲೂ ಕೆಲವರು ಅತಿರೇಕದ ಅಭಿಮಾನ ಮೆರೆದರು. ಈ ಬಾರಿ ಅಂತಹ ಅತಿರೇಕದ ದಾಳಿಗೆ ಗುರಿಯಾಗಿದ್ದು ರಿಷಬ್ ಶೆಟ್ಟಿ ಹಾಗೂ ಡ್ಯಾನಿಶ್ ಸೇಟ್. ಇಬ್ಬರೂ ಕೂಡಾ ಟ್ವಿಟರ್‍ನಲ್ಲಿ ಸುದೀಪ್ ಅವರ ಟೀಸರ್ ಬಗ್ಗೆ ಅಭಿಪ್ರಾಯ ಹೇಳಿಕೊಂಡರು. ಅವರಷ್ಟೇ ಅಲ್ಲ, ಬಹುತೇಕ ಕಲಾವಿದರು ಸುದೀಪ್ ಅವರ ಟೀಸರ್‍ನ್ನು ಟ್ವಿಟರ್‍ನಲ್ಲಿ ಹೊಗಳಿದರು.

  ಅತಿರೇಕದ ಅಭಿಮಾನಿಗಳಿಗೆ ಅಷ್ಟು ಸಾಕಿತ್ತು. ನೀವ್ಯಾಕೆ ಶಿವರಾಜ್‍ಕುಮಾರ್ ಟೀಸರ್‍ನ್ನು ಹೊಗಳಲಿಲ್ಲ ಎಂದು ಮುಗಿಬಿದ್ದರು. ಆಗ ಡ್ಯಾನಿಶ್ ಸೇಟ್, ರಿಷಬ್ ನೆರವಿಗೆ ಬಂದ ಸುದೀಪ್, ಅಭಿಮಾನಿಗಳಿಗೆ ಬುದ್ದಿವಾದ ಹೇಳಿದರು. ಶಿವರಾಜ್‍ಕುಮಾರ್ ಹಿರಿಯ ಕಲಾವಿದ. ಅವರನ್ನು ಪ್ರತಿಯೊಬ್ಬರೂ ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ದಯವಿಟ್ಟು ಇಂತಹ ಟ್ವೀಟ್‍ಗಳನ್ನು ನೋಡಲು ಬೇಸರವಾಗುತ್ತಿದೆ ಎಂದರು.

  ಡ್ಯಾನಿಶ್ ಸೇಟ್ ಕೂಡಾ ಅಭಿಮಾನಿಗಳಿಗೆ ನಾನು ಶಿವರಾಜ್‍ಕುಮಾರ್ ಅವರನ್ನು ಗೌರವಿಸುತ್ತೇನೆ, ಅವರು ನನಗೆ ಸ್ಫೂರ್ತಿ ಎಂದರಷ್ಟೇ ಅಲ್ಲ, ಟ್ವಿಟರ್‍ನಲ್ಲಿ ಶಿವರಾಜ್‍ಕುಮಾರ್ ಇಲ್ಲ ಎಂಬ ವಿಷಯವನ್ನೂ ಅಭಿಮಾನಿಗಳ ಗಮನಕ್ಕೆ ತಂದರು. ಶಿವರಾಜ್‍ಕುಮಾರ್ ಟೀಸರ್ ಕೂಡಾ ವಂಡರ್‍ಫುಲ್ ಎಂದರು.

  ಅಷ್ಟೇ ಅಲ್ಲ, ಇಬ್ಬರು ದೊಡ್ಡ ಸ್ಟಾರ್‍ಗಳು ನಟಿಸಿರುವ ಚಿತ್ರದ ಬಗ್ಗೆ ಮಾತನಾಡುವಾಗ, ಒಬ್ಬ ನಟನನ್ನು ಮರೆಯುವವನೇ ಚಿತ್ರದ ವಿಲನ್ ಎಂದು ಚಟಾಕಿ ಹಾರಿಸುವ ಮೂಲಕ, ಸೀರಿಯಸ್ಸಾಗಿ ಹೋಗುತ್ತಿದ್ದ ವಿಷಯವನ್ನು ತಿಳಿಗೊಳಿಸಿದರು.

  ದಿ ವಿಲನ್ ಟೀಸರ್‍ಗೆ ಸುನಿಲ್ ಶೆಟ್ಟಿ, ರಾಮ್‍ಗೋಪಾಲ್ ವರ್ಮಾ ಸೇರಿದಂತೆ ಬಾಲಿವುಡ್ ಮಂದಿಯೂ ಮೆಚ್ಚುಗೆ ಸೂಸಿರುವುದು ವಿಶೇಷ. ಪ್ರೇಮ್ ಅವರ ಶ್ರಮ ಟೀಸರ್‍ನಲ್ಲಿ ಎದ್ದು ಕಾಣುತ್ತಿದೆ.

 • ಅಭಿಮಾನಿಗಳ ಆಕ್ರೋಶಕ್ಕೆ ಪ್ರೇಮ್ ಉತ್ತರ

  The Villian Director Prem Image

  ದಿ ವಿಲನ್ ಚಿತ್ರದ ಕ್ಲೈಮಾಕ್ಸ್ ಕೆಲವರ ಕಣ್ಣಲ್ಲಿ ನೀರು ತರಿಸಿದ್ದರೆ, ಇನ್ನೂ ಕೆಲವರ ಕಣ್ಣಲ್ಲಿ ಆಕ್ರೋಶದ ಬೆಂಕಿ ಹುಟ್ಟಿಸಿದೆ. ಸಿನಿಮಾ ಕ್ಲೈಮಾಕ್ಸ್ ಸೀನ್‍ನಲ್ಲಿ ಸುದೀಪ್, ಶಿವರಾಜ್‍ಕುಮಾರ್‍ಗೆ ಹೊಡೆಯುವ ದೃಶ್ಯವಿರುವುದನ್ನು ಶಿವಣ್ಣ ಅಭಿಮಾನಿಗಳು ಅರಗಿಸಿಕೊಳ್ಳೋಕೆ ಸಿದ್ಧರಾಗಿಲ್ಲ. ಅದರಲ್ಲಿಯೂ ಶಿವರಾಜ್‍ಕುಮಾರ್, ತಿರುಗಿ ಸುದೀಪ್‍ಗೆ ಒಂದೇ ಒಂದು ಏಟು ಹೊಡೆಯುವುದಿಲ್ಲ ಎನ್ನುವುದು ಅಭಿಮಾನಿಗಳನ್ನು ಕೆರಳಿಸಿದೆ. ಹಾಗೆ ಕೆರಳಿರುವ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ಕೆಂಡಕಾರಿದ್ದಾರೆ. ಈ ಕುರಿತು ಸುದೀಪ್ ಕೂಡಾ ಪ್ರತಿಕ್ರಿಯೆ ನೀಡಿದ್ದರು. ಪ್ರೇಮ್ ಕೂಡಾ ಮಾತನಾಡಿದ್ದಾರೆ.

  ಚಿತ್ರದ ಕ್ಲೈಮಾಕ್ಸ್‍ನಲ್ಲಿ ಶಿವರಾಜ್‍ಕುಮಾರ್, ಸುದೀಪ್‍ಗೆ ಹೊಡೆಯಲ್ಲ. ಹಾಗೇನಾದರೂ ಶಿವಣ್ಣ, ಸುದೀಪ್‍ಗೆ ತಿರುಗಿ ಹೊಡೆದರೆ, ಆ ಪಾತ್ರವೇ ಬಿದ್ದು ಹೋಗುತ್ತೆ. ಆ ಪಾತ್ರದ ಶಕ್ತಿಯೇ ಅದು. ತಮ್ಮನ ಮೇಲೆ ಕೈ ಮಾಡಲ್ಲ ಎಂದು ಶಿವಣ್ಣ ತಾಯಿಗೆ ಮಾತು ಕೊಟ್ಟಿರುತ್ತಾರೆ. ತಾಯಿಯ ಮಾತಿಗೆ ಕಟ್ಟು ಬಿದ್ದು ಶಿವಣ್ಣನ ಪಾತ್ರ ಸುದೀಪ್ ಮೇಲೆ ಕೈ ಮಾಡಲ್ಲ. ಸಿನಿಮಾದ ಆ ದೃಶ್ಯದ ತೂಕವೇ ಅದು. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಇಷ್ಟು ದಿನ ಚಿತ್ರರಂಗವನ್ನು ಪ್ರೀತಿಯಿಂದ ಬೆಳೆಸಿದವರೇ ನೀವು. ಈಗ ನೀವೇ ಅದಕ್ಕೆ ಕಲ್ಲು  ಹಾಕಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಪ್ರೇಮ್.

  ಚಿತ್ರದಲ್ಲೊಂದು ಡೈಲಾಗ್ ಇದೆ. ನೀನು ನನಗೆ ಒಡಹುಟ್ಟಿದವನಲ್ಲದೇ ಹೋದರೂ ತಮ್ಮನೇ ಅಂಥಾ ಶಿವಣ್ಣ ಹೇಳೊ ಡೈಲಾಗ್ ಅದು. ಆ ಡೈಲಾಗ್‍ನ್ನು ಅರ್ಥ ಮಾಡಿಕೊಂಡರೆ, ಈ ವಿವಾದಗಳು ತಪ್ಪುತ್ತವೇನೋ.. ಈ ಎಲ್ಲ ಆಕ್ರೋಶಗಳ ನಡುವೆಯೂ ದಿ ವಿಲನ್ ಬಾಕ್ಸಾಫೀಸ್‍ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಚಿತ್ರಮಂದಿರಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ.

 • ಅಭಿಮಾನಿಗಳಿಗೆ ಶಿವಣ್ಣ ಮಾಡಿದ ಮನವಿ ಮತ್ತು ಎಚ್ಚರಿಕೆ..!

  shivanna warns and requests fans

  ದಿ ವಿಲನ್ ಸಿನಿಮಾ ಘೋಷಣೆಯಾದಾಗಿನಿಂದ ಅಷ್ಟೇ ಅಲ್ಲ, ಅಭಿಮಾನಿಗಳು ಮೊದಲಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಏನಾದರೊಂದು ವಿವಾದ ಸೃಷ್ಟಿಸಿದವರೇ. ತಮ್ಮ ಮೆಚ್ಚಿನ ನಟನ ಪರವಾಗಿ ನಿಲ್ಲೋದು ಬೇರೆ. ಆ ಭರದಲ್ಲಿ ಇನ್ನೊಬ್ಬ ನಟನ ವಿರುದ್ಧ ಸಿಡಿದೇಳೋದು ಬೇರೆ. ಕೆಲವು ಅಭಿಮಾನಿಗಳ ಅತಿರೇಕ ಸ್ಟಾರ್‍ಗಳಿಗೆ ಕಿರಿಕಿರಿ ಮಾಡಿದ್ದು ಸುಳ್ಳಲ್ಲ. ಈಗ ದಿ ವಿಲನ್ ರಿಲೀಸ್ ಆಗುತ್ತಿದೆ. ಇದು ಅಭಿಮಾನಿಗಳ ಅತಿರೇಕವನ್ನು ಇನ್ಯಾವ ಹಂತಕ್ಕೆ ಕೊಂಡೊಯ್ಯಲಿದೆಯೋ ಗೊತ್ತಿಲ್ಲ. ಅದಕ್ಕೇ ಶಿವಣ್ಣ ಅಭಿಮಾನಿಗಳಿಗೆ ಒಂದು ಮನವಿ ಮಾಡಿದ್ದಾರೆ. ಜೊತೆಗೊಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

  `ನನಗೆ ಅಭಿಮಾನಿಗಳ ನಡುವೆ ಕೂತು ಸಿನಿಮಾ ನೋಡೋದಂದ್ರೆ ಇಷ್ಟ. ಆದರೆ, ಈ ಸಿನಿಮಾ ವೇಳೆ ಅಭಿಮಾನಿಗಳು ಏನಾದ್ರೂ ಘರ್ಷಣೆ, ಗಲಾಟೆ ಸೃಷ್ಟಿಸಿದ್ರೆ, ನನ್ ತಾಯಿ ಮೇಲಾಣೆ, ಇನ್ನೊಂದ್ಸಲ ನಾನು ಥಿಯೇಟರ್‍ಗೆ ಸಿನಿಮಾ ನೋಡೋಕೆ ಬರಲ್ಲ'' ಇದು ಶಿವರಾಜ್‍ಕುಮಾರ್ ಅಭಿಮಾನಿಗಳಿಗೆ ನೀಡಿರುವ ಎಚ್ಚರಿಕೆ.

  ಹಾಗೆಯೇ ಮನವಿಯನ್ನೂ ಮಾಡಿದ್ದಾರೆ ಶಿವಣ್ಣ. ದಿ ವಿಲನ್ ಒಂದು ಸಿನಿಮಾ ಅಷ್ಟೆ. ಅದನ್ನು ಸಿನಿಮಾ ಆಗಿಯೇ ನೋಡಿ. ಚಿತ್ರರಂಗದಲ್ಲಿ ನಾವೆಲ್ಲರೂ ಒಂದೇ. ಇದು ಕೇವಲ ನಮ್ಮ ಸಿನಿಮಾಗಷ್ಟೇ ಅಲ್ಲ, ದರ್ಶನ್, ಪುನೀತ್, ಯಶ್.. ಹೀಗೆ ಪ್ರತಿಯೊಬ್ಬರ ಸಿನಿಮಾಗಳಿಗೂ ಅನ್ವಯಿಸುತ್ತೆ. ದಯವಿಟ್ಟು ಕಲಾವಿದರನ್ನು ಇಬ್ಭಾಗ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಶಿವರಾಜ್‍ಕುಮಾರ್.

 • ಅಭಿಮಾನಿಗಳೆಂದರೆ ನಿಮ್ಮ ಹಾಗಿರಬೇಕು - ವಿಷ್ಣುವರ್ಧನ್ ಅಭಿಮಾನಿಗಳನ್ನು ಮೆಚ್ಚಿಕೊಂಡ ಕಿಚ್ಚ

  sudeep salutes vishnu fans

  ವಿಷ್ಣುವರ್ಧನ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಸುತ್ತಿದ್ದಾರೆ. 

  ಆಗಸ್ಟ್ 27 ರಂದು ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಸಕಲ ಸಿದ್ಧತೆಗಳೂ ನಡೆದಿವೆ. ಆ ಸಮಾರಂಭಕ್ಕೆ ವಿಷ್ಣು ಅಭಿಮಾನಿಗಳು, ರಾಜಕೀಯ ಗಣ್ಯರು, ಸಿನಿಮಾ ದಿಗ್ಗಜರು ಸಾಕ್ಷಿಯಾಗುತ್ತಿದ್ದಾರೆ. ವಿಷ್ಣು ಹೆಸರಲ್ಲಿ ನಡೆಯುತ್ತಿರುವ ಆ ಉತ್ಸವಕ್ಕೆ ವಿಡಿಯೋ ಮೂಲಕ ಶುಭಾಶಯ ಹೇಳಿರುವ ಸುದೀಪ್, ವಿಷ್ಣು ಅಭಿಮಾನಿಗಳನ್ನು ಕೊಂಡಾಡಿದ್ದಾರೆ. ಅಭಿಮಾನಿಗಳೆಂದರೆ, ನಿಮ್ಮ ಹಾಗಿರಬೇಕು ಎಂದು ಮೆಚ್ಚಿಕೊಂಡಿದ್ದಾರೆ.

  ಸುದೀಪ್ ಪೂರ್ವನಿಗದಿತ ಕಾರ್ಯಕ್ರಮಗಳ ಪ್ರಕಾರ ಶೂಟಿಂಗ್​ನಲ್ಲಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಡಿಯೋ ಮೂಲಕ ಶುಭ ಕೋರಿರುವ ಕಿಚ್ಚ, ಒಬ್ಬ ನಟ ನಮ್ಮ  ಜೊತೆ ಇಲ್ಲದಿರುವ ಸಂದರ್ಭಗಳಲ್ಲೂ ಅವರನ್ನು ಜೀವಂತವಾಗಿಡುವುದು ಅಭಿಮಾನಿಗಳಿಂದ ಮಾತ್ರ ಸಾಧ್ಯ. ಅಂಥಾದ್ದೊಂದು ಕೆಲಸ ಮಾಡುತ್ತಿರುವ ವಿಷ್ಣು ಅಭಿಮಾನಿಗಳಿಗೆ ನನ್ನ ನಮನ ಎಂದಿದ್ದಾರೆ.

  ವಿಷ್ಣು ಸರ್ ನೆನಪಲ್ಲಿ, ಈ  ಉತ್ಸವ ನಡೆಸುತ್ತಿರುವ ಅಭಿಮಾನಿಗಳಿಗೆ ನನ್ನ ಸಲ್ಯೂಟ್. ದೆಹಲಿಯಲ್ಲಿ ಈ ಉತ್ಸವ ನಡೆಯುತ್ತಿರುವುದು, ವಿಷ್ಣು ಸರ್ ಅವರ ಆರಡಿ ಎತ್ತರದ ಪ್ರತಿಮೆ ಉದ್ಘಾಟನೆ ಆಗುತ್ತಿರುವುದು, ದೆಹಲಿ ಬಾಗಿಲಿನಲ್ಲಿ ಮೆರವಣಿಗೆ ಮಾಡುತ್ತಿರುವುದು ತುಂಬಾ ಬಹಳ ಖುಷಿ ಆಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸುಮಾರು 500 ಜನ ಅಭಿಮಾನಿಗಳು ಬೆಂಗಳೂರಿನಿಂದ ದೆಹಲಿಗೆ ಹೋಗಿ ಭಾಗವಹಿಸುತ್ತಿರುವುದ ಸಂಭ್ರಮ ಹೆಚ್ಚಿಸಿದೆ ಎಂದಿದ್ಧಾರೆ ಸುದೀಪ್.

  ಚಿತ್ರಲೋಕ ವೀರೇಶ್​ಗೆ ಸುದೀಪ್ ಹಾರೈಕೆ

  ಇದೇ ಕಾರ್ಯಕ್ರಮದಲ್ಲಿ ಚಿತ್ರಲೋಕ ವೀರೇಶ್ ಅವರು ವಿಷ್ಣುವರ್ಧನ್ ಅವರ ಭಾವಚಿತ್ರಗಳನ್ನ ಪ್ರದರ್ಶನ ಮಾಡುತ್ತಿರುವುದನ್ನು ಪ್ರಸ್ತಾಪಿಸಿರುವ ಸುದೀಪ್, ವೀರೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

  ವಿಷ್ಣು ಸರ್ ಬಹಳ ದೊಡ್ಡ ಕಲಾವಿದರು. ಅದಕ್ಕಿಂತಲೂ ಹೆಚ್ಚಾಗಿ ಮಹಾನ್ ವ್ಯಕ್ತಿ. ಅವರ ಹೆಸರಲ್ಲಿ ಎಷ್ಟೇ ಕಾರ್ಯಕ್ರಮಗಳು ನಡೆದರೂ ಕೂಡ ಕಡಿಮೆಯೇ. ನನಗೆ ತುಂಬ ಸಂತೋಷವಿದೆ. ಯಾಕಂದ್ರೆ, ಜೀವನದಲ್ಲಿ ಕೆಲವು ಸಂದರ್ಭಗಳು ಅವರೊಂದಿಗೆ ಕಾಲಕಳೆಯುವ ಅವಕಾಶ ಸಿಕ್ಕಿತ್ತು. ಹತ್ತಿರದಲ್ಲಿ ಕೂತು ಮಾತನಾಡುವುದಕ್ಕೆ ಅವಕಾಶ ಸಿಕ್ಕಿತ್ತು. ನನಗೆ ಒಂದು ಪ್ರಶಸ್ತಿ ಎಂದಿದ್ದಾರೆ ಸುದೀಪ್.

  ವಿಷ್ಣು ಸರ್ ಹೆಸರಲ್ಲಿ ಕಾರ್ಯಕ್ರಮಗಳನ್ನ ನಡೆಸಿ, ವಿಷ್ಣು ಸರ್ ಅವರನ್ನ ಜೀವಂತವಾಗಿ ಇಟ್ಟಿದ್ದೀರಿ ಅದು ಶಾಶ್ವತವಾಗಿರಲಿ. ನಿಮ್ಮಂತಹ ಅಭಿಮಾನಿಗಳನ್ನು ವಿಷ್ಣು ಸರ್ ಧನ್ಯರು ಎಂದಿದ್ದಾರೆ ಸುದೀಪ್.

 • ಅಭಿಮಾನಿಗೆ ದೇವತಾ ಮನುಷ್ಯರಾದರು ಸುದೀಪ್

  sudeep ispires his fan

  ಅಭಿಮಾನಿಗಳು ತಾವು ಇಷ್ಟಪಡುವ ಚಿತ್ರನಟರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಆದರೆ, ಸುದೀಪ್ ಇಲ್ಲೊಬ್ಬ ಅಭಿಮಾನಿಯ ಪಾಲಿಗೆ ನಿಜಕ್ಕೂ ದೇವತಾ ಮನುಷ್ಯರಾಗಿಬಿಟ್ಟಿದ್ದಾರೆ. ನಿಮಗೆ ನೆನಪಿರಬೇಕು, ಕಳೆದ ತಿಂಗಳಷ್ಟೇ ಜೀವಾ ಎಂಬ ಯುವಕನೊಬ್ಬ ನಿರಾಶೆಯಲ್ಲಿ, ಖಿನ್ನತೆಯಲ್ಲಿ ಕುಸಿದು ಹೋಗಿದ್ದ.ಆ ಅಭಿಮಾನಿಗೆ ಜೀವನದ ಪಾಠ ಹೇಳಿದ್ದರು ಸುದೀಪ್.

  ಭಾಗಪ್ಪ ಎನ್ನುವ ಆ ಅಭಿಮಾನಿ, ಈಗ ಭಗ್ನಪ್ರೇಮದಿಂದ ಹೊರಬಂದಿದ್ದಾನೆ. ಜೀವನವನ್ನು ಎದುರಿಸುತ್ತಿದ್ದಾನೆ. ಅಷ್ಟೇ ಅಲ್ಲ, ಎಕ್ಸಾಂಗಳನ್ನೂ ಪಾಸ್ ಆಗಿ, ತಂದೆ,ತಾಯಿಗೆ ಅಚ್ಚುಮೆಚ್ಚಿನ ಮಗನಾಗಿದ್ದಾನೆ. 

  ಇದಕ್ಕೆಲ್ಲ ನೀವೇ ಕಾರಣ, ಕಿಚ್ಚ ಬಾಸ್, ನನ್ನ ತಂದೆ-ತಾಯಿ ಜೊತೆ ನೀವೂ ನನಗೆ ದೇವತಾ ಮನುಷ್ಯರಾದಿರಿ ಎಂದು ಕಿಚ್ಚ ಸುದೀಪ್‍ಗೆ ಟ್ವೀಟ್ ಮಾಡಿದ್ದಾನೆ ಭಾಗಪ್ಪ.

  ಅಭಿಮಾನಿಯ ಪ್ರತಿಕ್ರಿಯೆಗೆ ಖುಷಿಯಾಗಿರುವ ಕಿಚ್ಚ, ನಿಮಗೆ ನಿಮ್ಮ ಜೀವನ ಉಡುಗೊರೆಯಾಗಿ ದೊರೆತಿದೆ. ನಿಮ್ಮ ಜೀವನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂದಿದ್ದಾರೆ.

 • ಅಭಿಮಾನಿಯ ಅತಿರೇಕಕ್ಕೆ ಕಿಚ್ಚನ ಬುದ್ದಿವಾದ

  sudeep image

  ಅಭಿಮಾನಿಗಳು ಅಭಿಮಾನದ ಹುಚ್ಚು ಹೊಳೆಯಲ್ಲಿ ಮುಳುಗೇಳುವುದು ಹೊಸದೇನೂ ಅಲ್ಲ. ಕಿಚ್ಚ ಸುದೀಪ್ ಅಭಿಮಾನಿಗಳೂ ಇದರಕ್ಕೆ ಹೊರತಲ್ಲ. ಅಂತಹ ಒಬ್ಬ ಹುಚ್ಚು ಅಭಿಮಾನಿಯ ಅತಿರೇಕಕ್ಕೆ ಕಿಚ್ಚ ಸುದೀಪ್ ಬುದ್ದಿಮಾತು ಹೇಳಿದ್ದಾರೆ.

  ಅರುಣ್ ಎಂಬ ಹೊಸಕೋಟೆಯ ಹುಡುಗ ತಮ್ಮ ಕೈ ಮೇಲೆ ರಕ್ತದಲ್ಲಿ ಕಿಚ್ಚ ಎಂದು ಬರೆದುಕೊಂಡಿದ್ದ. ಕೈ ಕೊಯ್ದುಕೊಂಡು, ಅದರ ಮೇಲೆ ಹರಿಶಿಣ ಹಾಕಿ ಫೋಟೋ ತೆಗೆದು ಸುದೀಪ್‍ಗೆ ಟ್ವೀಟ್ ಮಾಡಿದ್ದ. ಇದಕ್ಕೆ ಕಿಚ್ಚ ಸುದೀಪ್ ಬುದ್ದಿಮಾತು ಹೇಳಿದ್ದಾರೆ.

  ನಿಮ್ಮ ಅಭಿಮಾನ, ಪ್ರೀತಿಗೆ ಚಿರಋಣಿ. ಆದರೆ, ಅಭಿಮಾನವನ್ನು ವ್ಯಕ್ತಪಡಿಸಲು ಬೇರೆ ಬೇರೆ ದಾರಿಗಳಿವೆ. ನಿಮ್ಮನ್ನೇ ನೀವು ಕತ್ತರಿಸಿಕೊಳ್ಳುವಂತಹ ಪ್ರೀತಿಯ ಅಭಿಮಾನ ಬೇಡ. ದಯವಿಟ್ಟು ಇನ್ನೊಮ್ಮೆ ಇಂತಹ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

  ಇದು ಸುದೀಪ್‍ಗೆ ಹೊಸದೇನೂ ಅಲ್ಲ. ರಕ್ತದಲ್ಲಿ ಪತ್ರ ಬರೆಯುವ ಯಾವ ಅಭಿಮಾನಿಯನ್ನೂ ಸುದೀಪ್ ಪ್ರೋತ್ಸಾಹಿಸುವುದಿಲ್ಲ. ಬದಲಿಗೆ ಪ್ರತಿಯೊಬ್ಬರಿಗೂ ಬುದ್ದಿಮಾತು ಹೇಳುತ್ತಾರೆ. ಸುದೀಪ್‍ರ ಆ ಅಭಿಮಾನಿಗೆ, ಕಿಚ್ಚನ ಬೇರೆ ಅಭಿಮಾನಿಗಳು ಕೂಡಾ ಬುದ್ದಿ ಹೇಳಿದ್ದಾರೆ. ಬೇಕಾದರೆ ರಕ್ತದಾನ ಮಾಡು ಎಂದು ಸಲಹೆ ಕೊಟ್ಟಿದ್ದಾರೆ. ಕಿಚ್ಚನ ಆ ಅಭಿಮಾನಿ ಅರುಣ್ ಕೂಡಾ ಥ್ಯಾಂಕ್ಯೂ ಅಣ್ಣ. ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಾನೆ.

   

 • ಅಭಿಮಾನಿಯ ಅಮ್ಮನ ಕಷ್ಟಕ್ಕೆ ಸ್ಪಂದಿಸಿದ ಮಾಣಿಕ್ಯ

  sudeep reacts to his fan's problem

  ಅಣ್ಣ.. ಇವರು ನನ್ನ ತಾಯಿ. ಮಂಗಳಮ್ಮ. 40 ವರ್ಷ ವಯಸ್ಸಾಗಿದೆ. 4 ವರ್ಷಗಳಿಂದ  ಇವರಿಗೆ ಸ್ತನ ಕ್ಯಾನ್ಸರ್ ಇದೆ. ಈಗಾಗಲೇ 2 ಬಾರಿ ಆಪರೇಷನ್ ಮಾಡಿಸಿದ್ದೇವೆ. ಆದರೂ ಕಾಯಿಲೆ ಉಲ್ಬಣವಾಗುತ್ತಲೇ ಇದೆ. ತುಂಬಾ ಕಷ್ಟದಲ್ಲಿದ್ದೇವೆ ಅಣ್ಣಾ.. ದಯವಿಟ್ಟು ಸಹಾಯ ಮಾಡಿ. 

  ಕಿಚ್ಚ ಸುದೀಪ್ ಅಭಿಮಾನಿ ಲಕ್ಷ್ಮಣ್ ಗೌಡ ಎಂಬುವವರು ಸುದೀಪ್‍ಗೆ ಸಾಮಾಜಿಕ ಜಾಲತಾಣದ ಮೂಲಕವೇ ಇಂತಾದ್ದೊಂದು ಮನವಿ ಮಾಡಿದ್ದಾರೆ. ಅಭಿಮಾನಿಯ ತಾಯಿಯ ಕಷ್ಟಕ್ಕೆ ತಕ್ಷಣ ಸ್ಪಂದಿಸಿರುವ ಕಿಚ್ಚ ಸುದೀಪ್, ನಿಮ್ಮ ತಾಯಿಯನ್ನು ಅಡ್ಮಿಟ್ ಮಾಡಿರುವ ಆಸ್ಪತ್ರೆಯ ವಿವರ ತಿಳಿಸುವಂತೆ ಸೂಚಿಸಿದ್ದಾರೆ. ನಿಮ್ಮ ತಾಯಿ ಗುಣಮುಖರಾಗಲಿ ಎಂದು ನಾನೂ ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಸುದೀಪ್. ನಿಮ್ಮನ್ನು ಮಾಣಿಕ್ಯ ಎಂದು ಕರೆಯುವುದೇ ಈ ಕಾರಣಕ್ಕೆ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ. 

 • ಅಭಿಮಾನಿಯ ಆಸೆ ಪೂರೈಸಿದ ಮಾಣಿಕ್ಯ

  sudeep fulfills his fan's dream

  ಕಿಚ್ಚ ಸುದೀಪ್, ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ಕಲಾವಿದ. ಸೋಷಿಯಲ್ ಮೀಡಿಯಾ ಮೂಲಕ ನೇರವಾಗಿ, ನಿರಂತರವಾಗಿ ಅಭಿಮಾನಿಗಳ ಜೊತೆಯಲ್ಲಿರುವ ಸುದೀಪ್, ತಮ್ಮ ಅಭಿಮಾನಿಗಳನ್ನು ಆತ್ಮೀಯವಾಗಿ ನೋಡಿಕೊಳ್ಳುತ್ತಾರೆ. 

  ಅಭಿಷೇಕ್ ಎಂಬ ಈ ಪುಟ್ಟ ಬಾಲಕ ಮಾಂಸಖಂಡ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಸುದೀಪ್ ಅವರ ಅಭಿಮಾನಿ. ಈ ಅಭಿಮಾನಿಗೆ ಸುದೀಪ್ ಅವರನ್ನು ನೋಡಬೇಕು ಎನ್ನುವ ಹಂಬಲ. ವಿಷಯ ತಿಳಿದ ಸುದೀಪ್, ಅಭಿಷೇಕ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ.

  ಧೈರ್ಯವಾಗಿರಿ, ಸರಿ ಹೋಗುತ್ತೆ ಎಂದು ನೈತಿಕ ಸ್ಥೈರ್ಯ ತುಂಬಿದ್ದಾರೆ. ಪುಟ್ಟ ಅಭಿಮಾನಿಯ ಬಯಕೆ ಈಡೇರಿಸಿದ್ದಾರೆ. ಕಿಚ್ಚನ ಅಭಿಮಾನಿಗಳಂತೂ ಸುದೀಪ್ ಅವರ ಈ ಹೃದಯವಂತಿಕೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

 • ಅರ್ಧ ಡಜನ್ ಚೆಲುವೆಯರ ಜೊತೆ ಶಿವಣ್ಣ..!

  6 sandalwood beauties shake leg with shivanna

  ಬೋಲೋ ಬೋಲೋ ರಾಮಪ್ಪ.. ಎಂಥ ಹುಡುಗಿ ಬೇಕು ಒಸಿ ಬಿಡಿಸಿ ಹೇಳಪ್ಪಾ.. ಇದು ದಿ ವಿಲನ್ ಚಿತ್ರದ ಹಾಡು. ಈ ಹಾಡು ಚಿತ್ರೀಕರಣಗೊಂಡಿರೋದು ಶಿವರಾಜ್‍ಕುಮಾರ್ ಮೇಲೆ. ಹಾಡಿನಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಿರೋದು ಕನ್ನಡ ಚಿತ್ರರಂಗದ ಅರ್ಧ ಡಜನ್ ಚೆಲುವೆಯರು. 

  ಡಿಂಪಲ್ ಕ್ವೀನ್ ರಚಿತಾ ರಾಮ್, ಯು ಟರ್ನ್ ಶ್ರದ್ಧಾ ಶ್ರೀನಾಥ್, ಗೂಗ್ಲಿ ಗೊಂಬೆ ಶಾನ್ವಿ ಶ್ರೀವಾಸ್ತವ್, ರಂಗಿತರಂಗದ ಸುಂದರಿ ರಾಧಿಕಾ ಚೇತನ್, ಗಾಳಿಪಟದ ಭಾವನಾ ರಾವ್, ಸಂಯುಕ್ತಾ ಹೊರನಾಡು... ಶಿವಣ್ಣನ ಜೊತೆ ಬಿಂದಾಸ್ ಆಗಿ ಕುಣಿದಿದ್ದಾರೆ. ಎಲ್ಲರದ್ದೂ ಟ್ರೆಡಿಷನಲ್ ಡ್ರೆಸ್ ಅನ್ನೋದು ವಿಶೇಷ.

  ಎಲ್ಲ ಚೆಲುವೆಯರಿಗೂ ಥ್ರಿಲ್ಲಾಗಿರೋದು ಶಿವಣ್ಣನ ಎನರ್ಜಿ  ನೋಡಿ. ನಾವು ಸ್ಟೆಪ್ ಕಲಿಯೋದು ನಿಧಾನ. ಅವರೋ ತುಂಬಾ ಫಾಸ್ಟು. ಆದರೆ ಶಿವಣ್ಣ ನಾವು ಕಲಿಯುವವರೆಗೆ ಸುಸ್ತೇ ಆಗದೆ ನಮ್ಮ ಜೊತೆ ಹೆಜ್ಜೆ ಹಾಕ್ತಾರೆ. ಬೇಜಾರೂ ಮಾಡ್ಕೊಳ್ಳಲ್ಲ. ಸುಸ್ತೂ ಆಗಲ್ಲ ಅನ್ನೋದು ರಚಿತಾ ರಾಮ್ ಕಾಂಪ್ಲಿಮೆಂಟು.

  ಶಿವಣ್ಣನ ಜೊತೆ ಕಾಣಿಸಿಕೊಂಡಿದ್ದು ಒಂದೇ ಡ್ಯಾನ್ಸ್‍ನಲ್ಲಿ. ಅದೊಂದು ಮರೆಯಲಾಗದ ಅನುಭವ. ಕಿರಿಯರಿಗೆ ಅವರು ನೀಡುವ ಪ್ರೋತ್ಸಾಹವನ್ನು ಮರೆಯೋಕೆ ಸಾಧ್ಯವೇ ಇಲ್ಲ ಅಂತಾರೆ ರಾಧಿಕಾ ಚೇತನ್.

 • ಅಲ್ಲಿ ಹಂಗೆ.. ಇಲ್ಲಿ ಹಿಂಗೆ.. ಕ್ಯಾರೆಕ್ಟರ್ ಹೆಂಗೆ..?

  amy jackson's role

  ದಿ ವಿಲನ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಕಾಂಬಿನೇಷನ್, ಜೋಗಿ ಪ್ರೇಮ್ ಡೈರೆಕ್ಷನ್ ಹಾಗೂ ಮನೋಹರ್ ನಿರ್ಮಾಣದ ಅದ್ಧೂರಿ ಚಿತ್ರ. ಶೂಟಿಂಗ್ ಹಂತದಿಂದಲೇ ಭರ್ಜರಿಯಾಗಿ ಸುದ್ದಿ, ಸದ್ದು ಮಾಡುತ್ತಿದೆ. ಈಗ ಅಂಥದ್ದೇ ಕುತೂಹಲ ಮೂಡಿಸಿರುವುದು ಆ್ಯಮಿ ಜಾಕ್ಸನ್.

  ಚಿತ್ರದ ಆರಂಭದ ಫೋಟೋಗಳಲ್ಲಿ ಈ ಫಾರಿನ್ ಸುಂದರಿ ಕಂಪ್ಲೀಟ್ ಮಾಡರ್ನ್ ಆಗಿ ಕಣ್ಣು ತಂಪು ಮಾಡಿದ್ದರು. ಈಗ ಚಿಕ್ಕಮಗಳೂರಿನಿಂದ ಬರುತ್ತಿರುವ ಹೊಸ ಫೋಟೋಗಳಲ್ಲಿ ಅದೇ ಆ್ಯಮಿ ಜಾಕ್ಸನ್ ಹಳ್ಳಿ ಹುಡುಗಿಯಾಗಿ ಕಂಗೊಳಿಸುತ್ತಿದ್ದಾರೆ.

  ಹಾಗಾದರೆ, ಏನಿದು..? ಚಿತ್ರದಲ್ಲಿ ಅವರ ಪಾತ್ರ ಎಂಥದ್ದು..? ಅಲ್ಲಿ ಹಂಗೆ.. ಇಲ್ಲಿ ಹಿಂಗೆ.. ಕ್ಯಾರೆಕ್ಟರ್ ಹೆಂಗೆ..? ಪ್ರೇಮ್ ಅವರನ್ನ ಕೇಳಿ ನೋಡಿ.. ನೋಡಾಣಂತೆ ಬಿಡಣ್ಣ.. ಸಿನಿಮಾ ರಿಲೀಸ್ ಆದ್ಮೇಲೆ ನಿಮ್ಗೇ ಗೊತ್ತಾಗ್ತದೆ ಅಂತಾರೆ.

Geetha Movie Gallery

Adhyaksha In America Audio Release Images