ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಯುವರತ್ನ ಚಿತ್ರ, ಶೂಟಿಂಗ್ ಹಂತದಲ್ಲೇ ಅಬ್ಬಾ ಎನ್ನಿಸುವಷ್ಟು ಕುತೂಹಲ ಹುಟ್ಟಿಸುತ್ತಿದೆ. ಒಂದರ ಹಿಂದೊಂದು ವಿಶೇಷಗಳನ್ನು ಸೇರಿಸಿಕೊಳ್ತಿರೋ ಯುವರತ್ನ ಚಿತ್ರಕ್ಕೆ ಈಗ ಸಾಹೋ ಪವರ್ ಸಿಕ್ಕಿದೆ.
ಅರ್ಥಾತ್, ಸಾಹೋ, ಧೀರನ್, ಥೆರಿ, ವಿಶ್ವಾಸಂ.. ಮೊದಲಾದ ಸೂಪರ್ ಹಿಟ್ ಚಿತ್ರಗಳಿಗೆ ಮೈನವಿರೇಳಿಸುವ ಸ್ಟಂಟ್ ಆಯೋಜಿಸಿದ್ದ ಸ್ಟಂಟ್ ಮಾಸ್ಟರ್ ದಿಲೀಪ್ ಸುಬ್ರಹ್ಮಣ್ಯನ್ ಯುವರತ್ನ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ.
ಪವರ್ ಸ್ಟಾರ್ ಪವರ್‍ಗೆ ತಕ್ಕಂತೆ ಸಾಹಸ ಸಂಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿರುವ ಸಂತೋಷ್ ಆನಂದ್‍ರಾಮ್, ಅಭಿಮಾನಿಗಳು ಇನ್ನಷ್ಟು ಥ್ರಿಲ್ಲಾಗಿ ಕಾಯುವಂತೆ ಮಾಡಿದ್ದಾರೆ.