` harshika ponnacha - chitraloka.com | Kannada Movie News, Reviews | Image

harshika ponnacha

 • ಹರ್ಷಿಕಾ ಪೂಣಚ್ಚ, ಭುವನ್ ಗೌಡರಿಂದ ಫೀಡ್ & ಶ್ವಾಸ ಕರ್ನಾಟಕ

  ಹರ್ಷಿಕಾ ಪೂಣಚ್ಚ, ಭುವನ್ ಗೌಡರಿಂದ ಫೀಡ್ & ಶ್ವಾಸ ಕರ್ನಾಟಕ

  ಫೀಡ್ ಕರ್ನಾಟಕ : ಈ ಯೋಜನೆ ಮೂಲಕ ಅಗತ್ಯ ಇರುವವರಿಗೆ ಆಹಾರ, ಔಷಧಿ ವಿತರಿಸುವುದು

  ಶ್ವಾಸ : ಈ ಯೋಜನೆಯಲ್ಲಿ ಎರಡು ಆಕ್ಸಿಜನ್ ಬಸ್ ಸಿದ್ಧ ಮಾಡಲಾಗಿದ್ದು, ಅಗತ್ಯ ಇರುವ ರೋಗಿಗಳಿಗೆ ಇದರ ಸೌಲಭ್ಯ ಒದಗಿಸುವುದು

  ಈ ಎರಡೂ ಯೋಜನೆಗಳನ್ನು ಆರಂಭಿಸಿರುವುದು ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಗೌಡ ಜೋಡಿ. ಭುವನಂ ಎಂಬ ಫೌಂಡೇಷನ್ ಮೂಲಕ ಈ ಯೋಜನೆ ಆರಂಭಿಸಿದ್ದಾರೆ. ಆಕ್ಸಿಜನ್ ಬಸ್‍ಗಳು ಸರ್ಕಾರಿ ಆಸ್ಪತ್ರೆ ಎದುರು ನಿಲ್ಲಲಿವೆ. ಸರ್ಕಾರಿ ಆಸ್ಪತ್ರೆ ವೈದ್ಯರೇ ಇದರ ಉಸ್ತುವಾರಿ ಮಾಡಲಿದ್ದಾರೆ. ಬೆಡ್ ಸಿಗುವವರೆಗೆ ತುರ್ತು ಅಗತ್ಯ ಇರುವ ರೋಗಿಗಳಿಗೆ ಇದರ ಸೌಲಭ್ಯ ನೀಡಲಿದ್ದೇವೆ ಎಂದಿದ್ದಾರೆ ಹರ್ಷಿಕಾ ಪೂಣಚ್ಚ. ಮುಂದಿನ ದಿನಗಳಲ್ಲಿ ಬಸ್‍ಗಳ ಸಂಖ್ಯೆಯನ್ನು 50ಕ್ಕೆ ಏರಿಸುವ ಉದ್ದೇಶವಿದೆ ಎಂದಿದ್ದಾರೆ ಭುವನ್ ಗೌಡ. ಈ ಉಚಿತ ಸೌಲಭ್ಯಗಳ ಯೋಜನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಚಾಲನೆ ನೀಡಿದ್ದಾರೆ.

 • ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಜೋಡಿಯಿಂದ 15 ಸಾವಿರ ಕುಟುಂಬಕ್ಕೆ ನೆರವು

  ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಜೋಡಿಯಿಂದ 15 ಸಾವಿರ ಕುಟುಂಬಕ್ಕೆ ನೆರವು

  ಕೋವಿಡ್ ಸಂಕಷ್ಟಕ್ಕೆ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಮಿಡಿಯುತ್ತಿದೆ. ಸರ್ಕಾರವೂ ತಲುಪಲಾಗದ ಎಷ್ಟೋ ಜನರ ಕಣ್ಣೀರು ಒರೆಸುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರು ಬಿಟ್ಟು ಒಂದು ವಾರದಿಂದ ರಾಜ್ಯ ಸುತ್ತುತ್ತಿದ್ದಾರೆ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ. ಈ ಜೋಡಿ ಇದುವರೆಗೆ ಸುಮಾರು 15 ಸಾವಿರ ಕುಟುಂಬಗಳಿಗೆ ನೆರವು ನೀಡಿದೆ.

  ಆರಂಭದಲ್ಲಿ ಬೆಂಗಳೂರಿನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್, ಆಂಬುಲೆನ್ಸ್, ಮಾಸ್ಕ್, ಸ್ಯಾನಿಟೈಸಜ್ ವ್ಯವಸ್ಥೆ ಮಾಡಿದ್ದ ಜೋಡಿ, ಶ್ವಾಸ ಹೆಸರಿನ ಆಕ್ಸಿಜನ್ ಆಂಬುಲೆನ್ಸ್, ಬಾಂಧವ್ಯ ಹೆಸರಿನ ಉಚಿತ ಆಟೋ ಸೇವೆ ಮೂಲಕ ಜನರನ್ನು ತಲುಪಿತು.

  ನಂತರ ಹೊರಟಿದ್ದು ತಮ್ಮ ಹುಟ್ಟೂರು ಕೊಡಗಿಗೆ. ಅಲ್ಲಿ ಹಲವು ಹಳ್ಳಿಗಳಲ್ಲಿ ಸಾವಿರಾರು ಜನರಿಗೆ ರೇಷನ್ ಕಿಟ್, ಮೆಡಿಸಿನ್ಸ್ ವಿತರಿಸಿದ ಭುವನಂ ಸಂಸ್ಥೆ, ಈಗ ಉತ್ತರ ಕರ್ನಾಟಕದತ್ತ ಹೊರಟಿದೆ. ಸದ್ಯಕ್ಕೆ ಬೆಳಗಾವಿಯ ರಾಯಭಾಗ ತಾಲೂಕಿನಲ್ಲಿದೆ. ಬೆಂಗಳೂರು ಬಿಟ್ಟು ಒಂದು ವಾರವಾಗಿದೆ.

  ಕೊಡಗಿನಲ್ಲಿ ಪ್ರವಾಹ ಬಂದಾಗ ಅದು ನಮ್ಮೂರು ಎಂಬ ಕಾರಣಕ್ಕೆ ನೆರವಿಗೆ ಧಾವಿಸಿದೆವು. ನಂತರ ಇಂತಹ ಪ್ರತಿ ಸಂಕಷ್ಟದಲ್ಲೂ ನಾವು ನಮ್ಮ ಕೈಲಾದ ಸಹಾಯ ಮಾಡಬೇಕು ಎಂದುಕೊಂಡೆವು. ಅದಕ್ಕಾಗಿಯೇ ಭುವನಂ ಸಂಸ್ಥೆ ಸ್ಥಾಪಿಸಿದೆವು ಎನ್ನುವ ಜೋಡಿ, ಈ ಎಲ್ಲವನ್ನೂ ತಮ್ಮ ಸೇವಿಂಗ್ಸ್‍ನಲ್ಲೇ ಮಾಡುತ್ತಿದೆ ಎನ್ನುವುದು ವಿಶೇಷ.

 • ಹರ್ಷಿಕಾ ಪೂಣಚ್ಚಗೂ ಕಾಡಿತ್ತು ಕಾಸ್ಟಿಂಗ್ ಕೌಚ್ 

  harshika poonacha talks about casting couch

  ಸದ್ಯಕ್ಕೆ ದೇಶಾದ್ಯಂತ ಸದ್ದು ಮಾಡುತ್ತಿರುವುದು ಕಾಸ್ಟಿಂಗ್ ಕೌಚ್. ಚಿತ್ರರಂಗದಲ್ಲಿ ಅವಕಾಶ ಕೊಡೋಕೆ ನಾಯಕಿಯರನ್ನು ಹಾಸಿಗೆಗೆ ಕರೆಯುತ್ತಾರೆ ಅನ್ನೋ ಆರೋಪ, ಈಗ ಕಾಳ್ಗಿಚ್ಚಾಗಿ ಹೋಗಿದೆ. ಆಂಧ್ರಪ್ರದೇಶದಲ್ಲಿ ನಟಿ ಶ್ರೀರೆಡ್ಡಿ ಅರೆಬೆತ್ತಲೆ ಪ್ರತಿಭಟನೆ ಮಾಡಿ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಇದರ ಮಧ್ಯೆ ಬಾಲಿವುಡ್ ಕೊರಿಯೋಗ್ರಾಫರ್ ಸರೋಜ್ ಖಾನ್, ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಕನ್ನಡದಲ್ಲಿಯೂ ಶೃತಿ ಹರಿಹರನ್ ಸೇರಿದಂತೆ ಹಲವಾರು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಈಗ ಹರ್ಷಿಕಾ ಪೂಣಚ್ಚ ಸರದಿ.

  ಹರ್ಷಿಕಾಗೆ ಕೆಲವು ವರ್ಷಗಳ ಹಿಂದೆ ಬಾಲಿವುಡ್ ಅವಕಾಶ ಬಾಗಿಲು ಬಡಿದಿತ್ತು. ಆದರೆ, ಹೋದಷ್ಟೇ ವೇಗದಲ್ಲಿ ವಾಪಸು ಬಂದಿದ್ದರು ಹರ್ಷಿಕಾ. ಹಾಗೆ ವಾಪಸ್ ಬರೋಕೆ ಕಾರಣ ಕಾಸ್ಟಿಂಗ್ ಕೌಚ್ ಎಂದು ಈಗ ಬಹಿರಂಗಪಡಿಸಿದ್ದಾರೆ ಹರ್ಷಿಕಾ ಪೂಣಚ್ಚ. ಎರಡು ಚಿತ್ರಗಳನ್ನು ಒಪ್ಪಿಕೊಂಡು ಅಗ್ರಿಮೆಂಟ್‍ಗೆ ಕೂಡಾ ಸಹಿ ಹಾಕಿದ್ದೆ. ಆದರೆ, ಅದಾದ ನಂತರ ಆ ಚಿತ್ರಗಳ ಮ್ಯಾನೇಜರ್ ಕಮಿಟ್‍ಮೆಂಟ್ ಇರುತ್ತೆ ಅನ್ನೋದನ್ನ ಹೇಳಿದರು. ತಕ್ಷಣ ಆ ಪ್ರಾಜೆಕ್ಟ್‍ಗಳನ್ನು ಬಿಟ್ಟು ಬೆಂಗಳೂರಿಗೆ ಬಂದೆ ಎಂದಿದ್ದಾರೆ ಹರ್ಷಿಕಾ. ಆದರೆ, ಹಾಗೆ ಹೇಳಿದ ನಿರ್ದೇಶಕ, ನಿರ್ಮಾಪಕರ ಬಗ್ಗೆ ಮಾತನಾಡೋಕೆ ನನಗೆ ಇಷ್ಟವಿಲ್ಲ ಎಂದಿದ್ದಾರೆ ಹರ್ಷಿಕಾ.

  Related Articles :-

  Harshika Talks About Casting Couch

 • ಹರ್ಷಿಕಾ ಪೂಣಚ್ಚಗೆ ಜೀವ ಬೆದರಿಕೆ ಕರೆ

  harshika poonacha gets life threatening calls

  ಮೀಟೂ ಅಭಿಯಾನ ಜೋರಾಗಿರುವಾಗ, ಅದೇ ಮೀಟೂ ಅಭಿಯಾನಕ್ಕೆ ಭಾರಿ ಶಾಕ್ ಕೊಟ್ಟಿದ್ದ ನಟಿ ಹರ್ಷಿಕಾ ಪೂಣಚ್ಚಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಹಾಗೂ.. ಅಂತಹ ಕರೆಗಳು ಬರುತ್ತಿರೋದು ಪ್ರತಿಷ್ಟಿತ ವ್ಯಕ್ತಿಗಳಿಂದ. ಫೋನ್ ಮಾಡುವವರು ನೀವು ಈ ರೀತಿ ಮಾತನಾಡಬಾರದು ಎಂದು ನನ್ನ ಧ್ವನಿಯನ್ನು ತಡೆಯಲು ನೋಡುತ್ತಿದ್ದಾರೆ. ಅವರಿಗೆ ನನ್ನದೇ ಧ್ವನಿಯಲ್ಲಿ ಎಚ್ಚರಿಕೆ ನೀಡಿದ್ದೇನೆ. ಸರಿ ಹೋಗದೇ ಹೋದರೆ ದೂರು ನೀಡುತ್ತೇನೆ ಎಂದಿದ್ದಾರೆ ಹರ್ಷಿಕಾ. ಹೆಚ್ಚಾಗಿ ಇಂತಹ ಕರೆಗಳು ಬರುತ್ತಿರುವುದು ಅನ್‍ನೋನ್ ನಂಬರ್‍ಗಳಿಂದ. ಅಂದರೆ, ಕರೆ ಮಾಡಿದವರ ನಂಬರ್ ನಿಮಗೆ ಕಾಣಿಸೋದೇ ಇಲ್ಲ.

  ಮೀಟೂ ಇರುವುದು ದುರ್ಬಲ ಹೆಣ್ಣು ಮಕ್ಕಳಿಗೆ. ಅಶಕ್ತ ಹೆಣ್ಣು ಮಕ್ಕಳಿಗೆ ಧ್ವನಿಯಾಗಬೇಕು. ಅದನ್ನು ಬಿಟ್ಟು, ಅವಕಾಶ ಪಡೆದುಕೊಳ್ಳೋಕೆ ಅಡ್ಜಸ್ಟ್‍ಮೆಂಟ್ ಮಾಡಿಕೊಂಡು, ಅವಕಾಶವನ್ನೂ ಪಡೆದು.. ಆಮೇಲೆ ಮೀಟೂ ಅನ್ನೋದು ಸರಿಯಲ್ಲ. ನನ್ನ ವಾದ ಇಷ್ಟೆ. ನೀವು ದಾರಿ ತಪ್ಪಿ, ಆ ತಪ್ಪನ್ನು ಚಿತ್ರರಂಗದ ಮೇಲೆ ಹೊರಿಸಬೇಡಿ ಅನ್ನೋದು ನನ್ನ ಮನವಿ ಎಂದಿದ್ದಾರೆ ಹರ್ಷಿಕಾ ಪೂಣಚ್ಚ.

  Related Articles :-

  I Am Receiving Threats: Harshika Poonacha

 • ಹರ್ಷಿಕಾ ಪೂಣಚ್ಚಗೆ ಪಿತೃ ವಿಯೋಗ

  harshika poonacha's father no more

  ನಟಿ ಹರ್ಷಿಕಾ ಪೂಣಚ್ಚ ಅವರ ತಂದೆ ಉದ್ದಪಂಡ ಪೂಣಚ್ಚ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ವಿರಾಜಪೇಟೆ ತಾಲೂಕಿನ ಕುಮ್ಮೆತೊಡ್ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ.

  ಉದ್ದಪಂಡ ಪೂಣಚ್ಚ ಸಣ್ಣ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ಸರ್ಜರಿಯಾಗಿದ್ದರೂ ಊಟ ಮಾಡಲು ಕಷ್ಟವಾಗಿತ್ತು. ಕೇವಲ ಡ್ರಿಪ್ಸ್ ಅಷ್ಟೇ ದೇಹ ಸೇರುತ್ತಿತ್ತು. ಗಣನೀಯ ಪ್ರಮಾಣದಲ್ಲಿ ತೂಕ ಕಳೆದುಕೊಂಡಿದ್ದ ಉದ್ದಪಂಡ ಪೂಣಚ್ಚ ಚೇತರಿಸಿಕೊಳ್ಳಲೇ ಇಲ್ಲ.

 • ಹರ್ಷಿಕಾ ಮೈಯ್ಯೆಲ್ಲ ಚಿಟ್ಟೆಯ ಚಿತ್ತಾರ

  chitte tattoo on harishika's body

  ಹರ್ಷಿಕಾ ಪೂಣಚ್ಚ ಚಿಟ್ಟೆಯಾಗಿದ್ದಾರೆ. ಅದು ಚಿಟ್ಟೆ ಸಿನಿಮಾಗೆ. ಚಿಟ್ಟೆ ಮತ್ತು ಹೆಣ್ಣಿನ ಸಂಬಂಧಗಳ ಬಗ್ಗೆ ಇರುವ ಕಥೆಯಲ್ಲಿ ಹರ್ಷಿಕಾ ಅವರನ್ನು ಚಿಟ್ಟೆಗೆ ಹೋಲಿಸಲಾಗಿದೆ. ಚಿತ್ರದ ಚಿತ್ರೀಕರಣ ವೇಳೆ ಹರ್ಷಿಕಾ ಮೈಮೇಲೆಲ್ಲ ಚಿಟ್ಟೆಯ ಹಚ್ಚೆ ಹಾಕಿಸಿಕೊಂಡು ಕಂಗೊಳಿಸಿದ್ದಾರೆ.

  ಮೈಮೇಲೆ ಚಿಟ್ಟೆ ಹಾಕಿಕೊಂಡ ನಂತರ ನೋಡಿದರೆ, ಹರ್ಷಿಕಾ ಎಂದಿಗಿಂತ ಮುದ್ದಾಗಿಯೇ ಕಾಣಿಸ್ತಾರೆ ಅನ್ನೋದೇನೋ ನಿಜ. ಆದರೆ, ಅದಕ್ಕಾಗಿ ಪ್ರತಿದಿನ ಹರ್ಷಿಕಾ 3ರಿಂದ 4 ಗಂಟೆಗೆ ಮೇಕಪ್ ಮಾಡಿಸಿಕೊಳ್ಳಬೇಕಿತ್ತಂತೆ. ಶೂಟಿಂಗ್ ಶುರುವಾಗುವ 3 ಗಂಟೆ ಮುಂಚೆ ಸೆಟ್‍ಗೆ ಹೋಗುತ್ತಿದ್ದ ಹರ್ಷಿಕಾ, ಮೈತುಂಬಾ ಹಚ್ಚೆ ಹಾಕಿಸಿಕೊಂಡು ಚಿತ್ರದಲ್ಲಿ ನಟಿಸಿದ್ಧಾರೆ. ಚಂದನಾ ಆರಾಧ್ಯ ಎಂಬ ಕಲಾವಿದೆ ಹರ್ಷಿಕಾ ಮೈಮೇಲೆ ಹಚ್ಚೆ ಬಿಡಿಸಿರುವ ಪ್ರತಿಭೆ.

  ಇದು ಎಂ.ಎಲ್. ಪ್ರಸನ್ನ ನಿರ್ದೇಶನದ ಚಿತ್ರ. ಶಶಾಂಕ್ ನಿರ್ದೇಶನದ ಬಹುತೇಕ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಪ್ರಸನ್ನ, ಹಲವು ಸ್ಟಾರ್ ಚಿತ್ರಗಳ ಚಿತ್ರಕ್ಕೆ ಡೈಲಾಗ್ ಕೊಟ್ಟಿದ್ದಾರೆ. ಚಿತ್ರದಲ್ಲಿ ನಾಯಕ ಪೇಂಟಿಂಗ್ ಕಲಾವಿದ. ಒಂದು ಹಂತದಲ್ಲಿ ನಾಯಕಿ ಅವನಿಗೆ ತನ್ನ ಮೈಮೇಲೆ ಪೇಂಟಿಂಗ್ ಮಾಡುವಂತೆ ಕೇಳಿಕೊಳ್ಳುತ್ತಾಳೆ. ನಂತರ ಚಿತ್ರ ಬೇರೆಯೇ ತಿರುವು ಪಡೆಯುತ್ತೆ. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಎಂದಿದ್ದಾರೆ ಪ್ರಸನ್ನ.

 • ಹರ್ಷಿಕಾ ಹೇಳಿದ ಹೋರಾಟಗಾರ್ತಿಯರ ಗಾಂಜಾ, ವಿಡಿಯೋ ಕಥೆ..!

  harshika Ponnacha Image

  ಹೋರಾಟಗಾರ್ತಿಯರು, ಆಕ್ಟಿವಿಸ್ಟ್ ನಟಿಯರು ಪ್ಲಾನ್ ಮಾಡಿಕೊಂಡೇ ನಟರ ಹೆಸರು ಹಾಳು ಮಾಡುತ್ತಿದ್ದಾರಾ..? ಹರ್ಷಿಕಾ ಪೂಣಚ್ಚ ಹೇಳಿರುವ ಸುದೀರ್ಘ ಕಥೆಯಲ್ಲಿ ಈ ವಿವರವೂ ಇದೆ. 

  ತಮ್ಮ ಹಿತೈಷಿ ಮತ್ತು ಆತ್ಮೀಯ ನಿರ್ಮಾಪಕರೊಬ್ಬರು ಒಂದು ವಿಡಿಯೋ ತೋರಿಸಿದರು. ಆ ವಿಡಿಯೋದಲ್ಲಿ ಆಕ್ಟಿವಿಸ್ಟ್ ನಟಿಯರಲ್ಲಿ ಒಬ್ಬಾಕೆ ಪ್ರಸಿದ್ಧರೊಬ್ಬರ ಹೆಗಲಿಗೆ ಒರಗಿಕೊಂಡು ಗಾಂಜಾ ಸೇದುತ್ತಾ, ಬೇರೆಯವರ ಹೆಸರನ್ನು ಹಾಳು ಮಾಡುವುದು ಹೇಗೆ ಎಂಬ ಕುರಿತು ಚರ್ಚಿಸುತ್ತಿದ್ದರು. ನಾನು ಅವನ ಹೆಸರನ್ನ ಹೇಗೆ ಡ್ಯಾಮೇಜ್ ಮಾಡ್ತೇನೆ ಗೊತ್ತಾ ಎಂದು ಮಾತನಾಡುತ್ತಿದ್ದರು. ಇನ್ನೊಂದು ವಿಡಿಯೋದಲ್ಲಿ ಪ್ರಸಿದ್ಧ ನಟಿಯೊಬ್ಬರು ಅರೆಬೆತ್ತಲೆಯಾಗಿದ್ದರು. ಅದರಲ್ಲಿ ಆ ಪ್ರಸಿದ್ಧ ನಟಿ ತನ್ನ ಎದುರು ಇರುವ ನಟನಿಗೆ ನಿನ್ನ ಮುಂದಿನ ಚಿತ್ರದಲ್ಲೂ ನಾನೇ ಇರಬೇಕು ಎನ್ನುತ್ತಿದ್ದರು.

  ಇದು ಹರ್ಷಿಕಾ ಪೂಣಚ್ಚ ಅವರು ಹೇಳಿರುವ 2 ವಿಡಿಯೋ ಕಥೆ. ಆಕ್ಟಿವಿಸ್ಟ್ ನಟಿಯರಲ್ಲಿ ಕೆಲವರು ವಿದೇಶಗಳಲ್ಲಿ ಹಾಡಿನ ಶೂಟಿಂಗ್ ಇದ್ದಾಗ ರಸಭರಿತ ಕ್ಷಣಗಳನ್ನು ಕಳೆಯೋದನ್ನು ನೋಡಿದ್ದೇನೆ. ಸಿಂಗಪುರ, ದುಬೈಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಇದೇ ನಟಿಯರು ನಿರ್ಮಾಪಕರು, ನಟರು, ರಿಯಲ್ ಎಸ್ಟೇಟ್ ಕುಳಗಳ ತೆಕ್ಕೆಗೆ ಬೀಳುವುದನ್ನೂ ನೋಡಿದ್ದೇನೆ. ಅವರಿಂದ ಪಡೆಯುವದನ್ನೆಲ್ಲ ಪಡೆದು, ಈಗ ಅವರ ವಿರುದ್ಧವೇ ಆರೋಪ ಮಾಡೋದು ಎಷ್ಟು ಸರಿ ಅನ್ನೋದು ಹರ್ಷಿಕಾ ಪೂಣಚ್ಚ ಪ್ರಶ್ನೆ.

 • ಹರ್ಷಿಕಾ-ಭುವನ್ ಜೋಡಿಗೆ ಮದರ್ ಥೆರೇಸಾ ಅವಾರ್ಡ್

  ಹರ್ಷಿಕಾ-ಭುವನ್ ಜೋಡಿಗೆ ಮದರ್ ಥೆರೇಸಾ ಅವಾರ್ಡ್

  ಕೊರೊನಾ ಸಮಯದಲ್ಲಿ ಚಿತ್ರರಂಗದ ಹಲವರು ಸಂಕಟದಲ್ಲಿದ್ದ ಜನಸಾಮಾನ್ಯರಿಗೆ ಸ್ಪಂದಿಸಿದರು. ನೇರವಾಗಿ ಫೀಲ್ಡಿಗೇ ಇಳಿದವರಲ್ಲಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಜೋಡಿ ಮುಂಚೂಣಿಯಲ್ಲಿತ್ತು. ಸಾವಿರಾರು ಜನರಿಗೆ ಊಟ, ¾ನ್ ಕಿಟ್ ಕೊಟ್ಟಿದ್ದಷ್ಟೇ ಅಲ್ಲ.. ಮೆಡಿಸಿನ್, ಆಂಬುಲೆನ್ಸ್ ಹೀಗೆ ತಮ್ಮಿಂದ ಸಾಧ್ಯವಾದ ಎಲ್ಲ ನೆರವನ್ನೂ ನೀಡಿದ್ದರು. ಬೆಂಗಳೂರು ಮತ್ತು ಮಡಿಕೇರಿಯಲ್ಲಿ ದೊಡ್ಡ ಮಟ್ಟದಲ್ಲಿಯೇ ನೊಂದವರ ಕಷ್ಟಕ್ಕೆ ಸ್ಪಂದಿಸಿದ್ದರು.

  ಈ ಸೇವೆಯನ್ನು ದಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಗಳು ಗುರುತಿಸಿವೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರಿಗೆ ಮದರ್ ಥೆರೇಸಾ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಿವೆ.

 • ಹಾವ್ ರಾಣಿಯಾಗ್ತಿದ್ದಾರೆ ಹರ್ಷಿಕಾ ಪೂಣಚ್ಚ

  ಹಾವ್ ರಾಣಿಯಾಗ್ತಿದ್ದಾರೆ ಹರ್ಷಿಕಾ ಪೂಣಚ್ಚ

  ಕೋವಿಡ್ ಸಂಕಷ್ಟದಲ್ಲಿ ಇಡೀ ರಾಜ್ಯವನ್ನು ಸುತ್ತಿ ಸಂತ್ರಸ್ತರ ನೆರವಿಗೆ ನಿಂತಿದ್ದ ಹರ್ಷಿಕಾ ಪೂಣಚ್ಚ, ನಂತರ ಬ್ಯುಸಿಯಾಗಿದ್ದು ಭೋಜ್‍ಪುರಿ ಸಿನಿಮಾಗಳಲ್ಲಿ. ಈಗ ಹಾವ್ ರಾಣಿಯಾಗಿ ಕನ್ನಡಕ್ಕೆ ಬರುತ್ತಿದ್ದಾರೆ. ಹೊಸ ಚಿತ್ರ ಕಾಲನಾಗಿಣಿಯಲ್ಲಿ ಹರ್ಷಿಕಾ ನಾಗಿಣಿಯ ಪಾತ್ರ ಮಾಡುತ್ತಿದ್ದಾರೆ.

  ಕಾಲನಾಗಿಣಿಯಲ್ಲಿ ಹರ್ಷಿಕಾ ಅವರದ್ದು ಡಬಲ್ ರೋಲ್. ಒಂದು ನಾಗಿಣಿಯ ಪಾತ್ರವಾದರೆ ಮತ್ತೊಂದು ರಾಣಿಯ ಪಾತ್ರ. ಮಧುರಾ ಮೂವೀಸ್ ಬ್ಯಾನರ್‍ನಲ್ಲಿ ರಕ್ಷಿತಾ ಅವರು ನಿರ್ಮಿಸುತ್ತಿರೋ ಕಾಲನಾಗಿಣಿಯಲ್ಲಿ ಮನೋಜ್ ಪುತ್ತೂರು, ಹರ್ಷಿಕಾ ಎದುರು ಹೀರೋ. ವಿಸ್ತøತ್ ನಾಯಕ್ ನಿರ್ದೇಶಕ.

 • ಹೋರಾಟದ ನಟಿಯರ ಹೊಂದಾಣಿಕೆಯನ್ನೂ ನೋಡಿದ್ದೇನೆ - ಮೀಟೂಗೆ ಹರ್ಷಿಕಾ ಪೂಣಚ್ಚ ಶಾಕ್

  Harshika Ponnacha Image

  ಮೀಟೂ ಅಭಿಯಾನ, ಬಿರುಗಾಳಿ, ಸುಂಟರಗಾಳಿ, ಚಂಡಮಾರುತ, ಅಗ್ನಿಸ್ಫೋಟ, ಜ್ವಾಲಾಮುಖಿಯಾಗಿ ಸುಡುತ್ತಿರುವಾಗಲೇ, ಹರ್ಷಿಕಾ ಪೂಣಚ್ಚ, ಮೀಟೂ ಅಭಿಯಾನದಲ್ಲಿ ತೊಡಗಿರುವವರೆಲ್ಲ ಬೆಚ್ಚಿ ಬೀಳುವಂತಾ ಶಾಕ್ ಕೊಟ್ಟಿದ್ದಾರೆ. ಹೋರಾಟದ ನಟಿಯರ ಹೊಂದಾಣಿಕೆಯನ್ನೂ ನೋಡಿದ್ದೇನೆ ಎಂದಿರುವ ಹರ್ಷಿಕಾ ಪೂಣಚ್ಚ, ಪ್ರಸಿದ್ಧಿಗಾಗಿ ನಡೆಯುತ್ತಿರುವ ಮೀಟೂ ಹೋರಾಟವನ್ನು ಖಂಡಿಸಿದ್ದಾರೆ.

  ಅನೇಕ ಹೋರಾಟಗಾರ್ತಿ ನಟಿಯರು ತಮಗೆ ಅಗತ್ಯವಿದ್ದಾಗ ದುಡ್ಡಿಗಾಗಿ, ಒಳ್ಳೆಯ ಚಾನ್ಸ್‍ಗಾಗಿ, ಅದ್ಧೂರಿ ಜೀವನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಪ್ರಸಿದ್ಧಿ ಹಾಗೂ ಎಲ್ಲ ಅನುಕೂಲಗಳನ್ನೂ ಪಡೆಯುತ್ತಾರೆ. ಎಲ್ಲ ಮುಗಿದ ಮೇಲೆ ಯಾರ ಜೊತೆ ಒಂದು ಕಾಲದಲ್ಲಿ ಚೆನ್ನಾಗಿದ್ದರೋ, ಅವರ ವಿರುದ್ಧವೇ ಆರೋಪ ಮಾಡುತ್ತಾರೆ ಎಂದಿರುವ ಹರ್ಷಿಕಾ ಪೂಣಚ್ಚ, ಇದು ಹೋರಾಟದ ವಿಧಾನವಲ್ಲ ಎಂದಿದ್ದಾರೆ.

  ಹಾಗೆಂದು ಚಿತ್ರರಂಗ ಸಜ್ಜನರಷ್ಟೇ ಇರುವ ಕ್ಷೇತ್ರವೇನೂ ಅಲ್ಲ. ಅಲ್ಲಿಯೂ ಅಂತಹವರಿದ್ದಾರೆ. ನನಗೂ ಅಂತಹ ಅನುಭವಗಳಾಗಿವೆ. ಅವುಗಳನ್ನು ತಿರಸ್ಕರಿಸಿ ಬಂದಿದ್ದೇನೆ. ಅದರಿಂದಾಗಿ ಸೂಪರ್‍ಸ್ಟಾರ್‍ಗಳ ಜೊತೆ ನಟಿಸುವ ಅವಕಾಶಗಳೂ ತಪ್ಪಿವೆ. ಆದರೆ, ನಾನು ಹ್ಯಾಪಿಯಾಗಿದ್ದೇನೆ. ನಾನೇನು ಅನ್ನೋದು ಚಿತ್ರರಂಗದವರಿಗೂ ಗೊತ್ತಿದೆ. ಕೆಲವು ಪುರುಷರು ಕೆಟ್ಟವರಾಗಿರುತ್ತಾರೆ. ಬಲವಂತ ಮಾಡುತ್ತಾರೆ. ಹಾಗಂತ ಯಾರೂ ಅತ್ಯಾಚಾರ ಮಾಡೋದಿಲ್ಲ. ಮೃಗಗಳಂತೆ ವರ್ತಿಸುವುದಿಲ್ಲ. ಧೈರ್ಯವಾಗಿ ನೋ ಎಂದು ಹೇಳಿ ಹೊರಬನ್ನಿ. ಆ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಎರಡೂ ಕೈ ಸೇರಿದರೇನೇ ಚಪ್ಪಾಳೆ ಎಂದಿದ್ದಾರೆ ಹರ್ಷಿಕಾ ಪೂಣಚ್ಚ.

  ಯಾವುದೇ ಚಿತ್ರರಂಗದಲ್ಲಿ ಸೂಪರ್‍ಸ್ಟಾರ್ ನಟಿಯರು ಇಂತಹ ಮೀಟೂ ಆರೋಪ ಮಾಡುತ್ತಿಲ್ಲ ಎಂದು ಕೂಡಾ ನೆನಪಿಸಿದ್ದಾರೆ.