ಒಳ್ಳೆ ಹುಡ್ಗ ಪ್ರಥಮ್ ವಿರುದ್ಧ ಪೊಲೀಸ್ ಕಂಪ್ಲೇಂಟ್ ದಾಖಲಾಗಿದೆ. ಎಸ್‍ಡಿಪಿಐ ಕಾರ್ಯಕರ್ತ ಉಮರ್ ಫಾರೂಕ್ ಎಂಬುವವರು ಪ್ರಥಮ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 295ರ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ ಆರೋಪದಲ್ಲಿ ಕೇಸ್ ದಾಖಲಾಗಿದೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್ ಭೈರಸಂದ್ರ ಗಲಭೆ ಕೇಸ್‍ನಲ್ಲಿ ತಮ್ಮ ಪತಿಯನ್ನು ಅಕ್ರಮವಾಗಿ ಅರೆಸ್ಟ್ ಮಾಡಲಾಗಿದೆ ಎಂದು ಆರೋಪಿಸಿದ್ದ ಮಹಿಳೆಯೊಬ್ಬರು ನನಗೆ 7 ತಿಂಗಳ ಮಗು ಹಾಗೂ 3 ತಿಂಗಳ ಎರಡು ಮಕ್ಕಳಿವೆ ಎಂದು ಹೇಳಿದ್ದರು. ಇದನ್ನು ಲೇವಡಿ ಮಾಡಿದ್ದ ಪ್ರಥಮ್ `ನಿಜಕ್ಕೂ ಇಂತಹ ಮುಗ್ಧ ಮನಸ್ಸುಗಳು ಅನ್ ಎಜುಕೇಟೆಡ್ ಇರಬೇಕು. ಇಲ್ಲ ಅಂದ್ರೆ ಅಲ್ಲಾ ಪವಾಡ ಮಾಡಿರ್ಬೇಕು. 4 ತಿಂಗಳ ಡಿಫರೆನ್ಸ್‍ನಲ್ಲಿ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ..? ಎಂದು ಪೋಸ್ಟ್ ಮಾಡಿದ್ದರು.
ಇದರಿಂದ ತಮ್ಮ ಧಾರ್ಮಿಕ ನಂಬಿಕೆ, ಭಾವನೆಗೆ ಧಕ್ಕೆಯಾಗಿದೆ. ಇದು ಸಮಾಜದ ಶಾಂತಿ ಕದಡುವಂತಿದೆ ಎಂದು ಎಸ್‍ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಉಮರ್ ಫಾರೂಕ್ ಎಂಬುವವರು ದೂರು ನೀಡಿದ್ದಾರೆ.