` pavan wadeyar, - chitraloka.com | Kannada Movie News, Reviews | Image

pavan wadeyar,

  • ನಟಸಾರ್ವಭೌಮನಿಗೆ ಡೈರೆಕ್ಟರ್ ಕೊಡ್ತಾರೆ ಸ್ಪೆಷಲ್ ಗಿಫ್ಟು

    pavan wadeyar's special gift to puneeth

    ಇದೇ ಮಾರ್ಚ್ 17ಕ್ಕೆ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಏನೇನೋ ಗಿಫ್ಟ್ ಕೊಡ್ತಾರೆ. ಆದರೆ, ಪುನೀತ್ ಅವರ ಈ ಸ್ಪೆಷಲ್ ಅಭಿಮಾನಿ, ನಟಸಾರ್ವಭೌಮನ ಡೈರೆಕ್ಟರ್ ಪವನ್ ಒಡೆಯರ್ ಕೊಡ್ತಿರೋ ಗಿಫ್ಟೇ ಬೇರೆ.

    ನಟಸಾರ್ವಭೌಮ ಚಿತ್ರದ ಟೈಟಲ್ ಟ್ರ್ಯಾಕ್ ಗೊತ್ತಿದ್ಯಲ್ಲ. 

    ನಟಸಾರ್ವಭೌಮ.. ಹೀ ಈಸ್ ಕಿಂಗ್ ಆಫ್ ದಿ ಸಿನಿಮಾ.. ಕಾಲಿಟ್ರೆ ಕೇಡಿಗಳೆಲ್ಲ ಇನ್ನು ಗಪ್ಪುಚುಪ್ಪು.. ಡ್ಯಾನ್ಸ್ ವಿತ್ ಅಪ್ಪು..

    ಈಗ ಇದೇ ಟ್ರ್ಯಾಕ್‍ಗೆ ಪವನ್ ಒಡೆಯರ್ ಹೊಸ ಲಿರಿಕ್ಸ್ ಜೋಡಿಸಿದ್ದಾರೆ. ಈ ಹೊಸ ಸಾಹಿತ್ಯದಲ್ಲಿ ಅದೇ ಟ್ರ್ಯಾಕ್‍ನಲ್ಲಿ ಒಂದು ಹಾಡು ರೆಡಿಯಾಗಿದೆ. ಅದು ಅಪ್ಪು ಹುಟ್ಟುಹಬ್ಬಕ್ಕೆ ಪವನ್ ಒಡೆಯರ್ ಗಿಫ್ಟು.

    ಆಕಾಶದಿ ಅಭಿಯಾಗಿ ಕನ್ನಡ ಪೃಥ್ವಿಗೆ ನೀ ಅರಸು.. ಅಣ್ಣಾಬಾಂಡ್ ದೊಡ್ಮನೆ ಹುಡುಗನ ನಾನ್‍ಸ್ಟಾಪ್ ಸ್ಟೆಪ್ಪು.. ಇದು ಹೊಸ ಸಾಹಿತ್ಯ. ಹಾಡು... ಅಪ್ಪು ಹುಟ್ಟುಹಬ್ಬದ ದಿನ ಮಧ್ಯರಾತ್ರಿ 12ಕ್ಕೆ ರಿಲೀಸ್ ಆಗಲಿದೆ.

  • ನಿಮ್ಮ ಊರಿಗೇ ಬರ್ತಾನೆ ನಟಸಾರ್ವಭೌಮ. ಟೈಂ ತಿಳ್ಕೊಳಿ

    natasarvabhouma is coming to your city

    ನಟಸಾರ್ವಭೌಮ ಸೂಪರ್ ಸಕ್ಸಸ್ ಖುಷಿಯನ್ನು ಅಭಿಮಾನಿ ದೇವರೊಂದಿಗೆ ಹಂಚಿಕೊಳ್ಳಲು ಹೊರಟಿದ್ದಾರೆ ಪುನೀತ್ ರಾಜ್‍ಕುಮಾರ್. ಈಗಾಗಲೇ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಯಾತ್ರೆ ಪೂರೈಸಿರುವ ಅಪ್ಪು, ಈ ಬಾರಿ ಉತ್ತರ ಕರ್ನಾಟಕ ಯಾತ್ರೆಗೆ ಹೊರಟಿದ್ದಾರೆ. ಮಾರ್ಚ್ 3ರಂದು ಭಾನುವಾರ ಪುನೀತ್ ಅಭಿಮಾನಿಗಳ ಜೊತೆಯಲ್ಲಿರ್ತಾರೆ.

    ಮಾರ್ಚ್ 3 : ಭಾನುವಾರ

    ಬೆಳಗ್ಗೆ 10ಕ್ಕೆ - ಹಾವೇರಿ

    ಬೆಳಗ್ಗೆ 11.30 - ರಾಣೆಬೆನ್ನೂರು

    ಮಧ್ಯಾಹ್ನ 1ಕ್ಕೆ - ದಾವಣಗೆರೆ

    ಮಧ್ಯಾಹ್ನ 2.30 - ಚಿತ್ರದುರ್ಗ

    ಮಧ್ಯಾಹ್ನ 3.30 - ಹಿರಿಯೂರು

    ಸಂಜೆ 4.30 - ಶಿರಾ 

    ಸಂಜೆ 5.30 - ತುಮಕೂರು

    ಈಗ ರೆಡಿಯಾಗಬೇಕಿರೋದು ನೀವು. ನಟಸಾರ್ವಭೌಮನನ್ನು ಕಣ್ತುಂಬಿಕೊಂಡ ಅಭಿಮಾನಿಗಳು, ಈಗ ರಿಯಲ್ಲಾಗಿಯೇ ಪುನೀತ್ ಜೊತೆ ಕೈ ಕುಲುಕಬಹುದು.

  • ನಿರ್ದೇಶಕ ಪವನ್ ಒಡೆಯರ್ ಬಿಚ್ಚಿಟ್ಟ ನಟಸಾರ್ವಭೌಮ ರಹಸ್ಯ

    pavan wadeyar talks about natasarvabhouma

    ನಟ, ನಿರ್ದೇಶಕ ಪವನ್ ಒಡೆಯರ್, ಈಗ ನಟಸಾರ್ವಭೌಮನ ಜೋಶ್‍ನಲ್ಲಿದ್ದಾರೆ. ಸಿನಿಮಾ ಮೇಲಿನ ನಿರೀಕ್ಷೆ ದಿನೇ ದಿನೇ ಹೆಚ್ಚುತ್ತಲೇ ಇದೆ. ರಾಕ್‍ಲೈನ್-ಪುನೀತ್-ಪವನ್-ರಚಿತಾ-ಬಿ.ಸರೋಜಾದೇವಿ.. ಹೀಗೆ ಸಿನಿಮಾ ನೋಡೋಕೆ ಒಬ್ಬೊಬ್ಬರಿಗೂ ಹತ್ತು ಹತ್ತು ಕಾರಣಗಳಿವೆ. ಹೀಗಿರುವಾಗಲೇ ನಟಸಾರ್ವಭೌಮ ಚಿತ್ರದ ಕುರಿತು ಕೆಲವು ಸ್ವಾರಸ್ಯಗಳನ್ನು ಪವನ್ ಒಡೆಯರ್ ಹೊರಹಾಕಿದ್ದಾರೆ.

    ನಟಸಾರ್ವಭೌಮದಲ್ಲಿ ಇಬ್ಬರು ನಾಯಕಿಯರು. ಹಾಗಂತ ತ್ರಿಕೋನ ಪ್ರೇಮಕಥೆ ಎಂದು ಹೇಳೋಕೆ ಸಾಧ್ಯವಿಲ್ಲ. ಹಾರರ್ ಸಿನಿಮಾ ಎನ್ನುವುದಂತೂ ಹೌದು. ಇದು ತಮಿಳಿನ ಕೋ ಚಿತ್ರದ ರೀಮೇಕ್ ಅಲ್ಲ. ನಾನು ರೀಮೇಕ್ ಮಾಡಿಲ್ಲ. ಮಾಡುವುದೂ ಇಲ್ಲ.

    ನಟಸಾರ್ವಭೌಮ ಚಿತ್ರದ ಶೀರ್ಷಿಕೆಗೆ ಮೊದಲು ನೋ ಎಂದವರೇ ಪುನೀತ್. ಕೊನೆಗೆ ಕಥೆ, ಚಿತ್ರಕಥೆ ಕೇಳಿದ ಮೇಲೆ ಒಪ್ಪಿಕೊಂಡರು. ಚಿತ್ರದಲ್ಲಿ ಪುನೀತ್ ಪಾತ್ರ ಕ್ಷಣಕ್ಕೊಮ್ಮೆ ಬದಲಾಗುತ್ತಿರುತ್ತೆ. ಪುನೀತ್ ಅಭಿನಯಕ್ಕೆ ಸಿನಿಮಾದಲ್ಲಿ ಸ್ಕೋಪ್ ಹೆಚ್ಚು. ಆ ಸವಾಲನ್ನು ಪುನೀತ್ ಅದ್ಭುತವಾಗಿ ನಿರ್ವಹಿಸಿದ್ದಾರೆ.

    ಚಿತ್ರದ ಕಥೆಯ ಜರ್ನಿ ಬೆಂಗಳೂರಿನಿಂದ ಕೋಲ್ಕತ್ತಾವರೆಗೆ ಹೋಗಲಿದೆ. ಇದು ಸಿನಿಮಾ ಅಷ್ಟೇ ಅಲ್ಲ, ಒಂದು ಸುಂದರ ಜರ್ನಿ ಎನ್ನುತ್ತಾರೆ ಪವನ್.

  • ಪಂಜುನಾ..? ಅಧಿಪತಿನಾ..? ಅಪ್ಪು ಸಿನ್ಮಾ ಟೈಟಲ್ ಏನು..?

    puneeth rockline movie

    ಪುನೀತ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ಮುಹೂರ್ತವಾಗಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ಎಲ್ಲವೂ ಲೆಕ್ಕಾಚಾರದಂತೆಯೇ ನಡೆದಿದ್ದರೆ, ಇಷ್ಟು ಹೊತ್ತಿಗೆ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ, ಏಕೋ ಏನೋ ಚಿತ್ರೀಕರಣ ಆರಂಭ ಎರಡು ಬಾರಿ ಮುಂದಕ್ಕೆ ಹೋಗಿದೆ.

    ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ, ಪಂಜು ಹಾಗೂ ಅಧಿಪತಿ ಎರಡೂ ಟೈಟಲ್‍ಗಳನ್ನು ತಂಡ ಪರಿಶೀಲನೆ ಮಾಡುತ್ತಿದೆ. ಇವೆರಡೂ ಅಲ್ಲದ ಇನ್ನೊಂದು ಟೈಟಲ್ ಬಂದರೂ ಅಚ್ಚರಿ ಪಡಬೇಕಿಲ್ಲ ಅಂತಾರೆ ಪವನ್ ಒಡೆಯರ್.

     

  • ಪವನ್ ಒಡೆಯರ್ ಮ್ಯಾಜಿಕ್ : ಶಾರ್ಟ್ ಫಿಲಂ ಮನೆಯಲ್ಲೇ ರೆಡಿ

    pavan wadeyar's magic

    ಮನೆಯಲ್ಲಿದ್ದುಕೊಂಡೇ ಏನೇನೆಲ್ಲ ಮಾಡಬಹುದು ಅನ್ನೋದಕ್ಕೆ ಥರೇವಾರಿ ಐಡಿಯಾಗಳು ಬರುತ್ತಿವೆ. ಆದರೆ, ನಿರ್ದೇಶಕ ಪವನ್ ಒಡೆಯರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮನೆಯಲ್ಲಿದ್ದುಕೊಂಡೇ ಒಂದು ಕಿರುಚಿತ್ರ ರೆಡಿ ಮಾಡಿದ್ದಾರೆ.

    ರೆಮೋ ಚಿತ್ರದ ಕ್ಲೈಮಾಕ್ಸ್ ಚೇಂಜ್ ಮಾಡಿದ್ದೆ. ಸ್ಕ್ರಿಪ್ಟ್ ಎಲ್ಲಿ ಎಂದು ಹುಡುಕುವುದೇ ಶಾರ್ಟ್ ಫಿಲಂ. ಪವನ್ ಒಡೆಯರ್ ಎಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರೆ, ಚಿತ್ರತಂಡ ಬಹುತೇಕರ ಜೊತೆ ಮಾತನಾಡುತ್ತಾರೆ. ಆದರೆ, ಎಲ್ಲರೂ ಒಂದೇ ಮನೆಯಲ್ಲಿದ್ದಾರೇನೋ ಎಂಬ ಭ್ರಮೆ ಹುಟ್ಟಿಸಿಬಿಡ್ತಾರೆ. ಜೊತೆಗೆ ಕೊನೆಗೊಂದು ಪುಟ್ಟ ಸಂದೇಶ. ಎಂಜಾಯ್..

    Also Read :-

    Family Inspired 'Where Is My New Climax' Short Film By Raymo Team

  • ಪವನ್ ಸಿನಿಮಾಗೆ ಚುಟುಚುಟು ಚಕೋರಿ

    ashika ranganath roped in for pavan wadeyar's role

    ಪವನ್ ಒಡೆಯರ್, ನಟಸಾರ್ವಭೌಮ ನಂತರ ಇಶಾನ್ ನಾಯಕತ್ವದ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತಿದೆಯಷ್ಟೇ. ನಿರ್ಮಾಪಕ ಸಿ.ಆರ್. ಮನೋಹರ್ ಸಂಬಂಧಿ ಇಶಾನ್ ಚಿತ್ರಕ್ಕೆ ಹೀರೋ.

    ಗೂಗ್ಲಿ ನಂತರ ಮತ್ತೊಮ್ಮೆ ಲವ್ ಸಬ್ಜೆಕ್ಟ್ ಎತ್ತಿಕೊಂಡಿರುವ ಪವನ್ ಒಡೆಯರ್, ಚಿತ್ರಕ್ಕೆ ಹೀರೋಯಿನ್ ಆಗಿ ಆಶಿಕಾ ರಂಗನಾಥ್ ಅವರನ್ನು ಸೆಲೆಕ್ಟ್ ಮಾಡಿದ್ದಾರೆ.

    ಜುಲೈ ಅಂತ್ಯಕ್ಕೆ ಸಿನಿಮಾ ಶುರುವಾಗಲಿದ್ದು, ಸಿ.ಆರ್.ಮನೋಹರ್ ಅವರೇ ಬಂಡವಾಳ ಹೂಡಲಿದ್ದಾರೆ. ಇದೊಂದು ಫ್ರೆಶ್ ಲವ್‍ಸ್ಟೋರಿ, ಒಂದೊಂದು ದೃಶ್ಯವೂ ರೊಮ್ಯಾಂಟಿಕ್ ಆಗಿ ಮೂಡಿ ಬರಲಿದೆ ಎನ್ನುವುದು ಪವನ್ ಒಡೆಯರ್ ಭರವಸೆ.

  • ಪುನೀತ್ ಎದುರು ಕಾಲಕೇಯನ ಆರ್ಭಟ

    puneeth's face off with baahubali's kalakeya

    ಬಾಹುಬಲಿ 2 ಸಿನಿಮಾದಲ್ಲಿ ಜಿಬರಿಷ್ ಭಾಷೆಯ ಮೂಲಕ ಗಮನ ಸೆಳೆದಿದ್ದ ಕಾಲಕೇಯ ಪ್ರಭಾಕರ್, ಈಗ ಪುನೀತ್ ಎದುರು ನಟಿಸೋಕೆ ಬರುತ್ತಿದ್ದಾರೆ. ನಟಸಾರ್ವಭೌಮ ಸಿನಿಮಾದಲ್ಲಿ ಪುನೀತ್ ಎದುರು ವಿಲನ್ ಆಗಿರುವುದು ಪ್ರಭಾಕರ್. ಪ್ರಭಾಕರ್‍ಗೆ ಕನ್ನಡ ಚಿತ್ರಗಳು ಹೊಸದೇನಲ್ಲ. 

    ಬಾಹುಬಲಿಗೂ ಮುನ್ನ ಪ್ರಭಾಕರ್, ಆರ್.ಚಂದ್ರು ನಿರ್ದೇಶನದ ಕೋಕೋ, ಲಕ್ಷ್ಮಣ ಸಿನಿಮಾದಲ್ಲಿ ನಟಿಸಿದ್ದರು. ಚೌಕ ಚಿತ್ರದಲ್ಲಿ ದರ್ಶನ್ ಎದುರು ನಟಿಸಿದ್ದ ಪ್ರಭಾಕರ್, ಈಗ ನಟಸಾರ್ವಭೌಮ ಚಿತ್ರಕ್ಕೆ ಬರುತ್ತಿದ್ಧಾರೆ.

    ರಾಕ್‍ಲೈನ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾರಾಮ್ ನಾಯಕಿ. ಈ ಎಲ್ಲರ ಟೀಂನಲ್ಲಿ ಪ್ರಭಾಕರ್ ವಿಲನ್.

  • ಪುನೀತ್ ಕೈಲಿರುವ ದಾರದ ಕಥೆ..

    story if ouneeth's wrist band

    ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ, ಸಹಜವಾಗಿಯೇ ಕುತೂಹಲದ ಮೂಟೆ ಹೊತ್ತಿರುವ ಸಿನಿಮಾ. ಚಿತ್ರದ ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಾಯಕಿ ರಚಿತಾ ರಾಮ್, ವಿಶೇಷ ಪಾತ್ರದಲ್ಲಿ ಹಲವು ವರ್ಷಗಳ ನಂತರ ಬಿ.ಸರೋಜಾದೇವಿ ನಟಿಸಿರುವ ಸಿನಿಮಾ. ಈ ಸಿನಿಮಾದಲ್ಲಿ ಪುನೀತ್ ಫೋಟೋಗ್ರಾಫರ್ ಪಾತ್ರ ಮಾಡುತ್ತಿದ್ದಾರೆ.

    ಪುನೀತ್ ಅವರ ಫೋಟೋಗಳಲ್ಲಿ ಎದ್ದು ಕಾಣ್ತಿರೋದು ಅವರ ಕೈಲಿರುವ ಒಂದು ದಾರ. ಕಪ್ಪುದಾರದ ಬ್ಯಾಂಡ್‍ನಲ್ಲಿ ಒಂದು ಪುಟ್ಟ ಪದಕವೂ ಇದೆ. ಅದೇನು ಅದೃಷ್ಟದ ಸಂಕೇತವಾ ಎಂದರೆ, ನಿರ್ದೇಶಕ ಪವನ್ ಹಾಗೇನಿಲ್ಲ. ಅದಕ್ಕೂ ಚಿತ್ರದಲ್ಲಿ ಒಂದು ಕಥೆಯಿದೆ ಅಂತಾರೆ.

    ಸಿನಿಮಾದಲ್ಲಿ ಆ ಕಪ್ಪುದಾರದ ಬ್ಯಾಂಡ್‍ಗೂ ಒಂದು ಕಥೆಯಿದೆ. ಅದರ ಸ್ವಾರಸ್ಯವನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು. ಹೇಳೋಕೆ ಹೋದರೆ ಇಡೀ ಸಿನಿಮಾ ಕಥೆಯನ್ನೇ ಹೇಳಬೆಕಾಗುತ್ತೆ ಅಂತಾರೆ ಪವನ್ ಒಡೆಯರ್.

    ಈಗಾಗಲೇ ಚಿತ್ರದ ಶೇ.40ರಷ್ಟು ಶೂಟಿಂಗ್ ಮುಗಿದಿದೆ. ಬೆಂಗಳೂರು, ಮೈಸೂರು ಶೂಟಿಂಗ್ ಮುಗಿಸಿರುವ ಚಿತ್ರತಂಡ, ಬಳ್ಳಾರಿಯತ್ತ ಹೊರಟಿದೆ.

  • ಪುನೀತ್ ಸ್ಟೈಲ್ ಹಿಂದಿನ ಸ್ಟಾರ್ ಯಾರು ಗೊತ್ತಾ..?

    he is the secret star behind puneeth's style

    ಪುನೀತ್ ರಾಜ್‍ಕುಮಾರ್ ಅಂದ್ರೆ ಪವರ್ ಸ್ಟಾರ್. ಆದರೆ ನಟಸಾರ್ವಭೌಮ ನೋಡಿದವರಿಗೆ ಅಚ್ಚರಿಯಾಗುತ್ತಿರುವುದು ಪುನೀತ್ ಸ್ಟೈಲ್. ಕಣ್ಣಿಗೊಂದು ಚೆಂದದ ಕನ್ನಡಕ ಹಾಕಿಕೊಂಡು ಸಿಕ್ಕಾಪಟ್ಟೆ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ ಅಪ್ಪು. ಅಪ್ಪು ಬದಲಾಗುತ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಸ್ಟೈಲ್, ಲುಕ್, ಮ್ಯಾನರಿಸಂ ಬದಲಾಗುತ್ತಲೇ ಇವೆ. ಈ ಎಲ್ಲದರ ಹಿಂದಿರುವ ಸೀಕ್ರೆಟ್ ಸ್ಟಾರ್ ಯಾರು ಗೊತ್ತಾ..?

    ಯೋಗಿ ಜಿ.ರಾಜ್. ಖುಷಿಖುಷಿಯಾಗಿ & ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕ ಯೋಗಿ, ಪುನೀತ್ ಅವರ ಸ್ಟೈಲ್ ಹಿಂದಿರೋ ಸೀಕ್ರೆಟ್ ಸ್ಟಾರ್. ಮೂಲತಃ ಯೋಗಿ ಕಾಸ್ಟ್ಯೂಮ್ ಡಿಸೈನರ್. ತಮ್ಮ ಕೈಚಳಕವನ್ನು ಪುನೀತ್ ಮೇಲೆ ಪ್ರಯೋಗಿಸಿರುವ ಯೋಗಿ, ಪುನೀತ್‍ರನ್ನು ಸ್ಟೈಲಿಷ್ ನಟಸಾರ್ವಭೌಮನಾಗಿಸಿದ್ದಾರೆ.

  • ಪುನೀತ್ ಹೇರ್‍ಸ್ಟೈಲ್ ಮೊದಲ ಪ್ರಯೋಗ ಯಾರ ಮೇಲೆ..?

    puneeth's hair style experiment on pavan wodeyar

    ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ ಹೊಸ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ವಿಭಿನ್ನ ಹೇರ್‍ಸ್ಟೈಲ್ ಸದ್ದು ಮಾಡುತ್ತಿರುವಾಗಲೇ ಒಂದು ಸ್ವಾರಸ್ಯ ಹೊರಬಿದ್ದಿದೆ. ಚಿತ್ರದ ಕಥೆ ಮತ್ತು ಪಾತ್ರದ ವ್ಯಕ್ತಿತ್ವ ತಿಳಿಸುವಂತೆ ಹೇರ್‍ಸ್ಟೈಲ್ ಇರಬೇಕು ಎಂದು ಪವನ್ ಹೇಳಿದರಂತೆ. ಪುನೀತ್ ಓಕೆ ಎಂದರು. ಅದಾದ ಮೇಲೆ ಡಿಸೈನ್ ರೆಡಿ ಆಯ್ತು.

    ಆದರೆ, ಡಿಸೈನ್ ರೆಡಿ ಆದ ಮೇಲೆ ಪ್ರಯೋಗವಾಗಬೇಕಲ್ಲ.. ಪ್ರಯೋಗಕ್ಕೆ  ಯಾರನ್ನು ಹುಡುಕೋದು..? ಆಗ ಮೊದಲ ಪ್ರಯೋಗಕ್ಕೆ ಒಳಗಾಗಿದ್ದು ಸ್ವತಃ ಪವನ್ ಒಡೆಯರ್. 

    ಅದು ಕೇವಲ ಪ್ರಯೋಗವಲ್ಲ. ಸ್ಪೀಡ್ ಇಂಡಿಕೇಷನ್ ಹೇರ್‍ಸ್ಟೈಲ್. ನಾಯಕನ ಪಾತ್ರದ ವೇಗಕ್ಕೆ ಸರಿಯಾಗಿ ಹೊಂದುವ ಸ್ಟೈಲ್. ಇಡೀ ಚಿತ್ರದಲ್ಲಿ ಪುನೀತ್ ಇದೇ ಹೇರ್‍ಸ್ಟೈಲ್‍ನಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ ಪವನ್ ಒಡೆಯರ್.

    Related Articles :-

    ಪುನೀತ್ ಹೊಸ ಲುಕ್ ಸಖತ್ ಸ್ಟೈಲಿಶ್

  • ಫೆ.3ರಿಂದಲೇ ನಟಸಾರ್ವಭೌಮನ ಟಿಕೆಟ್ ಬುಕ್ ಮಾಡಿ

    natasarvabhouma booking from feb 3rd

    ನಟಸಾರ್ವಭೌಮ ಚಿತ್ರ ಕ್ರೇಜ್ ಸೃಷ್ಟಿಸುತ್ತಿದೆ. ಟ್ರೆಂಡಿಂಗ್‍ನಲ್ಲಿ ಈಗಲೂ ಟಾಪ್ 10ನಲ್ಲಿರೋ ನಟಸಾರ್ವಭೌಮ ಚಿತ್ರಕ್ಕೆ ಒಂದು ವಾರ ಮೊದಲೇ ಬುಕ್ಕಿಂಗ್ ಶುರುವಾಗಲಿದೆ. ಫೆಬ್ರವರಿ 3ನೇ ತಾರೀಕಿನಿಂದ ಅಂದರೆ, ಭಾನುವಾರದಿಂದಲೇ ನಟಸಾರ್ವಭೌಮ ಚಿತ್ರಕ್ಕೆ ಟಿಕೆಟ್ ಬುಕ್ ಮಾಡಬಹುದು.

    ಕನ್ನಡದಲ್ಲಿ ಮೊದಲ ದಿನವೇ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡುವ ಶಕ್ತಿ ಇರುವ ನಟ ಪುನೀತ್. ಇದರ ಜೊತೆಗೆ ವಾರಕ್ಕೆ ಮೊದಲೇ ಬುಕ್ಕಿಂಗ್ ಶುರುವಾದರೆ ಮೊದಲ ದಿನವೇ ಹೌಸ್‍ಫುಲ್ ಬೋರ್ಡ್ ಗ್ಯಾರಂಟಿ.

    ರಚಿತಾ ರಾಮ್, ಅನುಪಮಾ, ಬಿ.ಸರೋಜಾದೇವಿ, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ ಅಭಿನಯದ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶಕರಾದರೆ, ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.

     

  • ಬಿ.ಸರೋಜಾದೇವಿ ಜೊತೆ ಪುನೀತ್

    b sarojadevi plays herself in natasarwabhowma

    ನಟಸಾರ್ವಭೌಮ. ಇದು ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ. ರಣವಿಕ್ರಮ ನಂತರ ಮತ್ತೆ ನಿರ್ದೇಶಕ ಪವನ್ ಒಡೆಯರ್ ಮತ್ತು ಪುನೀತ್ ಒಂದಾಗಿರುವ ಚಿತ್ರ. ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕರಾದರೆ, ರಚಿತಾ ರಾಮ್ ನಾಯಕಿ. ಈ ಚಿತ್ರದಲ್ಲಿ ಬಿ.ಸರೋಜಾದೇವಿ, ಚಿತ್ರನಟಿಯಾಗಿಯೇ ನಟಿಸಿದ್ದಾರೆ ಅನ್ನೋದು ವಿಶೇಷ.

    ಸಿನಿಮಾದಲ್ಲಿ ಪುನೀತ್ ಪತ್ರಕರ್ತರಾಗಿ ನಟಿಸಿದ್ದಾರೆ. ಪತ್ರಕರ್ತನಾಗಿ ಬಿ.ಸರೋಜಾದೇವಿಯವರನ್ನು ಪುನೀತ್ ಸಂದರ್ಶನ ಮಾಡುವ ದೃಶ್ಯ ಚಿತ್ರದಲ್ಲಿದೆ. ನನಗೆ ಇದೊಂದು ಹೆಮ್ಮೆಯ ಕ್ಷಣ. ಇಬ್ಬರು ಶ್ರೇಷ್ಟರನ್ನು ಒಟ್ಟಿಗೇ ನಿರ್ದೇಶಿಸುವ ಸೌಭಾಗ್ಯ ನನ್ನದು ಎಂದು ಬರೆದುಕೊಂಡಿದ್ದಾರೆ ಪವನ್ ಒಡೆಯರ್.

    ಪುನೀತ್ ರಾಜ್‍ಕುಮಾರ್ ಮತ್ತು ಬಿ.ಸರೋಜಾದೇವಿ ಎಂದರೆ ತಕ್ಷಣ ನೆನಪಾಗೋದು ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಹಾಡು.. ಆಗ ಪುನೀತ್ ಮಾಸ್ಟರ್ ಲೋಹಿತ್ ಆಗಿದ್ದರು. ಈಗ ಪವರ್‍ಸ್ಟಾರ್ ಆಗಿದ್ದಾರೆ. ಮತ್ತೊಮ್ಮೆ ಸರೋಜಾದೇವಿ ಎದುರು ನಟಿಸಿದ್ದಾರೆ. 

  • ರಾಕ್‍ಲೈನ್ ಬ್ಯಾನರ್ ನಮ್ದೇ - ಪುನೀತ್

    rockline banner is like family banner says puneeth

    ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ನಲ್ಲಿ ನಟಿಸುವಾಗ ನಾವು ಬೇರೆ ನಿರ್ಮಾಪಕರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನಿಸುವುದಿಲ್ಲ. ಅದು ನಮ್ಮದೇ ಬ್ಯಾನರ್ ಎನಿಸುತ್ತೆ. ಹೀಗಾಗಿಯೇ ಅವರು ಆಫರ್ ಕೊಟ್ಟಾಗ ಮರುಮಾತಿಲ್ಲದೆ ಒಪ್ಪಿಕೊಂಡೆ. ಇದು ಪುನೀತ್ ರಾಜ್‍ಕುಮಾರ್ ಮಾತು.

    ರಾಕ್‍ಲೈನ್ ವೆಂಕಟೇಶ್ ಮತ್ತು ಡಾ.ರಾಜ್ ಮನೆತನದ ಸಂಬಂಧ, ಗೆಳೆತನ, ಬಾಂಧವ್ಯ ಇಡೀ ಕರ್ನಾಟಕಕ್ಕೇ ಗೊತ್ತು. ಹೀಗಾಗಿಯೇ, 

    ಪುನೀತ್ ರಾಜ್‍ಕುಮಾರ್ ಈ ಮಾತು ಹೇಳಿದ್ದಾರೆ.

    ನಟಸಾರ್ವಭೌಮ, ರಾಕ್‍ಲೈನ್ ಮತ್ತು ಪುನೀತ್ ಕಾಂಬಿನೇಷನ್‍ನ 3ನೇ ಸಿನಿಮಾ. ಈ ಹಿಂದೆ ಅಪ್ಪು ಅವರಿಗಾಗಿ ಅಜಯ್ ಮತ್ತು ಮೌರ್ಯ ಚಿತ್ರಗಳನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು.

  • ರಾಕ್‍ಸ್ಟಾರ್ ರೆಮೋ

    reymo sensational poster out

    ರೆಮೋ, ಪವನ್ ಒಡೆಯರ್ ನಿರ್ದೇಶನದ ಹೊಸ ಸಿನಿಮಾ. ಇಶಾನ್ ಮತ್ತು ಅಶಿಕಾ ರಂಗನಾಥ್ ಪ್ರಧಾನ ಪಾತ್ರದಲ್ಲಿರುವ ಚಿತ್ರ. ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿರೋ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಚಿತ್ರದ ಹೀರೋ ಒಬ್ಬ ರಾಕ್‍ಸ್ಟಾರ್ ಎನ್ನುವ ಗುಟ್ಟು ಹೊರಬಿದ್ದಿದೆ.

    ಲೈವ್ ಕನ್ಸರ್ಟ್ ಮಾದರಿಯ ಸೀನ್ ಮತ್ತು ಹಾಡಿನ ಶೂಟಿಂಗ್ ನಡೆಯಬೇಕಿದ್ದು, ಈಗಾಗಲೇ ಚಿತ್ರದ 80% ಶೂಟಿಂಗ್ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ ಪವನ್ ಒಡೆಯರ್.

    ಸಿ.ಆರ್.ಮನೋಹರ್ ನಿರ್ಮಾಣದ ರೆಮೋ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಅಂದಹಾಗೆ ಚಿತ್ರದಲ್ಲಿ ಶರತ್ ಕುಮಾರ್ ಕೂಡಾ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಮಧು ಎಂಟ್ರಿ ಕೊಟ್ಟಿದ್ದಾರೆ. ರನ್ನ, ಸೀತಾರಾಮ ಕಲ್ಯಾಣ, ಪ್ರೀಮಿಯರ್ ಪದ್ಮಿನಿ ನಂತರ ಮಧು ನಟಿಸುತ್ತಿರುವ ಚಿತ್ರವಿದು.

  • ರೇಮೋ ಪ್ರೇಮ್ ಕಹಾನಿ ಆರಂಭ

    pavan wadeyar's reymo launched

    ಅವನ ಹೆಸರು ರೇವಂತ್.. ಅವಳ ಹೆಸರು ಮೋಹನಾ.. ಅವರಿಬ್ಬರ ಹೆಸರಿನ ಮೊದಲ ಅಕ್ಷರ ಸೇರಿದರೆ ರೇಮೋ.. ಅಷ್ಟೇ ಅಲ್ಲ.. ನಾಯಕ ವಿಚಿತ್ರ ಸ್ವಭಾವದವನು. ಅದಕ್ಕೆ ತಕ್ಕಂತೆ ಅವನ ಹೆಸರು ರೇಮೋ..

    ನಿಮಗೆ ಅನ್ನಿಯನ್ ಚಿತ್ರದ ಕ್ಯಾರೆಕ್ಟರ್ ನೆನಪಾಗಿದ್ದರೆ, ಆಶ್ಚರ್ಯವಿಲ್ಲ. ಅಲ್ಲಿ ವಿಕ್ರಂ ಅವತಾರದ ಮಾಡ್ ಪಾತ್ರದ ಹೆಸರು ರೇಮೋ.. 

    ಇಷ್ಟೆಲ್ಲ ಇರೋ ಈ ಚಿತ್ರ ಈಗ ಶುರುವಾಗಿಯೇ ಬಿಟ್ಟಿದೆ. ರೋಗ್ ಮೂಲಕ ಗಮನ ಸೆಳೆದಿದ್ದ ನಟ ಇಶಾನ್, ಚುಟುಚುಟು ಚೆಲುವು ಅಶಿಕಾ ರಂಗನಾಥ್ ನಟಿಸುತ್ತಿರುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ನಿರ್ದೇಶಕ ಪವನ್ ಒಡೆಯರ್.

    ವಿಲನ್ ನಂತರ ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಚಿತ್ರಿವಿದು. ಇಶಾನ್, ಮನೋಹರ್ ಫ್ಯಾಮಿಲಿ ಹುಡುಗ. ಚಿತ್ರದ ಮುಹೂರ್ತಕ್ಕೆ ಶಿವರಾಜ್‍ಕುಮಾರ್ ಮತ್ತು ಗೀತಾ ಆಗಮಿಸಿ ಶುಭ ಕೋರಿದರು.

  • ಸೆಕೆಂಡ್ ಶೋನ ಟೈಮಲ್ಲಿ ನಟಸಾರ್ವಭೌಮ ಫಸ್ಟ್ ಶೋ

    natasarvabhouma released last night itself

    ನಟಸಾರ್ವಭೌಮ ಸಿನಿಮಾ, ನಿನ್ನೆ ರಾತ್ರಿಯೇ ರಿಲೀಸ್ ಆಗಿಬಿಟ್ಟಿದೆ. ಹೌದು, 7ನೇ ತಾರೀಕು ಅಂದರೆ ಇವತ್ತು ರಿಲೀಸ್ ಆಗಬೇಕಿದ್ದ ಸಿನಿಮಾವನ್ನು 6ನೇ ತಾರೀಕು ಪ್ರದರ್ಶನವಾಗುವಂತೆ ಮಾಡಿರೋದು ಅಪ್ಪು ಫ್ಯಾನ್ಸ್.

    ದೇವರು ಭಕ್ತರ ಎದುರು ಶರಣಾಗುವಂತೆ ಅಪ್ಪು ಅಭಿಮಾನಿಗಳ ಎದುರು ರಾಕ್‍ಲೈನ್ ಶರಣಾಗಿದ್ದಾರೆ. ಹೀಗಾಗಿ ರಾತ್ರಿ 10.30ಕ್ಕೆ ಪ್ರಸನ್ನ ಥಿಯೇಟರ್‍ನಲ್ಲಿ ಮೊದಲ ಶೋ ಪ್ರದರ್ಶನಗೊಂಡಿದೆ. 

    ಇನ್ನು ಶ್ರೀನಿವಾಸ, ಊರ್ವಶಿ ಹಾಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಧ್ಯರಾತ್ರಿಯೇ ನಟಸಾರ್ವಭೌಮನಿಗೆ ಉಘೇ ಉಘೇ ಎಂದಿದ್ದಾರೆ ಪ್ರೇಕ್ಷಕರು. ಅಪ್ಪು ಜೊತೆ ರಚಿತಾ ರಾಮ್, ಅನುಪಮಾ ಜೋಡಿ ಮೋಡಿಯನ್ನೇ ಮಾಡುತ್ತಿದೆ. ಪವನ್ ಒಡೆಯರ್ ಮತ್ತೊಮ್ಮೆ ಗೆದ್ದಿದ್ದಾರೆ.

  • ಸ್ಟುಡಿಯೋದಲ್ಲೇ ಉದ್ಭವವಾಗಲಿದೆ ಕಾಶ್ಮೀರ

    pavan wadeyar plans to create kashmir in studio

    ಲಾಕ್ ಡೌನ್ ಎಫೆಕ್ಟ್. ಯಾವುದೇ ಶೂಟಿಂಗ್ ನಡೆಯುತ್ತಿಲ್ಲ. ಲಾಕ್ ಡೌನ್ ಮುಗಿದ ತಕ್ಷಣ ರಿಲೀಸ್ ಆಗೋಕೆ ಸಿನಿಮಾಗಳು ಕ್ಯೂನಲ್ಲಿವೆ. ಇದರ ನಡುವೆ ಶೂಟಿಂಗ್ ಅಂತಿಮ ಹಂತದಲ್ಲಿರೋ ಚಿತ್ರಗಳ ಕಥೆಯೇ ಬೇರೆ. ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರಕ್ಕೂ ಆ ಬಿಸಿ ತಟ್ಟಿದೆ. ಪವನ್ ಒಡೆಯರ್ ಚಿತ್ರದ ಕೆಲವು ದೃಶ್ಯ ಮತ್ತು ಹಾಡುಗಳ ಚಿತ್ರೀಕರಣಕ್ಕೆ ಕಾಶ್ಮೀರಕ್ಕೆ ಹೋಗಬೇಕಿತ್ತು. ಈಗ ಅದು ಅಸಾಧ್ಯ ಎನ್ನುವ ಸ್ಥಿತಿಯಲ್ಲಿದೆ. ಕಾರಣ ಇಷ್ಟೆ, ಜಮ್ಮು ಕಾಶ್ಮೀರಕ್ಕೆ ತಬ್ಲಿಘಿಗಳಿಂದಾಗಿ ಕೊರೊನಾ ವ್ಯಾಪಕವಾಗಿ ತಟ್ಟಿದೆ. ಚಿತ್ರೀಕರಣಕ್ಕೆ ಈ ವರ್ಷ ಅನುಮತಿ ಸಿಗುವುದೇ ಅನುಮಾನ.

    ಸಿಕ್ಕರೆ ಹೋಗಿ ಶೂಟಿಂಗ್ ಮಾಡೋದು, ಸಿಗದೇ ಇದ್ದರೆ..? ಅದಕ್ಕಾಗಿಯೇ ಪವನ್ ಒಡೆಯರ್, ಕಾಶ್ಮೀರವನ್ನು ಸ್ಟುಡಿಯೋದಲ್ಲಿಯೇ ಸೃಷ್ಟಿಸಲು ತೀರ್ಮಾನಿಸಿಬಿಟ್ಟಿದೆ. ಗ್ರೀನ್ ಮ್ಯಾಟ್‍ನಲ್ಲಿ ಕಾಶ್ಮೀರದ ಕೃತಕ ವಾತಾವರಣ ಸೃಷ್ಟಿಸಿ ಶೂಟಿಂಗ್ ಮಾಡೋ ಪ್ಲಾನ್ ಮಾಡಿದ್ದಾರೆ. ಸಿ.ಆರ್.ಮನೋಹರ್ ನಿರ್ಮಾಣದ ರೆಮೋ ಚಿತ್ರಕ್ಕೆ ಇಶಾನ್ ಮತ್ತು ಅಶಿಕಾ ರಂಗನಾಥ್ ಹೀರೋ ಹೀರೋಯಿನ್. ಚೈನೀಸ್ ವೈರಸ್ ಅಟ್ಯಾಕ್ ಇಲ್ಲದೇ ಹೋಗಿದ್ದರೆ, ಈ ತಿಂಗಳ ಕೊನೆಗೆ ಚಿತ್ರಮಂದಿರಕ್ಕೆ ಬರಬೇಕಿತ್ತು ರೆಮೋ. ಈಗ ರಿಲೀಸ್ ಡೇಟ್ ಹೇಳೋದು ಅಸಾಧ್ಯ ಎನ್ನುವ ಸ್ಥಿತಿಯಲ್ಲಿದೆ. ಆದರೆ, ಪವನ್ ಒಡೆಯರ್ ಪ್ಲಾನ್ ಬಿ ಮಾಡಿಕೊಂಡಿದ್ದಾರೆ.

  • ಹುಟ್ಟಿದ ದಿನವೇ ಅಪ್ಪನಾದ ಅದೃಷ್ಟವಂತ

    ಹುಟ್ಟಿದ ದಿನವೇ ಅಪ್ಪನಾದ ಅದೃಷ್ಟವಂತ

    ಮಕ್ಕಳು ಹುಟ್ಟುವುದೇ ಒಂದು ಸಂಭ್ರಮ. ಹೊಸ ಜೀವನದ ಆರಂಭವೂ ಹೌದು. ಅಂಥಾದ್ದರಲ್ಲಿ ತಾವು ಹುಟ್ಟಿದ ದಿನವೇ ಅಪ್ಪನಾಗುವ ಅದೃಷ್ಟವೂ ಸಿಕ್ಕಿಬಿಟ್ಟರೆ..

    ಅಂತಾದ್ದೊಂದು ಅದೃಷ್ಟ ಸಿಕ್ಕಿದ್ದು ನಿರ್ದೇಶಕ ಪವನ್ ಒಡೆಯರ್ ಅವರಿಗೆ. ಗುರುವಾರವಷ್ಟೇ ಅವರ ಹುಟ್ಟುಹಬ್ಬವಿತ್ತು. ಅದೇ ದಿನ ಅವರ ಪತ್ನಿ ಅಪೇಕ್ಷಾ ಪುರೋಹಿತ್, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪವನ್ ಒಡೆಯರ್ ಹುಟ್ಟಿದ ದಿನವೇ ಅವರೊಳಗೊಬ್ಬ ಅಪ್ಪನೂ ಹುಟ್ಟಿದ್ದಾನೆ. ಅದೇ ಖುಷಿ ಪವನ್ ಒಡೆಯರ್ ಅವರದ್ದು.

    ನನ್ನ ಬರ್ತ್‍ಡೇಗೆ ಅದ್ಭುತ ಗಿಫ್ಟ್. ನಾನು ಅಪ್ಪನಾದೆ, ಜೈ ಚಾಮುಂಡೇಶ್ವರಿ ಎಂದು ಟ್ವೀಟ್ ಮಾಡಿ ಖುಷಿ ಹಂಚಿಕೊಂಡದ್ದಾರೆ ಪವನ್ ಒಡೆಯರ್.

     

  • ಹುಬ್ಬಳ್ಳಿಯಲ್ಲಿಂದು ನಟಸಾರ್ವಭೌಮ ಬರೋದು ಗ್ಯಾರಂಟಿ

    puneeth at natasarvabhouma audio launch in hubbali

    ಐಟಿ ದಾಳಿ ಹಿನ್ನೆಲೆಯಲ್ಲಿ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಹುಬ್ಬಳ್ಳಿಗೆ ಬರುತ್ತಾರೋ ಇಲ್ಲವೋ.. ನಟಸಾರ್ವಭೌಮ ಆಡಿಯೋ ರಿಲೀಸ್ ಆಗುತ್ತೋ.. ಇಲ್ಲವೋ ಎಂಬ ಎಲ್ಲ ಗೊಂದಲಗಳಿಗೆ ಈಗ ತೆರೆ ಬಿದ್ದಿದೆ. ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಗುರುವಾರ ಬೆಳಗ್ಗೆ ಶುರುವಾದ ಐಟಿ ತನಿಖೆ, ಶುಕ್ರವಾರ ರಾತ್ರಿ ಮುಗಿದಿದೆ. ಎಲ್ಲ ತನಿಖೆ, ವಿಚಾರಣೆ ಮುಗಿದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುನೀತ್ ರಾಜ್‍ಕುಮಾರ್, ತನಿಖೆಗೆ ಎಲ್ಲ ಸಹಕಾರ ನೀಡಿದ್ದೇವೆ. ಅವರ ಕರ್ತವ್ಯ ಅವರು ಮಾಡಿದ್ದಾರೆ ಎಂದಿದ್ದಾರೆ.

    ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನಟಸಾರ್ವಭೌಮ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಪುನೀತ್ ಜೊತೆ ಯುವರಾಜ್ ಕುಮಾರ್ ಕೂಡಾ ಸ್ಟೆಪ್ ಹಾಕಲಿದ್ದಾರೆ. ಪವನ್ ಒಡೆಯರ್ ಈಗಾಗಲೇ ತಮ್ಮ ದೊಡ್ಡ ತಂಡದ ಜೊತೆ ಹುಬ್ಬಳ್ಳಿ ತಲುಪಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಮನೆಯಲ್ಲಿ ಐಟಿ ವಿಚಾರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರು ಬರುವ ಸಾಧ್ಯತೆ ಇನ್ನೂ ಅನುಮಾನ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery