` pavan wadeyar, - chitraloka.com | Kannada Movie News, Reviews | Image

pavan wadeyar,

 • ಅಭಿಷೇಕ್ ಅಂಬರೀಷ್ ಚಿತ್ರಕ್ಕೆ ಪವನ್ ಒಡೆಯರ್ ಡೈರೆಕ್ಟರ್

  pawan wodeyar to direct abhishek's debut

  ಅಭಿಷೇಕ್ ಅಂಬರೀಷ್ ಚಿತ್ರರಂಗಕ್ಕೆ ಬರುವುದು ಪಕ್ಕಾ ಎಂದು ನಿರ್ಧಾರವಾದ ದಿನದಿಂದಲೂ ಚಿತ್ರಕ್ಕೆ ಯಾರು ಡೈರೆಕ್ಟರ್..? ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಆ ಕಾಡುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿದೆ. ಅಭಿಷೇಕ್ ಅಭಿನಯದ ಮೊದಲ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ಚಿತ್ರದ ಕಥೆಯನ್ನು ಓಕೆ ಮಾಡಿರುವುದು ಸ್ವತಃ ಅಂಬರೀಷ್.

  ಗೆಳೆಯನ ಮಗನ ಮೊದಲ ಚಿತ್ರವನ್ನು ನಿರ್ಮಿಸುವ ಜವಾಬ್ದಾರಿಯನ್ನು ಸಂದೇಶ್ ನಾಗರಾಜ್ ಹೊತ್ತುಕೊಂಡಿದ್ದಾರೆ. ರೆಬಲ್ ಸ್ಟಾರ್ ಅಂಬರೀಷ್ ಪುತ್ರನ ಚಿತ್ರಕ್ಕೆ ಜಲೀಲ ಅಥವಾ ಕನ್ವರ್‍ಲಾಲ್ ಎಂಬ ಹೆಸರುಗಳಲ್ಲಿ ಯಾವುದಾದರೂ ಒಂದನ್ನು ಫೈನಲ್ ಮಾಡುವ ಆಲೋಚನೆ ಇದೆ.

  ಸಿನಿಮಾಗೆ ಪವನ್ ಒಡೆಯರ್ ಕಥೆ ಮತ್ತು ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ. ಚಿತ್ರಕಥೆ, ಸಂಭಾಷಣೆ ಇನ್ನೊಬ್ಬರ ಜವಾಬ್ದಾರಿ. ಸಿನಿಮಾಗೆ 6 ಸಂಗೀತ ನಿರ್ದೇಶಕರು ಕೆಲಸ ಮಾಡಲಿದ್ದಾರಂತೆ. ಅಲ್ಲಿಗೆ ಮೂವರು ನಿರ್ದೇಶಕರು, 6 ಸಂಗೀತ ನಿರ್ದೇಶಕರ ಸಹಯೋಗದಲ್ಲಿ ಅಭಿಷೇಕ್ ಅಂಬರೀಷ್ ಮೊದಲ ಚಿತ್ರ ಲಾಂಚ್ ಆಗಲಿದೆ.

  ಫೆಬ್ರವರಿ ಕೊನೆಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ಅದ್ಧೂರಿಯಾಗಿ ಸೆಟ್ಟೇರುವ ನಿರೀಕ್ಷೆಗಳಿವೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ಆಗಿಲ್ಲ.

 • ದರ್ಶನ್ 51ನೇ ಚಿತ್ರಕ್ಕೆ ಡೈರೆಕ್ಷನ್ - ಪವನ್ ಒಡೆಯರ್ ರೆಡಿ

  pavan vodeyar to direct darshan;s 52st movie

  ಸದ್ಯಕ್ಕೆ ದರ್ಶನ್ ಕುರುಕ್ಷೇತ್ರ ಚಿತ್ರದ ಶೂಟಿಂಗ್‍ನಲ್ಲಿ ಕಂಪ್ಲೀಟ್ ಬ್ಯುಸಿ. ಅದು ದರ್ಶನ್ ಅಭಿನಯದ 50ನೇ ಚಿತ್ರವೂ ಹೌದು. ಹೀಗಿರುವಾಗಲೇ 51ನೇ ಚಿತ್ರಕ್ಕೆ ಆಗಲೇ ವೇದಿಕೆ ಸಿದ್ಧಗೊಳ್ಳುತ್ತಿದೆ. ದರ್ಶನ್ ಅಭಿನಯದ 51ನೇ ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್, ನಿರ್ದೇಶಕ ಪವನ್ ಒಡೆಯರ್.

  ಕುರುಕ್ಷೇತ್ರ ಚಿತ್ರದ ನಂತರ ಪವನ್ ಒಡೆಯರ್ ನಿರ್ದೆಶನದ ಚಿತ್ರ ಸೆಟ್ಟೇರುತ್ತಿದೆ. ಚಿತ್ರದ ಕಥೆಯ ಎಳೆ ದರ್ಶನ್‍ಗೆ ಇಷ್ಟವಾಗಿದೆ. ಚಿತ್ರಕಥೆ ರಚಿಸುವುದರಲ್ಲಿ ಸಂಪೂರ್ಣ ಮಗ್ನನಾಗಿರುವ ಪವನ್, ಸದ್ಯಕ್ಕೆ ಬೇರೆ ಯಾವುದೇ ಯೋಚನೆಯನ್ನೂ ಮಾಡುತ್ತಿಲ್ಲವಂತೆ. ದರ್ಶನ್‍ರ 51ನೇ ಚಿತ್ರದ ಮೇಲೆ ಸಂಪೂರ್ಣ ಗಮನಹರಿಸಿದ್ದಾರಂತೆ.

 • ದೀಪಾವಳಿಗೆ ನಟಸಾರ್ವಭೌಮ..?

  will natasarvabhouma release on deepavali

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ, ದೀಪಾವಳಿಗೆ ರಿಲೀಸ್ ಆಗುತ್ತಾ..? ಅಂತಾದ್ದೊಂದು ನಿರೀಕ್ಷೆ ಈಗ ಗರಿಗೆದರುತ್ತಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದ ಕೆಲವೇ ಕೆಲವು ದೃಶ್ಯ ಹಾಗೂ ಹಾಡುಗಳ ಶೂಟಿಂಗ್ ಬಾಕಿಯಿದ್ದು, ಸೆಪ್ಟೆಂಬರ್ 18ರಿಂದ ಮತ್ತೆ ಶೂಟಿಂಗ್ ಶುರುವಾಗುತ್ತಿದೆ. ಅದು ಮುಗಿದರೆ ಕುಂಬಳಕಾಯಿ ಒಡೆದಂತೆಯೇ ಲೆಕ್ಕ. 

  ಶೂಟಿಂಗ್ ಜೊತೆ ಜೊತೆಯಲ್ಲೇ ನಿರ್ದೇಶಕ ಪವನ್ ಒಡೆಯರ್, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೂ ತೊಡಗಿಸಿಕೊಂಡಿರೋದ್ರಿಂದ, ಶೂಟಿಂಗ್ ಮುಗಿದ ನಂತರ, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಲಿದೆ. 

  ಪವನ್ ಒಡೆಯರ್ ಹಾಗೂ ರಾಕ್‍ಲೈನ್ ವೆಂಕಟೇಶ್ ಪ್ಲಾನ್ ಪ್ರಕಾರವೇ ಎಲ್ಲವೂ ನಡೆದರೆ, ದೀಪಾವಳಿಗೆ ನಟಸಾರ್ವಭೌಮನನ್ನು ತೆರೆಯ ಮೇಲೆ ನೋಡಬಹುದು.

 • ದುರ್ಯೋಧನ ದರ್ಶನ್ 51ನೇ ಚಿತ್ರ ಒಡೆಯರ್ - ನಿರ್ದೇಶಕ ಪವನ್ ಒಡೆಯರ್

  pavan wadeyar to direct darshan's 51st

  ದರ್ಶನ್, ಮೈಸೂರಿನವರು. ಅಲ್ಲಿಯೇ ಹುಟ್ಟಿ ಬೆಳೆದವರು. ಕರ್ನಾಟಕದ ಅಭಿಮಾನಿಗಳ ಚಾಲೆಂಜಿಂಗ್ ಸ್ಟಾರ್ ಆಗಿರುವ ದರ್ಶನ್‍ಗೆ, ಮೈಸೂರಿನ ಮೇಲೆ ಒಂದು ವಿಶೇಷ ಪ್ರೀತಿಯಂತೂ ಇದ್ದೇ ಇದೆ. ಅಂತಹ ದರ್ಶನ್ ಈಗ ಒಡೆಯರ್ ಸಿನಿಮಾಗೆ ರೆಡಿಯಾಗುತ್ತಿದ್ದಾರೆ.

  ಸದ್ಯಕ್ಕೆ ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಬ್ಯುಸಿಯಾಗಿರುವ ದರ್ಶನ್, ಆ ಚಿತ್ರ ಮುಗಿದ ಮೇಲೆ ಪವನ್ ಒಡೆಯರ್ ಚಿತ್ರದಲ್ಲಿ ನಟಿಸಲಿದ್ದಾರೆ. ಚಿತ್ರದ ಸ್ಕ್ರಿಪ್ಟ್ ವರ್ಕ್‍ನ್ನು ಮುಗಿಸಿರುವ ಪವನ್, ಚಿತ್ರಕ್ಕೆ ಇಟ್ಟಿರುವ ಟೈಟಲ್ ಒಡೆಯರ್.

  ಹಾಗೆಂದು ತಮ್ಮ ಹೆಸರಿನಲ್ಲಿ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂದು ಕೊಳ್ಳಬೇಡಿ. ನಿರ್ಮಾಪಕ ಸಂದೇಶ್ ನಾಗರಾಜ್ ಕೂಡಾ ಮೈಸೂರಿನವರೇ. ಸುಮಾರು ರ್ಷಗಳ ಹಿಂದೆ ಅವರು ಒಡೆಯರ್ ಎಂದು ಟೈಟಲ್ ರಿಜಿಸ್ಟರ್ ಮಾಡಿಸಿದ್ದರು. ಅದೇ ಟೈಟಲ್ ಪವನ್ ಒಡೆಯರ್‍ಗೂ ಇಷ್ಟವಾಗಿ, ಚಿತ್ರಕ್ಕೆ ಆ ಹೆಸರನ್ನೇ ಫೈನಲ್ ಮಾಡಿದ್ದಾರೆ. ಒಡೆಯರ್ ಎನ್ನುವ ಹೆಸರಿನಲ್ಲೇ ಮೈಸೂರು ಮತ್ತು ಕರ್ನಾಟಕದ ಚರಿತ್ರೆಯಿದೆ ಎನ್ನುವುದನ್ನು ಮರೆಯುವಂತಿಲ್ಲ.

  Related Articles :-

  Darshan's Wodeyar Script Almost Ready

 • ನಟ ಸಾರ್ವಭೌಮನಿಗೆ ಇನ್ನೊಬ್ಬ ಹೀರೋಯಿನ್

  pavan wodeyar in search of new heroine

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ಹೊಸ ನಾಯಕಿ ಆಯ್ಕೆಯಾಗಲಿದ್ದಾರೆ. ಕೆಲವೇ ದಿನಗಳಲ್ಲಿ ಹೊಸ ನಾಯಕಿಯ ಹೆಸರು ಫೈನಲ್ ಮಾಡಲಿದ್ದೇವೆ. ಹೀಗೆಂದು ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ. ಹಾಗಾದರೆ ರಚಿತಾ ರಾಮ್..?

  ಅಭಿಮಾನಿಗಳೇ.. ಡೋಂಟ್‍ವರಿ.. ಡಿಂಪಲ್ ಕ್ವೀನ್ ನಟಸಾರ್ವಭೌಮನ ನಾಯಕಿ. ಚಿತ್ರಕ್ಕೆ ಇನ್ನೊಬ್ಬ ನಾಯಕಿಯ ಪಾತ್ರದ ಅವಶ್ಯಕತೆ ಇದೆ. ಅದು ಕಥೆಗೆ ತಿರುವು ನೀಡುವಂತಹ ಪಾತ್ರ. ಆ ಪಾತ್ರಕ್ಕಾಗಿ ಅಂದರೆ 2ನೇ ನಾಯಕಿಗಾಗಿ ಪವನ್ ಒಡೆಯರ್ ಹುಡುಕಾಟ ಶುರು ಮಾಡಿದ್ದಾರೆ. ಶೀಘ್ರದಲ್ಲೇ 2ನೇ ನಾಯಕಿಯ ಆಯ್ಕೆ ಮುಗಿಯಲಿದೆ. 

 • ನಟಸಾರ್ವಭೌಮ ಯಾವ ರೀತಿಯ ಸಿನಿಮಾ..?

  natasarvabhouma photo generates curiosity

  ನಟ ಸಾರ್ವಭೌಮ ಸಿನಿಮಾದ ಕಥೆ ಏನು..? ಕೌಟುಂಬಿಕ ಕಥಾ ಹಂದರದ ಚಿತ್ರವಾ..? ಇಬ್ಬರು ನಾಯಕಿಯರಿದ್ದಾರೆ, ತ್ರಿಕೋನ ಪ್ರೇಮಕಥೆಯಾ..? ಚಿತ್ರದ ಕಥಾನಾಯಕ ಫೋಟೋಗ್ರಾಫರ್. ಹಾಗಾದರೆ, ಮೀಡಿಯಾ ಸ್ಟೋರಿನಾ..? ಹೀಗೆ ಹಲವಾರು ಪ್ರಶ್ನೆ ಹುಟ್ಟಿ ಹಾಕಿದೆ ನಟಸಾರ್ವಭೌಮ. ಆ ಕುತೂಹಲಕ್ಕೆ ಇನ್ನೊಂದು ಸೇರ್ಪಡೆ ಇದು, ಈ ಫೋಟೋ.

  ನಟಸಾರ್ವಭೌಮ ಚಿತ್ರದ ಶೂಟಿಂಗ್ ಸೆಟ್‍ನಿಂದ ಹೊರಬಂದಿರುವ ಈ ಫೋಟೋ, ಬಾದಾಮಿಯಲ್ಲಿ ನಡೆದ ಚಿತ್ರೀಕರಣದ ವೇಳೆ ಪುನೀತ್  ಪೂಜೆಯಲ್ಲಿ ತೊಡಗಿಸಿಕೊಂಡಿರುವ ಒಂದು ಫೋಟೋ.  

  ಹೀಗೆ ಹಲವು ಅಂಶಗಳು ಇದು ಯಾವ ರೀತಿಯ ಸಿನಿಮಾ ಇರಬಹುದು ಎಂಬ ಕುತೂಹಲ ಸೃಷ್ಟಿಸಿವೆ. 

  ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದರೆ, ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಾಹುಬಲಿಯ ಕಾಲಕೇಯ ಖ್ಯಾತಿಯ ಪ್ರಭಾಕರ್ ಕೂಡಾ ಚಿತ್ರದಲ್ಲಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಸಿನಿಮಾ ಅಂತಿಮ ಹಂತದ ಚಿತ್ರೀಕರಣದಲ್ಲಿದೆ.

 • ನಟಸಾರ್ವಭೌಮನ ಜೊತೆ ಚಿಕ್ಕಣ್ಣ, ಕಿರಿಕ್ ರಘು ಡ್ಯಾನ್ಸ್

  natasarvabhouma shoots a party song

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡುತ್ತಿರುವುದೇ ಸೆನ್ಸೇಷನ್ ಸೃಷ್ಟಿಸಿದೆ. ಹಾಡಿನ ಚಿತ್ರೀಕರಣವೂ ಈಗಾಗಲೇ ನಡೆದಿದ್ದು, ಪುನೀತ್ ಹೆಜ್ಜೆ ಹಾಕಿರೋದು ಪಾರ್ಟಿ ಸಾಂಗ್‍ಗಂತೆ. ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ ಡಿಫರೆಂಟ್ ಸ್ಟೆಪ್ಸ್ ಕೊಟ್ಟಿರೊದು ಜಾನಿ ಮಾಸ್ಟರ್. ರಾಜಕುಮಾರ ಚಿತ್ರದಲ್ಲಿ ಅಪ್ಪು ಡ್ಯಾನ್ಸ್ ಡ್ಯಾನ್ಸ್.. ನೃತ್ಯ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರನ್ನೂ ಥ್ರಿಲ್ಲಾಗಿಸಿತ್ತು. ಅದಕ್ಕಿಂತ ವಿಭಿನ್ನವಾದ ಸ್ಟೆಪ್ಸ್ ಹಾಕಿಸಿದ್ದಾರೆ ಎಂದು ಖುಷಿಯಾಗಿದ್ದಾರೆ ನಿರ್ದೇಶಕ ಪವನ್ ಒಡೆಯರ್.

  ಪಾರ್ಟಿ ಸಾಂಗ್‍ನಲ್ಲಿ ಪುನೀತ್ ಜೊತೆ ಚಿಕ್ಕಣ್ಣ, ಕಿರಿಕ್ ಪಾರ್ಟಿ ಖ್ಯಾತಿಯ ರಘು ಕೂಡಾ ಹೆಜ್ಜೆ ಹಾಕಿರೋದು ವಿಶೇಷ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ರಚಿತಾ ರಾಮ್, ಅನುಪಮಾ ನಾಯಕಿಯರು. ಬಿ.ಸರೋಜಾದೇವಿ ಬಹಳ ವರ್ಷಗಳ ನಂತರ ಬಣ್ಣ ಹಚ್ಚುತ್ತಿರುವುದು ನಟಸಾರ್ವಭೌಮನ ಸ್ಪೆಷಲ್.

 • ನಟಸಾರ್ವಭೌಮನಲ್ಲೂ ಇರಲಿದೆ ಅಪ್ಪು ವಂಡರ್ಸ್

  johnny master to choregraph puneeth again

  ರಾಜಕುಮಾರ ಚಿತ್ರ, ಸೂಪರ್ ಡ್ಯೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಪುನೀತ್ ರಾಜ್‍ಕುಮಾರ್ ಸ್ಟೆಪ್ಪುಗಳೂ ಪ್ರೇಕ್ಷಕರನ್ನು ಬೆರಗಾಗಿಸಿದ್ದವು. ಡ್ಯಾನ್ಸ್ ಅಪ್ಪು ಡ್ಯಾನ್ಸ್ ಅಂತೂ ಚಿಕ್ಕಮಕ್ಕಳಿಗೂ ಫೇವರಿಟ್ ಆಗಿ ಹೋಗಿತ್ತು. ಹೀಗೆ ಹೆಜ್ಜೆಗಳ ಮೂಲಕವೇ ಮೋಡಿ ಮಾಡಿದ್ದರ ಹಿಂದಿದ್ದವರು ಜಾನಿ ಮಾಸ್ಟರ್. ಅವರೀಗ ಮತ್ತೆ ಬಂದಿದ್ದಾರೆ. ನಟಸಾರ್ವಭೌಮನಿಗಾಗಿ.

  ರಾಕ್‍ಲೈನ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾ ರಾಮ್ ನಾಯಕಿಯಾಗಿದ್ದು, ಬಿ.ಸರೋಜಾದೇವಿ ದಶಕಗಳ ನಂತರ ಬಣ್ಣ ಹಚ್ಚಿದ್ದಾರೆ. ಹೀಗೆ ಸ್ಪೆಷಲ್‍ಗಳ ಸ್ಪೆಷಲ್ ಹೊತ್ತಿರುವ ಚಿತ್ರಕ್ಕೆ ಈಗ ಜಾನಿ ಮಾಸ್ಟರ್ ಕ್ರೇಜ್. ಅಭಿಮಾನಿಗಳು, ಈ ಚಿತ್ರದಲ್ಲೂ ಅಪ್ಪು ಅವರಿಂದ ಅದ್ಭುತ ಡ್ಯಾನ್ಸ್ ನಿರೀಕ್ಷೆ ಮಾಡಬಹುದು.

 • ಪಂಜುನಾ..? ಅಧಿಪತಿನಾ..? ಅಪ್ಪು ಸಿನ್ಮಾ ಟೈಟಲ್ ಏನು..?

  puneeth rockline movie

  ಪುನೀತ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ಮುಹೂರ್ತವಾಗಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ಎಲ್ಲವೂ ಲೆಕ್ಕಾಚಾರದಂತೆಯೇ ನಡೆದಿದ್ದರೆ, ಇಷ್ಟು ಹೊತ್ತಿಗೆ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ, ಏಕೋ ಏನೋ ಚಿತ್ರೀಕರಣ ಆರಂಭ ಎರಡು ಬಾರಿ ಮುಂದಕ್ಕೆ ಹೋಗಿದೆ.

  ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ, ಪಂಜು ಹಾಗೂ ಅಧಿಪತಿ ಎರಡೂ ಟೈಟಲ್‍ಗಳನ್ನು ತಂಡ ಪರಿಶೀಲನೆ ಮಾಡುತ್ತಿದೆ. ಇವೆರಡೂ ಅಲ್ಲದ ಇನ್ನೊಂದು ಟೈಟಲ್ ಬಂದರೂ ಅಚ್ಚರಿ ಪಡಬೇಕಿಲ್ಲ ಅಂತಾರೆ ಪವನ್ ಒಡೆಯರ್.

   

 • ಪುನೀತ್ ಎದುರು ಕಾಲಕೇಯನ ಆರ್ಭಟ

  puneeth's face off with baahubali's kalakeya

  ಬಾಹುಬಲಿ 2 ಸಿನಿಮಾದಲ್ಲಿ ಜಿಬರಿಷ್ ಭಾಷೆಯ ಮೂಲಕ ಗಮನ ಸೆಳೆದಿದ್ದ ಕಾಲಕೇಯ ಪ್ರಭಾಕರ್, ಈಗ ಪುನೀತ್ ಎದುರು ನಟಿಸೋಕೆ ಬರುತ್ತಿದ್ದಾರೆ. ನಟಸಾರ್ವಭೌಮ ಸಿನಿಮಾದಲ್ಲಿ ಪುನೀತ್ ಎದುರು ವಿಲನ್ ಆಗಿರುವುದು ಪ್ರಭಾಕರ್. ಪ್ರಭಾಕರ್‍ಗೆ ಕನ್ನಡ ಚಿತ್ರಗಳು ಹೊಸದೇನಲ್ಲ. 

  ಬಾಹುಬಲಿಗೂ ಮುನ್ನ ಪ್ರಭಾಕರ್, ಆರ್.ಚಂದ್ರು ನಿರ್ದೇಶನದ ಕೋಕೋ, ಲಕ್ಷ್ಮಣ ಸಿನಿಮಾದಲ್ಲಿ ನಟಿಸಿದ್ದರು. ಚೌಕ ಚಿತ್ರದಲ್ಲಿ ದರ್ಶನ್ ಎದುರು ನಟಿಸಿದ್ದ ಪ್ರಭಾಕರ್, ಈಗ ನಟಸಾರ್ವಭೌಮ ಚಿತ್ರಕ್ಕೆ ಬರುತ್ತಿದ್ಧಾರೆ.

  ರಾಕ್‍ಲೈನ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾರಾಮ್ ನಾಯಕಿ. ಈ ಎಲ್ಲರ ಟೀಂನಲ್ಲಿ ಪ್ರಭಾಕರ್ ವಿಲನ್.

 • ಪುನೀತ್ ಕೈಲಿರುವ ದಾರದ ಕಥೆ..

  story if ouneeth's wrist band

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ, ಸಹಜವಾಗಿಯೇ ಕುತೂಹಲದ ಮೂಟೆ ಹೊತ್ತಿರುವ ಸಿನಿಮಾ. ಚಿತ್ರದ ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಾಯಕಿ ರಚಿತಾ ರಾಮ್, ವಿಶೇಷ ಪಾತ್ರದಲ್ಲಿ ಹಲವು ವರ್ಷಗಳ ನಂತರ ಬಿ.ಸರೋಜಾದೇವಿ ನಟಿಸಿರುವ ಸಿನಿಮಾ. ಈ ಸಿನಿಮಾದಲ್ಲಿ ಪುನೀತ್ ಫೋಟೋಗ್ರಾಫರ್ ಪಾತ್ರ ಮಾಡುತ್ತಿದ್ದಾರೆ.

  ಪುನೀತ್ ಅವರ ಫೋಟೋಗಳಲ್ಲಿ ಎದ್ದು ಕಾಣ್ತಿರೋದು ಅವರ ಕೈಲಿರುವ ಒಂದು ದಾರ. ಕಪ್ಪುದಾರದ ಬ್ಯಾಂಡ್‍ನಲ್ಲಿ ಒಂದು ಪುಟ್ಟ ಪದಕವೂ ಇದೆ. ಅದೇನು ಅದೃಷ್ಟದ ಸಂಕೇತವಾ ಎಂದರೆ, ನಿರ್ದೇಶಕ ಪವನ್ ಹಾಗೇನಿಲ್ಲ. ಅದಕ್ಕೂ ಚಿತ್ರದಲ್ಲಿ ಒಂದು ಕಥೆಯಿದೆ ಅಂತಾರೆ.

  ಸಿನಿಮಾದಲ್ಲಿ ಆ ಕಪ್ಪುದಾರದ ಬ್ಯಾಂಡ್‍ಗೂ ಒಂದು ಕಥೆಯಿದೆ. ಅದರ ಸ್ವಾರಸ್ಯವನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು. ಹೇಳೋಕೆ ಹೋದರೆ ಇಡೀ ಸಿನಿಮಾ ಕಥೆಯನ್ನೇ ಹೇಳಬೆಕಾಗುತ್ತೆ ಅಂತಾರೆ ಪವನ್ ಒಡೆಯರ್.

  ಈಗಾಗಲೇ ಚಿತ್ರದ ಶೇ.40ರಷ್ಟು ಶೂಟಿಂಗ್ ಮುಗಿದಿದೆ. ಬೆಂಗಳೂರು, ಮೈಸೂರು ಶೂಟಿಂಗ್ ಮುಗಿಸಿರುವ ಚಿತ್ರತಂಡ, ಬಳ್ಳಾರಿಯತ್ತ ಹೊರಟಿದೆ.

 • ಪುನೀತ್ ಹೇರ್‍ಸ್ಟೈಲ್ ಮೊದಲ ಪ್ರಯೋಗ ಯಾರ ಮೇಲೆ..?

  puneeth's hair style experiment on pavan wodeyar

  ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ ಹೊಸ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ವಿಭಿನ್ನ ಹೇರ್‍ಸ್ಟೈಲ್ ಸದ್ದು ಮಾಡುತ್ತಿರುವಾಗಲೇ ಒಂದು ಸ್ವಾರಸ್ಯ ಹೊರಬಿದ್ದಿದೆ. ಚಿತ್ರದ ಕಥೆ ಮತ್ತು ಪಾತ್ರದ ವ್ಯಕ್ತಿತ್ವ ತಿಳಿಸುವಂತೆ ಹೇರ್‍ಸ್ಟೈಲ್ ಇರಬೇಕು ಎಂದು ಪವನ್ ಹೇಳಿದರಂತೆ. ಪುನೀತ್ ಓಕೆ ಎಂದರು. ಅದಾದ ಮೇಲೆ ಡಿಸೈನ್ ರೆಡಿ ಆಯ್ತು.

  ಆದರೆ, ಡಿಸೈನ್ ರೆಡಿ ಆದ ಮೇಲೆ ಪ್ರಯೋಗವಾಗಬೇಕಲ್ಲ.. ಪ್ರಯೋಗಕ್ಕೆ  ಯಾರನ್ನು ಹುಡುಕೋದು..? ಆಗ ಮೊದಲ ಪ್ರಯೋಗಕ್ಕೆ ಒಳಗಾಗಿದ್ದು ಸ್ವತಃ ಪವನ್ ಒಡೆಯರ್. 

  ಅದು ಕೇವಲ ಪ್ರಯೋಗವಲ್ಲ. ಸ್ಪೀಡ್ ಇಂಡಿಕೇಷನ್ ಹೇರ್‍ಸ್ಟೈಲ್. ನಾಯಕನ ಪಾತ್ರದ ವೇಗಕ್ಕೆ ಸರಿಯಾಗಿ ಹೊಂದುವ ಸ್ಟೈಲ್. ಇಡೀ ಚಿತ್ರದಲ್ಲಿ ಪುನೀತ್ ಇದೇ ಹೇರ್‍ಸ್ಟೈಲ್‍ನಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ ಪವನ್ ಒಡೆಯರ್.

  Related Articles :-

  ಪುನೀತ್ ಹೊಸ ಲುಕ್ ಸಖತ್ ಸ್ಟೈಲಿಶ್

 • ಬಿ.ಸರೋಜಾದೇವಿ ಜೊತೆ ಪುನೀತ್

  b sarojadevi plays herself in natasarwabhowma

  ನಟಸಾರ್ವಭೌಮ. ಇದು ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ. ರಣವಿಕ್ರಮ ನಂತರ ಮತ್ತೆ ನಿರ್ದೇಶಕ ಪವನ್ ಒಡೆಯರ್ ಮತ್ತು ಪುನೀತ್ ಒಂದಾಗಿರುವ ಚಿತ್ರ. ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕರಾದರೆ, ರಚಿತಾ ರಾಮ್ ನಾಯಕಿ. ಈ ಚಿತ್ರದಲ್ಲಿ ಬಿ.ಸರೋಜಾದೇವಿ, ಚಿತ್ರನಟಿಯಾಗಿಯೇ ನಟಿಸಿದ್ದಾರೆ ಅನ್ನೋದು ವಿಶೇಷ.

  ಸಿನಿಮಾದಲ್ಲಿ ಪುನೀತ್ ಪತ್ರಕರ್ತರಾಗಿ ನಟಿಸಿದ್ದಾರೆ. ಪತ್ರಕರ್ತನಾಗಿ ಬಿ.ಸರೋಜಾದೇವಿಯವರನ್ನು ಪುನೀತ್ ಸಂದರ್ಶನ ಮಾಡುವ ದೃಶ್ಯ ಚಿತ್ರದಲ್ಲಿದೆ. ನನಗೆ ಇದೊಂದು ಹೆಮ್ಮೆಯ ಕ್ಷಣ. ಇಬ್ಬರು ಶ್ರೇಷ್ಟರನ್ನು ಒಟ್ಟಿಗೇ ನಿರ್ದೇಶಿಸುವ ಸೌಭಾಗ್ಯ ನನ್ನದು ಎಂದು ಬರೆದುಕೊಂಡಿದ್ದಾರೆ ಪವನ್ ಒಡೆಯರ್.

  ಪುನೀತ್ ರಾಜ್‍ಕುಮಾರ್ ಮತ್ತು ಬಿ.ಸರೋಜಾದೇವಿ ಎಂದರೆ ತಕ್ಷಣ ನೆನಪಾಗೋದು ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಹಾಡು.. ಆಗ ಪುನೀತ್ ಮಾಸ್ಟರ್ ಲೋಹಿತ್ ಆಗಿದ್ದರು. ಈಗ ಪವರ್‍ಸ್ಟಾರ್ ಆಗಿದ್ದಾರೆ. ಮತ್ತೊಮ್ಮೆ ಸರೋಜಾದೇವಿ ಎದುರು ನಟಿಸಿದ್ದಾರೆ. 

The Terrorist Movie Gallery

Thayige Thakka Maga Movie Gallery