ಪಾರ್ಕ್‍ನಲ್ಲಿ ಒಬ್ಬಳೇ ಓಡಾಡುವಾಗ ಭಯವಾಗುತ್ತೆ. ವಾಕಿಂಗ್ ಹೋಗೋಕೂ ಭಯ. ಎಷ್ಟೋ ಬಾರಿ ಕೆಟ್ಟ ಅನುಭವವಾಗಿದೆ. ನಿರ್ಜನ ಓಣಿಗಳಲ್ಲಿ ಹೆಣ್ಣು ಮಕ್ಕಳ ಎದುರು ಬೈಕಲ್ಲಿ ಬರುವ ಹುಡುಗರು, ಪ್ಯಾಂಟ್ ಜಾರಿಸಿ ಅಸಭ್ಯವಾಗಿ ವರ್ತಿಸುತ್ತಾರೆ. ಹೆಣ್ಣು ಮಕ್ಕಳು ಎಷ್ಟೋ ಬಾರಿ ಹೇಳಿಕೊಳ್ಳಲೂ ಆಗದೆ ಮುಜುಗರ ಪಟ್ಟುಕೊಂಡು ಸುಮ್ಮನಿರುತ್ತಾರೆ. ಸೆಲಬ್ರಿಟಿಯಾದ ಮೇಲೆ ಇಂತಹ ಅನುಭವಗಳು ಕಡಿಮೆಯಾಗಿದೆ..ಆದರೆ, ಸಂಪೂರ್ಣ ನಿಂತಿಲ್ಲ. ತುಂಬಾ ಜನರ ನಡುವೆ ಇದ್ದಾಗ, ಪಕ್ಕದಲ್ಲೇ ನಿಂತು ಚಿವುಟುವುದು, ಮುಟ್ಟುವುದು ಮಾಡಿ ಹಿಂಸೆ ಕೊಡುತ್ತಾರೆ..
ಇಂತಹ ಅನುಭವ ಹಂಚಿಕೊಂಡಿರೋದು ನೀತು. ಗಾಳಿಪಟದ ಘಾಟಿ ಹುಡುಗಿ ನೀತು,#metoo ಎಂಬ ಫೇಸ್‍ಬುಕ್ ಅಭಿಯಾನದಲ್ಲಿ ತಾವು ಅನುಭವಿಸಿದ ಕಷ್ಟಗಳನ್ನೆಲ್ಲ ಹಂಚಿಕೊಂಡಿದ್ದಾರೆ. ಇದು ಕೇವಲ ಇಂಡಿಯಾಕ್ಕಷ್ಟೇ ಸೀಮಿತ ಅಲ್ಲ, ಇಟಲಿ, ಫ್ರಾನ್ಸ್‍ನಂತಹ ದೇಶಗಳಲ್ಲೂ ಆಗಿದೆ. ಆಸ್ಪತ್ರೆಗಳಲ್ಲಿ ಅನಸ್ತೇಷಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಗೂ ಲೈಂಗಿಕ ಕಿರುಕುಳ ಆಗಿದೆ. ಹೇಳಿಕೊಳ್ಳೋದು ಹೇಗೆ ಅನ್ನೋದು ನೀತು ಪ್ರಶ್ನೆ.
ಹೇಳಿಕೊಳ್ಳಲಾಗದೆ ನರಳುವುದಕ್ಕಿಂತ, ಅಟ್‍ಲೀಸ್ಟ್ ಅದು ಎಲ್ಲರಿಗೂ ಗೊತ್ತಾಗುತ್ತಾ ಹೋದರೆ, ಈ ಕಿರುಕುಳ ನಿಲ್ಲಬಹುದು ಎನ್ನುವ ಆಲೋಚನೆಯಿಂದಾಗಿ ಹುಟ್ಟಿಕೊಂಡಿರುವುದೇ ಈ #metoo ಅಭಿಯಾನ. ನೋಡೋಣ.. ಈ #metoo ಅಭಿಯಾನ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ.