` shivarajkumar, - chitraloka.com | Kannada Movie News, Reviews | Image

shivarajkumar,

 • ಮುತ್ತಣ್ಣ ಮತ್ತೆ ಪೀಪಿ ಊದುವ..

  muttanna to re release

  ಮುತ್ತಣ್ಣ ಪೀಪಿ ಊದುವ ಹಾಡು ಕೇಳಿದರೆ ಸಾಕು, ಮುತ್ತಣ್ಣ ಸಿನಿಮಾ ನೆನಪಾಗಿಬಿಡುತ್ತೆ. 23 ವರ್ಷಗಳ ಹಿಂದೆ ಶಿವರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸಿದ್ದ ಚಿತ್ರ ಅದು. ಶಶಿಕುಮಾರ್, ಸುಪ್ರಿಯಾ ನಟಿಸಿದ್ದ ಚಿತ್ರದಲ್ಲಿ ಭವ್ಯಶ್ರೀ ರೈ ಶಿವಣ್ಣನ ತಂಗಿಯಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಮತ್ತೆ ರಿಲೀಸ್ ಆಗ್ತಾ ಇದೆ. ಇದೇ ಸೆಪ್ಟೆಂಬರ್ 22ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

  2ಕೆ ರೆಜಲ್ಯೂಷನ್ ಹೈ ಟೆಕ್ನಾಲಜಿ ಅಳವಡಿಸಿಕೊಂಡು ಬರುತ್ತಿರುವ ಚಿತ್ರವನ್ನು  7.1 ಸೌಂಡ್​ನಲ್ಲಿ ಮತ್ತೆ ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಸೋಮಣ್ಣ ಗೌಡ. ಅಣ್ಣತಂಗಿ ಸೆಂಟಿಮೆಂಟ್​ನ ಆ ಚಿತ್ರ ನಿರ್ದೇಶಿಸಿದ್ದವರು ಎಂ.ಎಸ್. ರಾಜಶೇಖರ್. ಅಂಗವಿಕಲ ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಕನಸು ಕಾಣುವ ಅಣ್ಣ ಹಾಗೂ ಕಳ್ಳ, ಎರಡೂ ಪಾತ್ರಗಳಲ್ಲಿ ಶಿವರಾಜ್ ಕುಮಾರ್ ಮಿಂಚಿದ್ದರು. ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು.

  ಶಿವರಾಜ್​ ಕುಮಾರ್ ಚಿತ್ರಗಳು ರೀ-ರಿಲೀಸ್ ಆಗುವುದು ಹೊಸದೇನಲ್ಲ. ಅವರ ಓಂ ಚಿತ್ರ, ಕನ್ನಡದಲ್ಲಿ ಅತಿ ಹೆಚ್ಚು ಬಾರಿ ರೀ-ರಿಲೀಸ್ ಆದ ಚಿತ್ರ ಎಂಬ ದಾಖಲೆ ಬರೆದಿದೆ. ಈಗ ಮುತ್ತಣ್ಣನ ಸರದಿ.

 • ಮೇಷ್ಟ್ರಾಗುತ್ತಿದ್ದಾರೆ ಶಿವರಾಜ್‍ಕುಮಾರ್

  shivanna is school teacher in his next

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸರ್ಕಾರಿ ಸ್ಕೂಲ್ ಮೇಷ್ಟ್ರಾಗುತ್ತಿದ್ದಾರೆ. ಪ್ರಮೋದ್ ಚಕ್ರವರ್ತಿ ನಿರ್ದೇಶನದ ಹೊಸ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರದ್ದು ಟೀಚರ್ ಪಾತ್ರ. ಒಬ್ಬ ಶಿಕ್ಷಕನಾಗಿ ಮಕ್ಕಳಿಗೆ ವಿದ್ಯೆ ಕಲಿಸುವ ಜೊತೆಗೆ, ಸಮಾಜವನ್ನೂ ತಿದ್ದುವ ಮೇಷ್ಟ್ರಾಗಿ ನಟಿಸುತ್ತಿದ್ದಾರೆ ಶಿವರಾಜ್ ಕುಮಾರ್.

  ಚಿತ್ರದಲ್ಲಿ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ತಾರತಮ್ಯದ ಕಥೆಯೂ ಇದೆ. ಚಿತ್ರದಲ್ಲಿ ಅದೇ  ಹೈಲೈಟ್. ಒಬ್ಬ ಶಿಕ್ಷಕ ತನ್ನ ಬಳಿಗೆ ಬರುವ ವಿದ್ಯಾರ್ಥಿಗಳಿಗಷ್ಟೇ ಶಿಕ್ಷಕ ಅಲ್ಲ, ಇಡೀ ಸಮಾಜವನ್ನೇ ತಿದ್ದುವ ಜವಾಬ್ದಾರಿ ಅವನ ಮೇಲಿರುತ್ತೆ ಅಂತಾರೆ ಶಿವರಾಕುಮಾರ್. ಚಿತ್ರದಲ್ಲಿರುವುದು ಅಂತಹುದೇ ಪಾತ್ರ.

  ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ, ಪ್ರಯೋಗಗಳಿಗೆ ತಮ್ಮನ್ನು ಒಗ್ಗಿಸಿಕೊಂಡಿರುವ ಶಿವರಾಜ್ ಕುಮಾರ್‍ಗೆ ಶಿಕ್ಷಕನ ಪಾತ್ರ ಹೊಸದು. ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಟಗರು ಚಿತ್ರಕ್ಕೆ ಡೈಲಾಗ್ ಬರೆದಿದ್ದ ಮಾಸ್ತಿ, ಈ ಚಿತ್ರಕ್ಕೂ ಡೈಲಾಗ್ ಬರೆಯುತ್ತಿದ್ದಾರೆ. ಚಿತ್ರ ಶುರುವಾಗುವ ಮುನ್ನ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

 • ಮೋಹನ್ ಲಾಲ್ ನಟನೆಯ ಅರ್ಧ ಮುಟ್ಟಿದರೂ ಸಾಕು - ಶಿವಣ್ಣ

  shivarajkumar speaks about oppam

  ಶಿವರಾಜ್ ಕುಮಾರ್ ಸುಮಾರು 15 ವರ್ಷಗಳ ನಂತರ ರೀಮೇಕ್ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತಿದೆಯಲ್ಲ. ಅದು ಒಪ್ಪಂ ಚಿತ್ರದ ರೀಮೇಕ್. ಮೂಲ ಚಿತ್ರದಲ್ಲಿ ನಟಿಸಿದ್ದವರು ಮೋಹನ್ ಲಾಲ್. 

  ಅಂಧನೊಬ್ಬ ತನ್ನ ಕುಟುಂಬ ರಕ್ಷಿಸಿಕೊಳ್ಳಲು ಹೋರಾಡುವ ಪಾತ್ರದಲ್ಲಿ ಮೋಹನ್ ಲಾಲ್ ಮನೋಜ್ಞವಾಗಿ ನಟಿಸಿದ್ದರು. ಆ ಪಾತ್ರ ನಿರ್ವಹಿಸುತ್ತಿರುವ ಶಿವರಾಜ್ ಕುಮಾರ್, ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಿಸುತ್ತೇನೆ. ಮೋಹನ್ ಲಾಲ್ ಮಟ್ಟಕ್ಕೆ ನಟಿಸುತ್ತೇನೋ ಇಲ್ಲವೋ ಗೊತ್ತಿಲ್ಲ. ಶೇ.60ರಷ್ಟಾದರೂ ನ್ಯಾಯ ಒದಗಿಸುತ್ತೇನೆ ಎಂದಿದ್ದಾರೆ.

  ಶಿವರಾಜ್ ಕುಮಾರ್‍ಗೆ ಅಂಧನ ಪಾತ್ರ ಇದೇ ಮೊದಲು. ಮ್ಯಾನರಿಸಂ ಬದಲಾಯಿಸುವ ಸವಾಲು ಕೂಡಾ ಇದೆ. ರೀಮೇಕ್ ಮಾಡಲ್ಲ ಎನ್ನುವ ಪ್ರತಿಜ್ಞೆ ಮುರಿಯುವುದಕ್ಕೆ ಕಾರಣ, ಚಿತ್ರದ ಕಥೆ ಹಾಗೂ ಪಾತ್ರ. ರೀಮೇಕ್ ಒಪ್ಪುತ್ತಿದ್ದೇನೆ ಎಂದು ಕಮರ್ಷಿಯಲ್ ಚಿತ್ರಗಳನ್ನು ಮಾಡಲು ಒತ್ತಡ ಬಂದರೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಶಿವರಾಜ್ ಕುಮಾರ್.

  ಕಥೆ, ಪಾತ್ರ ಇಷ್ಟವಾಗಬೇಕು. ಅದು ಮೊದಲು ಮನಸ್ಸಿಗೆ ಹತ್ತಿರವಾಗಬೇಕು. ಆ ಪಾತ್ರವನ್ನು ಮಾಡಲೇಬೇಕು ಎಂಬ ತುಡಿತ ಹೊರಹೊಮ್ಮಬೇಕು. ಅಂಥ ಚಿತ್ರಗಳಾದರೆ ರೀಮೇಕ್ ಮಾಡುತ್ತೇನೆ ಎಂದಿದ್ದಾರೆ ಶಿವರಾಜ್ ಕುಮಾರ್.

 • ಯಾರೀ ನಂ.1 ಶಿವಣ್ಣ..?

  yaree no 1 shivanna

  ಹೇಯ್.. ಬಿಡ್ರಿ.. ನಮ್ ಶಿವಣ್ಣ ಗೊತ್ತಿಲ್ವಾ..? ಯಾರು ಅಂತಾ ಕೇಳ್ತೀರಲ್ಲ. ನೀವು ಕನ್ನಡದೋರ್ ಅಲ್ವಾ..? ಇಂಥ ಪ್ರಶ್ನೆ ನಿಮ್ ತಲೆಯಲ್ಲಿ ಬಂದರೆ, ಅದು ಸಹಜ ಬಿಡಿ. ಆದರೆ, ಇದು ಶಿವಣ್ಣ ಅವರ ಹೊಸ ಸಿನಿಮಾದ ಕಥೆಯಲ್ಲ. ಶಿವಣ್ಣ ನಡೆಸಿಕೊಡಲಿರುವ ಕಿರುತೆರೆ ಶೋನ ಹೆಸರು.

  ಸ್ಟಾರ್ ಸುವರ್ಣದಲ್ಲಿ ಶಿವಣ್ಣ ಯಾರೀ ನಂಬರ್ 1 ಶಿವಣ್ಣ ಟಾಕ್ ಶೋ ಪ್ರಸಾರವಾಗಲಿದೆ. ಅದು ಸೆಲಬ್ರಿಟಿಗಳ ಜೊತೆ ಹರಟೆ ಹೊಡೆಯುವ ಸಿಂಪಲ್ ಮ್ಯಾನ್ ಶೋ. ತೆಲುಗಿನಲ್ಲಿ ನಂ.1 ಯಾರೀ ರಾಣಾ ಅನ್ನೋ ಕಾರ್ಯಕ್ರಮ ಬರ್ತಾ ಇತ್ತು. ರಾಣಾದಗ್ಗುಬಾಟಿ ನಡೆಸಿಕೊಡುತ್ತಿದ್ದ ಯಥಾವತ್ ಅವತರಣಿಕೆ ಯಾರೀ ನಂಬರ್ ಒನ್ ಶಿವಣ್ಣ. ವೀಕ್ಷಿಸಲು ಸಿದ್ಧರಾಗಿ.

  Related Articles :-

  Shivarajakumar To Start A New Talk Show

   

   

   

 • ರಕ್ಷಿತ್ ಶೆಟ್ಟಿ ಸಿನಿಮಾ ಶೂಟಿಂಗ್‍ನಲ್ಲಿ ಶಿವಣ್ಣ

  shivanna surprises rakshith shetty

  ಇದು ನಡೆದಿರೋದು ಅವನೇ ಶ್ರೀಮನ್ನಾರಾಯಣ ಶೂಟಿಂಗ್ ವೇಳೆ. ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ದಿಢೀರನೆ ಶಿವರಾಜ್‍ಕುಮಾರ್ ಭೇಟಿ ಕೊಟ್ಟಿದ್ದಾರೆ. ಚಿತ್ರತಂಡ ಥ್ರಿಲ್ಲಾಗಿದೆ. ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಸಚಿನ್, ಚಿತ್ರದ ಕೆಲವು ಮೇಕಿಂಗ್‍ನ ತುಣುಕುಗಳನ್ನು ತೋರಿಸಿದ್ದಾರೆ. 

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರದ ಶೂಟಿಂಗ್ ಮಾರ್ಚ್‍ನಲ್ಲಿ ಶುರುವಾಗಿದ್ದು ಭರ್ಜರಿಯಾಗಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾನ್ವಿ ಶ್ರೀವಾಸ್ತವ್ ಚಿತ್ರದ ನಾಯಕಿ. ಪೊಲೀಸ್ ಪಾತ್ರವಾಗಿದ್ದರೂ 5 ಬೇರೆ ಬೇರೆ ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ರಕ್ಷಿತ್ ಶೆಟ್ಟಿ.

 • ರಜನಿ 2.0 ಚಿತ್ರಕ್ಕೆ ಶಿವಣ್ಣ, ಉಪ್ಪಿ ಶುಭ ಹಾರೈಕೆ

  shivarajkumar and upendra wish rajinikanth for 2.0

  sಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರಜನಿಕಾಂತ್, ಅಕ್ಷಯ್ ಕುಮಾರ್, ಆ್ಯಮಿ ಜಾಕ್ಸನ್ ಅಭಿನಯದ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನವಿದೆ. ಈ ಸಿನಿಮಾಗೆ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಶುಭ ಹಾರೈಸಿದ್ದು ವಿಶೇಷವಾಗಿತ್ತು.

  ನಿದೇಶಕ ಶಂಕರ್, ಉಪೇಂದ್ರ ಅವರ ಎ ಚಿತ್ರದಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿಕೊಂಡರೆ, ಶಿವಣ್ಣ ರಜನಿ ಚಿತ್ರಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿಕೊಂಡರು.

 • ರಾಜಕಾರಣಿಗಳು ಮಾತನಾಡಲು ಹೆದರುವ ವಿಚಾರದ ಬಗ್ಗೆ ಮಾತನಾಡ್ತಾನೆ ಮಾಸ್‍ಲೀಡರ್

  mass leader talks about infilation

  ರಾಜಕಾರಣಿಗಳು ಏನು ಬೇಕಾದರೂ ಮಾತನಾಡಬಲ್ಲರು. ಆದರೆ, ಯಾವುದಾದರೂ ವಿಚಾರ ತಮ್ಮ ವೋಟ್‍ಬ್ಯಾಂಕ್‍ಗೆ ಏಟು ಕೊಡುತ್ತೆ ಎಂದು ಸ್ವಲ್ಪ ಗೊತ್ತಾದರೂ ಸಾಕು, ಗಪ್‍ಚುಪ್ ಆಗಿಬಿಡುತ್ತಾರೆ. ಹಾಗೆ ಕೆಲವು ರಾಜಕಾರಣಿಗಳು ಸೈಲೆಂಟ್ ಆಗಿ ಕೂರುವ ವಿಚಾರಗಳಲ್ಲಿ ಒಂದು ಅಕ್ರಮ ವಲಸಿಗರ ವಿಚಾರ.

  ಭಾರತಕ್ಕೆ ಹಲವು ದೇಶಗಳಿಂದ, ಅದರಲ್ಲೂ ವಿಶೇಷವಾಗಿ ಬಾಂಗ್ಲಾದೇಶದಿಂದ ಬರುತ್ತಿರುವ ವಲಸಿಗರು ಬರುತ್ತಿರುವುದು ಹೊಸದೇನಲ್ಲ. ಆದರೆ, ಅದೀಗ ಸಮಸ್ಯೆಯೇ ಆಗಿ ಹೋಗಿವೆ. ಹಾಗೆ ಬಂದ ವಲಸಿಗರು, ಅತ್ಯಂತ ಸುಲಭವಾಗಿ ಮತಪತ್ರ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್‍ಗಳನ್ನೆಲ್ಲ ಪಡೆದುಕೊಳ್ಳುತ್ತಿದ್ದಾರೆ. ಮಾಸ್ ಲೀಡರ್ ಆ ವಿಚಾರದ ಬಗ್ಗೆ ಧ್ವನಿಯೆತ್ತಲಿದೆ.

  ಇಂತಹ ಕಥೆಯನ್ನು ಹೇಳೋಕೆ ಒಬ್ಬ ಸ್ಟ್ರಾಂಗ್ ನಟ ಬೇಕಿತ್ತು. ಹೀಗಾಗಿಯೇ ಆ ಪಾತ್ರಕ್ಕೆ ಶಿವರಾಜ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಶಿವರಾಜ್ ಕುಮಾರ್. ಒಂದು ಗಟ್ಟಿ ಸಂದೇಶ ಹೇಳುವ ಚಿತ್ರದ ನಾಯಕ ಕೂಡಾ, ತೂಕದ ವ್ಯಕ್ತಿತ್ವ ಹೊಂದಿರಬೇಕು ಎಂದು ಬಯಸುವುದು ಸಹಜವಲ್ಲವೇ..? 

  ಭಾರತದಲ್ಲಿ ಬೇರು ಬಿಟ್ಟಿರುವ 5 ಕೋಟಿಗೂ ಹೆಚ್ಚು ಬಾಂಗ್ಲಾ ವಲಸಿಗರು, ಅವರಿಂದಾಗಿ ಸೃಷ್ಟಿಯಾಗುತ್ತಿರುವ ಮಾದಕ ದ್ರವ್ಯ, ಕೋಟಾನೋಟು ಜಾಲ, ಭಯೋತ್ಪಾದನೆ.. ಈ ಎಲ್ಲ ವಿಚಾರಗಳ ಬಗ್ಗೆಯೂ ಚಿತ್ರದಲ್ಲೊಂದು ಸಂದೇಶವಿದೆ. 

 • ರಾಣಾ.. ಯಶ್ ಅಲ್ಲ ಶಿವಣ್ಣ..?

  will shivarajkumar replace yash in rana

  ರಾಣಾ. ಹರ್ಷ ನಿರ್ದೇಶನದ ಸಿನಿಮಾ. ಹೆಚ್ಚೂ ಕಡಿಮೆ ಒಂದು ವರ್ಷದಿಂದ ರಾಣಾ ಟೈಟಲ್ ಸದ್ದು ಮಾಡುತ್ತಲೇ ಇದೆ. ಪ್ಲಾನ್ ಪ್ರಕಾರ ಈ ಚಿತ್ರದಲ್ಲಿ ಯಶ್ ನಟಿಸಬೇಕಿತ್ತು. ಯಶ್ ಕೂಡಾ ಓಕೆ ಎಂದಿದ್ದರು. ಆದರೆ, ಈಗ ರಾಣಾ ಚಿತ್ರದ ಹೀರೋ ಬದಲಾಗಿದ್ದಾರೆ. ಯಶ್ ಜಾಗಕ್ಕೆ ಶಿವಣ್ಣ ಬಂದಿದ್ದಾರೆ ಎನ್ನುತ್ತಿವೆ ಮೂಲಗಳು.

  ಕಾರಣ ಇಷ್ಟೆ, ಕೆಜಿಎಫ್ ನಂತರ ಯಶ್ ಸಂಪೂರ್ಣವಾಗಿ ಕೆಜಿಎಫ್ ಚಾಪ್ಟರ್2ಗೆ ತಮ್ಮನ್ನು ಅರ್ಪಿಸಿಕೊಂಡುಬಿಟ್ಟಿದ್ದಾರೆ ಜಯಣ್ಣ ಬ್ಯಾನರ್‍ನ ಕಿರಾತಕ2 ಚಿತ್ರವನ್ನೂ ಮುಂದೂಡಿದ್ದಾರೆ. ಒಂದಿಷ್ಟು ಶೂಟಿಂಗ್ ಕೂಡಾ ಮುಗಿಸಿದ್ದ ಕಿರಾತಕ-2 ಕೆಜಿಎಫ್ ಚಾಪ್ಟರ್2 ಮುಗಿಯುವವರೆಗೆ ಮೇಲೇಳುವುದಿಲ್ಲ.

  ಹರ್ಷ ನಿರ್ದೇಶನದ ರಾಣಾ ಕೂಡಾ ಅದೇ ಸ್ಥಿತಿಗೆ ಹೋಗಲಿದೆ. ಹೀಗಾಗಿಯೇ ಯಶ್ ಅವರಿಗೆ ಬೇರೊಂದು ಪ್ರಾಜೆಕ್ಟ್ ರೆಡಿ ಮಾಡಲು ಪ್ಲಾನ್ ಮಾಡಿಕೊಂಡ ಹರ್ಷ, ರಾಣಾ ಚಿತ್ರವನ್ನು ಶಿವರಾಜ್ ಕುಮಾರ್ ಅವರಿಗಾಗಿ ಮಾಡಲು ರೆಡಿಯಾಗಿದ್ದಾರಂತೆ.

 • ರಾಮಲಿಂಗಾ ರೆಡ್ಡಿ ಜೊತೆ ಶಿವಣ್ಣ, ಏನ್ ಪ್ರಾಬ್ಲಮ್ಮು..?

  shivarajkumar meets ramlinga reddy

  ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ವಿಧಾನಸೌಧಕ್ಕೆ ಹೋಗಿ ಭೇಟಿ ಮಾಡಿದ್ದಾರೆ ಶಿವರಾಜ್ ಕುಮಾರ್. ಆದರೆ, ಇದರ ಹಿಂದಿರೋದು ರಾಜಕೀಯ ಉದ್ದೇಶ. ಶಿವರಾಜ್ ಕುಮಾರ್ ಮನೆ ಇರೋದು ಮಾನ್ಯತಾ ಟೆಕ್‍ಪಾರ್ಕ್ ಬಳಿ. ಅಲ್ಲಿ ಇತ್ತೀಚೆಗಂತೂ ವಿಪರೀತ ಎನ್ನಿಸುವಷ್ಟು ಟ್ರಾಫಿಕ್ ಜಾಮ್ ಆಗುತ್ತಿದೆ.

  ಹೀಗಾಗಿ ಅಲ್ಲಿ ಮನೆ ಮಾಡಿಕೊಂಡಿರುವವರೆಲ್ಲ ಶಿವರಾಜ್ ಕುಮಾರ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವಂತೆ ಕೇಳಿಕೊಂಡಿದ್ದಾರೆ. ನಾಗರಿಕರ ಜೊತೆ ಸಾಂಕೇತಿಕ ಪ್ರತಿಭಟನೆಯಲ್ಲೂ ಭಾಗವಹಿಸಿದ್ದ ಶಿವರಾಜ್ ಕುಮಾರ್, ಈಗ ಖುದ್ದು ಗೃಹ ಸಚಿವರನ್ನೇ ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಕೋರಿಕೊಂಡಿದ್ದಾರೆ.

  ರಾಮಲಿಂಗಾ ರೆಡ್ಡಿ ಅವರನ್ನಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗಮನಕ್ಕೂ ಸಮಸ್ಯೆ ತಂದಿದ್ದಾರೆ. ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಬೇಡ. ಸಮಸ್ಯೆ ಇನ್ನೊಂದು ಕಡೆ ಶಿಫ್ಟ್ ಆಗುತ್ತದಷ್ಟೆ. ಅದರ ಬದಲು ಒಂದು ಶಾಶ್ವತ ಪರಿಹಾರ ರೂಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

 • ರಾಯಲ್ ಎನ್‍ಫೀಲ್ಡ್ ಶಿವಣ್ಣ

  shivanna;s next movie titled royal enfield

  ನಿರ್ದೇಶಕ ಎ.ಪಿ.ಅರ್ಜುನ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ಸಿನಿಮಾಗೆ ಟೈಟಲ್ ಫೈನಲ್ ಆಗಿದೆ. ರಾಯಲ್ ಎನ್‍ಫೀಲ್ಡ್. ಒಂದು ಜಗದ್ವಿಖ್ಯಾತ ಬೈಕ್ ಮಾಡೆಲ್‍ನ ಹೆಸರನ್ನು ಚಿತ್ರಕ್ಕೆ ಇಟ್ಟಿರುವುದಕ್ಕೆ ಕಾರಣವೂ ಇದೆಯಂತೆ. ಚಿತ್ರದ ಕಥೆಯಲ್ಲಿ ಅದಕ್ಕೊಂದು ಪ್ರಮುಖ ಕಾರಣವಿದೆ ಎಂದು ಹೇಳಿದ್ದಾರೆ ನಿರ್ದೇಶಕ ಅರ್ಜುನ್.

  ಚಿತ್ರ ಜುಲೈನಲ್ಲಿ ಸೆಟ್ಟೇರಲಿದೆ. ಈಗ ಫೈನಲ್ ಆಗಿರೋದು ಶಿವಣ್ಣ ಮಾತ್ರ. ಉಳಿದ ಯಾವುದೇ ವಿಷಯ ಫೈನಲ್ ಆಗಿಲ್ಲ. ಇದೊಂದು ಭೂಗತಲೋಕದ ಲವ್ ಸ್ಟೋರಿ. ಶಿವಣ್ಣ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಳ್ತಾರೆ ಎಂದು ಸುಳಿವು ಕೊಟ್ಟಿದ್ದಾರೆ ಅರ್ಜುನ್.

 • ರಿಲೀಸ್‍ಗೂ ಮೊದಲೇ ದುಬೈಯಲ್ಲಿ ವಿಲನ್ ಅಬ್ಬರ

  the villain

  ದಿ ವಿಲನ್, ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್‍ನ ಈ ಚಿತ್ರ ಬಿಡುಗಡೆಗೂ ಮೊಲದೇ ಭರ್ಜರಿಯಾಗಿ ಸದ್ದು ಮಾಡ್ತಿದೆ. ಚಿತ್ರದ ಒಂದೊಂದು ಅಪ್‍ಡೇಟ್ ಕೂಡಾ ಕುತೂಹಲ ಕೆರಳಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸುದೀಪ್ ಹುಟ್ಟುಹಬ್ಬದ ದಿನ, ಒಂದು ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು ನಿರ್ದೇಶಕ ಪ್ರೇಮ್.

  ಆ ಮೋಷನ್ ಪೋಸ್ಟರ್ ಈಗ ದುಬೈ, ಅಬುದಾಬಿ, ಶಾರ್ಜಾ, ಮಸ್ಕಟ್‍ಗಳಲ್ಲಿ ದಾಖಲೆ ಬರೆದಿದೆ. ಅಲ್ಲಿನ ಚಿತ್ರಮಂದಿರಗಳಲ್ಲಿ ಚಿತ್ರದ ಮೋಷನ್ ಪೋಸ್ಟರ್ ಪ್ರಸಾರವಾಗಿದೆ. ಕನ್ನಡ ಚಿತ್ರವೊಂದರ ಮೋಷನ್ ಪೋಸ್ಟರ್, 

  ವಿದೇಶದ ಚಿತ್ರಮಂದಿರಗಳಲ್ಲಿ ಪ್ರಸಾರವಾಗಿರುವುದು ಇದೇ ಮೊದಲು. ಈ ಮೂಲಕ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಿರ್ಮಾಪಕ ಮನೋಹರ್ ಮತ್ತೊಂದು ದಾಖಲೆ ಬರೆದಿದ್ದಾರೆ.

 • ರುಸ್ತುಂ ಇನ್ನೂ ಫೈನಲ್ ಆಗಿಲ್ಲ - ಶ್ರದ್ಧಾ

  shraddha in rustum is not yest finalised

  ರುಸ್ತುಂ, ಶಿವರಾಜ್ ಕುಮಾರ್ ಅಭಿನಯದ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಚಿತ್ರ. ಆ ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ನಾಯಕಿ ಎಂಬ ಸುದ್ದಿ ಹಲವು ಕಡೆ ಹರಿದಾಡುತ್ತಿದೆ. ಈ ಕುರಿತು ನಟಿ ಶ್ರದ್ಧಾ ಶ್ರೀನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.

  ನಾನಿನ್ನೂ ಸಿನಿಮಾ ಒಪ್ಪಿಕೊಂಡಿಲ್ಲ. ಯಾವುದೇ ಅಗ್ರಿಮೆಂಟ್‍ಗೆ ಸಹಿ ಹಾಕಿಲ್ಲ. ಸಹಿ ಹಾಕಿದ ನಂತರ ಕನ್‍ಫರ್ಮ್ ಮಾಡುತ್ತೇನೆ ಎಂದಿದ್ದಾರೆ ಶ್ರದ್ಧಾ. ಶ್ರದ್ಧಾ ಅವರ ಮಾತು ಕೇಳಿದರೆ, ಒಂದಂತೂ ಗೊತ್ತಾಗುತ್ತೆ. ಚಿತ್ರದ ಆಫರ್ ಶ್ರದ್ಧಾಗೆ ಹೋಗಿರುವುದಂತೂ ಸತ್ಯ.

 • ರುಸ್ತುಂ ಐಟಂ.. ಸಾಕ್ಷಿ ಸುಂದರಂ..

  sakshi choudry in rusutum's item song

  ರುಸ್ತುಂ. ಶಿವರಾಜ್‍ಕುಮಾರ್, ವಿವೇಕ್ ಒಬೇರಾಯ್, ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮಯೂರಿ ನಟಿಸುತ್ತಿರು ಸಿನಿಮಾ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ. ಈ ಸಿನಿಮಾಗೀಗ ಹೊಸ ಐಟಂ ಸೇರ್ಪಡೆಗೊಂಡಿದೆ.

  ತೆಲುಗಿನಲ್ಲಿ ಪೋತಗಾಡು, ಜೇಮ್ಸ್‍ಬಾಂಡ್ ಚಿತ್ರಗಳಲ್ಲಿ ನಟಿಸಿರುವ ಸಾಕ್ಷಿ ಚೌಧರಿ ಈ ಚಿತ್ರದ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಕೊರಿಯೋಗ್ರಫಿ ಮಾಡಿರೋದು ರಾಜು ಸುಂದರಂ. ಅಪ್ಪಟ ಮಂಡ್ಯ ಸೊಗಡಿನ ಈ ಹಾಡಿಗೆ ಸಾಹಿತ್ಯ ಬರೆದಿರುವುದು ನಿರ್ದೇಶಕ ಎ.ಪಿ.ಅರ್ಜುನ್.

  ಮಂಡ್ಯ ಶೈಲಿಯ ಐಟಂ ಸಾಂಗ್ ಮುಗಿಸುವ ಮೂಲಕ ಶೇ.80ರಷ್ಟು ಚಿತ್ರೀಕರಣ ಮುಗಿಸಿದೆ ರುಸ್ತುಂ ಚಿತ್ರತಂಡ. ದೀಪಾವಳಿ ವೇಳೆಗೆ ಸಿನಿಮಾವ.

 • ರುಸ್ತುಂ ಟೀಂನಲ್ಲಿ ಶ್ರದ್ಧಾ ಶ್ರೀನಾಥ್

  shraddha srinath joines rustum

  ರುಸ್ತುಂ. ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಸಾಹಸ ನಿರ್ದೇಶಕ ರವಿವರ್ಮಾ ನಿರ್ದೇಶನದ ಮೊದಲ ಸಿನಿಮಾ ರುಸ್ತುಂ, ಶಿವಣ್ಣ ಮೀಸೆಯಿಂದಾಗಿಯೇ ಗಮನ ಸೆಳೆಯುತ್ತಿದೆ. ಮೀಸೆಧಾರಿ ಕಾಪ್ ಆಗಿರುವ ಶಿವರಾಜ್‍ಕುಮಾರ್, ರಾಜ್‍ಕುಮಾರ್‍ರಂತೆ ಕಾಣಿಸ್ತಿದ್ದಾರೆ ಅನ್ನೊದು ಚಿತ್ರತಂಡದವರ ಮಾತು. ಈಗ ಆ ಟೀಂಗೆ ಶ್ರದ್ಧಾ ಶ್ರೀನಾಥ್ ಎಂಟ್ರಿಯಾಗಿದೆ. ಚಿತ್ರೀಕರಣವೂ ಶುರುವಾಗಿದೆ.

  ಶಿವಣ್ಣ ಜೊತೆ ನಟಿಸಬೇಕು ಅನ್ನೋದು ಪ್ರತಿಯೊಬ್ಬ ನಟಿಯ ಕನಸಾಗಿರುತ್ತೆ. ನನಗೆ ಆ ಕನಸು ಬಹುಬೇಗನೇ ಈಡೇರಿದೆ. ಚಿತ್ರದಲ್ಲಿ ನನಗೆ ಉತ್ತಮ ಪಾತ್ರವಿದೆ. ಶಿವರಾಜ್‍ಕುಮಾರ್ ಪೊಲೀಸ್ ಆಫೀಸರ್. ಪೊಲೀಸ್ ಅಧಿಕಾರಿಯ ಪತ್ನಿಯಾಗಿ ಮನೆ ಹಾಗೂ ಹೊರಜಗತ್ತನ್ನು ಹೇಗೆ ಎದುರಿಸುತ್ತೇನೆ ಅನ್ನೋದು ನನ್ನ ಪಾತ್ರಕ್ಕಿರುವ ಹಿನ್ನೆಲೆ ಎಂದಿದ್ದಾರೆ ಶ್ರದ್ಧಾ.

  ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಶುರುವಾಗಿದೆ. ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಮಯೂರಿ ಶಿವರಾಜ್ ಕುಮಾರ್ ತಂಗಿಯಾಗಿ ನಟಿಸುತ್ತಿದ್ದಾರೆ.

   

 • ರುಸ್ತುಂಗೆ ಡಿಂಪಲ್ ಕ್ವೀನ್

  rachitha ram joins rustum team

  ಶಿವರಾಜ್ ಕುಮಾರ್ ನಟಿಸುತ್ತಿರುವ, ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಚಿತ್ರ ರುಸ್ತುಂ. ಶಿವಣ್ಣಂಗೆ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಜೋಡಿ. ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ನಟ ವಿವೇಕ್ ಒಬೇರಾಯ್ ಕೂಡಾ ನಟಿಸುತ್ತಿದ್ದಾರೆ. ಆ ವಿವೇಕ್ ಒಬೇರಾಯ್‍ಗೆ ಜೋಡಿಯಾಗ್ತಿರೋದು ರಚಿತಾ ರಾಮ್.

  ಬುಲ್ ಬುಲ್ ರಚಿತಾ ರಾಮ್ ಕೈತುಂಬಾ ಸಿನಿಮಾಗಳಿವೆ. ಅಯೋಗ್ಯ ಶೂಟಿಂಗ್ ಮುಗಿಸಿಕೊಂಡು ರಿಲೀಸ್‍ಗೆ ರೆಡಿಯಾಗಿದ್ದರೆ, ರಾಜಕುಮಾರ, ಸೀತಾರಾಮ ಕಲ್ಯಾಣ, ಐ ಲವ್ ಯೂ ಚಿತ್ರೀಕರಣದಲ್ಲಿವೆ. ಹೀಗಿರುವಾಗಲೇ ರುಸ್ತುಂ ಒಪ್ಪಿಕೊಂಡಿದ್ದಾರೆ ರಚಿತಾ.

  ಚಿತ್ರದಲ್ಲಿ ನನ್ನ ಪಾತ್ರ ತುಂಬಾನೇ ಸ್ಪೆಷಲ್. ಇಡೀ ಸಿನಿಮಾಗೆ ತಿರುವು ಕೊಡುವ ಪಾತ್ರ ನನ್ನದು. ಹೀಗಾಗಿ ಸಿನಿಮಾ ಒಪ್ಪಿಕೊಂಡೆ ಎಂದಿದ್ದಾರೆ ರಚಿತಾ ರಾಮ್.

 • ರುಸ್ತುಂಗೆ ವಿವೇಕ್ ಒಬೇರಾಯ್

  vivek oberoi enters kannada films through rustum

  ಬಾಲಿವುಡ್ ನಟ, ಕರ್ನಾಟಕದ ಅಳಿಯನೂ ಅಗಿರುವ ವಿವೇಕ್ ಒಬೇರಾಯ್ ರುಸ್ತುಂ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಪ್ರವೇಶಿಸುತ್ತಿದ್ದಾರೆ. ಶಿವರಾಜ್‍ಕುಮಾರ್ ಅಭಿನಯಿಸುತ್ತಿರುವ, ರವಿವರ್ಮ ನಿರ್ದೇಶನದ ರುಸ್ತುಂನಲ್ಲಿ ವಿವೇಕ್ ಒಬೇರಾಯ್ ನಟಿಸುವುದು ಪಕ್ಕಾ ಆಗಿದೆ. ಸ್ವತಃ ರವಿವರ್ಮ ಅವರೇ ಈ ಸುದ್ದಿ ತಿಳಿಸಿದ್ದಾರೆ.

  ವಿವೇಕ್ ಒಬೇರಾಯ್ ಚಿತ್ರದಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ನಿರ್ದೇಶಕರು ಗುಟ್ಟಾಗಿಯೇ ಇಟ್ಟಿದ್ದಾರೆ. ವಿಲನ್ ಪಾತ್ರ ಇರಬಹುದಾ..? ಊಹೆ ನಿಮಗೇ ಬಿಟ್ಟಿದ್ದು.

 • ಲಂಡನ್ನಲ್ಲಿ ವಿಲನ್ ಜೊತೆ ಸೇರಿದ ಶಿವರಾಜ್ ಕುಮಾರ್

  shivarajkumar joins the viallian set

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಿ ವಿಲನ್ ಚಿತ್ರದ ಶೂಟಿಂಗ್ ಟೀಂ ಸೇರ್ಪಡೆಯಾಗಿದ್ದಾರೆ. ಲಂಡನ್ನಲ್ಲಿ ಚಿತ್ರದ ಶೂಟಿಂಗ್ ನಡೀತಿದೆ. ವಿಭಿನ್ನ ಲುಕ್ನಲ್ಲಿರುವ ಶಿವರಾಜ್ ಕುಮಾರ್, ತಮ್ಮ ಭಾಗದ ದೃಶ್ಯಗಳ ಚಿತ್ರೀಕರಣದ ಬ್ಯುಸಿಯಾಗಿದ್ದಾರೆ.

  ಉದ್ದನೆಯ ಕೂದಲಿನ ಶಿವರಾಜ್ ಕುಮಾರ್ ಲುಕ್ ಎಲ್ಲರ ಕುತೂಹಲ ಕೆರಳಿಸುತ್ತಿದೆ. ಸುದೀಪ್, ಆಮಿ ಜಾಕ್ಸನ್ ಕೂಡಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ವಿಲನ್ ಚಿತ್ರದ ಒಂದೊಂದು ಹಂತವೂ ಪ್ರೇಕ್ಷಕರಲ್ಲಿ, ಅಭಿಮಾನಿಗಳಲ್ಲಿ ನಿರೀಕ್ಷೆಯ ಭಾರ ಹೆಚ್ಚಿಸುತ್ತಲೇ ಇದೆ.

 • ಲವ್ವಾಗೋಯ್ತು ಹಾಡ್ ಮ್ಯಾಲೆ

  the villain 3rd song is also super hit

  ದಿ ವಿಲನ್ ಚಿತ್ರದ 3ನೇ ಹಾಡು ಬಿಟ್ಟಿದ್ದಾರೆ ನಿರ್ದೇಶಕ ಪ್ರೇಮ್. ಲವ್ವಾಗೋಯ್ತೇ ನಿನ್‍ಮ್ಯಾಲೆ.. ಅನ್ನೋ ಹಾಡನ್ನು ಸ್ವತಃ ಪ್ರೇಮ್ ಬರೆದು ಹಾಡಿದ್ದಾರೆ. ಹಾಡಿನ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಸಂಗೀತ ಎರಡೂ ಮಜಬೂತಾಗಿವೆ.

  ಈ ಹಾಡನ್ನು ಪ್ರೇಮ್ ಅವರಿಂದಲೇ ಹಾಡಿಸಬೇಕು ಎಂದು ಮನಸ್ಸು ಮಾಡಿದ್ದು ಸ್ವತಃ ಸುದೀಪ್. ಆದರೆ, ಪ್ರೇಮ್ ಅವರನ್ನು ಒಪ್ಪಿಸೋದು ಅಷ್ಟು ಸುಲಭವಾಗಿರಲಿಲ್ಲ. ಹೇಗೋ ಕನ್ವಿನ್ಸ್ ಮಾಡಿಸಿ ಒಪ್ಪಿಸಿದ ಹಾಡು ಸಖತ್ತಾಗಿದೆ ಎಂದಿದ್ದಾರೆ ಸುದೀಪ್.

  ನೀವು ಬಿಡಿ.. ಎಂಥವರನ್ನೂ ಕನ್ವಿನ್ಸ್ ಮಾಡ್ತೀರಿ. ಈ ಹಾಡು ನಿಮಗೇ ಅರ್ಪಣೆ, ಲವ್ ಯು ಡಾರ್ಲಿಂಗ್ ಎಂದಿದ್ದಾರೆ ಪ್ರೇಮ್.

  ಈ ಮೊದಲು ಎರಡು ಬಿಲ್ಡಪ್ ಸಾಂಗ್ ರಿಲೀಸ್ ಮಾಡಿದ್ದ ಪ್ರೇಮ್, ಈ ಬಾರಿ ಪ್ರೇಮಗೀತೆ ತಂದಿದ್ದಾರೆ. ಎಂದಿನಂತೆ ಹಾಡುಗಳಲ್ಲಿ ಪ್ರೇಮ್ ಸ್ಪರ್ಶವಿದೆ. ನಾನು ರಾಮ, ನೀನೇನ್ ಸೀತೆ ಅಲ್ಲ. ಲವ್ವಾಗೋಯ್ತೇ ನಿನ್‍ಮ್ಯಾಲೆ, ನಾನೇನ್ ಕೃಷ್ಣ ಅಲ್ಲ, ನೀನೇನ್ ರುಕ್ಕು ಅಲ್ಲ, ಲವ್ವಾಗೋಯ್ತೇ ನಿನ್‍ಮ್ಯಾಲೆ ಅನ್ನೋ ಸಾಲುಗಳು ಇಷ್ಟವಾಗುತ್ತಿವೆ.

 • ವಾರ ಮೊದಲೇ ಟಗರು ಬುಕ್ಕಿಂಗ್ ಸ್ಟಾರ್ಟ್

  tagaru release poster

  ಟಗರು ಸಿನಿಮಾ ರಿಲೀಸ್ ಆಗೋದು ಮುಂದಿನ ಗುರುವಾರ. ಹೆಚ್ಚೂ ಕಡಿಮೆ ಇನ್ನೂ ಒಂದು ವಾರ್ ಟೈಂ ಇದೆ. ಆದರೆ, ಟಗರು ಚಿತ್ರದ ಟಿಕೆಟ್ ಬುಕಿಂಗ್ ಆಗಲೇ ಶುರುವಾಗಿಬಿಟ್ಟಿದೆ. ಕಾರಣ, ಟಗರು ಸೃಷ್ಟಿಸಿರುವ ಕ್ರೇಜ್.

  ಆನ್‍ಲೈನ್‍ನಲ್ಲಿ ಟಗರು ಟೀಸರ್, ಹಾಡುಗಳು ಸೃಷ್ಟಿಸಿರುವ ಹವಾ, ಅಭಿಮಾನಿಗಳ ಮಧ್ಯೆ ಸಿನಿಮಾ ನೋಡೋಕೆ ಶುರುವಾಗಿರುವ ಪೈಪೋಟಿ.. ಎಲ್ಲವನ್ನೂ ನೋಡಿ ಚಿತ್ರತಂಡ ಖುಷಿಯಾಗಿ ಹೋಗಿದೆ. ಕಡ್ಡಿಪುಡಿ ನಂತರ ಸೂರಿ ಮತ್ತು ಶಿವರಾಜ್ ಕುಮಾರ್ ಒಂದಾಗಿರುವ ಚಿತ್ರಕ್ಕೆ ಭಾವನಾ ಮತ್ತು ಮಾನ್ವಿತಾ ಹರೀಶ್ ನಾಯಕಿಯರು. ನಾಯಕ ಧನಂಜಯ್, ಚಿತ್ರದಲ್ಲಿ ವಿಲನ್ ರೋಲ್ ಮಾಡಿರುವುದು ವಿಶೇಷ. ಗೋಧಿ ಬಣ್ಣದಂತಾ ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್‍ರಾಜ್, ಸಂಗೀತ ಈ ಚಿತ್ರಕ್ಕಿದೆ.

  ಹೊಸ ತಂತ್ರಜ್ಞರ ತಂಡ ಕಟ್ಟಿಕೊಂಡು ಸೂರಿ ಕಟ್ಟಿಕೊಟ್ಟಿರುವ ಸಿನಿಮಾದಲ್ಲಿರುವುದು ಪೊಲೀಸ್ ಮತ್ತು ಕ್ರೈಂ ಜಗತ್ತಿನ ಕಥೆ. ಶ್ರೀಕಾಂತ್ ನಿರ್ಮಾಣದ ಸಿನಿಮಾ ಫೆಬ್ರವರಿ 23ರಂದು ತೆರೆ ಕಾಣುತ್ತಿದೆ.

 • ವಿಲನ್ ಚಿತ್ರದ ಕಾನ್ಸೆಪ್ಟ್ - ಹೀಗೂ ಉಂಟೆ..?

  the villain poster

  ಪೋಸ್ಟರ್ ತುಂಬಾ ಬೆಂಕಿ. ಬ್ಯಾಕ್‍ಗ್ರೌಂಡ್‍ನಲ್ಲಿ ರಣ ರಣ ರಾವಣ ಎಂಬ ಮ್ಯೂಸಿಕ್. ನೋಡ ನೋಡುತ್ತಿದ್ದಂತೆಯೇ ಶಿವರಾಜ್ ಕುಮಾರ್ ತಲೆ ಉರುಳಿ ಬರುತ್ತೆ. ಬೆನ್ನಲ್ಲೇ ಸುದೀಪ್ ತಲೆ ಉರುಳುತ್ತೆ. ದೇಹವೆಲ್ಲ ಬೆಂಕಿ..ಶಿವಣ್ಣದ ಮುಖದಿಂದ ಸುದೀಪ್ ಮುಖ ಹೊರಬಂದರೆ, ಸುದೀಪ್ ಮುಖದಿಂದ ಶಿವರಾಜ್ ಕುಮಾರ್ ಮುಖ ಚಿಮ್ಮುತ್ತೆ. ಇದು ದಿ ವಿಲನ್ ಚಿತ್ರದ ಮೋಶನ್ ಪೋಸ್ಟರ್.

  ಪ್ರತಿ ರಾಮನ ಒಳಗೂ ಒಬ್ಬ ರಾವಣ ಇರುತ್ತಾನೆ. ಪ್ರತಿಯೊಬ್ಬ ರಾವಣನಲ್ಲೂ ಒಬ್ಬ ರಾಮನಿರುತ್ತಾನೆ ಎಂಬ ಕಾನ್ಸೆಪ್ಟ್‍ನಲ್ಲಿ ಸಿದ್ಧವಾಗುತ್ತಿರುವ ಚಿತ್ರ ದಿ ವಿಲನ್. ಜೋಗಿ ಪ್ರೇಮ್ ನಿರ್ದೇಶನದ ಚಿತ್ರದ ಮೇಲೆ ಸ್ಯಾಂಡಲ್‍ವುಡ್ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದೆ. ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಶುಭ ಕೋರಿದೆ.

  Related Articles :-

  Motion poster Of 'The Villain' Released!

  ಮತ್ತೆ ಬ್ಯಾಂಕಾಕ್‍ಗೆ `ದಿ ವಿಲನ್' ಟೀಂ

  The Villain Rights Sold

  ದಿ ವಿಲನ್, ಲಂಡನ್ ಶೂಟಿಂಗ್ ಮುಗೀತು - ಭಾನುವಾರದ ಕಿಚ್ಚನ ಪ್ಲಾನ್ ಏನು?

   

   

Chemistry Of Kariyappa Movie Gallery

BellBottom Movie Gallery