` chiranjeev sarja, - chitraloka.com | Kannada Movie News, Reviews | Image

chiranjeev sarja,

 • ಆಕೆ ಚಿತ್ರದ ಭಯಾನಕ ಅನುಭವಗಳು - ಕೇಳಿದರೆ ಬೆಚ್ಚಿಬೀಳುತ್ತೀರಿ

  aake horror experience

  ಆಕೆ ಹಾರರ್ ಸಿನಿಮಾ. ರಿಲೀಸ್​ಗೂ ಮೊದಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಆ ಚಿತ್ರಕ್ಕೆ ದೆವ್ವದ ಅನುಭವವಾಯಿತಾ..? ಹೌದು ಎನ್ನುತ್ತೆ ಚಿತ್ರತಂಡ. 

  ಶೂಟಿಂಗ್ ವೇಳೆ ಇದ್ದಕ್ಕಿದ್ದಂತೆ ಕತ್ತಲು

  ಲಂಡನ್​ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಕಗ್ಗತ್ತಲೆಯಾಗುತ್ತಿತ್ತು. ವಿಚಿತ್ರ ಶಬ್ದಗಳು  ಕೇಳಿಸಿ ಚಿತ್ರತಂಡ ಬೆಚ್ಚಿ ಬೀಳುತ್ತಿತ್ತು. ಎಷ್ಟೋ ಬಾರಿ ಆ ಭಯದಲ್ಲೇ ಶೂಟಿಂಗ್​ನ್ನು ಅರ್ಧದಲ್ಲೇ ಪ್ಯಾಕಪ್ ಮಾಡಿದ್ದೂ ಇದೆಯಂತೆ.

  ವೀಸಾ ಸಿಗುವುದೇ ತಡವಾಗಿತ್ತು

  ಮೊದಲಿಗೆ ಶೂಟಿಂಗ್ ಜಾಗಕ್ಕೆ ತೆರಳುವುದೇ ಸಮಸ್ಯೆಯಾಗಿ ಕಾಡಿತ್ತು. ಯಾರೋ ಶಾಪ ಹಾಕಿದಂತೆ ಭಾಸವಾಗುತ್ತಿತ್ತು. ಚೈತನ್ಯ ಅವರಿಗೆ ಮೊತ್ತ ಮೊದಲ ಬಾರಿಗೆ ವೀಸಾ ತಿರಸ್ಕಾರವಾಗಿ,  ಮತ್ತೆ ಅರ್ಜಿ ಸಲ್ಲಿಸಿದ ಅನುಭವವೂ ಚಿತ್ರದಲ್ಲಾಗಿದೆ. ಚೈತನ್ಯ ಚಿತ್ರೀಕರಣಕ್ಕೆ ತೆರಳಿದಾಗ ಕೆಲಸ ಶುರುವಾಗಲು ಐದೇ ಐದು ದಿನವಿತ್ತು.

  ಹಾರ್ಸ್ಲಿ ಟವರ್ಸ್ ಅನುಭವ 

  ಲಂಡನ್​ನಲ್ಲಿ ಶೂಟಿಂಗ್ ಮಾಡಿದ ಸ್ಥಳವದು. ಅದು ಮೊದಲು ಹುಚ್ಚಾಸ್ಪತ್ರೆಯಾಗಿತ್ತು. ನಂತರ ಅದನ್ನು ರೆಸಾರ್ಟ್ ಮಾಡಲಾಗಿತ್ತು. ಆಕೆ ಸಿನಿಮಾದ ಕಥೆಯೂ ಹಾಗೇ ಇದೆ. 

  ಯೂರೋಪ್​ನ 10 ಅತಿಮಾನುಷ ಶಕ್ತಿ ತಾಣಗಳಲ್ಲಿ

  ಯುರೋಪಿನಲ್ಲಿ ಅತಿಮಾನುಷ ಶಕ್ತಿಗಳಿರುವ 10 ಸ್ಥಳಗಳಲ್ಲಿ 450 ವರ್ಷ ಹಳೆಯ ಹಾರ್ಸ್ಲಿ ಟವರ್ಸ್ ಕೂಡಾ ಒಂದು.  ಇಂಗ್ಲಿಷ್ ಕವಿಯೊಬ್ಬರ ಪುತ್ರಿ ಕೂಡ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆಕೆಯ ಆತ್ಮ ಅಲ್ಲಿ ಅಲೆಯುತ್ತಿದೆ ಎನ್ನುವ ಕಥೆಯಿದೆ. ನಿರ್ದೇಶಕ ಚೈತನ್ಯರೇ ಆ ಕಥೆ ಕೇಳಿದ ಮೇಲೆ ಅಚ್ಚರಿಗೊಳಗಾದರಂತೆ.

  ಎಲ್ಲಿ ಹೋಯ್ತು ಹಾರ್ಡ್​ ಡಿಸ್ಕ್ ?

  ಹಾರ್ಡ್ ಡಿಸ್ಕ್ ಕಾಣೆಯಾಗಿ ಶೂಟಿಂಗ್ ಮಾಡಿದ್ದ ದೃಶ್ಯವನ್ನೇ ಮತ್ತೆ ಶೂಟಿಂಗ್ ಮಾಡಲಾಗಿದೆ. ಆ ಹಾರ್ಡ್​ ಡಿಸ್ಕ್​ ಏನಾಯ್ತು ಅನ್ನೋದು ಇದುವರೆಗೆ ಗೊತ್ತಾಗಿಲ್ಲ

  ಹೆದರಿದ್ದರು ಶರ್ಮಿಳಾ

  ಚಿತ್ರದ ಶೂಟಿಂಗ್ ವೇಳೆ ಚಿತ್ರ ವಿಚಿತ್ರ ಶಬ್ಧ ಕೇಳಿಸಿದ ಅನುಭವವಾಗುತ್ತಿತ್ತು. ಆಗೆಲ್ಲ ಹೆದರಿಕೆಯಾಗುತ್ತಿತ್ತು. ಎಷ್ಟೋ ಬಾರಿ ಇದು ಸಿನಿಮಾ ಎಂದು ಎಷ್ಟೇ ಸಮಾಧಾನಪಟ್ಟುಕೊಂಡರೂ ಹೃದಯ ಹೊಡೆದುಕೊಳ್ಳುತ್ತಲೇ ಇರುತ್ತಿತ್ತು ಎನ್ನುತ್ತಾರೆ ಶರ್ಮಿಳಾ.a

 • Ramya Nambeesan Sings for Rudrathandava

  ramya nabeesan image

  Actress Ramya Nambeesan who recently made her debut as an actress in Kannada cinema through Ganesh starrer 'Style King' has now made her debut as a singer through Chiranjeevi-Radhika Kumaraswamy starrer 'Rudrathandava'. Ramya has sung a sung under the music composition of V Harikrishna.

  Ramya Nambeesan had also sung a song for 'Pandiyanadu' which is the original version of 'Rudrathandava'. Now she has sung a song called 'Try Try' which has become a hit.

  Singing is not new for Ramya and the actress cum singer has sung a few songs for films like 'Bachelor Party', 'Arikil Oraal' and others.

 • ಅಮ್ಮ.. ನಿಗೆ ವಿದೇಶದಲ್ಲೂ ವಾತ್ಸಲ್ಯದ ವರದಾನ

  amma i love you has a successful journey abroad

  ಅಮ್ಮ ಐ ಲವ್ ಯೂ ಚಿತ್ರ ವಿದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ತಾಯಿ, ಮಗನ ಬಾಂಧವ್ಯದ ಕಥೆ ಇರುವ ಚಿತ್ರದಲ್ಲಿ ತಾಯಿಗಾಗಿ ಮಗ ಮಾಡುವ ತ್ಯಾಗವೇ ಚಿತ್ರದ ಹೈಲೈಟ್. ತಾಯಿಯ ಆರೋಗ್ಯಕ್ಕಾಗಿ ಭಿಕ್ಷುಕನಾಗುವ ಮಗನ ಕಥೆ, ಪ್ರೇಕ್ಷಕರನ್ನು ಸೆಳೆಯುತ್ತಿದೆ.

  ಅಮೆರಿಕದಲ್ಲಿ ವಾರಾಂತ್ಯಕ್ಕೆ ಮಾತ್ರವೇ ಬಿಡುಗಡೆಯಾಗಿದ್ದ ಅಮ್ಮ ಐ ಲವ್ ಯೂ ಚಿತ್ರ, ಈಗ ವಾರದ ಎಲ್ಲ ದಿನಗಳಿಗೂ ಶೋ ವಿಸ್ತರಿಸಿಕೊಂಡಿದೆ. ಕೆನಡಾ, ಕುವೈತ್, ಒಮನ್, ದುಬೈನಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

  ಚಿರಂಜೀವಿ ಸರ್ಜಾ, ಸಿತಾರಾ, ನಿಶ್ವಿಕಾ ನಾಯ್ಡು, ಪ್ರಕಾಶ್ ಬೆಳವಾಡಿ, ಚಿಕ್ಕಣ್ಣ ಮೊದಲಾದವರು ನಟಿಸಿರುವ ಸಿನಿಮಾಕ್ಕೆ ಚೈತನ್ಯ ನಿರ್ದೇಶನವಿದೆ. ದ್ವಾರಕೀಶ್ ಬ್ಯಾನರ್‍ನ ಸಿನಿಮಾದ ಸಂಗೀತ ನಿರ್ದೇಶಕ ಗುರುಕಿರಣ್. ಸಿನಿಮಾವನ್ನು ವಿದೇಶಗಳಲ್ಲಿ ಬಿಡುಗಡೆ ಮಾಡುವ ಹೊಣೆಯನ್ನು ಗುರುಕಿರಣ್ ಅವರೇ ವಹಿಸಿಕೊಂಡಿದ್ದಾರಂತೆ.

 • ಗಂಡ ಬೇರೆ ಹುಡುಗಿನ ರೇಗಿಸಿದ್ರೆ, ಹೆಂಡತಿ ಸಪೋರ್ಟ್ಮಾ ಡೋದ್ ಹಿಂಗಾ..?

  meghana raj sings for her husband's movie

  ಗಂಡ, ಇನ್ಯಾವುದೋ ಹುಡುಗಿಯನ್ನು ರೇಗಿಸಿಕೊಂಡು ಡ್ಯುಯೆಟ್ ಹಾಡ್ತಿದ್ರೆ, ಹೆಂಡತಿ ಏನ್ ಮಾಡ್ತಾರೆ ಹೇಳಿ.. ಅಟ್ಟಿಸಿಕೊಂಡು ಹೋಗಿ ಗ್ರಹಚಾರ ಬಿಡಿಸ್ತಾರೇ ತಾನೇ.. ಆದರೆ, ಮೇಘನಾ ರಾಜ್ ಹಂಗಲ್ಲ, ಅವರು ಹಾಡು ಹಾಡ್ತಾರೆ. ಗಂಡನಿಗೆ ಸಪೋರ್ಟ್ ಮಾಡ್ತಾರೆ. ಹ್ಞೂಂ ಕಂಣ್ರೀ.. ಇದು ನಿಜ.. ದೇವರಾಣೆ ಸತ್ಯ. ಸಿಂಗ ಚಿತ್ರದ ಆಣೆಯಾಗಿಯೂ ಸತ್ಯ.

  ಸಿಂಗ ಚಿತ್ರದ ಶ್ಯಾನೆ ಟಾಪಾಗವ್ಳೆ.. ಹಾಡು ಕೇಳಿದ್ದೀರಲ್ಲ. ಆ ಹಾಡು ಈಗ ಟಿಕ್‍ಟಾಕ್‍ನಲ್ಲಿ ವೈರಲ್ಲು. ಆ ಹಾಡು ಹಾಡಿರೋದು ಸಂಚಿತ್ ಹೆಗ್ಡೆ. ಫೀಮೇಲ್ ಗಾಯಕಿ ಬೇರೆ ಯಾರೋ ಅಲ್ಲ, ಸ್ವತಃ ಮೇಘನಾ ರಾಜ್.

  ಉದಯ್ ಮೆಹ್ತಾ ನಿರ್ಮಾಣದ ಸಿಂಗ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕ. ಆದಿತಿ ಪ್ರಭುದೇವ ನಾಯಕಿ. ವಿಜಯ್ ಕಿರಣ್ ನಿರ್ದೇಶನದ ಸಿನಿಮಾದ ಈ ಹಾಡು, ಯುಗಾದಿಗೆ ರಿಲೀಸ್.

 • ನಿಗೂಢ ರಚಿತಾ ರಾಮ್ ಏಪ್ರಿಲ್ ಯುಗಾದಿಗೆ..

  april to start shooting on yugadi festival

  ರಚಿತಾ ರಾಮ್ ಅಭಿನಯದ ಏಪ್ರಿಲ್ ಅನ್ನೊ ಚಿತ್ರ ಪೋಸ್ಟರಿನಿಂದಲೇ ವಿಚಿತ್ರ ಕುತೂಹಲ ಮೂಡಿಸಿದ್ದ ಚಿತ್ರ. ನೋಡುಗರ ತಲೆಗೆ ಹುಳ ಬಿಟ್ಟಿದ್ದ ಚಿತ್ರತಂಡ ಶೂಟಿಂಗ್ ಮಾತ್ರ ಶುರು ಮಾಡಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಯುಗಾದಿ ದಿನ ಚಿತ್ರದ ಶೂಟಿಂಗ್ ಶುರುವಾಗಲಿದೆಯಂತೆ.

  ಸತ್ಯ ರಾಯಲ ನಿರ್ದೇಶನದ ಚಿತ್ರದ ಕಥೆಯಲ್ಲಿ ಸ್ವಲ್ಪ ಬದಲಾವಣೆ ಆಗಿದೆಯಂತೆ. ಅದಕ್ಕೆ ಕಾರಣ ಚಿರಂಜೀವಿ ಸರ್ಜಾ ಚಿತ್ರತಂಡಕ್ಕೆ ಎಂಟ್ರಿ ಕೊಟ್ಟಿರೋದು. 

 • ಭೈರವ ಚಿರಂಜೀವಿ

  chiranjeeivi sarja is now bhairava

  ರಾಜಮಾರ್ತಾಂಡ, ಸಿಂಗ, ಖಾಕಿ, ಜುಗಾರಿ ಕ್ರಾಸ್, ರಣಂ, ಆದ್ಯ.. ಹೀಗೆ ಚಿರಂಜೀವಿ ಸರ್ಜಾ ಕೈಲಿ ಕೈತುಂಬಾ ಚಿತ್ರಗಳಿವೆ. ಆ ಎಲ್ಲ ಚಿತ್ರಗಳ ಜೊತೆಗೆ ಇನ್ನೂ ಒಂದು ಚಿತ್ರ ಸೇರ್ಪಡೆಗೊಂಡಿದೆ. ಅದು ಭೈರವ.

  ಧೈರ್ಯಂ ಖ್ಯಾತಿಯ ಶಿವತೇಜಸ್ ನಿರ್ದೇಶನದ ಚಿತ್ರವಿದು. ಚಿತ್ರದ ನಿರ್ಮಾಪಕ ಶಿವಾರ್ಜುನ್. ಅರ್ಜುನ್ ಸರ್ಜಾ ಅವರ ಜೊತೆಗೆ 25 ವರ್ಷ ಕಾಲ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿರುವ ಶಿವಾರ್ಜುನ್, ಇದೇ ಮೊದಲ ಬಾರಿಗೆ ನಿರ್ಮಾಪಕರಾಗುತ್ತಿದ್ದಾರೆ. 

  ಇದೊಂದು ಪಕ್ಕಾ ಮಾಸ್ ಸಿನಿಮಾ. ಆ್ಯಕ್ಷನ್, ಸೆಂಟಿಮೆಂಟ್, ಕಾಮಿಡಿ, ಲವ್, ರೊಮ್ಯಾನ್ಸ್ ಎಲ್ಲವೂ ಇರಲಿದೆ. ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಸಾಧುಕೋಕಿಲ, ಕುರಿ ಪ್ರತಾಪ್ ನಟಿಸುತ್ತಿದ್ದಾರೆ. ಕಥೆಯ ಒನ್ ಲೈನ್ ಕೇಳಿ ಚಿರು ಓಕೆ ಎಂದಿದ್ದಾರೆ ಎಂದು ತಿಳಿಸಿದ್ದಾರೆ ಶಿವತೇಜಸ್

 • ರಣಂಗೆ ಮಾಣಿಕ್ಯನ ಬೆಡಗಿ

  manikya fame varalakshmi joins ranam team

  ಚಿರಂಜೀವಿ ಸರ್ಜಾ, ಚೇತನ್ ಜೊತೆಯಾಗಿ ನಟಿಸುತ್ತಿರುವ ರಣಂ ಚಿತ್ರಕ್ಕೆ ಮಾಣಿಕ್ಯ ಚಿತ್ರದಲ್ಲಿ ನಟಿಸಿದ್ದ ವರಲಕ್ಷ್ಮಿ ಎಂಟ್ರಿ ಕೊಟ್ಟಿದ್ದಾರೆ. ಶರತ್ ಕುಮಾರ್-ರಾಧಿಕಾ ದಂಪತಿಯ ಪುತ್ರಿ ವರಲಕ್ಷ್ಮಿ, ರಣಂ ಚಿತ್ರದಲ್ಲಿ ಸಿಬಿಐ ಆಫೀಸರ್ ಆಗಿ ನಟಿಸುತ್ತಿದ್ದಾರೆ.

  ಶ್ರೀನಿವಾಸ್ ನಿರ್ಮಾಣದ ಚಿತ್ರಕ್ಕೆ ವಿ. ಸಮುದ್ರ ನಿರ್ದೇಶಕ. ನೀತೂ ಗೌಡ ನಾಯಕಿ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಮಿನರ್ವ ಹೋಟೆಲ್‍ನಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery