` yash, - chitraloka.com | Kannada Movie News, Reviews | Image

yash,

 • ಯಶ್‍ರಿಂದ ಮಕ್ಕಳ ಕಳ್ಳರ ಸುಳ್‍ಸುದ್ದಿ ಕುರಿತು ಜಾಗೃತಿ

  yash appears in social awarness programme

  ಮಕ್ಕಳ ಕಳ್ಳರು ಬಂದಿದ್ದಾರಂತೆ. ಅವರು ಮಕ್ಕಳನ್ನು ಹೊತ್ತೊಯ್ದು, ಹಾಗ್‍ಹಾಗೇ ತಿಂದುಬಿಡ್ತಾರಂತೆ ಅನ್ನೋ ಸುಳ್ಳುಸುದ್ದಿ, ಎಷ್ಟರಮಟ್ಟಿಗೆ ಭೀತಿ ಹುಟ್ಟಿಸಿತ್ತೆಂದರೆ, ಹಳ್ಳಿಹಳ್ಳಿಗಳಲ್ಲಿ ಗ್ರಾಮಸ್ಥರು ರಾತ್ರಿಯೆಲ್ಲ ಕಾವಲಿಗೆ ನಿಂತಿದ್ದರು. ಅದರ ಪರಾಕಾಷ್ಠೆಯಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅಮಾಯಕನೊಬ್ಬನನ್ನು ಹೊಡೆದು ಕೊಂದಿದ್ದರು. ಈ ಕುರಿತು ಈಗಲೂಪೊಲೀಸ್ ಇಲಾಖೆ ವಿವಿಧ ರೂಪದಲ್ಲಿ ಜಾಗೃತಿ ಮೂಡಿಸುತ್ತಲೇ ಇದೆ.

  ಈ ಅಭಿಯಾನಕ್ಕೆ ಯಶ್ ಕೂಡಾ ಕೈ ಜೋಡಿಸಿರುವುದು ವಿಶೇಷ. ಅದೂ ಆಕಸ್ಮಿಕವಾಗಿ. ಜಿಮ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯಶ್‍ಗೆ ಪೊಲೀಸ್ ಪೇದೆಗಳು ಈ ಜಾಗೃತಿ ಕುರಿತ ಕರಪತ್ರ ನೀಡಿದ್ದಾರೆ. ಕರಪತ್ರ ಸ್ವೀಕರಿಸಿರುವ ಯಶ್, ಕರಪತ್ರ ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಈಗ ಯಶ್ ಫೋಟೋವನ್ನೂ ಬಳಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ.

  ಒಂದೊಳ್ಳೆ ಕೆಲಸಕ್ಕೆ ಯಶ್ ಅವರನ್ನು ಬಳಸಿಕೊಂಡಿರುವ ಪೊಲೀಸ್ ಇಲಾಖೆ ಯಶ್‍ಗೆ ಥ್ಯಾಂಕ್ಸ್ ಹೇಳಿದೆ.

   

 • ಯಾನ ನೋಡಿದ ಯಶ್‍ಗೆ ನೆನಪಾಗಿದ್ದೇ ಆ ಸಿನಿಮಾ..!

  yash recalls his moggina manasu days

  ಯಾನ, ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದ ಹೊಸ ಸಿನಿಮಾ. ಈ ಸಿನಿಮಾದಲ್ಲಿ ಅವರ ಮೂವರು ಮಕ್ಕಳೇ ನಾಯಕಿಯರು. ವೈಭವಿ, ವೈನಿಧಿ, ವೈಸಿರಿ. ಕಾಲೇಜು ಜೀವನದ ಲವ್ ಸ್ಟೋರಿಯನ್ನಿಟ್ಟುಕೊಂಡು ಹದಿಹರೆಯದವರ ಸಿನಿಮಾ ಮಾಡಿದ್ದಾರೆ ವಿಜಯಲಕ್ಷ್ಮೀ. ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ರಾಕಿಂಗ್ ಸ್ಟಾರ್ ಯಶ್‍ಗೆ ತಕ್ಷಣ ನೆನಪಾಗಿದ್ದೇ ಆ ಸಿನಿಮಾ.

  ಯಶ್ ಆರಂಭದಲ್ಲಿ ನಟಿಸಿದ ಸಿನಿಮಾ ಮೊಗ್ಗಿನ ಮನಸ್ಸು. ಯಶ್ ಮತ್ತು ರಾಧಿಕಾ ಪಂಡಿತ್‍ಗೆ ದೊಡ್ಡ ಮಟ್ಟದ ಯಶಸ್ಸು ಕೊಟ್ಟ ಶಶಾಂಕ್ ನಿರ್ದೇಶನದ ಸಿನಿಮಾ ಅದು. ಹದಿಹರೆಯದ ಪ್ರೇಮವನ್ನಿಟ್ಟುಕೊಂಡೇ ಬಂದಿರುವ ಕನ್ನಡದ ಕೆಲವೇ ಕೆಲವು ಅತ್ಯುತ್ತಮ ಚಿತ್ರಗಳಲ್ಲಿ ಮೊಗ್ಗಿನ ಮನಸ್ಸು ಕೂಡಾ ಒಂದು. ಯಾನ ಚಿತ್ರದ ಟ್ರೇಲರ್ ನೋಡಿದಾಗ ನನಗೆ ಮೊಗ್ಗಿನ ಮನಸ್ಸು ನೆನಪಾಗುತ್ತದೆ. ಯಾನ ಚಿತ್ರದ ಟ್ರೇಲರ್‍ನಲ್ಲಿ ಅದೇ ರೀತಿಯ ಹೊಸತನ ಕಾಣಿಸುತ್ತಿದೆ ಎಂದು ನೆನಪಿಸಿಕೊಂಡರು ಯಶ್.

  ತಾವೇಕೆ ಯಾನ ಚಿತ್ರದ ಟ್ರೇಲರ್‍ಗೆ ಬಂದೆ ಎನ್ನುವುದಕ್ಕೂ ಕಾರಣ ನೀಡಿದ ಯಶ್, ಅಂದು ಈ ಕುಟುಂಬ ಕಟ್ಟಿ ಬೆಳೆಸಿದ ಕನ್ನಡ ಚಿತ್ರರಂಗದಲ್ಲಿ ಇಂದು ನಾವಿದ್ದೇವೆ. ಅದರ ಫಲ ನಮಗೆ ಸಿಗುತ್ತಿದೆ. ಇಂತಹ ಕುಟುಂಬದವರು ಬಂದು ಕರೆದರೆ ಇಲ್ಲ ಎನ್ನಲು ಸಾಧ್ಯವೇ ಎಂದರು ಯಶ್. ಹೌದಲ್ಲವೇ..

 • ರಜನಿಕಾಂತ್ 2.0 ಜೊತೆ ಕೆಜಿಎಫ್

  kgf shows in rajinikant's 2.0 movie shows

  ರಜನಿಕಾಂತ್-ಅಕ್ಷಯ್‍ಕುಮಾರ್-ಶಂಕರ್ ಕಾಂಬಿನೇಷನ್‍ನ 2.0 ಸಿನಿಮಾ, ಜಗತ್ತಿನ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇದರ ಜೊತೆಯಲ್ಲೇ ಕೆಜಿಎಫ್ ಕೂಡಾ ಸದ್ದು ಮಾಡುತ್ತಿದೆ.

  ಡಿಸೆಂಬರ್ ಅಂತ್ಯದ ಭಾರತದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಕೆಜಿಎಫ್ ಟ್ರೇಲರ್‍ನ್ನು ವಿದೇಶದ ಎಲ್ಲ 2.0 ಸ್ಕ್ರೀನ್‍ಗಳಲ್ಲಿ ಪ್ರದರ್ಶನ ಮಾಡಲಾಗಿದೆ. 2.0 ಕೂಡಾ ಹಲವು ಭಾಷೆಗಳಲ್ಲಿ ನಿರ್ಮಾಣವಾಗಿರುವ ಚಿತ್ರ. ಹೀಗಾಗಿ ವಿದೇಶದಲ್ಲಿ ತೆಲುಗು ಸ್ಕ್ರೀನ್‍ನಲ್ಲಿ ತೆಲುಗು ಕೆಜಿಎಫ್, ತಮಿಳಿ 2.0ನಲ್ಲಿ ತಮಿಳು ಕೆಜಿಎಫ್, ಹಿಂದಿ 2.0ನಲ್ಲಿ ಹಿಂದಿ ಕೆಜಿಎಫ್ ಹಾಗೂ ಮಲಯಾಳಂ 2.0 ಪ್ರದರ್ಶನದಲ್ಲಿ ಮಲಯಾಳಂ ಕೆಜಿಎಫ್‍ನ ಟ್ರೇಲರ್ ಪ್ರದರ್ಶನ ಮಾಡಲಾಗಿದೆ.

 • ರವೀನಾ ಟಂಡನ್ ಪತಿಯಿಂದ ಕೆಜಿಎಫ್ ಹಿಂದಿ ರಿಲೀಸ್

  anil thadani with yash and kgf team

  ರಾಕಿಂಗ್ ಸ್ಟಾರ್ ಯಶ್, ವಿಜಯ್ ಕಿರಗಂದೂರು ಅವರ ಹೊಂಬಾಳೆ ಪ್ರೊಡಕ್ಷನ್, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಕಾಂಬಿನೇಷನ್‍ನ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್. ನವೆಂಬರ್ 16ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಹಿಂದಿ ಕೆಜಿಎಫ್ ವಿತರಣೆಯ ಹಕ್ಕನ್ನು ಅನಿಲ್ ತಡಾನಿ ಖರೀದಿಸಿದ್ದಾರೆ. 

  ಅನಿಲ್ ತಡಾನಿ, ಕನ್ನಡದಲ್ಲಿ ಮಸ್ತ್ ಮಸ್ತ್ ಹುಡುಗಿಯಾಗಿ ನಟಿಸಿದ್ದ ಉಪೇಂದ್ರ ಚಿತ್ರದಿಂದ ಚಿರಪರಿಚಿತೆಯಾಗಿರುವ ರವೀನಾ ಟಂಡನ್‍ರ ಪತಿ. ಬಾಲಿವುಡ್‍ನಲ್ಲಿ ಸ್ಟಾರ್ ವಿತರಕ. ವಿಜಯ್ ದೇವರಕೊಂಡ ಹಾಗೂ ಕಾರ್ತಿಕ್ ಗೌಡ, ಅನಿಲ್ ತಡಾನಿ ಜೊತೆ ಮಾತುಕತೆ ನಡೆಸಿದ್ದಾರೆ. ಅನಿಲ್ ತಡಾನಿ ವಿತರಣೆ ಮಾಡುತ್ತಿರುವುದರಿಂದ ಹಿಂದಿಯಲ್ಲಿ ಬಹುದೊಡ್ಡ ಓಪನಿಂಗ್ ಸಿಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

 • ರಾಕಿ ಭಾಯ್‍ಗೆ ಡೆತ್ ವಾರೆಂಟ್ ಕೊಡಲು ರವೀನಾ ಎಂಟ್ರಿ

  raveen tandon joins kgf chapter 2 team

  ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಈಗ ಸೀನಿಯರ್ ನಟಿ. ಅವರೀಗ ಕೆಜಿಎಫ್ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಪಾತ್ರದ ಕೆಲಸವೇ ರಾಕಿ ಭಾಯ್‍ಗೆ ಡೆತ್ ವಾರೆಂಟ್ ಕೊಡೋದು.

  20 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ರವೀನಾ, ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಧಾನಿಯ ಪಾತ್ರ ಮಾಡಿದ್ದಾರೆ. ದೇಶದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರಾಗಿದ್ದ ಕಾರಣ, ರವೀನಾ ಪಾತ್ರದಲ್ಲಿ ಇಂದಿರಾ ಛಾಯೆಯೂ ಇದೆ.

  ರವೀನಾ ಟಂಡನ್, ಇಲ್ಲಿ ರಮಿಕಾ ಸೇನ್ ಹೆಸರಿನ ಪಾತ್ರ ಮಾಡುತ್ತಿದ್ದು, ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಸ್ವಾಗತ ಕೋರಿದ್ದಾರೆ.

  ಯಶ್, ಸಂಜಯ್ ದತ್, ಅನಂತ ನಾಗ್, ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 2ಗೆ ವಿಜಯ್ ಕಿರಗಂದೂರು ನಿರ್ಮಾಪಕ. 2020ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 2 ಜೂನ್ ಅಥವಾ ಜುಲೈನಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.

 • ರಾಕಿಂಗ್ ಸ್ಟಾರ್ ಗೆ ಸಿಕ್ತು ರಿಯಲ್ ಸ್ಟಾರ್ ಶಹಬ್ಬಾಸ್‍ಗಿರಿ

  upendra appreciates yash's dediction

  ರಿಯಲ್ ಸ್ಟಾರ್ ಉಪೇಂದ್ರ, ತಮಗೆ ಇಷ್ಟವಾಗಿದ್ದನ್ನು ಹೇಳೋಕೆ, ಹಿಂದೆ ಮುಂದೆ ನೋಡುವವರಲ್ಲ. ಈಗ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಒಂದು ಟ್ವೀಟ್ ಮಾಡಿದ್ದಾರೆ. ಉಪೇಂದ್ರ ಅವರಿಗೆ ಬಹಳ ಇಷ್ಟವಾಗಿರೋದು ಯಶ್ ಅವರ ಡೆಡಿಕೇಷನ್.

  ಕೆಜಿಎಫ್ ಸಿನಿಮಾಗಾಗಿ 2 ವರ್ಷ ಮೀಸಲಿಟ್ಟಿರುವ ಯಶ್ ಅವರ ಈ ಡೆಡಿಕೇಷನ್ ಅಮೋಘ. ಒಂದು ಸಿನಿಮಾಗಾಗಿ ನೀವು ಮಾಡಿರುವ ಈ ಸಮರ್ಪಣಾಮನೋಭಾವದಿಂದ ಕಲಿಯುವುದು ತುಂಬಾ ಇದೆ ಎಂದು ಹೊಗಳಿದ್ದಾರೆ ಉಪೇಂರ್ಧಋ>

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್, ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದ್ದು, ಮೊದಲನೇ ಭಾಗ ಈ ವರ್ಷ ಬಿಡುಗಡೆಯಾಗಲಿದೆ. ಹೊಂಬಾಳೆ ಬ್ಯಾನರ್‍ನ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳಿವೆ.

  ಉಪ್ಪಿ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಯಶ್, ನಿಮ್ಮ ಹೊಗಳಿಕೆಗೆ ನಾನು ಅಭಾರಿ. ನೀವು ನನಗೆ ಸದಾ ಸ್ಫೂರ್ತಿ. ನಮಗೆ ಇದೇ ರೀತಿ ಪ್ರೇರಣೆ ನೀಡುತ್ತಿರಿ ಎಂದು ಧನ್ಯವಾದ ಅರ್ಪಿಸಿದ್ದಾರೆ.

 • ರಾಕಿಂಗ್ ಸ್ಟಾರ್ ರಸಗುಲ್ಲಾ ಯಾರ್ ಗೊತ್ತಾ..?

  who is yash's rasgulla

  ರಾಕಿಂಗ್ ಸ್ಟಾರ್ ಆಕೆಯನ್ನು ಕರೆಯೋದೇ ರಸಗುಲ್ಲಾ ಅಂತಾ. ಆ ರಸಗುಲ್ಲಾ ಜೊತೆಯಲ್ಲಿದ್ದರೆ, ಅವರಿಗೆ ಸಮಯ ಸರಿದದ್ದೇ ಗೊತ್ತಾಗಲ್ಲ. ಆಕೆಯೊಂದಿಗೆ ಚೆಲ್ಲಾಟವಾಡುತ್ತಾ, ಮುದ್ದಾಡುತ್ತಾ ಕುಳಿತರೆ ಊಟ, ತಿಂಡಿಯ ನೆನಪೂ ಬರೋದಿಲ್ಲ. ಆ ರಸಗುಲ್ಲಾ ಕೂಡಾ ಅಷ್ಟೆ.. ಮುದ್ದು ಮುದ್ದು. ಥೇಟ್ ಯಶ್ ತರಾನೇ. ಸ್ಸೋ.. ಆ ರಸಗುಲ್ಲಾ ಯಾರು ಅಂತಾ ಗೊತ್ತಾಗಿರ್ಬೇಕಲ್ಲಾ.. ಯಶ್-ರಾಧಿಕಾ ದಂಪತಿಯ ಮುದ್ದಿನ ಮಗಳು. ಸದ್ಯಕ್ಕಿನ್ನೂ ನಾಮಕರಣ ಆಗಿಲ್ಲ. ಹೆಸರಿನ ಹುಡುಕಾಟ ಇನ್ನೂ ಸಾಗಿದೆ. ಯಶಿಕಾ ಅಂತಾ ಹೆಸರಿಡ್ತಾರಂತೆ ಅನ್ನೋ ಸುದ್ದಿಯನ್ನು ಖುದ್ದು ರಾಧಿಕಾ ಪಂಡಿತ್ ತಳ್ಳಿ ಹಾಕಿದ್ದಾರೆ.

  ರಾಧಿಕಾ ಅವರಿಗೀಗ ತಾಯಿಯಾಗಿರುವ ಖುಷಿ. ಮಗುವಿನೊಂದಿಗೆ ನಲಿದಾಡುವ ಸಂಭ್ರಮ. ನಿದ್ದೆಗೆಟ್ಟರೂ ಸಂತಸವೇ. ನಿದ್ದೆ ಮಾಡೋಕೆ ಆಗದೇ ಇದ್ದಾಗ ಮಗು ನೋಡಿಕೊಳ್ಳೋಕೆ ಹೇಗಿದ್ದರೂ ಅವರ ಅಮ್ಮ ಇದ್ದಾರೆ. 

  ಇನ್ನೊಂದು ವಿಷಯ ಗೊತ್ತಾ..? ಹೆರಿಗೆಗೆ ಮುನ್ನ ಆಸ್ಪತ್ರೆಯಲ್ಲಿ ರಾಧಿಕಾ ಪಂಡಿತ್ ಮಿಸ್ಟರ್ & ಮಿಸೆಸ್ ರಾಮಾಚಾರಿ ಚಿತ್ರದ ಹಾಡು ಕೇಳಿ, ಹೆಜ್ಜೆ ಹಾಕಿದ್ದರಂತೆ. ಇನ್ನೂ ಖುಷಿಯೆಂದರೆ, ರಾಧಿಕಾ ಪಂಡಿತ್ ಪುಟ್ಟ ಹುಡುಗಿಯಾಗಿದ್ದಾಗ ಅವರ ತಂದೆ, ರಾಧಿಕಾಗೆ ಭೀಮ್‍ಸೇನ್ ಜೋಷಿಯವರ ಹಾಡು ಕೇಳಿಸುತ್ತಿದ್ದರಂತೆ. ಅದೇ ಹಾಡುಗಳನ್ನು ತಮ್ಮ ಕಂದನಿಗೂ ಕೇಳಿಸಿ ಅಪ್ಪನ ಜೊತೆ ಕಳೆದ ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ ರಾಧಿಕಾ ಪಂಡಿತ್.

 • ರಾಕಿಂಗ್ ಸ್ಟಾರ್‍ಗಾಗಿ ಕನ್ನಡತಿಯಾದ ಅಮೆರಿಕನ್ ಯುವತಿ

  lee m centrio

  ಮೊನ್ನೆ ಮೊನ್ನೆಯಷ್ಟೇ ಕಿಚ್ಚ ಸುದೀಪ್ ಅಭಿಮಾನಕ್ಕಾಗಿ ಜಪಾನಿಯೊಬ್ಬರು ಕನ್ನಡ ಕಲಿತಿದ್ದನ್ನು ಓದಿದ್ದಿರಿ. ಈ ಬಾರಿ ಅಂಥದ್ದೇ ಸುದ್ದಿ ಅಮೆರಿಕಾದಿಂದ ಬಂದಿದೆ. ಅಮೆರಿಕದ ಯುವತಿಯೊಬ್ಬರು ಕನ್ನಡತಿಯಾಗಲು ಹೊರಟಿದ್ದಾರೆ. ಅವರು ಕನ್ನಡತಿಯಾಗಲು ಹೊರಟಿರುವುದು ರಾಕಿಂಗ್ ಸ್ಟಾರ್ ಯಶ್‍ಗಾಗಿ.

  ಲಿ ಎಂ ಸೆಂಟ್ರಿಯೋ ಎಂಬ ಈ ಅಮೆರಿಕನ್ ಯುವತಿ, ಯಶ್ ಕುರಿತ ತಮ್ಮ ಅಭಿಮಾನವನ್ನು ಹೇಳಿಕೊಂಡಿದ್ದಾರೆ. ಈ ಯುವತಿಗೆ ಯಶ್ ಅವರ ಚಿತ್ರಗಳಷ್ಟೇ ಅಲ್ಲ, ಯಶ್ ಅವರ ಸಾಮಾಜಿಕ ಕಾರ್ಯಗಳೂ ಹಿಡಿಸಿವೆ. ಆಕಸ್ಮಿಕವಾಗಿ ಗೂಗ್ಲಿ ಚಿತ್ರದ ಹಿಂದಿ ವರ್ಷನ್ ನೋಡಿದ ಸೆಂಟ್ರಿಯೋ, ನಂತರ ಯಶ್ ಅವರ ಎಲ್ಲ ಚಿತ್ರಗಳ ಡಿವಿಡಿಗಳನ್ನೂ ಕಲೆಕ್ಟ್ ಮಾಡಿಕೊಂಡು ನೋಡಿದ್ದಾರೆ.

  ಹಿಂದಿಯಲ್ಲಿ ನೋಡೋದೇಕೆ, ಕನ್ನಡದಲ್ಲೇ ಅರ್ಥ ಮಾಡಿಕೊಳ್ಳೋಣ ಎಂದು ಕೊಂಡು ಕನ್ನಡ ಕಲಿಯಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ, ಆನ್‍ಲೈನ್‍ನಲ್ಲಿ ಯಶ್ ಅವರ ಸಾಮಾಜಿಕ ಕಾರ್ಯಗಳಿಗೆ ಬೆಂಬಲ ಸೂಚಿಸಿ `ಐ ಸಪೋರ್ಟ್ ರಾಕಿ' ಎಂಬ ಅಭಿಯಾನವನ್ನೂ ಶುರು ಮಾಡಿದ್ದಾರೆ.

 • ರಾಕಿಭಾಯ್ ಲುಕ್ ಸೃಷ್ಟಿಸಿದ ಥಂಡರ್

  yash's beardo look creates thunder

  sಸೆ.16ರಂದು ಕಾಯುತ್ತಿರಿ, ಥಂಡರ್ ಬರಲಿದೆ. ಇದು ಜಾಹಿರಾತಿನ ಪ್ರೋಮೋ ವಿಡಿಯೋ. ಹಾಲಿವುಡ್ ಸ್ಟೈಲ್ ಲುಕ್‍ನಲ್ಲಿ ಥೇಟು ಬಿರುಗಾಳಿಯಂತೆಯೇ ಕಾಣುತ್ತಿರೋ ಯಶ್ ಹವಾ ಎಬ್ಬಿಸಿಬಿಟ್ಟಿದ್ದಾರೆ.

  ಸೆ.16ರಂದು ಉದ್ಭವವಾಗುವ ಬಿರುಗಾಳಿ ಏನು..? ಬಿಯೋರ್ಡ್ ಥಂಡರ್ ಅಂದ್ರೆ ಏನು..? ಉತ್ತರ ಗೊತ್ತಿಲ್ಲ. ಹುಳವನ್ನಂತೂ ಬಿಟ್ಟಾಗಿದೆ. ಇಷ್ಟಕ್ಕೂ ಈ ಸ್ಟೇಟಸ್‍ನ ಮರ್ಮವೇ ಅದು. ಕುತೂಹಲ ಹೆಚ್ಚಿಸುವುದು.

 • ರಾಖಿ ಭಾಯ್ ಬೈಕ್ ಬಿಡಲ್ಲ..!

  rocky bhai fida over bike

  ಕೆಜಿಎಫ್ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮ್ಯೂಸಿಕ್, ಸೌಂಡ್, ಡೈಲಾಗ್ಸ್, ಕ್ಯಾಮೆರಾ ಟೇಕಿಂಗ್ಸ್.. ಈ ಎಲ್ಲದರ ನಡುವೆ ಯುವಕರ ಕಣ್ಣು ಕುಕ್ಕುತ್ತಿರೋದು ರಾಖಿ ಭಾಯ್ ಬೈಕ್. 

  ಮೊದಲೇ 70-80ರ ದಶಕದ ಕಥೆ. ಹೀಗಾಗಿ ಆಗಿನ ಕಾಲದ ಬೈಕ್‍ನ್ನೇ ಬಳಸಿಕೊಳ್ಳೋ ಪ್ಲಾನ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇತ್ತು. ಆದರೆ, ಮೈಲೇಜ್, ಕೆಪ್ಯಾಸಿಟಿ ಪ್ರಾಬ್ಲಂಗಳಿಂದಾಗಿ ಹೊಸ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಗಾಡಿಯನ್ನೇ ಹಳೆಯ ರೂಪಕ್ಕೆ ಬದಲಿಸಲಾಯಿತು. ನಾವು ಟ್ರೇಲರ್‍ನಲ್ಲಿ ನೋಡ್ತಿರೋದು ಅದೇ ಬೈಕ್.

  ಆ ಬೈಕ್ ಮೇಲೆ ಯಶ್‍ಗೆ ಲವ್ವಾಗಿ ಬಿಟ್ಟಿದೆ. ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿದ ಮೇಲೆ ಆ ಬೈಕ್‍ನ್ನು ಸ್ವಂತಕ್ಕೆ ತೆಗೆದುಕೊಳ್ಳೋ ಪ್ಲಾನ್ ಹಾಕಿಕೊಂಡಿದ್ದಾರಂತೆ ಯಶ್. 

 • ರಾಜಕೀಯಕ್ಕೆ ಬರ್ತಾರಾ ಯಶ್..?

  yash reacts on his political entry news

  ಇತ್ತೀಚೆಗೆ ಚಿತ್ರರಂಗದಿಂದ ರಾಜಕೀಯಕ್ಕೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಎಲೆಕ್ಷನ್ ಬೇರೆ ಹತ್ತಿರದಲ್ಲಿರೋದ್ರಿಂದ ಇದು ಸಹಜವೇ ಬಿಡಿ. ಇಂಥಾದ್ದೊಂದು ಮಾತು ಯಶ್ ವಿಚಾರದಲ್ಲೂ ಚಾಲ್ತಿಯಲ್ಲಿದೆ. ಯಶ್ ಅವರು ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಕೆರೆ ಜೀರ್ಣೋದ್ಧಾರ ಮಾಡಿಸಿದ್ದು, ತಲ್ಲೂರು ಕೆರೆಗೆ ಯಶ್ ದಂಪತಿ ಬಾಗಿನ ಅರ್ಪಿಸಿದ್ದು, ಉ.ಕರ್ನಾಟಕದ ಹಲವು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಿದ್ದು ಎಲ್ಲವೂ ಇದಕ್ಕೆ ಕಾರಣ. ಅದಕ್ಕೆ ತಕ್ಕಂತೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಯಶ್ ತಮಗನ್ನಿಸಿದ್ದನ್ನು ನೇರವಾಗಿ ಹೇಳುವ ಸ್ವಭಾವದವರು. 

  ಹೀಗಾಗಿಯೇ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಲು ಹೋಗಿದ್ದಾಗ ಯಶ್‍ಗೆ ಈ ಪ್ರಶ್ನೆ ಎದುರಾಯಿತು. ಅದಕ್ಕೆ ಯಶ್ ನೀಡಿರುವ ಉತ್ತರ ಇದು. ನನಗೆ ರಾಜಕೀಯಕ್ಕೆ ಬರುವ ಮನಸ್ಸಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಹಾಗೆ ಬರುವುದಿದ್ದರೆ ಈ ಕೆಲಸ ಮಾಡೋಕೆ ಉ.ಕರ್ನಾಟಕಕ್ಕೆ ಬರಬೇಕಿರಲಿಲ್ಲ. ಮೈಸೂರು ಭಾಗದಲ್ಲೇ ಇಂಥ ಕೆಲಸ ಮಾಡುತ್ತಿದ್ದೆ. ಈ ಕೆಲಸ ಮಾಡುತ್ತಿರುವುದು ನನ್ನ ತೃಪ್ತಿಗಾಗಿ ಎಂದಿದ್ದಾರೆ ಯಶ್.

 • ರಾಜಕುಮಾರಿಗೆ ಹೆಸರಿಡುವ ಹೊಣೆ ಯಶ್ ಅವರದ್ದೇ..

  yash to name his princess soon

  ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಅವರ ಮನೆಗೀಗ ಮುದ್ದಾದ ರಾಜಕುಮಾರಿ ಬಂದಿದ್ದಾಳೆ. ಮಗಳನ್ನು ತಮ್ಮ ವಿವಾಹ ವಾರ್ಷಿಕೋತ್ಸವದ ದಿನವೇ ಮನೆದುಂಬಿಸಿಕೊಂಡಿದ್ದಾರೆ ಯಶ್ ದಂಪತಿ. ನಮ್ಮ ಮಗು, ನಮ್ಮ ವಿವಾಹ ವಾರ್ಷಿಕೋತ್ಸವದ ಉಡುಗೊರೆ ಎಂದು ಹೇಳಿದ್ದಾರೆ ರಾಧಿಕಾ. 

  ಎಲ್ಲ ಓಕೆ.. ನಿಮ್ಮ ರಾಜಕುಮಾರಿಯ ಹೆಸರೇನು ಅಂದ್ರೆ ಅದರ ಹೊಣೆ ಇರೋದು ಯಶ್ ಮೇಲೆ. ಗಂಡು ಮಗು ಆಗಲಿದೆ ಎಂದು ರಾಧಿಕಾ, ಹೆಣ್ಣು ಮಗು ಆಗಲಿದೆ ಎಂದು ಯಶ್ ಬೆಟ್ ಕಟ್ಟಿದ್ದರಂತೆ. ಗಂಡು ಮಗು ಹುಟ್ಟಿದರೆ ಏನು ಹೆಸರಿಡಬೇಕು ಎಂದು ರಾಧಿಕಾ ಮೊದಲೇ ನಿರ್ಧರಿಸಿದ್ದರಂತೆ. ಹೆಣ್ಣು ಹುಟ್ಟಿದರೆ ಏನು ಹೆಸರಿಡಬೇಕು ಎಂದು ಯಶ್ ಫೈನಲ್ ಮಾಡಬೇಕಿತ್ತು.

  ನಾನು ಕೆಲಸದ ಬ್ಯುಸಿಯಲ್ಲಿ ಹೆಸರು ಫೈನಲ್ ಮಾಡೋಕೆ ಆಗಲಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಹೆಸರು ನಿರ್ಧರಿಸುತ್ತೇನೆ ಎಂದಿದ್ದಾರೆ ಯಶ್.

  ಆಸ್ಪತ್ರೆಯಿಂದ ಮನೆಗೆ ಹೋಗುವ ಮುನ್ನ ಸುದ್ದಿಗೋಷ್ಟಿಯಲ್ಲಿ ಮಗುವಿನೊಂದಿಗೆ ಬಂದಿದ್ದ ಯಶ್ ದಂಪತಿ, ತಮ್ಮ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ಧನ್ಯವಾದ ಎಂದರು.

  ಅಂಬರೀಷ್ ಅವರು ನೀಡಿದ ತೊಟ್ಟಿಲು ಉಡುಗೊರೆಯನ್ನು ಪ್ರೀತಿಯಿಂದ ಸ್ಮರಿಸಿದ ಯಶ್, ನಮಗೆ ಅವರು ತಂದೆಯ ಸ್ಥಾನದಲ್ಲಿದ್ರು. ಮಗಳನ್ನು ನೋಡಲು ಅವರು ಇರಬೇಕಿತ್ತು ಎಂದು ಭಾವುಕರಾದರು ಯಶ್.

 • ರಾಜಾಹುಲಿ ಹಿಂದಿಗೆ ಡಬ್.. ನಿರ್ಮಾಪಕರಿಗೇ ಗೊತ್ತಿಲ್ಲ..!

  rajahuli dubbed in hindi

  ಯಶ್ ವೃತ್ತಿಜೀವನದ ಆರಂಭದಲ್ಲಿ ಸಿಕ್ಕ ಬಹುದೊಡ್ಡ ಸಕ್ಸಸ್ ರಾಜಾಹುಲಿ. ಯಶ್‍ಗೆ ಸ್ಟಾರ್‍ಗಿರಿ ತಂದುಕೊಟ್ಟ ಸಿನಿಮಾ ಅದು. ಯಶ್ ಅವರೊಂದಿಗೆ ಮೇಘನಾ ರಾಜ್, ವಸಿಷ್ಠ ಸಿಂಹ, ಚಿಕ್ಕಣ್ಣ ಮೊದಲಾದವರನ್ನು ಸ್ಟಾರ್‍ಗಳನ್ನಾಗಿಸಿದ ಚಿತ್ರ ರಾಜಾಹುಲಿ. ಯಶ್ ಅವರನ್ನು ಆ ಚಿತ್ರದಿಂದಲೇ ಅಭಿಮಾನಿಗಳು ರಾಜಾಹುಲಿ ಅಂತಾರೆ. ಆ ಚಿತ್ರಕ್ಕೆ ಕೆ.ಮಂಜು ನಿರ್ಮಾಪಕ. ಗುರುದೇಶಪಾಂಡೆ ನಿರ್ದೇಶಕ.

  ಆ ಚಿತ್ರ ಈಗ ಹಿಂದಿಯಲ್ಲಿ ಡಬ್ಬಿಂಗ್ ಆಗಿದೆ. ಯೂಟ್ಯೂಬ್‍ನಲ್ಲಿ 1 ಕೋಟಿಗೂ ಹೆಚ್ಚು ಜನ ರಾಜಾಹುಲಿಯನ್ನು ನೋಡಿದ್ದಾರೆ. ಆದರೆ, ಅದು ಚಿತ್ರದ ವೊರಿಜಿನಲ್ ನಿರ್ಮಾಪಕ ಕೆ.ಮಂಜುಗೇ ಗೊತ್ತಿಲ್ಲ.

  ತಮಿಳು, ತೆಲುಗು ಹಾಗೂ ಹಿಂದಿಯವರು ರಾಜಾಹುಲಿ ಚಿತ್ರದ ಡಬ್ಬಿಂಗ್ ರೈಟ್ಸ್ ಕೇಳಿದ್ದರು. ಕೆಜಿಎಫ್ ರಿಲೀಸ್ ನಂತರ ಮಾತುಕತೆ ಮಾಡೋಣ ಎಂದು ಕಾಯುತ್ತಿದ್ದೆವು. ಹೀಗಿರುವಾಗಲೇ ಚಿತ್ರವನ್ನು ನಮ್ಮ ಅನುಮತಿಯೇ ಇಲ್ಲದೆ ಡಬ್ಬಿಂಗ್ ಮಾಡಿದ್ದಾರೆ. ಇದು ನಿರ್ಮಾಪಕರಿಗೆ ಅಗಿರುವ ದೊಡ್ಡ ನಷ್ಟ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ ಕೆ.ಮಂಜು. ಸೈಬರ್ ಪೊಲೀಸರಿಗೆ ದೂರನ್ನು ಕೂಡ ಕೊಟ್ಟಿದ್ದಾರೆ.

 • ರಾಜ್ಯೋತ್ಸವಕ್ಕೆ ಕೆಜಿಎಫ್ ಮತ್ತೆ ರಿಲೀಸ್

  kgf rajyotsava special

  ಕೆಜಿಎಫ್ ಚಾಪ್ಟರ್ 1 ಸಿನಿಮಾ ಇದೇ ರಾಜ್ಯೋತ್ಸವಕ್ಕೆ ಮತ್ತೆ ಬಿಡುಗಡೆಯಾಗುತ್ತಿದೆ. 25 ರಿಂದ 30 ಸ್ಕ್ರೀನ್‍ಗಳಲ್ಲಿ ಕೆಜಿಎಫ್ ಬಿಡುಗಡೆಯಾಗುತ್ತಿದ್ದು, ಇದು ರಾಜ್ಯೋತ್ಸವ ಸ್ಪೆಷಲ್. ಊರ್ವಶಿ, ಕಾವೇರಿ ಸೇರಿದಂತೆ ಕೆಲವು ಮಲ್ಟಿಪ್ಲೆಕ್ಸ್‍ಗಳಲ್ಲೂ ಕೆಜಿಎಫ್ ಮತ್ತೆ ತೆರೆ ಕಾಣುತ್ತಿದೆ.

  ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಾಪ್ಟರ್ 1, ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ತೆರೆ ಕಂಡಿತ್ತು. ಚಾಪ್ಟರ್ 2 ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ.

 • ರಾಣಾ ಗೊಂದಲ - ನಿರ್ದೇಶಕ ಹರ್ಷ ಕೊಟ್ಟ ಉತ್ತರ

  harsha clarifies rumors regarding raana

  ರಾಣಾ ಚಿತ್ರವನ್ನು ಯಶ್ ಮಾಡುತ್ತಿಲ್ಲವಂತೆ. ಅದೇ ಕಥೆಯನ್ನು ಶಿವಣ್ಣಗಾಗಿ ನಿರ್ದೇಶಿಸಲು ಹರ್ಷ ರೆಡಿಯಾಗಿದ್ದಾರಂತೆ. ಶಿವಣ್ಣ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಸರಿದಾಡಿದ್ದವು. ಇದಕ್ಕೆಲ್ಲ ನಿರ್ದೇಶಕ ಹರ್ಷ ಅವರೇ ಉತ್ತರ ಕೊಟ್ಟಿದ್ದಾರೆ.

  ರಾಣಾ ಚಿತ್ರದಲ್ಲಿ ಯಶ್ ಅವರೇ ನಟಿಸ್ತಾರೆ. ಅದು ಅವರಿಗಾಗಿಯೇ ಸಿದ್ಧಪಡಿಸಿರುವ ಕಥೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ ಹರ್ಷ.

  ನಾನು ಶಿವಣ್ಣನ ದೊಡ್ಡ ಅಭಿಮಾನಿ. ಅವರು ಯೆಸ್ ಎಂದರೆ, ಹೊಸದೊಂದು ಕಥೆಯನ್ನು ಅವರಿಗಾಗಿಯೇ ಸಿದ್ಧಪಡಿಸುತ್ತೇನೆ. ಬೇರೆ ಹೀರೋಗೆ ಮಾಡಿದ ಕಥೆಯನ್ನು ಅವರಿಗೆ ಮಾಡುವುದಿಲ್ಲ ಎಂದಿದ್ದಾರೆ ಹರ್ಷ. 

  ಹರ್ಷ, ಶಿವಣ್ಣನ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದು, ಭಜರಂಗಿ ಹಾಗೂ ವಜ್ರಕಾಯ ಎರಡೂ ಚಿತ್ರಗಳು ಸೂಪರ್ ಹಿಟ್ ಸಾಲಿನಲ್ಲಿವೆ. ಸದ್ಯಕ್ಕೆ ಹರ್ಷ ಅವರ ಸೀತಾರಾಮ ಕಲ್ಯಾಣ ಚಿತ್ರ 25 ದಿನಗಳತ್ತ ಮುನ್ನುಗ್ಗುತ್ತಿದೆ.

  Related Articles :-

  ರಾಣಾ.. ಯಶ್ ಅಲ್ಲ ಶಿವಣ್ಣ..?

 • ರಾಣಾ ಯಶ್‍ಗೆ ಮತ್ತೆ ಜಯಣ್ಣ ನಿರ್ಮಾಪಕ

  jayanna takes over rana

  ರಾಕಿಂಗ್ ಸ್ಟಾರ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹುಟ್ಟುಹಬ್ಬದ ಸಂಭ್ರಮದ ದಿನವೇ ರಾಕಿಂಗ್ ಸ್ಟಾರ್ ಅವರ ಮುಂದಿನ ಚಿತ್ರಗಳು ಸದ್ದು ಮಾಡಿವೆ. ಹಾಗೆ ಸುದ್ದಿಯಾದ ಚಿತ್ರಗಳಲ್ಲಿ ರಾಣಾ ಸಹ ಒಂದು. ಹರ್ಷ ನಿರ್ದೇಶನದ ರಾಣಾ ಚಿತ್ರಕ್ಕೆ ಆರಂಭದಲ್ಲಿ ನಿರ್ಮಾಪಕರಾಗಿದ್ದವರು ರಮೇಶ್ ಕಶ್ಯಪ್. ಈಗ ಆ ಜಾಗಕ್ಕೆ ಜಯಣ್ಣ-ಭೋಗೇಂದ್ರ ಬಂದಿದ್ದಾರೆ. ಚಿತ್ರದ ಜಾಹೀರಾತೂ ಹೊರಬಿದ್ದಿದೆ.

  ಕೆಜಿಎಫ್ ನಂತರ ಯಶ್ ಅಭಿನಯದ ಮಫ್ತಿ ನರ್ತನ್ ನಿರ್ದೇಶನದ ಇನ್ನೊಂದು ಚಿತ್ರಕ್ಕೂ ಜಯಣ್ಣ-ಭೋಗೇಂದ್ರ ನಿರ್ಮಾಪಕರು. ಇನ್ನು ರಾಕ್‍ಲೈನ್ ವೆಂಕಟೇಶ್, ಕೆ.ಮಂಜು ಅವರ ಬಳಿಯೂ ಯಶ್ ಕಾಲ್‍ಶೀಟ್ ಇದೆ. ಕೆಜಿಎಫ್ ಮುಗಿದ ನಂತರ ಯಾವ ಸಿನಿಮಾ ಮೊದಲು ಶುರುವಾಗಲಿದೆ ಎಂದು ಕಾದು ನೋಡಬೇಕು.

 • ರಾಣಾ.. ಯಶ್ ಅಲ್ಲ ಶಿವಣ್ಣ..?

  will shivarajkumar replace yash in rana

  ರಾಣಾ. ಹರ್ಷ ನಿರ್ದೇಶನದ ಸಿನಿಮಾ. ಹೆಚ್ಚೂ ಕಡಿಮೆ ಒಂದು ವರ್ಷದಿಂದ ರಾಣಾ ಟೈಟಲ್ ಸದ್ದು ಮಾಡುತ್ತಲೇ ಇದೆ. ಪ್ಲಾನ್ ಪ್ರಕಾರ ಈ ಚಿತ್ರದಲ್ಲಿ ಯಶ್ ನಟಿಸಬೇಕಿತ್ತು. ಯಶ್ ಕೂಡಾ ಓಕೆ ಎಂದಿದ್ದರು. ಆದರೆ, ಈಗ ರಾಣಾ ಚಿತ್ರದ ಹೀರೋ ಬದಲಾಗಿದ್ದಾರೆ. ಯಶ್ ಜಾಗಕ್ಕೆ ಶಿವಣ್ಣ ಬಂದಿದ್ದಾರೆ ಎನ್ನುತ್ತಿವೆ ಮೂಲಗಳು.

  ಕಾರಣ ಇಷ್ಟೆ, ಕೆಜಿಎಫ್ ನಂತರ ಯಶ್ ಸಂಪೂರ್ಣವಾಗಿ ಕೆಜಿಎಫ್ ಚಾಪ್ಟರ್2ಗೆ ತಮ್ಮನ್ನು ಅರ್ಪಿಸಿಕೊಂಡುಬಿಟ್ಟಿದ್ದಾರೆ ಜಯಣ್ಣ ಬ್ಯಾನರ್‍ನ ಕಿರಾತಕ2 ಚಿತ್ರವನ್ನೂ ಮುಂದೂಡಿದ್ದಾರೆ. ಒಂದಿಷ್ಟು ಶೂಟಿಂಗ್ ಕೂಡಾ ಮುಗಿಸಿದ್ದ ಕಿರಾತಕ-2 ಕೆಜಿಎಫ್ ಚಾಪ್ಟರ್2 ಮುಗಿಯುವವರೆಗೆ ಮೇಲೇಳುವುದಿಲ್ಲ.

  ಹರ್ಷ ನಿರ್ದೇಶನದ ರಾಣಾ ಕೂಡಾ ಅದೇ ಸ್ಥಿತಿಗೆ ಹೋಗಲಿದೆ. ಹೀಗಾಗಿಯೇ ಯಶ್ ಅವರಿಗೆ ಬೇರೊಂದು ಪ್ರಾಜೆಕ್ಟ್ ರೆಡಿ ಮಾಡಲು ಪ್ಲಾನ್ ಮಾಡಿಕೊಂಡ ಹರ್ಷ, ರಾಣಾ ಚಿತ್ರವನ್ನು ಶಿವರಾಜ್ ಕುಮಾರ್ ಅವರಿಗಾಗಿ ಮಾಡಲು ರೆಡಿಯಾಗಿದ್ದಾರಂತೆ.

 • ರಾಧಿಕಾ ಪಂಡಿತ್ ಕುಟುಂಬಕ್ಕೆ ಲಕ್ಷ್ಮಿ ಬಂದಳು..!

  radhika pandit welcomes brothers daughter

  ಯಶ್ ಅವರನ್ನು ಮದುವೆಯಾದ ಮೇಲೆ ರಾಧಿಕಾ ಪಂಡಿತ್ ಅವರಿಗೆ ಆಗಾಗ ಮುಂದಿನ ಗುಡ್ ನ್ಯೂಸ್ ಯಾವಾಗ ಅನ್ನೋ ಪ್ರಶ್ನೆ ಎದುರಾಗ್ತಾನೇ ಇರುತ್ತೆ. ಸದ್ಯಕ್ಕಿಲ್ಲ ಎಂದು ನಕ್ಕು ಮುಂದೆ ಸಾಗುವ ರಾಧಿಕಾ ಪಂಡಿತ್, ಈಗ ಅತ್ತೆಯಾಗಿದ್ದಾರೆ. ರಾಧಿಕಾ ಅವರ ಸಹೋದರ ಗೌರಂಗ್ ಪಂಡಿತ್, ಅತ್ತಿಗೆ ಸಹನಾ ದಂಪತಿ ಮುದ್ದು ಮಗುವಿಗೆ ಜನ್ಮ ನೀಡಿದ್ದಾರೆ. ಅತ್ತಿಗೆಯ ಹೆರಿಗೆಗಾಗಿ ಅಮೆರಿಕಕ್ಕೇ ಹೋಗಿದ್ದ ರಾಧಿಕಾ, ಮಗುವಿನ ಫೋಟೋ ಜೊತೆ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ಸಾರಿದ್ದಾರೆ.

  `ನಾನು ಈಗ ಅತ್ತೆ ಆಗಿದ್ದೇನೆ. ಮುದ್ದು ಕಂದನನ್ನು ನೋಡಿದ ತಕ್ಷಣ ನಾನು ಎಮೋಷನಲ್ ಆದೆ. ನನ್ನ ನೋಟವನ್ನು ಬೇರೆಡೆ ಬದಲಿಸಲು ಆಗುತ್ತಿಲ್ಲ. ಈಗ ಅಣ್ಣ ಅತ್ತಿಗೆ ಪೋಷಕರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ ರಾಧಿಕಾ.

  ಸದ್ಯಕ್ಕೆ ಚಿಕಾಗೋದಲ್ಲಿರುವ ರಾಧಿಕಾ, ಇನ್ನೂ 22 ದಿನ  ಯಶ್‍ರನ್ನು ನೋಡದೇ ಇರಬೇಕು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

 • ರಾಧಿಕಾ ಪಂಡಿತ್ ಹೀಗಿದ್ದಾರ್ ನೋಡಿ..

  second year engagement anniversary for yash and radhika

  ರಾಧಿಕಾ ಪಂಡಿತ್ ತಾಯಿಯಾಗುತ್ತಿದ್ದಾರೆ. ತಾವು ತಾಯಿಯಾಗುತ್ತಿರುವುದನ್ನು ಖಚಿತ ಪಡಿಸಿರುವ ರಾಧಿಕಾ, ತುಂಬಿದ ಹೊಟ್ಟೆಯಲ್ಲಿ ಹೇಗೆ ಕಾಣಿಸುತ್ತಿದ್ದಾರೆ ಅನ್ನೋದನ್ನ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಯಶ್ ಜೊತೆ ಬಸುರಿ ರಾಧಿಕಾರನ್ನು ನೋಡುವುದೇ ಒಂದು ಚೆಂದ.

  ಅಂದಹಾಗೆ ಆಗಸ್ಟ್ 12, ಯಶ್-ರಾಧಿಕಾ ನಿಶ್ಚಿತಾರ್ಥವಾದ ದಿನ. 2 ವರ್ಷಗಳ ಹಿಂದೆ ಆಗಸ್ಟ್ 12ರಂದೇ ಮದುವೆಯ ಗುಟ್ಟು ಮುರಿದಿದ್ದ ಜೋಡಿ, ಈಗ ಅದೇ ಆಗಸ್ಟ್ 12ರಂದು ಮಗುವಿನ ಗುಟ್ಟು ಹೇಳಿದೆ. ಮರಿ ಕೃಷ್ಣನೋ.. ರಾಧೆಯೋ.. ಚೆಂದದ ಮಗು ಮಡಿಲಿಗೆ ಬರಲಿ. ಅದು ಅಭಿಮಾನಿಗಳ ಹಾರೈಕೆ.

 • ರಾಧಿಕಾ ಪಂಡಿತ್, ಯಶ್ ದಂಪತಿಗೆ ಗಂಡು ಮಗು

  radhika pandit yash blessed with baby boy

  ಯಶ್ ಮತ್ತು ರಾಧಿಕಾ ಪಂಡಿತ್ ಮನೆಯಲ್ಲೀಗ ಮತ್ತೆ ಸಂಭ್ರಮ. ಐರಾಗೊಬ್ಬ ತಮ್ಮ ಬಂದಿದ್ದಾನೆ. ರಾಧಿಕಾ ಪಂಡಿತ್ 2ನೇ ಮಗುವಿಗೆ ತಾಯಿಯಾಗಿದ್ದಾರೆ. ಪೋರ್ಟಿಸ್ ಆಸ್ಪತ್ರೆಯಲ್ಲಿ ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

  ಡಿಸೆಂಬರ್ 2, 2018ರಂದು ರಾಧಿಕಾ ಪಂಡಿತ್, ಐರಾಳಿಗೆ ಜನ್ಮ ನೀಡಿದ್ದರು. ನಂತರ ಜೂನ್‍ನಲ್ಲಿ ಮತ್ತೊಮ್ಮೆ ಗರ್ಭಿಣಿ ಎನ್ನುವುದನ್ನು ಬಹಿರಂಗಪಡಿಸಿದ್ದರು. ಈಗ ಅಕ್ಟೋಬರ್ 30ರಂದು ಮಗ ಹುಟ್ಟಿದ್ದಾನೆ.

Shivarjun Movie Gallery

Actor Bullet Prakash Movie Gallery