` yash, - chitraloka.com | Kannada Movie News, Reviews | Image

yash,

 • ಯಶ್ ಕೆಜಿಎಫ್‍ಗೆ ಶಾರುಖ್ ಖಾನ್ ಬಹುಪರಾಕ್

  sharu khan praises yash's kgf

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ದೇಶಾದ್ಯಂತ ಅಲೆ ಎಬ್ಬಿಸಿದೆ. ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾಗೆ ಮೊದಲ ಎದುರಾಳಿಯೇ ಶಾರೂಕ್ ಖಾನ್ ಅಭಿನಯದ ಝೀರೋ. ಅದೇ ದಿನ ತೆರೆ ಕಾಣುತ್ತಿರುವ ಝೀರೋಗಿಂತಲೂ ದೊಡ್ಡ ಟ್ರೆಂಡ್ ಸೃಷ್ಟಿಸಿದೆ ಕೆಜಿಎಫ್. ಇದೆಲ್ಲದರ ನಡುವೆಯೇ ಕೆಜಿಎಫ್‍ಗೆ ಬಹುಪರಾಕ್ ಎಂದಿದ್ದಾರೆ ಶಾರುಕ್ ಖಾನ್.

  ಚಿತ್ರದ ಟ್ರೇಲರ್ ನೋಡಿದೆ. ತುಂಬಾ ಚೆನ್ನಾಗಿದೆ. ಚಿತ್ರಕ್ಕಾಗಿ ತಂಡದವರು 3 ವರ್ಷ ಶ್ರಮ ಹಾಕಿದ್ದಾರೆ ಎಂದು ತಿಳಿಯಿತು. ಚಿತ್ರದ ಹೀರೋ, ಹೀರೋಯಿನ್, ಇಡೀ ಟೀಂ ಬಗ್ಗೆ ತಿಳಿದುಕೊಂಡೆ. ಯಶ್ ಮುಂಬೈಗೆ ಬಂದಾಗ ಖಂಡಿತಾ ಭೇಟಿಯಾಗುತ್ತೇನೆ ಎಂದಿದ್ದಾರೆ ಶಾರುಕ್ ಖಾನ್.

  ಸಿನಿಮಾವನ್ನು ದಕ್ಷಿಣದ ಸಿನಿಮಾ, ಉತ್ತರದ ಸಿನಿಮಾ ಎಂದು ಬೇಧ ಭಾವ ಮಾಡೋದು ಬೇಡ. ಎಲ್ಲವೂ ಭಾರತೀಯ ಚಿತ್ರಗಳೇ. ಕೆಜಿಎಫ್‍ಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ ಶಾರುಕ್.  

 • ಯಶ್ ಕೊಟ್ಟ ಗಿಫ್ಟಿನಲ್ಲಿ ಪ್ರಶಾಂತ್ ನೀಲ್ ಮಾಡಿದ ಮೊದಲ ಕೆಲಸ

  yash's luxury gift to prashanth neel

  ರಾಕಿಂಗ್ ಸ್ಟಾರ್ ಯಶ್‍ಗೆ ಪ್ರಶಾಂತ್ ನೀಲ್ ಅದ್ಭುತ ಉಡುಗೊರೆ ಕೊಟ್ಟಿರೋದು ಇಡೀ ಇಂಡಿಯಾಗೇ ಗೊತ್ತು. ಕೆಜಿಎಫ್ ನಂತಹ ಮಾಸ್ಟರ್ ಪೀಸ್ ಕೊಟ್ಟ ಪ್ರಶಾಂತ್ ನೀಲ್, ಯಶ್‍ಗೆ ಪ್ಯಾನ್ ಇಂಡಿಯಾ ಸ್ಟಾರ್ ಇಮೇಜ್ ಕೊಟ್ಟಿದ್ದಾರೆ. ಅಂತಹ ಪ್ರಶಾಂತ್ ನೀಲ್ ಅವರಿಗೆ ಯಶ್ ಕೂಡಾ ಒಂದು ಪ್ರೀತಿಯ ಕಾಣಿಕೆ ಕೊಟ್ಟಿದ್ದಾರೆ.

  ಸ್ಯಾಮ್ಸಂಗ್ ಗ್ಯಾಲಕ್ಸಿ ಎಎಕ್ಸ್‍ವೈ ಫೋಲ್ಡಿಂಗ್ ಮೊಬೈಲ್ ಗಿಫ್ಟ್ ನೀಡಿದ್ದಾರೆ ಯಶ್. ಅದನ್ನು ಅಷ್ಟೇ ಖುಷಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಪ್ರಶಾಂತ್ ನೀಲ್. ಅಷ್ಟೇ ಅಲ್ಲ, ಆ ಕ್ಯಾಮೆರಾ ಮೂಲಕವೇ ತಮ್ಮ ಪತ್ನಿ ಮತ್ತು ಶ್ರೀನಿಧಿ ಶೆಟ್ಟಿ ಜೊತೆಯಲ್ಲಿರೋ ಫೋಟೋವೊಂದನ್ನು ಸೋಷಿಯಲ್ ಮೀಡಿಯಾಗೆ ಬಿಟ್ಟಿದ್ದಾರೆ ಪ್ರಶಾಂತ್. ಅಂದಹಾಗೆ ಪ್ರಶಾಂತ್ ನೀಲ್ ಪತ್ನಿ ಹೆಸರು ರೀನಾ.

 • ಯಶ್ ಗಡ್ಡಕ್ಕೆ ಅಂಬರೀಷ್ ಡೆಡ್‍ಲೈನ್

  ambi fixed deadline for yash's beard

  ರಾಕಿಂಗ್ ಸ್ಟಾರ್ ಯಶ್, ಅಂಬರೀಷ್ ಅವರ ದೊಡ್ಡ ಅಭಿಮಾನಿ. ಎಷ್ಟೆಂದರೂ ಮಂಡ್ಯ ಸೀಮೆಯ ಹುಡುಗ. ಅದು ಸಹಜವೇ ಬಿಡಿ. ರಾಜಾಹುಲಿಯಲ್ಲಿ ಅಂಬರೀಷ್ ಅಭಿಮಾನಿಯಾಗಿಯೇ ಕಾಣಿಸಿಕೊಂಡಿದ್ದ ಯಶ್‍ಗೆ ಅಂಬರೀಷ್ ಅವರ ಜಲೀಲನ ಪಾತ್ರವನ್ನು ಮಾಡಬೇಕು ಅನ್ನೋ ಆಸೆಯಿದೆಯಂತೆ. 

  ನನ್ನನ್ನು ಅತಿ ಹೆಚ್ಚಾಗಿ ಕಾಡೋದು ಜಲೀಲನ ಪಾತ್ರ. ಯಾರಾದರೂ ಆ ಮಾದರಿಯ ಕಥೆ ಮಾಡಿಕೊಂಡು ಬರಲಿ ಎಂದು ಕಾಯುತ್ತಲೇ ಇದ್ದೇನೆ ಎಂದು ಆಸೆ ತೋಡಿಕೊಂಡಿದ್ದಾರೆ ಯಶ್.

  ಇದರ ಮಧ್ಯೆ ಕೆಜಿಎಫ್ ಚಿತ್ರಕ್ಕಾಗಿ ಇಷ್ಟುದ್ದ ಗಡ್ಡ ಬಿಟ್ಟಿರುವ ಯಶ್‍ಗೆ ಗಡ್ಡ ತೆಗೆಯುವಂತೆ ಅಂಬರೀಷ್ ಹೇಳಿದ್ದಾರಂತೆ. ಜೂನ್ 20ರ ಡೆಡ್‍ಲೈನ್ ಕೊಟ್ಟಿದ್ದಾರಂತೆ. ಅದಕ್ಕೂ ಮುಂಚೆಯೇ ಗಡ್ಡ ತೆಗೆಯೋದಾಗಿ ಅಂಬರೀಷ್‍ಗೆ ಯಶ್ ಪ್ರಾಮಿಸ್ ಮಾಡಿದ್ದಾರಂತೆ.

  ಅಂದಹಾಗೆ.. ಅದರ ಅರ್ಥ ಜೂನ್ 20ರೊಳಗೆ ಕೆಜಿಎಫ್ ಚಿತ್ರದ ಶೂಟಿಂಗ್ ಸಂಪೂರ್ಣ ಮುಗಿಯಲಿದೆ ಎಂದು.

 • ಯಶ್ ಗಡ್ಡಕ್ಕೆ ಮುಕ್ತಿ

  kgf to shave his beard after kgf

  ರಾಕಿಂಗ್ ಸ್ಟಾರ್ ಗಡ್ಡವಿಲ್ಲದೆ ಕಾಣಿಸಿಕೊಂಡಿದ್ದೇ ಇಲ್ಲ. ಅವರ ಇದುವರೆಗಿನ ಸಿನಿಮಾಗಳಲ್ಲಿ ಲಕ್ಕಿ ಬಿಟ್ಟರೆ, ಬೇರೆಲ್ಲ ಚಿತ್ರಗಳಲ್ಲೂ ಗಡ್ಡದೊಂದಿಗೇ ನಟಿಸಿದ್ದಾರೆ ಯಶ್. ಆದರೆ, ಕೆಜಿಎಫ್ ಚಿತ್ರದಲ್ಲಿನ ಯಶ್ ಅವರ ಗಡ್ಡ ಒಂದೂವರೆ ವರ್ಷದಿಂದ ಇತ್ತು. ಪ್ಯಾಂಟು, ಶರ್ಟು ತೆಗೆದು, ಖಾವಿ ತೊಡಿಸಿಬಿಟ್ಟರೆ ಥೇಟು ಋಷಿಯಂತೆ ಕಾಣ್ತಾರೆ ಅಂತಾ ಅಭಿಮಾನಿಗಳು ರೇಗಿಸುವುದೂ ಇತ್ತು.

  ಸುಮಾರು ಒಂದುವರೆ ವರ್ಷದಿಂದ ತಮಗೆ ಅಂಟಿಕೊಂಡಿದ್ದ ಗಡ್ಡಕ್ಕೆ ಮುಕ್ತಿ ಕಾಣಿಸೋಕೆ ಯಶ್ ನಿರ್ಧಾರ ಮಾಡಿದ್ದಾರಂತೆ. ಕೆಜಿಎಫ್ ಚಿತ್ರದ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್ ಮುಕ್ತಾಯ ಹಂತದಲ್ಲಿದ್ದು, ಅದು ಮುಗಿದರೆ, ಸಿನಿಮಾ ಮುಗಿದಂತೆ. ಅದಾದ ನಂತರ ಗಡ್ಡಕ್ಕೆ ಮುಕ್ತಿ ನೀಡಲು ಯಶ್ ನಿರ್ಧರಿಸಿದ್ದಾರೆ.

   

 • ಯಶ್ ಚಿತ್ರ ಈ ವರ್ಷ ಇಲ್ಲ..!

  no yash movie this year

  ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರವೇ ಕೊನೆ. ನಂತರ ಯಶ್ ನಟಿಸುತ್ತಿರುವುದು ಕೆಜಿಎಫ್ ಚಿತ್ರದಲ್ಲಿ ಮಾತ್ರ. ಎಲ್ಲವೂ ಪ್ಲಾನ್ ಪ್ರಕಾರ ಅಗಿದ್ದರೆ, ಈ ವರ್ಷದ ಕೊನೆಗೆ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ಈಗಿನ ಪ್ರಕಾರ, ಚಿತ್ರದ ಶೂಟಿಂಗೇ ಮುಗಿದಿಲ್ಲವಂತೆ. ಇನ್ನೂ ಹಲವು ಪೋರ್ಷನ್ಸ್ ಬಾಕಿಯಿದ್ದು, ಚಿತ್ರ ದಿನದಿಂದ ದಿನಕ್ಕೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಹೀಗಾಗಿ ಇಷ್ಟು ಹೊತ್ತಿಗೆ ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಬ್ಯುಸಿಯಾಗಬೇಕಿದ್ದ ಚಿತ್ರತಂಡ, ಇನ್ನೂ ಶೂಟಿಂಗ್ ಹಂತದಲ್ಲೇ ಇದೆ.

  ಹಾಗಾದರೆ, ಚಿತ್ರ ಯಾವಾಗ..? ಬಹುಶಃ 2018ರ ಫೆಬ್ರವರಿ ಅಥವಾ ಮಾರ್ಚ್ ಎನ್ನುತ್ತಿದೆ ಚಿತ್ರತಂಡದ ಮೂಲಗಳು. ಅಲ್ಲಿಗೆ 2107ರಲ್ಲಿ ಯಶ್ ಅಭಿನಯದ ಒಂದೇ ಒಂದು ಚಿತ್ರವೂ ಬಿಡುಗಡೆಯಾಗದೆ ದಾಖಲೆ ಸೃಷ್ಟಿಯಾಗಲಿದೆ. ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ರಿಲೀಸ್ ಆಗಿತ್ತು. ಈ ವರ್ಷ ಯಶ್ ಅವರ ಸಿನಿಮಾ ರಿಲೀಸ್ ಆಗದಿದ್ದರೂ, ಕೆಜಿಎಫ್ ಕನಿಷ್ಠ 10 ಚಿತ್ರಗಳಿಗಾಗುವಷ್ಟು ಕುತೂಹಲ ಹುಟ್ಟಿಸಿದೆ.

 • ಯಶ್ ಚಿತ್ರಕ್ಕೆ ರಶ್ಮಿಕಾ ನಾಯಕಿ..?

  is rashmika yash's heroine for next movie

  ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟಿ ರಶ್ಮಿಕಾ ಮಂದಣ್ಣ, ಯಶ್‍ಗೆ ನಾಯಕಿಯಾಗಲಿದ್ದಾರಾ..? ಅಂಥಾದ್ದೊಂದು ಸುದ್ದಿ ಗಾಂದಿನಗರದಲ್ಲಿ ಓಡಾಡುತ್ತಿದೆ. ಈಗಾಗಲೇ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್‍ಮೆಂಟ್ ಮಾಡಿಕೊಂಡಿರುವ ರಶ್ಮಿಕಾ, ಅದಾದ ನಂತರ ಸಣ್ಣದೊಂದು ರಗಳೆಗೆ ಸಿಕ್ಕಿಕೊಂಡಿದ್ದರು. ಟಿವಿ ಶೋವೊಂದರಲ್ಲಿ ಯಶ್ ಅವರನ್ನು ತಮಾಷೆಯಾಗಿ ಶೋಅಫ್ ಎಂದಿದ್ದು, ನಂತರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ತಕ್ಷಣ ಕ್ಷಮೆಯಾಚಿಸಿದ್ದ ರಶ್ಮಿಕಾ, ಅದೇ ಸಂದರ್ಶನದಲ್ಲಿ ಯಶ್ ಬಗ್ಗೆ ಹೇಳಿದ್ದ ಒಳ್ಳೆಯ ಮಾತುಗಳನ್ನೂ ನೆನಪಿಸಿದ್ದರು. ಅಷ್ಟೇ ಅಲ್ಲ, ಯಶ್ ಪ್ರತಿಯೊಬ್ಬ ಕಲಾವಿದರಿಗೂ ಸ್ಫೂರ್ತಿ ಎಂದಿದ್ದರು. ಖುದ್ದು ಯಶ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಅಭಿಮಾನಿಗಳಿಗೆ ಬಿಟ್ಟುಬಿಡಿ ಎಂದು ಹೇಳಿದ ಮೇಲೆಯೇ ಆ ವಿವಾದ ತಣ್ಣಗಾಗಿದ್ದು.

  ಈಗ ರಶ್ಮಿಕಾ, ಯಶ್ ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಕೆಜಿಎಫ್ ಚಿತ್ರದಲ್ಲಿ ಬ್ಯುಸಿಯಾಗಿರುವ ಯಶ್, ನಂತರ ರಾಣಾ ಚಿತ್ರದಲ್ಲಿ ನಟಿಸಲಿದ್ದಾರೆ. ಆ ಚಿತ್ರದ ನಿರ್ದೇಶಕ ಹರ್ಷ.

  ಅಂದಹಾಗೆ ಹರ್ಷ ನಿರ್ದೇಶನದ, ಪುನೀತ್ ರಾಜ್‍ಕುಮಾರ್ ಚಿತ್ರದಲ್ಲಿ ಕೂಡಾ ರಶ್ಮಿಕಾ ನಾಯಕಿ. ಅದೇ ಜೋಡಿ ಕಂಟಿನ್ಯೂ ಆದರೆ ಆಶ್ಚರ್ಯ ಪಡಬೇಕಿಲ್ಲ.

  Related Articles :-

  ಮಿ. ಶೋ ಆಫ್ ಎಂದಿದ್ದ ಕಿರಿಕ್ ರಶ್ಮಿಕಾಗೆ ಯಶ್ ಕೊಟ್ಟ ಉತ್ತರ

  ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ

 • ಯಶ್ ಟೀಕಾಕಾರರಿಗೆ ಪ್ರಥಮ್ ಚಾಲೆಂಜ್

  pratham hits back at yash trollers

  ಕಿಚ್ಚ ಸುದೀಪ್ ಮತ್ತು ಯಶ್ ನಡುವೆ ಉತ್ತಮ ಸ್ನೇಹವಿದೆ. ಸುದೀಪ್‍ರ ಫಿಟ್‍ನೆಸ್ ಚಾಲೆಂಜ್‍ಗೆ ಯಶ್ ವಿಡಿಯೋ ಮಾಡಿ ಕಳಿಸಿದ್ದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಆದರೆ, ಆ ವಿಡಿಯೋದಲ್ಲಿ ಸುದೀಪ್‍ರನ್ನು ಸುದೀಪ್ ಸರ್ ಎನ್ನಬೇಕಿತ್ತು ಎಂದು ಕೆಲವು ಅತಿರೇಕಿ ಅಭಿಮಾನಿಗಳು ರೊಚ್ಚಿಗೆದ್ದುಬಿಟ್ಟಿದ್ದಾರೆ. ಸ್ವತಃ ಸುದೀಪ್, ಯಶ್‍ರನ್ನು ಹಾಗೆಲ್ಲ ಟೀಕಿಸಬೇಡಿ ಎಂದು ಮನವಿ ಮಾಡಿದ್ದರೂ, ಇನ್ನೂ ಕೆಲವರು ಕಂಟಿನ್ಯೂ ಮಾಡ್ತಾನೇ ಇದ್ದಾರೆ. ಅಂತಹವರಿಗೆ ಪ್ರಥಮ್ ಈಗ ಒಂದು ಚಾಲೆಂಜ್ ಹಾಕಿದ್ದಾರೆ.

  ನಿಮಗೆ ಯಶ್‍ರನ್ನು ಕಾಲೆಳೆಯಬೇಕು ಅಂತಿದ್ರೆ, ಒಂದ್ಸಲ ಅವರನ್ನು ತಲೆಯೆತ್ತಿ ನೋಡಿ. ಅವರು ಆಗಲೇ ತುಂಬಾ ಮೇಲಿದ್ದಾರೆ.ಸ್ಸೋ.. ಕೆಳಗೆ ನಿಂತು ಕಲ್ಲೆಸೆಯೋ ಪ್ರಯತ್ನ ಬೇಡ. ಅದು ನಿಮ್ಮ ತಲೆ ಮೇಲೇ ಬೀಳುತ್ತೆ. ಇದು ಪ್ರಥಮ್ ಮಾತು.

  ಅವರನ್ನು ಟೀಕಿಸುವವರು ಮೊದಲು ಅವರು ಏರಿರುವ ಎತ್ತರಕ್ಕೆ ಬೆಳೆಯಲಿ ಎಂದಿದ್ದಾರೆ ಪ್ರಥಮ್.

  Related Articles :-

  ಅಭಿಮಾನಿಗಳ ಅತಿರೇಕ - ಸುದೀಪ್ ಬುದ್ದಿವಾದ

   

 • ಯಶ್ ತೆಲುಗು, ತಮಿಳು, ಹಿಂದಿ ಕಲಿಯೋಕೆ ಕಾರಣ ಇದೇ..

  why did yash lean and speak in all languages

  ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಮೋಷನ್‍ಗೆ ಮುಂಬೈಗೆ ಹೋದಾಗ ಹಿಂದಿಯಲ್ಲಿ, ಹೈದರಾಬಾದ್‍ಗೆ ಹೋದಾಗ ತೆಲುಗಿನಲ್ಲಿ, ಚೆನ್ನೈಗೆ ಹೋದಾಗ ತಮಿಳಿನಲ್ಲಿಯೇ ಮಾತನಾಡಿದ ಯಶ್, ಅಚ್ಚರಿ ಹುಟ್ಟಿಸಿದ್ದರು. ಏಕೆಂದರೆ, ಆರಂಭದ ದಿನಗಳಲ್ಲಿ ಯಶ್‍ಗೆ ಬೇರೆ ಭಾಷೆಗಳು ಬರುತ್ತಿರಲಿಲ್ಲ ಎನ್ನುವುದು ಗುಟ್ಟೇನಲ್ಲ. ಹೀಗಿದ್ದ ಯಶ್, ಇಷ್ಟೂ ಭಾಷೆಗಳನ್ನು ಕಲಿತಿದ್ದು ಹೇಗೆ.. ಅದು ಅನಿವಾರ್ಯತೆ ಮತ್ತು ಉತ್ಸಾಹ.

  ನಮ್ಮ ಚಿತ್ರವನ್ನು ಎಲ್ಲರಿಗೂ ತಲುಪಿಸಬೇಕು. ಎಲ್ಲರಿಗೂ ರೀಚ್ ಮಾಡಿಸಬೇಕು. ಅದು ಆಗಬೇಕೆಂದರೆ, ನಾವು ಎಲ್ಲಿಗೆ ಹೋಗುತ್ತೇವೆಯೋ ಅಲ್ಲಿ.. ಅವರ ಭಾಷೆಯನ್ನೇ ಮಾತನಾಡಬೇಕು. ಆಗ ಅಲ್ಲಿನ ಜನರಿಗೆ ನಾವು ರೀಚ್ ಆಗುತ್ತೇವೆ. ಹೀಗಾಗಿ ನಾನು ಪ್ರಯತ್ನ ಪಟ್ಟೆ. ಆದರೆ, ಮಾತನಾಡಿದಾಗ.. ನಾನು ಇಷ್ಟು ಚೆನ್ನಾಗಿ ಮಾತನಾಡಿದೆನಾ ಎಂದು ನನಗೇ ಅಚ್ಚರಿಯಾಗಿತ್ತು ಅಂತಾರೆ ಯಶ್.

  ಯಶ್ ಅವರ ಎದುರು ಯಾರಾದರೂ ಬೇರೆ ಭಾಷೆ ಮಾತನಾಡಿದರೆ, ಅವರಿಗೆ ಕನ್ನಡ ಗೊತ್ತಿದೆ ಎನ್ನುವುದು ಕೂಡಾ ತಿಳಿದಿದ್ದರೆ.. ಯಶ್ ನೇರವಾಗಿ ಕನ್ನಡದಲ್ಲಿಯೇ ಮಾತನಾಡುವವರು. ನಾವೂ ರಾಜ್ಯದಲ್ಲಿ ಯಾರಾದರೂ ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದರೆ, ಕರ್ನಾಟಕದಲ್ಲಿದ್ದೀರಿ, ಕನ್ನಡ ಮಾತನಾಡಿ ಎಂದು ಮುಲಾಜಿಲ್ಲದೇ ಹೇಳುತ್ತೇವೆ. ಹಾಗೆ ಹೇಳುವವರು ಬೇರೆ ರಾಜ್ಯಕ್ಕೆ ಹೋದಾಗ.. ಅವರ ಭಾಷೆಗೆ ಗೌರವ ಕೊಡಬೇಕಲ್ಲವೆ ಅಂತಾರೆ ಯಶ್.

  ಇದು, ಯಶ್ ಅವರದ್ದಷ್ಟೇ ಅಲ್ಲ, ಕೋಟ್ಯಂತರ ಕನ್ನಡಿಗ ಸ್ವಭಾವವೂ ಹೌದು. ಇದು ಎಷ್ಟೋ ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಕನ್ನಡವನ್ನು ಕಲಿಯದೇ ಇರುವವರಿಗೂ ಅರ್ಥವಾಗಬೇಕು. ಅಷ್ಟೆ.

 • ಯಶ್ ತೋರಿಸಿದ ಆ ಪ್ರೀತಿಯೇ ವಿಶಾಲ್‍ರ ಅಕ್ಕರೆಗೆ ಕಾರಣ

  real reason why vishal is supporting yash's kgf

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್‍ನ್ನು ತಮಿಳುನಾಡಿನಲ್ಲಿ ರಿಲೀಸ್ ಮಾಡಲು ಮುಂದೆ ಬಂದಿರೋದು ತಮಿಳು ಕಲಾವಿದರ ಸಂಘದ ಅಧ್ಯಕ್ಷರೂ ಆಗಿರುವ ವಿಶಾಲ್. ಅವರು ಟಾಲಿವುಡ್‍ನ ಸ್ಟಾರ್ ನಟರೂ ಹೌದು. ನಿರ್ಮಾಪಕರೂ ಹೌದು, ವಿತರಕರೂ ಹೌದು. ಇಷ್ಟಿದ್ದರೂ ಕನ್ನಡ ಚಿತ್ರ ಕೆಜಿಎಫ್ ರಿಲೀಸ್‍ಗೆ ಮುಂದೆ ನಿಲ್ಲೊದಕ್ಕೆ ಕಾರಣವೂ ಇದೆ.

  ನಿಮಗೆ ಚೆನ್ನೈನಲ್ಲಿ ಕಳೆದ ವರ್ಷ ಸಂಭವಿಸಿದ್ದ ಪ್ರಕೃತಿ ವಿಕೋಪ ನೆನಪಿದೆ ತಾನೇ..ಆಗ ಇಡೀ ಚಿತ್ರರಂಗ ಚೆನ್ನೈ ಜನತೆಯ ನೆರವಿಗೆ ಧಾವಿಸಿತ್ತು. ಕರ್ನಾಟಕದಿಂದಲೂ ನೆರವು ಹೋಗಿತ್ತು. ಆಗ ಚೆನ್ನೈಗೆ, ಕರ್ನಾಟಕದಿಂದ ತಲುಪಿದ ಮೊದಲ ನೆರವಿನ ಟ್ರಕ್ ಯಶ್ ಅವರದ್ದಂತೆ. ಆ ಪ್ರೀತಿಗಾಗಿ ಕೆಜಿಎಫ್ ಚಿತ್ರದ ಬಿಡುಗಡೆಗೆ ನಿಂತಿದ್ದೇನೆ ಎಂದಿದ್ದಾರೆ ವಿಶಾಲ್.

  ಒಂದು ನೆರವು.. ಒಂದು ಸಹಾಯ.. ಒಂದು ಅಂತಃಕರಣ.. ಹೇಗೆಲ್ಲ ಗೆಳೆಯರನ್ನು ಸಂಪಾದನೆ ಮಾಡಿಕೊಡುತ್ತೆ.. ಅಲ್ವಾ..?

 • ಯಶ್ ಮನೆಯ ದೊಡ್ಡ ಮಗು ಹುಟ್ಟುಹಬ್ಬ

  radhika pandit's birthday celebrations

  ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಬ್ಬರು ಮಕ್ಕಳು. ಮೊದಲ ಮಗುವಿಗೆ ವರ್ಷ ತುಂಬಿದೆ. 2ನೇ ಮಗುವಿನ ವಯಸ್ಸಿನ್ನೂ ವರ್ಷ ದಾಟಿಲ್ಲ. ಆದರೆ.. ಅವರ ಮನೆಯ ದೊಡ್ಡ ಮಗುವಿಗೆ 36 ವರ್ಷ. ಆ ಮಗು ಇನ್ಯಾರೂ ಅಲ್ಲ, ಯಶ್ ಅವರ ಪತ್ನಿ ರಾಧಿಕಾ ಪಂಡಿತ್.

  ಮಾರ್ಚ್ 7ರಂದು ಹುಟ್ಟುಹಬ್ಬ ಆಚರಿಸಿಕೊಂಡಿರುವ ರಾಧಿಕಾ ಪಂಡಿತ್ ಅವರಿಗೆ ಯಶ್ ವಿಶ್ ಮಾಡಿರುವುದು ಹೀಗೆ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಫೋಟೋ ಹಾಕಿ ನಮ್ಮ ಮನೆಯ ದೊಡ್ಡ ಮಗುವಿಗೆ ಹುಟ್ಟುಹಬ್ಬವ ಶುಭಾಶಯ ಎಂದಿದ್ದಾರೆ ಯಶ್.

 • ಯಶ್ ಮುಂದಿನ ಸಿನಿಮಾ ಫಿಕ್ಸ್..!

  yash next film with rambo 2 director

  ರಾಕಿಂಗ್ ಸ್ಟಾರ್ ಯಶ್‍ರ ಹೊಸ ಸಿನಿಮಾ ಯಾವುದು..? ಕೆಜಿಎಫ್ ಮುಗಿದ ಮೇಲೆ ಯಾವ ಸಿನಿಮಾ ಮಾಡ್ತಾರೆ..? ಕಥೆ ಏನು..? ಡೈರೆಕ್ಟರ್ ಯಾರು..? ಹೀಗೆ ಹಲವಾರು ಪ್ರಶ್ನೆಗಳು ಕಾಡುತ್ತಲೇ ಇವೆ. ಈಗ ಆ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿದೆ. ಯಶ್ ಅವರ ಹೊಸ ಸಿನಿಮಾದ ಡೈರೆಕ್ಟರ್ ಅನಿಲ್ ಕುಮಾರ್.

  ರ್ಯಾಂಬೋ2 ಮೂಲಕ ಚುಟುಚುಟು ಮ್ಯಾಜಿಕ್ ಸೃಷ್ಟಿಸಿದ ಅನಿಲ್, ಯಶ್ ಅವರಿಗೆ ಈಗಾಗಲೇ ಕಥೆ ಹೇಳಿದ್ದಾರಂತೆ. ಯಶ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಅನಿಲ್ ಕುಮಾರ್, ಯಶ್‍ಗೆ ಹೊಸಬರೇನಲ್ಲ. ಯಶ್ ಟೀಂನಲ್ಲೇ ಇದ್ದ ಸದಸ್ಯ. ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಅನಿಲ್, ಈಗ ಯಶ್ ಅವರಿಗೆ ಆ್ಯಕ್ಷನ್ ಕಟ್ ಹೇಳೋಕೆ ಸಿದ್ಧರಾಗುತ್ತಿದ್ದಾರೆ.

 • ಯಶ್ ರಾಜಕೀಯದ ಮಾತು

  yash talks about politics

  ಎಲೆಕ್ಷನ್ ಹತ್ತಿರ ಬಂದಿರುವ ಈ ಹೊತ್ತಿನಲ್ಲಿ ಯಶ್ ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅದು ಮತದಾರರು, ರಾಜಕಾರಣಿಗಳು ಎಲ್ಲರಿಗೂ ಎಚ್ಚರಿಕೆ ಗಂಟೆಯೂ ಹೌದು.ಜನಪ್ರತಿನಿಧಿಗಳಷ್ಟೆ ಅಲ್ಲ, ಜನರೂ ಪ್ರಾಮಾಣಿಕರಾಗಿರಬೇಕು.

  ಹಣ ಇದ್ದರೆ, ಚುನಾವಣೆ ಗೆಲ್ಲಬಹುದು ಎಂಬ ಜನಪ್ರತಿನಿಧಿಗಳ ನಂಬಿಕೆಯನ್ನು ಮೊದಲು ನಾವು ಸುಳ್ಳು ಮಾಡಬೇಕು. ಎಲೆಕ್ಷನ್ ಹತ್ತಿರ ಬಂದಿರುವ ಈ ಹೊತ್ತಿನಲ್ಲೂ ಯಾವ ರಾಜಕಾರಣಿಯೂ ನಾನು ಇಂತಿಂತಹ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಿಲ್ಲ. ಬದಲಿಗೆ ಅವರು ಇಷ್ಟು ಹಗರಣ ಮಾಡಿದ್ರು. ಇವರು ಈ ಹಗರಣ ಮಾಡಿದ್ರು ಎನ್ನುತ್ತಿದ್ದಾರೆ. ತನ್ನ ಕ್ಷೇತ್ರದ ಬಗ್ಗೆ ಬದ್ಧತೆಯಿಂದ ಮಾತನಾಡಿದ ರಾಜಕಾರಣಿ ನನ್ನ ಕಣ್ಣಿಗೆ ಬಿದ್ದಿಲ್ಲ.ದೊಡ್ಡ ದೊಡ್ಡ ಪ್ರಾಜೆಕ್ಟುಗಳ ಬಗ್ಗೆ ಮಾತನಾಡುವುದಕ್ಕಿಂತ, ಈಗಲೂ ಜನರ ಕೈಗೆ ಸಿಗದೇ ಇರುವ ರಸ್ತೆ, ಕೆರೆ, ಶಿಕ್ಷಣ, ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸುವವರಿಗೆ ನಾವು ಆದ್ಯತೆ ಕೊಡೋಣ.

  ಆದರೆ, ಇವುಗಳನ್ನು ಬಿಟ್ಟು, ಜಾತಿ, ಧರ್ಮಗಳ ಬಗ್ಗೆಯಷ್ಟೇ ಮಾತನಾಡುವುದನ್ನು ನೋಡಿದರೆ, ಬೇಸರ ಹುಟ್ಟುತ್ತೆ.ಜನಪ್ರತಿನಿಧಿಗಳನ್ನು ಮನೆಯ ಮದುವೆ, ತಿಥಿ, ಸಾವುಗಳಿಗೆ ಕರೆಯೋದನ್ನು ನಾವು ಬಿಡಬೇಕು. ವೈಯಕ್ತಿಕ ಕೆಲಸಗಳಿಗೆ ಅಂಗಲಾಚುವುದನ್ನು ಬಿಡಬೇಕು. ಹಾಗೆ ಕರೆಯುವವರೆಗೆ ಅವರು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ.

  ಇವರ ಮನೆ ಸಮಾರಂಭಗಳಿಗೆ ಹೋಗಿ ಬಂದರೆ ಸಾಕು ಎಂದು ಜನಪ್ರತಿನಿಧಿಗಳು ಅಂದುಕೊಂಡುಬಿಡ್ತಾರೆ.ಪ್ರಚಾರ ಮಾಡಬೇಕೋ ಬೇಡವೋ ನಿರ್ಧರಿಸಿಲ್ಲ.ನಾನು ಯಾರ ಪರವಾದರೂ ಪ್ರಚಾರ ಮಾಡಿದರೆ, ನಾಳೆ ಆತನನ್ನು ಪ್ರಶ್ನಿಸುವ ಅಧಿಕಾರವೂ ನನಗೆ ಬೇಕು. ಅದು ಸಾಧ್ಯವಿಲ್ಲದಿದ್ದರೆ, ನಾನು ಪ್ರಚಾರ ಮಾಡುವುದೂ ಸಾಧ್ಯವಿಲ್ಲ.

  ಇದು ಯಶ್ ಅವರ ರಾಜಕೀಯದ ಮಾತುಗಳು.

 • ಯಶ್ ರಾಧಿಕಾ ಜೋಡಿಯಾಗಿ ವರ್ಷವಾಯ್ತು - ಲೇಟೆಸ್ಟು ಬಂಧನಕ್ಕೆ 1 ವರ್ಷ

  yash radhika image

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಾಗಿ ವರ್ಷವಾಗಿ ಹೋಯ್ತಾ..? ಇದು ಅಭಿಮಾನಿಗಳಿಗೂ ಅಚ್ಚರಿ. ಆ ಅಚ್ಚರಿಯ ಕ್ಷಣವನ್ನು ಶ್ರೀಮತಿ ರಾಧಿಕಾ ನೆನಪಿಸಿಕೊಂಡಿದ್ದನ್ನು ನೋಡಿ  ಅಭಿಮಾನಿಗಳು ಪುಳಕಗೊಂಡಿದ್ದಾರೆ. 

  ಈ ಜೋಡಿ ಮದುವೆಯಾಗಿ 8 ತಿಂಗಳಷ್ಟೇ ಆಗಿರೋದು.ಆದರೆ, ನಿಶ್ಚಿತಾರ್ಥವಾಗಿ ಒಂದು ವರ್ಷವಾಗಿದೆ. ಕಳೆದ ವರ್ಷ ಆಗಸ್ಟ್ 12ರಂದು ಯಶ್ ಮತ್ತು ರಾಧಿಕಾ ಅವರಿಬ್ಬರ ಪ್ರೀತಿಯ ಬಂಧನಕ್ಕೆ ನಿಶ್ಚಿತಾರ್ಥದ ಉಂಗುರದ ಮುದ್ರೆ ಬಿದ್ದಿತ್ತು. ಆ ಸಂಭ್ರಮ ಕ್ಷಣಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ.

  ವರ್ಷವಾಯಿತು. ಆ ನಗು, ಆ ಸಂಭ್ರಮ, ಆ ನಸುನಗೆ, ಆ ಹೂವಿನ ಪರಿಮಳ, ಕೇಕ್‌ನ ಸ್ವಾದ, ಸಂಭ್ರಮದ ಪುಳಕ, ತಳಮಳಗೊಂಡ ಕ್ಷಣಗಳನ್ನೂ ಇನ್ನೂ ಮರೆತಿಲ್ಲ ಎಂದಿದ್ದಾರೆ ರಾಧಿಕಾ. ಅವರ ಪ್ರೀತಿ ನೂರ್ಕಾಲ ಬಾಳಲಿ.

 • ಯಶ್ ಸಂದರ್ಶನದಲ್ಲಿ ಬಕಾಸುರ ಹೇಳಿದ ಅಪ್ಪು ಸ್ಟೋರಿ

  buckaasura interview

  ಬಕಾಸುರ ಚಿತ್ರ.. ಬಿಡುಗಡೆಗೆ ಮೊದಲೇ ಕುತೂಹಲ ಹುಟ್ಟಿಸಿರುವುದು ಹಲವಾರು ಕಾರಣಗಳಿಗೆ. ಮೊದಲನೇ ಕಾರಣ, ಇದೇ ಚಿತ್ರತಂಡದ ಮೊದಲ ಸಿನಿಮಾ ಕರ್ವ. ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಬಂದಿದ್ದ ಚಿತ್ರತಂಡ, 2ನೇ ಬಾರಿಗೂ ಅಂತಹುದೇ ಸಬ್ಜೆಕ್ಟ್ ಎತ್ತಿಕೊಂಡಿದೆ. ಚಿತ್ರದಲ್ಲಿರೋದು ದುಡ್ಡಿನ ಕಥೆ.

  ಚಿತ್ರದ ಹೀರೋ ರೋಹಿತ್. ಆರ್‍ಜೆಯಾಗಿದ್ದವರು. ಇವರನ್ನು ಬಕಾಸುರ ಚಿತ್ರಕ್ಕಾಗಿ ಸಂದರ್ಶನ ಮಾಡಿರುವುದು ರಾಕಿಂಗ್ ಸ್ಟಾರ್ ಯಶ್. ಚಿತ್ರದಲ್ಲಿ ಹೀಗೆ ದಿಗ್ಗಜರ ಸಮಾಗಮವೇ ಇದೆ. ಚಿತ್ರದಲ್ಲಿ ಪಾತ್ರಗಳನ್ನು ಹಿನ್ನೆಲೆ ಧ್ವನಿಯಲ್ಲಿ ಪರಿಚಯಿಸಿರುವುದು ಇಬ್ಬರು ಸ್ಟಾರ್‍ಗಳು. ಒಬ್ಬರು ಶಿವರಾಜ್ ಕುಮಾರ್. ಮತ್ತೊಬ್ಬರು ಯಶ್.

  ಹೀಗೆ ಹೀರೋನನ್ನು ಪರಿಚಯಿಸುವ ಚಿತ್ರದ ನಾಯಕ ರೋಹಿತ್ ಅವರನ್ನು ಸಂದರ್ಶನ ಮಾಡಿರುವುದೇ ವಿಶೇಷ. ಈ ಸಂದರ್ಶನದಲ್ಲಿ ನಾಯಕ ರೋಹಿತ್ ತಾವು ನಾಯಕರಾಗಿದ್ದು ಏಕೆ ಮತ್ತು ಹೇಗೆ ಅನ್ನೋದನ್ನ ಬಾಯ್ಬಿಟ್ಟಿದ್ದಾರೆ.

  ಆರ್‍ಜೆಯಾಗಿರುವ ರೋಹಿತ್ ಅವರಿಗೆ ನೀವ್ಯಾಕೆ ಆ್ಯಕ್ಟ್ ಮಾಡಬಾರದು ಎಂದು ಮೊದಲು ಕೇಳಿದ್ದೇ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ಸಮಾಜಸೇವೆಯನ್ನೇ ಧ್ಯೇಯವಾಗಿಟ್ಟುಕೊಂಡಿರುವ ರೋಹಿತ್, ಅಲ್ಲಿಗೆ ಹೋಗೋಕೆ ಇದೊಂದು ವೇದಿಕೆ ಎನ್ನುತ್ತಾರೆ. ಅಪ್ಪು ಸರ್ ಹೇಳಿದ ಮೇಲೆ ಅದರ ಬಗ್ಗೆ ಸೀರಿಯಸ್ಸಾಗಿ ಯೋಚನೆ ಮಾಡಿದೆ. ಅದರ ಫಲವೇ ಬಕಾಸುರ.

  ಚಿತ್ರದಲ್ಲಿ ಹಣದಾಸೆ ಇರುವ ವಕೀಲನಾಗಿ ನಟಿಸಿರುವ ರೋಹಿತ್‍ಗೆ ಎದುರು ನಟಿಸಿರುವುದು ಕ್ರೇಜಿಸ್ಟಾರ್ ರವಿಚಂದ್ರನ್. 

   

 • ಯಶ್ ಹುಟ್ಟುಹಬ್ಬವೂ ಈ ಬಾರಿ ದಾಖಲೆ..!

  5000 kg cak to be prepared for yash's borthday

  ಜನವರಿ 8. ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಕನ್ನಡ ಚಿತ್ರರಂಗದಲ್ಲಿ ಒಂದರ ಹಿಂದೊಂದು ದಾಖಲೆ ಬರೆಯುತ್ತಿರುವ ಯಶ್, ಈಗ ಮತ್ತೊಂದು ವಿಶ್ವದಾಖಲೆ ಬರೆಯಲು ರೆಡಿಯಾಗಿದ್ದಾರೆ. ಆದರೆ, ಈ ಬಾರಿ ಯಶ್ ಅವರಿಗೆ ದಾಖಲೆ ಬರೆಯುತ್ತಿರುವುದು ಅವರ ಅಭಿಮಾನಿಗಳು.

  ಯಶ್ ಅವರ ಡೈ ಹಾರ್ಡ್ ಫ್ಯಾನ್ ವೇಣು ಗೌಡ, ತಮ್ಮ ಪ್ರೀತಿಯ ರಾಮಾಚಾರಿ ಹುಟ್ಟುಹಬ್ಬಕ್ಕೆ 5 ಸಾವಿರ ಕೆಜಿ ಕೇಕ್ ಮಾಡಿಸುತ್ತಿದ್ದಾರೆ. ಇದು ಪ್ರಪಂಚದ ಅತಿ ದೊಡ್ಡ ಕೇಕ್ ಆಗಲಿದೆ ಎನ್ನುವುದು ವಿಶೇಷ. ಬೆಂಗಳುರಿನ ನಾಯಂಡಹಳ್ಳಿ ಬಳಿ ಪಂತರಪಾಳ್ಯ ಸಮೀಪ ನಂದಿ ಲಿಂಕ್ಸ್ ಗ್ರೌಂಡ್ ಇದೆ. ಆ ಮೈದಾನದಲ್ಲಿ ಯಶ್ ಹುಟ್ಟುಹಬ್ಬ ನೆರವೇರಲಿದೆ. ಈ ಮೂಲಕ ಅತಿ ದೊಡ್ಡ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ವಿಶ್ವದ ಮೊದಲ ಸೆಲಬ್ರಿಟಿಯಾಗಲಿದ್ದಾರೆ ಯಶ್.

  ಅಂದಹಾಗೆ ಹುಟ್ಟುಹಬ್ಬ ಇರೋದು ಜನವರಿ 8ಕ್ಕೆ. ಆದರೆ, ಅಭಿಮಾನಿಗಳು ಜನವರಿ 7ರಂದು ಮಧ್ಯರಾತ್ರಿ 12ಕ್ಕೆ ಯಶ್ ಹುಟ್ಟುಹಬ್ಬ ಆಚರಿಸಲಿದ್ದಾರೆ.

 • ಯಶ್, ಅಪ್ಪು ಸಿನಿಮಾಗೆ ಕಿಚ್ಚನ ಪಟಾಕಿ

  sudeep wishes good luck to kgf and natasarvabhouma

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ, ಜನವರಿಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ವರ್ಷದ ಕೊನೆಯಲ್ಲಿ ಯಶ್ ಅಭಿನಯದ ಕೆಜಿಎಫ್ ಬರಲಿದೆ. ಸ್ಸೋ.. ಬೆಳ್ಳಿತೆರೆಯ ಮೇಲೆ ವರ್ಷವಿಡೀ ದೀಪಾವಳಿ ಎಂಬರ್ಥದಲ್ಲಿ ಸುದೀಪ್ ಟ್ವೀಟ್ ಮಾಡಿದ್ದರು.

  ಅಂದಹಾಗೆ ಆಯುಧಪೂಜೆಯಲ್ಲಿ ಶುರುವಾದ ಚಿತ್ರರಂಗದ ಹಬ್ಬ.. ದೀಪಾವಳಿ ನಂತರವೂ ಸದ್ದು ಮಾಡುತ್ತಲೇ ಇದೆ. ದಿ ವಿಲನ್ ಸಿನಿಮಾದಿಂದ ಶುರುವಾದ ಸ್ಟಾರ್ ಸಿನಿಮಾಗಳ ಕ್ರೇಜ್ ಹಾಗೆಯೇ ಮುಂದುವರಿಯುತ್ತಿದೆ. ಸುದೀಪ್ ಹಾರೈಕೆ ನಿಜವಾಗಿ ರಿಲೀಸ್ ಆದ ಸಿನಿಮಾಗಳೆಲ್ಲವೂ ಸಕ್ಸಸ್ ಕಾಣಲಿ.

  ಅಂದಹಾಗೆ ನಟಸಾರ್ವಭೌಮ ಚಿತ್ರದ ಡಬ್ಬಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಾಗಿ ನಡೆಯುತ್ತಿವೆ. 

  ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರು. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ನಟಿಸಿರುವ ಸಿನಿಮಾ ನಟಸಾರ್ವಭೌಮ.

 • ಯಶ್, ರಾಧಿಕಾ ಪಂಡಿತ್ ಈಗ ಇಬ್ಬರಲ್ಲ.. ಮೂವರು..!

  yash and radhika pandit shres good news with fans

  ಯಶ್ ಮತ್ತು ರಾಧಿಕಾ ಪಂಡಿತ್ ದಾಂಪತ್ಯ ಜೀವನದಲ್ಲೀಗ ಸಂಭ್ರಮ, ಸಡಗರದ ಸಮಯ. ಇಬ್ಬರು ಈಗ ಮೂವರಾಗುತ್ತಿದ್ದಾರೆ. ಯಶ್ ತಾಯಿಯಾಗುತ್ತಿದ್ದಾರೆ. ಮದುವೆಯಾದ ಒಂದೂವರೆ ವರ್ಷದ ನಂತರ ಸಿಹಿ ಸುದ್ದಿ ಕೊಟ್ಟಿದ್ದಾರೆ ರಾಧಿಕಾ.

  ತಂದೆಯಾಗುತ್ತಿರುವ ಸಂತೋಷವನ್ನು ಯಶ್ ವಿಶೇಷವಾಗಿ ಸೆಲಬ್ರೇಟ್ ಮಾಡಿದ್ದಾರೆ. ವೈಜಿಎಫ್ ಅನ್ನೋ ಪುಟ್ಟದೊಂದು ವಿಡಿಯೋ ರೆಡಿ ಮಾಡಿಬಿಟ್ಟಿರುವ ಯಶ್, ವೈಜಿಎಫ್‍ನ ಅರ್ಥ ವಿವರಿಸಿದ್ದಾರೆ. ವೈ ಅಂದ್ರೆ ಯಶ್, ಜಿ ಅಂದ್ರೆ ಗೋಯಿಂಗ್ ಟು ಬಿ, ಎಫ್ ಅಂದ್ರೆ ಫಾದರ್. ಡಿಸೆಂಬರ್‍ನಲ್ಲಿ ಸ್ಟಾರ್ ದಂಪತಿ ಮಡಿಲು ತುಂಬೋಕೆ ಮಗನೋ, ಮಗಳೋ ಬರಲಿದ್ಧಾರೆ.

  Related Articles :-

  Radhika Pandit Announces Birth Of Child 

 • ಯಶ್-ದರ್ಶನ್ ಹಾವು ಮುಂಗುಸಿಯಂತಿದ್ರಾ..? - ಅವರೇ ಕೊಟ್ಟ ಉತ್ತರ ಇಲ್ಲಿದೆ ನೋಡಿ

  we are friends says yash and darshan

  ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್.. ಇಬ್ಬರ ಫ್ಯಾನ್ಸ್ ಮಧ್ಯೆ ಡೈಲಾಗುಗಳ ಸಮರ, ಆನ್‍ಲೈನ್ ಹೋರಾಟ ಸದಾ ಜಾರಿಯಲ್ಲಿತ್ತು. ಆ ಎಲ್ಲ ಸಮರಗಳಿಗೆ ಏಕಾಏಕಿ ಬ್ರೇಕ್ ಹಾಕಿದ್ದಾರೆ ಇಬ್ಬರೂ ನಟರು.

  ನಾವೇನೋ ಹಾವು ಮುಂಗುಸಿ ತರಾ ಕಿತ್ತಾಡ್ಕೊಂಡಿರ್ತಿದ್ವು. ಈಗ ಒಂದಾಗಿ ಬಂದ್ಬುಟ್ಟವ್ರೆ ಅಂತಾರೆ. ಸ್ವಾಮಿ.. ನಾವು ನಮ್ಮ ಹೊಟ್ಟೆಪಾಡು ನೋಡ್ಕೊತಿದ್ದೋ. ಇಲ್ಲಿಂದ ಬೆಂಗಳೂರಿಗೆ ಹೋಗಿ ಬದುಕು ಕಟ್ಟಿಕೊಳ್ತಿದ್ವು. ಅನುಕೂಲಕ್ಕಾಗಿ.. ರಾತ್ರೋರಾತ್ರಿ ಬದಲಾಗುವವರು ನಾವಲ್ಲ ಎಂದು ಉತ್ತರ ಕೊಟ್ಟಿದ್ದಾರೆ ಯಶ್.

  ಯಶ್ ಮಾತಿಗೆ ಪ್ರತಿಕ್ರಿಯೆ ಕೊಟ್ಟ ದರ್ಶನ್ ಹೇಳಿದ್ದಿಷ್ಟೆ, ನಮ್ ಹೀರೋ ಹೇಳಿದ್ದು ಅರ್ಥವಾಯ್ತಾ. ಅಷ್ಟೆ. ನಾವು ಚೆನ್ನಾಗಿದ್ದೇವೆ ಎಂದಿದ್ದಾರೆ ದರ್ಶನ್.

 • ಯಶ್-ರಾಧಿಕಾ ಪಂಡಿತ್‍ಗೆ ಅಂಬಿ ತಾತನ ಒಲವಿನ ಉಡುಗೊರೆ

  ambi's special gift to yash and radhika's daughter

  ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಗಳಿಗೆ ರೆಬಲ್‍ಸ್ಟಾರ್ ಅಂಬರೀಶ್, ವಿಶೇಷ ಗಿಫ್ಟ್ ಕೊಟ್ಟಿದ್ದಾರೆ. ಅದು ಬೇರೇನಲ್ಲ.. ಸಾಗುವಾನಿ ಮರದ ತೊಟ್ಟಿಲು. ಯಶ್, ರಾಧಿಕಾ ದಂಪತಿ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದ ಅಂಬಿ ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮವೇ ರಾಧಿಕಾ ಪಂಡಿತ್ ಸೀಮಂತ.

  ಹಾಗೆ ಬಂದು ದಂಪತಿಗೆ ಹಾರೈಸಿ ಹೋದ ಅಂಬಿ, ಒಂದು ಉಡುಗೊರೆ ಸಿದ್ಧ ಮಾಡಿದ್ದರು. ಸುಮಲತಾ ಅವರಿಗೂ ಗೊತ್ತಿಲ್ಲದಂತೆ ಬೆಳಗಾವಿಯ ಕಲಘಟಗಿಯಲ್ಲಿ ವಿಶೇಷ ತೊಟ್ಟಿಲೊಂದನ್ನು ಮಾಡಿಸಿದ್ದರು. ಅದೂ ಅಂತಿಂಥಾ ತೊಟ್ಟಿಲಲ್ಲ. ಸಾಗುವಾನಿ ಮರದಿಂದಲೇ ಮಾಡುವ, 100 ವರ್ಷ ಬಣ್ಣ ಹಾಳಾಗದ ವಿಶೇಷ ತೊಟ್ಟಿಲು. ಬೆಲೆ ಒಂದೂವರೆ ಲಕ್ಷಕ್ಕೂ ಹೆಚ್ಚು. ಕಲಘಟಗಿಯ ನಾರಾಯಣ ಕಲಾಲ್ ಎಂಬುವವರಿಗೆ ಹೇಳಿದ್ದರಂತೆ ಅಂಬಿ. ಅವರು ಕಲಘಟಗಿಯ ಹೆಸರುವಾಸಿ ತೊಟ್ಟಿಲು ಕಲಾವಿದ ಶ್ರೀಧರ್ ಸಾಹುಕಾರ್ ಎಂಬುವವರಿಗೆ ಹೇಳಿ ತೊಟ್ಟಿಲು ಮಾಡಿಸಿದ್ದರಂತೆ. 

  ಸುಮಲತಾ ಅವರ ವಾಟ್ಸಪ್ ನಂಬರ್‍ಗೆ ಆ ತೊಟ್ಟಿಲಿನ ಚಿತ್ರ ಬಂದಾಗ ಅಚ್ಚರಿಗೊಳಗಾದ ಸುಮಲತಾ, ನಂತರ ಯಶ್‍ಗೆ ಫೋನ್ ಮಾಡಿ ಅಂಬಿ ಸ್ವರ್ಗದಿಂದಲೇ ನಿಮ್ಮ ಮಗುವಿಗೆ ತೊಟ್ಟಿಲು ಕಾಣಿಕೆ ಕೊಟ್ಟಿದ್ದಾರೆ. ನಿಮ್ಮ ಮಗಳು ಅದೃಷ್ಟವಂತೆ ಎಂದಿದ್ದಾರೆ. ಯಶ್ ಕೂಡಾ ಭಾವುಕರಾಗಿದ್ದಾರೆ.

 • ಯಶ್-ರಾಧಿಕಾ ಸುದ್ದಿಗೋಷ್ಟಿಯಲ್ಲಿ ಅತಿ ಹೆಚ್ಚು ಮಾತನಾಡಿದ್ದು ಐರಾ..!

  ayra grabs main attention during yash radhika's pressmeet

  ಅಕ್ಟೋಬರ್ 30ರಂದು 2ನೇ ಮಗುವಿಗೆ ಜನ್ಮ ನೀಡಿದ್ದ ರಾಧಿಕಾ ಪಂಡಿತ್, ಪತಿ ಯಶ್ ಅವರೊಂದಿಗೆ ಸುದ್ದಿಗೋಷ್ಟಿ ನಡೆಸಿ, ಮಗುವಿನ ಆರೋಗ್ಯದ ಮಾಹಿತಿ ನೀಡಿದ್ದಾರೆ. ನಟ ಯಶ್ ಅವರಂತೂ ‘ದೇವರ ದಯೆ, ಅಮ್ಮ, ಮಗು ಸೂಪರ್ ಆಗಿದ್ದಾರೆ. ಎರಡನೇ ಮಗುವಾಗಿದ್ದರಿಂದ ಸ್ವಲ್ಪ ಅನುಭವವೂ ಇತ್ತು. ನನ್ನ ಆಸೆಯಂತೆ ಹೆಣ್ಣು ಮತ್ತು ರಾಧಿಕಾ ಆಸೆಯಂತೆ ಗಂಡು ಮಗುವಾಗಿದೆ. ಅಕ್ಟೋಬರ್ 10ರಿಂದ ಯಾವುದೇ ಶೂಟಿಂಗ್‌ ಮಾಡಿಲ್ಲ. ರಜೆಯಲ್ಲಿದ್ದೆ. ರಾಧಿಕಾಗೆ ಪ್ರಾಮಿಸ್ ಮಾಡಿದ್ದೆ. ಅದರಂತೆ ತುಂಬಾ ಹೊತ್ತು ರಾಧಿಕಾ ಜೊತೆಯಲ್ಲಿದ್ದೆ. ಎರಡು ಮಕ್ಕಳ ಜನನದ ಹೊತ್ತಿನಲ್ಲೂ ನಾನು ಆಪರೇಷನ್ ಥಿಯೇಟರಿನಲ್ಲಿದ್ದೆ ಎಂದಿದ್ದಾರೆ.

  ರಾಧಿಕಾ ಪಂಡಿತ್ ಮಾತನಾಡಿ ‘ಒಂಭತ್ತು ತಿಂಗಳು ಹೊತ್ತು ಜನ್ಮ ಕೊಟ್ಟರೂ ಇಬ್ಬರೂ ಮಕ್ಕಳು ಯಶ್ ರೀತಿಯಲ್ಲೇ ಇದ್ದಾರೆ. ನನ್ನ ರೀತಿ ಇಲ್ಲ’ ಎಂದು ಜೋಕ್ ಮಾಡಿದರು. ಶುಭಾಶಯ ಕೋರಿದವರಿಗೆ ಧನ್ಯವಾದ ತಿಳಿಸಿದರು. ನಾಮಕರಣ ಸದ್ಯಕ್ಕಿಲ್ಲ.

  ಡಾಕ್ಟರ್ ಸ್ವರ್ಣಲತಾ ಮಗುವಿನ ಆರೋಗ್ಯ ಚೆನ್ನಾಗಿದೆ. ತೂಕ, ಬೆಳವಣಿಗೆ ಚೆನ್ನಾಗಿದೆ ಎಂದು ತಿಳಿಸಿದರೆ, ಡಾ. ಶ್ರೀನಾಥ್ ವೈದ್ಯರು ಹೇಳಿದ ಪ್ರತಿಯೊಂದನ್ನೂ ಚಾಚೂತಪ್ಪದೆ ಪಾಲಿಸಿದ ಯಶ್-ರಾಧಿಕಾ ದಂಪತಿಗೆ ಆದರ್ಶ ತಂದೆ ತಾಯಿ ಎಂದು ಕರೆದರು.

  ಆದರೆ, ಇಡೀ ಸುದ್ದಿಗೋಷ್ಟಿಯುದ್ದಕ್ಕೂ ಅತಿ ಹೆಚ್ಚು ಮಾತನಾಡಿದ್ದು ಮಗಳು ಐರಾ. ಎಲ್ಲರೂ ಮಾತನಾಡುತ್ತಿರುವಾಗ ಪುಟ್ಟ ಕಂದ ತಂತಾನೇ ಆ..ಊ.. ಎಂದುಕೊಂಡು ಮುದ್ದು ಮುದ್ದಾಗಿ ಉಲಿಯುತ್ತಲೇ ಇತ್ತು. ಮಗು ಮುದ್ದಾಗಿದೆ.

Shivarjun Movie Gallery

KFCC 75Years Celebrations and Logo Launch Gallery