` yash, - chitraloka.com | Kannada Movie News, Reviews | Image

yash,

 • ಜೋಡೆತ್ತು'ನಲ್ಲಿ ನಾನಿಲ್ಲ - ಯಶ್

  will not act in jodettu says yash

  ಜೋಡೆತ್ತು ಚಿತ್ರದ ಟೈಟಲ್‍ನ್ನು ಮೆಜೆಸ್ಟಿಕ್ ರಾಮಮೂರ್ತಿ ದರ್ಶನ್ ಅವರಿಗಾಗಿಯೇ ಪಡೆದಿರುವುದು ಗೊತ್ತಿದೆ ತಾನೇ. ಆದರೆ, ಆ ಚಿತ್ರದಲ್ಲಿ ತಾನು ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಯಶ್. ದರ್ಶನ್ ನನ್ನ ಸೀನಿಯರ್ ನಟ. ಒಳ್ಳೆಯ ಕಥೆ ಸಿಕ್ಕರೆ ಅವರ ಜೊತೆ ನಟಿಸಬೇಕು ಎಂದುಕೊಂಡಿದ್ದೇನೆ ಎಂದಿರುವ ಯಶ್, ಜೋಡೆತ್ತು ಚಿತ್ರದಲ್ಲಿ ನಾನಿಲ್ಲ ಎಂದಿದ್ದಾರೆ.

  ಅಷ್ಟೇ ಅಲ್ಲ, ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರತಂಡಕ್ಕೂ ಶುಭ ಹಾರೈಸಿದ್ದಾರೆ.

 • ಜ್ಯೂ. ಯಶ್ ಹವಾ

  jr yash's photo revealed

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರ ಹೇಗಿದ್ದಾನೆ..? ಐರಾಳ ತಮ್ಮ ನೋಡೋಕೆ ಐರಾಳಂತೆಯೇ ಮುದ್ದು ಮುದ್ದಾಗಿದ್ದಾನಾ..? 6 ತಿಂಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ `ರಾಯ' ದಂಪತಿ.

  `ನನ್ನ ಕಣ್ಣಿಗೆ ಇವನು ಸೇಬಿನ ಹಣ್ಣು. ಮನೆಯವರ ಕಣ್ಣಿಗೆ ಕಾಮನಬಿಲ್ಲು. ಖಂಡಿತವಾಗಿಯೂ ಅಮ್ಮನ ಮಗ. ಪುಟಾಣಿ ಜ್ಯೂನಿಯರ್ ಇಲ್ಲಿದ್ದಾನೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರಲಿ' ಇದು ರಾಧಿಕಾ ಪಂಡಿತ್ ಅವರ ಪುಟ್ಟ ಬರಹ.

 • ಝೀರೋ ಶಾರೂಕ್ ಎದುರು ಗೆದ್ದ ಕೆಜಿಎಫ್

  kgf wins box office battle

  ಕೆಜಿಎಫ್ ಅಬ್ಬರಿಸುತ್ತಿದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಮತ್ತು ವಿಮರ್ಶಕರು.. ಹೀಗೆ ಎರಡು ವಲಯಗಳಿಂದಲೂ ಮೆಚ್ಚುಗೆ ಗಳಿಸಿರುವ ಚಿತ್ರ ಕೆಜಿಎಫ್. ದೇಶಾದ್ಯಂತ ಭಾರಿ ಮೆಚ್ಚುಗೆ ಗಳಿಸಿದೆ. ಥಿಯೇಟರುಗಳ ಗಳಿಕೆಯಲ್ಲೂ ದೂಳೆಬ್ಬಿಸಿದೆ ಕೆಜಿಎಫ್.

  ಮೂಲಗಳ ಪ್ರಕಾರ, ಕೆಜಿಎಫ್‍ನ ಗಳಿಕೆ 30 ಕೋಟಿ ದಾಟಿದೆ. ಇದು ಕೇವಲ ಕನ್ನಡದ ಕೆಜಿಎಫ್ ಗಳಿಕೆಯಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್‍ಗಳ ಒಟ್ಟು ಲೆಕ್ಕಾಚಾರ. 

  ಕನ್ನಡದಲ್ಲಿ ಮೊದಲ ದಿನ 10 ಕೋಟಿಗೂ ಹೆಚ್ಚು ಗಳಿಸಿರಬಹುದು ಎನ್ನುವುದು ಸದ್ಯದ ಒಂದು ಅಂದಾಜು ಮಾತ್ರ. ಕಲೆಕ್ಷನ್ ಅದಕ್ಕಿಂತಲೂ ಹೆಚ್ಚಿರಬಹುದು. ಲೆಕ್ಕ ಇನ್ನೂ ಸಿಕ್ಕಿಲ್ಲ. 

  ಎರಡನೇ ದಿನವೂ ಮುಂಜಾನೆ ಶೋಗಳು ನಡೆಯುತ್ತಿವೆ ಎನ್ನುವುದೇ ಚಿತ್ರದ ಹೆಗ್ಗಳಿಕೆ. ಇದರ ಎದುರು ಶಾರೂಕ್ ಅಭಿನಯದ ಝೀರೋ ಗಳಿಕೆಯಲ್ಲಿ ಹಾಗೂ ಮೆಚ್ಚುಗೆಯಲ್ಲಿ ಹಿಂದೆ ಬಿದ್ದಿದೆ. ವಿಮರ್ಶಕರ ರೇಟಿಂಗ್‍ನಲ್ಲಿ ಕೂಡಾ ಝೀರೋ ಕೆಜಿಎಫ್‍ಗಿಂತ ಹಿಂದಿದೆ. 

 • ಟಗರುಗೆ ಯಶ್ ಶುಭ ಹಾರೈಕೆ

  yash wishes good luck to tagaru and team

  ಟಗರು, ಶಿವರಾಜ್ ಕುಮಾರ್-ಸೂರಿ-ಕೆ.ಪಿ.ಶ್ರೀಕಾಂತ್ ಕಾಂಬಿನೇಷನ್ ಸಿನಿಮಾ. ಇಡೀ ಸಿನಿಮಾ ಘಟಾನುಘಟಿಗಳಿಂದಲೇ ತುಂಬಿ ಹೋಗಿದೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ಆಡಿಯೋ ಬಿಡುಗಡೆ ಮಾಡಿಕೊಂಡ ಟಗರು, ಸಂಕ್ರಾಂತಿಗೆ ನುಗ್ಗಿ ಬರುವ ಸಾಧ್ಯತೆ ಇದೆ. 

  ಶಿವಣ್ಣ ಅಭಿನಯದ ಈ ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಪ್ರೀತಿಯಿಂದ ಮಾತನಾಡಿದ್ದಾರೆ. ಶಿವಣ್ಣ ಅವರನ್ನು ಪೊಲೀಸ್ ಲುಕ್‍ನಲ್ಲಿ ನೋಡುವುದಕ್ಕೇ ಖುಷಿಯಾಗುತ್ತಿದೆ. ಅವರಿದ್ದ ಕಡೆ ಒಂದು ಎನರ್ಜಿ ಇರುತ್ತದೆ. ಸಖತ್ ಫ್ರೆಶ್ ಆಗಿ ಕಾಣಿಸ್ತಿದ್ದಾರೆ. ಸೂರಿ-ಶಿವಣ್ಣ ಕಾಂಬಿನೇಷನ್‍ನ ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಶ್ರೀಕಾಂತ್ ಹಾಗೂ ನಾಗೂ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿರುವ ಯಶ್, ಪುನೀತ್ ಅವರ ಪಿಆರ್‍ಕೆ ಕಂಪೆನಿ ವಜ್ರೇಶ್ವರಿ ಸಂಸ್ಥೆಯಂತೆ ಇತಿಹಾಸ ಸೃಷ್ಟಿಸಲಿ ಎಂದು ಶುಭ ಕೋರಿದ್ದಾರೆ.

   

 • ಟೀಸರ್ ಲೀಕ್ ಆದರೂ ದಾಖಲೆ ಬ್ರೇಕ್..!

  ಟೀಸರ್ ಲೀಕ್ ಆದರೂ ದಾಖಲೆ ಬ್ರೇಕ್..!

  ಕೆಜಿಎಫ್ ರಿಲೀಸ್ ಆದ ದಿನದಿಂದ ಶುರುವಾದ ದಾಖಲೆಗಳನ್ನು ಬ್ರೇಕ್ ಮಾಡುವ ದಾಖಲೆ ಅವ್ಯಾಹತವಾಗಿ ಕಂಟಿನ್ಯೂ ಆಗ್ತಿದೆ. ಕೆಜಿಎಫ್ ಚಾಪ್ಟರ್ 1 ಹಿಟ್ ಆದ ನಂತರ ಸಹಜವಾಗಿಯೇ ಇಂಡಿಯಾ ಲೆವೆಲ್ಲಿನಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಕೆಜಿಎಫ್ ಚಾಪ್ಟರ್ 2, ಮೊದಲ ಟೀಸರ್ನಲ್ಲಿಯೂ ದಾಖಲೆ ಬರೆದಿದೆ. ಎಲ್ಲವೂ ಪ್ಲಾನ್ ಪ್ರಕಾರವೇ ಜರುಗಿದ್ದರೆ ಜನವರಿ 8ಕ್ಕೆ, ಬೆಳಗ್ಗೆ 10 ಗಂಟೆ 12 ನಿಮಿಷಕ್ಕೆ ರಿಲೀಸ್ ಆಗಬೇಕಿದ್ದ ಟೀಸರ್, ಹಿಂದಿನ ರಾತ್ರಿಯೇ ರಿಲೀಸ್ ಆಗಬೇಕಾಯ್ತು. 11 ಗಂಟೆ ಮೊದಲೇ ರಿಲೀಸ್ ಆದ ಟೀಸರ್ ದಾಖಲೆಗಳನ್ನು ಚಿಂದಿ ಉಡಾಯಿಸುತ್ತಿದೆ.

  ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹೆಚ್ಚೂ ಕಡಿಮೆ 2 ಕೋಟಿ ಜನ ಟೀಸರ್ ನೋಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್.. ಹೀಗೆ ಕೆಜಿಎಫ್ ಚಾಪ್ಟರ್ 2 ತಂಡದ ಪ್ರತಿಯೊಬ್ಬರೂ ಥ್ರಿಲ್ಲಾಗುವಂತಾ ದಾಖಲೆ ಇದು. ಅಫ್ಕೋರ್ಸ್.. ಕೆಜಿಎಫ್ ಚಾಪ್ಟರ್ 1 ಸೃಷ್ಟಿಸಿದ್ದ ಹವಾ ಅಂಥಾದ್ದು. ಶೀಘ್ರದಲ್ಲೇ ಥಿಯೇಟರಿಗೆ ಬರೋದಾಗಿ ಘೋಷಿಸಿರೋ ಕೆಜಿಎಫ್ ಟೀಂ, ವರ್ಷದ ಮಧ್ಯ ಭಾಗದಲ್ಲಿ ತೆರೆಗೆ ಲಗ್ಗೆಯಿಡೋ ಚಾನ್ಸ್ ಇದೆ. ಯಶ್ ಹುಟ್ಟುಹಬ್ಬಕ್ಕೆಂದೇ ಟೀಸರ್ ಬಿಟ್ಟಿರೋ ಚಿತ್ರತಂಡ, ಯಶ್, ಸಂಜಯ್ ದತ್ ಮತ್ತು ರವೀನಾ ಟಂಡನ್ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಯಶ್ ಅವರ 35ನೇ ಹುಟ್ಟುಹಬ್ಬಕ್ಕೆಂದೇ ರಿಲೀಸ್ ಆದ ಟೀಸರ್ ಇದು. ಎಲ್ಲ ಭಾಷೆಗಳಿಗೂ ಅನ್ವಯಾಗುವಂತೆ ಡೈಲಾಗ್ಗಳಿಲ್ಲದ ಒಂದೇ ಟೀಸರ್ ಬಿಟ್ಟಿದೆ ಕೆಜಿಎಫ್ ಟೀಂ. ಗುಡ್ ಲಕ್

   

 • ಟೀಸರ್`ಗೆ ಮುನ್ನ ಪೇಪರ್ ಹಬ್ಬ

  ಟೀಸರ್`ಗೆ ಮುನ್ನ ಪೇಪರ್ ಹಬ್ಬ

  ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಗೆ ಮೊದಲೇ ಒಂದು ಹವಾ ಎದ್ದುಬಿಟ್ಟಿದೆ. ಹವಾ ಎಬ್ಬಿಸಿರುವುದು ಹೊಂಬಾಳೆ ಫಿಲಂಸ್. ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಆ ಹುಟ್ಟುಹಬ್ಬಕ್ಕೆ ಟೀಸರ್ ಗಿಫ್ಟ್ ನೀಡುತ್ತಿದೆ ಹೊಂಬಾಳೆ. ಆ ಟೀಸರ್ ಬರೋಕೂ ಮುನ್ನ ಪೇಪರ್ ಬಂದಿದೆ.

  ಕೆಜಿಎಫ್ ಟೈಮ್ಸ್ ಅನ್ನೋ ಪೇಪರ್, ಆ ಪೇಪರ್‍ನಲ್ಲಿ ಒಬ್ಬ ನಾಯಕನನ್ನು ಅವನ ಒಳ್ಳೆಯ ಕೆಲಸಗಳಿಂದ, ಖಳನಾಯಕನನ್ನು ಅವನ ಕೆಟ್ಟ ಕೆಲಸಗಳಿಂದ ನಿರ್ಧರಿಸಲಾಗುತ್ತಿದೆ. ಒಬ್ಬನೇ ವ್ಯಕ್ತಿ ಆ ಎರಡನ್ನೂ ಮಾಡಿದರೆ.. ಅವನು ನಾಯಕನಾ..? ಖಳನಾಯಕನಾ..? ಎಂಬ ಹೆಡ್ಡಿಂಗ್. ಮಧ್ಯೆ ಮಧ್ಯೆ ಕೆಜಿಎಫ್ ಚಾಪ್ಟರ್ 1 ನೆನಪಿಸುವ ಬಾಕ್ಸ್ ಐಟಂಗಳು.. ಜನವರಿ 8ಕ್ಕೆ ರಿವೀಲ್ ಮಾಡ್ತೀವಿ ಅನ್ನೋ ಸೀಲ್.

  ಟೋಟಲ್ ಆಗ್ ಹೇಳ್ಬೇಕಂದ್ರೆ, ಈ ಬಾರಿ ಪ್ರಶಾಂತ್ ನೀಲ್, ಸಿನಿಮಾ ಪ್ರಚಾರವನ್ನು ಇನ್ನೂ ಒಂದು ಹಂತ ಮೇಲಕ್ಕೆ ಹೊತ್ತೊಯ್ಯುತ್ತಿದ್ದಾರೆ. ವೇಯ್ಟ್ ಮಾಡಬೇಕಷ್ಟೆ.. ಜನವರಿ 8ರ ತನಕ.

 • ಡೊಲ್ಲ ಅಂದ್ರೆ ತಿರುಗಿ ನೋಡ್ಲೇಬೇಕು ಯಶ್..!

  radhika's nick name for yash is dolla

  ರಾಕಿಂಗ್ ಸ್ಟಾರ್ ಯಶ್, ಡೊಲ್ಲ ಅಂತ ಕೂಗಿದ್ರೆ ತಿರುಗಿ ನೋಡ್ಲೇಬೇಕು. ಯೆಸ್.. ಏಕಂದ್ರೆ, ಅದು ರಾಧಿಕಾ ಪಂಡಿತ್ ಮೊಬೈಲ್‍ನಲ್ಲಿ ಯಶ್ ಅವರ ನಂಬರ್‍ಗೆ ರಾಧಿಕಾ ಇಟ್ಟುಕೊಂಡಿರೋ ಹೆಸರು.

  ಮದುವೆಗೂ ಮೊದಲು ಯಾರಿಗೂ ಗೊತ್ತಾಗದಂತೆ  ಸೀಕ್ರೆಟ್ ಮೈನ್‍ಟೇನ್ ಮಾಡುವಾಗ ಯಶ್ ಅವರ ಹೆಸರನ್ನು ಡೊಲ್ಲ ಎಂದು ಸೇವ್ ಮಾಡಿಟ್ಟುಕೊಂಡಿದ್ದರಂತೆ. ಮದುವೆಯಾದ ಮೇಲೂ ಅದು ಬದಲಾಗಿಲ್ಲ. ಈಗಲೂ ರಾಧಿಕಾ ಪಂಡಿತ್ ಮೊಬೈಲ್‍ನಲ್ಲಿ ಡೊಲ್ಲ ಅಂತಾನೇ ಯಶ್ ನಂಬರ್ ಸೇವ್ ಆಗಿದೆ. 

 • ಡ್ರಗ್ಸ್ ಕೇಸ್ : ಯಶ್ ಹೇಳಿದ್ದು ಸತ್ಯಸ್ಯ ಸತ್ಯ..!

  Shivanna, yash Talks About Drug Issue

  ಡ್ರಗ್ಸ್ ಕೇಸ್ ನಿರಂತರವಾಗಿ ಸ್ಯಾಂಡಲ್‍ವುಡ್‍ನ್ನು ಕಾಡುತ್ತಿರೋವಾಗ ರಾಕಿಂಗ್ ಸ್ಟಾರ್ ಯಶ್ ಡ್ರಗ್ಸ್ ಕುರಿತ ಪ್ರಶ್ನೆಗೆ ಒಂದು ಸತ್ಯವಾದ ಮಾತು ಹೇಳಿದ್ದಾರೆ.

  ಈ ದೇಹ ನಿಮ್ಮದಲ್ಲ, ಇದು ನಿಮ್ಮ ಅಪ್ಪ ಅಮ್ಮ ನಿಮಗೆ ಕೊಟ್ಟಿರೋ ಭಿಕ್ಷೆ. ಅವರಿಗೆ ತಿನ್ನೋಕೆ ಇತ್ತೋ ಇಲ್ವೋ ಗೊತ್ತಿಲ್ಲ. ಆದರೆ ಒಳ್ಳೇ ಊಟ ಹಾಕಿ ಬೆಳೆಸಿರ್ತಾರೆ. ಅಂಬೆಗಾಲಿಡೋವಾಗ ಎಡವಿದ್ರೂ ನೋವು ಅನುಭವಿಸ್ತಾರೆ. ನನಗೂ ಮಕ್ಕಳಿದ್ದಾರೆ. ಈ ದರಿದ್ರ ಡ್ರಗ್ಸ್ ತಗೊಂಡು ಹಾಳಾಗಬೇಡಿ. ಮರ್ಯಾದೆಯಿಂದ ನಿಮ್ಮ ಅಪ್ಪ ಅಮ್ಮನಿಗೆ ಗೌರವ ತರುವ ಕೆಲಸ ಮಾಡಿ' ಎಂದಿದ್ದಾರೆ ಯಶ್.

  ಚಿತ್ರರಂಗದ ಸಮಸ್ಯೆಗಳ ಕುರಿತು ಸಿಎಂ ಅವರನ್ನು ಭೇಟಿ ಮಾಡಲು ಶಿವಣ್ಣ ನೇತೃತ್ವದಲ್ಲಿ ನಿಯೋಗ ಹೋಗಿತ್ತು. ಆ ನಿಯೋಗದಲ್ಲಿದ್ದ ಯಶ್, ಡ್ರಗ್ಸ್ ಕುರಿತಂತೆ ಈ ಮಾತು ಹೇಳಿದ್ದಾರೆ.

  ತನಿಖೆ ನಡೆಯುತ್ತಿರುವಾಗ ಏನು ಹೇಳೋದೂ ತಪ್ಪಾಗುತ್ತೆ. ತನಿಖೆ ನಡೆದು ಸತ್ಯ ಹೊರಬರಲಿ ಎಂದಿದ್ದಾರೆ ಶಿವಣ್ಣ.

  ಇದೇ ವೇಳೆ ಯಾರೋ ಒಂದಿಬ್ಬರು ವ್ಯಸನಿಗಳಾಗಿರುವ ಮಾತ್ರಕ್ಕೆ, ತಪ್ಪು ಮಾಡಿದ್ದಕ್ಕೆ ಇಡೀ ಚಿತ್ರರಂಗವೇ ಕೆಟ್ಟದ್ದು ಎಂದು ಹೇಳಬೇಡಿ ಎಂದಿದ್ದಾರೆ ಯಶ್ ಮತ್ತು ಶಿವಣ್ಣ.

 • ತಮನ್ನಾ ಸ್ಟೆಪ್ಪಿಗೆ ಕೆಜಿಎಫ್ ಫಿದಾ

  tamannah shakes leg with yash

  ಕೆಜಿಎಫ್ ಚಿತ್ರಕ್ಕೆ ಐಟಂ ಸಾಂಗ್‍ಗೆ ತಮನ್ನಾ ಹೆಜ್ಜೆ ಹಾಕುತ್ತಿದ್ದಾರೆ. ಶೂಟಿಂಗ್ ನಡೆಯುತ್ತಿದೆ. ಅದೂ.. ಕನ್ನಡದ ಸೂಪರ್ ಹಿಟ್ ಸಾಂಗ್ ಜೋಕೆ.. ನಾನು ಬಳ್ಳಿಯ ಮಿಂಚು ಹಾಡಿನ ರೀಮಿಕ್ಸ್ ಸಾಂಗ್. ಬಳ್ಳಿಯ ಮಿಂಚಿನಂತೆಯೇ ಬಳುಕುವ ತಮನ್ನಾ, ಈ ಹಾಡಿನಲ್ಲಿ ಹೆಜ್ಜೆ ಹಾಕಿರುವುದು ರಾಕಿಂಗ್ ಸ್ಟಾರ್ ಯಶ್ ಜೊತೆ.

  ತಮನ್ನಾ ನೃತ್ಯದ ಹೆಜ್ಜೆಗಳಿಗೆ ಕೆಜಿಎಫ್ ತಂಡ ಥ್ರಿಲ್ಲಾಗಿ ಹೋಗಿದೆ. ಯಶ್ ಕೂಡಾ ಒಳ್ಳೆಯ ಡ್ಯಾನ್ಸರ್. ಇಬ್ಬರೂ ಅದ್ಭುತವಾಗಿ ಸ್ಟೆಪ್ ಹಾಕುತ್ತಿದ್ದು, ಹಾಡು ಅದ್ಭುತವಾಗಿ ಮೂಡಿ ಬರುತ್ತಿದೆಯಂತೆ.

  ಹೊಂಬಾಳೆ ಫಿಲಂಸ್‍ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ, ಹೆಚ್ಚೂ ಕಡಿಮೆ 2 ವರ್ಷಗಳಿಂದ ಶೂಟಿಂಗ್‍ನಲ್ಲಿದೆ. ಮಿನರ್ವ ಹಾಲ್‍ನಲ್ಲಿ ಹಳೇ ಕಾಲದ ಪಬ್ ಸೆಟ್ ಹಾಕಲಾಗಿದ್ದು, ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ.

  ಜೋಕೆ ಸಾಂಗ್ ಚಿತ್ರೀಕರಣದಲ್ಲಿ ಯಶ್ ಜೊತೆ ಭಾಗಿಯಾಗಿದ್ದೇನೆ. ಚಿತ್ರತಂಡದ ಜೊತೆ ಮನೆಯವರ ಜೊತೆ ಇರುವಷ್ಟೇ ಖುಷಿಯಾಗಿದ್ದೇನೆ. ಕೆಲವೇ ದಿನಗಳಲ್ಲಿ ಕೆಜಿಎಫ್ ಚಿತ್ರವನ್ನು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನೋಡಿ ಎಂದು ಟ್ವೀಟ್ ಮಾಡಿದ್ದಾರೆ ತಮನ್ನಾ.

 • ತಮನ್ನಾಗೆ ಇಷ್ಟವಾಯ್ತು ಯಶ್ ಡೆಡಿಕೇಷನ್

  tamannah likes yash's dedication

  ಕೆಜಿಎಫ್ ನನಗೆ ತುಂಬಾ ಖುಷಿ ಕೊಟ್ಟಿತು. ಯಶ್ ಅವರ ಡೆಡಿಕೇಷನ್, ಪ್ರಶಾಂತ್ ಕೆಲಸ, ಇಡೀ ಟೀಂ ಕೆಲಸ ಮಾಡುತ್ತಿದ್ದ ಪರಿ.. ಎಲ್ಲವೂ ಇಷ್ಟವಾಯ್ತು. ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದರೂ, ಇಡೀ ಚಿತ್ರತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ.

  ಕೆಜಿಎಫ್ ಚಿತ್ರದಲ್ಲಿ ಐಟಂ ಸಾಂಗ್‍ವೊಂದಕ್ಕೆ ಹೆಜ್ಜೆ ಹಾಕಿರುವ ಮಿಂಚಿನ ಬಳ್ಳಿ ತಮನ್ನಾ ಭಾಟಿಯಾ, ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಹಾಗೆ ಬಂದಿದ್ದಾಗ ಕೆಜಿಎಫ್ ಶೂಟಿಂಗ್ ಅನುಭವ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ನಟಿಸುವ ಆಸೆ ಇದೆ. ಪುನೀತ್ ಜೊತೆ ನಟಿಸುವ ಕನಸಿದೆ. ಒಳ್ಳೆಯ ಕಥೆ, ಕಾಲ ಕೂಡಿಬರಬೇಕು ಅಷ್ಟೆ ಎಂದಿದ್ದಾರೆ ತಮನ್ನಾ.

  ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ಹಾಡುಗಳಲ್ಲಷ್ಟೇ ಕಾಣಿಸಿಕೊಂಡಿದ್ದೇನೆ. ಸ್ಪೆಷಲ್ ಸಾಂಗ್‍ಗಷ್ಟೇ ಹೆಜ್ಜೆ ಹಾಕಿದರೆ ಪ್ರಾಬ್ಲಂ ಆಗುತ್ತೆ ಅನ್ನೋದು ಹಳೆಯ ಮಾತಾಯ್ತು. ಕತ್ರಿನಾ ಕೈಫ್, ಕರೀನಾ ಕಪೂರ್‍ರಂತಹವರು ಕೂಡಾ ಒಂದು ಹಾಡಿನಲ್ಲಷ್ಟೇ ಕಾಣಿಸಿಕೊಂಡ ಸಿನಿಮಾಗಳೂ ಇವೆ ಎಂದಿದ್ದಾರೆ ತಮನ್ನಾ.

 • ತಮಿಳಿಗೆ ಸೂರ್ಯವಂಶಿಯಾಗಿ ಹೊರಟ ಯಶ್

  yash enters kollywood

  ರಾಕಿಂಗ್ ಸ್ಟಾರ್ ಯಶ್ ತಮಿಳಿಗೆ ಹೊರಟು ನಿಂತಿದ್ದಾರೆ. ಸೂರ್ಯವಂಶಿಯಾಗಿ. ಅರೆ.. ಯಾವುದಾದರೂ ತಮಿಳು ಸಿನಿಮಾ ಒಪ್ಪಿಕೊಂಡ್ರಾ..? ಇಂತಹ ಪ್ರಶ್ನೆಗಳನ್ನೆಲ್ಲ ಸೈಡಿಗಿಡಿ. ಕೆಜಿಎಫ್-2ನಲ್ಲಿ ಬ್ಯುಸಿಯಾಗಿರುವ ಯಶ್, ಯಾವ ಮತ್ತೊಂದು ಸಿನಿಮಾವನ್ನೂ ಓಕೆ ಮಾಡಿಲ್ಲ. ಆದರೆ, ತಮಿಳಿಗೆ ಸೂರ್ಯವಂಶಿಯಾಗಿ ಹೊರಟಿರುವುದಂತೂ ಸತ್ಯ.

  ಅದು ಹೊಸ ಸಿನಿಮಾ ಏನೂ ಅಲ್ಲ. ಯಶ್, ರಾಧಿಕಾ ಪಂಡಿತ್ ಒಟ್ಟಾಗಿ ಅಭಿನಯಿಸಿದ್ದ, ಮಹೇಶ್ ರಾವ್ ನಿರ್ದೇಶನದ ಚಿತ್ರ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ತಮಿಳು ವರ್ಷನ್. ಅದು ತಮಿಳಿನಲ್ಲಿ ಸೂರ್ಯವಂಶಿ ಅನ್ನೋ ಹೆಸರಲ್ಲಿ ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ, ಇದು ತಮಿಳಿನಿಂದಲೇ ಕನ್ನಡಕ್ಕೆ ರೀಮೇಕ್ ಆಗಿದ್ದ ಸಿನಿಮಾ.

   

 • ತಮ್ಮ ಅಭಿಮಾನಿಯ ಈ ಅಭಿಮಾನ ಮಾದರಿಯಾಗೋದು ಬೇಡ ಅಂದ್ರು ಸಿದ್ದರಾಮಯ್ಯ, ಯಶ್

  ತಮ್ಮ ಅಭಿಮಾನಿಯ ಈ ಅಭಿಮಾನ ಮಾದರಿಯಾಗೋದು ಬೇಡ ಅಂದ್ರು ಸಿದ್ದರಾಮಯ್ಯ, ಯಶ್

  ನಿಮ್ಮ ಅಭಿಮಾನಕ್ಕೆ ನಾವು ಚಿರಋಣಿ. ಆದರೆ, ನಿಮ್ಮ ಇಂತಹ ಅಭಿಮಾನ ಯಾರಿಗೂ ಮಾದರಿಯಾಗೋದು ಬೇಡ.

  ಈ ಮಾತನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಹೇಳಿದ್ಧಾರೆ. ಅವರ ಇಂತಹ ಮಾತಿಗೆ ಕಾರಣವಾಗಿದ್ದು ಮಂಡ್ಯ ಜಿಲ್ಲೆಯ ಕೋಡಿದೊಡ್ಡಿ ಗ್ರಾಮದ ರಾಮಕೃಷ್ಣ. ಆತ ಅದೇನು ಕಾರಣಕ್ಕೋ ಏನೋ.. ನೊಂದು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ತನ್ನ ಅಂತಿಮ ಪತ್ರದಲ್ಲಿ ನಾನು ಸಿದ್ದರಾಮಯ್ಯ ಮತ್ತು ಯಶ್ ಅಭಿಮಾನಿ. ನನ್ನ ಅಂತ್ಯ ಸಂಸ್ಕಾರಕ್ಕೆ ಅವರು ಬರಬೇಕು ಎಂದು ಬರೆದಿಟ್ಟಿದ್ದ. ಸಿದ್ದರಾಮಯ್ಯನವರೇನೋ ಬಿಡುವು ಮಾಡಿಕೊಂಡು ಹೋದರಾದರೂ, ನಟ ಯಶ್ ಹೋಗೋಕೆ ಸಾಧ್ಯವಾಗಲಿಲ್ಲ.

  ಅತ್ತ  ಸಂಸ್ಕಾರ ಮುಗಿಸಿದ ಬಳಿಕ ಸಿದ್ದರಾಮಯ್ಯ  ಹಾಗೂ ಇತ್ತ ಸೋಷಿಯಲ್ ಮೀಡಿಯಾದಲ್ಲಿ ಯಶ್ ಇಬ್ಬರೂ ಒಂದೇ ಮಾತು ಹೇಳಿದ್ರು. ನಿಮ್ಮ ಅಭಿಮಾನಕ್ಕೆ ನಾವು ಚಿರಋಣಿ. ಆದರೆ, ನಿಮ್ಮ ಇಂತಹ ಅಭಿಮಾನ ಯಾರಿಗೂ ಮಾದರಿಯಾಗೋದು ಬೇಡ.

  ನಿಮ್ಮ ಅಭಿಮಾನಕ್ಕೆ ಹೆಮ್ಮೆ ಪಡಲು ಸಾಧ್ಯವಿಲ್ಲ. ಸಾವು ಎಲ್ಲದಕ್ಕೂ ಪರಿಹಾರವಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ, ಆತ್ಮಹತ್ಯೆ ಕೆಟ್ಟದ್ದು ಎಂಬರ್ಥದಲ್ಲಿಯೇ ಇಬ್ಬರೂ ಮಾತನಾಡಿದ್ದಾರೆ. ಅದು ಸತ್ಯ ತಾನೇ..

 • ತಮ್ಮದೇ ದಾಖಲೆ ಮುರಿದ ರಾಜಕುಮಾರ ವಿಜಯ್ ಕಿರಗಂದೂರು

  vijay kiragandur breaks his own record

  ಕೆಜಿಎಫ್ ಬಾಕ್ಸಾಫೀಸ್‍ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಈ ದಾಖಲೆಗಳಲ್ಲಿ 2ನೇ ಸ್ಥಾನಕ್ಕೆ ಇಳಿದಿರುವುದು ವಿಜಯ್ ಕಿರಗಂದೂರು ಅವರ ಸಿನಿಮಾ. ಅಫ್‍ಕೋರ್ಸ್.. ಮೊದಲನೇ ಸ್ಥಾನಕ್ಕೆ ಏರಿರುವುದೂ ಅವರೇ. ಈ ಮೊದಲು ಕನ್ನಡದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದುದು ರಾಜಕುಮಾರ.

  ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರ, 60ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಆ ಚಿತ್ರದ ನಿರ್ಮಾಪಕರೂ ಹೊಂಬಾಳೆ ಪ್ರೊಡಕ್ಷನ್ಸ್‍ನ ವಿಜಯ್ ಕಿರಗಂದೂರು. ಈಗ.. ಕೆಜಿಎಫ್ ಒಂದೇ ವಾರದಲ್ಲಿ ಆ ದಾಖಲೆಯನ್ನು ಹಿಂದಿಕ್ಕಿ ಮುನ್ನುಗ್ಗಿದೆ. ಕನ್ನಡದಲ್ಲಿಯೇ, ಮೊದಲ ವಾರದಲ್ಲಿಯೇ 60ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಕೆಜಿಎಫ್.

  ಮೂಲಗಳ ಪ್ರಕಾರ ಕರ್ನಾಟಕದಲ್ಲಿ, ನಿರ್ಮಾಪಕರಿಗೆ ಸಿಕ್ಕಿರುವ ಮೊದಲ ವಾರದ ಷೇರ್ ಸುಮಾರು 30 ಕೋಟಿ. ತೆಲುಗು ಭಾಷೆಯಲ್ಲಿ ಸುಮಾರು 7 ಕೋಟಿ ಹಾಗೂ ತಮಿಳಿನಲ್ಲಿ ಸುಮಾರು 5 ಕೋಟಿ ಷೇರ್ ಸಿಕ್ಕಿದೆ. ಹಿಂದಿಯಲ್ಲಿ ಕೂಡಾ ಕೆಜಿಎಫ್ ಷೇರ್ 8 ಕೋಟಿ ದಾಟಿದೆ.

  ಅಂದಹಾಗೆ ಇದು ನಿರ್ಮಾಪಕರಿಗೆ ಸಿಕ್ಕಿರುವ ಷೇರ್‍ನ ಮಾಹಿತಿ. ಕಲೆಕ್ಷನ್‍ನಲ್ಲಿ 5 ಭಾಷೆಗಳಲ್ಲಿ ಕೆಜಿಎಫ್ ಈಗಾಗಲೇ 100 ಕೋಟಿ ದಾಟಿ ಮುನ್ನುಗ್ಗುತ್ತಿದೆ.

 • ತಾಯಿ, ಮಗು ಕ್ಷೇಮ.. ನಿಮ್ಮ ಹಾರೈಕೆ ಪ್ರೀತಿ ಸದಾ ಇರಲಿ - ಯಶ್

  yash talks about his second child

  ರಾಧಿಕಾ ಪಂಡಿತ್ 2ನೇ ಮಗುವಿಗೆ ಜನ್ಮ ನೀಡಿ, ಈ ಬಾರಿ ಗಂಡುಮಗುವಿನ ತಾಯಿಯಾಗಿದ್ದಾರೆ. ಐರಾಗೊಬ್ಬ ತಮ್ಮ ಸಿಕ್ಕಿದ್ದಾನೆ. ಈ ಖುಷಿಯನ್ನು ಅಭಿಮಾನಿಗಳ ಜೊತೆ ಯಶ್ ಹಂಚಿಕೊಂಡಿದ್ದಾರೆ. ಒಂದು ವಿಶೇಷ ವಿಡಿಯೋ ಮಾಡಿ ಬಿಟ್ಟಿದ್ದಾರೆ ಯಶ್. ವಿಡಿಯೋದಲ್ಲಿ ಯಶ್ ಮಗಳು ಐರಾ ಮೊದಲು ತೊದಲು ನುಡಿಯುತ್ತಾಳೆ. ನಂತರ ಯಶ್ ಮಾತು ಶುರುವಾಗುತ್ತೆ.. ನನ್ನ ಮಗಳು ಏನು ಹೇಳೋಕೆ ಪ್ರಯತ್ನಿಸುತ್ತಿದ್ದಾಳೆ ಎಂದರೆ, ಅವಳು ತಮ್ಮನನ್ನು ಪಡೆದುಕೊಂಡಿದ್ದಾಳೆ. ಸಂತೋಷ ಹೆಚ್ಚಾಗಿದೆ. ನಿಮ್ಮ ಪ್ರೀತಿ, ಹಾರೈಕೆ ಸದಾ ಹೀಗೇ ಇರಲಿ ಎಂದಿದ್ದಾರೆ ಯಶ್.

  ನಂತರ ಮತ್ತೆ ಐರಾಳ ತೊದಲು ನುಡಿ ಮುಂದುವರಿಯುತ್ತೆ. ಆಗ ಯಶ್ ಸ್ವಲ್ಪ ಬ್ಯುಸಿ ಕಣ್ರಪ್ಪ ಮಕ್ಳು ಜೊತೆ.. ಸದ್ಯಕ್ಕೆ ಅಡ್ಜಸ್ಟ್ ಮಾಡ್ಕೊಳಿ ಎನ್ನುತ್ತಾರೆ. ವಿಡಿಯೋ ಓವರ್.

   

 • ತಾವೇ ತುಂಬಿಸಿದ ಕೆರೆಗೆ ಯಶ್, ರಾಧಿಕಾ ಬಾಗಿನ

  yash radhika pandit at yalaburga district

  ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ. ಬರದಿಂದ ನೀರೇ ಬತ್ತಿ ಹೋಗಿದ್ದ ಈ ಕೆರೆಯ ಪುನರುಜ್ಜೀವನಕ್ಕೆ ಯಶ್ ಸುಮಾರು 1 ಕೋಟಿ ಖರ್ಚು ಮಾಡಿದ್ದಾರೆ. ತಾವೇ ತುಂಬಿಸಿದ ಕೆರೆಗೆ ದಂಪತಿ ಬಾಗಿನ ಅರ್ಪಿಸಿ, ಗಂಗೆಗೆ ಕೈ ಮುಗಿದಿದ್ದಾರೆ.

  ಯಶೋಮಾರ್ಗ ಫೌಂಡೇಶನ್‌ ಮೂಲಕ ಫೆಬ್ರವರಿ 28ರಂದು ಕಾಮಗಾರಿ ಶುರುವಾಗಿತ್ತು. ಹೂಳು ತೆಗೆಯುವ ವೇಳೆ ಕೆಲವೇ ದಿನಗಳಲ್ಲಿ ಕೆರೆಯಲ್ಲಿ ಅಂತರ್ಜಲ ಉಕ್ಕಿ ಹರಿದಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕೆರೆ ಮತ್ತಷ್ಟು ತುಂಬಿರುವುದು ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿಸಿದೆ.

  ತುಂಬಿದ ಕೆರೆಯನ್ನು ನೋಡಲು ಸಂತಸವಾಗುತ್ತಿದೆ ಎಂದು ಯಶ್ ಹೇಳಿದ್ದಾರೆ.

 • ತೆಲುಗು ಸ್ಟಾರ್ ನಿರ್ಮಾಪಕರೆಲ್ಲ ಈಗ ಯಶ್ ಹಿಂದೆ..

  ತೆಲುಗು ಸ್ಟಾರ್ ನಿರ್ಮಾಪಕರೆಲ್ಲ ಈಗ ಯಶ್ ಹಿಂದೆ..

  ಕೆಜಿಎಫ್ ಚಾಪ್ಟರ್ 1 ಸಕ್ಸಸ್, ಯಶ್ ಅವರನ್ನು ನ್ಯಾಷನಲ್ ರಾಕಿಂಗ್ ಸ್ಟಾರ್ ಆಗಿ ರೂಪಿಸಿದೆ. ಕನ್ನಡದಲ್ಲಿ ದೊಡ್ಡ ಸ್ಟಾರ್ ಆಗಿರುವ ಯಶ್ ಅವರಿಗೆ ಈಗ ತೆಲುಗಿನಲ್ಲೂ ಭರ್ಜರಿ ಡಿಮ್ಯಾಂಡ್. ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುವ ಮುನ್ನವೇ ತೆಲುಗು ಚಿತ್ರರಂಗದ ಘಟಾನುಘಟಿ ನಿರ್ಮಾಪಕರೆಲ್ಲ ಯಶ್ ಬೆನ್ನು ಹತ್ತಿದ್ದಾರಂತೆ.

  ಸದ್ಯಕ್ಕೆ ರಾಜಮೌಳಿ-ಜ್ಯೂ.ಎನ್‍ಟಿಆರ್-ರಾಮ್‍ಚರಣ್ ತೇಜ್ ಅವರ ಕಾಂಬಿನೇಷನ್‍ನಲ್ಲಿ ಆರ್‍ಆರ್‍ಆರ್ ಸಿನಿಮಾ ಮಾಡುತ್ತಿರುವ ದಾನಯ್ಯ ಈ ಲಿಸ್ಟಿನಲ್ಲಿ ಫಸ್ಟ್ ಇದ್ದಾರೆ. ಈಗಾಗಲೇ ಡಿವಿವಿ ದಾನಯ್ಯ, ಯಶ್ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎಂಬ ಸುದ್ದಿಗಳಿವೆ.

  ಅತ್ತ, ತೆಲುಗಿನಲ್ಲಿ ಎವರ್‍ಗ್ರೀನ್ ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ ಕೂಡಾ ಯಶ್ ಅವರಿಗಾಗಿ ಕಥೆ ಸಿದ್ಧಪಡಿಸುತ್ತಿದ್ದಾರಂತೆ. ಅದು ದಾನಯ್ಯ ಅವರಿಗಾಗಿಯೇ ಅನ್ನೋದು ಮತ್ತೊಂದು ಸುದ್ದಿ. ಇನ್ನೊಂದೆಡೆ ದಿಲ್ ರಾಜು ಕೂಡಾ ಯಶ್ ಬೆನ್ನು ಹತ್ತಿದ್ದಾರೆ.

  ಇವರೆಲ್ಲ ತೆಲುಗಿನ ಸ್ಟಾರ್ ನಿರ್ಮಾಪಕರು. ಇವರಲ್ಲಿ ಯಶ್ ಯಾರಿಗೆ ಓಕೆ ಅಂತಾರೋ ಗೊತ್ತಿಲ್ಲ. ಯಶ್ ಎಲ್ಲಿಯೇ ಸಿನಿಮಾ ಮಾಡಿದರೂ, ಕನ್ನಡದಿಂದಲೇ ಶುರುವಾಗಲಿ ಅನ್ನೋದು ಅಭಿಮಾನಿಗಳ ಹಾರೈಕೆ.

 • ಥ್ಯಾಂಕ್ಯೂ ಯಶ್ - ಪುನೀತ್ ರಾಜ್ ಕುಮಾರ್

  yash wishes good luck to natasarvabhouma

  ನಟಸಾರ್ವಭೌಮ ಚಿತ್ರಕ್ಕೆ ಶುಭ ಹಾರೈಸಿದವರಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ಗಳ ದೊಡ್ಡ ಕ್ಯೂ ಇದೆ. ಕಿಚ್ಚ ಸುದೀಪ್, ಅಪ್ಪು ಡ್ಯಾನ್ಸ್ ನೋಡೋಕೆ ಕಾಯುತ್ತಿದ್ದೇನೆ ಎಂದು ಹೇಳೋ ಮೂಲಕ ನಿರೀಕ್ಷೆಯ ಕಿಚ್ಚು ಹೊತ್ತಿಸಿದ್ದರು. ಈಗ ಯಶ್ ಕೂಡಾ ಅಪ್ಪು ಸಿನಿಮಾಗೆ ಶುಭ ಹಾರೈಸಿದ್ದಾರೆ.

  ಅಪ್ಪು ಸರ್ ತಮ್ಮ ವಿಶಿಷ್ಟ, ವಿಭಿನ್ನ ಡ್ಯಾನ್ಸ್, ಪಾತ್ರಪೋಷಣೆಯ ಮೂಲಕ ಅಪಾರ ನಿರೀಕ್ಷೆ ಹುಟ್ಟುಹಾಕಿದ್ದಾರೆ. ನಟಸಾರ್ವಭೌಮ ಯಶಸ್ಸು ಕಾಣಲಿ ಎಂದು ಶುಭ ಕೋರಿದ್ದಾರೆ ಯಶ್.

  ಪುನೀತ್ ರಾಜ್‍ಕುಮಾರ್, ಥ್ಯಾಂಕ್ಯೂ ಯಶ್ ಎಂದಿದ್ದಾರೆ. ಕೆಜಿಎಫ್ ಚಿತ್ರದ ಬಿಡುಗಡೆ ವೇಳೆ, ಪುನೀತ್ ರಾಜ್‍ಕುಮಾರ್, ಯಶ್ ಚಿತ್ರಕ್ಕೆ ಶುಭ ಕೋರಿ ವಿಡಿಯೋ ಸಂದೇಶ ಕಳುಹಿಸಿದ್ದರು.

 • ಥ್ಯಾಂಕ್ಯೂ ಯಶ್ : ಸಾ.ರಾ.ಗೋವಿಂದು ಸೇರಿದಂತೆ ಹಲವರಿಗೆ ಯಶ್‍ಗೆ ಕೃತಜ್ಞತೆ

  ಥ್ಯಾಂಕ್ಯೂ ಯಶ್ : ಸಾ.ರಾ.ಗೋವಿಂದು ಸೇರಿದಂತೆ ಹಲವರಿಗೆ ಯಶ್‍ಗೆ ಕೃತಜ್ಞತೆ

  ಯಶ್ ಅವರು ಚಲನಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು, ಸಂಕಷ್ಟದಲ್ಲಿರುವ ಕಲಾವಿದರಿಗೆ ತಲಾ 5 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಪ್ರಕ್ರಿಯೆಗಳೂ ಶುರುವಾಗಿವೆ. ಯಶ್ ಅವರ ಈ ಜನ ಮೆಚ್ಚುವ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

  ಸಾ.ರಾ.ಗೋವಿಂದು : ಮಂಗಳವಾರ ಸಂಜೆ ಯಶ್ ಅವರು ಕರೆ ಮಾಡಿದ್ದರು. ಸರ್ಕಾರದ ಪ್ಯಾಕೇಜ್‍ನ ಮಾಹಿತಿ ಕೇಳಿದ ನಂತರ, ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು, ಕಾರ್ಮಿಕರ ಕುಟುಂಬದವರಿಗೆ ತಲಾ 5 ಸಾವಿರ ರೂ. ನೀಡುವ ನಿರ್ಧಾರ ತೆಗೆದುಕೊಂಡರು. ಅವರ ಪ್ರೀತಿ, ಸಹಕಾರ ಸದಾ ಹೀಗೆಯೇ ಇರಲಿ. ಎಲ್ಲರ ಪರವಾಗಿ ಯಶ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ

  ಉಪೇಂದ್ರ : ಧನ್ಯವಾದಗಳು ಯಶ್. ಇಂತಹ ಮಹತ್ಕಾರ್ಯಗಳು ತಮ್ಮಿಂದ ನಡೆಸಲು ಭಗವಂತ ನಿಮಗೆ ಇನ್ನಷ್ಟು ಶಕ್ತಿ ನೀಡಲಿ.

  ನಲಪ್ಪಾಡ್ ಹ್ಯಾರಿಸ್, ರಾಜಕಾರಣಿ : ನಿಮ್ಮನ್ನು ಹತ್ತಿರದಿಂದ ಬಲ್ಲ ನನಗೆ ಇದು ಅಚ್ಚರಿ ಎನಿಸಲಿಲ್ಲ. ಇದು ಹೆಮ್ಮೆಯ ಕ್ಷಣ ಸಹೋದರ..

  ಶರಣ್ : ಧನ್ಯವಾದ ಯಶ್

  ಕಾರ್ತಿಕ್ ಗೌಡ (KRG Connects) : ಒಂದು ಅರ್ಥಪೂರ್ಣ ಹೆಜ್ಜೆ

  ಮಾಳವಿಕಾ ಅವಿನಾಶ್ : ಹೆಮ್ಮೆಯಾಗುತ್ತಿದೆ ತಮ್ಮಾ. ನಿನ್ನ ಮೇಲೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಇರಲಿ.

   

  ಹೀಗೆ ಚಿತ್ರರಂಗದ ಹಲವು ಹಿರಿಯ ಕಿರಿಯ ಕಲಾವಿದರು, ತಂತ್ರಜ್ಞರು ಯಶ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಅಭಿಮಾನಿಗಳಂತೂ ಯಶ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ.

 • ದಯವಿಟ್ಟು ಹಿಂಗೆಲ್ಲ ಮಾಡ್ಕೋಬೇಡಿ.. ಮತ್ತೆ ಹಿಂಗಾದ್ರೆ ನಾನು ಬರಲ್ಲ - ಯಶ್

  yash fan attempts suicide

  ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಈ ವರ್ಷ ಹುಟ್ಟುಹಬ್ಬ ಇಲ್ಲ ಎಂದು ಯಶ್, ತಮ್ಮ ಹುಟ್ಟುಹಬ್ಬಕ್ಕೆ ಮೊದಲೇ ಹೇಳಿದ್ದರು. ಸಂಭ್ರಮಾಚರಣೆ ಬೇಡ ಎಂದು ಮನವಿ ಮಾಡಿಕೊಂಡಿದ್ದರು. ಹೀಗಿದ್ದೂ ಯಶ್ ಅವರ ಅತಿರೇಕಿ ಅಭಿಮಾನಿಯೊಬ್ಬ ಯಶ್ ಮನೆ ಎದುರು ಆತ್ಮಹತ್ಯೆಗೆ ಯತ್ನಿಸಿಬಿಟ್ಟಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಹೋರಾಡುತ್ತಿರುವ ರವಿ ಎಂಬ ಅಭಿಮಾನಿಯನ್ನು ಖುದ್ದು ಯಶ್ ಭೇಟಿ ಮಾಡಿದ್ದಾರೆ. ಸಾಂತ್ವನ ಹೇಳಿದ್ದಾರೆ. ಮರುಗಿದ್ದಾರೆ.

  `ದಯವಿಟ್ಟು ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ನನಗೆ ಇವೆಲ್ಲ ಇಷ್ಟವಾಗಲ್ಲ. ಮೊದಲ ಬಾರಿ ನಡೆದಿದೆ ಎಂಬ ಕಾರಣಕ್ಕೆ ಬಂದಿದ್ದೇನೆ. ಇದೇ ಕೊನೆ. ಇನ್ನು ಮುಂದೆ ನನ್ನ ಅಭಿಮಾನಿಗಳು ಈ ರೀತಿ ಮಾಡಿಕೊಂಡರೆ ನಾನು ಬರಲ್ಲ. ರವಿ ಅವರ ತಂದೆಯವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ನೀವೇನು ಮಾಡೋಕಾಗುತ್ತೆ ಬಿಡಿ ಸರ್ ಎಂದರು. ಅದು ಅವರ ದೊಡ್ಡತನ. ನಮ್ಮ ಸಿನಿಮಾ ನೋಡಿ. ಒಳ್ಳೆಯದನ್ನು ಕಲಿಯಿರಿ. ಇಂತಹ ಅನಾಹುತ ಮಾಡಿಕೊಳ್ಳಬೇಡಿ'' ಎಂದು ಮನವಿ ಮಾಡಿದ್ದಾರೆ ಯಶ್.

 • ದಾದಾ ಸಾಹೇಬ್ ಫಾಲ್ಕೆ ಸೌಥ್ ಪುರಸ್ಕಾರ ಯಶ್ ಮಡಿಲಿಗೆ

  yash recieves dad saheb phalke south awards

  ರಾಕಿಂಗ್ ಸ್ಟಾರ್ ಯಶ್ ಅವರ ಕಿರೀಟಕ್ಕೆ ಮತ್ತೊಂದು ಪ್ರಶಸ್ತಿ ಸೇರಿದೆ. ಅದು, ದಾದಾ ಸಾಹೇಬ್ ಫಾಲ್ಕೆ ಸೌಥ್ ಪುರಸ್ಕಾರ. ಕೆಜಿಎಫ್ ಚಾಪ್ಟರ್ 1 ಚಿತ್ರದ ಅಭಿನಯಕ್ಕೆ ಸಂದಿರುವ ಪ್ರಶಸ್ತಿ ಇದು. ಹೈದರಾಬಾದ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಶ್ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಯಶ್ ಅವರೊಂದಿಗೆ ನಟಿಯರ ವಿಭಾಗದಲ್ಲಿ ಕೀರ್ತಿ ಸುರೇಶ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು.

  ಸಮಾರಂಭದಲ್ಲಿ ಕನ್ನಡದಲ್ಲಿಯೇ ಮಾತು ಆರಂಭಿಸಿದ ಯಶ್, ನಂತರ ತೆಲುಗಿನಲ್ಲಿಯೂ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದ್ರು.

  ಅಂದಹಾಗೆ ಇದು ದಾದಾ ಸಾಹೇಬ್ ಫಾಲ್ಕೆ ಪ್ರತಿಷ್ಟಾನ ಕೊಡುವ ಪ್ರಶಸ್ತಿ. ಕೇಂದ್ರ ಸರ್ಕಾರದ ಪ್ರಶಸ್ತಿ. ಕೇಂದ್ರ ಸರ್ಕಾರ ನೀಡುವ ಫಾಲ್ಕೆ ಪ್ರಶಸ್ತಿ ಸಿನಿಮಾ ಕ್ಷೇತ್ರದ ಸಾಧಕರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಕನ್ನಡದಲ್ಲಿ ಡಾ.ರಾಜ್ ಕುಮಾರ್ ಈ ಪ್ರಶಸ್ತಿ ಸ್ವೀಕರಿಸಿರುವ ಏಕೈಕ ಕಲಾವಿದ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery