` yash, - chitraloka.com | Kannada Movie News, Reviews | Image

yash,

  • ಕೆಜಿಎಫ್‍ನ ಅರೆಹುಚ್ಚ ಲಕ್ಷ್ಮೀಪತಿ ನಿಧನ

    kgf artist lakshmipathi no more

    ಕೆಜಿಎಫ್ ಚಿತ್ರದ ಒಂದೊಂದು ಪಾತ್ರಗಳೂ ಪ್ರೇಕ್ಷಕರ ಹೃದಯದಲ್ಲಿ ಅಚ್ಚೊತ್ತಿರುವಾಗ, ಅದೇ ಚಿತ್ರದಲ್ಲಿ ಅರೆಹುಚ್ಚನ ಪಾತ್ರ ಮಾಡಿದ್ದ ಲಕ್ಷ್ಮೀಪತಿ ಇಹಲೋಕ ತ್ಯಜಿಸಿದ್ದಾರೆ. 

    ಕೆಜಿಎಫ್ ಚಿತ್ರದಲ್ಲಿ ಅರೆಹುಚ್ಚನ ಪಾತ್ರದಲ್ಲಿ ಮಿಂಚಿದ್ದ ಲಕ್ಷ್ಮೀಪತಿಯವರ ವಿಡಿಯೋವೊಂದನ್ನು ಚಿತ್ರದ ಛಾಯಾಗ್ರಹಕ ಭುವನ್ ಗೌಡ ಷೇರ್ ಮಾಡಿದ್ದು, ಲಕ್ಷ್ಮೀಪತಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

  • ಕೆಜಿಎಫ್‍ನಲ್ಲಿ ಗಡ್ಡಪ್ಪ ಯಶ್ ಒಬ್ರೇ ಅಲ್ಲ..!

    kgf first look

    ಕೆಜಿಎಫ್. ಕನ್ನಡದ ಬಹುನಿರೀಕ್ಷಿತ ಚಿತ್ರ. ಚಿತ್ರ ಎಂಥದ್ದು..? ಕಥೆ ಏನು..? ಅನ್ನೋದ್ರ ಬಗ್ಗೆ ಚಿತ್ರತಂಡ ಒಂದೇ ಒಂದು ಸುಳಿವು ಬಿಟ್ಟುಕೊಟ್ಟಿಲ್ಲ. ಚಿತ್ರತಂಡದಿದಂದ ಹೊರಬಿದ್ದಿರೋದು ಯಶ್ ಅವರ ಎರಡು ಫೋಟೋಗಳಷ್ಟೆ. ಅಷ್ಟರಮಟ್ಟಿಗೆ ನಿಗೂಢತೆ ಕಾಯ್ದುಕೊಂಡು ಕುತೂಹಲ ಹುಟ್ಟಿಸಿದೆ ಕೆಜಿಎಫ್.

    ಆ ಫೋಟೋ ಹಾಗೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್ ಅವರನ್ನು ನೋಡಿದರಿಗೆ ಒಂದು ಪ್ರಶ್ನೆ ಕಾಡುತ್ತಲೇ ಇದೆ. ಏನಿದು ಗಡ್ಡದ ಸೀಕ್ರೆಟ್..? ಎಷ್ಟೇ ಕೇಳಿದರೂ, ಅದರ ಬಗ್ಗೆ ಮಾತ್ರ ಯಶ್ ಬಾಯಿಬಿಡಲ್ಲ. ಈಗ ಆ ಕುತೂಹಲಗಳ ಜೊತೆ ಇನ್ನೊಂದು ಹುಳ ಬಿಟ್ಟಿದ್ದಾರೆ ಅಯ್ಯಪ್ಪ. ಸಾಯಿಕುಮಾರ್ ಹಾಗೂ ರವಿಶಂಕರ್ ಅವರ ಸಹೋದರರಾಗಿರುವ ಅಯ್ಯಪ್ಪ ಅವರಿಗೆ ಚಿತ್ರದಲ್ಲೊಂದು ಪಾತ್ರವಿದೆ. ಅವರ ಪಾತ್ರದ ಶೂಟಿಂಗ್ ಮುಗಿದಿದೆ.

    ಶೂಟಿಂಗ್ ಮುಗಿದ ಮೇಲೆ ಮಾತನಾಡಿರುವ ಅಯ್ಯಪ್ಪ, ಯಶ್ ಒಬ್ಬರಷ್ಟೇ ಅಲ್ಲ, ಚಿತ್ರತಂಡದಲ್ಲಿ ಗಡ್ಡಧಾರಿಗಳ ಸಂಖ್ಯೆ 500ಕ್ಕೂ ಹೆಚ್ಚಿದೆ ಎಂದಿದ್ದಾರೆ. ಅವರು ಬಹಿರಂಗಪಡಿಸಿರುವ ಹೊಸ ವಿಷಯ ಇದೊಂದೇ. ಉಳಿದಂತೆ ಚಿತ್ರದಲ್ಲಿರುವುದು 80ರ ದಶಕದ ಕಾಲದ ಕಥೆ ಎಂದಿದ್ದಾರೆ ಅಯ್ಯಪ್ಪ. ಅಲ್ಲಿಗೆ ಚಿತ್ರ ಹಾಗೂ ಚಿತ್ರತಂಡದಲ್ಲಿ ಯಶ್ ಒಬ್ಬರೇ ಗಡ್ಡಪ್ಪ ಅಲ್ಲ ಅನ್ನೋದು ಗೊತ್ತಾಗಿದೆ. ಆದರೆ, ಚಿತ್ರದ ಕಥೆ ಏನು..? 

  • ಕೆಜಿಎಫ್‍ನಲ್ಲಿ ಪೊಗರು ತೋರಿಸ್ತಾರೆ ಶ್ರೀನಿಧಿ ಶೆಟ್ಟಿ

    srinidhi plays a role of girl with attitude in kgf

    ಕೆಜಿಎಫ್‍ನಲ್ಲಿ ಹೀರೋಯಿನ್ ಶ್ರೀನಿಧಿ ಶೆಟ್ಟಿ. ಕೆಜಿಎಫ್‍ನಲ್ಲಿ ಹೀರೋಯಿನ್ ಪಾತ್ರವನ್ನು ರಹಸ್ಯವಾಗಿಯೇ ಉಳಿಸಿಕೊಳ್ಳಲಾಗಿದೆ. ಹೊರಗೆ ಹೆಚ್ಚು ತೋರಿಸಿಲ್ಲ. ಆದರೆ, ಚಿತ್ರದಲ್ಲಿ ತಮ್ಮದು ಪೊಗರಿನ ಹುಡುಗಿಯ ಪಾತ್ರ ಎಂದಿದ್ದಾರೆ ಶ್ರೀನಿಧಿ ಶೆಟ್ಟಿ.

    ತುಂಬಾ ಪೊಗರು ಇರುವ ಹುಡುಗಿ. ಯಾರಿಗೂ ಕೇರ್ ಮಾಡದ ಸ್ವಭಾವ. ಬೇಕು ಎನಿಸಿದ್ದನ್ನು ಪಡೆದೇ ತೀರುವ ಹಠಮಾರಿ... ಹೀಗೆ ಪಾತ್ರಕ್ಕೆ ಹಲವು ಶೇಡ್‍ಗಳಿವೆ ಎಂದಿದ್ದಾರೆ ಶ್ರೀನಿಧಿ ಶೆಟ್ಟಿ.

    ಶ್ರೀನಿಧಿಗೆ ಇದು ಮೊದಲ ಸಿನಿಮಾ. ಮೊದಲ ಸಿನಿಮಾಗಾಗಿಯೇ ಎರಡೂವರೆ ವರ್ಷ ಕಾದಿದ್ದಕ್ಕೆ ಬೇಸರವೇನಿಲ್ಲ. ಅದೊಂದು ಯುನಿವರ್ಸಿಟಿಯಂತಿತ್ತು. ಬಹಳಷ್ಟು ಕಲಿತಿದ್ದೇನೆ ಎಂದಿದ್ದಾರೆ ಶ್ರೀನಿಧಿ.

  • ಕೊನೆಯ ಹಂತದಲ್ಲಿ ಕೆಜಿಎಫ್ 2

    kgf chapter 2 shooting in final stages

    ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ಬಂದಿದೆ. ಇತ್ತೀಚೆಗಷ್ಟೇ ರವೀನಾ ಟಂಡನ್ ನಟಿಸಬೇಕಿದ್ದ ದೃಶ್ಯಗಳ ಶೂಟಿಂಗ್ ಮುಗಿದಿದೆ. ರವೀನಾ ಮುಂಬೈಗೆ ವಾಪಸ್ ಆಗಿದ್ದಾರೆ. ಸಂಜಯ್ ದತ್ ದೃಶ್ಯಗಳೂ ಮುಗಿದಿವೆ. ಹೀರೋಯಿನ್ ಜೊತೆಗಿನ ದೃಶ್ಯಗಳೂ ಕಂಪ್ಲೀಟ್ ಆಗಿವೆ. ಶ್ರೀನಿಧಿ ಶೆಟ್ಟಿ ತಮಿಳು ಚಿತ್ರದಲ್ಲಿ ಬ್ಯುಸಿ. ಹೀಗಿರುವಾಗಲೇ ಚಿತ್ರೀಕರಣ ಕಡೆಯ ಹಂತಕ್ಕೆ ಬಂದಿದೆ ಎನ್ನುವ ಅಪ್‍ಡೇಟ್ ಕೊಟ್ಟಿದ್ದಾರೆ ಡೈರೆಕ್ಟರ್ ಪ್ರಶಾಂತ್ ನೀಲ್.

    ಚಿತ್ರೀಕರಣದ ಕೊನೆಯ ಹಂತದಲ್ಲಿದ್ದೇವೆ ಎಂಬ ಸಂದೇಶ ಕೊಟ್ಟಿರೋ ಪ್ರಶಾಂತ್ ನೀಲ್ ಜೊತೆಗೊಂದು ಶಾಕ್‍ನ್ನೂ ಕೊಟ್ಟಿದ್ದಾರೆ. ಇನ್ನು ಮುಂದೆ ಚಿತ್ರದ ಅಪ್‍ಡೇಟ್ಸ್ ಸಿಗುವುದು ಕಷ್ಟ ಕಷ್ಟ ಎನ್ನುವ ಶಾಕ್ ಕೊಟ್ಟಿದ್ದಾರೆ ಪ್ರಶಾಂತ್ ನೀಲ್. ಏಕೆಂದರೆ ಶೂಟಿಂಗ್ ಮುಗಿದ ನಂತರ ಪ್ರಶಾಂತ್ ನೀಲ್ ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಬ್ಯುಸಿಯಾಗುತ್ತಾರೆ.

    ನಟ ಯಶ್ ಸೇರಿದಂತೆ ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ ಪ್ರಶಾಂತ್ ನೀಲ್ ಅನುಮತಿಯಿಲ್ಲದೆ, ತಿಳಿಸದೆ ಚಿತ್ರದ ಬಗ್ಗೆ ಮಾತನಾಡುವಂತಿಲ್ಲ. ಹೀಗಿರುವಾಗ ಅಪ್‍ಡೇಟ್ ಬೇಕೆಂದರೆ ನಿರ್ದೇಶಕರೇ ಬಾಯ್ಬಿಡಬೇಕು. ನಿರ್ದೇಶಕರೋ.. ಈಗಲೇ ಇನ್ನು ಮುಂದೆ ಅಪ್‍ಡೇಟ್ ಮಿಸ್ ಮಾಡಿಕೊಳ್ತೀರಿ ಅನ್ನೋ ಮೆಸೇಜ್ ಇಟ್ಟಿದ್ದಾರೆ.

  • ಕ್ರೇಜಿ ಪುತ್ರನಿಗೆ ರಾಕಿಂಗ್ ಸ್ಟಾರ್ ಹಾರೈಕೆ

    yash wishes manoranjan

    ಮನೋರಂಜನ್ ರವಿಚಂದ್ರನ್ ಅಭಿನಯದ ಬೃಹಸ್ಪತಿ ಚಿತ್ರ ಈ ದಿನ ರಿಲೀಸ್. ಮಿಶ್ಮಿ ಚಕ್ರವರ್ತಿ ನಾಯಕಿಯಾಗಿರುವ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನವಿದೆ. ಚಿತ್ರವನ್ನು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಹಾಗೆ ಎದುರು ನೋಡುತ್ತಿರುವವರಲ್ಲಿ ನಾನೂ ಕೂಡಾ ಒಬ್ಬ ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.

    ಮನೋರಂಜನ್ ಅವರ ಡೆಡಿಕೇಶನ್ ತುಂಬಾ ಇಷ್ಟ. ಮನು ಡ್ಯಾನ್ಸ್, ಫೈಟ್ ಪ್ರಾಕ್ಟೀಸ್ ಮಾಡಿರುವುದನ್ನು ನಾನೂ ನೋಡಿದ್ದೇನೆ. ಹಾಡುಗಳು ಸೂಪರ್ ಆಗಿವೆ. ಸಿನಿಮಾ ನೋಡೋಕೆ ನಾನೂ ಕಾಯ್ತಿದ್ದೇನೆ. ನೀವು ನೋಡಿ. ಶುಭ ಹಾರೈಸಿ ಎಂದು ಹೇಳಿದ್ದಾರೆ ಯಶ್.

    ಹರಿಕೃಷ್ಣ ಅವರ ಮ್ಯೂಸಿಕ್‍ನಲ್ಲಿ ಹಾಡುಗಳು ಅದ್ದೂರಿಯಾಗಿ ಬಂದಿವೆ. ಚಿತ್ರದ ಟ್ರೇಲರ್ ಕೂಡಾ ಅಭಿಮಾನಿಗಳಿಗೆ ಇಷ್ಟವಾಗಿದೆ. ಇಂದಿನಿಂದ ಬೃಹಸ್ಪತಿ ಪ್ರೇಕ್ಷಕರ ಮಡಿಲಿಗೆ ಸೇರಿದ್ದಾನೆ.

  • ಗಡ್ಡಧಾರಿಗಳೆಲ್ಲ ಕ್ಯೂನಲ್ಲಿ ನಿಂತ್ರು..

    kgf craze witnessed in malleswaram

    ಕೆಜಿಎಫ್ ಚಿತ್ರದ ಹೈಲೈಟುಗಳು ಒಂದೆರಡಲ್ಲ.. ಹೀಗಾಗಿಯೇ ದಾಖಲೆ ಬರೆದ ಚಿತ್ರದಲ್ಲಿ ಗಡ್ಡಧಾರಿಗಳೂ ಗಮನ ಸೆಳೆದಿದ್ದರು. ಹೀರೋ, ವಿಲನ್, ಸಣ್ಣ ಪುಟ್ಟ ಪಾತ್ರಗಳು.. ಎಲ್ಲರೂ ಗಡ್ಡಧಾರಿಗಳೇ. ಹೀಗಾಗಿಯೇ, ಕೆಜಿಎಫ್ 2 ಚಿತ್ರದ ಅಡಿಷನ್‍ಗೆ ಸಾಲು ಸಾಲಾಗಿ ನಿಂತಿದ್ದವರಲ್ಲಿ ಗಡ್ಡಧಾರಿಗಳೇ ಹೆಚ್ಚಿದ್ದರು.

    ಮೇ 6ನೇ ತಾರೀಕಿನಿಂದ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಅಧಿಕೃತವಾಗಿ ಆರಂಭವಾಗಲಿದೆ. ಜೂನ್ ಆರಂಭದಲ್ಲಿ ಯಶ್ ಪಾತ್ರದ ಚಿತ್ರೀಕರಣ ಶುರುವಾಗಲಿದೆ. ಇದಕ್ಕೂ ಮುನ್ನ ಕೆಲವು ಪುಟ್ಟ ಪುಟ್ಟ ಪಾತ್ರಗಳಿಗಾಗಿ ಅಡಿಷನ್ ನಡೆಸಲಾಗಿದೆ. ಮಲ್ಲೇಶ್ವರಂ ಜಿಎಂ ರಿಜಾಯ್ಸ್‍ನಲ್ಲಿ ನಡೆದ ಅಡಿಷನ್ಸ್‍ನಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಹಾಗೆ ಬಂದವರಲ್ಲಿ ಗಡ್ಡಧಾರಿಗಳೇ ಹೆಚ್ಚಿದ್ದರು. 8ರಿಂದ 16 ವರ್ಷದ ಮಕ್ಕಳು, 25 ವರ್ಷದ ಯುವಕರಿಗೆ ಅಡಿಷನ್‍ಗೆ ಬರುವಂತೆ ಮೊದಲೇ ಸೂಚಿಸಲಾಗಿತ್ತು. ಅವರೆಲ್ಲ ತಮ್ಮ ತಮ್ಮ ಪ್ರತಿಭೆಯನ್ನು ಕೇವಲ 1 ನಿಮಿಷದಲ್ಲಿ ತೋರಿಸಬೇಕಿತ್ತು.

    ರಸ್ತೆಯುದ್ದಕ್ಕೂ ಕ್ಯೂ ನಿಂತಿದ್ದ ಯುವಕರ ಸರದಿ ಸಾಲು, ಕಿಲೋಮೀಟರುಗಟ್ಟಲೆ ಇತ್ತು ಎನ್ನುವುದೇ ಕೆಜಿಎಫ್ ಹವಾಗೆ ಸಾಕ್ಷಿ. ಇವರಲ್ಲಿ ಕೆಲವರನ್ನು ನಿರ್ದೇಶಕ ಪ್ರಶಾಂತ್ ನೀಲ್ ಆಯ್ಕೆ ಮಾಡಿದ್ದಾರಂತೆ

  • ಗರುಡನ ಹೊಸ ಕಾರಿಗೆ ರಾಕಿ ಭಾಯ್ ಖುಷ್ ಹುವಾ

    kgf fame garuda buys new car

    ಕೆಜಿಎಫ್ ಸಿನಿಮಾದ ಪ್ರಮುಖ ವಿಲನ್ ಗರುಡ. ಸಿನಿಮಾದಲ್ಲಿ ಗರಡು ಕೋಟ್ಯಧೀಶ್ವರ. ಆದರೆ, ರಿಯಲ್ ಲೈಫಲ್ಲಿ ಹಾಗೇನೂ ಇರಲಿಲ್ಲ. ಎಲ್ಲವನ್ನೂ ಬದಲು ಮಾಡಿದ್ದು ಕೆಜಿಎಫ್ ಸಿನಿಮಾ. ಗರುಡನ ಪಾತ್ರದಲ್ಲಿ ಯಶ್ ಎದುರು ಮಿಂಚಿದ್ದ ರಾಮಚಂದ್ರ ಈಗ ತಾನೇ ಫಾರ್ಚೂನರ್ ಕಾರ್‍ನ ಓನರ್ ಆಗಿದ್ದಾರೆ.

    ಯಶ್ ಅವರ ಗೆಳೆಯನೂ ಆಗಿರುವ ರಾಮ್, ಹೊಸ ಕಾರು ಕೊಂಡ ತಕ್ಷಣ ಹೋಗಿದ್ದು ಯಶ್ ಹತ್ತಿರಕ್ಕೆ. ಯಶ್ ಮನೆಗೆ ಹೋಗಿ, ಕಾರು ತೋರಿಸಿ, ಜೊತೆಯಲ್ಲೊಂದು ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ. ಗೆಳೆಯರ ಸಾಧನೆಗಳನ್ನು ನೋಡಿ ನೋಡಿ ಖುಷಿಯಾಗೋ ಯಶ್, ರಾಮ್‍ಗ ಶುಭ ಕೋರಿದ್ದಾರೆ.

  • ಗಲಿ ಗಲಿ ಮೇ.. ಡ್ಯಾನ್ಸ್ ಯಶ್ ಜೊತೆ ರಾಧಿಕಾ ಪಂಡಿತ್ ಹೆಜ್ಜೆ

    yash dances for gali gali

    ಕೆಜಿಎಫ್‍ನಲ್ಲಿ ಭರ್ಜರಿ ಸೌಂಡು ಮಾಡಿದ್ದ ಹಾಡು ಗಲೀ ಗಲೀ ಮೇ.. ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಬಳಸಿದ್ದರೆ, ಹಿಂದಿ ವರ್ಷನ್‍ನಲ್ಲಿ ಗಲಿ ಗಲಿ ಮೇ.. ಹಾಡನ್ನು ಬಳಸಲಾಗಿತ್ತು. ಆ ಹಾಡಿಗೆ ಯಶ್ ಜೊತೆ ಹೆಜ್ಜೆ ಹಾಕಿದ್ದ ಚೆಲುವೆ ಮೌನಿ ರಾಯ್ ಹಾಡಿ ಕುಣಿದಿದ್ದರು. ಈಗ ಅದೇ ಹಾಡಿಗೆ ಯಶ್ ಜೊತೆ ರಾಧಿಕಾ ಪಂಡಿತ್ ಹೆಜ್ಜೆ ಹಾಕಿದ್ದಾರೆ.

    2ನೇ ಮಗುವಿಗೆ ತಾಯಿಯಾಗುತ್ತಿರುವ ರಾಧಿಕಾ ಪಂಡಿತ್ ಜೊತೆ ಯಶ್ ಗಲೀ ಗಲೀ ಮೇ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಈಗಲೂ ನಾನು ನಿಮ್ಮೊಂದಿಗೆ ನಿಮ್ಮ ರಿದಂಗೆ ಹೆಜ್ಜೆ ಹಾಕಬಲ್ಲೆ ಎಂದು ಬರೆದುಕೊಂಡಿದ್ದಾರೆ ರಾಧಿಕಾ ಪಂಡಿತ್. 

  • ಗೂಗ್ಲಿ 2 - ಗುರು ಚಿತ್ರದ ಸೀಕ್ವೆಲ್ ಶಿಷ್ಯನ ನಿರ್ದೇಶನದಲ್ಲಿ..

    googly 2 on board without yash

    ಗೂಗ್ಲಿ.. 2013ರಲ್ಲಿ ತೆರೆಕಂಡಿದ್ದ ಚಿತ್ರವಿದು. ಪವನ್ ಒಡೆಯರ್ ನಿರ್ದೇಶನದ, ಯಶ್,ಕೃತಿ ಕರಬಂಧ ಅಭಿನಯದ ಸಿನಿಮಾ ಸೂಪರ್ ಹಿಟ್. ಈಗ ಆ ಚಿತ್ರದ ಸೀಕ್ವೆಲ್ ಬರುತ್ತಿದೆ.. ಗೂಗ್ಲಿ-2.

    ಅದರೆ.. ಈ ಚಿತ್ರದ ಅರ್ಥಾತ್ ಗೂಗ್ಲಿ-2 ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ ಅಲ್ಲ. ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದ ರಾಜಗುರು.

    ಗೂಗ್ಲಿ-2 ಚಿತ್ರದ ಹೀರೋ ಕೂಡಾ ಯಶ್ ಅಲ್ಲ. ನಾನು ಮತ್ತು ವರಲಕ್ಷ್ಮಿ ಚಿತ್ರದಲ್ಲಿ ನಟಿಸಿದ್ದ ಪೃಥ್ವಿ ಹೀರೋ. ನಾಯಕಿಯಾಗಿ ಕೃತಿ ಕರಬಂಧ ಅಥವಾ ಅನುಪಮಾ ಪರಮೇಶ್ವರನ್ ನಟಿಸುವ ಸಾಧ್ಯತೆ ಇದೆ. ಕಥೆಯನ್ನು ಪವನ್ ಒಡೆಯರ್ ಅವರಿಗೂ ಹೇಳಿದ್ದೆ. ಗೂಗ್ಲಿ ಚಿತ್ರದ ಟೈಮಲ್ಲೇ ಹೊಳೆದಿದ್ದ ಕಥೆ ಇದು. ಈ ಚಿತ್ರದ ಕಥೆಗೂ, ಗೂಗ್ಲಿ ಚಿತ್ರದ ಕಥೆಗೂ ಸಂಬಂಧ ಇಲ್ಲ. ಹೆಸರಷ್ಟೆ ಗೂಗ್ಲಿ-2. ಕಥೆ ಸಂಪೂರ್ಣ ಹೊಸದು ಎಂದಿದ್ದಾರೆ ರಾಜಗುರು. ಗೂಗ್ಲಿ-2ಗೆ ಮಂಜುನಾಥ್ ನಿರ್ಮಾಪಕರು.

  • ಗೆಳತಿಯರಿಂದಲೇ ರಾಧಿಕಾ ಪಂಡಿತ್ ಸೀಮಂತ

    radhika pandit'a baby shower

    ನಟಿ ರಾಧಿಕಾ ಪಂಡಿತ್ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗು ಐರಾಳ ತೊದಲು ಮಾತು ಕೇಳುವ ಹೊತ್ತಿನಲ್ಲಾಗಲೇ 2ನೇ ಮಗುವಿಗಾಗಿ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ರಾಧಿಕಾ ಪಂಡಿತ್ ಸೀಮಂತವೂ ಆಗಿದೆ.

    ವೆಸ್ಟರ್ನ್ ಶೈಲಿಯಲ್ಲಿ ರಾಧಿಕಾರ ಸೀಮಂತ ಮಾಡಿರುವುದು ಗೆಳತಿಯರು. ಫೇರಿಟೇಲ್ ನೆನಪಿಸುವ ಶೈಲಿಯಲ್ಲಿ ರಾಧಿಕಾ ಪಂಡಿತ್ ಅವರ ಸೀಮಂತ ಮಾಡಿ ಸಂಭ್ರಮಿಸಿದ್ದಾರೆ. ಮನೆಯವರು ಮಾಡುವುದು ಬೇರೆ.. ಅಣ್ಣನೋ.. ಅಕ್ಕನೋ.. ತಂಗಿಯರೋ ಮಾಡುವುದು ಬೇರೆ.. ಇದು ಹಾಗಲ್ಲ. ರಾಧಿಕಾ ಪಂಡಿತ್ ತಮ್ಮ ಗೆಳತಿಯರನ್ನು ಪ್ರೀತಿಸುವ ಪರಿ ಹೇಗಿದೆ ಎಂಬುದಕ್ಕೆ ಈ ಸೀಮಂತವೇ ಉದಾಹರಣೆ.

  • ಗೋಶಾಲೆಗೆ ಆಸರೆಯಾದ ಜೋಡೆತ್ತುಗಳು

    darshan and yash steps forward to fullfill theeir promise

    ಜೋಡೆತ್ತು ಎಂದರೆ ತಕ್ಷಣ ಕಣ್ಣ ಮುಂದೆ ಬರೋದು ದರ್ಶನ್ ಮತ್ತು ಯಶ್. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಇಬ್ಬರಿಗೂ ಸಿಕ್ಕ ಬಿರುದು ಇದು. ಈಗ ಈ ಇಬ್ಬರೂ ಒಂದು ಜನ ಮೆಚ್ಚುಗೆಯ ಕೆಲಸ ಮಾಡುತ್ತಿದ್ದಾರೆ.

    ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಚೈತ್ರ ಗೋಶಾಲೆಯಿದೆ. ಆ ಗೋಶಾಲೆಗೆ ಯಶ್ ಕಟ್ಟಡ ಕಟ್ಟಿಸಿಕೊಡುವ ಭರವಸೆ ಕೊಟ್ಟಿದ್ದರು. ಕಟ್ಟಡ ನಿರ್ಮಾಣದ ಕೆಲಸ ಶುರುವಾಗಿದೆ.

    ಇತ್ತ ದರ್ಶನ್ ಗೋಶಾಲೆಗೆ ಬೇಕಾದ ಹುಲ್ಲನ್ನು ಟ್ರಕ್ಕು, ಟ್ರ್ಯಾಕ್ಟರುಗಳಲ್ಲಿ ತರಿಸಿಕೊಟ್ಟಿದ್ದಾರೆ. ಹಸುಗಳ ಬಗ್ಗೆ ಸದಾ ವಿಶೇಷ ಕಾಳಜಿ ವಹಿಸುವ ದರ್ಶನ್, ಗೋಶಾಲೆಗೆ ನೆರವು ನೀಡಲು ಟೊಂಕ ಕಟ್ಟಿದ್ದಾರೆ. ಇಬ್ಬರೂ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

  • ಚಕ್ರವ್ಯೂಹ ಗೆದ್ದ ಕೆಜಿಎಫ್ 2ಗೆ ಬಿಗ್ ರಿಲೀಫ್

    kgf movie team gets relief from high court

    ಕೆಜಿಎಫ್ ಚಾಪ್ಟರ್ 2 ತಂಡಕ್ಕೆ ಎದುರಾಗಿದ್ದ ಅತಿ ದೊಡ್ಡ ಸಮಸ್ಯೆಯೊಂದು ಕೊನೆಗೂ ನಿವಾರಣೆಯಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್ ಅಭಿನಯದ ಕೆಜಿಎಫ್ 2ಗೆ ಅತಿದೊಡ್ಡ ರಿಲೀಫ್ ಸಿಕ್ಕಿದೆ.

    ಕೆಜಿಎಫ್‍ನ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ ಶ್ರೀನಿವಾಸ್ ಎಂಬುವವರು ಕೆಜಿಎಫ್‍ನ ಸೈನೇಡ್ ಪ್ರದೇಶದಲ್ಲಿ ಚಿತ್ರೀಕರಣ ಮಾಡದಂತೆ ನ್ಯಾಯಾಲಯದಿಂದ ತಡೆ ತಂದಿದ್ದರು. ಸೈನೇಡ್‍ನ ದಿಬ್ಬಗಳಲ್ಲಿ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ವಾದಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ನಿರ್ಮಾಪಕ ವಿಜಯ್ ಕಿರಗಂದೂರು, ಹೈಕೋರ್ಟ್‍ನಲ್ಲಿ ವಾಗ್ದಾನ ನೀಡಿ ಮತ್ತೆ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದಾರೆ. 25 ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತೇವೆ ಹಾಗೂ ಪರಿಸರಕ್ಕೆ ಹಾನಿ ಮಾಡುವುದಿಲ್ಲ ಎಂದು ಹೈಕೋರ್ಟ್‍ನಲ್ಲಿ ವಾಗ್ದಾನ ನೀಡಿ, ಮತ್ತೆ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1, ಸೂಪರ್ ಸಕ್ಸಸ್ ಕಂಡಿದ್ದು, ಚಾಪ್ಟರ್ 2 ಮೇಲೆ ಭರ್ಜರಿ ನಿರೀಕ್ಷೆ ಇದೆ.

     

  • ಚಾಹಲ್ ದಂಪತಿ ಜೊತೆ ಯಶ್ ದಂಪತಿ

    ಚಾಹಲ್ ದಂಪತಿ ಜೊತೆ ಯಶ್ ದಂಪತಿ

    ಯಜುವೇಂದ್ರ ಚಾಹಲ್, ಟೀಂ ಇಂಡಿಯಾದ ನಂಬಿಕಸ್ತ ಬೌಲರ್. ಅದ್ಭುತ ಆಟಗಾರನಷ್ಟೇ ಅಲ್ಲ, ಸಿಕ್ಕಾಪಟ್ಟೆ ತರಲೆಯೂ ಹೌದು. ಇತ್ತೀಚೆಗಷ್ಟೇ ಮದುವೆಯಾಗಿರುವ ಚಾಹಲ್, ತಮ್ಮ ಪತ್ನಿಯೊಂದಿಗೆ ಯಶ್ ದಂಪತಿಯನ್ನು ಭೇಟಿ ಮಾಡಿರುವುದು ವಿಶೇಷ. ಅದೂ ಬೆಂಗಳೂರಿನಲ್ಲೇ.

    ಯಶ್ ಜೊತೆಯಲ್ಲೇ ಇರುವ ಅವರ ಗೆಳೆಯ ಹಾಗೂ ಆಪ್ತ ಸಹಾಯಕ ಚೇತನ್ ಮದುವೆಯಲ್ಲಿ ಯಶ್ ದಂಪತಿ ಹಾಜರಿದ್ದರು. ಈ ವೇಳೆಯಲ್ಲೇ ಚಾಹಲ್ ಹಾಗೂ ಧನಶ್ರೀ ವರ್ಮಾ ಯಶ್ ಮತ್ತು ರಾಧಿಕಾರನ್ನು ಭೇಟಿ ಮಾಡಿದ್ದಾರೆ.

    ಏಕೆ ಅನ್ನೋದು ಗೊತ್ತಿಲ್ಲವಾದರೂ, ಸದ್ಯಕ್ಕೆ ಈ ಫೋಟೋಗಳು ಸೆನ್ಸೇಷನ್ ಸೃಷ್ಟಿಸಿವೆ.

  • ಚೀನಾಗೆ ಹೋಗ್ತಿದೆ ಕೆಜಿಎಫ್

    kgf to release in china

    ಕೆಜಿಎಫ್, ಆಲ್‍ಮೋಸ್ಟ್.. ಇಡೀ ಜಗತ್ತನ್ನು ಆವರಿಸಿಕೊಂಡಿದೆ. ಭಾರತ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಏಷ್ಯಾದ ಇನ್ನಿತರ ರಾಷ್ಟ್ರಗಳು.. ಎಲ್ಲೆಡೆ ರಿಲೀಸ್ ಆಗಿ ಅದ್ಭುತವಾಗಿ ಗೆದ್ದಿದೆ. 100 ಕೋಟಿ ಕ್ಲಬ್ ಸೇರಿದೆ. ಈಗ ಅದೇ ಸಿನಿಮಾವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಚೀನಾದಲ್ಲಿ ರಿಲೀಸ್ ಮಾಡೋಕೆ ಸಿದ್ಧರಾಗಿದ್ದಾರೆ ವಿಜಯ್ ಕಿರಗಂದೂರು.

    `ಈಗಾಗಲೇ ಮಾತುಕತೆ ನಡೆಯುತ್ತಿದೆ. ಚೀನಾದಲ್ಲಿ ರಿಲೀಸ್ ಮಾಡೋಕೆ ಅಲ್ಲಿನ ಸರ್ಕಾರ ಸಿನಿಮಾ ನೋಡಿ ಒಪ್ಪಿಗೆ ಕೊಡಬೇಕು. ಪ್ರಯತ್ನಗಳು ಶುರುವಾಗಿವೆ. ಎಲ್ಲವೂ ಅಂದುಕೊಂಡಂತೆ ಆದರೆ, ಹೊಸ ವರ್ಷದ ಆರಂಭದಲ್ಲೇ ಕೆಜಿಎಫ್, ಚೀನಾದಲ್ಲಿ ರಿಲೀಸ್ ಆಗಲಿದೆ'' ಎಂದಿದ್ದಾರೆ ವಿಜಯ್ ಕಿರಗಂದೂರು.

    ವರ್ಷಕ್ಕೆ ಕೆಜಿಎಫ್‍ನಂತಹ ನಾಲ್ಕೈದು ಸಿನಿಮಾಗಳಾದರೂ ಆದರೆ, ಪರಭಾಷೆ ಸಿನಿಮಾಗಳ ಮುಂದೆ ನಾವೇನು ಎಂದು ತೋರಿಸಿಕೊಳ್ಳೋಕೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ ವಿಜಯ್ ಕಿರಗಂದೂರು.

  • ಜನವರಿ 8ಕ್ಕೆ ಕೆಜಿಎಫ್ 2 ಟೀಸರ್

    kgf 2 teaser on jan 8th

    ಕೆಜಿಎಫ್ 2ನಲ್ಲಿ ಏನಾಗ್ತಿದೆ..? ಅಪ್‌ಡೇಟ್ ಕೊಡಿ. ಟೀಸರ್, ಟ್ರೇಲರ್ ಯಾವಾಗ..? ಹೇಳಿ.. ಎಂದು ಒಂದೇ ಸಮನೆ ಬೆನ್ನು ಹತ್ತಿರೋ ಕೆಜಿಎಫ್ ಫ್ಯಾನ್ಸ್ಗಾಗಿ ಈ ನ್ಯೂಸ್. ಟೀಸರ್ ಬಿಡುಗಡೆಯಾಗೋ ಕಾಲ ಬಂದಾಗಿದೆ. ಇನ್ನೊಂದು ತಿಂಗಳು. ಜನವರಿ 8ರಂದು ಕೆಜಿಎಫ್ 2 ಟೀಸರ್ ಹೊರಬೀಳಲಿದೆ.

    ಕೆಜಿಎಫ್ 2ನಲ್ಲಿ ಯಶ್ ಜೊತೆ ಸಂಜಯ್ ದತ್ ಕೂಡಾ ನಟಿಸಿದ್ದು, ಪ್ರಶಾಂತ್ ನೀಲ್ ತಾಕತ್ತಿನ ಮೇಲೆ ಭಾರಿ ನಿರೀಕ್ಷೆಯಿದೆ. ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್ ಚಾಪ್ಟರ್ 2ನಲ್ಲಿ ಏನೇನು ಸೀಕ್ರೆಟ್, ಥ್ರಿಲ್ಲಿಂಗ್ ಅಂಶಗಳಿವೆಯೋ.. ಮೊದಲ ಗುಟ್ಟು ಹೊರಬೀಳೋದು ಜನವರಿ 8ಕ್ಕೆ.

  • ಜನವರಿ 8ಕ್ಕೆ ಕೆಜಿಎಫ್ 2 ಟೀಸರ್

    kgf chapter 2 teaser on jan 8th

    ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್.. ಅಭಿಮಾನಿಗಳನ್ನು ಕಾಯಿಸಿ.. ಕಾಯಿಸಿ.. ಕಾಯಿಸಿ.. ಕಾಯಿಸಿ.. ಕಾಯಿಸಿ.. ಕೊನೆಗೂ ಒಂದು ಥ್ರಿಲ್ ಕೊಡೋಕೆ ಮನಸ್ಸು ಮಾಡಿದ್ದಾರೆ. ಜನವರಿ 8ಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಇದು ಈ ಚಿತ್ರದ ಮೊದಲ ಟೀಸರ್ ಅನ್ನೋದು ನೆನಪಿನಲ್ಲಿರಲಿ.

    ಏಕೆಂದರೆ ಇದುವರೆಗೆ ಪ್ರಶಾಂತ್ ನೀಲ್ ತೋರಿಸಿರೋದು ಒಂದು ಪೋಸ್ಟರ್ ಮಾತ್ರ. ಅದೊಂದು ದೊಡ್ಡ ಸಾಮ್ರಾಜ್ಯ. ಅದನ್ನು ಸೃಷ್ಟಿಸಲು ನಾವು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದೇವೆ. ಮತ್ತಷ್ಟು ಬಲಿಷ್ಠರಾಗಿ, ದೊಡ್ಡದಾಗಿ ಬರುತ್ತಿದ್ದೇವೆ ಎಂದಿದ್ದಾರೆ ಪ್ರಶಾಂತ್.

    ಅಭಿಮಾನಿಗಳು ದಿನಗಳನ್ನು ಲೆಕ್ಕ ಹಾಕುತ್ತಿದ್ದಾರೆ. ಅಂದಹಾಗೆ.. ಜನವರಿ 8, ಯಶ್ ಹುಟ್ಟುಹಬ್ಬ. ಸ್ಸೋ.. ಇದು ಬರ್ತ್ ಡೇ ಗಿಫ್ಟ್.

  • ಜಿಮ್ ಬೆಂಬಲಕ್ಕೆ ರಾಕಿಂಗ್ ಸ್ಟಾರ್ : 50% ಓಕೆ

    ಜಿಮ್ ಬೆಂಬಲಕ್ಕೆ ರಾಕಿಂಗ್ ಸ್ಟಾರ್ : 50% ಓಕೆ

    ಪುನೀತ್ ಅಭಿಮಾನಿಗಳ ಪ್ರತಿಭಟನೆ, ಚಿತ್ರರಂಗದ ಒಗ್ಗಟ್ಟಿನ ಹೋರಾಟಕ್ಕೆ ಮಣಿದ ಸರ್ಕಾರ ಸಿನಿಮಾಗಳಿಗೆ ಹೇರಿದ್ದ ನಿರ್ಬಂಧವನ್ನೇನೋ ಸಡಿಲಿಸಿತು. ಆದರೆ, ಜಿಮ್`ನವರ ಬೇಡಿಕೆ ಹಾಗೆಯೇ ಇತ್ತು. ಈಗ ಅವರ ಬೇಡಿಕೆಯೂ ಈಡೇರಿದೆ. ಸಿನಿಮಾದವರಂತೆಯೇ ಜಿಮ್‍ನವರೂ ಹೆಚ್ಚೂ ಕಡಿಮೆ ಒಂದು ವರ್ಷ ಬಾಗಿಲು ಮುಚ್ಚಿದ್ದರು. ಜಿಮ್‍ನವರಿಗೂ ಸರ್ಕಾರದಿಂದ ಒಂದೇ ಒಂದು ಸಣ್ಣ ಸಹಕಾರವೂ ಸಿಕ್ಕಿರಲಿಲ್ಲ. ಚಿತ್ರಮಂದಿರಗಳಿಗೆ 50% ಎಂದಿದ್ದ ಸರ್ಕಾರ, ಜಿಮ್‍ಗಳನ್ನು 100% ಕ್ಲೋಸ್ ಮಾಡೋಕೆ ಹೊರಟಿತ್ತು. ಈಗ ಒತ್ತಾಯ, ಪ್ರತಿಭಟನೆಗಳ ನಂತರ 50%ಗೆ ಓಕೆ ಎಂದಿದೆ.

    ಜಿಮ್‍ನವರ ಹೋರಾಟಕ್ಕೆ ರಾಕಿಂಗ್ ಸ್ಟಾರ್ ಬೆಂಬಲ ಸೂಚಿಸಿದ್ದರು. ಅನ್ನ ಹುಟ್ಟಿಸದ ಸಭೆ, ಸಮಾರಂಭಗಳು ಮುಕ್ತ. ಹೊಟ್ಟೆ ಹೊರೆಯಲು ಮಾಡುವ ವ್ಯಕ್ತಿಗಳಿಗೆ ಹೊಡೆತ. ಅಪಘಾತ ಆಗುತ್ತದೆಂದು ವಾಹನ ಸಂಚಾರ ನಿಲ್ಲಿಸೋದು ಸರಿಯಾಗುತ್ತದೆಯೇ..? ಕಟ್ಟುನಿಟ್ಟಿನ ಸಂಚಾರ ಕ್ರಮ ಸಾಕಲ್ಲವೇ..? ಹಾಗೇ ಸಾಲ ಸೋಲ ಮಾಡಿ ಜಿಮ್ ನಡೆಸುವವರು ಕಷ್ಟಪಡುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಜಿಮ್ ಬಳಸಲು ಅವಕಾಶ ನೀಡಿದರೆ, ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು. ಜಿಮ್ ಮಾಲೀಕರು ಬದುಕಿಕೊಳ್ಳುತ್ತಾರಲ್ಲವೇ? ಎಂದಿದ್ದರು ಯಶ್. ಆದರೆ, ಅದೆಲ್ಲದಕ್ಕಿಂತ ಹೆಚ್ಚಾಗಿ ಅದೇ ಬರಹದ ಕೊನೆಯಲ್ಲಿದ್ದ ಮಾತುಗಳಲ್ಲಿ ಕೊರೊನಾ ಲಾಕ್ ಡೌನ್ ಹುಚ್ಚಾಟಕ್ಕೆ ಉತ್ತರವೂ ಇತ್ತು.

    ರೋಗಕ್ಕೆ ಪರಿಹಾರ ಏನೆಂದು ಗೊತ್ತಿಲ್ಲ. ಆದರೆ ಹಸಿವಿಗೆ ಪರಿಹಾರ ಗೊತ್ತಿದೆಯಲ್ಲ.

    ಜಿಮ್‍ನವರ ಹೋರಾಟವನ್ನು ದುನಿಯಾ ವಿಜಯ್ ಕೂಡಾ ಬೆಂಬಲಿಸಿದ್ದಾರೆ. ಹಾಗೆ ನೋಡಿದರೆ, ಜಿಮ್‍ನವರ ಪರ ದನಿಯೆತ್ತಿದ್ದ ಮೊದಲ ನಟ ದುನಿಯಾ ವಿಜಯ್. 

  • ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2

    ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2

    ಟೀಸರ್ನಲ್ಲೇ ಸಂಚಲನ ಸೃಷ್ಟಿಸಿದ ಕೆಜಿಎಫ್ ಚಾಪ್ಟರ್ 2 ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ. ಇನ್ನು 6 ತಿಂಗಳು. ಥಿಯೇಟರಿನಲ್ಲಿ ಚಿನ್ನದ ಗಣಿಯ ದೂಳು ಏಳಲಿದೆ. ರಾಕಿಭಾಯ್ ಯಶ್, ಅಧೀರ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ ಎಲ್ಲರನ್ನೂ ಆ ದಿನ ತೆರೆಯ ಮೇಲೆ ನೋಡಿ ಎಂಜಾಯ್ ಮಾಡಬಹುದು.

    ಚಾಪ್ಟರ್ 2 ಸೂಪರ್ ಸಕ್ಸಸ್ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಮೇ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಮತ್ತೊಮ್ಮೆ ಭಾರತೀಯ ಚಿತ್ರರಂದಲ್ಲಿ ಹೊಸ ದಾಖಲೆ ಬರೆಯಲಿದೆ ಎಂಬ ನಂಬಿಕೆಯಲ್ಲಿದ್ದಾರೆ ಅಭಿಮಾನಿಗಳು.

  • ಜೋಕೆ.. ಹಾಡು ಬಂತು.. ಹೇಗಿದ್ದಾಳೆ ಮಿಲ್ಕಿಬ್ಯೂಟಿ..?

    kgf's jakae lyrical video song creates sensation

    ಜೋಕೆ.. ನಾನು ಬಳ್ಳಿಯ ಮಿಂಚು.. ಈ ಹಾಡನ್ನು ಕೆಜಿಎಫ್‍ಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಬಂದಾಗಿನಿಂದ ಚಿತ್ರರಸಿಕರ ನಿರೀಕ್ಷೆ ಜೋರಾಗಿಯೇ ಇತ್ತು. ಅದರಲ್ಲೂ ಈ ಹಾಡಿಗೆ ಮಿಲ್ಕಿಬ್ಯೂಟಿ ತಮನ್ನಾ ಸೊಂಟ ಬಳುಕಿಸಿದ್ದಾರೆ ಎಂದಾಗ.. ನಿರೀಕ್ಷೆ ಮುಗಿಲುಮುಟ್ಟಿತ್ತು. ಹಾಗೆ ಮುಗಿಲು ಮುಟ್ಟಿದ ನಿರೀಕ್ಷೆಯನ್ನು ಸ್ವಲ್ಪ ಮಟ್ಟಿಗೆ ತಣಿಸಿದೆ ಕೆಜಿಎಫ್ ಟೀಂ.

    ಕೆಜಿಎಫ್ ಚಿತ್ರದ ಲಿರಿಕಲ್ ವಿಡಿಯೋ ಹೊರಬಿದ್ದಿದೆ. ಹಾಡಿನ ಒಂದಿಷ್ಟು ಫೋಟೋಗಳನ್ನು ಬಳಸಿಕೊಂಡು ಲಿರಿಕಲ್ ವಿಡಿಯೋ ಹೊರತರಲಾಗಿದೆ. ಯಶ್-ತಮನ್ನಾ ಕೆಮಿಸ್ಟ್ರಿ ಹೇಗಿರಲಿದೆ ಅನ್ನೋ ಕುತೂಹಲವನ್ನು ಸಿನಿಮಾ ರಿಲೀಸ್ ಆಗುವವರೆಗೂ ಉಳಿಸಿಕೊಳ್ಳೋ ಇರಾದೆ ಚಿತ್ರತಂಡಕ್ಕೆ ಇದ್ದ ಹಾಗಿದೆ.

    ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು.. ಆ ಕುತೂಹಲವನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ.

  • ಜೋಗಿ ಚಾಲೆಂಜ್.. ಯಶ್ ಕವನ ವಾಚನ.. ಮುಂದಿನ ಸವಾಲು ಯಾರಿಗೆ ಗೊತ್ತಾ..?

    yash sings kuvempu poem in kavana challenge

    ಇದು ರಾಜ್ಯೋತ್ಸವದ ಮಾಸ. ಇದನ್ನು ಶುರು ಮಾಡಿದ್ದು ಯಾರೋ ಗೊತ್ತಿಲ್ಲ. ಯುವಾ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಸವಾಲು ಸ್ವೀಕರಿಸಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಟ್ರೆಂಡ್ ಆಗಿದ್ದಂತೂ ಸತ್ಯ.

    ಕನ್ನಡ ಕಾವ್ಯ ವಚನ ಸವಾಲು. ತಾವು ಒಂದು ಕಾವ್ಯ ವಾಚಿಸಿ, ತಮ್ಮಂತೆಯೇ ಇನ್ನೂ ಐವರಿಗೆ ಕನ್ನಡದ ಕವಿತೆ ವಾಚಿಸುವ ಸವಾಲು ಹಾಕುವುದು. ಆ ಐವರು ಮತ್ತೆ ಐವರಿಗೆ ಸವಾಲು ದಾಟಿಸುತ್ತಾರೆ. ಸರಪಳಿ ಹೀಗೆಯೇ ಮುಂದುವರಿಯುತ್ತೆ...

    ಈ ಹಾದಿಯಲ್ಲಿ ಈಗಾಗಲೇ ಸೂಲಿಬೆಲೆ, ಪೇಜಾವರ ಶ್ರೀಗಳು, ಮಂತ್ರಾಲಯದ ಸುಬುದೇಂದ್ರ ತೀರ್ಥರು, ನಟ ರಮೇಶ್ ಅರವಿಂದ್, ನಟ ಗಣೇಶ್, ಪತ್ರಕರ್ತ ವಿಶ್ವೇಶ್ವರ ಭಟ್, ಜೋಗಿ ಮೊದಲಾದವರು ಕವನ ವಾಚನ ಮಾಡಿದ್ದಾರೆ. ಈ ಕವನ ವಾಚನ ಸರಪಳಿಯಲ್ಲಿ ಜೋಗಿ ತಮ್ಮ ಸವಾಲನ್ನು ಯಶ್ ಅವರಿಗೂ ಹಾಕಿದ್ದರು.

    ಯಶ್ ಕುವೆಂಪು ಅವರ ಓ ನನ್ನ ಚೇತನಾ.. ಆಗು ನೀ ಅನಿಕೇತನ ಪದ್ಯವನ್ನು ಹಾಡಿದ್ದಾರೆ. ವಿಶ್ವಮಾನವ ಕವನ ವಾಚಿಸಿ, ಈಗ ಕವನ ವಾಚಿಸುವ ಸವಾಲನ್ನು ತಮ್ಮ ಗುರುಗಳಾದ ನಾಗಾಭರಣ, ನಟರಾದ ರವಿಶಂಕರ್, ರವಿಶಂಕರ್ ಗೌಡ, ಚಿಕ್ಕಣ್ಣ, ಚಿತ್ರ ಸಾಹಿತಿಗಳಾದ ಡಾ.ನಾಗೇಂದ್ರ ಪ್ರಸಾದ್, ಗೌಸ್‌ಪೀರ್ ಅವರಿಗೆ ದಾಟಿಸಿದ್ದಾರೆ.

    ಈಗ ನಿಮ್ಮ ಸರದಿ. ನೀವು ಒಂದು ಕನ್ನಡ ಕವನ ಓದಿ. ನಿಮ್ಮ ಗೆಳೆಯರೋ.. ಮತ್ತೊಬ್ಬರೋ.. ಯಾರಾದರೂ ಇರಲಿ, ಅವರಿಗೆ ಸವಾಲು ಹಾಕಿ. ಅವರು ಮತ್ತೆ ಐವರಿಗೆ ಸವಾಲು ಹಾಕಲಿ.. ಕನ್ನಡ ಎಲ್ಲೆಲ್ಲೂ ಮೊಳಗಲಿ..

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery