` yash, - chitraloka.com | Kannada Movie News, Reviews | Image

yash,

 • ಕೆಜಿಎಫ್ 2 ಫಸ್ಟ್ ಲುಕ್ ಡಿಸೆಂಬರ್ 21ಕ್ಕೆ : ಆ ದಿನಾಂಕದಲ್ಲೇ ಇದೆ ಒಂದು ವಿಶೇಷ

  kgf chapter 2 first look on dec 21st

  ಕೆಜಿಎಫ್ ಚಾಪ್ಟರ್ 2 ಮತ್ತೊಂದು ಸೆನ್ಸೇಷನ್ ಸುದ್ದಿ ನೀಡಿದೆ. ಜನವರಿ 8ಕ್ಕೆ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ ಎಂಬ ಸುದ್ದಿ ಹೊರಬಿದ್ದಿರುವ ಬೆನ್ನಲ್ಲೇ, ಈಗ ಫಸ್ಟ್ಲುಕ್ ನ್ಯೂಸ್ ಹೊರಬಿಟ್ಟಿದೆ ತಂಡ. ಡಿಸೆಂಬರ್ 21ರ ಶನಿವಾರ ಸಂಜೆ 5 ಗಂಟೆ 45 ನಿಮಿಷಕ್ಕೆ ಸರಿಯಾಗಿ ಚಿತ್ರದ ಫಸ್ಟ್ಲುಕ್ ಹೊರಬೀಳಲಿದೆ.

  ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ ಜೊತೆಗೆ ಈ ಬಾರಿ ಸಂಜಯ್ ದತ್, ರವಿನಾ ಟಂಡನ್ ಕೂಡಾ ಇದ್ದಾರೆ. ಜೊತೆಗೆ ಅನಂತ್ ನಾಗ್, ಮಾಳವಿಕಾ, ಅಚ್ಯುತ್ ಕುಮಾರ್, ಅರ್ಚನಾ ಜೋಯಿಸ್, ವಸಿಷ್ಠ ಸಿಂಹ ಇದ್ದಾರೆ. ಹೊಂಬಾಳೆ ಬ್ಯಾನರ್‌ನ ಕೆಜಿಎಫ್ ಚಾಪ್ಟರ್ 2 2018ರಲ್ಲಿ ದಾಖಲೆ ಬರೆದಿದ್ದ ಕನ್ನಡ ಸಿನಿಮಾ.

  ಎಲ್ಲ ಓಕೆ, ಈ ದಿನಾಂಕದಲ್ಲೇನಿದೆ ಅಂತಾ ವಿಶೇಷ ಅಂತೀರಾ.. 2018ರ ಡಿಸೆಂಬರ್ 21ರಂದೇ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿತ್ತು. ದಾಖಲೆ ಸೃಷ್ಟಿಸಿತ್ತು. ಅದರ ನೆನಪಿಗಾಗಿ.. ಆ ದಿನವೇ ಫಸ್ಟ್ಲುಕ್ ಹೊರಬಿಡುತ್ತಿದೆ ಕೆಜಿಎಫ್ ಟೀಂ.

 • ಕೆಜಿಎಫ್ 2 ಬಂದ್ರೆ, ಚಾಪ್ಟರ್ 1 ಸಣ್ಣದು ಎನಿಸುತ್ತೆ - ಯಶ್

  yash speaks about kgf chapter 2

  ಕೆಜಿಎಫ್ ಚಾಪ್ಟರ್ 2 ಏನಾಗಿದೆ..? ಏನಾಗ್ತಾ ಇದೆ..? ಶೂಟಿಂಗ್ ಎಲ್ಲಿಗೆ ಬಂದಿದೆ..? ಏಕೆ ಕೆಜಿಎಫ್ 2 ಬಗ್ಗೆ ಯಾರೂ ಏನನ್ನೂ ಮಾತಾಡ್ತಾ ಇಲ್ಲ..? ಏಕೆ..? ಏನು..? ಎಲ್ಲಿ..? ಹೇಗೆ..? ಯಾವಾಗ..? ಹೀಗೆ ಕೆಜಿಎಫ್ ಟೀಂಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸ್ತಿದ್ದರೂ, ಚಾಪ್ಟರ್ 2 ಟೀಂನವರು ಅಭಿಮಾನಿಗಳ ಎಲ್ಲ ಕುತೂಹಲವನ್ನೂ ತಣಿಸುತ್ತಿಲ್ಲ. ಈಗ ಯಶ್ ಅವರೇ ಮಾತನಾಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ನಿರೀಕ್ಷೆ ಮತ್ತು ಕೆಜಿಎಫ್ ವೇಳೆ ಎದುರಿಸಿದ ಸವಾಲು ಎರಡಕ್ಕೂ ಉತ್ತರ ಕೊಟ್ಟಿದ್ದಾರೆ.

  ಕೆಜಿಎಫ್ ಚಾಪ್ಟರ್ 2 ತೆರೆಗೆ ಬಂದ್ರೆ, ಚಾಪ್ಟರ್ 1 ತುಂಬಾ ಸಣ್ಣದು ಎನಿಸಿಬಿಡುತ್ತೆ. ಜನರ ನಂಬಿಕೆ, ನಿರೀಕ್ಷೆಗೆ ತಕ್ಕಂತೆ ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಕೆಲಸ ಮಾಡುತ್ತಿದ್ದಾರೆ. ಒಬ್ಬ ನಟನಾಗಿ ನಾನೇನು ಮಾಡಬೇಕೋ ಮಾಡ್ತಿದ್ದೀನಿ ಎಂದಿದ್ದಾರೆ ಯಶ್.

  ಕೆಜಿಎಫ್ ಮುಗಿಯುವವರೆಗೆ ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅಲ್ಲಿ ಇಲ್ಲಿ ಬಂದ ಸುದ್ದಿಗಳನ್ನೆಲ್ಲ ನಂಬಬೇಡಿ. ಯಾವುದಾದರೂ ಫೈನಲ್ ಆದರೆ, ನಾನೇ ಬಹಿರಂಗಪಡಿಸುತ್ತೇನೆ. ಚಾಪ್ಟರ್ 2 ಚೆನ್ನಾಗಿ ಬರಬೇಕು ಎನ್ನುವ ಕಾರಣಕ್ಕೆ ನಾನು ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಸಂಪೂರ್ಣವಾಗಿ ಕೆಜಿಎಫ್‍ನಲ್ಲೇ ಮುಳುಗಿದ್ದೇನೆ ಎಂದಿದ್ದಾರೆ ಯಶ್.

 • ಕೆಜಿಎಫ್ 2 ಮತ್ತೆ ಬ್ರೇಕ್

  kgf chapter 2 shooting halts again

  ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಕೊರೊನಾ ಕಾಟ ವಿಪರೀತವಾಗಿದೆ. ಕೋವಿಡ್ 19 ಶುರುವಾದಾಗ 25 ದಿನಗಳ ಶೂಟಿಂಗ್ ಮುಂದೂಡಿತ್ತು ಚಿತ್ರತಂಡ. ಈಗ ಶೂಟಿಂಗ್‍ಗೆ ಅವಕಾಶ ಕೊಟ್ಟ ನಂತರ ಮತ್ತೊಮ್ಮೆ ಬೆಂಗಳೂರಿನ ಮಿನರ್ವ ಮಿಲ್‍ನಲ್ಲಿ ಸೆಟ್ ಹಾಕಿತ್ತು. ಸೆಟ್ ವರ್ಕ್ ಮುಗಿಯುವ ಹೊತ್ತಿಗೆ ಸುತ್ತಮುತ್ತ ಕೋವಿಡ್ 19 ವಿಸ್ಫೋಟವಾಗಿ ಹೋಯ್ತು. ಹೀಗಾಗಿ ಮತ್ತೆ ಚಿತ್ರೀಕರಣವನ್ನು ಮುಂದಕ್ಕೆ ಹಾಕಿದೆ ಚಿತ್ರತಂಡ.

  ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಕೆಜಿಎಫ್ ಚಾಪ್ಟರ್ 2, ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಅಕ್ಟೋಬರ್‍ನಲ್ಲಿ ರಿಲೀಸ್ ಎಂದು ಘೋಷಿಸಿಕೊಂಡಿದ್ದ ಕೆಜಿಎಫ್ 2ಗೆ ಪದೇ ಪದೇ ವಿಘ್ನಗಳೆದುರಾಗುತ್ತಿವೆ. ಇದು ಹೀಗೆಯೇ ಮುಂದುವರಿದರೆ ಅಕ್ಟೋಬರ್‍ನಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆ ಕಡಿಮೆ.

   

 • ಕೆಜಿಎಫ್ 2 ರಿಲೀಸ್ ಸಸ್ಪೆನ್ಸ್ : ಯಶ್ ಹೇಳಿದ ಸತ್ಯ

  yash talks about kgf chapter 2 release secrets

  ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಸ್ಯಾಂಡಲ್‍ವುಡ್ ಅಷ್ಟೇ ಅಲ್ಲ, ದೇಶದ ಎಲ್ಲ ಭಾಷೆಯ ಚಿತ್ರರಂಗವೂ ಕಾಯುತ್ತಿವೆ. ಅಷ್ಟರಮಟ್ಟಿಗೆ ಕ್ರೇಜ್ ಹುಟ್ಟಿಸಿತ್ತು ಕೆಜಿಎಫ್. ಈ ಚಿತ್ರ ಯಾವಾಗ ರಿಲೀಸ್ ಆಗುತ್ತೆ ಅನ್ನೋ ಪ್ರಶ್ನೆಗೆ ಖಚಿತ ಉತ್ತರ ಇನ್ನೂ ಸಿಕ್ಕಿಲ್ಲ. ಸದ್ಯಕ್ಕೇನೋ ಚಿತ್ರದ ಅಪ್‍ಡೇಟ್ ಕೊಡೋಕೆ, ಹೊಂಬಾಳೆ ಫಿಲಂಸ್‍ನವರಿಗೆ ನಿರ್ದೇಶಕ ಪ್ರಶಾಂತ್ ನೀಲ್ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನಿರ್ಮಾಪಕ ಕಾರ್ತಿಕ್ ಗೌಡ ಇದನ್ನು ಖುಷಿಯಾಗಿ ಹೇಳಿಕೊಂಡಿದ್ದರೆ, ಪ್ರಶಾಂತ್ ನೀಲ್ ಹಹ್ಹಹ್ಹಹ್ಹಾ.. ಎಂದು ನಕ್ಕಿದ್ದಾರೆ. ಆದರೆ, ಚಿತ್ರದ ರಿಲೀಸ್ ಯಾವಾಗ ಅನ್ನೋದರ ಬಗ್ಗೆ  ನಟ ಯಶ್ ಮಾತನಾಡಿದ್ದಾರೆ.

  ಸಿನಿಮಾ ರಿಲೀಸ್ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ಏಪ್ರಿಲ್‍ಗಂತೂ ಬರುತ್ತಿಲ್ಲ. ದರ್ಶನ್‍ಗೆ ಪೈಪೋಟಿಯೂ ಇಲ್ಲ ಎಂದಿದ್ದಾರೆ ಯಶ್. ಅಷ್ಟೇ ಅಲ್ಲ, ರಾಜಾಮೌಳಿ ಅವರ ಆರ್‍ಆರ್‍ಆರ್ ಎದುರು ಕೆಜಿಎಫ್ ರಿಲೀಸ್ ಆಗುತ್ತಾ ಅನ್ನೋ ಪ್ರಶ್ನೆಗೂ ನೋ ಎಂದಿದ್ದಾರೆ ಯಶ್.

  ನಾವು ಆರ್‍ಆರ್‍ಆರ್ ಚಿತ್ರತಂಡದವರೊಂದಿಗೆ ಟಚ್‍ನಲ್ಲಿದ್ದೇವೆ. ಎರಡೂ ಚಿತ್ರ ರಿಲೀಸ್ ಮಾಡುತ್ತಿರುವುದು ಅನಿಲ್ ತದಾನಿ. ಹೀಗಾಗಿ ಕ್ಲ್ಯಾಶ್ ಆಗುವ ಸಾಧ್ಯತೆ ಇಲ್ಲ ಎನ್ನುವುದು ಯಶ್ ಮಾತು. ಅಂದಹಾಗೆ.. ಕೆಜಿಎಫ್ ಚಾಪ್ಟರ್ 2ಗೆ 2020ರ ಡಿಸೆಂಬರ್‍ವರೆಗೂ ಕಾಯಬೇಕಾ..? ಒಂದಂತೂ ಪಕ್ಕಾ. ಕೆಜಿಎಫ್ ಚಾಪ್ಟರ್ 2 ಅಟ್ ಎನಿಕಾಸ್ಟ್ ಇದೇ ವರ್ಷ ರಿಲೀಸ್.

 • ಕೆಜಿಎಫ್ 2ಗೆ ಯಶ್ ಎಂಟ್ರಿ ಯಾವಾಗ..?

  yash to start shooting for kgf2 from next week

  ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಶುರುವಾಗಿ ಬಹಳ ದಿನಗಳೇ ಆಗಿವೆ. ಹೀರೋ ಹೊರತುಪಡಿಸಿ, ಉಳಿದ ಭಾಗಗಳ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ, ಯಶ್ ಇನ್ನೂ ಶೂಟಿಂಗ್ ಸೆಟ್‍ಗೆ ಹಾಜರಾಗಿಲ್ಲ. ಅಫ್‍ಕೋರ್ಸ್, ಅದಕ್ಕೆ ಯಶ್ ಒಬ್ಬರೇ ಕಾರಣರಲ್ಲ.

  ಚಿತ್ರದ ಕೆಲವು ತಾಂತ್ರಿಕ ಕೆಲಸಗಳು ಹಾಗೂ ತುರ್ತು ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಜೂನ್ 6ಕ್ಕೆ ಬರಬೇಕಿದ್ದ ಯಶ್, ಶೂಟಿಂಗ್ ಟೀಂ ಸೇರೋಕೆ ಸಾಧ್ಯವಾಗಲಿಲ್ಲ. ಈಗ ಕನ್ಫರ್ಮ್ ಆಗಿದೆ. ಜೂನ್ 12ರಿಂದ ಅಂದರೆ, ಇದೇ ಗುರುವಾರದಿಂದ ಯಶ್ ಕೆಜಿಎಫ್ ಚಾಪ್ಟರ್ 2 ತಂಡ ಸೇರಲಿದ್ದಾರೆ.

  ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 15 ದಿನಗಳ ಚಿತ್ರೀಕರಣವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ, ಮೊದಲ ಭಾಗದ ಅದ್ಧೂರಿ ಯಶಸ್ಸಿನಿಂದಾಗಿಯೇ ಕುತೂಹಲ ಮೂಡಿಸಿದೆ. 

 • ಕೆಜಿಎಫ್ 2ನೇ ಔಟ್‍ಲುಕ್ ಸೆನ್ಸೇಷನ್

  kgf new look

  ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ, ನಾನು ಬಂದ ಮೇಲೆ ನಂದೇ ಹವಾ.. ಇದು ಯಶ್ ಫೇಮಸ್ ಡೈಲಾಗ್. ಅದು ಕೆಜಿಎಫ್ ಚಿತ್ರದ 2ನೇ ಔಟ್‍ಲುಕ್‍ನಲ್ಲೂ ಋಜುವಾತಾಗಿದೆ. 

  ಕೆಜಿಎಫ್ ಚಿತ್ರದ 2ನೇ ಔಟ್‍ಲುಕ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಟ್ರೆಂಡ್ ಆಗಿಬಿಟ್ಟಿದೆ. ಚಿತ್ರದ ಪೋಸ್ಟರ್‍ನಲ್ಲಿ ಯಶ್ 70-80ನೇ ದಶಕದ ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಗಡ್ಡ, ಉದ್ದನೆಯ ಕೂದಲಿನ ಕಂಪ್ಲೀಟ್ ರಾ ಲುಕ್, ಅಭಿಮಾನಿಗಳಲ್ಲಿ ಕ್ರೇಜ್‍ನ್ನೇ ಸೃಷ್ಟಿಸಿದೆ. 

  ಚಿತ್ರದ ಕಥೆ ಏನಿರಬಹುದು..? ಎಂಬ ಬಗ್ಗೆ ಪ್ರೇಕ್ಷಕರ ತಲೆಗೆ ಹುಳ ಬಿಡುವುದರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಕಾರ್ತಿಕ್ ಗೌಡ ನಿರ್ಮಾಣದ ಕೆಜಿಎಫ್, ಕನ್ನಡದ ದೊಡ್ಡ ಬಜೆಟ್ ಚಿತ್ರವಾಗುತ್ತಿದೆ.

  Related Articles :-

  Srinidhi Shetty To Join KGF

  First Look Of KGF Released

  First Look of KGF Today Evening

  Yash's KGF Shooting Started Today

  KGF Sets In Badami

  Yash In KGF On Feb 1 or 10th

  Silent Start to Costliest Kannada film KGF

  Yash Next Film KGF - Exclusive

 • ಕೆಜಿಎಫ್ ಅಧಿಕೃತ ಕಲೆಕ್ಷನ್ ಎಷ್ಟು..? 200 ಕೋಟಿ ನಿಜಾನಾ..?

  producer clarifies about kgf's collection

  ಕೆಜಿಎಫ್ ಚಿತ್ರ 200 ಕೋಟಿ ಕ್ಲಬ್ ಸೇರಿದೆ ಎನ್ನುವ ಸುದ್ದಿ ಹರಿದಾಡುತ್ತಿರುವಾಗಲೇ ಚಿತ್ರದ ಕಲೆಕ್ಷನ್ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿದ್ದಾರೆ. ಚಿತ್ರದ ಕಲೆಕ್ಷನ್ ಬಗ್ಗೆ ಈಗಲೇ ಏನನ್ನೂ ಹೇಳುವುದು ಸಾಧ್ಯವಿಲ್ಲ. ಚಿತ್ರ ಇನ್ನೂ 600 ಸ್ಕ್ರೀನ್‍ಗಳಲ್ಲಿ ಚೆನ್ನಾಗಿ ಹೋಗುತ್ತಿದೆ. ಒಂದು ತಿಂಗಳು ಸುಮ್ಮನಿರಿ. ನಾನೇ ಎಲ್ಲವನ್ನೂ ನಿಮ್ಮ ಮುಂದೆ ಲೆಕ್ಕ ಹೇಳುತ್ತೇನೆ' ಎಂದಿದ್ದಾರೆ ವಿಜಯ್ ಕಿರಗಂದೂರು.

  200 ಕೋಟಿ ದಾಟಿದೆ ಎನ್ನುವ ಸುದ್ದಿಯನ್ನು ವಿಜಯ್ ನಿರಾಕರಿಸಿದ್ದಾರೆ. ಚಿತ್ರ ಹಿಂದಿಯಲ್ಲಿಯೇ 600 ಸ್ಕ್ರೀನ್‍ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ರಿಲೀಸ್ ಆಗಿರುವ ಎಲ್ಲ ಸೆಂಟರ್‍ಗಳಲ್ಲಿ ಈಗಲೂ ಚೆನ್ನಾಗಿ ಹೋಗುತ್ತಿದೆ. ಪಾಕಿಸ್ತಾನದಲ್ಲೂ ರಿಲೀಸ್ ಆಗಿದೆ. ಎಲ್ಲ ಲೆಕ್ಕವನ್ನೂ ಮುಂದಿನ ತಿಂಗಳು ಕೊಡುತ್ತೇನೆ ಎಂದಿದ್ದಾರೆ ಕೆಜಿಎಫ್‍ನ ಮಾಲೀಕ ವಿಜಯ್ ಕಿರಗಂದೂರು.

 • ಕೆಜಿಎಫ್ ಆಡಿಯೋ ಲಹರಿಗೆ. ಸೇಲಾಗಿದ್ದು ಎಷ್ಟು ಕೋಟಿಗೆ..?

  lahari music gets kgf audio launch

  ಕನ್ನಡ ಚಿತ್ರರಂಗದ ಬಹುನಿರೀಕ್ಷಿತ, ಭಾರಿ ಬಜೆಟ್‍ನ ಸಿನಿಮಾ ಕೆಜಿಎಫ್. ಯಶ್, ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಪ್ರೊಡಕ್ಷನ್ಸ್ ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಈ ಬಿಗ್ ಸಿನಿಮಾದ ಆಡಿಯೋ ರೈಟ್ಸ್ ಮಾರಾಟವಾಗಿದೆ.

  ಕೆಜಿಎಫ್ ಆಡಿಯೋ ರೈಟ್ಸ್ ಖರೀದಿಸಿರುವುದು ಲಹರಿ ವೇಲು. ರವಿ ಬಸ್ರೂರು ಸಂಗೀತ ನಿರ್ದೇಶನದ ಹಾಡುಗಳು ಬೊಂಬಾಟ್ ಆಗಿವೆ ಅನ್ನೋದು ಚಿತ್ರತಂಡದ ಮೂಲಗಳ ಮಾಹಿತಿ. ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿಯ ಆಡಿಯೋ ರೈಟ್ಸ್‍ನ್ನು ಕೂಡಾ ಲಹರಿ ವೇಲು ಅವರೇ ಖರೀದಿಸಿದ್ದಾರೆ. ದೊಡ್ಡ ಮೊತ್ತಕ್ಕೆ ಅನ್ನೋದು ಪಕ್ಕಾ. ಆದರೆ, ಎಷ್ಟು ಕೋಟಿಗೆ ಅನ್ನೋದನ್ನು ಗುಟ್ಟಾಗಿಯೇ ಇಟ್ಟಿದೆ ಕೆಜಿಎಫ್ ಟೀಂ.

 • ಕೆಜಿಎಫ್ ಆಡಿಯೋ ಹಕ್ಕು 3.60 ಕೋಟಿ 

  kgf audio rights sold for 3.6 crores

  ಕೆಜಿಎಫ್ ಚಿತ್ರದ ಹವಾದಲ್ಲಿ ದಾಖಲೆಗಳು ಚಿಂದಿ ಚಿಂದಿಯಾಗುತ್ತಿವೆ. ಕನ್ನಡ ಚಿತ್ರರಂಗದಲ್ಲೇ ಭಾರಿ ಬಜೆಟ್‍ನ, ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್, ಆಡಿಯೋ ರೈಟ್ಸ್‍ನಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿದೆ. ಒನ್ಸ್ ಎಗೇಯ್ನ್, ಈ ದಾಖಲೆ ಮೊತ್ತಕ್ಕೆ ಆಡಿಯೋ ಖರೀದಿಸಿರುವುದು ಲಹರಿ ವೇಲು.

  ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಆಡಿಯೋ ರೈಟ್ಸ್‍ನ್ನು ಮಾತ್ರ 3.60 ಕೋಟಿ ಕೊಟ್ಟು ಖರೀದಿಸಿದ್ದಾರೆ. ಹಿಂದಿಯ ರೈಟ್ಸ್‍ನ್ನು ಇನ್ನೂ ಮಾರಾಟ ಮಾಡಿಲ್ಲ. ಈ ದಾಖಲೆ ಮೊತ್ತಕ್ಕೆ ಆಡಿಯೋ ಖರೀದಿಸೋಕೆ ಕಾರಣ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ಮೆಚ್ಚುಗೆ. ಎಲ್ಲ ಭಾಷೆಯಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದೇ ಈ ದಾಖಲೆ ಮೊತ್ತದ ಖರೀದಿಗೆ ಕಾರಣ ಎಂದಿದ್ದಾರೆ ಲಹರಿ ವೇಲು.

  1992ರಲ್ಲೇ ದಳಪತಿ ಚಿತ್ರದ ಆಡಿಯೋ ರೈಟ್ಸ್‍ನ್ನು 75 ಲಕ್ಷಕ್ಕೆ ಖರೀದಿಸಿದ್ದ ಲಹರಿ ವೇಲು, ಬಾಹುಬಲಿಯನ್ನು 2 ಕೋಟಿ ರೂಗೂ ಹೆಚ್ಚಿನ ಮೊತ್ತಕ್ಕೆ ಖರೀದಿಸಿದ್ದರು. ಈಗ ಮತ್ತೊಮ್ಮೆ ತಮ್ಮದೇ ದಾಖಲೆ ಬ್ರೇಕ್ ಮಾಡಿದ್ದಾರೆ.

 • ಕೆಜಿಎಫ್ ಇವತ್ತೇ ರಿಲೀಸ್.. ಆದರೆ.. ಇಲ್ಲಿ ಅಲ್ಲ..!

  kgf release in abroad today

  ಕೆಜಿಎಫ್ ಡೇ ಇರೋದು ನಾಳೆ. ಆದರೆ, ಸಿನಿಮಾ ಇವತ್ತೇ ರಿಲೀಸ್ ಆಗುತ್ತಿದೆ. ಎಲ್ಲಿ.. ಯಾವಾಗ.. ಶೋ  ಟೈಂ ಏನು.. ಟಿಕೆಟ್ ಎಲ್ಲಿ ಸಿಗುತ್ತೆ.. ಹೀಗೆ ಹಲವು ಪ್ರಶ್ನೆಗಳನ್ನು ಸೈಡಿಗಿಡಿ. ಕೆಜಿಎಫ್ ಇವತ್ತು ರಿಲೀಸ್ ಆಗ್ತಿರೋದು ಇಲ್ಲಿ.. ಅಂದ್ರೆ ಇಂಡಿಯಾದಲ್ಲಿ ಅಲ್ವೇ ಅಲ್ಲ. ಅಮೆರಿಕದಲ್ಲಿ.

  ಅಮೆರಿಕದ ಅಲ್ಬಾಮಾ, ಅರಿಝೋನಾ, ಅರ್ಕಾನ್ಸಾಸ್, ಕ್ಯಾಲಿಫೋರ್ನಿಯಾ, ಕೊಲರ್ಯಾಡೋ, ಫ್ಲೋರಿಡಾಗಳಲ್ಲಿ ಇವತ್ತೇ ರಿಲೀಸ್. ಜಾರ್ಜಿಯಾ, ಮಿಸ್ಸೋರಿ, ನೆವಾಡಾ, ಹವಾಲಿ, ಇಡಾಹೋ, ಇಲಿನೊಯ್ಸ್, ಇಂಡಿಯಾನಾ, ಲೊವಾ, ಕನ್ಸಾಸ್, ನ್ಯೂಜೆರ್ಸಿ, ನ್ಯೂ ಹ್ಯಾಂಪ್‍ಶೈರ್, ನ್ಯೂ ಮೆಕ್ಸಿಕೋ, ನ್ಯೂಯಾರ್ಕ್, ನಾರ್ತ್ ಕ್ಯಾರೊಲಿನಾ, ಓಹಿಯೋ, ಒಕ್ಲಾಹಾಮಾ, ಒರೇಗನ್, ಪೆನ್ಸುಲ್ವೇನಿಯಾ, ರ್ಹೋಡ್ ಐಸ್‍ಲ್ಯಾಂಡ್, ಸೌಥ್ ಕ್ಯಾರೊಲಿನಾ, ಟೆನೆಸ್ಸೇ, ಟೆಕ್ಸಾಸ್, ಉಟಾ, ವರ್ಜಿನಿಯಾ, ವಾಷಿಂಗ್ಟನ್ ಡಿಸಿಗಳಲ್ಲಿ ಡಿಸೆಂಬರ್ 20ರಂದೇ ಪ್ರೀಮಿಯರ್ ಶೋ ಇದೆ.

 • ಕೆಜಿಎಫ್ ಕಥೆ ಗೊತ್ತಾಗೋಯ್ತು..

  what is kgf storyline

  ಕೆಜಿಎಫ್ ರಿಲೀಸ್ ಡೇಟ್ ಪ್ರಕಟಿಸಿದ ಹೊತ್ತಲ್ಲೇ ಚಿತ್ರದ ಕಥೆ ಎಳೆಯನ್ನೂ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ದುರಾಸೆಯ ದುಷ್ಟನೊಬ್ಬನ ಕೈಗೆ ಬಂಗಾರದ ಗಣಿ ಸಿಕ್ಕರೆ, ಒಂದು ವ್ಯವಸ್ಥೆಯಲ್ಲಿ ಆತ ಏನೆಲ್ಲ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಾನೆ ಎನ್ನುವುದೇ ಚಿತ್ರದ ಕಥೆ. ಚಿತ್ರದಲ್ಲಿ ಅಂಡರ್‍ವಲ್ರ್ಡ್ ಲಿಂಕ್ ಇದೆ. ಚಿತ್ರದ ಹೀರೋ ಯಶ್, ತಾಯಿಯ ಸೂಚನೆಯಂತೆ ಅಂಡರ್‍ವಲ್ರ್ಡ್‍ಗೆ ಎಂಟ್ರಿ ಕೊಡುತ್ತಾನೆ. ಚಿನ್ನದ ಕಥೆಗೂ, ತಾಯಿಯ ಮಾತಿಗೂ ಏನ್ ಸಂಬಂಧ ಅನ್ನೋದು ಚಿತ್ರದಲ್ಲಿ ಗೊತ್ತಾಗಲಿದೆ. ಅಂಡರ್‍ವಲ್ರ್ಡ್ ಡಾನ್ ಸ್ಟೋರಿಯೇ ಚಿತ್ರದ ಕಥೆ.

  ಹೀಗೆ ಕಥೆಯ ಎಳೆಯನ್ನಷ್ಟೇ ಬಿಚ್ಚಿಟ್ಟಿರುವ ಪ್ರಶಾಂತ್ ನೀಲ್, ಇದಕ್ಕೂ ಕೋಲಾರದ ಚಿನ್ನದ ಗಣಿಗೂ ಸಂಬಂಧವಿಲ್ಲ. ಇದು ಯಾವುದೇ ಜಗತ್ತಿಗೂ, ಯಾವುದೇ ಊರಿಗೂ ಲಿಂಕ್ ಆಗಬಹುದಾದ ಕಥೆ. ನನ್ನ ಕಲ್ಪನೆಯ ಕಥೆ ಎಂದು ಹೇಳಿಕೊಳ್ತಾರೆ.

  ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ಬರುತ್ತಿರುವ ಸಿನಿಮಾದ ಟ್ರೈಲರ್ ಅಕ್ಟೋಬರ್ 14ಕ್ಕೆ ರಿಲೀಸ್ ಆದ್ರೆ, ಸಿನಿಮಾ ನವೆಂಬರ್ 16ಕ್ಕೆ ರಿಲೀಸ್ ಆಗುತ್ತೆ. ನವೆಂಬರ್ 16ಕ್ಕೆ ಬರೋದು ಕೆಜಿಎಫ್ ಚಾಪ್ಟರ್ 1. ಚಾಪ್ಟರ್ 2, 2019ರ ಅಂತ್ಯಕ್ಕೆ ಬರಲಿದೆಯಂತೆ.

 • ಕೆಜಿಎಫ್ ಕ್ಲೈಮಾಕ್ಸ್‍ನಲ್ಲಿ ಇಂಡಿಯನ್ ಆರ್ಮಿ

  indina army for kgf chapter 2 climax shoot

  ಕೆಜಿಎಫ್ 2 ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಬಹುತೇಕ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಹೈದರಾಬಾದ್‍ನಲ್ಲೀಗ ಕ್ಲೈಮಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಕ್ಲೈಮಾಕ್ಸ್ ಚಿತ್ರೀಕರಣದಲ್ಲಿ ಭಾರತೀಯ ಸೇನೆ ಬಳಕೆಯಾಗುತ್ತಿದೆ. ಕ್ಲೈಮಾಕ್ಸ್ ಚಿತ್ರೀಕರಣದ ಒಂದು ಫೋಟೋ ಹೊರಬಿದ್ದಿದ್ದು, ನೂರಾರು ಇಂಡಿಯನ್ ಆರ್ಮಿ ವಾಹನಗಳು ಸಾಲಾಗಿ ಸಂಚರಿಸುತ್ತಿರುವ ಫೋಟೋ ಕುತೂಹಲ ಹೆಚ್ಚಿಸಿದೆ.

  ಕೆಜಿಎಫ್ ಚಾಪ್ಟರ್ 2ನಲ್ಲಿ ರವೀನಾ ಟಂಡನ್, ದೇಶದ ಪ್ರಧಾನಿಯ ಪಾತ್ರ ಮಾಡುತ್ತಿದ್ದಾರೆ. ಯಶ್ ಅಲಿಯಾಸ್ ರಾಕಿಭಾಯ್ ಡೆತ್ ವಾರೆಂಟ್‍ಗೆ ಸಹಿ ಹಾಕೋದೇ ಅವರು. ನಂತರ ರಾಕಿ ಭಾಯ್ ಸಾಮ್ರಾಜ್ಯಕ್ಕೆ ನುಗ್ಗುತ್ತೆ ಇಂಡಿಯನ್ ಆರ್ಮಿ.

  ಹೇಗಿರುತ್ತೆ ಕ್ಲೈಮಾಕ್ಸ್.. ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾವನ್ನು ಥ್ರಿಲ್ ಆಗುವಂತೆ ತೋರಿಸ್ತಾರೆ. ವಿಜಯ್ ಕಿರಗಂದೂರು ಅದರ ಅದ್ಧೂರಿತನಕ್ಕೆ ಮೋಸ ಮಾಡಲ್ಲ. ವೇಯ್ಟ್.. ಸಿನಿಮಾ ಇದೇ ವರ್ಷ ರಿಲೀಸ್ ಆಗುತ್ತೆ

 • ಕೆಜಿಎಫ್ ಗಲಿ ಗಲಿ.. ಚಿಲಿಪಿಲಿಯೋ ಚಿಲಿಪಿಲಿ

  kgf's gali gali song

  ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ಐಟಂ ಸಾಂಗ್ ಗಲಿ ಗಲಿ ಹಾಡಿನ ವಿಡಿಯೋ ರಿಲೀಸ್ ಆಗಿದೆ. ಹಿಂದಿಯಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿರುವುದು ಮೌನಿ ರಾಯ್. ಹಾಡು ಆನ್‍ಲೈನ್‍ನಲ್ಲಿ ಧೂಳೆಬ್ಬಿಸಿದೆ.

  ಕನ್ನಡದಲ್ಲಿ ಜೋಕೆ.. ನಾನು ಬಳ್ಳಿಯ ಮಿಂಚು ಹಾಡಿನ ರೀಮಿಕ್ಸ್ ಸಾಂಗ್ ಬಳಸಿಕೊಂಡಿದ್ದಾರಲ್ಲ.. ಹಾಗೆಯೇ.. ಗಲಿ ಗಲಿ ಹಾಡನ್ನು ಹಿಂದಿ ಕೆಜಿಎಫ್‍ನಲ್ಲಿ ಬಳಸಿಕೊಳ್ಳಲಾಗಿದೆ. 

  ಹಿಂದಿ ಚಿತ್ರರಸಿಕರಿಗೆ ಗಲಿ ಗಲಿ ಸಾಂಗ್‍ನ ವಿಡಿಯೋ ತೋರಿಸಿ ಕಣ್ಣು, ಕಿವಿ ಎರಡನ್ನೂ ತಣಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಣ ಸಂಸ್ಥೆ ಹೊಂಬಾಳೆ.. ಕನ್ನಡ ಚಿತ್ರರಸಿಕರಿಗೆ 

  ತಮನ್ನಾ ಹಾಡು ತೋರಿಸೋದು ಯಾವಾಗ..? 

 • ಕೆಜಿಎಫ್ ಚಾಪ್ಟರ್ 2 ಕಥೆಯ ಗುಟ್ಟು ಬಿಟ್ಟುಕೊಟ್ಟ ಯಶ್

  yash reveals kgf chapter 2 secret

  KGF ಚಾಪ್ಟರ್ 2 ಚಿತ್ರದ ಕಥೆ ಏನು..? ನಿರ್ದೇಶಕ ಪ್ರಶಾಂತ್ ನೀಲ್ ಗುಟ್ಟು ಗುಟ್ಟಾಗಿಯೇ ಇಟ್ಟಿದ್ದಾರೆ. ಕೆಜಿಎಫ್ ಟೀಂನಿಂದ ಯಾವುದೇ ಸೀಕ್ರೆಟ್ ಹೊರಬರುತ್ತಿಲ್ಲ. ಆದರೆ.. ಯಶ್ ಮಾಡಿರುವ ಒಂದು ಟ್ವೀಟ್.. ಕಥೆಯ ಗುಟ್ಟು ಹೇಳಿಬಿಟ್ಟಿದೆ. ಅಂದಹಾಗೆ ಇದು ಅಭಿಮಾನಿಗಳೇ ಊಹಿಸಿರುವ ಕಥೆ.

  ಇಷ್ಟಕ್ಕೂ ಆಗಿದ್ದೇನಂದ್ರೆ.. ಇತ್ತೀಚೆಗೆ ರವೀನಾ ಟಂಡನ್ ಕೆಜಿಎಫ್ ಟೀಂಗೆ ಎಂಟ್ರಿ ಕೊಟ್ರಲ್ಲ. ಆಗ ಅವರ ಪಾತ್ರದ ಹೆಸರು ರಮಿಕಾ ಸೇನ್ ಎಂದೂ.. ಡೆತ್ ವಾರೆಂಟ್ ಕೊಡಲು ಬರುವ ಪ್ರಧಾನಿಯೆಂದೂ ಗೊತ್ತಾಗಿತ್ತು. ಈಗ ಯಶ್ ಮಾಡಿರುವ ಟ್ವೀಟ್ನಲ್ಲಿ ಆ ರಹಸ್ಯ ಭೇದಿಸಿದ್ದಾರೆ ರಾಕಿಭಾಯ್ ಫ್ಯಾನ್ಸ್.

  ಶೂಟಿಂಗ್‌ ವೇಳೆ ರವೀನಾ ಟಂಡನ್‌ ಜೊತೆಗಿರುವ ಫೋಟೋ ಹಾಕಿರುವ ಯಶ್ ‘ರಾಕಿ ಭಾಯ್‌ ಟೆರಿಟರಿಯೊಳಗೆ ರಮಿಕಾ ಸೇನ್‌ಗೆ ಸ್ವಾಗತ ಸಿಗದೇ ಇರಬಹುದು. ಆದರೆ ರವೀನಾ ಮೇಡಮ್‌ ಅವರನ್ನು ಯಶ್‌ ಹೋಮ್‌ಟೌನ್‌ಗೆ ಸ್ವಾಗತಿಸುತ್ತಿದ್ದೇವೆ. ನೀವು ನಮ್ಮ ಸಿನಿಮಾ ತಂಡದ ಭಾಗವಾಗಿರುವುದಕ್ಕೆ ಖುಷಿ ಆಗುತ್ತಿದೆ. ಲೆಟ್ಸ್‌ ಹ್ಯಾವ್‌ ಎ ಬ್ಲಾಸ್ಟ್‌’ ಎಂದು ಬರೆದಿದ್ದಾರೆ.

  ಮಿಕ್ಕಿದ್ದು ನಿಮಗೇ ಗೊತ್ತಾಗಿರಬಹುದು. ರಮಿಕಾ ಸೇನ್ ಎಂದರೆ ಪ್ರಧಾನಿಯ ಪಾತ್ರ. ಅಂದರೆ.. ಪ್ರಧಾನಿಗೂ ಎಂಟ್ರಿಯಿಲ್ಲದ ಕೋಟೆ ಕಟ್ಟಿಕೊಳ್ತಾನಾ ರಾಕಿಭಾಯ್..? ಅದಕ್ಕಾಗಿಯೇ ಆತನ ವಿರುದ್ಧ ಪ್ರಧಾನಿ ಡೆತ್ ವಾರೆಂಟ್ ಹೊರಡಿಸ್ತಾರಾ..? ಇದು ಅಭಿಮಾನಿಗಳು ಊಹಿಸಿರುವ ಕಥೆ.

  ಇರಿ.. ಇರಿ.. ಸ್ವತಃ ಪ್ರಶಾಂತ್ ನೀಲ್ ಅವರೇ ನಿಬ್ಬೆರಗಾಗಿ ನೋಡುವ ಕಥೆಯನ್ನು ಅಭಿಮಾನಿಗಳೇ ಸೃಷ್ಟಿಸ್ತಾರೆ. ಯಾರಿಗ್ಗೊತ್ತು.. ಅದೇ ಇನ್ನೊಂದು ಕೆಜಿಎಫ್ ಆದರೂ ಆಗಬಹುದು.

 • ಕೆಜಿಎಫ್ ಚಾಪ್ಟರ್ 2 ಡಬಲ್ ಸಿಹಿ ಸುದ್ದಿ

  kgf image

  ಕೆಜಿಎಫ್ ಚಾಪ್ಟರ್ 2 ಚಿತ್ರದ ರಿಲೀಸ್ ಡೇಟ್ ಏನೋ ಅನೌನ್ಸ್ ಆಗಿದೆ. ಆದರೆ ಟೀಸರ್ ಆಗಲೀ, ಟ್ರೇಲರ್ ಆಗಲೀ ಇಲ್ಲ. ಅಪ್‍ಡೇಟ್ ಏನೂ ಸಿಗ್ತಿಲ್ಲ. ಲಾಕ್ ಡೌನ್ ಮಧ್ಯೆಯೂ ಕೆಜಿಎಫ್ ಅಪ್‍ಡೇಟ್ ನಿರೀಕ್ಷೆಯಲ್ಲಿರೋ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ.

  ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಮತ್ತು ಟ್ರೇಲರ್ ಒಟ್ಟೊಟ್ಟಿಗೇ ಬರಲಿವೆಯಂತೆ. ಹೊಂಬಾಳೆ ಫಿಲಂಸ್‍ನ ನಿರ್ಮಾಪಕ ಕಾರ್ತಿಕ್ ಗೌಡ ನೀಡಿರುವ ಸಿಹಿ ಸುದ್ದಿ ಇದು. ಯಾವಾಗ..? ಆ ಗುಟ್ಟನ್ನು ಗೌಡರು ಬಿಟ್ಟುಕೊಟ್ಟಿಲ್ಲ.

  ಪ್ರಶಾಂತ್ ನೀಲ್, ಯಶ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಕೆಜಿಎಫ್ ಚಾಪ್ಟರ್ 2 ಈ ವರ್ಷದ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ.

 • ಕೆಜಿಎಫ್ ಚಾಪ್ಟರ್ 2 ಡೈಲಾಗ್ಸ್

  kgf chapter 2 dialogues

  ಕೆಜಿಎಫ್ ಚಾಪ್ಟರ್ 1ನಲ್ಲಿ ಹಲವು ಸ್ಪೆಷಾಲಿಟಿಗಳಿದ್ದವು. ಅಂತಹ ಸ್ಪೆಷಾಲಿಟಿಗಳಲ್ಲಿ ಒಂದು ಡೈಲಾಗ್ಸ್. ಗುಂಡು ಹೊಡೆದಂತಿದ್ದ ಸಂಭಾಷಣೆ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಈಗ ಕೆಜಿಎಫ್ 2ನಲ್ಲೂ ಅಷ್ಟೆ, ಅಂಥದ್ದೇ ಡೈಲಾಗ್ಸ್ ಇವೆ. ಹುಟ್ಟುಹಬ್ಬದ ವೇಳೆ ಸ್ವತಃ ಯಶ್, ಟೀಸರ್ ಬಿಡದೇ ಇರುವುದಕ್ಕೆ ಕ್ಷಮೆ ಕೋರಿ, ಚಿತ್ರದ ಒಂದೆರಡು ಡೈಲಾಗ್‍ಗಳನ್ನು ಅಭಿಮಾನಿಗಳ ಎದುರು ಹೇಳಿ ಥ್ರಿಲ್ ಕೊಟ್ಟಿದ್ದಾರೆ.

  ಏನಂದೇ.. ಒಂದು ಹೆಜ್ಜೆ ಮುಂದೆ ಇಟ್ಟು ಬಂದವ್ನು ಅಂದ್ಕೊಂಡಿದ್ದೀರಾ.. ಗಡಿಯಾರದಲ್ಲಿ ಒಂದು ಹೆಜ್ಜೆ ಮುಂದಿಡೋಕೆ ದೊಡ್ಡ ಮುಳ್ಳು 60 ಹೆಜ್ಜೆ ಮುಂದಿಡಬೇಕು. ಆದರೆ, ಚಿಕ್ಕ ಮುಳ್ಳು ಒಂದೇ ಹೆಜ್ಜೆ ಮುಂದಿಟ್ರೆ ಸಾಕು.

  ನಾನು ಹೆಜ್ಜೆ ಇಟ್ಟಾಗಿದೆ. ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ. ಇನ್ಮುಂದೆ ಈ ಟೆರಟರಿ ನಂದು.. ಆ ಟೆರಟರಿ ನಂದು ಅನ್ನೋದನ್ನೆಲ್ಲ ಬಿಟ್ಟುಬಿಡಿ. ವಲ್ರ್ಡ್ ಇನ್ನು ಮುಂದೆ ನನ್ನ ಟೆರಟರಿ.

  ಯಶ್ ಡೈಲಾಗ್ ಹೊಡೆದು ಥ್ರಿಲ್ ಕೊಟ್ಟಿದ್ದರೆ, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್ ಚಿತ್ರದ ಹೊಸ ಪೋಸ್ಟರ್ ಕೊಟ್ಟು ಥ್ರಿಲ್ ಕೊಟ್ಟಿದ್ದಾರೆ.

 • ಕೆಜಿಎಫ್ ಚಾಪ್ಟರ್ 2 ತೆಲುಗು ರೈಟ್ಸ್ 40 ಕೋಟಿ ಅಲ್ಲ..!

  news about kgf chapter 2 telugu remake rights is false

  ಕೆಜಿಎಫ್ ಚಾಪ್ಟರ್ 2 ಚಿತ್ರದ ತೆಲುಗು ರೈಟ್ಸ್ 40 ಕೋಟಿಗೆ ಸೇಲ್ ಆಗುತ್ತಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಭ್ರಮ ಸೃಷ್ಟಿಸಿತ್ತು. ಚಿತ್ರಲೋಕದಲ್ಲೂ ಈ ವರದಿ ನೋಡಿದ್ದೀರಿ. ಆದರೆ.. ಅದು ಸುಳ್ಳು ಎಂದಿದ್ದಾರೆ ವಿತರಕ ಕಾರ್ತಿಕ್ ಗೌಡ. ಹೊಂಬಾಳೆ ಫಿಲಂಸ್ನ ಪ್ರಮುಖರಲ್ಲಿ ಒಬ್ಬರಾಗಿರುವ ಕಾರ್ತಿಕ್ ಗೌಡ, 40 ಕೋಟಿಯ ವ್ಯವಹಾರವನ್ನು ತಳ್ಳಿ ಹಾಕಿದ್ದಾರೆ.

  ಆದರೆ.. ಕೆಜಿಎಫ್ ಚಿತ್ರಕ್ಕೆ ತೆಲುಗಿನಲ್ಲಿ ಒಳ್ಳೆಯ ಡಿಮ್ಯಾಂಡ್ ಇರುವುದಂತೂ ನಿಜ. ಏಕೆಂದರೆ, ಕೆಜಿಎಫ್ ನಂತರ ಅಲ್ಲೀಗ ಯಶ್ ಫ್ಯಾನ್ಸ್ ಕ್ಲಬ್ ಹುಟ್ಟಿಕೊಂಡಿದೆ. ಪ್ರಶಾಂತ್ ನೀಲ್ ಚಿತ್ರ ಸೃಷ್ಟಿಸಿದ್ದ ಸಂಚಲನ, ಚಾಪ್ಟರ್ 2ಗೆ ಭರ್ಜರಿ ಓಪನಿಂಗ್ ಕೊಡಲಿದೆ ಎಂಬುದರಲ್ಲಿ ಡೌಟೇ ಇಲ್ಲ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದು, ಚಾಪ್ಟರ್ 2ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರ್ಪಡೆಗೊಂಡಿದ್ದಾರೆ. ಕೆಜಿಎಫ್ 2 ಮಾರ್ಕೆಟ್ ವ್ಯಾಲ್ಯೂ ತಿಳಿಯೋಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

 • ಕೆಜಿಎಫ್ ಚಾಪ್ಟರ್ 2 ತೆಲುಗು ರೈಟ್ಸ್ 40 ಕೋಟಿ..!!!

  kgf chapter 2 telugu rights goes up for 40 crores

  ಕೆಜಿಎಫ್ ಚಾಪ್ಟರ್ 2 ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿಯೇ ಇದೆ. ಆದರೆ ಚಿತ್ರಕ್ಕೆ ಸೃಷ್ಟಿಯಾಗಿರುವ ಡಿಮ್ಯಾಂಡ್ ಮಾತ್ರ ಆಕಾಶಕ್ಕೇರಿದೆ. ಕೆಜಿಎಫ್ ಚಾಪ್ಟರ್ 2 ತೆಲುಗು ವರ್ಷನ್‍ಗೆ 40 ಕೋಟಿ ಡಿಮ್ಯಾಂಡ್ ಮಾಡಲಾಗುತ್ತಿದೆ. ಈ ಬಿಸಿನೆಸ್ ಫೈನಲ್ ಸ್ಟೇಜ್‍ನಲ್ಲಿದೆ.

  ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆಲುಗು ವರ್ಷನ್ ರಿಲೀಸ್ ಆಗಲಿದ್ದು, ವಿತರಕರು 30 ಕೋಟಿಯ ಆಫರ್ ಕೊಟ್ಟರಂತೆ. ಅಫ್‍ಕೋರ್ಸ್.. ಕನ್ನಡದ ಮಟ್ಟಿಗೆ ಅದೂ ಕೂಡಾ ದಾಖಲೆಯೇ. ಈಗ 40 ಕೋಟಿಯ ಆಸುಪಾಸು ವ್ಯವಹಾರ ಕುದುರಿದೆ ಎನ್ನಲಾಗಿದೆ.

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸೃಷ್ಟಿಸಿದ ಹವಾ ಎಫೆಕ್ಟ್, ಚಾಪ್ಟರ್ 2ಗೆ ಡಿಮ್ಯಾಂಡ್ ಬಂದಿದೆ. ಸಿನಿಮಾ ಡಿಸೆಂಬರ್‍ನಲ್ಲಿ ರಿಲೀಸ್ ಆಗುವ ಚಾನ್ಸ್ ಇದೆ.

 • ಕೆಜಿಎಫ್ ಚಿತ್ರದಲ್ಲಿ ಅಂಥಾದ್ದೇನಿದೆ..?

  kgf highlights revealed by prashanth neel

  ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಕೆಜಿಎಫ್ ಚಿತ್ರ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಸುಮಾರು ಒಂದು ವರ್ಷದಿಂದ ಕನ್ನಡಿಗರು ಎದುರು ನೋಡುತ್ತಿರುವ ಚಿತ್ರ. ಚಿತ್ರದ ಚಿತ್ರೀಕರಣ ಇನ್ನೂ ಶೇ.15ರಷ್ಟು ಬಾಕಿಯಿದೆ. ಇದುವರೆಗೆ ಹೊರಬಂದಿರೋದು ಎರಡು ಟೀಸರ್ ಮಾತ್ರ. ಅವು ಹುಟ್ಟಿಸಿರುವ ಕುತೂಹಲ ಸಣ್ಣದೇನಲ್ಲ. ಇಷ್ಟಕ್ಕೂ ಚಿತ್ರದಲ್ಲಿ ಅಂಥಾದ್ದೇನಿದೆ..? ಕಥೆ ಎಂಥಾದ್ದು..? ನಿರ್ದೇಶಕ ಉಗ್ರಂ ಪ್ರಶಾಂತ್ ನೀಲ್, ಒಂದಿಷ್ಟು ಹೇಳಿಕೊಂಡಿದ್ದಾರೆ.

  ಇದು 70ರಿಂದ 80ರ ದಶಕದಲ್ಲಿ ನಡೆಯುವ ಕಥೆ. ಅಂಡರ್‍ವಲ್ರ್ಡ್ ಛಾಯೆಯಿರುವುದು ಹೌದಾದರೂ, ಅದಕ್ಕೂ ಕೆಜೆಎಫ್‍ಗೂ ಸಂಬಂಧವಿಲ್ಲ. ಪಾತ್ರಗಳು ನನ್ನ ಕಲ್ಪನೆಯವೇ ಹೊರತು, ನಿಜವಾದ ವ್ಯಕ್ತಿಗೆ ಸಂಬಂಧಪಟ್ಟಿದ್ದಲ್ಲ. ಚಿತ್ರದಲ್ಲಿ ಆ್ಯಕ್ಷನ್, ರೊಮ್ಯಾನ್ಸ್, ತಾಯಿ-ಮಗನ ಸೆಂಟಿಮೆಂಟ್ ಎಲ್ಲವೂ ಇದೆ. ಉಗ್ರಂ ಚಿತ್ರಕ್ಕೂ, ಈ ಚಿತ್ರಕ್ಕೂ ಕೂದಲೆಳೆಯಷ್ಟೂ ಲಿಂಕ್ ಇಲ್ಲ. ಇದು ಕಥೆಯ ಬಗ್ಗೆ ಪ್ರಶಾಂತ್ ಹೇಳಿರುವ ಮಾತು.

  ಇನ್ನು ಚಿತ್ರ ರಿಲೀಸ್ ಆಗುವುದು ಏಪ್ರಿಲ್, ಮೇ ನಂತರಾನೇ ಎಂದಿದ್ದಾರೆ ಪ್ರಶಾಂತ್. ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಿರೀಕ್ಷೆಯಂತೆಯೇ ಚಿತ್ರ ಮೂಡಿ ಬರುತ್ತಿದೆ. ಮೇಕಿಂಗ್ ಶೈಲಿ ಹಾಲಿವುಡ್ ಮಾದರಿಯಲ್ಲಿದೆ ಎಂದು ಖುಷಿಗೊಂಡಿದ್ದಾರೆ. 

  ಯಶ್ ಅವರಂತೂ ಇಡೀ ಚಿತ್ರವನ್ನು ತಮ್ಮದೇ ಹೋಮ್ ಬ್ಯಾನರ್ ಸಿನಿಮಾವೇನೋ ಎಂಬಷ್ಟು ಪ್ರೀತಿಸುತ್ತಿದ್ದಾರೆ. ತಾವೊಬ್ಬ ಸ್ಟಾರ್ ನಟ ಅನ್ನೋದನ್ನು ಪಕ್ಕಕ್ಕಿಟ್ಟು, ಚಿತ್ರದ ಚಿತ್ರೀಕರಣದಲ್ಲಿ ಇನ್‍ವಾಲ್ವ್ ಆಗುತ್ತಿದ್ದಾರೆ. ಅನಂತ್‍ನಾಗ್, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ,  ನಾಜರ್ ಕೂಡಾ ಅಷ್ಟೆ.. ಪ್ರತಿಯೊಬ್ಬರೂ ಸಿನಿಮಾವನ್ನು ನಮ್ಮ ಸಿನಿಮಾ ಎಂದೇ ಸಹಕಾರ ನೀಡುತ್ತಿದ್ದಾರೆ. ಒಂದು ಅದ್ಬುತ ಅನುಭವದ ಚಿತ್ರವಂತೂ ನಿಮ್ಮ ಮುಂದೆ ಬರಲಿದೆ ಎಂದು ಭರವಸೆ ನೀಡಿದ್ದಾರೆ ಪ್ರಶಾಂತ್.

 • ಕೆಜಿಎಫ್ ಟೀಂ ಹೈದರಾಬಾದ್ ಶಿಫ್ಟ್

  kgf team busy shooting in hyderabad

  ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಕೋಲಾರದಲ್ಲಿ ಮುಕ್ತಾಯವಾಗಿದೆ. 2ನೇ ಶೆಡ್ಯೂಲ್ ಚಿತ್ರೀಕರಣ ಹೈದರಾಬಾದ್‍ನಲ್ಲಿ ಶುರುವಾಗಿದೆ. ಇಡೀ ಚಿತ್ರತಂಡ ಈಗ ಹೈದರಾಬಾದ್‍ನಲ್ಲಿ ಬೀಡುಬಿಟ್ಟಿದೆ.

  ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಅನಂತನಾಗ್, ಮಾಳವಿಕಾ ಅವಿನಾಶ್ ಸೇರಿದಂತೆ ಮತ್ತೊಮ್ಮೆ ಕಲಾವಿದರ ತಂಡ ಒಗ್ಗೂಡಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಭರ್ಜರಿ ಚಿತ್ರೀಕರಣ ನಡೆಯುತ್ತಿದೆ. ಸೆಪ್ಟೆಂಬರ್ ಕೊನೆಯ ವೇಳೆಗೆ ಚಿತ್ರದ ಶೇ.60ರಷ್ಟು ಚಿತ್ರೀಕರಣ ಮುಗಿಸುವ ತವಕದಲ್ಲಿದೆ ಕೆಜಿಎಫ್ ಟೀಂ.

  ಹೊಂಬಾಳೆ ಫಿಲಂಸ್‍ನಲ್ಲಿ ಬರುತ್ತಿರುವ ಕೆಜಿಎಫ್ ಚಾಪ್ಟರ್-2 ಚಿತ್ರವನ್ನು ಮೊದಲ ಭಾಗಕ್ಕಿಂತ ಅದ್ಧೂರಿಯಾಗಿ ತೆರೆ ಮೇಲೆ ತರಲು ಉತ್ಸುಕರಾಗಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery