` yash, - chitraloka.com | Kannada Movie News, Reviews | Image

yash,

 • Yash-Radhika Pandith Film Titled Santhu Straight Forward

  santhu straight forward image

  Yash starrer new film which is being produced by K Manju and directed by Mahesh Rao has been finally titled as 'Santhu Straight Forward'. Earlier there were rumours that the film has been titled as 'Gandhi Class' or 'Maanja'. However, the team including Yash rubbished the news that the film has been titled. The team was in search of a new title and now the film has been titled as 'Santhu Straight Forward'.

  Apart from Yash and Radhika Pandith, Tamil actor Shyam has been roped in to play a prominent role in the film. 'Santhu Straight Forward' has already been launched and the regular shooting for the film will commence soon,

 • `ತಪ್ಪು ಮಾಡಿ.. ಆಣ್ಣಾ.. ನಾನು ನಿನ್ನ ಅಭಿಮಾನಿ ಎನ್ನಬೇಡಿ'

  yash requests fans to help curb piracy

  ಪೈರಸಿ ವಿರುದ್ಧ ಸಮರವನ್ನೇ ಸಾರಲು ಹೊರಟಿರುವ ಕೆಜಿಎಫ್ ಚಿತ್ರತಂಡ, ಹೆಲ್ಪ್‍ಲೈನ್ ಆರಂಭಿಸಿರುವುದು ತಿಳಿದಿದೆಯಷ್ಟೇ. ಅಷ್ಟೇ ಅಲ್ಲ, 2000ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರ, ಚಿತ್ರವನ್ನು ಪೈರೇಟ್ ಮಾಡುವವರ ವಿರುದ್ಧ ಹದ್ದಿನ ಕಣ್ಣಿಟ್ಟಿದೆ.

  ಫೇಸ್‍ಬುಕ್ ಲೈವ್, ಥಿಯೇಟರುಗಳಲ್ಲಿ ಮೊಬೈಲ್, ಕ್ಯಾಮೆರಾಗಳಲ್ಲಿ ಚಿತ್ರೀಕರಣ ಮಾಡೋದು.. ತಪ್ಪು. ಯಾರೂ ಕಾನೂನು ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಯಶ್. ಪೈರಸಿ ಆಗದಂತೆ ತಡೆಯುವ ಹೊಣೆಯನ್ನು ಖಾಸಗಿ ಏಜೆನ್ಸಿಯೊಂದಕ್ಕೆ ವಹಿಸಲಾಗಿದೆ.

  ತಪ್ಪು ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ತಪ್ಪು ಮಾಡಿ, ಅಣ್ಣಾ ನಾನು ನಿಮ್ಮ ಅಭಿಮಾನಿ ಎಂದರೆ, ಪೊಲೀಸರು ಸುಮ್ಮನಿರಲ್ಲ. ಒಳ್ಳೆಯ ಸಿನಿಮಾ ಮಾಡಿದರೆ, ಕನ್ನಡ ಚಿತ್ರರಂಗ ಏರುವ ಎತ್ತರವೇ ಬೇರೆ. ಕನ್ನಡ ತಲುಪುವ ಎತ್ತರವೇ ಬೇರೆ. ಮರೆಯಬೇಡಿ. ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ ಯಶ್. 

 • `ಮೈ ನೇಮ್ ಈಸ್ ಕಿರಾತಕ'ನ ಕಥೆ ಏನು..?

  what is the story od my name is kirataka

  ಕೆಜಿಎಫ್ ಚಾಪ್ಟರ್ 1 ಮುಗಿದು, ಚಾಪ್ಟರ್ 2 ಶುರುವಾಗುವ ನಡುವೆ ಯಶ್ ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲಿ ನಟಿಸಬೇಕಿತ್ತು. ಚಿತ್ರಕ್ಕೆ ಮುಹೂರ್ತವೂ ಆಗಿತ್ತು. ಗಡ್ಡ, ಕೂದಲು ತೆಗೆಸಿಕೊಂಡು ಸ್ಮಾರ್ಟ್ ಆಗಿದ್ದ ಯಶ್, ಈ ಚಿತ್ರಕ್ಕೆ ಕೆಲವು ದಿನಗಳ ಚಿತ್ರೀಕರಣವನ್ನೂ ಮಾಡಿದ್ದರು. ಆದರೆ, ಚಾಪ್ಟರ್ 2 ಶುರುವಾದ ಕೂಡಲೇ ಈ ಚಿತ್ರಕ್ಕೆ ಬ್ರೇಕ್ ಬಿದ್ದಿತ್ತು. ಕೆಜಿಎಫ್ ಚಾಪ್ಟರ್ 2 ಮುಗಿದ ಮೇಲೆ ಮೈ ನೇಮ್ ಈಸ್ ಕಿರಾತಕ ಎಂದಿದ್ದರು ಯಶ್ ಮತ್ತು ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ.

  ಮುಂದೇನಾಯ್ತು..? ಆಗ ಸ್ಪಷ್ಟನೆ ಕೊಟ್ಟ ಬಳಿಕ ಚಿತ್ರತಂಡ ಕಂಪ್ಲೀಟ್ ಸೈಲೆಂಟ್ ಆಗಿತ್ತು. ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದಲ್ಲಿ ಸೆಟ್ಟೇರಿರುವ ಮೈ ನೇಮ್ ಈಸ್ ಕಿರಾತಕ ಈ ಬಾರಿ ಯಶ್ ಹುಟ್ಟುಹಬ್ಬಕ್ಕೆ ಜಾಹೀರಾತು ನೀಡಿದೆ.

  ಅಕಸ್ಮಾತ್ ಚಿತ್ರ ನಿಂತಿದ್ದರೆ, ಜಾಹೀರಾತಿನ ಪ್ರಮೇಯವೇ ಬರುತ್ತಿರಲಿಲ್ಲ. ಜಾಹೀರಾತು ನೋಡಿದವರಿಗೆ ಅದು ಪಕ್ಕಾ ಆಗಿದೆ. ಅರ್ಥಾತ್, ಕೆಜಿಎಫ್ 2 ನಂತರ ಯಶ್ ಮತ್ತೊಮ್ಮೆ ಜಯಣ್ಣ ಭೋಗೇಂದ್ರ ಬ್ಯಾನರ್‍ನ ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲಿ ನಟಿಸಲಿದ್ದಾರೆ

 • `ರಾಯ'ರ ಮಗಳ ಫೋಟೋ ವೈರಲ್

  baby yr image

  ಬೇಬಿ ವೈಆರ್. ಇದು ಸದ್ಯಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಮಗಳಿಗೆ ಇಟ್ಟಿರೋ ಟೆಂಪೊರರಿ ಹೆಸರು. ನಾವು ಸ್ವಲ್ಪ ಕನ್ನಡದಲ್ಲೇ ಕರೆಯುತ್ತಿದ್ದೇವೆ. ರಾಯರ ಮಗಳು ಅನ್ನೋಣ. 

  ಅಕ್ಷಯ ತೃತೀಯದ ದಿನದಂದು, ತಮ್ಮ ಮುದ್ದಿನ ಮಗಳ ಫೋಟೋ ತೋರಿಸಲು ಮುಹೂರ್ತ ಇಟ್ಟುಕೊಂಡಿದ್ದ ಯಶ್ ಮತ್ತು ರಾಧಿಕಾ ಜೋಡಿ, ಮುದ್ದು ಮುದ್ದಾದ ಫೋಟೋ ಬಿಡುಗಡೆ ಮಾಡಿದೆ.

  ಅಭಿಮಾನಿಗಳು, ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು.. `ರಾಯ'ರ ಮಗಳಿಗೆ ಶುಭ ಕೋರಿದ್ದಾರೆ. ಹರಸಿ ಆಶೀರ್ವದಿಸಿದ್ದಾರೆ. 

  ಸದ್ಯಕ್ಕಿನ್ನೂ `ರಾಯ'ರ ಮಗಳಿಗೆ ನಾಮಕರಣ ಆಗಿಲ್ಲ. ಸ್ವಲ್ಪ ದಿನಗಳಲ್ಲೇ `ರಾಯ'ರ ಮಗಳ ನಾಮಕರಣದ ಮುಹೂರ್ತ ಫಿಕ್ಸ್ ಆಗಬಹುದು. ಕಾಯ್ತಾ ಇರಿ.

 • ಅಕ್ಟೋಬರ್ 23, ಶುಭ ಶುಕ್ರವಾರ ಕೆಜಿಎಫ್ ಚಾಪ್ಟರ್ 2 ರಿಲೀಸ್

  kgf chapter 2 world wide release on oct 23rd

  ಇದು ಅಧಿಕೃತ. ಹೊಂಬಾಳೆ ಪ್ರೊಡಕ್ಷನ್ಸ್ ಅಧಿಕೃತವಾಗಿಯೇ ಚಿತ್ರದ ರಿಲೀಸ್ ಡೇಟ್ ಘೋಷಿಸಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಚಿತ್ರದ ಸೀಕ್ವೆಲ್ ಕೆಜಿಎಫ್ ಚಾಪ್ಟರ್ 2.

  2018ರ ಡಿಸೆಂಬರ್ 21ರಂದು ರಿಲೀಸ್ ಆಗಿದ್ದ ಕೆಜಿಎಫ್ ಚಾಪ್ಟರ್, ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ.. ಐದಕ್ಕೆ ಐದೂ ಭಾಷೆಯಲ್ಲಿ ಹಿಟ್ ಆಗಿದ್ದ ಕೆಜಿಎಫ್, 250 ಕೋಟಿ ಬಿಸಿನೆಸ್ ಮಾಡಿತ್ತು. ಈಗಲೂ ಆನ್ಲೈನ್ ಸ್ಟ್ರೀಮಿಂಗ್ನಲ್ಲಿ ಟಾಪ್ ಲಿಸ್ಟಿನಲ್ಲಿರೋ ಕೆಜಿಎಫ್ ಚಾಪ್ಟರ್ 1ನಿಂದಾಗಿ, ಸಹಜವಾಗಿಯೇ ಚಾಪ್ಟರ್ 2 ಮೇಲೆ ನಿರೀಕ್ಷೆ ಇದೆ.

  ಯಶ್ ಎದುರು ಈ ಬಾರಿ ಸಂಜಯ್ ದತ್, ರವೀನಾ ಟಂಡನ್ ಅವರಂತಹ ಬಾಲಿವುಡ್ ದಿಗ್ಗಜರೂ ನಟಿಸಿದ್ದು, ಹೊಂಬಾಳೆ ಪ್ರೊಡಕ್ಷನ್ಸ್ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸುವ ನಿರೀಕ್ಷೆ ಇದೆ.

 • ಅಡುಗೆ ಭಟ್ಟನಾದರು ರಾಕಿಂಗ್ ಸ್ಟಾರ್

  yash cooks for his wife radhika pandit

  ರಾಕಿಂಗ್ ಸ್ಟಾರ್ ಯಶ್, ಅಡುಗೆ ಭಟ್ಟನಾಗಿದ್ದಾರೆ. ಮೊಗ್ಗಿನ ಮನಸ್ಸಿನ ಹುಡುಗಿಗಾಗಿ. ಪತ್ನಿ ರಾಧಿಕಾ ಪಂಡಿತ್‍ಗಾಗಿ ಅಡುಗೆ ಮಾಡಿ ಬಡಿಸಿದ್ದಾರೆ ಯಶ್.ಗರ್ಭಿಣಿಯಾಗಿರುವ ರಾಧಿಕಾ ಪಂಡಿತ್‍ಗೆ ಇದು ಬಸುರಿ ಬಯಕೆಯಾ..? ಗೊತ್ತಿಲ್ಲ. ಪತ್ನಿ ಕೇಳಿದ್ದೆಲ್ಲವನ್ನೂ ಪ್ರೀತಿಯಿಂದ ಮಾಡುವ ಯಶ್, ಈ ಬಾರಿ ಅಡುಗೆ ಮಾಡಿದ್ದಾರೆ. 

  ಪರವಾಗಿಲ್ಲ, ಕೆಟ್ಟ ಅಡುಗೆ ಭಟ್ಟನೇನೂ ಅಲ್ಲ. ಎಷ್ಟೆಂದ್ರೂ ರಾಕಿಂಗ್ ಸ್ಟಾರ್ ಅಲ್ವಾ.. ಎಂದು ಕಿಚಾಯಿಸಿದ್ದಾರೆ ರಾಧಿಕಾ ಪಂಡಿತ್.

 • ಅತಿರೇಕದ ಅಭಿಮಾನಿಗಳಿಗೆ ಈಗ ಯಶ್‍ರಿಂದಲೂ ಬುದ್ದಿವಾದ

  yash requests fans not to dlow things out of proportion

  ಕಿಚ್ಚ ಸುದೀಪ್, ಯಶ್‍ಗೆ ಫಿಟ್‍ನೆಸ್ ಚಾಲೆಂಜ್ ಹಾಕಿದ್ದೂ, ಅದನ್ನು ಸ್ವೀಕರಿಸಿ ಯಶ್ ಕೂಡಾ ಫಿಟ್‍ನೆಸ್ ವಿಡಿಯೋ ಮಾಡಿದ್ದು ಒಂದು ಹಂತವಾದರೆ, ಆ ವಿಡಿಯೋದಲ್ಲಿ ಸುದೀಪ್ ಅವರನ್ನು ಸುದೀಪ್ ಸರ್ ಎನ್ನಲಿಲ್ಲ ಎಂದು ಕಿಚ್ಚನ ಅಭಿಮಾನಿಗಳು ಸಿಟ್ಟಾಗಿದ್ದು ಇನ್ನೊಂದು ಕಥೆ. ಸ್ವತಃ ಸುದೀಪ್ ತಮ್ಮ ಅಭಿಮಾನಿಗಳಿಗೆ ಯಶ್‍ರನ್ನು ಬಯ್ಯಬೇಡಿ ಎಂದು ಕೇಳಿಕೊಂಡರೂ ವಾರ್ ನಿಲ್ಲಲಿಲ್ಲ. ಯಶ್ ಅಭಿಮಾನಿಗಳೂ ಅತಿರೇಕಕ್ಕೆ ಹೋಗಿಬಿಟ್ಟರು. ಈಗ ತಮ್ಮ ಅಭಿಮಾನಿಗಳಿಗೆ ಯಶ್ ಕೂಡಾ ಬುದ್ದಿವಾದ ಹೇಳಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ. ಕೆಲವು ಕಮೆಂಟ್ಸ್‍ಗಳನ್ನೂ ನಾನು ಗಮನಿಸಿದ್ದೇನೆ. ಸುದೀಪ್ ಅವರು ನನಗಿಂತ ಹಿರಿಯರು. ಅವರಿಗೆ ಗೌರವ ಕೊಡಲಿಲ್ಲ ಅಂದ್ರೆ, ನನಗೂ ನೀವು ಗೌರವ ಕೊಡದಂತೆಯೆ. ಘನತೆಯಿಂದ ವರ್ತಿಸಿ. ಇದನ್ನು ದೊಡ್ಡದು ಮಾಡಬೇಡಿ. 

  ನಾನು ಸಾರ್ ಅಂತ ಕರೆದರೆ ಮಾತ್ರ ಅವರಿಗೆ ಗೌರವ ಕೊಟ್ಟ ಹಾಗಲ್ಲ. ಅಥವಾ ನಾನು ಅಂತ ಕರೆಯದೇ ಇದ್ರೂ ಅವರ ಮೇಲಿನ ಗೌರವ ಕಮ್ಮಿಯಾಗಲ್ಲ. ನಾನು ಅವರನ್ನ ತುಂಬಾ ಗೌರವಿಸ್ತೀನಿ. ನನ್ನ ಮೇಲಿನ ಅಭಿಮಾನ ತೋರಿಸಿಕೊಳ್ಳೋಎಕ ಅವರನ್ನು ಅಗೌರವದಿಂದ ಕಾಣೋದು ಸರಿಯಲ್ಲ. ಇದನ್ನ ಇಲ್ಲಿಗೆ ಬಿಡಿ.

  ಈಗ ಇಬ್ಬರೂ ಸ್ಟಾರ್‍ಗಳು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ಧಾಗಿದೆ. ಅತಿರೇಕದ ಅಭಿಮಾನಿಗಳು ಈಗಲಾದರೂ ವಾಸ್ತವ ಅರ್ಥ ಮಾಡಿಕೊಳ್ತಾರಾ..?

 • ಅಪೇಕ್ಷಾ ಪುರೋಹಿತ್ ಸಿನಿಮಾಗೆ ರಾಕಿಂಗ್ ಸ್ಟಾರ್ ಸಾಥ್

  yash to launch trailer of apeksha purohith;s movie

  ಅಪೇಕ್ಷಾ ಪುರೋಹಿತ್ ಅಭಿನಯದ ಸಾಗುತ ದೂರ ದೂರಾ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಸಾಥ್ ಕೊಟ್ಟಿದ್ದಾರೆ. ಸಿನಿಮಾದ ಟ್ರೇಲರ್ ರಿಲೀಸ್ ಮಾಡ್ತಿರೋದು ಅವರೇ. ಅಮಿತ್ ಪೂಜಾರಿ ನಿರ್ಮಾಣದ ಚಿತ್ರಕ್ಕೆ ರವಿತೇಜ ನಿರ್ದೇಶಕ.

  ಚಿತ್ರದ ಟ್ರೇಲರ್ ಬಿಡುಗಡೆ ಮಾಡ್ತಿರೋದು ಯಶ್. ಅಂದಹಾಗೆ ಅಪೇಕ್ಷಾ ಪುರೋಹಿತ್, ನಿರ್ದೇಶಕ ಪವನ್ ಒಡೆಯರ್ ಅವರ ಪತ್ನಿ. ಯಶ್‍ಗೆ ಗೂಗ್ಲಿ ಮೂಲಕ ಒಳ್ಳೆಯ ಬ್ರೇಕ್ ಕೊಟ್ಟಿದ್ದವರು ಪವನ್ ಒಡೆಯರ್. 

  ಚಿತ್ರದಲ್ಲಿ ತಾಯಿ-ಮಗನ ಬಾಂಧವ್ಯದ ಕಥೆಯಿದ್ದು, ಅಪೇಕ್ಷಾ ಪುರೋಹಿತ್ ಚಿತ್ರದ ಬಗ್ಗೆ ಥ್ರಿಲ್ಲಾಗಿದ್ದಾರೆ. ಮದುವೆಯ ನಂತರ ರಿಲೀಸ್ ಆಗುತ್ತಿರುವ ಅವರ ಮೊದಲ ಚಿತ್ರ ಸಾಗುತ ದೂರ ದೂರ. 

 • ಅಪ್ಪನ ಬರ್ತ್‍ಡೇಗೆ ಮಗಳು ಐರಾ ಕೇಕ್ ತಯಾರಿ

  yash's daughter ayra prepares cake for yash

  ಅಭಿಮಾನಿಗಳು 5 ಸಾವಿರ ಕೆಜಿ ತಯಾರಿಸಿದ್ರೆ, ಮಗಳು ಐರಾ ಪುಟಾಣಿ ಕೇಕ್ ತಯಾರಿಸಿದ್ದಾಳೆ. ಯಶ್ ಹುಟ್ಟುಹಬ್ಬಕ್ಕೆ ಸ್ವತಃ ಕೇಕ್ ತಯಾರಿಸುವುದು ರಾಧಿಕಾ ಪಂಡಿತ್ ಅನುಸರಿಸ್ತಿರೋ ಪದ್ಧತಿ. ಈ ಬಾರಿ ರಾಧಿಕಾ ಕೇಕ್ ತಯಾರಿಗೆ ಸಾಥ್ ಕೊಟ್ಟಿರೋದು ಐರಾ.

  ಅಫ್‍ಕೋರ್ಸ್.. ಕೇಕ್ ಮಾಡಿದ್ದಕ್ಕಿಂತ ಚಾಕೊಲೇಟ್, ಕ್ರೀಮನ್ನು ತಿಂದಿದ್ದೇ ಹೆಚ್ಚು. ಯಶ್ ಬರ್ತ್‍ಡೇಗೆ ಕೇಕ್ ತಯಾರಿಸಿ ಡಾಡಾಗೊಂದು ವಿಶ್ ಹೇಳಿದ್ದಾಳೆ ಐರಾ. 

 • ಅಪ್ಪು ಸೀಟ್ ಅಲಂಕರಿಸುತ್ತಾರಾ ಯಶ್..?

  yash to host kannadadha kotiyadhipathi?

  ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ಮತ್ತೆ ಶುರುವಾಗಲಿದೆ ಎಂಬ ಸುದ್ದಿಗೆ ಈಗ ರೆಕ್ಕೆಪುಕ್ಕ ಬಂದುಬಿಟ್ಟಿದೆ. ಕಾರ್ಯಕ್ರಮವನ್ನು ಮತ್ತೆ ಶುರು ಮಾಡುವ ಬಗ್ಗೆ ಸ್ಟಾರ್ ಸುವರ್ಣದವರು ಒಂದೆರಡು ಹೆಜ್ಜೆ ಮುಂದಿಟ್ಟಿದ್ದಾರೆ. ಆದರೆ, ಸದ್ಯಕ್ಕೆ ಅವರಿಗೆ ಪುನೀತ್ ಸಿಗಲ್ಲ. ಏಕೆಂದರೆ, ಕಲರ್ಸ್ ಕನ್ನಡ ವಾಹಿನಿಯ `ಫ್ಯಾಮಿಲಿ ಪವರ್' ರಿಯಾಲಿಟಿ ಶೋ ನಡೆಸಿಕೊಡಲು ಪುನೀತ್ ಒಪ್ಪಿಕೊಂಡಿದ್ದಾರೆ. 

  ಹೀಗಾಗಿಯೇ ಜನಮೆಚ್ಚುವ ಸ್ಟಾರ್ ಹುಡುಕಾಟದಲ್ಲಿದ್ದ ಸುವರ್ಣ ವಾಹಿನಿಯವರಿಗೆ ಯಶ್ ಈ ಕಾರ್ಯಕ್ರಮ ನಿರೂಪಿಸಿದರೆ ಹೇಗೆ ಎಂಬ ಆಲೋಚನೆ ಬಂದಿದೆ. ಯಶ್ ಅವರನ್ನು ಸಂಪರ್ಕಿಸಿಯೂ ಆಗಿದೆ.

  ಆ ಕಾರ್ಯಕ್ರಮ ನಿರ್ವಹಿಸಲು ಆಫರ್ ಬಂದಿರುವುದು ನಿಜ. ಆದರೆ, ನಾನಿನ್ನೂ ಒಪ್ಪಿಕೊಂಡಿಲ್ಲ. ಮುಂದೇನಾಗುತ್ತೋ ಗೊತ್ತಿಲ್ಲ ಎಂದಿದ್ದಾರೆ ಯಶ್. ಸದ್ಯಕ್ಕೆ ಯಶ್ ಭಾಗವಹಿಸಬೇಕೋ ಬೇಡವೋ ಎಂಬ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ. 

  ಹಾಗೆ ನೋಡಿದರೆ ಯಶ್ ಕಿರುತೆರೆಯಿಂದಲೇ ಬಣ್ಣದ ಜಗತ್ತಿಗೆ ಕಾಲಿಟ್ಟವರು. ಒಪ್ಪಿಕೊಂಡರೆ ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಲಿದ್ದಾರೆ ಯಶ್. ಅದೂ ಕನ್ನಡದ ಕೋಟ್ಯಧಿಪತಿ ಸೀಟ್‍ನಲ್ಲಿ.

 • ಅಬ್ಬಾ..! ಇತಿಹಾಸ ನಿರ್ಮಿಸುತ್ತಿದೆ ಕೆಜಿಎಫ್

  kgf breaks all records

  ಕೆಜಿಎಫ್... ಬಿಡುಗಡೆಗೆ ಮೊದಲೇ ಒಂದೊಂದೇ ಇತಿಹಾಸ ನಿರ್ಮಿಸುತ್ತಾ ಹೊರಟಿದೆ. ಬಿಡುಗಡೆಯಾಗುವುದು ಡಿಸೆಂಬರ್ ಕೊನೆಯ ವಾರದಲ್ಲಿ. ಟ್ರೇಲರ್ ರಿಲೀಸ್ ಆಗಿ ಒಂದು ವಾರವೂ ಆಗಿಲ್ಲ. ಕ್ರೇಝ್ ಮಾತ್ರ.. ಮೌಂಟ್ ಎವರೆಸ್ಟ್ ಎತ್ತರದಲ್ಲಿ ಬೆಳೆಯುತ್ತಿದೆ.

  ಕೆಜಿಎಫ್ ಚಿತ್ರದ ಟ್ರೇಲರ್ ನೋಡಿದವರ ಸಂಖ್ಯೆ 2 ಕೋಟಿ ದಾಟಿದೆ. ಕನ್ನಡದಲ್ಲಿ ಟ್ರೇಲರ್ ನೋಡಿದವರಿಗಿಂತ, ಹಿಂದಿಯ ಟ್ರೇಲರ್ ನೋಡಿದವರ ಸಂಖ್ಯೆಯೇ ಹೆಚ್ಚು. ಕೆಜಿಎಫ್ ಟ್ರೇಲರ್ ನೋಡಿದವರು, ಕನ್ನಡದ ಬಗ್ಗೆ ಗೊತ್ತಿಲ್ಲದೇ ಇರುವವರು ಯಶ್ ಬಗ್ಗೆ ಹುಡುಕಾಡುವುದು ಹೆಚ್ಚಾಗಿದೆ. ಗೂಗಲ್ ಸರ್ಚ್‍ನಲ್ಲಿಯೂ ಯಶ್ ಟಾಪ್ 10ನಲ್ಲಿದ್ದಾರೆ. ಟ್ರೆಂಡಿಂಗ್‍ನಲ್ಲಿಯೂ ಕೆಜಿಎಫ್ ಟಾಪ್‍ನಲ್ಲಿದೆ.

  ಕೆಜಿಎಫ್ ಸೃಷ್ಟಿಸುತ್ತಿರುವ ಕ್ರೇಝ್ ನೋಡಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಖುಷಿಯಾಗಿದ್ದಾರೆ. ಯಶ್, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಎಲ್ಲರೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.

 • ಅಭಿಮಾನಿಗಳ ಅತಿರೇಕ - ಸುದೀಪ್ ಬುದ್ದಿವಾದ

  sudeep requests fans not to use harsh words against yash

  ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ನಿರಂತರವಾಗಿರುತ್ತಾರಷ್ಟೇ ಅಲ್ಲ, ಆಗಾಗ್ಗೆ ಬುದ್ದಿವಾದವನ್ನೂ ಹೇಳುತ್ತಿರುತ್ತಾರೆ. ಈ ಬಾರಿಯೂ ಹಾಗೆಯೇ ಆಗಿದೆ. ಕಿಚ್ಚ ಸುದೀಪ್, ಯಶ್‍ಗೆ ಫಿಟ್‍ನೆಸ್ ಚಾಲೆಂಜ್ ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಟ್ವಿಸ್ಟ್ ಕೊಟ್ಟ ಯಶ್, ತಮ್ಮ ಬಾಲ್ಯಸ್ನೇಹಿತನ ವ್ಯಾಯಾಮದ ವಿಡಿಯೋ ಹಾಕಿದ್ದರು. ಆದರೆ, ಆ ವಿಡಿಯೋದಲ್ಲಿ ಯಶ್ ಆಡಿರುವ ಮಾತು, ಸುದೀಪ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. 

  ಇಷ್ಟಕ್ಕೂ ಆಗಿರೋದೇನಂದ್ರೆ, ಯಶ್ ತಮ್ಮ ವಿಡಿಯೋದಲ್ಲಿ ಹಾಯ್ ಸುದೀಪ್.. ಎಂದಿರೋದು. ಇಷ್ಟಕ್ಕೆ ಕೆಲವು ಅಭಿಮಾನಿಗಳು ಯಶ್ ವಿರುದ್ಧ ಮುಗಿಬಿದ್ದರು. ಸುದೀಪ್ ಅವರನ್ನು ಏಕವಚನದಲ್ಲಿ ಕರೆಯೋದು ಸರೀನಾ..? ದೊಡ್ಡವರಿಗೆ ಗೌರವ ಕೊಡಬೇಕು ಎಂದೆಲ್ಲ ಯಶ್ ವಿರುದ್ಧ ಟೀಕೆಯ ಸುರಿಮಳೆಗೈದರು. ಕೆಲವು ಹತೋಟಿ ಮೀರಿಯೂ ಬಂದವು. ಆಗ ಕಿಚ್ಚ ಸುದೀಪ್ ಅವರೇ ಅಭಿಮಾನಿಗಳಿಗೆ ಬುದ್ದಿವಾದ ಹೇಳಿದ್ದಾರೆ.

  ನನ್ನ ಅಭಿಮಾನಿಗಳಿಗೆ ನನ್ನದೊಂದು ಮನವಿ. ದಯವಿಟ್ಟು ಯಶ್ ವಿರುದ್ಧ ಯಾರೂ ಕೆಟ್ಟ ಪದ ಬಳಸಬೇಡಿ. ಅವರು ವಿಡಿಯೋದಲ್ಲಿ ನನ್ನ ಹೆಸರು ಹೇಳಿರೋದ್ರಲ್ಲಿ ತಪ್ಪೇನೂ ಇಲ್ಲ. ನನ್ನ ಫಿಟ್‍ನೆಸ್ ಚಾಲೆಂಜ್‍ನ್ನು ಸ್ವೀಕರಿಸಿರುವುದೇ ಅವರು ನನಗೆ ನೀಡಿರುವ ಗೌರವ. ದಯವಿಟ್ಟು ನನ್ನ ಮನಸ್ಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಸುದೀಪ್.

  ಕಿಚ್ಚ ಸುದೀಪ್ ಸೇರಿದಂತೆ ಸ್ಯಾಂಡಲ್‍ವುಡ್ ತಾರೆಯರು ವೈಯಕ್ತಿಕ ಮಟ್ಟದಲ್ಲಿ ಸ್ನೇಹ, ಸೌಹಾರ್ದತೆ ಕಾಪಾಡಿಕೊಂಡು ಬಂದಿದ್ದಾರೆ. ಅದು ಅಭಿಮಾನಿಗಳಿಗೆ ಅರ್ಥವಾದರೆ ಸಾಕು.

  Related Articles :-

  ಕಿಚ್ಚನ ಚಾಲೆಂಜ್ ಸ್ವೀಕರಿಸಿದ ಯಶ್, ಪ್ರಿಯಾ ಸುದೀಪ್

 • ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿದ ಯಶ್

  yash with his fan

  ಚಿತ್ರನಟರ ಬಗ್ಗೆ ಅಭಿಮಾನಿಗಳು ತೋರುವ ಅಭಿಮಾನ ಕೆಲವು ಬಾರಿ ಅನಾಹುತಗಳನ್ನೇ ತಂದುಬಿಡುತ್ತವೆ. ಅಂಥದ್ದೇ ಒಂದು ಅನಾಹುತ ಉತ್ತರ ಕರ್ನಾಟಕ ಭಾಗದ ಅಗಡಿ ಅನ್ನೋ ಊರಿನಲ್ಲಿ ನಡೆದಿತ್ತು. ಊರ ಹಬ್ಬದ ದಿನ ಯಶ್ ಅವರ ಕಟೌಟ್ ಹಾಕಲು ಹೋಗಿ, ವಿದ್ಯುತ್ ತಂತಿ ತಗಲು ಅಭಿಮಾನಿಯೊಬ್ಬ ಕೈಕಳೆದುಕೊಂಡಿದ್ದ.

  ವಿಷಯ ತಿಳಿದ ನಂತರ, ಯಶ್ ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿದ್ದಾರೆ.

  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಭಿಮಾನಿಯ ನೆರವಿಗೆ ಧಾವಿಸಿರುವ ಅಖಿಲ ಕರ್ನಾಟಕ ಯಶ್ ಅಭಿಮಾನಿಗಳ ಸಂಘದ ಸದಸ್ಯರು, ಆ ಯುವಕನಿಗೆ ಒಂದು ಲಕ್ಷ ರೂ. ಚೆಕ್ ನೀಡಿದ್ದಾರೆ. ಅಭಿಮಾನವಿರಲಿ, ಆದರೆ, ಅತಿರೇಕವಾಗುವುದು ಬೇಡ ಎಂದು ಬುದ್ದಿವಾದವನ್ನೂ ಹೇಳಿದ್ದಾರೆ.

  ಒಂದಂತೂ ಸತ್ಯ. ಎಲ್ಲ ಅಭಿಮಾನಿಗಳ ಕಷ್ಟಕ್ಕೂ ಸ್ಟಾರ್‍ನಟರು ಸಹಾಯಕ್ಕೆ ಬರೋಕೆ ಸಾಧ್ಯವಿಲ್ಲ. ಅಭಿಮಾನ ಖುಷಿ ಕೊಡುವಂತಿರಬೇಕೇ ಹೊರತು, ಜೀವಕ್ಕೇ, ಜೀವನಕ್ಕೆ ಎರವಾಗುವಂತಿರಬಾರದು. 

 • ಅಮೀರ್ ಖಾನ್‍ಗೆ ರಾಕಿಂಗ್ ಸ್ಟಾರ್ ಯಶ್ ಶಾಕ್

  yash's kgf rocks pan india

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ಅಮೀರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಕ್ಕೇ ಶಾಕ್ ಕೊಟ್ಟಿದೆ. ಐಎಂಡಿಬಿಯಲ್ಲಿ ದೇಶದ ಬಹುನಿರೀಕ್ಷಿತ ಚಿತ್ರಗಳ ಲಿಸ್ಟ್‍ನಲ್ಲಿ ಯಶ್‍ರ ಕೆಜಿಎಫ್ 4ನೇ ಸ್ಥಾನದಲ್ಲಿದೆ. ಆನಂತರದ ಸ್ಥಾನ, ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ್ದು.

  ನಂ.1 ಸ್ಥಾನದಲ್ಲಿ ರಜನಿ, ಅಕ್ಷಯ್ ಅಭಿನಯದ 2.0, 2ನೇ ಸ್ಥಾನದಲ್ಲಿ ವಿಜಯ್ ಅಭಿನಯದ ಸರ್ಕಾರ್, 3ನೇ ಸ್ಥಾನದಲ್ಲಿ ಶಾರುಕ್ ಅಭಿನಯದ ಝೀರೋ ಇದ್ದರೆ, 4ನೇ ಸ್ಥಾನದಲ್ಲಿರೋದು ಹೊಂಬಾಳೆ ಬ್ಯಾನರ್‍ನ ಕೆಜಿಎಫ್.

  ಡಿಸೆಂಬರ್‍ನಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ, ಕರ್ನಾಟಕ ಮಾತ್ರವಲ್ಲ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ಹವಾ ಸೃಷ್ಟಿಸುತ್ತಿದೆ.

 • ಅರ್ಜುನ್ ರೆಡ್ಡಿ ಆಗ್ತಾರಾ ಯಶ್..?

  will yash act in arun reddy remake movie

  ರಾಕಿಂಗ್ ಸ್ಟಾರ್ ಮುಂದಿನ ಚಿತ್ರ ರೀಮೇಕಾ..? ತೆಲುಗಿನ ಸೂಪರ್ ಹಿಟ್ ಸಿನಿಮಾ ಅರ್ಜುನ್ ರೆಡ್ಡಿ ಚಿತ್ರದಲ್ಲಿ ಯಶ್ ನಟಿಸಲಿದ್ದಾರಾ..? ಗಾಂಧಿನಗರದಲ್ಲಿ ಯಶ್ ಕುರಿತು ಇಂಥಾದ್ದೊಂದು ಸುದ್ದಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ.

  ಅರ್ಜುನ್ ರೆಡ್ಡಿ, ತೆಲುಗಿನ ಚಿತ್ರ. ರೊಮ್ಯಾಂಟಿಕ್ ಮತ್ತು ಹಸಿಬಿಸಿ ದೃಶ್ಯಗಳು ಹೆಚ್ಚಿರುವ ಚಿತ್ರ. ಕಥೆ ನಡೆಯುವುದೂ ಕೂಡಾ ಕನ್ನಡ ಪರಿಸರದಲ್ಲಿ. ಆ ಚಿತ್ರವನ್ನು ಕನ್ನಡದಲ್ಲಿ ಮಾಡಬೇಕು ಎಂದು ರಾಕ್‍ಲೈನ್ ವೆಂಕಟೇಶ್ ರೀಮೇಕ್ ಹಕ್ಕು ಖರೀದಿಸಿದ್ದಾರಂತೆ. ಈಗಾಗಲೇ ತಮಿಳಿನಲ್ಲಿ ಧನುಷ್ ಈ ಪಾತ್ರ ಮಾಡುತ್ತಿದ್ದಾರೆ. ಕನ್ನಡದಲ್ಲಿ ಯಶ್ ಅವರನ್ನೇ ಆಯ್ಕೆ ಮಾಡಿಕೊಂಡರೆ ಚೆನ್ನಾಗಿರುತ್ತೆ ಎಂಬ ಅಭಿಪ್ರಾಯ ಕೇಳಿಬಂದಿದೆ.

  ಯಶ್ ಚಿತ್ರದಲ್ಲಿ ರೊಮ್ಯಾನ್ಸ್ ಇರುತ್ತಾದರೂ, ಅದು ಒಂದು ಲಿಮಿಟ್ ಮೀರುವುದಿಲ್ಲ. ಕಿಸ್ಸಿಂಗ್ ಸೀನ್‍ಗಳಂತೂ ಇಲ್ಲವೇ ಇಲ್ಲ. ಆದರೆ, ಅರ್ಜುನ್ ರೆಡ್ಡಿ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳು, ಓವರ್ ರೊಮ್ಯಾಂಟಿಕ್ ಸೀನ್‍ಗಳು, ಕಿಸ್ಸಿಂಗ್ ಸೀನ್‍ಗಳು ಬೇಜಾನ್ ಇವೆ. ಹೀಗಾಗಿ ಅದನ್ನು ಯಶ್ ಒಪ್ಪಿಕೊಳ್ಳುವುದೇ ಡೌಟು ಎಂಬ ಸುದ್ದಿಯೂ ಇದೆ. ಒಟ್ಟಿನಲ್ಲಿ ಅರ್ಜುನ್ ರೆಡ್ಡಿ ಕನ್ನಡಕ್ಕೆ ಬರುತ್ತಿರುವ ಸುದ್ದಿಗೆ ವೇಗ ಸಿಕ್ಕಿದೆ.

   

 • ಅಲಲಾ.. ಯಶ್ ಹಿಂಗೆಲ್ಲ ನಾಚಿಕೊಳ್ತಾರಾ..?

  yash is too shy when camera is turned on

  ರಾಕಿಂಗ್ ಸ್ಟಾರ್ ಯಶ್ ಲವ್ ಮಾಡೋದನ್ನು ನೋಡಿದ್ದೀರಿ. ಫೈಟ್ ಮಾಡೋದನ್ನು ನೋಡಿದ್ದೀರಿ. ಅಲ್ಲಲ್ಲಿ.. ಸಿನಿಮಾಗಳಲ್ಲಿ ನಾಚಿಕೊಂಡು ನಟಿಸೋದನ್ನೂ ನೋಡಿದ್ದೀರಿ. ರೀಲ್ ಮೇಲೆ ಭಯಂಕರ ಡೈಲಾಗ್ ಹೊಡೆಯೋ ಯಶ್ , ರಿಯಲ್ ಲೈಫಲ್ಲಿ ಎಷ್ಟೆಲ್ಲ ನಾಚ್ಕೋತಾರೆ ಗೊತ್ತಾ..? ಈ ಫೋಟೋ ನೋಡಿ.

  ಇದು ರಾಧಿಕಾ ಪಂಡಿತ್ ತೆಗೆದಿರೋ ಫೋಟೋ. ಫೋಟೋಗೆ ಪೋಸ್ ಕೊಡಿ ಅಂದ್ರೆ ಹೇಗೆ ನಾಚ್ಕೋತಾರೆ ನೋಡಿ ಅಂತಾ ಸ್ವತಃ ರಾಧಿಕಾ ಅವರೇ ತೆಗೆದು ಹಾಕಿರೋ ಫೋಟೋ ಇದು.

 • ಇನ್ನು ಮುಂದೆ ಮೊಬೈಲ್‍ನಲ್ಲೇ ಸಿಗುತ್ತೆ ಕೆಜಿಎಫ್ 

  kgf in mobile phones

  ಜಗತ್ತಿನಾದ್ಯಂತ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಕೆಜಿಎಫ್ ಸಿನಿಮಾ ಈಗ ಮೊಬೈಲ್‍ಗೇ ಬರುತ್ತಿದೆ. ಥಿಯೇಟರ್‍ನಲ್ಲಿ ಕೆಜಿಎಫ್ ಇನ್ನೂ 50 ದಿನ ಪೂರೈಸಿಲ್ಲ. ಆಗಲೇ ಅಮೇಜಾನ್ ಪ್ರೈಮ್ ಆ್ಯಪ್‍ನಲ್ಲಿ ರಿಲೀಸ್ ಆಗುತ್ತಿದೆ. ಹೀಗೆ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್ 1.

  ಫೆಬ್ರವರಿ 5ರಿಂದ ಕೆಜಿಎಫ್ ಸ್ಟ್ರೀಮಿಂಗ್ ಆರಂಭ ಎಂದು ಜಾಹೀರಾತು ನೀಡಿದೆ ಅಮೇಜಾನ್. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯ 5 ಆವೃತ್ತಿಗಳಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ. ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು ಅಮೇಜಾನ್ 17 ಕೋಟಿಗೆ ಖರೀದಿಸಿತ್ತು ಎನ್ನುತ್ತಿವೆ ಮೂಲಗಳು.

 • ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಯಶ್ ಶುಭ ಹಾರೈಕೆ

  upendra, yash

  ಉಪೇಂದ್ರ ರಾಜಕೀಯ ಪ್ರವೇಶಕ್ಕೆ ರಾಕಿಂಗ್ ಸ್ಟಾರ್ ಯಶ್ ಶುಭ ಕೋರಿದ್ದಾರೆ. ನನ್ನ ಪ್ರಕಾರ ಉಪೇಂದ್ರ ತುಂಬಾ ಲೇಟ್ ಮಾಡಿದ್ರು. ಇನ್ನೂ ಬೇಗ ಬರಬೇಕಿತ್ತು.

  ಅವರ ಕನಸುಗಳ ಬಗ್ಗೆ ನಮಗೆಲ್ಲ ಚೆನ್ನಾಗಿ ಗೊತ್ತು. ಅವರಿಂದ ಸ್ಫೂರ್ತಿ ಪಡೆದು ಚಿತ್ರರಂಗಕ್ಕೆ ಬಂದವನು ನಾನು. ಜೊತೆಯಲ್ಲಿರುವವರನ್ನು `ಗೋ' ಎನ್ನುವವರು ಲೀಡರ್ ಆಗಲ್ಲ. `ಲೆಟ್ ಅಸ್ ಗೋ' ಎಂದು ಜೊತೆಯಲ್ಲಿ ಕರೆದುಕೊಂಡು ಹೋಗುವವರು ಲೀಡರ್ ಆಗ್ತಾರೆ.

  ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇದೆ. ಅವರ ಕನಸುಗಳು ನನಸಾಗಲಿ. ಅವರ ಜೊತೆ ಕೈಜೋಡಿಸೋಣ. ಅವರು ಹೋಗುತ್ತಿರುವ ಸರಿಯಾಗಿಯೇ ಇದೆ. ಪ್ರಜಾಕೀಯ ಎಂಬ ಹೊಸ ಹೆಸರನ್ನು ಕೊಟ್ಟಿದ್ದಾರೆ. ಅವರು ಒಳ್ಳೆಯದನ್ನೇ ಮಾಡುತ್ತಾರೆ. ಆ ನಂಬಿಕೆ ನನಗಿದೆ. ಅವರಿಗೆ ನನ್ನ ಬೆಂಬಲವಿದೆ ಎಂದಿದ್ದಾರೆ ಯಶ್.

 • ಌಂಕರ್ ಆದರು ರಾಕಿಂಗ್ ಸ್ಟಾರ್ ಯಶ್

  yash becomes anchor

  ರಾಕಿಂಗ್ ಸ್ಟಾರ್ ಯಶ್, ಕೆರೆ, ನೀರು ಎನ್ನುತ್ತಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಹೊಸದೇನೂ ಅಲ್ಲ. ಕೊಪ್ಪಳದ ಬಳಿ ಕೆರೆಯೊಂದರ ಜೀರ್ಣೋದ್ಧಾರ ಮಾಡಿಸಿರುವುದು ಯಶ್ ಸಾಧನೆ. 

  ಆದರೆ, ಈ ಬಾರಿ ಅವರು ನೀರಿಗಾಗಿ, ನದಿಗಳ ಉಳಿವಿಗಾಗಿ ಌಂಕರ್ ಆಗಿದ್ದಾರೆ. ಜಗ್ಗಿ ವಾಸುದೇವ್ ಅವರು ದೇಶಾದ್ಯಂತ ನದಿಗಳ ಉಳಿವಿಗಾಗಿ  ''Rally For Rivers‏'' ಅಭಿಯಾನ ಕೈಗೆತ್ತಿಕೊಂಡಿದ್ದಾರೆ. ಈ ಅಭಿಯಾನಕ್ಕೆ ಕನ್ನಡದಲ್ಲಿ ಈಗಾಗಲೇ ಪುನೀತ್ ರಾಜ್​ಕುಮಾರ್, ಗಣೇಶ್ ಸೇರಿದಂತೆ ಹಲವು ನಟರು ಬೆಂಬಲ ವ್ಯಕ್ತಪಡಿಸಿದ್ದಾರೆ. 

  ಈ ಅಭಿಯಾನದ ಮೂಲಪುರುಷ ಜಗ್ಗಿ ವಾಸುದೇವ್ ಅವರನ್ನು ಯಶ್ ನಿರೂಪಕರಾಗಿ ಸಂದರ್ಶನ ಮಾಡಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ರಾಧಿಕಾ ಪಂಡಿತ್, ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದರು. ಸ್ವತಃ ಕೆರೆಗಳ ಉಳಿವಿಗಾಗಿ ಟೊಂಕ ಕಟ್ಟಿ ಹೊರಟಿರುವ ಯಶ್, ಸದ್ಗುರು ಅವರನ್ನು ಸಂದರ್ಶಿಸಲು ಉತ್ತಮ ಆಯ್ಕೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯವಾಗಿತ್ತು.  ಯಶ್ ಮತ್ತು ಸದ್ಗುರು ಸಂವಾದ' ಕಾರ್ಯಕ್ರಮ, ಇದೇ ಭಾನುವಾರ  ಜೀ-ಕನ್ನಡ ಚಾನೆಲ್​ನಲ್ಲಿ ಪ್ರಸಾರವಾಗಲಿದೆ.

 • ಎಡಿಟಿಂಗ್ ಟೇಬಲ್ ಮೇಲೆ ಕೆಜಿಎಫ್

  kgf post production work starts

  ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ರಾಕಿಂಗ್ ಸ್ಟಾರ್ ಯಶ್, ತಮ್ಮ ಪಾತ್ರಕ್ಕೆ ಡಬ್ಬಿಂಗ್ ಶುರು ಮಾಡಿದ್ದಾರೆ. ಹಾಗೆಂದು ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿಲ್ಲ. ಇನ್ನೂ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಹಾಡಿಗೆ ಎಲ್ಲ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಕೈ ಹಾಕಿದೆ.

  ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ. ಅನಂತ್ ನಾಗ್, ಮಾಳವಿಕ ಸೇರಿದಂತೆ ಘಟಾನುಘಟಿಗಳ ತಂಡವೇ ಚಿತ್ರತಂಡದಲ್ಲಿದೆ. ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ಬರುತ್ತಿರುವ ಸಿನಿಮಾಗೆ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ ನಿರ್ಮಾಪಕರು. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery