ಹರಿಪ್ರಿಯಾ, ಸದಾ ಹೊಸತನ್ನು ಹುಡುಕುವ ಹುಡುಗಿ. ನಟನೆಯಲ್ಲಿ ಎಷ್ಟೇ ಬ್ಯುಸಿಯಿದ್ದರೂ, ಸ್ವತಃ ಡ್ರೈವಿಂಗ್ ಮಾಡೋದನ್ನು ಆನಂದಿಸುವ ಹರಿಪ್ರಿಯಾ, ಎಷ್ಟೋ ಬಾರಿ ತಮ್ಮ ಡ್ರೈವರ್‍ನ್ನೇ ಕಾರ್‍ನಲ್ಲಿ ಕೂರಿಸಿಕೊಂಡು, ತಾವು ಡ್ರೈವಿಂಗ್ ಮಾಡಿದ್ದೂ ಉಂಟು. ಇಂಥ ಹರಿಪ್ರಿಯಾ ಕೈಗೀಗ ಜಾಗ್ವಾರ್ ಸಿಕ್ಕಿಬಿಟ್ಟಿದೆ.
ಕಾರ್ ಡ್ರೈವಿಂಗ್ ಇಷ್ಟಪಡುವವರಿಗೆ ಜಾಗ್ವಾರ್ ಥ್ರಿಲ್ ಕೊಡುತ್ತೆ. ಅಂಥ ಥ್ರಿಲ್ ಅನುಭವಿಸುತ್ತಿರುವ ಹರಿಪ್ರಿಯಾ, ಜಾಗ್ವಾರ್ ಕಾರ್‍ನ ವಿಶೇಷತೆಗಳ ಬಗ್ಗೆ ಈಗ ಗಂಟೆಗಟ್ಟಲೆ ಮಾತನಾಡುತ್ತಾರೆ. ಗಂಟೆಗೆ 220 ಕಿ.ಮೀ. ವೇಗದಲ್ಲಿ ಸಲೀಸಾಗಿ ಓಡಿಸಬಹುದು, ಸ್ಪೋಟ್ರ್ಸ್ ಮೋಡ್, ವಿಂಟರ್ ಮೋಡ್, ರೇನ್ ಮೋಡ್‍ಗಳಿಗೆ ತಕ್ಕಂತೆ ಬದಲಾಗುವ ಜಾಗ್ವಾರ್, ಲಾಂಗ್ ಡ್ರೈವ್‍ಗೆ ಹೇಳಿ ಮಾಡಿಸಿದ ಕಾರು.
ಇಷ್ಟೆಲ್ಲದರ ನಡುವೆ ಹರಿಪ್ರಿಯಾಗೆ ಇರುವ ಒಂದೇ ಒಂದು ಬೇಜಾರೆಂದರೆ, ಮಿರಮಿರನೆ ಮಿಂಚುತ್ತಿರುವ ಜಾಗ್ವಾರ್‍ನನ್ನು ಮನೆಯಲ್ಲೇ ಬಿಟ್ಟು ಶೂಟಿಂಗ್‍ಗೆ ಹೋಗಬೇಕಲ್ಲ ಎನ್ನುವುದು. ಉಸಿರಾಡಲೂ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿರುವ ಹರಿಪ್ರಿಯಾ, ಹೊಸ ವರ್ಷಾಚರಣೆ ದಿನ ಲಾಂಗ್ ಡ್ರೈವ್ ಹೋಗುವ ಹುಮ್ಮಸ್ಸಿನಲ್ಲಿದ್ದಾರೆ.