` hari priya, - chitraloka.com | Kannada Movie News, Reviews | Image

hari priya,

  • Harirpriya's New Film Is Soojidaara

    soojidara movie image

    Harirpiya who is back from acting in 'Kurukshetra' opposite Darshan has signed a new film and the photo shoot for the film was done recently.

    The new film is titled as 'Soojidaara' and well known theatre personality Mounesh Badiger is directing the film apart from scripting it. The film is based on a short story and Mounesh has written the screenplay for the film.

    'Soojidaara' stars Haripriya, Yashwanth Shetty, Achyuth Kumar, Suchendra Prasad and others in prominent roles. Ashok V Raman is the cameraman, while Binna Shadja is the music director for this film. The film will be launched on the 03rd of September.

    Related Articles :-

    ಸೂಜಿದಾರ ಪೋಣಿಸೋಕೆ ಸಿದ್ಧವಾದರು ಹರಿಪ್ರಿಯಾ

  • Here Is The First Look Of Samhaara

    samhara first look

    Chiru's new film 'Samhaara' is all set to go on floors from the 29th of this month. Meanwhile, the first look of the film has been released.

    'Samhaara' is being directed by Guru Deshpande. The film stars Chiranjeevi Sarja and Chikkanna in prominent roles. Both Chiru and Chikkanna were a part of Guru's earlier film 'Rudra Thandava'. Now the trio is all set to work together again. Haripriya and Kavya Shetty have been roped in as the heroines for the film.

    The shooting for the film is scheduled later this month. Jagadish Wali is the cameraman. Ravi Basrur who shot to fame with 'Ugram' is composing the music for the film. Already the song recording for the film has been started in Ravi Basrur studios in Bangalore.

    Related Articles :-

    Chiru's New Film Titled Samhaara

  • Let Us Spread Love Not Coronavirus: Hariprriya

    let us spread love not corona virus

    One of most beautifully talented actresses of Sandalwood, Hariprriya has been on a roll with amazing performances in the recent past. Along with portrayal of versatile characters and the films featuring her turning out to be huge box office success, Hariprriya lately won the best actress award at a film festival for Amruthamathi.

    Undoubtedly the busiest actress, is now bored of being house arrest from the past few days. The actress has shared it explaining why with some of her favourite photos taken from her latest vacation. But, she rightfully says it is much needed during these difficult times.

    "Considering the active person I am, I already miss my freedom to travel, to meet, to eat, to go anywhere I want, even to stand and sit  Bored of being on house arrest  But cannot help it, we all have to be safe and protect each other by distancing ourselves from each other and staying clean," she writes

    She calls upon to use these times to try something creative to keep oneself occupied, teach the young ones or learn a new craft.

    "This is the time for families to come together, clear off the difference. This is the time we prove to ourselves that we can live with our people without material pleasures, so make use of this time in a positive way  Most importantly be safe, eat healthy, exercise and spread love and not Coronavirus," she adds.

    She takes this opportunity to salute all the doctors, medical professionals all over the world for their selfless work and contribution in these tough times. I sincerely request all of you to help them by staying indoors. Stock food and supplies, minimize commute. Let's do our bit, she signs off

  • Life Jothe Ondu Selfie Movie Review, Chitraloka Rating 4/5

    life jothe ondu selfie review

    After the blockbuster hit Sarathi, director Dinakar Toogudeepa is back with Life Jothe Ondu Selfie. This is a multistarrer with Nenapirali Prem, Prajwal Devaraj, Haripriya, Sudharani and others. The film is unique in many ways. It is a very youthful film that talks about so many things that are important to the social and personal lives of youngsters these days. The film starts with the introduction of three characters. 

    Prem's family members want to get him married. But he wants to quit his job and become a film director. He takes a break, quits his high-paying job and heads to Goa. There he meets Haripriya who seems to be hellbent on having a good time whatever the situation. The duo then come across Prajwal who too is in Goa from Karnataka but does not reveal why. The stories of Haripriya and Prajwal is revealed in flashbacks. They are not in Goa for a jolly time but trying to come to terms with problems with their life. Will Goa give them solace?

    The second half of the film shows how the three solve their personal problems. It all happens during the course of a few days in Goa. But is that really possible? For that you have to watch the film in theatres. It will give you a nice entertaining list of possibilities. Enchanting locations of Goa are showcased in the film that will take your breath away. Will Haripriya get around to the idea that her life will change beyond recognition after marriage? Will Prajwal manage to get a real life for his mother? What will happen to Prem's idea of becoming a director?

    Dinakar Toogudeepa is back with a bang. He has managed to narrate a beautiful picture that also has important message for the youngsters of today. Life can be as easy as taking a selfie. But it is important to learn from the experiences of others and understand that life is more than just a party in Goa. It is a kind of film that will pull at your heart strings and also give you beautiful memories to take back home. 

    The acting by the main characters is superb. Prajwal as the rich kid who has a face off with his father to protect his mother, Haripriya as a tomboy who has to understand life after marriage and Prem who has to take a life changing decision are all characters that audience will relate to. All the three have done brilliant jobs. It is Sudharani as the mother of Prajwal that steals the show. She can act with subtle ease. Dhananjaya is in an extended cameo but makes a big impression. There are some beautiful songs too and as said earlier superb locations. Overall it is a perfect wholesome entertainer film with a message. 

    Chitraloka Rating - 4/5

     

  • Meet Hariprriya’s Chota fan! 

    meet haripriya's chota fan

    No doubt that an actor becomes a star only because of his fans, who always shower their unconditional love upon them and stand by them during their difficult times. It is why even the great legendary actor such as namma Annavru Dr. Rajkumar fondly referred to all of his fans as 'Abhimani Devarugalu’.

    Some fans express their love for their favourite actors by having their names tattooed on their body, and many have their photos stuck on their vehicles. That apart, watching their movies on first day first shows, expressing joy by celebrating their actor's birthday in grand style are just a few example. 

    Now, meet a silent fan of Sandalwood’s beautiful actress Hariprriya, who she calls as her ‘chota’ fan.She shares that her special fan who cannot hear would come religiously to meet her during the recent shooting in jog falls.

    “Meet my chota fan. He cannot hear and tries hard to speak by reading our lip movements. But his artistic skills are amazing. He would come everyday to jog falls. His talent and innocence is indescribable, the actress shares adding that love and talent has no boundaries. She has even shared a few photos of his sketches along with her chota fan. 

  • Samhaara To Release On 9th February

    samhara to release on 9th feb

    Chiranjeevi Sarja's new film 'Samhaara', is all set to be released on the 9th of February.

    Chiru plays a role of a blind in the film. This is the first time that Chiranjeevi is playing such a role in his career. The film stars Chiranjeevi Sarja and Chikkanna in prominent roles. Haripriya and Kavya Shetty are the heroines. 

    'Samhaara' is being produced by A Venkatesh and Sundar Kamaraj under the Manu Enterprises banner. Jagadish Wali is the cameraman. Ravi Basrur is the music director.

     

  • Sharan Joins Twitter

    raja rajendra image

    Actor Sharan has become the latest Kannada celebrity to join the micro-blogging site Twitter. Sharan made his debut with a tweet about his upcoming film Raja Rajendra. His twitter handle is @sharanhruday.

    Hari Priya welcomed Sharan to the twitter world and Sharan immediately gathered over a hundred followers. More and more Kannada actors have adopted Twitter instead of Facebook in recent times and there are over a 100 actors from Sandalwood who are active on Twitter now.

    Ramya and Sudeep have the largest number of followers on Twitter with over a three lakh and over two lakh followers respectively. Upendra recently crossed 50,000 followers.

  • Soojidara' Trailer Out'; Movie Releasing On May 10th

    sojodhara trailer out

    The trailer of Haripriya's new film has been finally released on Saturday and the film is all set to release on the 10th of May across Karnataka.

    'Soojidara' is a woman oriented film being directed by theatre personality Mounesh Badiger. This is debut film as a director. The film is produced by Sachindranath Nayak and Abhijith Kotegar.

    The film stars Haripriya, Yash Shetty, Achyuth Kumar, Suchendra Prasad and others in prominent roles. Ashok V Raman is the cinematographer.

     

  • ಅಷ್ಟೊಂದು ಬೋಲ್ಡ್ ಆಗ್ತಾರಾ ಹರಿಪ್ರಿಯಾ..?

    haripriya image

    ಹರಿಪ್ರಿಯಾ ವೆರೈಟಿ ಪಾತ್ರಗಳು ಸಿಕ್ಕರೆ ಹಿಂದು ಮುಂದು ನೋಡದೆ ಯೆಸ್ ಎಂದು ಬಿಡ್ತಾರೆ. ಸಂಹಾರ ಚಿತ್ರದ ನೆಗೆಟಿವ್ ರೋಲ್, ಅಮೃತಮತಿ ಚಿತ್ರದ ಪಾತ್ರಗಳು ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಈಗ ಹರಿಪ್ರಿಯಾ ಮತ್ತೊಂದು ಚಾಲೆಂಜ್ ಸ್ವೀಕರಿಸೋಕೆ ರೆಡಿಯಾಗಿದ್ದಾರೆ. ಅದು ತೆಲುಗಿನ ಎವರು ಚಿತ್ರದ ರೀಮೇಕ್.

    ಎವರು 2019ರಲ್ಲಿ ಬಂದಿದ್ದ ಸಿನಿಮಾ. ಗುರುನಂದನ್ ಹೀರೋ ಆಗಿದ್ದ ಚಿತ್ರಕ್ಕೆ ಮದನ್ ಮೋಹನ್ ನಿರ್ದೇಶಕ. ಆರಂಭದಲ್ಲಿ ಅಮಾಯಕಿಯಂತೆ ಕಾಣಿಸಿಕೊಳ್ಳುವ ನಾಯಕಿ, ಕ್ಲೈಮಾಕ್ಸ್ ಹೊತ್ತಿಗೆ ಪಕ್ಕಾ ವಿಲನ್ ಸ್ಥಾನದಲ್ಲಿ ನಿಂತಿರುತ್ತಾಳೆ. ಇದರ ಮಧ್ಯೆ ಸಿನಿಮಾದಲ್ಲಿ ಬೋಲ್ಡ್ ಇಂಟಿಮೇಟ್ ಸೀನ್‍ಗಳಿವೆ. ಹರಿಪ್ರಿಯಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರೂ, ಅಂತಹ ದೃಶ್ಯಗಳಲ್ಲಿ ನಟಿಸಿಲ್ಲ. ಈಗ ಆ ಚಿತ್ರದ ಕನ್ನಡ ರೀಮೇಕ್‍ನಲ್ಲಿ ಹರಿಪ್ರಿಯಾ ನಟಿಸುತ್ತಿದ್ದು, ಆ ದೃಶ್ಯಗಳಲ್ಲಿ ನಟಿಸುತ್ತಾರಾ..? ಅಷ್ಟೊಂದು ಬೋಲ್ಡ್ ಆಗ್ತಾರಾ ಎಂಬ ಕುತೂಹಲವಂತೂ ಇದೆ.

    ಚಿತ್ರದ ಪ್ರತಿ ಪಾತ್ರಕ್ಕೂ ಮಹತ್ವ ಇದೆ. ನಾಯಕಿಯ ಸುತ್ತವೇ ಸುತ್ತುವ ಚಿತ್ರವಿದು. ನಟನೆಗಂತೂ ಒಳ್ಳೆಯ ಸ್ಕೋಪ್ ಇದೆ. ಹೀಗಾಗಿ ಈ ಚಿತ್ರ ಒಪ್ಪಿಕೊಂಡೆ ಎಂದಿದ್ದಾರೆ ಹರಿಪ್ರಿಯಾ.

  • ಉಪ್ಪಿ ಜೊತೆ ಹರಿಪ್ರಿಯಾ

    upendra and haripriya to pair up for the firt time

    ಉಪೇಂದ್ರ ಅಭಿನಯದ ಚಿತ್ರಗಳ ಸಂಖ್ಯೆ 50ರ ಸಮೀಪ ಇದೆ. ಹರಿಪ್ರಿಯಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೇ 10 ವರ್ಷ ತುಂಬಿದೆ. ಇಷ್ಟು ವರ್ಷಗಳ ಕಾಲ ಈ ಜೋಡಿ ಏಕೆ ಜೊತೆಯಾಗಲಿಲ್ಲ ಎಂಬ ಅಭಿಮಾನಿಗಳ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಉಪೇಂದ್ರ ಮತ್ತು ಹರಿಪ್ರಿಯಾ ಜೊತೆಯಾಗಿ ನಟಿಸುತ್ತಿದ್ದಾರೆ.

    ಗಜ ಖ್ಯಾತಿಯ ಕೆ.ಮಾದೇಶ್ ನಿರ್ದೇಶನದ ಹೊಸ ಚಿತ್ರದಲ್ಲಿ ಉಪೇಂದ್ರ ಮತ್ತು ಹರಿಪ್ರಿಯಾ ಜೋಡಿ. ಚಿತ್ರದಲ್ಲಿ ನನ್ನದು ಮಾಡ್ ಹುಡುಗಿಯ ಪಾತ್ರ ಎನ್ನುವ ಹರಿಪ್ರಿಯಾ ಚಿತ್ರದ ಗುಟ್ಟು ಬಿಟ್ಟುಕೊಡಲ್ಲ. ಇದಕ್ಕೂ ಮೊದಲು ಜಾಹೀರಾತೊಂದರಲ್ಲಿ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದರಷ್ಟೆ. ಸಿನಿಮಾದಲ್ಲಿ ಇದೇ ಮೊದಲು.

    ಸದ್ಯಕ್ಕೆ ಉಪೇಂದ್ರ, ಬುದ್ದಿವಂತ 2, ಕಬ್ಜ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಹರಿಪ್ರಿಯಾ ಕೂಡಾ ಬ್ಯುಸಿ. ಇವೆಲ್ಲ ಕಂಪ್ಲೀಟ್ ಆದ ನಂತರವೇ ಈ ಚಿತ್ರ ಸೆಟ್ಟೇರಲಿದೆ. ಜೂನ್‍ನಲ್ಲಿ ಶೂಟಿಂಗ್ ಶುರುವಾಗಲಿದೆ ಎಂಬ ಸುಳಿವು ಕೊಟ್ಟಿದ್ದಾರೆ ಹರಿಪ್ರಿಯಾ.

  • ಒಂದು ಬೆಲ್‍ಬಾಟಂನಲ್ಲಿ ಐವರು ನಿರ್ದೇಶಕರು..!

    5 directors in one bellbottom movie

    ಬೆಲ್‍ಬಾಟಂ. ಬಿಡುಗಡೆಗೆ ಮುನ್ನವೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಏಕೆಂದರೆ ಚಿತ್ರದ ನಾಯಕ ರಿಷಬ್ ಶೆಟ್ಟಿ. ಅವರು ಕಿರಿಕ್ ಪಾರ್ಟಿಯಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ಡೈರೆಕ್ಟರ್. ಚಿತ್ರದ ನಿರ್ದೇಶಕ ಜಯತೀರ್ಥ. ಒಲವೇ ಮಂದಾರ ಕ್ಲಾಸಿಕ್ ಲವ್‍ಸ್ಟೋರಿ ಕೊಟ್ಟಿದ್ದ ಡೈರೆಕ್ಟರ್. ಸಿನಿಮಾದ ಬಗ್ಗೆ ಕುತೂಹಲ ಹುಟ್ಟೋಕೆ ಈ ಎರಡು ಕಾರಣಗಳು ಸಾಕು.

    ಆದರೆ, ಇಂತಹ ಕುತೂಹಲಗಳ ಗುಚ್ಛಕ್ಕೆ ಇನ್ನೂ ಒಂದು ವಿಷಯ ಸೇರ್ಪಡೆಯಾಗಿದೆ. ಸಿನಿಮಾದಲ್ಲಿ ಇಬ್ಬರಲ್ಲ.. ಒಟ್ಟು ಐವರು ನಿರ್ದೇಶಕರಿದ್ದಾರೆ.

    ಚಿತ್ರಕ್ಕೆ ಕಥೆ ಬರೆದಿರುವುದು ಟಿ.ಕೆ. ದಯಾನಂದ್. ಅವರೂ ನಿರ್ದೇಶಕರೇ. ಇನ್ನು ಚಿತ್ರದ ಪ್ರಮುಖ ಪಾತ್ರ ಮೋಡಿ ನಂಜಪ್ಪನಾಗಿ ನಟಿಸುತ್ತಿರುವುದು ಶಿವಮಣಿ. ಇವರ ಬಗ್ಗೆ ಹೇಳುವ ಅವಶ್ಯಕತೆಯೇ ಇಲ್ಲ. ಕನ್ನಡ ಚಿತ್ರರಂಗದ ಟ್ರೆಂಡ್‍ಸೆಟ್ಟರ್ ನಿರ್ದೇಶಕರಲ್ಲಿ ಒಬ್ಬರು ಶಿವಮಣಿ.

    ಇನ್ನು ಚಿತ್ರದಲ್ಲಿ ನಿವೃತ್ತ ದರೋಡೆಕಾರನ ಪಾತ್ರದಲ್ಲಿ ನಟಿಸುತ್ತಿರುವುದು ಯೋಗರಾಜ್ ಭಟ್. ಸದ್ಯಕ್ಕೆ ಕನ್ನಡ ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್.

    ಇವರೆಲ್ಲರ ಸಮಾಗಮ ಬೆಲ್‍ಬಾಟಮ್‍ನಲ್ಲಿದೆ.  80ರ ದಶಕದ ಈ ಕಥೆಯಲ್ಲಿ ರಿಷಬ್ ಶೆಟ್ಟಿ ಹೀರೋ ಆಗಿದ್ದರೆ, ಹರಿಪ್ರಿಯಾ ನಾಯಕಿ. ಐವರು ಡೈರೆಕ್ಟರುಗಳು. ಕುತೂಹಲವೋ.. ಕುತೂಹಲ.

  • ಕಥೆಯೇ ಹೀರೋ.. ಹೀರೋ ಅಲ್ಲ - ಪ್ರೇಮ್

    prem talks about life jothe ondu selfie

    ಹೀರೋ ನೋಡಿಕೊಂಡು ಸಿನಿಮಾಗೆ ಬರೋವ್ರ ಕಾಲ ಮುಗಿದು ಹೋಗಿದೆ. ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ನಾವೂ ಬದಲಾಗಬೇಢಕು. ಅವರೇನೋ ಹೊಸದನ್ನು ಕೇಳುತ್ತಿದ್ದಾರೆ. ಬಯಸುತ್ತಿದ್ಧಾರೆ. ಅವರ ಆಲೋಚನೆಗೆ ತಕ್ಕಂತೆ ನಾವು ಹೊಸತನ ಕೊಡಬೇಕು. ಕಥೆ ಚೆನ್ನಾಗಿರಬೇಕು. ನಾವು ಅದನ್ನು ಹೇಳುವ ಶೈಲಿ ಅವನಿಗೆ ಕುತೂಹಲ ಹುಟ್ಟಿಸಬೇಕು. ಅದು ಅವನದ್ದೇ ಅಥವಾ ಅವನ ಸುತ್ತಮುತ್ತಲಿನ ಪರಿಸರದ ಕಥೆಯಾಗಿರಬೇಕು. ಆಗ ಪ್ರೇಕ್ಷಕ ಸಿನಿಮಾ ಜೊತೆ ಕನೆಕ್ಟ್ ಆಗುತ್ತಾನೆ.

    ಈ ಮಾತು ಹೇಳಿರೋದು ನೆನಪಿರಲಿ ಪ್ರೇಮ್. ಹಾಗೆ ನೋಡಿದ್ರೆ, ಪ್ರೇಮ್ ಮೊದಲಿನಿಂದಲೂ ಸಿದ್ಧಸೂತ್ರದ ಚೌಕಟ್ಟನ್ನು ಮುರಿದೇ ಸಿನಿಮಾ ಮಾಡಿ ಗೆದ್ದವರು. ಅವರ ಹಿಟ್ ಚಿತ್ರಗಳಾದ ನೆನಪಿರಲಿ, ಜೊತೆ ಜೊತೆಯಲಿ, ಚಾರ್‍ಮಿನಾರ್, ಚೌಕ.. ಹೀಗೆ ಹಿಟ್ ಸಿನಿಮಾಗಳ್ಯಾವುವೂ ಸಿದ್ಧಸೂತ್ರದ ಒಳಗೆ ಇದ್ದ ಸಿನಿಮಾಗಳಲ್ಲ. ಈಗ.. ಮತ್ತೊಮ್ಮೆ ಪ್ರೇಮ್ ಮತ್ತು ದಿನಕರ್ ತೂಗುದೀಪ್ ಜೊತೆಯಾಗಿದ್ದಾರೆ. ಲೈಫ್ ಜೊತೆ ಒಂದ್ ಸೆಲ್ಫಿ ತೆಗೆದುಕೊಂಡಿದ್ದಾರೆ.

    ದಿನಕರ್ ಜೊತೆ ಇದು ನನ್ನ 2ನೇ ಸಿನಿಮಾ. ಅವರು ಎಲ್ಲವನ್ನೂ ಪಕ್ಕಾ ಪ್ಲಾನ್ ಮಾಡಿಕೊಂಡೇ ಮಾಡ್ತಾರೆ. ಇದು ನಮ್ಮ ನಿಮ್ಮೆಲ್ಲರ ನಡುವಿನ ಬದುಕಿನ ಕಥೆ. ಖಂಡಿತಾ ನಿಮಗೆ ಇಷ್ಟವಾಗುತ್ತೆ ಅಂತಾರೆ ಪ್ರೇಮ್.

    ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಜೋಡಿಯಾಗಿ ನಟಿಸಿರುವ ಸಿನಿಮಾ, ಬಿಡುಗಡೆಗೆ ಸಿದ್ಧವಾಗಿದೆ. 

     

  • ಕನಕ ಚಿತ್ರದ ರಚಿತಾ ರಾಮ್ ಸ್ಥಾನಕ್ಕೆ ಹರಿಪ್ರಿಯಾ

    haripriya in kanaka

    ದುನಿಯಾ ವಿಜಯ್ ಅಭಿನಯಿಸುತ್ತಿರುವ ಆರ್. ಚಂದ್ರು ನಿರ್ದೇಶನದ ಕನಕ ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿ ಬಂದಿದ್ದಾರೆ.

    ಇದೇ ಪಾತ್ರಕ್ಕೆ ಈ ಹಿಂದೆ ರಚಿತಾ ರಾಮ್ ಆಯ್ಕೆಯಾಗಿದ್ದರು. ಆದರೆ, ಡೇಟ್ ಸಮಸ್ಯೆಯಿಂದಾಗಿ ಹಿಂದೆ ಸರಿದಿದ್ದರು.'ಕನಕ' ಚಿತ್ರದಲ್ಲಿ ವಿಜಯ್ ಗೆ ಇಬ್ಬರು ನಾಯಕಿಯರು. ಚಿತ್ರದ ಮತ್ತೊಬ್ಬ ನಾಯಕಿ ಮಾನ್ವಿತಾ ಹರೀಶ್. ಚಿತ್ರದ ಬಹುತೇಕ ಭಾಗದ ಶೂಟಿಂಗ್ ಮುಗಿದಿದ್ದು, ಹರಿಪ್ರಿಯಾ-ದುನಿಯಾ ವಿಜಯ್ಪೋರ್ಷನ್ ಮಾತ್ರ ಬಾಕಿ ಇದೆಯಂತೆ

    .ಈ ಮೊದಲು ದುನಿಯಾ ವಿಜಯ್ ಅಭಿನಯದ ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದಿಂದಲೂ ರಚಿತಾರಾಮ್ ಮೊದಲು ಒಪ್ಪಿಕೊಂಡು ನಂತರ ಹಿಂದೆ ಸರಿದಿದ್ದರು. ಆ ಜಾಗಕ್ಕೆ ಶ್ರದ್ಧಾಶ್ರೀನಾಥ್ ಬಂದಿದ್ದಾರೆ. ಅಲ್ಲಿಗೆ ದುನಿಯಾ ವಿಜಯ್ ಅಭಿನಯದ ಎರಡೂ ಚಿತ್ರಗಳಲ್ಲಿನರಚಿತಾ ರಾಮ್ ಪಾತ್ರಕ್ಕೆ ನಾಯಕಿಯರು ಸಿಕ್ಕಂತಾಗಿದೆ.

    Related Articles :-

    Haripriya Is Vijay's Heroine In Kanaka

    K P Nanjundi To Act In Kanaka

    Rachita Ram Is Vijay's Heroine In Kanaka

    Manvita Is Vijay's Heroine In Kanaka

    First Look Of Kanaka Released

    Kanaka Shooting Starts From Today

     

  • ಕನ್ನಡ್ ಗೊತ್ತಿಲ್ಲ ಚಿತ್ರಕ್ಕೆ ಕನ್ನಡವೇ ನಾಯಕ.. ಹರಿಪ್ರಿಯಾ ನಾಯಕಿ..!

    haripriya heroine for kannada gotilla

    ಹರಿಪ್ರಿಯಾ ಮತ್ತೊಮ್ಮೆ ನಾಯಕಿ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಡಾಟರ್ ಆಫ್ ಪಾರ್ವತಮ್ಮ ನಂತರ ಹರಿಪ್ರಿಯಾ ಮತ್ತೊಮ್ಮೆ ಹೀರೋಯಿನ್ ಓರಿಯಂಟೆಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ್ ಗೊತ್ತಿಲ್ಲ.. ಈ ಚಿತ್ರದಲ್ಲಿ ಅವರದ್ದು ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರ. ಆದರೆ, ಇದು ನಾಯಕಿ ಪ್ರಧಾನ ಚಿತ್ರವಲ್ಲ ಎನ್ನುತ್ತಾರೆ ನಿರ್ದೇಶಕ ಮಯೂರ ರಾಘವೇಂದ್ರ.

    ಈ ಚಿತ್ರಕ್ಕೆ ಕನ್ನಡವೇ ನಾಯಕ, ಹರಿಪ್ರಿಯಾ ನಾಯಕಿ ಎನ್ನುವ ಮೂಲಕ ವಿಚಿತ್ರ ಕುತೂಹಲ ಹುಟ್ಟಿಸಿರುವ ಮಯೂರ ರಾಘವೇಂದ್ರ, ಹರಿಪ್ರಿಯಾಗೆ ಶೃತಿ ಅನ್ನೋ ಪಾತ್ರ ಕೊಟ್ಟಿದ್ದಾರೆ. ಕೈಗೊಂದು ಗನ್ನನ್ನೂ ಕೊಟ್ಟಿದ್ದಾರೆ.

    ಅಂದಹಾಗೆ ಈ ಚಿತ್ರದಲ್ಲಿ ನಟಿ ಸುಧಾರಾಣಿ ಪ್ರಮುಖ ಪಾತ್ರದಲ್ಲಿದ್ದಾರೆ. 

  • ಕುರುಕ್ಷೇತ್ರದಲ್ಲಿ ಹರಿಪ್ರಿಯ ದ್ರೌಪದಿಯಲ್ಲ..!

    haripriya in kurukshetra

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಕುರುಕ್ಷೇತ್ರ ಸಿನಿಮಾಕ್ಕೆ ಇಬ್ಬರು ನಾಯಕಿಯರ ಆಗಮನವಾಗಿದೆ..ಇದು ದರ್ಶನ್ಗೆ 50 ನೇ ಸಿನಿಮಾ, ಅದೂ ಮಹಾಭಾರತದ ಗದಾಯುದ್ಧ ದ ಕಥೆಯಿರುವ ಚಿತ್ರ. ದರ್ಶನ್ ದುರ್ಯೋಧನನಾಗಿದ್ದಾರೆ.

    ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರು ಹರಿಪ್ರಿಯ. ದರ್ಶನ್ ಜೊತೆಗೆ ಇದು ಹರಿಪ್ರಿಯಾಗೆ ಮೊತ್ತ ಮೊದಲ ಚಿತ್ರ. ಆದರೆ, ಚಿತ್ರದ ಪ್ರಮುಖ ಪಾತ್ರವಾದ ದ್ರೌಪದಿ ಪಾತ್ರ ಅಲ್ಲವಂತೆ. ನರ್ತಕಿಯ ಪಾತ್ರವಂತೆ. ಆದರೆ, ಪಾತ್ರದಲ್ಲಿ ಅಭಿನಯಕ್ಕೆ ಒಳ್ಳೆಯ ಅವಕಾಶ ಇರುವ ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ ಹರಿಪ್ರಿಯ. ಇನ್ನು  ಕುರುಕ್ಷೇತ್ರ ಸಿನಿಮಾಗೆ ಸಿಕ್ಕ ಮತ್ತೊಬ್ಬ ನಟಿ ರೆಜಿನಾ..ತೆಲುಗು ನಟಿಯಾದ್ರೂ ಕನ್ನಡದ ಸುರ್ಯಕಾಂತಿ ಸಿನಿಮಾದಲ್ಲಿ  ನಟಿಸಿದ ಅನುಭವವಿದೆ.

    ಬಹುಶಃ ರೆಜಿನಾ ದರ್ಶನ್ಗೆ ಜೋಡಿಯಾಗಬಹುದು. ರೆಜಿನಾ ಭಾನುಮತಿ ಪಾತ್ರ ವಹಿಸಲಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕ ನಾಗಣ್ಣ ಪಾತ್ರಗಳಿಗೆ ಕಲಾವಿದರನ್ನು ಅಳೆದೂ ತೂಗಿ ಆಯ್ಕೆ ಮಾಡುತ್ತಿದ್ದಾರೆ. ಜುಲೈ 30ಕ್ಕೆ ಚಿತ್ರದ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ.

    ಆದರೆ, ದ್ರೌಪದಿ ಇನ್ನೂ ಸಿಕ್ಕಿಲ್ಲ.

    Related Articles :-

    Haripriya Confirmed For Kurukshetra

    ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ 

    Vivek Oberoi in Kurukshetra Say Reports

    Kurukshetra To Be Launched On July 23rd

  • ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿಂಹಪ್ರಿಯಾ ಲವ್ ಸ್ಟೋರಿ

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿಂಹಪ್ರಿಯಾ ಲವ್ ಸ್ಟೋರಿ

    ನಮ್ಮಿಬ್ಬರ ಪ್ರೀತಿ ಶುರುವಾಗಿದ್ದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನೋಡಿದ ಹರಿಪ್ರಿಯಾ ಅವರಿಗೆ ವಸಿಷ್ಠ ಸಿಂಹ ಅವರ ಪಾತ್ರ ಇಷ್ಟವಾಯಿತು. ನಟನೆ ಇಷ್ಟವಾಯಿತು. ವಿಷ್ ಮಾಡಿದ್ರು. ಫೋನ್ ಮಾಡಿದ್ರು. ಮತ್ತೆ ಮತ್ತೆ ಫೋನ್ ಮಾಡ್ತಾ ಹೋದ್ರು. ಮಾತನಾಡ್ತಾ ಹೋದ್ರು. ಮಧ್ಯೆ ಕೊರೊನಾ ಬಂತು. ಸಿಕ್ಕಾಪಟ್ಟೆ ಬಿಡುವು ಸಿಕ್ಕಿತು. ಇಷ್ಟು ಸುದೀರ್ಘ ಮಾತುಕತೆಯ ಮಧ್ಯೆ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದ್ದು ಹೇಗೆ..? ಇಬ್ಬರಿಗೂ ಗೊತ್ತಿಲ್ಲ.

    ಜನವರಿ 26ರಂದು ಮೈಸೂರಿನಲ್ಲಿ ಮದುವೆಯಾಗುತ್ತಿರುವ ಹಿನ್ನೆಲೆ, ಸಿಂಹ ಪ್ರಿಯಾ ಜೋಡಿ ಪ್ರೆಸ್ ಮೀಟ್ ಕರೆದಿತ್ತು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಸಿಷ್ಠ ಸಿಂಹ ನಾನು ನಾಯಿಮರಿ ಕೊಟ್ಟು ಪಟಾಯಿಸಿಕೊಳ್ಳಲಿಲ್ಲ ಎಂಬ ಯೂಟ್ಯೂಬರ್ಸ್ ಕಾಲ್ಪನಿಕ ವರದಿಗಳನ್ನು ಚೇಡಿಸುತ್ತಲೇ ಪ್ರೀತಿ ಆದ ಮೇಲೆ ನಾಯಿಮರಿ ಕೊಟ್ಟೆ ಎಂದರು. ನನಗೆ ಮೈಸೂರು ಇಷ್ಟ. ಮೈಸೂರಿನ ಹುಡುಗ. ಹೀಗಾಗಿ ಮೈಸೂರಿನಲ್ಲಿಯೇ ಮದುವೆಯಾಗುತ್ತಿದ್ದೇವೆ. ಬೆಂಗಳೂರಿನಲ್ಲಿ ಆರತಕ್ಷತೆ ಇದೆ ಎಂದರು. ಹರಿಪ್ರಿಯಾ ಅವರಿಗೆ ವಸಿಷ್ಠ ಸಿಂಹ ಫ್ಯಾನ್ ಅಂತೆ. ಮನಸುಗಳ ಮಾತು ಮಧುರ ನೋಡಿ ನಟನೆಯನ್ನು ಇಷ್ಟಪಟ್ಟೆ.  ಉಗ್ರಂ ಚಿತ್ರ ನೋಡಿ ಅವರ ಅಭಿಮಾನಿಯಾದೆ. ಸೂಜಿದಾರ ಸಿನಿಮಾ ನೋಡಿ ಕಳೆದೇ ಹೋಗ್ಬಿಟ್ಟೆ. ಅವರ ಟ್ಯಾಲೆಂಟ್ ಇಷ್ಟವಾಯಿತು. ನನ್ನ ಕಷ್ಟದ ದಿನಗಳಲ್ಲಿ ಅವರು ನನ್ನ ಜೊತೆಗಿದ್ದರು. ನಮ್ಮಿಬ್ಬರದೂ ಎರಡೂವರೆಮೂರು ವರ್ಷದ ಪ್ರೀತಿ ಎನ್ನುವ ವಸಿಷ್ಠ ಸಿಂಹ ಮೊದಲು ಪ್ರಪೋಸ್ ಮಾಡಿದ್ದು ನಾನೇ ಎಂದರು.

    ನಮ್ಮಿಬ್ಬರ ಪ್ರೀತಿ ಹೆಚ್ಚಾಗಿದ್ದು ಲಾಕ್ ಡೌನ್ ಕಾಲದಲ್ಲಿ. ಸಿಂಹ ನನಗೆ ಪ್ರಪೋಸ್ ಮಾಡಿದ್ದು ಅಪ್ಪ ತೀರಿ ಹೋದ ದಿನ. ನನಗೂ ಹೇಳಿಕೊಳ್ಳೋ ಆಸೆ ಇತ್ತು. ಮದುವೆ ಆದ ಮೇಲೆ  ಸಿನಿಮಾವನ್ನೇನೂ ಬಿಡಲ್ಲ. ಆದರೆ ಬ್ರೇಕ್ ತೆಗೆದುಕೊಳ್ತೇನೆ. ಮದುವೆ, ಮ್ಯಾರೇಜ್ ಲೈಫ್‍ನ್ನ ಎಂಜಾಯ್ ಮಾಡಬೇಕು. ಆನಂತರ ಒಳ್ಳೆಯ ಕಥೆ, ಪಾತ್ರ ಸಿಕ್ಕರೆ ನಟಿಸುತ್ತೇನೆ ಎಂದರು ಹರಿಪ್ರಿಯಾ. ಜನವರಿ 26ಕ್ಕೆ ಮದುವೆ, ಮೈಸೂರಿನಲ್ಲಿ. ಜನವರಿ 28ಕ್ಕೆ ಆರತಕ್ಷತೆ, ಬೆಂಗಳೂರಿನಲ್ಲಿ.

  • ಜಪಾನ್‍ಗೆ ಹೊರಟ ಬೆಲ್‍ಬಾಟಂ

    bell bottom goes to japan

    ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಜಯತೀರ್ಥ ನಿರ್ದೇಶನದ ಬೆಲ್‍ಬಾಟಂ ಸಿನಿಮಾ, ಜಪಾನ್‍ಗೆ ಹೊರಟು ನಿಂತಿದೆ. ಕನ್ನಡದಲ್ಲಿ ಈಗಾಗಲೇ ಶತದಿನೋತ್ಸವ ಆಚರಿಸಿರುವ ಸಿನಿಮಾ ಇದು. ಸಾಮಾನ್ಯವಾಗಿ ಜಪಾನ್‍ನಲ್ಲಿ ತಮಿಳು ಚಿತ್ರಗಳಿಗೆ, ಅದರಲ್ಲೂ ರಜನಿ ಚಿತ್ರಗಳಿಗೆ ಡಿಮ್ಯಾಂಡ್ ಇದೆ. ಅಂಥಾದ್ದರಲ್ಲಿ ಈಗ ಕನ್ನಡ ಚಿತ್ರಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಬೆಲ್‍ಬಾಟಂ ಟೀಂ ಥ್ರಿಲ್ಲಾಗೋದು ಸಹಜವೇ ಬಿಡಿ.

    ಚಿತ್ರವನ್ನು ಜಪಾನಿ ಭಾಷೆಗೆ ಡಬ್ ಮಾಡುವುದೋ ಅಥವಾ ಜಪಾನ್ ಸಬ್‍ಟೈಟಲ್ ಹಾಕುವುದೋ ಎಂಬ ಬಗ್ಗೆ ಚಿತ್ರತಂಡ ಸ್ವಲ್ಪ ಗೊಂದಲದಲ್ಲಿದೆ. ಚರ್ಚೆ ನಡೆಯುತ್ತಿದೆ. ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರ ಬೆಲ್‍ಬಾಟಂ ಟೋಕಿಯೋದಲ್ಲಿ ರಿಲೀಸ್ ಆಗಲಿದೆ.

  • ಡಬ್ಬಲ್ ಮೀನಿಂಗು.. ಫುಲ್ ಫೀಲಿಂಗು.. ಪೆಟ್ರೋಮ್ಯಾಕ್ಸ್ ಮಾಸ್ & ಕ್ಲಾಸ್

    ಡಬ್ಬಲ್ ಮೀನಿಂಗು.. ಫುಲ್ ಫೀಲಿಂಗು.. ಪೆಟ್ರೋಮ್ಯಾಕ್ಸ್ ಮಾಸ್ & ಕ್ಲಾಸ್

    ನಾಲ್ವರು ಅನಾಥರು.. ಅನಾಥರಾಗಿ ಹುಟ್ಟಿದರೂ ಅನಾಥರಾಗಿ ಸಾಯಬಾರದು ಎಂದು ಹೊರಡುತ್ತಾರೆ. ಅವರೆಲ್ಲರೂ ಒಂದು ಮನೆ ಮಾಡಿಕೊಂಡು ಒಟ್ಟಿಗೇ ಬದುಕುತ್ತಾ ಚೆನ್ನಾಗಿರುತ್ತಾರಾ ಅನ್ನೋದೇ ಚಿತ್ರದ ಕಥೆ.

    ನಮ್ ಸಿನಿಮಾದಲ್ಲಿ ಇಷ್ಟೊಂದ್ ಎಮೊಷನ್ ಇರೋವಾಗ ನಮ್ ಡೈರೆಕ್ಟರ್ ಯಾಕೆ ಬರೀ ಡಬಲ್ ಮೀನಿಂಗ್ ಡೈಲಾಗ್ ಇಟ್ಟವ್ರೆ ಅನ್ನೋ ಡೈಲಾಗ್‍ನ್ನ ಟೀಸರಲ್ಲೇ ಬಿಟ್ಟಿದ್ದರು ವಿಜಯ್ ಪ್ರಸಾದ್. ಆದರೆ.. ವೈರಲ್ ಆಗಿದ್ದು ಮಾತ್ರ.. ಬೆಡ್ ಮೇಲೆ ಅರೆಬೆತ್ತಲಾಗಿ ಮಲಗಿ ಹರಿಪ್ರಿಯಾ-ಸತೀಶ್ ಪರಸ್ಪರ ಹೇಳಿ ಕೇಳಿಕೊಂಡಿದ್ದ ಪಿಚ್ಚು.. ವಿಕೆಟ್ಟು.. ಕವರ್ ಡ್ರೈವು.. ಡೈಲಾಗುಗಳೇ. ಆಗ ಸಿನಿಮಾ ನೋಡಿ..

    ಅದು ಡಬಲ್ ಮೀನಿಂಗ್ ಅಲ್ಲ. ಚೇಷ್ಟೆ ಎಂದಿದ್ದ ವಿಜಯ್ ಪ್ರಸಾದ್.. ಎಂದಿನಂತೆ ಮತ್ತೊಂದು ಸೆಂಟಿಮೆಂಟ್ ಕಥೆಯನ್ನೇ ಇಟ್ಟಿದ್ದಾರೆ. ಡಬಲ್ ಮೀನಿಂಗ್ ಡೈಲಾಗುಗಳ ಜೊತೆ ನಗಿಸುತ್ತಲೇ ಗಾಢವಾದ ವಿಷಾದ ಆವರಿಸಿಕೊಳ್ಳುವಂತೆ ಮಾಡುವುದು ಡೈರೆಕ್ಟರ್ ಸ್ಟೈಲ್. ಅಲ್ಲಿ ಪೆಟ್ರೋಮ್ಯಾಕ್ಸ್ ತಂಡ ಗೆದ್ದಿದೆ. ನಿರ್ಮಾಪಕ ಕೆ.ಎಂ.ಸುಧೀಂದ್ರ ಅವರು ಖುಷಿಯಾಗುವಂತೆ ಓಪನಿಂಗ್ ಸಿಕ್ಕಿದೆ. ಪೆಟ್ರೋಮ್ಯಾಕ್ಸ್ ಬದುಕು ಮತ್ತು ಬೆಳಕಿನ ಕಥೆ.

  • ಡಾಟರ್ ಆಫ್ ಪಾರ್ವತಮ್ಮನಿಗೆ ಡಾಲಿ ಹಾಡು

    dolly dhananjay turns lyricist with daughter of parvathamma

    ಹರಿಪ್ರಿಯಾ ಡಾಟರ್ ಆಗಿ, ಸುಮಲತಾ ಪಾರ್ವತಮ್ಮನಾಗಿ ನಟಿಸಿರುವ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಹೀರೋಯಿನ್ ಓರಿಯಂಟೆಡ್ ಚಿತ್ರದಲ್ಲಿ ಡಾಲಿ ಎಂಟ್ರಿಯಾಗಿರೋದೇ ಗಮ್ಮತ್ತಿನ ವಿಷಯ. ಹಾಗಂತ, ಡಾಲಿ ಧನಂಜಯ್ ಇಲ್ಲಿ ಹೀರೋ ಆಗಿ ಆಗಲೀ, ವಿಲನ್ ಆಗಿಯಾಗಲೀ ನಟಿಸಿಲ್ಲ. ಬದಲಿಗೆ ಹಾಡು ಬರೆದಿದ್ದಾರೆ. ರಂಗಭೂಮಿಯಿಂದ ಬಂದಿರೋ ಧನಂಜಯ್‍ಗೆ ಸಾಹಿತ್ಯವೂ ಗೊತ್ತು. ಹೀಗಾಗಿಯೇ ಒಂದೊಳ್ಳೆ ಹಾಡಿನ ಕಿಕ್ಕು, ಡಾಟರ್ ಆಫ್ ಪಾರ್ವತಮ್ಮನಿಗೆ ಸಿಕ್ಕಿದೆ.

    ಜೀವಕ್ಕಿಲ್ಲಿ ಜೀವ ಬೇಟೆ..ಪಾಪಿ ಯಾರೋ ಇಲ್ಲಿ..ಕೊಂದು ತಿನ್ನೋ ರೂಲೇ ಉಂಟು..ಪಾಪ ಯಾವುದಿಲ್ಲಿ.

    ಎಂಬ ಈ ಗೀತೆ ಮೈಮನಗಳಲ್ಲಿ ವಿಚಿತ್ರ ತಳಮಳ ಸೃಷ್ಟಿಸುವ ಶಕ್ತಿ ಹೊಂದಿದೆ. ಕಾರ್ತಿಕ್ ಚೆನ್ನೋಜಿ ರಾವ್, ನಾರಾಯಣ್ ಶರ್ಮ, ಮಿಥುನ್ ಮುಕುಂದನ್ ಹಾಡಿರೋ ಹಾಡಿಗೆ ಮ್ಯೂಸಿಕ್ಕು ಮುಕುಂದನ್ ಅವರದ್ದೇ. ಹಾಡನ್ನು ರಿಲೀಸ್ ಮಾಡಿರುವುದು ರೋರಿಂಗ್ ಸ್ಟಾರ್ ಶ್ರೀಮುರಳಿ.

  • ಡೈರೆಕ್ಟರ್ ರಿಷಬ್ ಶೆಟ್ಟಿ ಹೀರೋ ಆಗಿದ್ದು ಹೀಗೆ

    story behind how director rishab shetty turned nto an actor

    ರಿಷಬ್ ಶೆಟ್ಟಿ ಎಂದರೆ ಥಟ್ಟನೆ ಕಣ್ಮುಂದೆ ಬರೋದು ಕಿರಿಕ್ ಪಾರ್ಟಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ. ಎರಡು ಸೂಪರ್ ಹಿಟ್ ಚಿತ್ರ ಕೊಟ್ಟಿರುವ ರಿಷಬ್ ಶೆಟ್ಟಿ, ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ತುಗ್ಲಕ್ ಚಿತ್ರದಲ್ಲಿಯೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ರಿಷಬ್ ಶೆಟ್ಟಿ, ಈಗ ಪೂರ್ಣ ಪ್ರಮಾಣದ ಹೀರೋ. 

    ಹಾಗೆ ನೊಡಿದರೆ ರಿಷಬ್, ಹೀರೋ ಆಗಲೆಂದೇ ಚಿತ್ರರಂಗಕ್ಕೆ ಬಂದು ಡೈರೆಕ್ಟರ್ ಆದವರು. ಈಗ ಬೆಲ್‍ಬಾಟಂ ಚಿತ್ರದಲ್ಲಿ ಡಿಟೆಕ್ಟಿವ್ ಸುಧಾಕರ್ ಆಗಿದ್ದಾರೆ. ಹರಿಪ್ರಿಯಾ ರಿಷಬ್ ಶೆಟ್ಟಿಗೆ ನಾಯಕಿ. ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ಯೋಗರಾಜ್ ಭಟ್, ಶಿವಮಣಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಟಿ.ಕೆ.ದಯಾನಂದ್ ಅವರ ಕಥೆ ಚಿತ್ರದಲ್ಲಿದೆ. 

    ಒಟ್ಟಿನಲ್ಲಿ ಗೆಳೆಯರೆಲ್ಲ ಒಂದಾಗಿ ಮಾಡಿರುವ ಸಿನಿಮಾ ಬೆಲ್‍ಬಾಟಂ, ಇದೇ ವಾರ ತೆರೆಗೆ ಬರುತ್ತಿದೆ.