` ananth nag - chitraloka.com | Kannada Movie News, Reviews | Image

ananth nag

  • Prakash Rai To Remake Godhi Banna Sadharana Maikattu?

    godi banna sadharan maikattu movie image

    Prakash Rai has been consistently directing some remakes in Kannada in the last few years. Now, if sources are to be believed then for the first time, he is planning to remake a Kannada film in other languages and the film is none other than Prakash Rai to remake Godhi Banna Sadharana Maikattu.

    Recently Prakash Rai saw Prakash Rai to remake Godhi Banna Sadharana Maikattu and is appreciating the movie in full length. Sources say, he seems to be interested in remaking the film and might also remake the film in Tamil and other languages. Meanwhile, the film is all set to release in various countries of Europe including Germany, Netherlands and others from the 01st of July.

    Godi Banna Sadharana Maikattu Images - Click

     

     

  • SHPSK Making Video Gets Applause

    shpshk making video

    Rishab Shetty has released a making video of his new film Sarkari Hi. Pra. Shaale, Kasaragodu, that stars Anant Nag and himself. The three-minute video has kicked up  excitement about the film further. The film is being made under the Rishab Shetty Films banner. Earlier a song of the film 'Dadda Song' was released to much acclaim. 

    The making video shows the shooting on location in outdoors as well as indoors in a school. Most of the actors in the film are covered in the making video. The actors and technicians of the film are introduced. The behind the scene technicians of the film including a candid appearance by Raj B Shetty who has written the dialogues can also be seen.

  • Weekend Review: Chitraloka Rating 3.5/ 5*

    weekend review

    While there have been quite a few movies made around techies, but this one by Sringeri Suresh is an insight into their volatile lifestyles and  weekend getaway plan to beat the stress. Also, the epicenter here, is what happens when some of them turn anti-social elements after losing their well-paying jobs.

    A majority of software engineers who lead a busy life between Monday and Friday, working hard to meet deadlines, are known for their weekend masti. Living life like there is no tomorrow is the mantra for many especially the younger lots from the tech profession, which kick starts as early as Friday evening lasting upto Sunday night. The first part of the 'Weekend' is heavily based on the same 'masti' phenomena, but the post interval show is what keeps the audience on the edge of their seats.

    Amongst a group of software engineers, the protagonist Ajay, portrayed by Milind leads a value-based life, who lives with his grandfather Anantharama played the veteran Anant Nag. While everything goes well for Ajay with his work and peaceful life, the twist in the tale is when his girlfriend Anupama gets abducted.

    Despite techies being the prime focus, the director presents a larger picture on life. It is Anantharam's philosophy for a happy life sounds sensible for all those who are running a busy life in an office set up. The biggest take away from Weekend, is the glimmer of hope for youths who are often disappointed with unemployment crisis. The message is loud and clear that instead of turning themselves into anti-social elements, there are numerous ways to lead a happier life. Make sure you watch 'Weekend' this weekend, for some lessons on life.

  • ಅಂದು ಶಂಕರ್`ಗೆ ಅನಂತ್.. ಈಗ ಚಿರುಗೆ ಧ್ರುವ..

    dhruva to dub for chiru's fllm

    ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ, ಅವರ ಕುಟುಂಬವನ್ನಷ್ಟೇ ಅಲ್ಲ, ಚಿತ್ರೋದ್ಯಮಿಗಳನ್ನೂ ಕಂಗೆಡಿಸಿರುವುದು ಸತ್ಯ. ಏಕೆಂದರೆ, ಚಿರು ಕೈತುಂಬಾ ಚಿತ್ರಗಳನ್ನಿಟ್ಟುಕೊಂಡಿದ್ದರು. ಕೆಲವು ಚಿತ್ರಗಳು ಚಿತ್ರೀಕರಣ ಮುಗಿಸಿದ್ದರೆ, ಇನ್ನೂ ಕೆಲವು ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದವು. ಸಮಸ್ಯೆಯಾಗಿರುವುದು ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‍ನಲ್ಲಿರೋ ಚಿತ್ರಗಳಿಗೆ.

    ರಾಮ್‍ನಾರಾಯಣ್ ನಿರ್ದೇಶನದ ರಾಜಮಾರ್ತಾಂಡ ಚಿತ್ರದ ಚಿತ್ರೀಕರಣ ಮುಗಿದು ಎಡಿಟಿಂಗ್ ಟೇಬಲ್ ಮೇಲಿತ್ತು. ಡಬ್ಬಿಂಗ್ ಬಾಕಿಯಿತ್ತು. ಈಗ ಚಿರು ಇಲ್ಲ. ಹೀಗಾಗಿ ಅಣ್ಣನ ಪಾತ್ರಕ್ಕೆ ಸ್ವತಃ ಡಬ್ಬಿಂಗ್ ಮಾಡಲು ಒಪ್ಪಿಕೊಂಡಿದ್ದಾರೆ ಧ್ರುವ ಸರ್ಜಾ.

    ಈ ಹಿಂದೆ ಶಂಕರ್ ನಾಗ್ ಅಕಾಲಿಕ ಸಾವಿಗೀಡಾದಾಗಲೂ ಹೀಗೆಯೇ ಆಗಿತ್ತು. ಆಗ ಶಂಕರ್ ಅಭಿನಯಿಸಿದ್ದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದ ನಿಗೂಢ ರಹಸ್ಯ ಮತ್ತು ಸುಂದರ ಕಾಂಡ ಚಿತ್ರಗಳನ್ನು ಅಣ್ಣ ಅನಂತ್ ನಾಗ್ ಮುಗಿಸಿಕೊಟ್ಟಿದ್ದರು. ಈಗ ಧ್ರುವ ಸರ್ಜಾ.

    ಅತ್ತ ತಮ್ಮ ಅಭಿನಯದ ಪೊಗರು ಚಿತ್ರದ ಬ್ಯುಸಿ ಶೆಡ್ಯೂಲ್ ನಡುವೆಯೇ ಅಣ್ಣನ ಚಿತ್ರಗಳ ಡಬ್ಬಿಂಗ್ ಮುಗಿಸಿಕೊಡಲು ಒಪ್ಪಿಕೊಂಡಿದ್ದಾರೆ ಧ್ರುವ.

  • ಅನಂತನಾಗ್ @75 : ಸೇನೆ, ವಾಯುಪಡೆಗೆ ರಿಜೆಕ್ಟ್ ಮಾಡಿತ್ತು

    ಅನಂತನಾಗ್ @75 : ಸೇನೆ, ವಾಯುಪಡೆಗೆ ರಿಜೆಕ್ಟ್ ಮಾಡಿತ್ತು

    ಅನಂತನಾಗ್ ಅವರಿಗೆ 75 ವರ್ಷ. ಚಿತ್ರರಂಗದಲ್ಲಿಯೇ 49 ವರ್ಷ ಕಳೆದಿರುವ ಅನಂತನಾಗ್ ಅವರ ವೃತ್ತಿ ಜೀವನದಲ್ಲಿ ವಿಶೇಷತೆಗಳೇ ತುಂಬಿ ಹೋಗಿವೆ. ನಟನಾಗಿ ವಿಭಿನ್ನ ಅಲೆಯ ಸಿನಿಮಾಗಳಷ್ಟೇ ಅಲ್ಲದೆ ಕಾಮಿಡಿ, ಸಂಸಾರಿಕ, ಕಮರ್ಷಿಯಲ್ ಚಿತ್ರಗಳ ಮೂಲಕವೂ ಮನಗೆದ್ದ ನಟ. ರಂಗಭೂಮಿಯಲ್ಲಿ ಕೂಡಾ ತೊಡಗಿಸಿಕೊಂಡಿದ್ದ ಅನಂತನಾಗ್ ಪೂರ್ವಜರು ಮೂಲತಃ ಕಾಶ್ಮೀರಿ ಪಂಡಿತರು. ಕಾಶ್ಮೀರದಿಂದ ವಲಸೆ ಬಂದ ಕುಟುಂಬದವರಾದ ಕಾಶ್ಮೀರಿ ಪಂಡಿತರ ಪೂರ್ವಜರು ಕನ್ನಡಿಗರೇ ಆಗಿ ಹೋದರು. ಕೊಂಕಣಿ, ಕನ್ನಡ, ಮರಾಠಿ ಮಾತನಾಡುತ್ತಾ ಬದುಕಿದವರು. ಅಂದಹಾಗೆ ಅನಂತನಾಗ್ ಶ್ರೀಮಂತರೇನಲ್ಲ. ಮಠವೊಂದರ ಮೇಲ್ವಿಚಾರಕರಾಗಿದ್ದರು ತಂದೆ.

    1972ರಲ್ಲಿ ಇಂಡೋ-ಚೀನಾ ಯುದ್ಧ ನೆನಪಿದೆ ತಾನೆ.. ಆಗ ವಾಯುಸೇನೆಗೆ ಸೇರಲು ಅನಂತನಾಗ್ ಅರ್ಜಿ ಹಾಕಿದ್ದರು. ವಾಯುಸೇನೆಗೆ ಎಲ್ಲ ಅರ್ಹತೆಗಳಿದ್ದವು. ಆದರೆ ಎಡಗಣ್ಣು ದೋಷವಿತ್ತು. ಆ ಸಮಸ್ಯೆ ಇಂದಿಗೂ ಹಾಗೆಯೇ ಇದೆ. ಅದರಿಂದಾಗಿ ಅನಂತನಾಗ್ ವಾಯುಸೇನೆ ಸೇರ್ಪಡೆ ತಪ್ಪಿತು. ಹಠ ಬಿಡದ ಅನಂತನಾಗ್ ಭೂಸೇನೆ ಸೇರಲು ಪ್ರಯತ್ನಿಸಿದರು. ತೂಕವೇ ಇರಲಿಲ್ಲ. ವಯಸ್ಸಿಗೆ ತಕ್ಕಂತೆ ತೂಕ ಇರದ ಕಾರಣ ಭೂಸೇನೆಯೂ ರಿಜೆಕ್ಟ್ ಆಯಿತು. ಆಮೇಲೆ ಇಂಗ್ಲಿಷ್ ಬಾರದ ಕಾರಣ ಓದಿನಲ್ಲಿ ಆಸಕ್ತಿಯೂ ಕಡಿಮೆಯಾಯ್ತು. ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡು ತಮ್ಮ ಶಂಕರನನ್ನು ಸಾಕಿದರು. ರಂಗಭೂಮಿಯಲ್ಲಿನ ಆಸಕ್ತಿ ಚಿತ್ರರಂಗದೆಡೆಗೆ ತಂದಿತು ಎಂದಿದ್ದಾರೆ.

  • ಅನಂತನಾಗ್ ಅವರಿಗೆ ಗೌರವ ಡಾಕ್ಟರೇಟ್

    ಅನಂತನಾಗ್ ಅವರಿಗೆ ಗೌರವ ಡಾಕ್ಟರೇಟ್

    5 ದಶಕಗಳಿಂದಲೂ ಚಿತ್ರರಂಗದಲ್ಲಿರುವ ಹಿರಿಯ ನಟ ಅನಂತನಾಗ್ ಅವರಿಗೆ ಬೆಂಗಳೂರು ಉತ್ತರ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕೋಲಾರದ ನಂದಿನಿ ಪ್ಯಾಲೇಸ್ ಆವರಣದಲ್ಲಿ ನಡೆದ ಸಭಾಂಗಣದಲ್ಲಿ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ರಾಜ್ಯಪಾಲ ಗೌರವ್ ಚಂದ್ ಗೆಹ್ಲೋತ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅನಂತ್ ನಾಗ್ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದಾರೆ.

    ಅನಂತ್ ನಾಗ್ ಅವರ ಕುಟುಂಬ ಕಾಶ್ಮೀರದಿಂದ ವಲಸೆ ಬಂದ ಪಂಡಿತರ ಕುಟುಂಬ. ನೆಲೆಸಿದ್ದು ಕರ್ನಾಟಕದ ಭಟ್ಕಳ ಸಮೀಪದ ಶಿರಾಳಿಯ ನಾಗರಕಟ್ಟೆಯಲ್ಲಿ. 1973ರಲ್ಲಿ ಬಿಡುಗಡೆಯಾದ ಸಂಕಲ್ಪ ಅನಂತ್ ನಟಿಸಿದ ಮೊದಲ ಸಿನಿಮಾ. ಅದಾದ ನಂತರ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ಮರಾಠಿ, ಬೆಂಗಾಲಿ, ಹಿಂದಿ, ತೆಲುಗು, ತಮಿಳು, ಮಲಯಾಳಂ.. ಹೀಗೆ ಬಹುಭಾಷಾ ಕಲಾವಿದರಾಗಿರುವ ಅನಂತ್ ನಾಗ್ ರಂಗಭೂಮಿ ಕಲಾವಿದರು ಕೂಡಾ. ರಾಜಕಾರಣಿಯೂ ಆಗಿದ್ದರು. ಸಚಿವರೂ ಆಗಿದ್ದರು. ನಂತರ ರಾಜಕೀಯ ಬಿಟ್ಟು ಕೇವಲ ಸಿನಿಮಾರಂಗಕ್ಕೆ ಸೀಮಿತರಾದವರು. ಹಲವು ರಾಜ್ಯ ಪ್ರಶಸ್ತಿ, ಫಿಲಂಫೇರ್ ಸೇರಿದಂತೆ ಹತ್ತಾರು ಗೌರವಕ್ಕೆ ಪಾತ್ರರಾಗಿರುವ ಅನಂತ್ ನಾಗ್ ಅವರಿಗೆ ಇದು ಮೊದಲ ಗೌರವ ಡಾಕ್ಟರೇಟ್.

  • ಅನಂತ್ ನಾಗ್ ಸಂದರ್ಶನ ಮಾಡಿದ ಅಪ್ಪು 

    puneeth rajkumar interviws ananth nag

    ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ ಚಿತ್ರದ ಬಿಡುಗಡೆಗೆ ಮುನ್ನ ಪ್ರಮೋಷನ್‍ಗೆ ಮುಂದಾಗಿದೆ ಚಿತ್ರತಂಡ. ಅದರ ನೇತೃತ್ವ ವಹಿಸಿರುವುದು ಸ್ವತಃ ಪುನೀತ್ ರಾಜ್‍ಕುಮಾರ್. ಚಿತ್ರದ ಪ್ರಮುಖ ಪಾತ್ರಧಾರಿಯಲ್ಲೊಬ್ಬರಾದ ನಟ ಅನಂತ್‍ನಾಗ್ ಅವರನ್ನು ಖುದ್ದು ಪುನೀತ್ ಅವರೇ ಸಂದರ್ಶನ ಮಾಡಿದ್ದಾರೆ.

    ಚಿಕ್ಕ ಹುಡುಗನಾಗಿದ್ದಾಗ ನನಗೆ ನಿಮಗಿಂತ ಶಂಕರ್ ನಾಗ್ ಅವರೇ ಇಷ್ಟ ಎಂದು ನೇರವಾಗಿ ಅನಂತ್ ಅವರಲ್ಲೇ ಹೇಳಿದ್ದ ಅಪ್ಪು, ಈಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಆಗಿ ಸಂದರ್ಶನ ಮಾಡಿರುವುದೇ ವಿಶೇಷ.

    ಪುನೀತ್‍ನನ್ನು ನಾನು ಚಿಕ್ಕಂದಿನಿಂದ ನೋಡಿದ್ದೇನೆ. ನಾನು ವಜ್ರೇಶ್ವರಿ ಕಂಬೈನ್ಸ್‍ನಲ್ಲೂ ನಟಿಸಿದ್ದೇನೆ. ಪಿಆರ್‍ಕೆ ಪ್ರೊಡಕ್ಷನ್‍ನಲ್ಲಿಯೂ ನಟಿಸಿದ್ದೇನೆ. ಚಿಕ್ಕ ಹುಡುಗನಾಗಿದ್ದ ಪುನೀತ್, ಈಗ ದೊಡ್ಡ ಸ್ಟಾರ್ ಆಗಿ, ನಿರ್ಮಾಪಕನಾಗಿ ಸಿನಿಮಾ ಮಾಡಿದ್ದಾರೆ. ಅದೆಲ್ಲವನ್ನೂ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದೇನೆ ಎಂದಿದ್ದಾರೆ ಅನಂತ್ ನಾಗ್.

  • ಅನಂತ್ ಮಾತಿಗೆ ಓಕೆ ಎಂದ ಜಯಣ್ಣ

    ananthnag is backbone in hottegagi genu battegagi

    ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್‍ನಾಗ್, ತಾವು ನಟಿಸುವ ಚಿತ್ರಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಹೊಸದೇನಲ್ಲ. ಅಂತಹ ವಿಶೇಷ ಕಾಳಜಿಯನ್ನು ಅನಂತ್‍ನಾಗ್, ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಚಿತ್ರಕ್ಕೆ ತೋರಿಸಿದ್ದಾರೆ. ಹೊಸಬರ ಅದರಲ್ಲೂ ಪ್ರಯೋಗಾತ್ಮಕ ಚಿತ್ರಗಳ ಬಿಡುಗಡೆ ಸುಲಭವಲ್ಲ. ವಿತರಕರು ಸಿಗುವುದೇ ಕಷ್ಟ. ಹೀಗಿರುವಾಗ ಅನಂತ್‍ನಾಗ್, ಸ್ವತಃ ವಿತರಕ ಜಯಣ್ಣ ಅವರ ಜೊತೆ ಮಾತನಾಡಿ, ಚಿತ್ರವನ್ನೊಮ್ಮೆ ನೋಡುವಂತೆ ಕೇಳಿಕೊಂಡಿದ್ದಾರೆ. ಅನಂತ್‍ನಾಗ್ ಹೇಳಿದ್ದಕ್ಕೆ ಚಿತ್ರವನ್ನು ನೋಡಿದ ಜಯಣ್ಣ, ಚಿತ್ರವನ್ನು ಮೆಚ್ಚಿಕೊಂಡಿರುವುದಷ್ಟೇ ಅಲ್ಲ, ವಿತರಣೆಯ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದಾರೆ.

    ಚಿತ್ರದ ಆರಂಭದಿಂದಲೂ ಅನಂತ್ ಸರ್, ಇದೇ ರೀತಿ ಸಪೋರ್ಟ್ ಮಾಡಿದ್ದಾರೆ. ಈಗ ನಮ್ಮ ಚಿತ್ರದ ಬಿಡುಗಡೆ ಜವಾಬ್ದಾರಿಯನ್ನು ಜಯಣ್ಣ ತೆಗೆದುಕೊಳ್ಳುವ ಮೂಲಕ, ನಮ್ಮ ಸಿನಿಮಾ ಬಿಡುಗಡೆಯನ್ನು ಸುಲಭ ಮಾಡಿಕೊಟ್ಟಿದ್ದಾರೆ ಎಂದಿದ್ದಾರೆ ನಿರ್ದೇಶಕ ನರೇಂದ್ರ ಬಾಬು.

    ಅನಂತ್‍ನಾಗ್, ರಾಧಿಕಾ ಚೇತನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿನಿಮಾ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ. ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

     

  • ಅನಂತ್`ಗೆ ಪದ್ಮ : ಪುನೀತ್ ನಂತರ ಯಶ್`ರಿಂದಲೂ ಬೆಂಬಲ

    ಅನಂತ್`ಗೆ ಪದ್ಮ : ಪುನೀತ್ ನಂತರ ಯಶ್`ರಿಂದಲೂ ಬೆಂಬಲ

    ಸಹಜತೆಯ ಕಲಾವಿದ ಅನಂತ್ ನಾಗ್ ಅವರಿಗೆ ಪದ್ಮಶ್ರೀ ಪುರಸ್ಕಾರ ಕೊಡಬೇಕು ಎಂಬ ಅಭಿಯಾನ ಶುರುವಾಗಿದೆ. ಖುದ್ದು ಅಭಿಮಾನಿಗಳೇ ಶುರು ಮಾಡಿದ ಈ ಅಭಿಯಾನಕ್ಕೆ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕೈಜೋಡಿಸಿದ್ದರು. ಹೇಮಂತ್ ರಾವ್, ವಸಿಷ್ಠ ಸಿಂಹ ಸೇರಿದಂತೆ ಹಲವರು ಬೆಂಬಲಿಸುವುದರ ಮೂಲಕ ಅಭಿಯಾನಕ್ಕೆ ದೊಡ್ಡ ಜನಪ್ರಿಯತೆಯೂ ಸಿಕ್ಕಿತ್ತು.

    ನಂತರ ಅಭಿಯಾನಕ್ಕೆ ಸ್ವತಃ ಪುನೀತ್ ರಾಜ್‍ಕುಮಾರ್ ಬೆಂಬಲಿಸುವುದರೊಂದಿಗೆ ಅಭಿಯಾನಕ್ಕೆ ಇನ್ನಷ್ಟು ಮೆರುಗು ಕೊಟ್ಟಿತ್ತು. ಈಗ ಯಶ್ ಅವರಿಂದಲೂ ಬೆಂಬಲ ವ್ಯಕ್ತವಾಗಿದೆ. ಅನಂತ್ ನಾಗ್ ಅವರಲ್ಲದೆ ಪದ್ಮಶ್ರೀ ಪುರಸ್ಕಾರಕ್ಕೆ ಸೂಕ್ತವಾಗಬಲ್ಲ ಅದ್ಭುತ ನಟ ಇನ್ಯಾರಿದ್ದಾರೆ? ಅವರ ಕಾಮಿಡಿ ಚಿತ್ರಗಳನ್ನು ನೋಡಿ ನಕ್ಕಿದ್ದೇವೆ. ದೆವ್ವದ ಚಿತ್ರಗಳನ್ನು ನೋಡಿ ಹೆದರಿದ್ದೇವೆ. ಅವರು ಅತ್ತಾಗ ಅತ್ತಿದ್ದೇವೆ. ಕಣ್ಣೀರಿಟ್ಟಿದ್ದೇವೆ. ಎವರ್ ಗ್ರೀನ್ ಅನ್ನೋ ಪದಕ್ಕೆ ಅನಂತ್ ಸರ್ ಉದಾಹರಣೆ ಎಂದಿದ್ದಾರೆ ಯಶ್.

    ಅಭಿಮಾನಿಗಳ ಅಭಿಯಾನ ಮತ್ತು ಅಭಿಮಾನ ನೋಡುತ್ತಿದ್ದರೆ ನನಗೆ ಪದ್ಮ ಪುರಸ್ಕಾರಕ್ಕಿಂತಲೂ ದೊಡ್ಡ ಗೌರವವೇ ಸಿಕ್ಕಂತಾಗಿದೆ. ನನಗೆ ಹೊಸ ಉತ್ಸಾಹ ಬಂದಿದೆ ಎಂದಿದ್ದಾರೆ ಅನಂತ್ ನಾಗ್. ನನ್ನನ್ನು ಜನ ಇಷ್ಟು ಪ್ರೀತಿಸುತ್ತಾರೆ ಎಂಬುದೇ ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ ಅನಂತ್.

  • ಅನಂತ್`ನಾಗ್ : ಇದು ಅಭಿಮಾನಿಯ ಅಭಿಮಾನದ ಕಿರುಚಿತ್ರ

    ಅನಂತ್`ನಾಗ್ : ಇದು ಅಭಿಮಾನಿಯ ಅಭಿಮಾನದ ಕಿರುಚಿತ್ರ

    ರಿಷಬ್ ಶೆಟ್ಟಿ ಅನಂತ್ ನಾಗ್ ಅವರ ಅಭಿಮಾನಿ. ಅವರಿಗೆ ನಿರ್ದೇಶನವನ್ನೂ ಮಾಡಿರುವ ರಿಷಬ್, ಅನಂತ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಅಭಿಯಾನವನ್ನೇ ಶುರು ಮಾಡಿದವರು. ಈಗ ಅವರನ್ನು ಪರಿಚಯಿಸುವ ಒಂದು ಕಿರುಚಿತ್ರವನ್ನೇ ಡಾಕ್ಯುಮೆಂಟರಿ ರೂಪದಲ್ಲಿ ಅಭಿಮಾನಿಗಳ ಎದುರು ಇಟ್ಟಿದ್ದಾರೆ.

    ಅನಂತ್ ನಾಗ್ ಅವರ ರಂಗಭೂಮಿ, ಹಿಂದಿ, ಮರಾಠಿ, ಕನ್ನಡ ಚಿತ್ರಗಳ ನಟನೆ, ನಟನೆಯಲ್ಲಿನ ವೈವಿಧ್ಯ, ಸಂಗೀತ... ಎಲ್ಲ ಸಾಧನೆಯನ್ನೂ ಚಿಕ್ಕದಾಗಿ ಮತ್ತು ಅಷ್ಟೇ ಚೊಕ್ಕವಾಗಿ ಚೆಂದದ ಇಂಗ್ಲೀಷಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಅಭಿಮಾನಿಯೊಬ್ಬ.. ಅಭಿಮಾನದಿಂದ.. ಅಭಿಮಾನಕ್ಕೋಸ್ಕರವೇ ಮಾಡಿದ ಕಿರುಚಿತ್ರ.

  • ಅನಂತ್`ನಾಗ್`ಗೆ ಪದ್ಮ ಪುರಸ್ಕಾರ : ಚಿತ್ರನಟರ ಅಭಿಯಾನ

    ಅನಂತ್`ನಾಗ್`ಗೆ ಪದ್ಮ ಪುರಸ್ಕಾರ : ಚಿತ್ರನಟರ ಅಭಿಯಾನ

     ಎರಡನೇ ಮಾತಿಲ್ಲ. ಅನಂತ್ ನಾಗ್ ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ. ನಟಿಸಿರುವ ಚಿತ್ರಗಳ ಸಂಖ್ಯೆ 100 ದಾಟಿದೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಮರಾಠಿ.. ಚಿತ್ರರಂಗದಲ್ಲಿ ನಟಿಸಿರುವ ಅನಂತ್ ಅವರದ್ದು ವೃತ್ತಿ ರಂಗಭೂಮಿಯಲ್ಲೂ ದೊಡ್ಡ ಹೆಸರು. ಆದರೆ.. ಹಿಂದಿ ಚಿತ್ರರಂಗದಲ್ಲಿ ಅನಂತ್ ನಾಗ ಅವರಷ್ಟು ಅನುಭವದಷ್ಟೂ ವಯಸ್ಸಾಗದವರಿಗೆ ಪದ್ಮ ಪುರಸ್ಕಾರ ಸಿಕ್ಕಿರುವಾಗ ನಮ್ಮ ಅನಂತ್ ನಾಗ್ ಅವರಿಗೆ ಏಕಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳದ್ದು.

    ಮೋದಿ ಸರ್ಕಾರ ಬಂದ ಮೇಲೆ ಪದ್ಮ ಪ್ರಶಸ್ತಿಗಳಿಗೆ ಜನರಿಂದಲೇ ಶಿಫಾರಸು ಪಡೆಯುವ ಕ್ರಮ, ಅದೆಷ್ಟೋ ಎಲೆಮರೆಯ ಸಾಧಕರು ಗುರುತಿಸಿಕೊಳ್ಳುವಂತೆ ಮಾಡಿದೆ. ಹೀಗಾಗಿ.. ಈ ಬಾರಿ ನಮ್ಮ ಅನಂತ್ ನಾಗ್ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆಯಲಿ ಎಂಬ ಅಭಿಯಾನವೂ ಶುರುವಾಗಿದೆ.

    ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಅಭಿಯಾನ ಆರಂಭಿಸಿದ್ದಾರೆ. ನಿರ್ದೇಶಕ ಹೇಮಂತ್ ರಾವ್, ನಟ ವಸಿಷ್ಠ ಸಿಂಹ, ನಟಿ ರೋಹಿಣಿ ಸೇರಿದಂತೆ ಹಲವರು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಈ ಅಭಿಯಾನದಲ್ಲಿ ಸಾವಿರಾರು ಕನ್ನಡಿಗರು ಕೂಡಾ ಕೈಜೋಡಿಸಿದ್ದಾರೆ.

  • ಅನಂತ್‍ಗೆ ಶಂಕರ್ ನಾಗ್ ನೆನಪಿಸಿದ ರಿಷಬ್ ಶೆಟ್ಟಿ

    ananth nag in rishab shetty's movie

    ಅನಂತ್‍ನಾಗ್‍ಗೆ ಶಂಕರ್ ನಾಗ್ ಎಂದೆಂದೂ ಮರೆಯಲು ಸಾಧ್ಯವೇ ಇಲ್ಲವೇನೊ.. ಅವರ ಜೀವನದ ಸ್ಫೂರ್ತಿ ಮತ್ತು ಬದುಕು ಎರಡೂ ಆಗಿದ್ದ ಶಂಕರ್‍ನಾಗ್‍ರನ್ನು ಅನಂತ್ ನೆನಪಿಸಿಕೊಳ್ಳುವುದೂ ಹೊಸದೇನಲ್ಲ. ಆದರೆ ರಿಷಬ್ ಶೆಟ್ಟಿಯವರ ಜೊತೆ ನಟಿಸುವಾಗ, ಅನಂತ್‍ಗೆ ಶಂಕರ್‍ನಾಗ್ ನೆನಪಾಗಿದೆ. ಅದರ ಕ್ರೆಡಿಟ್ಟು, ಸ್ವತಃ ರಿಷಬ್‍ಗೇ ಸಲ್ಲಬೇಕು. ಅದಕ್ಕೆ ಕಾರಣವಾಗಿರೋದು ಒಂದು ದೃಶ್ಯ.

    ರಿಷಬ್ ಅವರ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರದಲ್ಲಿ ಅನಂತ್‍ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ. ಆ ಚಿತ್ರದಲ್ಲಿ 15 ನಿಮಿಷದ ಒಂದು ದೃಶ್ಯವನ್ನ ಒಂದೇ ಶಾಟ್‍ನಲ್ಲಿ ಚಿತ್ರೀಕರಿಸಲು ರಿಷಬ್ ನಿರ್ಧರಿಸಿದರಂತೆ. ಅವರಿಗೆ ಅನಂತ್‍ನಾಗ್ ಮೇಲೆ ವಿಶ್ವಾಸ. ಅದಕ್ಕೆ ಧಕ್ಕೆಯಾಗದಂತೆ ಅನಂತ್, ಇಡೀ ಶಾಟ್‍ನ್ನು ಒಂದೇ ಟೇಕ್‍ನಲ್ಲಿ ಮುಗಿಸಿಯೂಬಿಟ್ಟರಂತೆ. 

    ಆ ದೃಶ್ಯದ ಚಿತ್ರೀಕರಣ ನಡೆಯುವಾಗ ನನಗೆ ಶಂಕರ್ ನೆನಪಾಗಿದ್ದ. ಅವನೂ ಹೀಗೆಯೇ ಕೆಲವು ಶಾಟ್‍ಗಳನ್ನ ಇಡ್ತಾ ಇದ್ದ ಎಂದು ಗತಕಾಲಕ್ಕೆ ಜಾರುವ ಅನಂತ್‍ನಾಗ್, ಶಂಕರ್ ಜೊತೆ ಸ್ಟೇಜ್‍ನಲ್ಲಿ ಕಳೆದ ಕ್ಷಣಗಳನ್ನೂ ಮೆಲುಕು ಹಾಕುತ್ತಾರೆ. ಸಿನಿಮಾದಲ್ಲಿ ಅನಂತ್ ಅವರದ್ದು ಸೀರಿಯಸ್ ಮೇಷ್ಟ್ರ ಪಾತ್ರವಲ್ಲ, ತುಂಟ ಮೇಷ್ಟರ ಪಾತ್ರ. ಗೌರಿ ಗಣೇಶ, ಗಣೇಶನ ಮದುವೆಯ ತುಂಟ ಅನಂತ್‍ನಾಗ್‍ರನ್ನು ಸಿನಿಮಾದಲ್ಲಿ ನೋಡಬಹುದಂತೆ. ಮಕ್ಕಳ ನಡುವೆ ಮಕ್ಕಳಾಗಿ ನಟಿಸಿದ್ದಾರೆ ಅನಂತ್ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ.

  • ಅನಂತ್‍ನಾಗ್ ಮೂಲತಃ ಕಾಶ್ಮೀರಿ. ಇದು ಸತ್ಯ

    ananth nag's link with kashmir

    ಅನಂತ್‍ನಾಗ್.. ಈ ಹೆಸರು ಕೇಳಿದರೆ ಕನ್ನಡ ಕಲಾ ರಸಿಕರು ರೋಮಾಂಚಿತರಾಗುತ್ತಾರೆ. ಅನಂತ್‍ನಾಗ್.. ಈ ಹೆಸರು ಕೇಳಿದರೆ ಸೈನಿಕರು ತಕ್ಷಣ ಅಲರ್ಟ್ ಆಗುತ್ತಾರೆ. ರೋಮಾಂಚಿತಗೊಳಿಸುವ ಅನಂತ್‍ನಾಗ್, ಕನ್ನಡದ ಕಲಾವಿದರಾದರೆ, ಅಲರ್ಟ್ ಮಾಡಿಸುವ ಅನಂತ್‍ನಾಗ್, ಕಾಶ್ಮೀರದಲ್ಲಿರೋ ಉಗ್ರರ ಉಪಟಳದಲ್ಲಿ ಸದಾ ಬೆಂಕಿಯಾಗುತ್ತಿರುವ ಜಿಲ್ಲೆ. ಆ ಅನಂತ್‍ನಾಗ್‍ಗೂ, ಈ ಅನಂತ್‍ನಾಗೂ ಸಂಬಂಧವಿಲ್ಲ, ಇರೋಕೆ ಸಾಧ್ಯವೂ ಇಲ್ಲ.. ಇವರೋ ಉತ್ತರ ಕನ್ನಡ ಜಿಲ್ಲೆಯ ನಾಗರಕಟ್ಟೆಯವರು. ಅಲ್ಲಿಗೂ.. ಇಲ್ಲಿಗೂ ಎತ್ತಣಿಂದೆತ್ತಣ ಸಂಬಂಧ ಬಿಡ್ರಿ ಎಂದುಕೊಂಡಿದ್ದವರಿಗೆ ಇದು ಅಚ್ಚರಿ ಎನಿಸುವ ಸತ್ಯ. ಅನಂತ್‍ನಾಗ್ ಮೂಲತಃ ಕಾಶ್ಮೀರಿ.

    ಕಾಶ್ಮೀರದಲ್ಲಿ ಪಂಡಿತರು ಮೂಲನಿವಾಸಿಗಳು. ಅವರ ಮೇಲೆ ಅಲ್ಲಿ ಶತಮಾನಗಳಿಂದ ಹಲ್ಲೆ, ಅತ್ಯಾಚಾರಗಳು ನಡೆಯುತ್ತಾ ಬಂದಿವೆ. ಈಗ ಕಾಶ್ಮೀರದಲ್ಲಿ ಪಂಡಿತರೇ ಅಲ್ಪಸಂಖ್ಯಾತರು. ಅನಂತ್‍ನಾಗ್ ಅವರ ಕುಟುಂಬ ಹಲವು ವರ್ಷಗಳ ಹಿಂದೆ ಅಲ್ಲಿಯೇ ನೆಲೆಸಿತ್ತು.

    ಅನಂತ್‍ನಾಗ್ ಸಾರಸ್ವತಿ ಋಗ್ವೇದಿ ಬ್ರಾಹ್ಮಣರು. ಸುಮಾರು ವರ್ಷಗಳ ಹಿಂದೆ ಅಲ್ಲಿಂದ ಇಲ್ಲಿಗೆ ವಲಸೆ ಬಂದವರಂತೆ. ಅನಂತ್‍ನಾಗ್ ಅವರ ಪುರಾತನ ಹಿರಿಯರು ಲೋಮಶರ್ಮರು.  ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವುದರಿಂದ ತಪ್ಪಿಸಿಕೊಳ್ಳಲು ಬಂದ 200 ಕುಟುಂಬಗಳು ಮೊದಲು ನೆಲೆಸಿದ್ದು ಗೋವಾದಲ್ಲಿ. ಆದರೆ, ಅಲ್ಲಿ ಕ್ರಿಶ್ಚಿಯನ್ ಮಿಷನರಿಗಳಿಂದ ಮತಾಂತರದ ಒತ್ತಡ ಆರಂಭವಾದಾಗ ಬಂದು ಆಶ್ರಯ ಬೇಡಿದ್ದು ಶೃಂಗೇರಿಯಲ್ಲಿ. ಶೃಂಗೇರಿ ಪೀಠದವರು ಇವರನ್ನೆಲ್ಲ ಆಗಿನ ಕೆಳದಿ ಸಂಸ್ಥಾನದ ಅರಸರ ಬಳಿ ಕಳಿಸಿಕೊಟ್ಟರಂತೆ. ಸ್ವಾಮಿಗಳ ಆಜ್ಞೆಯನ್ನು ಮೀರುವುದುಂಟೆ. ಅವರಿಗೆಲ್ಲ ಕೆಳದಿ ಅರಸರು ಒಂದಿಷ್ಟು ಜಮೀನುಗಳನ್ನು ಉಂಬಳಿಯಾಗಿ ಕೊಟ್ಟರಂತೆ. ಹಾಗೆ ಉಂಬಳಿಯಾಗಿ ಪಡೆದ ಜಮೀನಿನಲ್ಲಿ ಅನಂತ್‍ನಾಗ್ ಅವರ ಕುಟುಂಬ ನಾಗರಕಟ್ಟೆ ಎಂಬ ಊರಿನಲ್ಲಿ ನೆಲೆಸಿತು. ಇದು ನಿರ್ದೇಶಕ ಶ್ಯಾಂ ಬೆನಗಲ್ ಅವರಿಗೂ ಗೊತ್ತಿತ್ತು.

    ಹೀಗಾಗಿಯೇ ಶ್ಯಾಂ ಬೆನಗಲ್, ಅನಂತ್ ಅವರ ಹೆಸರನ್ನು ಎರಡೂ ರೀತಿಯ ನೆಲೆಯ ಸಂಕೇತ ತಿಳಿಸುವಂತೆ ಅನಂತ್‍ನಾಗ್ ಎಂದು ಕರೆದರು. ಹೀಗಾಗಿ.. ಅನಂತ್‍ನಾಗ್ ಹೆಸರಿನಲ್ಲಿ ಕನ್ನಡದ ನಾಗರಕಟ್ಟೆಯೂ ಇದೆ. ಕಾಶ್ಮೀರದ ಅನಂತ್‍ನಾಗ್ ಕೂಡಾ ಇದೆ. 

    ಅಂದಹಾಗೆ ಅನಂತ್‍ನಾಗ್ ಕವಲುದಾರಿಯಲ್ಲಿ ಮುತ್ತಣ್ಣ ಎಂಬ ಹೆಸರಿನ ರಿಟೈರ್ಡ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಅದು ಕಾಶ್ಮೀರದಲ್ಲಿ ಹುತಾತ್ಮನಾದ ಯೋಧನೊಬ್ಬನ ಹೆಸರು. ಕವಲುದಾರಿ ಸಿನಿಮಾ ಥಿಯೇಟರುಗಳಲ್ಲಿದೆ.

  • ಆಡುವ ಗೊಂಬೆಯಾದ ಅನಂತ್‍ನಾಗ್

    aaduva gome ananth nag

    ಅನಂತ್ ನಾಗ್ ಆಡುವ ಗೊಂಬೆಯಾಗುತ್ತಿದ್ದಾರೆ. ಅನಂತ್‍ರನ್ನು ಆಡುವ ಗೊಂಬೆಯನ್ನಾಗಿಸುತ್ತಿರುವುದು ಬೇರ್ಯಾರೂ ಅಲ್ಲ. ಲಕ್ಷ್ಮಿಯನ್ನು ಚಂದನದ ಗೊಂಬೆಯನ್ನಾಗಿಸಿದ ಭಗವಾನ್.

    ಭಗವಾನ್ ತಮ್ಮ 85ನೇ ವಯಸ್ಸಿನಲ್ಲಿ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಇಷ್ಟು ಹಿರಿಯ ವಯಸ್ಸಿನಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿರುವ ಭಗವಾನ್, ಕನ್ನಡದ ಮಟ್ಟಿಗೆ ದೊಡ್ಡ ಸಾಧನೆಯನ್ನೇ ಮಾಡುತ್ತಿದ್ದಾರೆ.

    ಅನಂತ್-ಭಗವಾನ್ ಜೋಡಿ ಒಟ್ಟಿಗೇ 9 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಒಂಭತ್ತಕ್ಕೆ, ಒಂಭತ್ತೂ ಸೂಪರ್ ಸಕ್ಸಸ್ ಎನ್ನುವುದೇ ಆಡುವ ಗೊಂಬೆಯ ಕುತೂಹಲ ಹೆಚ್ಚಿಸಿದೆ. ಎಂದಿನಂತೆ ಇದೊಂದು ಕೌಟುಂಬಿಕ ಚಿತ್ರ. 

    ಕಾಲಕ್ಕೆ ತಕ್ಕಂತೆ ಬದಲಾಗಿದ್ದೇನೆ. ಈಗಿನ ಟ್ರೆಂಡ್‍ಗೆ ತಕ್ಕಂತೆ ಸಿನಿಮಾ ಇರಲಿದೆ. ಚಿತ್ರದಲ್ಲಿ ಅನಂತ್‍ನಾಗ್ ಕಾಫಿ ಎಸ್ಟೇಟ್ ಮಾಲೀಕನ ಪಾತ್ರ ನಿರ್ವಹಿಸಲಿದ್ದಾರೆ. ಆತ, ಆತನ ಸಂಸಾರ, ಆತನ ಬಯಕೆಗಳು, ಅದಕ್ಕೆ ವಿರುದ್ಧವಾಗಿ ನಡೆಯುವ ಬೆಳವಣಿಗೆಗಳೇ ಚಿತ್ರದ ಕಥೆ ಎಂದಿದ್ದಾರೆ ಭಗವಾನ್.

    ಚಿತ್ರಕ್ಕೆ ಹಣ ಹೂಡುತ್ತಿರುವುದು ಟೆಕ್ಕಿಗಳಾದ ಸತೀಶ್ ಮತ್ತು ವೇಣು ಗೋಪಾಲ್. ಅವರು ಭಗವಾನ್ ಅಭಿಮಾನಿಗಳು.ತಾವು ಸಿನಿಮಾ ಮಾಡಿದರೆ, ಅದನ್ನು ಭಗವಾನ್ ಅವರೇ ನಿರ್ದೇಶಿಸಬೇಕೆಂದು ಕನಸು ಕಂಡಿದ್ದವರು. ಅವರ ಕನಸು ಆಡುವ ಗೊಂಬೆಯಲ್ಲಿ ನನಸಾಗುತ್ತಿದೆ.

    ಅನಂತ್ ನಾಗ್‍ಗೆ ಜೋಡಿಯಾಗುತ್ತಿರುವ ಸುಧಾ ಬೆಳವಾಡಿ. ಚಿತ್ರದಲ್ಲಿ ಸಂಚಾರಿ ವಿಜಯ್, ನಿರುಷಾ, ಸೀಮಾ ಗೌಡ, ರಿಷಿಕಾ ಮಲ್ನಾಡ್ ಮೊದಲಾದವರು ನಟಿಸುತ್ತಿದ್ದಾರೆ. 

    ಭಗವಾನ್ ಚಿತ್ರಗಳಲ್ಲಿನ ಇನ್ನೊಂದು ಮುಖ್ಯ ಅಂಶ, ಹಾಡುಗಳು. ಅವರ ಚಿತ್ರಗಳಲ್ಲಿನ ಹಾಡುಗಳು ಇಂದಿಗೂ ಗುನುಗುವಂತಿವೆ. ಅಂತಹ ಮಾಧುರ್ಯ ಭರಿತ ಗೀತೆಗಳೇ ಆಡುವ ಗೊಂಬೆಯಲ್ಲೂ ಇರುತ್ತವಾ..? ಪ್ರೇಕ್ಷಕರು ಗೊಂಬೆಗಳಂತೆಯೇ ಕಾಯುತ್ತಿದ್ದಾರೆ.

  • ಇಂಡಿಯಾ V/s ಇಂಗ್ಲೆಂಡ್ ಇದು ಕ್ರಿಕೆಟ್ ಅಲ್ಲ

    india vs england image

    ಇಂಡಿಯಾ ವಿಶ್ವಕಪ್‍ನಿಂದ ಹೊರಬಿದ್ದು, ಇಂಗ್ಲೆಂಡ್ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದೆ. ಇಂಥಾ ಹೊತ್ತಲ್ಲಿ ಈ ಟೈಟಲ್ ಹೊರಬಿದ್ದಿದೆ. ಇಂಡಿಯಾ  V/s  ಇಂಗ್ಲೆಂಡ್ ಇದು ಕ್ರಿಕೆಟ್ ಅಲ್ಲ. ಇದು, ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಚಿತ್ರದ ಟೈಟಲ್. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿಸಿರುವ ನಾಗತಿಹಳ್ಳಿ, ಅಮೆರಿಕಾ, ಪ್ಯಾರಿಸ್ ನಂತರ ಮತ್ತೊಂದು ದೇಶದ ಹೆಸರನ್ನು ತಮ್ಮ ಚಿತ್ರಕ್ಕಿಟ್ಟಿದ್ದಾರೆ.

    ವಸಿಷ್ಠ ಸಿಂಹ ಹಾಗೂ ಮಾನ್ವಿತಾ ಹರೀಶ್ ನಟಿಸಿರುವ ಚಿತ್ರದಲ್ಲಿ ಅನಂತ್‍ನಾಗ್, ಸುಮಲತಾ, ಸಾಧುಕೋಕಿಲ, ಪ್ರಕಾಶ್ ಬೆಳವಾಡಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೂ ಡಬ್ ಆಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

  • ಕವಚ ಚಿತ್ರಕ್ಕೆ ಅನಂತ್ ನಾಗ್ ಧ್ವನಿ

    kavacha gets ananth nag's voice

    ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಅನಂತ್ ನಾಗ್ ಧ್ವನಿ ನೀಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಅನಂತ್ ಅವರ ಧ್ವನಿಯನ್ನು ವಿಶಿಷ್ಟವಾಗಿ ಬಳಸಿಕೊಳ್ಳಲಾಗಿತ್ತು. ಈಗ ಕವಚ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಅನಂತ್ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ವಾಯ್ಸ್ ನೀಡುವ ವೇಳೆ ಚಿತ್ರದ ಕೆಲವು ದೃಶ್ಯ, ಶಿವಣ್ಣನ ಅಭಿನಯ ನೋಡಿ ತುಂಬಾ ಮೆಚ್ಚಿಕೊಂಡರಂತೆ ಅನಂತ್. 

    ಜಿವಿಆರ್ ವಾಸು ನಿರ್ದೇಶನದ ಚಿತ್ರದಲ್ಲಿ, ಶಿವಣ್ಣ ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸುತ್ತಿದ್ದಾರೆ. ಬೇಬಿ ಮೀನಾಕ್ಷಿ, ಇಶಾ ಕೊಪ್ಪಿಕರ್, ಕೃತ್ತಿಕಾ, ರಾಜೇಶ್ ನಟರಂಗ ನಟಿಸಿರುವ ಚಿತ್ರದಲ್ಲಿ ವಸಿಷ್ಠ ಸಿಂಹ ವಿಲನ್. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಮೆಚ್ಚುಗೆ ಗಳಿಸಿವೆ. ಹೀಗೆ ಹಲವು ವಿಶೇಷತೆಗಳನ್ನೊಳಗೊಂಡ ಚಿತ್ರಕ್ಕೆ ಕಥಾ ಹಂದರ ಹೇಳುವವರಾಗಿ ಮೆರುಗು ಹೆಚ್ಚಿಸಿದ್ದಾರೆ ಅನಂತ್ ನಾಗ್.

  • ಕವಲುದಾರಿ ಸಕ್ಸಸ್ ಪಾರ್ಟಿ - ಮಸಾಲದೋಸೆ, ಮೈಸೂರು ಪಾಕ್

    kavaludaari different success story

    ಸಕ್ಸಸ್ ಪಾರ್ಟಿಯನ್ನು ಹೀಗೂ ಮಾಡಬಹುದು. ಒಂದು ಮೈಸೂರು ಪಾಕ್, ಜೊತೆಗೊಂದು ಮಸಾಲ ದೋಸೆ.. ಅನಂತ್‍ನಾಗ್, ಗಾಯತ್ರಿ, ರಿಷಿ ಹಾಗೂ ನಿರ್ದೇಶಕ ಹೇಮಂತ್ ರಾವ್ ಒಟ್ಟಿಗೇ ಇಂಥಾದ್ದೊಂದು ಪಾರ್ಟಿ ಮಾಡಿದ್ದಾರೆ. ನಮ್ಮ ಈ ಚಿತ್ರದ ಗೆಲುವು, ನಿರ್ದೇಶಕ ಹೇಮಂತ್ ರಾವ್ ಅವರಂತಹ ಮಹತ್ವಾಕಾಂಕ್ಷಿ ನಿರ್ದೇಶಕರ ಗೆಲುವು ಎಂದಿದ್ದಾರೆ ನಾಯಕ ನಟ ರಿಷಿ. ಪಾರ್ಟಿಯಲ್ಲಿ ಮಿಸ್ ಆಗಿರುವುದು ನಿರ್ಮಾಪಕ ಪುನೀತ್ ರಾಜ್‍ಕುಮಾರ್.

    ಅವರು ಇನ್ನೊಂದು ಕಡೆ ಚಿತ್ರವನ್ನು ವಿದೇಶಗಳಲ್ಲಿ ರಿಲೀಸ್ ಮಾಡಲು ಓಡಾಡುತ್ತಿದ್ದಾರೆ. ಕನ್ನಡಕ್ಕೆ ವಿಭಿನ್ನವಾದ, ರೆಗ್ಯುಲರ್ ಫಾಮ್ರ್ಯಾಟ್‍ನಿಂದ ದೂರವಾಗಿರುವ ಕಥೆಯೊಂದನ್ನು ಸಿನಿಮಾ ಮಾಡಿ, ಗೆದ್ದಿರುವ ಪುನೀತ್, ಇಂತಹ ಪ್ರಯತ್ನಗಳನ್ನು ಬೆಂಬಲಿಸಿ, ನೋಡಿ, ಹರಸಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.

  • ಕಾವೇರಿಗಾಗಿ ಟೊಂಕ ಕಟ್ಟಿದ ಅನಂತ್‍ನಾಗ್

    ananth nag speaks for cauvery water

    ನಟ ಅನಂತ್‍ನಾಗ್, ತಮಿಳುನಾಡಿನಲ್ಲಿ ನಡೆಯುತ್ತಿರುವ ಕಾವೇರಿ ಜಲಮಂಡಳಿ ರಚನೆ ಹೋರಾಟದ ವಿರುದ್ಧ ಧ್ವನಿಯೆತ್ತಿದ್ದಾರೆ. ತಮಿಳುನಾಡಿನ ಈ ಒತ್ತಡ ತಂತ್ರ ಇದೇ ಮೊದಲೇನೂ ಅಲ್ಲ. ಕೇಂದ್ರ ಸರ್ಕಾರವಿರಲಿ, ಸುಪ್ರೀಂಕೋರ್ಟ್ ಇರಲಿ.. ಈ ರೀತಿ ಒತ್ತಡ ಹೇರುವ ಕೆಲಸವನ್ನು ತಮಿಳುನಾಡು ಮಾಡಿಕೊಂಡೇ ಬಂದಿದೆ ಎಂದಿದ್ದಾರೆ ಅನಂತ್‍ನಾಗ್.

    ತಮಿಳುನಾಡಿನ ಇಬ್ಬರು ನಟರು, ತಮ್ಮ ರಾಜಕೀಯ ಪ್ರವೇಶಕ್ಕಾಗಿ ಕಾವೇರಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಕನ್ನಡದ ನೆಲಜಲದ ರಕ್ಷಣೆ ವಿಚಾರದಲ್ಲಿ ನಾನು ಸಮಸ್ತ ಕನ್ನಡಿಗರ ಜೊತೆ ಇರುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ ಅನಂತ್‍ನಾಗ್.

  • ಕೆಜಿಎಫ್ ಚಿತ್ರದಿಂದ ಅನಂತ್ ನಾಗ್ ಹೊರಕ್ಕೆ..?

    ananth nag exists from yash starrer kgf

    ಕೆಜಿಎಫ್ ಕಥೆಯ ಸೂತ್ರಧಾರ ಆನಂದ್ ಇಂಗಳಗಿ. ಪತ್ರಕರ್ತ. ಇನ್ನೊಬ್ಬ ಟಿವಿ ಚಾನೆಲ್ ಪತ್ರಕರ್ತೆ ದೀಪಾ ಹೆಗ್ಡೆ ಅಲಿಯಾಸ್ ಮಾಳವಿಕಾ ಅವಿನಾಶ್ ಎದುರು ರಾಕಿಭಾಯ್ ಕಥೆ ಹೇಳ್ತಾರೆ. ಅನಂತ್ ನಾಗ್ ವಾಯ್ಸ್ ಕೆಜಿಎಫ್ ಚಾಪ್ಟರ್ 1ನ ಹೈಲೈಟ್ಸ್‍ಗಳಲ್ಲಿ ಒಂದು. ಇಂತಹ ಅನಂತ್ ನಾಗ್ ಚಾಪ್ಟರ್ 2ನಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿಯಿದೆ. ಇದು ನಿಜಾನಾ..? ಹೊಂಬಾಳೆ ಫಿಲಂಸ್, ನಿರ್ದೇಶಕ ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಸೇರಿದಂತೆ ಯಾರೊಬ್ಬರೂ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಅತ್ತ ಅನಂತ್ ನಾಗ್ ಅವರ ಕಡೆಯಿಂದಲೂ ಸ್ಪಷ್ಟನೆ ಬಂದಿಲ್ಲ.

    ಸದ್ಯಕ್ಕೆ ಗಾಂಧಿನಗರದಲ್ಲಿ ಈ ಸುದ್ದಿ ಸೆನ್ಸೇಷನ್ ಸೃಷ್ಟಿಸಿರುವುದು ಸತ್ಯ. ಸುದ್ದಿ ಸತ್ಯವೇ ಆಗಿದ್ದರೆ, ಕನ್ನಡದ ಬಹು ನಿರೀಕ್ಷಿತ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 2ಗೆ ಇದು ಶಾಕಿಂಗ್.

  • ಗಿರೀಶ್ ಕಾರ್ನಾಡ್, ಅನಂತ್‍ನಾಗ್, ಶಂಕರ್‍ನಾಗ್.. ಅದೆಂಥಾ ಸಂಬಂಧ..?

    girish karnad and relationship with nag brothers

    ಸಿನಿಮಾ ರಂಗಕ್ಕೆ ಶಂಕರ್‍ನಾಗ್‍ರನ್ನು ಪರಿಚಯಿಸಿದ ಕೀರ್ತಿ ಗಿರೀಶ್ ಕಾರ್ನಾಡ್ ಅವರದ್ದು. ನಿರ್ದೇಶನದಲ್ಲಿಯೇ ಆಸಕ್ತಿಯಿದ್ದ ಶಂಕರ್‍ಗೆ ಒಂದಾನೊಂದು ಕಾಲದಲ್ಲಿ.. ಚಿತ್ರದಲ್ಲಿ ಬಣ್ಣ ಹಚ್ಚಿಸಿದ್ದು ಗಿರೀಶ್ ಕಾರ್ನಾಡ್. ಅದು ಜಪಾನಿ ಚಿತ್ರರಂಗದ ದಂತಕತೆ ಅಕಿರಾ ಕುರುಸೋವಾ ಅವರ ನಿರ್ದೇಶನದ ಸೆವೆನ್ ಸಮುರಾಯ್ಸ್ ಚಿತ್ರದಿಂದ ಸ್ಫೂರ್ತಿ ಪಡೆದಿದ್ದ ಕಥೆ.

    ಅದಾದ ನಂತರ ಶಂಕರ್‍ನಾಗ್ ಮಾಲ್ಗುಡಿ ಡೇಸ್ ಮಾಡಿದಾಗ, ಕಾರ್ನಾಡರನ್ನು ಕಿರುತೆರೆ ನಟನೆಗೆ ಹೊತ್ತೊಯ್ದರು.

    ಅನಂತ್‍ನಾಗ್ ಹಿಂದಿಯಲ್ಲಿ ನಿಶಾಂತ್ ಮತ್ತು ಮಂಥನ್ ಚಿತ್ರದಲ್ಲಿ ಕಾರ್ನಾಡರೊಟ್ಟಿಗೆ ನಟಿಸಿದ್ದಾರೆ. ಕಾರ್ನಾಡರ ಅಂಜುಮಲ್ಲಿಗೆ ನಾಟಕವನ್ನು ರಂಗಭೂಮಿಗೆ ತಂದಾಗ ಶಂಕರ್ ನಾಗ್ ನಿರ್ದೇಶಿಸಿದ್ದರೆ, ಅನಂತ್‍ನಾಗ್ ನಟಿಸಿದ್ದರು.

    ಕಾರ್ನಾಡರ ನಾಟಕ ನಾಗಮಂಡಲವನ್ನು ಯಶಸ್ವಿಯಾಗಿ ರಂಗಭೂಮಿಯ ಮೇಲೆ ತಂದವರು ಶಂಕರ್. ಅದೇ ನಾಟಕವನ್ನು ಸಿನಿಮಾ ಮಾಡಿ ಗೆದ್ದವರು ನಾಗಾಭರಣ.

    ಶಂಕರ್‍ಗೆ ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿ ನಾಟಕವನ್ನು ಸಿನಿಮಾ ಮಾಡುವ ಕನಸಿತ್ತು. ಅದಕ್ಕೆ ಕಾರ್ನಾಡರು ನಿರ್ದೇಶನ ಮಾಡಬೇಕಿತ್ತು. ನಿರ್ಮಾಣದ ಹೊಣೆಯನ್ನು ಅನಂತ್-ಶಂಕರ್ ವಹಿಸಿಕೊಂಡಿದ್ದರು. ವಿಧಿ ಶಂಕರ್‍ನಾಗ್‍ರನ್ನು ಕಿತ್ತುಕೊಂಡಿದ್ದು ಆಗಲೇ. ಈಗ ಗಿರೀಶ್ ಕಾರ್ನಾಡ್.