ದುನಿಯಾ ಸೂರಿ ತಮ್ಮ ಚಿತ್ರಗಳಲ್ಲಿ ವಿಲನ್‍ಗಳಿಗೆ ಸರ್‍ನೇಮ್ ಕೊಡೋದ್ರಲ್ಲಿ ಫೇಮಸ್. ದುನಿಯಾದಲ್ಲಿ ಯೋಗಿಗೆ ಲೂಸ್ ಮಾದ ಅನ್ನೋ ಹೆಸರು ಕೊಟ್ಟಿದ್ದು, ಇಂದಿಗೂ ಅವರಿಗೆ ಅಂಟಿಕೊಂಡೇ ಇದೆ. ಮೊಟ್ಟೆ, ಜಂಗ್ಲಿ, ಕಡ್ಡಿಪುಡಿ, ಮಾಮು.. ಹೀಗೆ ದುನಿಯಾ ಸೂರಿಯ ಚಿತ್ರಗಳಲ್ಲಿ ವಿಲನ್ ಪಾತ್ರಗಳಿಗೆ, ರೌಡಿ ಪಾತ್ರಗಳಿಗೆ ಥರಹೇವಾರಿ ಹೆಸರು ಕೊಡ್ತಾರೆ ಸೂರಿ. ಟಗರು ಚಿತ್ರದಲ್ಲೂ ಅದು ಕಂಟಿನ್ಯೂ ಆಗಿದೆ.
ಚಿಟ್ಟೆ ಅನ್ನೋ ರೌಡಿಯ ಪಾತ್ರದಲ್ಲ ವಸಿಷ್ಟ ಸಿಂಹ ನಟಿಸಿದ್ದಾರೆ. ಅದೊಂಥರಾ ಡಿಫರೆಂಟ್ ರೌಡಿಯ ಪಾತ್ರ. ಹಾಡು ಬರೆಯುವ ಭಾವನಾ ಜೀವಿ ರೌಡಿಯ ಪಾತ್ರ ಚಿಟ್ಟೆಯದ್ದು.
ಇನ್ನು ಡಾಲಿಯಾಗಿರೋದು ಧನಂಜಯ್. ಸುಮಾರು ಚಿತ್ರಗಳಲ್ಲಿ ಹೀರೋ ಆಗಿದ್ದ ಧನಂಜಯ್, ಈ ಚಿತ್ರದಲ್ಲಿ ಇಡೀ ಚಿತ್ರದ ಅತ್ಯಂತ ಕೆಟ್ಟ ಖಳನಾಯಕನ ಪಾತ್ರ ಮಾಡಿದ್ದಾರೆ. ಧನಂಜಯ್‍ಗೆ ರಾಟೆ ಮೂಲಕ ಹೀರೋ ಮಾಡಿದ್ದ ಸೂರಿ, ಟಗರು ಮೂಲಕ ವಿಲನ್ ಮಾಡಿರೋದು ವಿಶೇಷ.
ಕಾಕ್ರೋಚ್ ಅನ್ನುವ ಪಾತ್ರ ಡಾಲಿಯ ತಮ್ಮ. ಈ ಪಾತ್ರದಲ್ಲಿ ಹೊಸ ಹುಡುಗ ಸುಧೀರ್ ನಟಿಸಿದ್ದಾರೆ. ಬೇಬಿ ಕೃಷ್ಣ ಆಗಿ ದೇವನಾಥ, ಅಂಕಲ್ ಆಗಿ ಸಚ್ಚು ನಟಿಸಿದ್ದಾರೆ.
ಅಂದಹಾಗೆ ಇವರೆಲ್ಲರೂ ಸಿನಿಮಾದಲ್ಲಿ ಟಗರು ಶಿವ ರಾಜ್‍ಕುಮಾರ್‍ಗೆ ಎದುರಾಗ್ತಾರೆ. ಕ್ರೈಂ ಚೇಸಿಂಗ್ ಶುರುವಾಗುತ್ತೆ. ನಾಳೆಯಿಂದ.