ಈ ಶುಕ್ರವಾರ ಥಿಯೇಟರ್‍ಗಳಲ್ಲಿ ಮತ್ತೊಮ್ಮೆ ಹಬ್ಬ. ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳು. ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಮೂರು ಚಿತ್ರಗಳು ತಮ್ಮದೇ ಆದ ಕಾರಣದಿಂದ ನಿರೀಕ್ಷೆ ಹುಟ್ಟಿಸಿವೆ. ರಾಜರಥ, ದುನಿಯಾ-2 ಹಾಗೂ ಮುಖ್ಯಮಂತ್ರಿ ಕಳೆದೋದ್ನಪ್ಪೋ.. ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
ರಾಜರಥ, ಭಂಡಾರಿ ಬ್ರದರ್ಸ್ ಸಿನಿಮಾ. ರಂಗಿತರಂಗ ನಂತರ ಅದೇ ಜೋಡಿ ಮತ್ತೊಮ್ಮೆ ಒಂದಾಗಿ ತೆರೆಗೆ ತರುತ್ತಿರುವ ಚಿತ್ರ. ಪುನೀತ್ ರಾಜ್‍ಕುಮಾರ್ ಕಂಠ, ಹಿಟ್ ಆಗಿರುವ ಹಾಡು, ನಿರೂಪ್ ಭಂಡಾರಿ-ಆವಂತಿಕಾ ಶೆಟ್ಟಿ-ಅನೂಪ್ ಭಂಡಾರಿ ಕಾಂಬಿನೇಷನ್, ರವಿಶಂಕರ್‍ರ ಹೊಸ ಗೆಟಪ್ಪು.. ರಾಜರಥದಲ್ಲಿ ಇಂತಹ ಹಲವಾರು ವಿಶೇಷಗಳಿವೆ.
ದುನಿಯಾ-2, ಲೂಸ್‍ಮಾದ ಖ್ಯಾತಿಯ ಯೋಗಿ ಅಭಿನಯದ ಸಿನಿಮಾ. ಯೋಗಿ.. ಸ್ಟಾರ್ ಆಗಿದ್ದರೂ, ಅವರನ್ನು ಜನ ಗುರುತಿಸೊದು ಲೂಸ್‍ಮಾದ ಅನ್ನೋ ದುನಿಯಾ ಚಿತ್ರದ ಕ್ಯಾರೆಕ್ಟರ್ ಹೆಸರಿನಲ್ಲಿ. ಈಗ ಅದೇ ಹೆಸರು, ಬೇರೆಯದ್ದೇ ಕಥೆ.. ಯೋಗಿ ಹೀರೋ. ಹಿತಾ ಚಂದ್ರಶೇಖರ್ ನಾಯಕಿ. ದುನಿಯಾ-2 ಚಿತ್ರದ ಮೇಕಿಂಗ್ ಮತ್ತು ಹಾಡುಗಳನ್ನು ನೋಡಿದರೆ, ಇದು ರೆಗ್ಯುಲರ್ ಸಿನಿಮಾದ ಹಾಗಿಲ್ಲ ಎಂಬ ಭಾವನೆ ಮೂಡಿಸುತ್ತಿವೆ.
ಮುಖ್ಯಮಂತ್ರಿ ಕಳೆದೋದ್ನಪ್ಪೋ.. ಚಿತ್ರದ ಟೈಟಲ್ಲೇ ವಿಭಿನ್ನ. ಕಥೆಯೂ ವಿಭಿನ್ನ. ಒಂದು ರಾಜಕೀಯ ವಿಡಂಬನೆ ಸಿನಿಮಾದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ಪುತ್ರ ಬಾಬು ಹಿರಣ್ಣಯ್ಯ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದಾರೆ. ಶಿವಕುಮಾರ್ ಆರ್. ಭದ್ರಯ್ಯ ಚಿತ್ರಕ್ಕೆ ನಿರ್ದೇಶಕ. ಭರತ್ ಭದ್ರಯ್ಯ ಹಾಗೂ ಅಮೂಲ್ಯ ರಾಜ್ ಹೀರೋ-ಹೀರೋಯಿನ್.
ಮುಖ್ಯಮಂತ್ರಿಯೇ ಕಳೆದುಹೋಗ್ತಾರೆ ಅನ್ನೋ ಒನ್‍ಲೈನ್ ಸ್ಟೋರಿ ಸಾಕು, ಸಿನಿಮಾ ಕುತೂಹಲ ಹುಟ್ಟಿಸೋಕೆ.