ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮೊದಲ ಮದುವೆ ನೆರವೇರಿದೆ. ಕ್ರೈಸ್ತ ಸಂಪ್ರದಾಯದಂತೆ ಚಿರು ಮತ್ತು ಮೇಘನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಮೇ 2ರಂದು ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಶಾಸ್ತ್ರೋಕ್ತವಾಗಿ ವಿವಾಹವಾಗಲಿದ್ದಾರೆ.
ಕೋರಮಂಗಲದಲ್ಲಿರುವ ಸೆಂಟ್ ಆಂಥೋನಿ ಫ್ರೈರಿ ಚರ್ಚ್‍ನಲ್ಲಿ ಫಾದರ್ ಪ್ರವೀಣ್ ಕುಮಾರ್, ವಿವಾಹ ವಿಧಿ ನೆರವೇರಿಸಿಕೊಟ್ಟರು. ಕ್ರೈಸ್ತ ಸಂಪ್ರದಾಯದಂತೆ ಮೇಘನಾ ಶ್ವೇತಧಾರಿಣಿಯಾಗಿದ್ದರೆ, ಚಿರು ನೀಲಿ ಸೂಟ್‍ನಲ್ಲಿದ್ದರು. ಉಂಗುರ ಬದಲಾಯಿಸಿಕೊಂಡ ನಂತರ, ವಿವಾಹದ ನೋಂದಣಿಯನ್ನು ಮಾಡಿಕೊಳ್ಳಲಾಯ್ತು. ಬೈಬಲ್ ಮುಟ್ಟಿ ಪ್ರಮಾಣ ಸ್ವೀಕರಿಸಿ, ಉಂಗುರ ಬದಲಾಯಿಸಿ ಕೊಂಡರು.
ಚಿರಂಜೀವಿ ಪರವಾಗಿ ಅರ್ಜುನ್ ಸರ್ಜಾ, ಆಶಾ ರಾಣಿ, ಧ್ರುವ ಸರ್ಜಾ ಸಹಿ ಹಾಕಿದರೆ, ಮೇಘನಾ ಅವರ ಪರವಾಗಿ ಸಂತೋಷ್ ಕೋಷಿ, ಸೋಫಿಯಾ ಕೋಷಿ ಸಹಿ ಹಾಕಿದರು. ಕಲಾವಿದರಾದ ತಾರಾ, ಪ್ರಜ್ವಲ್ ದೇವರಾಜ್ ನವವಧುವರರಿಗೆ ಶುಭ ಹಾರೈಸಿದ್ರು.
ಮೇಘನಾ ಅವರ ತಾಯಿ ಪ್ರಮೀಳಾ ಜೋಷಾಯ್ ಕ್ಯಾಥೊಲಿಕ್ ಕ್ರೈಸ್ತರಾಗಿದ್ದರೆ, ಸುಂದರ್ ರಾಜ್ ಅಯ್ಯಂಗಾರ್ ಬ್ರಾಹ್ಮಣರು. ಮೇ 2ರಂದು ಅಯ್ಯಂಗಾರ್ ಸಂಪ್ರದಾಯದಂತೆ ಶಾಸ್ತ್ರೋಕ್ರವಾಗಿ ಮದುವೆ ನಡೆಯಲಿದೆ.