` tamil actor vijay - chitraloka.com | Kannada Movie News, Reviews | Image

tamil actor vijay

 • ಬಂದು ಹೋಗ್ತಾ ಇರಿ - ಸ್ಯಾಂಡಲ್​ವುಡ್ ಸ್ಟಾರ್​ಗಳಿಗೆ ಟಾಲಿವುಡ್​ನ ವಿಶಾಲ್ ಆಹ್ವಾನ

  lets unite says vishal

  ನಾವೂ ಬರ್ತಾ ಇರ್ತೀವಿ. ನೀವೂ ಬರ್ತಾ ಹೋಗ್ತಾ ಇರಬೇಕು. ನೆಂಟರ ಮನೆಗೆ ಹೋದವರು ಹೇಳೋ ಮಾತದು. ತಮಿಳು ನಟ ವಿಶಾಲ್, ಇತ್ತೀಚಿಗೆ ಕನ್ನಡದ ಸ್ಟಾರ್​ಗಳಿಗೆ ಅಂಥಾದ್ದೊಂದು ಆಹ್ವಾನ ಕೊಟ್ಟು ಹೋಗಿದ್ದಾರೆ.

  ರಘುವೀರ್ ಅನ್ನೋ ಚಿತ್ರದ ಆಡಿಯೋ ಬಿಡುಗಡೆಗೆ ಬೆಂಗಳೂರಿಗೆ ಆಗಮಿಸಿದ್ದ ನಟ ವಿಶಾಲ್, ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷರೂ ಹೌದು. ನಾನು ಈಗ ಕನ್ನಡ ಸಿನಿಮಾ ಆಡಿಯೋ ಬಿಡುಗಡೆಗೆ ಬಂದಿದ್ದೇನೆ. ಅದೇ ರೀತಿ ತಮಿಳು ಚಿತ್ರಗಳ ಆಡಿಯೋ ಬಿಡುಗಡೆಗೆ ಪುನೀತ್, ಶಿವಣ್ಣ, ಸುದೀಪ್ ಕೂಡಾ ಬರಬೇಕು ಎಂದರು.

  ಅದು ನಿಜವೂ ಹೌದು. ಕಲಾವಿದರಿಗೆ ಭಾಷೆಯ ಹಂಗಿಲ್ಲ. ಏನೇ ಬಾಂಧವ್ಯವಿದ್ದರೂ, ಕಾವೇರಿ ವಿವಾದ ಭುಗಿಲೆದ್ದುಬಿಟ್ಟರೆ, ತಮಿಳು ಮತ್ತು ಕನ್ನಡ ಚಿತ್ರದ ಸ್ಟಾರ್​ಗಳು ಭಾರತ - ಪಾಕಿಸ್ತಾನದವರಂತೆ ಇರಬೇಕಾಗುತ್ತೆ.  ಅಂಥಾದ್ದೊಂದು ವೈರತ್ವ ಹೋಗಬೇಕು ಎಂದರೆ, ಹೋಗಿ ಬಂದು ಮಾಡ್ತಾ ಇರಬೇಕು ಅನ್ನೋ ಹಳೆಯ ಸಂಪ್ರದಾಯವನ್ನ ಪಾಲಿಸಬೇಕು. ಅಷ್ಟೆ. 

  ಅದು ಸಾಧ್ಯವಾಗುತ್ತೋ ಇಲ್ಲವೋ ಬೇರೆ ಮಾತು. ಏಕೆಂದರೆ, ಈಗ ಕಾವೇರಿ ವಿವಾದ ತಣ್ಣಗಿದೆ. ಆದರೆ, ಬಾಂಧವ್ಯ ಚೆನ್ನಾಗಿಟ್ಟುಕೊಳ್ಳಬೇಕೆಂಬ ಮನಸ್ಥಿತಿ ಎಲ್ಲರಿಗೂ ಬಂದರೆ, ಒಳ್ಳೆಯದೇ ಅಲ್ವಾ..?

 • S Narayan to Distribute Puli in Karnataka

  puli image

  Director S Narayan has picked up the rights of Tamil film Puli for distribution in Karnataka. The film is scheduled for release on September 17. There was speculation that Narayan was trying to get the rights for the last few months.

  Now it is confirmed that Narayan has bagged the rights. Narayan has an association with Tamil industry having directed Jai some years ago. Kannada star Sudeep has played the antagonist role in the film and it is one of the biggest films coming out of the Tamil industry this year. The fantasy film is being touted as an answer to Telugu Baahubali. Interestingly both these films are being distributed in Karnataka by Kannada industry people. 

 • ರಶ್ಮಿಕಾ ಮಂದಣ್ಣಗೆ ಮೆಗಾ ಬಂಪರ್..!

  will rashmika act in vijay's next film ?

  ರಶ್ಮಿಕಾ ಮಂದಣ್ಣ ಸದ್ಯಕ್ಕೆ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಪುನೀತ್ ರಾಜ್‍ಕುಮಾರ್, ಗಣೇಶ್ ಜೊತೆ ಹಿಟ್ ಸಿನಿಮಾ ನೀಡಿರುವ ರಶ್ಮಿಕಾ, ದರ್ಶನ್ ಮತ್ತು ಧ್ರುವ ಸರ್ಜಾ ಜೊತೆ ನಟಿಸುತ್ತಿದ್ದಾರೆ. ಅತ್ತ ತೆಲುಗಿನಲ್ಲಿ ವಿಜಯ್ ದೇವರಕೊಂಡ, ಅಲ್ಲು ಸುರೇಶ್, ನಾನಿ ಜೊತೆ ಹಿಟ್ ನೀಡಿದ್ದಾರೆ. ಈಗ ತಮಿಳಿಗೂ ಹಾರುತ್ತಿದ್ದಾರೆ.

  ತಮಿಳಿನಲ್ಲಿ ವಿಜಯ್ ಅಭಿನಯದ ಹೊಸ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಅನ್ನೋ ಸುದ್ದಿ ಜೋರಾಗಿದೆ. ಇನ್ನೂ ಕನ್‍ಫರ್ಮ್ ಆಗಿಲ್ಲ ಎನ್ನುತ್ತಿದ್ದಾರೆ ರಶ್ಮಿಕಾ. ಅದು ವಿಜಯ್ ಮತ್ತು ನಿರ್ದೇಶಕ ಅಟ್ಲೀಕುಮಾರ್ ಕಾಂಬಿನೇಷನ್‍ನ ಸಿನಿಮಾ. ಥೆರಿ ಮತ್ತು ಮರ್ಸೆಲ್ ಎಂಬ ಎರಡು ಹಿಟ್ ನೀಡಿರುವ ಜೋಡಿ, 3ನೇ ಬಾರಿಗೆ ಒಂದಾಗುತ್ತಿದೆ. ಆ ಸಿನಿಮಾಗೆ ರಶ್ಮಿಕಾ ನಾಯಕಿ ಎನ್ನಲಾಗಿದ್ದು, ಮಾತುಕತೆಗಳು ಫೈನಲ್ ಹಂತದಲ್ಲಿವೆ.

 • ವಿಜಯ್‍ಗೆ ಶ್ರದ್ಧಾ ಹೀರೋಯಿನ್?

  is shraddha heroine for tamil's vijay

  ಯುಟರ್ನ್ ಹಾಗೂ ಆಪರೇಷನ್ ಅಲಮೇಲಮ್ಮ ಚಿತ್ರಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದ ಹುಡುಗಿ ಶ್ರದ್ಧಾ ಶ್ರೀನಾಥ್. ತಮಿಳಿನಲ್ಲಿ `ವಿಕ್ರಂವೇದ' ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದ ಶ್ರದ್ಧಾಗೆ ಈಗ ಮತ್ತೊಂದು ಅದೃಷ್ಟ ಖುಲಾಯಿಸಿದ ಹಾಗಿದೆ.

  ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಮುಂದಿನ ಚಿತ್ರಕ್ಕೆ ಶ್ರದ್ಧಾ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಈಗಾಗಲೇ  ಕರುಣಾನಿಧಿ ಮೊಮ್ಮಗ ಉದಯನಿಧಿ ಸ್ಟಾಲಿನ್ ಚಿತ್ರದಲ್ಲಿ ನಟಿಸುತ್ತಿರುವ ಶ್ರದ್ಧಾ, ವಿಜಯ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಅನ್ನೋದು ಸುದ್ದಿ.

  ಹೌದೇನ್ರೀ ಅಂಥಾ ಕೇಳಿದ್ರೆ, ರೂಮರ್ ನಿಜವಾದರೆ ನನಗೂ ಖುಷಿಯಾಗುತ್ತೆ. ಸದ್ಯಕ್ಕಂತೂ ಅಂಥಾ ಸುದ್ದಿಯಿಲ್ಲ ಅಂತಾರೆ ಶ್ರದ್ಧಾ. ತಮಿಳು ಪ್ರಾಜೆಕ್ಟ್‍ಗಳ ವಿಚಾರದಲ್ಲಿ ಶ್ರದ್ಧಾ ತುಂಬಾನೇ ಸೀಕ್ರೆಟ್ ಮೈಂಟೇನ್ ಮಾಡುತ್ತಾರೆ ಎನ್ನುವುದಂತೂ ನಿಜ.

Geetha Movie Gallery

Ombattane Dikku Launch Meet Gallery