` rajinikanth - chitraloka.com | Kannada Movie News, Reviews | Image

rajinikanth

 • ರಜನಿಕಾಂತ್`ಗೆ ಹೃದಯ ಸಮಸ್ಯೆಯೇ..?

  ರಜನಿಕಾಂತ್`ಗೆ ಹೃದಯ ಸಮಸ್ಯೆಯೇ..?

  ರಜನಿಕಾಂತ್ ವಿಶೇಷ ಅನುಮತಿ ಪಡೆದು ಅಮೆರಿಕಾಕ್ಕೆ ತೆರಳಿದ್ದಾರೆ. ಅಮೆರಿಕದ ಮೆಯೋ ಕ್ಲಿನಿಕ್`ಗೆ ಹೋಗಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ರಜನಿಕಾಂತ್ ಅವರು ಕೇಂದ್ರ ಸರ್ಕಾರದ ಸ್ಪೆಷಲ್ ಪರ್ಮಿಷನ್ ತೆಗೆದುಕೊಂಡು ಕುಟುಂಬದವರೊಂದಿಗೆ ಹೋಗಿದ್ದಾರೆ. ಮೆಯೋ ಕ್ಲಿನಿಕ್ ಹೃದಯ ಸಂಬಂಧಿ ಚಿಕಿತ್ಸೆಗಳಿಗೆ ಹೆಸರುವಾಸಿಯಾಗಿರುವುದೇ ರಜನಿಕಾಂತ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂಬ ಅನುಮಾನಕ್ಕೆ ಕಾರಣ.

  ಈ ಕುರಿತು ತಮಿಳು ಕಿರುತೆರೆ ಕಲಾವಿದೆ ಕಸ್ತೂರಿ ಶಂಕರ್ ಧ್ವನಿಯೆತ್ತಿದ್ದಾರೆ. ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ನಮಗೆ ಮಾಹಿತಿ ನೀಡಿ. ನಾನೇನು ರಜನಿಕಾಂತ್ ಅವರ ದ್ವೇಷಿಯಲ್ಲ. ಆದರೆ, ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ನನ್ನ ಕಳಕಳಿ ಅಷ್ಟೆ. ದಯವಿಟ್ಟು ರಜನಿ ಅಭಿಮಾನಿಗಳು ಈ ಬಗ್ಗೆ ಬೇಸರ ಮಾಡಿಕೊಳ್ಳಬಾರದು ಎಂದಿದ್ದಾರೆ ಕಸ್ತೂರಿ ಶಂಕರ್.

  ರಜನಿ ಅವರಿಗೆ ಭಾರತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದಿಲ್ಲವೇ? ಜಯಲಲಿತಾ ವಿಚಾರದಲ್ಲಿಯೂ ಹೀಗೆಯೇ ಆಯಿತು. ಅವರಿಗೆ ಏನಾಗಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲೇ ಇಲ್ಲ ಎಂದಿದ್ದಾರೆ ಕಸ್ತೂರಿ ಶಂಕರ್.

 • ರಜನಿಗೆ 51ನೇ ದಾದಾ ಸಾಹೇಬ್ : ಅಣ್ಣ ಮತ್ತು ಬಹದ್ದೂರ್‍ಗೆ ಅರ್ಪಣೆ

  ರಜನಿಗೆ 51ನೇ ದಾದಾ ಸಾಹೇಬ್ : ಅಣ್ಣ ಮತ್ತು ಬಹದ್ದೂರ್‍ಗೆ ಅರ್ಪಣೆ

  ಸೂಪರ್ ಸ್ಟಾರ್ ರಜನಿಕಾಂತ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗೆ ಪಾತ್ರರಾದ ತಮಿಳು ಚಿತ್ರರಂಗದ 3ನೇ ವ್ಯಕ್ತಿ ರಜನಿಕಾಂತ್. ಒಟ್ಟಾರೆ ಈ ಪ್ರಶಸ್ತಿಗೆ ಪಾತ್ರರಾದ 51ನೇ ಕಲಾವಿದ ರಜನಿ. ಪ್ರಧಾನಿ ಮೋದಿ ಸೇರಿದಂತೆ ದೇಶದ ಕೋಟಿ ಕೋಟಿ ಅಭಿಮಾನಿಗಳು ರಜನಿಕಾಂತ್‍ಗೆ ಪ್ರಶಸ್ತಿ ಸಿಕ್ಕಿದ್ದನ್ನು ಸಂಭ್ರಮಿಸಿದ್ದಾರೆ. ಆದರೆ, ರಜನಿ ಈ ಪುರಸ್ಕಾರವನ್ನು ಅರ್ಪಿಸಿರುವುದು ಯಾರಿಗೆ ಗೊತ್ತಾ..?

  ತಮ್ಮ ಜೀವದ ಗೆಳೆಯ ರಾವ್ ಬಹದ್ದೂರ್ ಅವರಿಗೆ. ರಜನಿಕಾಂತ್ ಕಂಡಕ್ಟರ್ ಆಗಿದ್ದ ಕಥೆ ಗೊತ್ತಲ್ಲ.. ಆ ಬಸ್ಸಿಗೆ ಡ್ರೈವರ್ ಆಗಿದ್ದವರು ಇದೇ ರಾವ್ ಬಹದ್ದೂರ್. ಬೆಂಗಳೂರಿಗೆ ಬಂದರೆ ಈಗಲೂ ಮಿಸ್ ಮಾಡದೆ ಹೋಗುವ ಮನೆ ರಾವ್ ಬಹದ್ದೂರ್ ಅವರದ್ದೇ. ರಜನಿ ನಟನಾಗಲು ಸಹಾಯ, ಸಹಕಾರ ನೀಡಿದವರು.

  ಬಿಎಂಟಿಸಿ ಬಸ್ ಡ್ರೈವರ್ ರಾವ್ ಬಹದ್ದೂರ್, ಕಂಡಕ್ಟರ್ ಆಗಿದ್ದ ನನ್ನ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿದರು. ನನ್ನ ಅಣ್ಣ ಸತ್ಯನಾರಾಯಣ ರಾವ್, ನನ್ನನ್ನು ನಟನನ್ನಾಗಿ ಮಾಡಲು ಮಾಡಿದ ತ್ಯಾಗಗಳು ಒಂದೆರಡಲ್ಲ. ನನ್ನನ್ನು ಸಿನಿಮಾಗೆ ಪರಿಚಯಿಸಿದ ಗುರು ಕೆ.ಬಾಲಚಂದರ್ ಅವರಿಗೆ ಮತ್ತು ನನ್ನ ಚಿತ್ರದ ಎಲ್ಲ ನಿರ್ದೇಶಕರು, ತಂತ್ರಜ್ಞರು, ಸಹಕಲಾವಿದರು, ನಿರ್ಮಾಪಕರಿಗೆ ಈ ಪ್ರಶಸ್ತಿ ಅರ್ಪಿಸುತ್ತಿದ್ದೇನೆ ಎಂದಿದ್ದಾರೆ ರಜನಿ.

 • ರಜನಿಗೆ ಓಪನ್ ಚಾಲೆಂಜ್ ಮಾಡಿ ಶಾಕ್ ಕೊಟ್ಟ ರಾಕರ್ಸ್

  rajinikanth shocked by tamil rockers

  ಎಲ್ಲ ದೇಶಗಳ, ಎಲ್ಲ ಭಾಷೆಗಳ ಚಿತ್ರಗಳಿಗೂ ಕಾಡುತ್ತಿರುವ ಅತಿದೊಡ್ಡ ಭೂತ ಪೈರಸಿ. ರಜನಿಕಾಂತ್ ಸಿನಿಮಾಗಳನ್ನೂ ಅದು ಬಿಟ್ಟಿಲ್ಲ. ಅದರಲ್ಲೂ ಈ ಬಾರಿ ಓಪನ್ ಚಾಲೆಂಜ್ ಮಾಡಿ ಗೆದ್ದಿದ್ದಾರೆ ಪೈರಸಿ ಕಿರಾತರಕು.

  ತಮಿಳ್ ರಾಕರ್ಸ್ ಎಂಬ ವೆಬ್‍ಸೈಟ್‍ನವರು ರಜನಿಕಾಂತ್‍ಗೆ ಓಪನ್ ಚಾಲೆಂಜ್ ಮಾಡಿದ್ದರು. ನೀವು ಅದ್ಯಾವುದೇ ಸೆಕ್ಯುರಿಟಿ ತೆಗೆದುಕೊಳ್ಳಿ, ಅದೆಂಥದ್ದೇ ಟೆಕ್ನಾಲಜಿ ಅಳವಡಿಸಿಕೊಳ್ಳಿ.. ನಿಮ್ಮ ಸಿನಿಮಾ ರಿಲೀಸ್ ಆದ 24 ಗಂಟೆಯೊಳಗೆ ನಾವು ಪೈರಸಿ ಬಿಡುತ್ತೇವೆ ಎಂಬ ಚಾಲೆಂಜ್ ಮಾಡಿದ್ದರು. ತಮಿಳ್ ರಾಕರ್ಸ್ ಅಟ್ಟಹಾಸವನ್ನು ಅರಿತಿದ್ದ ಚಿತ್ರತಂಡ, ತಕ್ಷಣ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತು. ಇಡೀ ಪ್ರಕರಣವನ್ನು ವಿವರಿಸಿತ್ತು. ಮದ್ರಾಸ್ ಹೈಕೋರ್ಟ್ ತಮಿಳ್ ರಾಕರ್ಸ್‍ನ 2000 ವೆಬ್‍ಸೈಟ್‍ಗಳೂ ಸೇರಿದಂತೆ, ಒಟ್ಟು 12,564 ವೆಬ್‍ಸೈಟ್‍ಗಳನ್ನು ಬ್ಲಾಕ್ ಮಾಡಿಸಿತ್ತು. ಇದೆಲ್ಲವನ್ನೂ ದಾಟಿ ತಮಿಳ್ ರಾಕರ್ಸ್ 2.0 ಚಿತ್ರದ ಪೈರಸಿ ಬಿಟ್ಟಿದ್ದಾರೆ. ರಜನಿ ಸೋತಿದ್ದಾರೆ.

 • ರಜನಿಗೆ.. ಮಗನೇ.. ಮನೆಗ್ ಬರ್ಲಿಲ್ಲ ಅಂದ್ರೆ ಸಾಯ್ಸಿಬಿಡ್ತೀನಿ ಅಂದಿದ್ರು

  rajinikanth and ambareesh's friendship

  ರಜನಿಕಾಂತ್ ಮತ್ತು ಅಂಬರೀಷ್ ಆಪ್ತಮಿತ್ರರು. ಹೋಗೋ.. ಬಾರೋ ಫ್ರೆಂಡ್ಶಿಪ್. ಏಕವಚನದಲ್ಲಿಯೇ ಮಾತನಾಡಿಕೊಳ್ಳುತ್ತಿದ್ದವರು. ರಜನಿಯ ಕಷ್ಟದ ದಿನಗಳಲ್ಲಿ ಎಂದಿನಂತೆ ನೆರವಿನ ಹಸ್ತ ಚಾಚಿದ್ದವರು ಅಂಬಿ. ಹೆಗಲಾಗಿ ನಿಂತಿದ್ದವರು. ರಜನಿ ಕೂಡಾ ಅಷ್ಟೆ.. ಸೂಪರ್ಸ್ಟಾರ್ ಆಗಿದ್ದರೂ, ಅಂಬಿಯ ಎದುರು ಫ್ರೆಂಡ್.. ಅಷ್ಟೆ.

  ಇಂತಹ ರಜನಿಕಾಂತ್ ಬೆಂಗಳೂರಿಗೆ ಬಂದಾಗಲೆಲ್ಲ ಅಂಬಿ ಮನೆಗೆ ಬರಲೇಬೇಕಿತ್ತು.ಒಂದು ದಿನವಾದರೂ ಅವರ ಮನೆಯಲ್ಲಿ ಊಟ ಮಾಡಲೇಬೇಕಿತ್ತು. ಹೀಗಿದ್ದರೂ.. ಕಳೆದ ವರ್ಷ ರಜನಿ ಬೆಂಗಳೂರಿಗೆ ನಾಲ್ಕಾರು ಬಂದು ಹೋದರೂ ಅಂಬಿ ಮನೆಗೆ ಹೋಗೋಕೆ ಆಗಿರಲಿಲ್ಲ. ತರಾತುರಿಯಲ್ಲಿ ಬಂದು ಹೋಗಿದ್ದ ರಜನಿಗೆ ಅಂಬಿ ವಾರ್ನಿಂಗ್ ಮಾಡಿದ್ದರು.

  ಮಗನೇ.. ಈ ಸಾರಿ ಬೆಂಗಳೂರಿಗೆ ಬಂದಾಗ ಮನೆಗೆ ಬರ್ಲಿಲ್ಲ ಅಂದ್ರೆ, ಸಾಯಿಸಿಬಿಡ್ತೀನಿ ಎಂದು ಎಚ್ಚರಿಕೆ ಕೊಟ್ಟು ಸಂಸ್ಕೃತದಲ್ಲಿ ಬೈದಿದ್ದರು. ಅದೆಲ್ಲವನ್ನೂ ನೆನಪಿಸಿಕೊಂಡು ಗೆಳೆಯನ ಪಾರ್ಥಿವ ಶರೀರದ ಎದುರು ಕಣ್ಣೀರಾದರು ರಜನಿಕಾಂತ್.