` chiranjeevi sarja, - chitraloka.com | Kannada Movie News, Reviews | Image

chiranjeevi sarja,

 • ನಾಯಕಿ ನಾನೇ.. ಖಳನಾಯಕಿ ನಾನೇ..

  samhara heroine and villain is haripriya

  ಸಂಹಾರ ಚಿತ್ರದ ನಾಯಕಿ ಯಾರು..? ಹರಿಪ್ರಿಯಾ. ಖಳನಾಯಕಿ ಯಾರು..? ಹರಿಪ್ರಿಯಾ. ಎರಡೂ ಹೇಗೆ ಸಾಧ್ಯ..? ಸಿನಿಮಾ ನೋಡಿ. ನಿಮಗೇ ಗೊತ್ತಾಗುತ್ತೆ. ಇದು ಹರಿಪ್ರಿಯಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿರೋ ಮಾತು.

  ಸಿನಿಮಾದಲ್ಲಿ ಹರಿಪ್ರಿಯಾ ಅವರು ಎರಡು ಶೇಡ್‍ಗಳಲ್ಲಿ ಕಾಣಿಸಿಕೊಳ್ತಾರಂತೆ. ಮೊದಲರ್ಧದಲ್ಲಿ ಎಷ್ಟು ಕ್ಯೂಟ್ ಪಾತ್ರವೆಂದರೆ, ಸಿಕ್ಕರೆ ಇಂಥಾ ಹುಡುಗಿ ನಮಗೂ ಸಿಗಬೇಕು ಎನ್ನಿಸುವಷ್ಟು ಒಳ್ಳೆಯ ಹುಡುಗಿ. ಮಧ್ಯಂತರದ ನಂತರ ಕಥೆಯೇ ಉಲ್ಟಾ. ಅಕ್ಷರಶಃ ರಾಕ್ಷಸಿ.

  ಮಾಮೂಲಿ ಪಾತ್ರಗಳಿಗಿಂತ ಇದು ಎಷ್ಟು ಡಿಫರೆಂಟ್ ಎಂದರೆ, ಕಥೆ ಮತ್ತು ಪಾತ್ರ ಕೇಳಿದ ತಕ್ಷಣ ಒಪ್ಪಿಕೊಂಡುಬಿಟ್ಟೆ. ಇದು ರೆಗ್ಯುಲರ್ ಹೀರೋಯಿನ್ ಪಾತ್ರಗಳಿಗಿಂತ ಕಂಪ್ಲೀಟ್ ಡಿಫರೆಂಟ್ ಅನ್ನೋದು ಹರಿಪ್ರಿಯಾ ನುಡಿ.

  ನೀರ್‍ದೋಸೆ ನಂತರ ಬೇರೆಯೇ ಇಮೇಜ್ ಪಡೆದುಕೊಂಡಿದ್ದ ಹರಿಪ್ರಿಯಾ, ಈಗ ಸಂಹಾರ ನಂತರ ಆ ಇಮೇಜ್ ಮತ್ತೊಂದು ಮಗ್ಗುಲು ಬದಲಿಸುವ ಸಾಧ್ಯತೆಯ ನಿರೀಕ್ಷೆಯಲ್ಲಿದ್ದಾರೆ.

   

   

 • ನಿಗೂಢ ಸಂಹಾರ.. ವಿಭಿನ್ನತೆಯ ಸಂಚಾರ

  samhara is a suspense thriller

  ಚಿರಂಜೀವಿ ಸರ್ಜಾ ಹಾಗೂ ಹರಿಪ್ರಿಯಾ ಅಭಿನಯದ ಸಂಹಾರದ ಕಥೆ ಏನು..? ಅದು ನಿಗೂಢ. ಗುರುದೇಶಪಾಂಡೆ ಚಿತ್ರದ ಕಥೆಯ ಎಳೆಯನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಆದರೆ, ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಕಣ್ಣು ಕಾಣದ ಕುರುಡ. ಅಂಧ. ಹಾಗೆಯೇ ಅಡುಗೆ ಭಟ್ಟ. ಇದು ಹೇಗೆ ಸಾಧ್ಯ ಎನ್ನುವವರಿಗೆ ಚಿತ್ರದಲ್ಲಿಯೇ ಉತ್ತರ ಸಿಗುತ್ತೆ.

  ನಾಯಕಿಯಾಗಿರೋದು ಹರಿಪ್ರಿಯಾ. ಅವರು ಇಲ್ಲಿ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೆಗೆಟಿವ್ ರೋಲ್ ಇರಬಹುದಾ ಅಥವಾ ಫ್ಯಾಮಿಲಿ ಓರಿಯೆಂಟೆಡ್ ಪಾತ್ರವಾ..? ಅದು ಸೀಕ್ರೆಟ್.

  ಇನ್ನು ಕಾವ್ಯಾಶೆಟ್ಟಿ, ಈ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರ. ಹಿಂದಿನ ಚಿತ್ರದಲ್ಲಿ ಟಿವಿ ಚಾನೆಲ್ ಮಾಲಕಿಯಾಗಿದ್ದ ಕಾವ್ಯಾಶೆಟ್ಟಿ, ಈ ಚಿತ್ರದಲ್ಲಿ ರಿಪೋರ್ಟರ್. 

  ನಟ ಚಿಕ್ಕಣ್ಣ ಅವರದ್ದು ರಾಜಾಹುಲಿ ಸ್ಟೈಲ್‍ನ ಇನ್ಸ್‍ಪೆಕ್ಟರ್ ಪಾತ್ರ. ಅದು ಸೇಡಿನ ಕಥೆಯಾ..? ಗೊತ್ತಿಲ್ಲ. ಸಸ್ಪೆನ್ಸ್ ಕಾಯ್ದಿಟ್ಟಿರುವ ಗುರುದೇಶಪಾಂಡೆ, ಸಂಪೂರ್ಣ ಕುತೂಹಲ ತಣಿಸುವುದು ಈ ವಾರದ ಕೊನೆಯಲ್ಲಿ. 

   

   

 • ನಿರ್ದೇಶಕರ ಅನುಭವವೇ ಸಿನಿಮಾ ಸೀಜರ್

  ravichandra, chiru sarja, parul yadav in seizer

  ಅದು 2010ನೇ ಇಸವಿ. ಆಗ ವಿನಯ್ ಕೃಷ್ಣ ಅವರ ವಾಹನವನ್ನು ಸೀಜ್ ಮಾಡಲಾಗಿತ್ತು. ಆ ದಿನ ತಮ್ಮ ವಾಹವನ್ನು ಬಿಡಿಸಿಕೊಳ್ಳೋಕೆ ಪರದಾಡಿದ್ದರು ವಿನಯ್‍ಕೃಷ್ಣ. ಈ ವಿನಯ್ ಕೃಷ್ಣ ಬೇರ್ಯಾರೋ ಅಲ್ಲ, ಸೀಜರ್ ಚಿತ್ರದ ನಿರ್ದೇಶಕ.

  ಅಂದಿನ ಆ ಅನುಭವವನ್ನು ಸಿನಿಮಾ ಮಾಡಬೇಕು ಎಂದು ಆ ದಿನವೇ ನಿರ್ಧರಿಸಿದ್ದರಂತೆ ವಿನಯ್‍ಕೃಷ್ಣ. ಆಗ ಅವರು ಖ್ಯಾತ ನಿರ್ದೇಶಕರೊಬ್ಬರ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. 2010ರಲ್ಲಿ ಬಿತ್ತಿದ್ದ ಕನಸಿನ ಬೀಜ, ಹೆಮ್ಮರವಾಗಿ ಈಗ ಸಿನಿಮಾ ರೂಪದಲ್ಲಿ ನಿಂತಿದೆ.

  ಚಿತ್ರ ನಿಧಾನವಾಯಿತು ಎಂಬುದನ್ನು ಒಪ್ಪುವ ವಿನಯ್‍ಕೃಷ್ಣ, ಚಿತ್ರದ ಕ್ವಾಲಿಟಿ ನೋಡಿದಾಗ.. ಇಷ್ಟು ದಿನ ಕಾಯ್ದಿದ್ದಕ್ಕೂ ಸಾರ್ಥಕವಾಯಿತು ಎಂದೆನಿಸುತ್ತೆ ಅಂತಾರೆ. ಇಷ್ಟು ಟೈಮ್ ಕೊಟ್ಟ ನಿರ್ಮಾಪಕ ತ್ರಿವಿಕ್ರಮ್‍ಗೆ ಕೃತಜ್ಞತೆ ಹೇಳೋಕೆ ಮರೆಯೋದಿಲ್ಲ. ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

 • ಪ್ರೇಕ್ಷಕರಿಗಷ್ಟೇ ಅಲ್ಲ, ಸ್ಟಾರ್‍ಗಳಿಗೆಲ್ಲ ಮೆಚ್ಚಿದ ಅಮ್ಮ ಐ ಲವ್ ಯು

  amma i love you impresses stars and celebs

  ಅಮ್ಮ ಐ ಲವ್ ಯೂ. ಕನ್ನಡದಲ್ಲಿ ಬಹುದಿನಗಳ ನಂತರ ಬಂದಿರುವ ತಾಯಿಮಗನ ಸೆಂಟಿಮೆಂಟ್ ಕಥೆ. ಮಕ್ಕಳಿಗಾಗಿ ತ್ಯಾಗ ಮಾಡೋ ತಾಯಿಯ ಕಥೆ, ಹೊಸದೇನಲ್ಲ. ಆದರೆ, ಇದು ತಾಯಿಗಾಗಿ ಮಗನೊಬ್ಬ ತ್ಯಾಗ ಮಾಡುವ ಕಥೆ. ಚಿತ್ರದ ಸೆಂಟಿಮೆಂಟ್ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಸಿನಿಮಾ ನೋಡಿದವರು ತಾಯಿಯನ್ನು ಖಂಡಿತಾ ನೆನಪಿಸಿಕೊಳ್ಳುತ್ತಾರೆ. ತಾಯಿ ಇಲ್ಲದವರು ನೆನಪಿಸಿಕೊಂಡು ಕಣ್ಣೀರಾಗುತ್ತಾರೆ.

  ಈ ಸಿನಿಮಾವನ್ನು ಬಹುತೇಕ ಚಿತ್ರರಂಗದ ತಾರೆಗಳೆಲ್ಲ ಮೆಚ್ಚಿ ದಯವಿಟ್ಟು ಸಿನಿಮಾ ನೋಡಿ ಎನ್ನುತ್ತಿರುವುದು ವಿಶೇಷ. ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದ ಶಿವರಾಜ್‍ಕುಮಾರ್, ಧ್ರುವ ಸರ್ಜಾ.. ಚಿತ್ರವನ್ನು ವೇದಿಕೆಯಲ್ಲೇ ಮೆಚ್ಚಿದ್ದರು. ಕಿಚ್ಚ ಸುದೀಪ್, ವಿದೇಶದಲ್ಲಿದ್ದರೂ, ಚಿತ್ರದ ಬಗ್ಗೆ ಕೇಳಿದ್ದ  ವಿಮರ್ಶೆಗಳನ್ನು ನೋಡಿ, ಖುಷಿಯಾಗಿ ಸಿನಿಮಾ ನೋಡಿ ಎಂದಿದ್ದರು. ಈಗ ರಾಕಿಂಗ್ ಸ್ಟಾರ್ ಯಶ್, ಸಿನಿಮಾವನ್ನು ನೋಡಿ.. ಪ್ರತಿಯೊಬ್ಬರೂ ಈ ಸಿನಿಮಾ ನೋಡಲೇಬೇಕು ಎನ್ನುತ್ತಿದ್ದಾರೆ. 

  ನಟಿ ರಕ್ಷಿತಾ ಪ್ರೇಮ್, ಮೇಘನಾ ರಾಜ್ ಸೇರಿದಂತೆ ಹಲವರು ಚಿತ್ರವನ್ನು ನೋಡಿ ಮೆಚ್ಚಿ ಹೊಗಳುತ್ತಿದ್ದಾರೆ. ಚಿತ್ರವನ್ನು ನೋಡಿದ ಪ್ರೇಕ್ಷಕರೂ ಕೂಡಾ ಇಂಥಾ ಸಿನಿಮಾ ನಿರ್ಮಿಸಿದ ಯೋಗಿ ದ್ವಾರಕೀಶ್ ಅವರನ್ನು ಅಭಿನಂದಿಸುತ್ತಿರುವುದು ವಿಶೇಷ.

  ಚಿರಂಜೀವಿ ಸರ್ಜಾ, ನಿಶ್ವಿಕಾ ನಾಯ್ಡು, ಸಿತಾರಾ, ಚಿಕ್ಕಣ್ಣ, ಪ್ರಕಾಶ್ ಬೆಳವಾಡಿ ಪ್ರಮುಖ ತಾರಾಗಣದಲ್ಲಿರುವ ಸಿನಿಮಾಗೆ, ಗುರುಕಿರಣ್ ಸಂಗೀತವಿದೆ. ಅಮ್ಮಾ.. ನನ್ನ ಈ ಜನುಮ ಹಾಡು.. ಪ್ರೇಕ್ಷಕರ ಕಣ್ಣಂಚು ಒದ್ದೆ ಮಾಡುವಂತಿದೆ. ನಿರ್ದೇಶಕ ಚೈತನ್ಯ ಮತ್ತೊಮ್ಮೆ ಗೆದ್ದಿದ್ದಾರೆ.

 • ಮೇ 2ಕ್ಕೆ ಚಿರು-ಮೇಘನಾ ಮದುವೆ

  meghana raj chiu sarja on may 2nd

  ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ವಿವಾಹಕ್ಕೆ ಮೇ2ನೇ ತಾರೀಕು ಮುಹೂರ್ತ ಫಿಕ್ಸ್ ಆಗಿದೆ. ಆ ದಿನ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮೈದಾನದಲ್ಲಿ ಚಿರು-ಮೇಘನಾ ಸತಿಪತಿಗಳಾಗುತ್ತಿದ್ದಾರೆ.

  ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಮದುವೆಗೆ ವೇದಿಕೆ ಸಿದ್ಧಗೊಳ್ಳಲಿದೆ. ಅದೇ ದಿನ ಸಂಜೆ 7 ಗಂಟೆಗೆ ಆರತಕ್ಷತೆ.

  ಈಗಾಗಲೇ ಎರಡೂ ಕುಟುಂಬಗಳು ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿ. ಸರ್ಜಾ ಕುಟುಂಬ ಹಾಗೂ ಸುಂದರ್‍ರಾಜ್.. ಎರಡೂ ಕುಟುಂಬಗಳು ಬಣ್ಣದಲೋಕದ ನಂಟು ಹೊಂದಿವೆ. ಹೀಗಾಗಿ ಮೇ 2ನೇ ತಾರೀಕು, ಅರಮನೆ ಮೈದಾನದಲ್ಲಿ ಚಿತ್ರರಂಗದ ನಕ್ಷತ್ರಗಳೆಲ್ಲ ಹೊಳೆಯಲಿವೆ.

  Related Articles :-

  Chiru And Meghana Raj's Wedding On May 2nd

 • ಮೇಘನಾ-ಚಿರು 10 ವರ್ಷದ ಲವ್ ಸ್ಟೋರಿ

  meghana reveals her 10 years love story

  ನಮ್ಮಿಬ್ಬರ ಪ್ರೀತಿ ವಿಚಾರ ಹೇಳೋವಾಗ ತಡವಾಯ್ತು. ಆದರೆ ಬೇಜಾರೇನಿಲ್ಲ. ಸಂಬಂಧ ಮುಚ್ಚಿಡುವ ಅವಶ್ಯಕತೆಯೆನೂ ಇರಲಿಲ್ಲ. ಅದನ್ನು ಜನರಿಗೆ ಹೇಳುವ ಸಂದರ್ಭ ಕೂಡಿ ಬಂದಿರಲಿಲ್ಲ ಅಷ್ಟೆ. ಹೀಗೆ ಹೆಳುತ್ತಾ ಮತ್ತು ಚಿರು ನಡುವಿನ 10 ವರ್ಷದ ಪ್ರೇಮಕಥೆ ಬಿಚ್ಚಿಟ್ಟಿದ್ದಾರೆ ಮೇಘನಾ. 

  ಅವರಿಬ್ಬರ ಪರಿಚಯವಾಗಿದ್ದು ಯಾವುದೋ ಕಾರ್ಯಕ್ರಮದಲ್ಲಿ. ಅಮ್ಮನೇ ಪರಿಚಯ ಮಾಡಿಸಿದರು. ಚಿರಂಜೀವಿ ಸರ್ಜಾ ನೋಡೋಕೆ ರಫ್ ಅಷ್ಟೆ. ನಾಚಿಕೆ ಸ್ವಭಾವದ ಕರುಣಾಮಯಿ. ಹೀಗಾಗಿಯೇ ಚಿರು ಇಷ್ಟವಾದರು ಎನ್ನುತ್ತಾರೆ ಮೇಘನಾ. ನಿಶ್ಚಿತಾರ್ಥದ ವಿಚಾರವನ್ನು ತಂದೆ ಮುಚ್ಚಿಟ್ಟಿದ್ದಕ್ಕೆ ಕಾರಣ, ಅದು ನಮ್ಮ ಖಾಸಗಿ ವಿಷಯ ಎಂಬುದಷ್ಟೆ.  ಅಲ್ಲದೆ ಆ ವಿಷಯವನ್ನು ಚಿರಂಜೀವಿ ಹುಟ್ಟುಹಬ್ಬದ ದಿನವೇ ಅನೌನ್ಸ್ ಮಾಡಬೇಕು ಎಂದು ನಿರ್ಧರಿಸಿದ್ದೆವು. ಇದರ ಹೊರತಾಗಿ ಬೇರೆ ಯಾವ ಕಾರಣವೂ ಇಲ್ಲ. ಇಷ್ಟನ್ನೂ ಹೇಳಿಕೊಂಡಿರುವ ಮೇಘನಾ, ಮದುವೆ ಯಾವಾಗ ಅನ್ನೋದು ಫಿಕ್ಸ್ ಆಗಿಲ್ಲ ಎಂದಿದ್ದಾರೆ.

  ನನ್ನದು ಕೋಪದ ಸ್ವಭಾವ. ನನಗೆ ವಿರುದ್ಧವಾದ ವ್ಯಕ್ತಿತ್ವ ಚಿರಂಜೀವಿಯದ್ದು. ಅವರು ಸಿಟ್ಟು ಮಾಡಿಕೊಳ್ಳಲ್ಲ ಎಂದು ಚಿರಂಜೀವಿ ವ್ಯಕ್ತಿತ್ವ ಹೊಗಳುವ ಮೇಘನಾಗೆ, ತನ್ನ ತಾಯಿ ಹುಷಾರಿಲ್ಲದಿದ್ದಾಗ, 200 ಕಿ.ಮೀ. ಡ್ರೈವ್ ಮಾಡಿಕೊಂಡು ಬಂದು ನನ್ನ ಜೊತೆ ಇದ್ದ ಚಿರಂಜೀವಿ ಬಗ್ಗೆ ವಿಶೇಷ ಅಕ್ಕರೆಯೂ ಇದೆ. 

  ಮದುವೆ ಯಾವಾಗ ಅಂತಾ ತಲೆ ಕೆಡಿಸಿಕೊಂಡ್ರೆ ಸೌಂದರ್ಯ ಹಾಳಾಗುತ್ತೆ. ಅದನ್ನೆಲ್ಲ ಹಿರಿಯರಿಗೆ ಬಿಟ್ಟಿದ್ದೇವೆ ಎಂದು ನಗುವ ಮೇಘನಾ, ಎಂಜೇಜ್‍ಮೆಂಟ್‍ಗೆ ರೆಡಿಯಾಗುತ್ತಿದ್ದಾರೆ.

  Related Articles :-

  ಮೇಘನಾಗೂ ನಂಗೂ ಮದ್ವೆ ಗ್ಯಾರಂಟಿ - ಚಿರಂಜೀವಿ

  Chiru Confirms His Engagement With Meghana Raj

  ಅ.22ಕ್ಕೆ ಚಿರು-ಮೇಘನಾ ನಿಶ್ಚಿತಾರ್ಥ

  ಚಿರು ಮೇಘನಾ ಮದ್ವೆಯಂತೆ..! ನಿಜಾನಾ..?

   

 • ಮೇಘನಾ-ಚಿರು ಮೊದಲ ಮದುವೆ ಆಯ್ತು..!

  chiranjeevi meghana first wedding completed

  ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮೊದಲ ಮದುವೆ ನೆರವೇರಿದೆ. ಕ್ರೈಸ್ತ ಸಂಪ್ರದಾಯದಂತೆ ಚಿರು ಮತ್ತು ಮೇಘನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಮೇ 2ರಂದು ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಶಾಸ್ತ್ರೋಕ್ತವಾಗಿ ವಿವಾಹವಾಗಲಿದ್ದಾರೆ.

  ಕೋರಮಂಗಲದಲ್ಲಿರುವ ಸೆಂಟ್ ಆಂಥೋನಿ ಫ್ರೈರಿ ಚರ್ಚ್‍ನಲ್ಲಿ ಫಾದರ್ ಪ್ರವೀಣ್ ಕುಮಾರ್, ವಿವಾಹ ವಿಧಿ ನೆರವೇರಿಸಿಕೊಟ್ಟರು. ಕ್ರೈಸ್ತ ಸಂಪ್ರದಾಯದಂತೆ ಮೇಘನಾ ಶ್ವೇತಧಾರಿಣಿಯಾಗಿದ್ದರೆ, ಚಿರು ನೀಲಿ ಸೂಟ್‍ನಲ್ಲಿದ್ದರು. ಉಂಗುರ ಬದಲಾಯಿಸಿಕೊಂಡ ನಂತರ, ವಿವಾಹದ ನೋಂದಣಿಯನ್ನು ಮಾಡಿಕೊಳ್ಳಲಾಯ್ತು. ಬೈಬಲ್ ಮುಟ್ಟಿ ಪ್ರಮಾಣ ಸ್ವೀಕರಿಸಿ, ಉಂಗುರ ಬದಲಾಯಿಸಿ ಕೊಂಡರು.

  ಚಿರಂಜೀವಿ ಪರವಾಗಿ ಅರ್ಜುನ್ ಸರ್ಜಾ, ಆಶಾ ರಾಣಿ, ಧ್ರುವ ಸರ್ಜಾ ಸಹಿ ಹಾಕಿದರೆ, ಮೇಘನಾ ಅವರ ಪರವಾಗಿ ಸಂತೋಷ್ ಕೋಷಿ, ಸೋಫಿಯಾ ಕೋಷಿ ಸಹಿ ಹಾಕಿದರು. ಕಲಾವಿದರಾದ ತಾರಾ, ಪ್ರಜ್ವಲ್ ದೇವರಾಜ್ ನವವಧುವರರಿಗೆ ಶುಭ ಹಾರೈಸಿದ್ರು.

  ಮೇಘನಾ ಅವರ ತಾಯಿ ಪ್ರಮೀಳಾ ಜೋಷಾಯ್ ಕ್ಯಾಥೊಲಿಕ್ ಕ್ರೈಸ್ತರಾಗಿದ್ದರೆ, ಸುಂದರ್ ರಾಜ್ ಅಯ್ಯಂಗಾರ್ ಬ್ರಾಹ್ಮಣರು. ಮೇ 2ರಂದು ಅಯ್ಯಂಗಾರ್ ಸಂಪ್ರದಾಯದಂತೆ ಶಾಸ್ತ್ರೋಕ್ರವಾಗಿ ಮದುವೆ ನಡೆಯಲಿದೆ.

 • ಮೇಘನಾ-ಚಿರುಗೆ ಎರಡೆರಡು ಮದುವೆ..! 

  chiranjeeivi meghana raj to tie knot in two traditions

  ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಸಪ್ತಪದಿ ತುಳಿಯುತ್ತಿದ್ದಾರೆ. ಮದುವೆ ಇರೋದು ಮೇ 2ನೇ ತಾರೀಕು. ಮೇಘನಾ ಅವರ ತಂದೆ ಸುಂದರ್ ರಾಜ್ ಹಿಂದೂ. ತಾಯಿ ಪ್ರಮೀಳಾ ಜೋಷಾಯ್ ಕ್ಯಾಥೊಲಿಕ್ ಕ್ರಿಶ್ಚಿಯನ್. ಹೀಗಾಗಿ ಎರಡೂ ಸಂಪ್ರದಾಯಗಳಲ್ಲಿ ಮದುವೆ ನಡೆಯಲಿದೆ.

  ಮೇಘನಾ ಮನೆಯಲ್ಲಿ ಈಗಾಗಲೇ ಅರಿಶಿಣ ಮತ್ತು ಚಪ್ಪರ ಶಾಸ್ತ್ರ ಮುಗಿದಿದೆ. ನಾಳೆ ಅಂದರೆ 27ನೇ ತಾರೀಕು ಚಿರಂಜೀವಿ ಸರ್ಜಾ ಮನೆಯಲ್ಲಿ ಚಪ್ಪರ ಶಾಸ್ತ್ರ. ಇದಾದ ಮೇಲೆ ಮದುವೆ.

  ಏಪ್ರಿಲ್ 29ನೇ ತಾರೀಕು ಅಂದ್ರೆ ಭಾನುವಾರ ಕೋರಮಂಗಲದ ಚರ್ಚ್‍ನಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆಯಾಗಲಿದ್ದಾರೆ. ಅದು ಕ್ರೈಸ್ತ ಸಂಪ್ರದಾಯದಂತೆ. ಭಾನುವಾರ ಸಂಜೆ 4 ಗಂಟೆಗೆ ಸೆಂಟ್ ಬೆಸಲಿಕಾ ಥೀಮ್‍ನಲ್ಲಿ ನಡೆಯುವ  ಕಾರ್ಯಕ್ರಮಕ್ಕೆ ಬಂಧುಗಳು ಹಾಗೂ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.

  ಇದಾದ ಮೇಲೆ ಏಪ್ರಿಲ್ 30ನೇ ತಾರೀಕು ಸಂಗೀತ್ ಕಾರ್ಯಕ್ರಮ ಇದೆ. ಅದಾದ ಮೇಲೆ ಮೇ 1ಕ್ಕೆ ವರಪೂಜೆ. ಮೇ 2ಕ್ಕೆ ಮದುವೆ. ಬೆಳಗ್ಗೆ 10.30ರ ಮುಹೂರ್ತದಲ್ಲಿ ಮೇಘನಾಗೆ ಚಿರು ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಅದು 2ನೇ ಮದುವೆ.

 • ಮೇಘನಾಗೂ ನಂಗೂ ಮದ್ವೆ ಗ್ಯಾರಂಟಿ - ಚಿರಂಜೀವಿ

  meghana chiru engagement confirmed

  ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾಗೆ ಎಂಗೇಜ್‍ಮೆಂಟ್ ಫಿಕ್ಸ್ ಆಗಿದೆ ಎಂದು ಸುದ್ದಿಯಾದಾಗ, ನ್ಯೂಸ್ ಚಾನೆಲ್ಲುಗಳಲ್ಲಿ ಸ್ವತಃ ಮಾತನಾಡಿದ್ದ ಚಿರಂಜೀವಿ ಸರ್ಜಾ, ಮದುವೆಯ ಸುದ್ದಿ ನಿರಾಕರಿಸಿದ್ದರು. ಮೇಘನಾ ಸೈಲೆಂಟ್ ಆಗಿದ್ದುಬಿಟ್ಟಿದ್ದರು. ಸುಂದರ್‍ರಾಜ್-ಪ್ರಮೀಳಾ ಜೋಷಾಯ್ ಕೂಡಾ ಮದುವೆ ಸುದ್ದಿ ಒಪ್ಪಿಕೊಂಡಿರಲಿಲ್ಲ. 

  ಆದರೆ, ಈಗ ಚಿರಂಜೀವಿ ಸರ್ಜಾ ಅವರೇ ತಾನು ಮತ್ತು ಮೇಘನಾ ಮದುವೆಯಾಗುತ್ತಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಂಡ ಚಿರಂಜೀವಿ ಸರ್ಜಾರ, 22ಕ್ಕೆ ನಿಶ್ಚಿತಾರ್ಥ, ಆದರೆ, ಮದುವೆ ಡೇಟ್ ಫಿಕ್ಸ್ ಆಗಿಲ್ಲ ಎಂದಿದ್ದಾರೆ. 

  ಚಿತ್ರರಂಗದ ಮತ್ತೊಂದು ಜೋಡಿ, ಈಗ ಮದುವೆಯ ಬಂಧನಕ್ಕೆ ಸಿಲುಕಲು ಸಿದ್ಧವಾಗಿದೆ. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ..

  Related Articles :-

  Chiru Confirms His Engagement With Meghana Raj

  ಅ.22ಕ್ಕೆ ಚಿರು-ಮೇಘನಾ ನಿಶ್ಚಿತಾರ್ಥ

  ಚಿರು ಮೇಘನಾ ಮದ್ವೆಯಂತೆ..! ನಿಜಾನಾ..?

 • ರಾಕ್ಷಸಿಯಾಗಿಬಿಟ್ಟಿದ್ದಾರೆ ಹರಿಪ್ರಿಯಾ

  haripriya in samhara

  ಪಾಪ.. ಎಷ್ಟು ಮುದ್ದಾಗಿದ್ದಾರೆ. ನಕ್ರೆ ನೋಡ್ಬೇಕು ಅನ್ಸತ್ತೆ. ನೋಡ್ತಾನೇ ಇರಬೇಕು ಅನ್ಸತ್ತೆ ಅಂತಾ ವಯಸ್ಸಿನ ಹುಡುಗ್ರು ಬೇಜಾರ್ ಮಾಡ್ಕಂಡ್ರೆ, ನಮ್ ಕರಾವಳಿ ಹುಡ್ಗಿ ಕಾಣಿ, ಹಿಂಗೆಲ್ಲ ರಾಕ್ಷಸಿ ಅನ್ನೋದು ತಪ್ಪುಂಟು ಅಂತಾರೆ ಕರಾವಳಿ ಮಂದಿ. ಆದರೆ, ಒಂದಂತೂ ಸತ್ಯ. ಹರಿಪ್ರಿಯಾ ರಾಕ್ಷಸಿಯಾಗಿಬಿಟ್ಟಿದ್ದಾರೆ.

  ನಗುವಲ್ಲೇ ಮನಸ್ಸುಗಳನ್ನು ದೋಚುವ ರಾಕ್ಷಸಿಯಾಗಿದ್ದಾರೆ. ಮಜವಾದ ರಸಕನ್ಯೆಯೋ.. ನಿಜವಾದ ವಿಷಕನ್ಯೆಯೋ.. ಧನದಾಹಯ ಶೃಂಗಾರ ಪ್ರೇಯಸಿ.. ನಗುತಾಳೆ ಪ್ರೇಮೀನಾ ಸಾಯಿಸಿ.. 

  ಅಬ್ಬಾ.. ಇದೆಲ್ಲ ಇರುವುದು ಸಂಹಾರ ಚಿತ್ರದ ಹಾಡುಗಳ ಸಾಹಿತ್ಯದಲ್ಲಿ. 

  ಚಿತ್ರದಲ್ಲಿ ಹರಿಪ್ರಿಯಾ ಅವರದ್ದು ಸಂಪೂರ್ಣ ನೆಗೆಟಿವ್ ಶೇಡ್ ಇರುವ ಪಾತ್ರ. ಅಭಿನಯದ ವಿಚಾರಕ್ಕೆ ಬಂದರೆ, ಹರಿಪ್ರಿಯಾ ನಿಜಕ್ಕೂ ರಾಕ್ಷಸಿಯೇ. ಹಾಡು ಹಿಟ್ ಆಗಿರುವುದಷ್ಟೇ ಅಲ್ಲ, ಚಿತ್ರದ ಬಗ್ಗೆ ವಿಪರೀತ ಎನ್ನುವಷ್ಟು ಕುತೂಹಲ ಸೃಷ್ಟಿಸಿಬಿಟ್ಟಿದೆ. 

  ಚಿರಂಜೀವಿ ಸರ್ಜಾ ನಾಯಕರಾಗಿರುವ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯೋ.. ಖಳನಾಯಕಿಯೋ.. ಗೊಂದಲವಿದೆ. ಮುಂದಿನ ವಾರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕೋದು ಖಚಿತ.

 • ರಾಜಾಹುಲಿ ಲುಕ್‍ನಲ್ಲಿ ಚಿಕ್ಕಣ್ಣನ ಸಂಹಾರ

  chikkanna in rajahuli style

  ಸಂಹಾರ. ಫೆಬ್ರವರಿ 9ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದ ಹೀರೋ ಚಿರಂಜೀವಿ ಸರ್ಜಾ. ನಾಯಕಿಯರಾಗಿ ಹರಿಪ್ರಿಯಾ ಮತ್ತು ಕಾವ್ಯಾಶೆಟ್ಟಿ ಇದ್ದಾರೆ. ನಿರ್ದೇಶಕ ಗುರು ದೇಶ್‍ಪಾಂಡೆ. 

  ಗುರು ದೇಶಪಾಂಡೆ ತಮ್ಮ ರಾಜಾಹುಲಿ ಚಿತ್ರದ ನೆನಪನ್ನು ಇಲ್ಲಿ ಚಿಕ್ಕಣ್ಣನ ಮೂಲಕ ನೆನಪಿಸಿದ್ದಾರೆ. ರಾಜಾಹುಲಿಯಲ್ಲಿ ಯಶ್ ಗೆಳೆಯನಾಗಿ ಮಿಂಚಿದ್ದ ಚಿಕ್ಕಣ್ಣ ಅವರದ್ದು ಇದರಲ್ಲಿ ಪ್ರಮುಖ ಪಾತ್ರ. ಕಾನ್‍ಸ್ಟೇಬಲ್ ಪಾತ್ರದಲ್ಲಿ ನಟಿಸಿರುವ ಚಿಕ್ಕಣ್ಣ ಅವರಿಗೆ ರಾಜಾಹುಲಿ ಸ್ಟೈಲ್‍ನಲ್ಲೇ ಒಂದು ಡೈಲಾಗ್ ಕೂಡಾ ಇದೆ.

  ಹುಲಿ ಬೇಟೆ ಆಡೋವಾಗ ಡಿಸ್ಟರ್ಬ್ ಮಾಡಿದ್ರೆ, ನೀನೇ ಬೇಟೆ ಆಗಿಹೋಗ್ತೀಯ. ರಾಜಾಹುಲಿ ಬೇಟೆ ಆಡೋವಾಗ ಡಿಸ್ಟರ್ಬ್ ಮಾಡಿದ್ರೆ.. ಅನ್ನೋ ಫನ್ನಿ ಡೈಲಾಗು ಚಿಕ್ಕಣ್ಣಗಿದೆ. ಅದೂ ರಾಜಾಹುಲಿ ಮೀಸೆಯ ಜೊತೆ ಜೊತೆಗೇ.

  ಚಿತ್ರದ ಹೀರೋ, ಹೀರೋಯಿನ್‍ಗಳಷ್ಟೇ ಪ್ರಮುಖ ಪಾತ್ರ ಚಿಕ್ಕಣ್ಣ ಅವರಿಗೂ ಇದೆ ಎನ್ನುತ್ತಾರೆ ನಿರ್ದೇಶಕ ಗುರು ದೇಶಪಾಂಡೆ.

 • ಲವ್ವಿನಲ್ಲಿ ಬಿದ್ದವರು, ಮನೆಯವರಿಗೆ ಹೇಳಿದ್ದು ಹೇಗೆ..?

  meghana chiru says special thanks to media

  ಚಿರು, ಮೇಘನಾ ಎಂಗೇಜ್‍ಮೆಂಟ್ ಆಗಿಹೋಯ್ತು. ಇಬ್ಬರೂ ಪರಸ್ಪರ ಉಂಗುರ ಬದಲಿಸಿಕೊಂಡಿದ್ದೂ ಆಯ್ತು. ಅವರಿಬ್ಬರು 10 ವರ್ಷಗಳ ಲವ್‍ಸ್ಟೋರಿಯನ್ನು ಕೇಳಿ, ಖುಷಿಪಟ್ಟು ಶುಭ ಹಾರೈಸಿದ್ದೂ ಆಯ್ತು. ಆದರೆ, ಇವರಿಬ್ಬರ ಲವ್ ವಿಷಯವನ್ನು ಮನೆಯವರಿಗೆ ತಿಳಿಸಿದ್ದು ಹೇಗೆ..? 

  ಮೇಘನಾಗೆ ನೇರವಾಗಿ ಪ್ರಪೋಸ್ ಮಾಡಿದ್ದ ಚಿರುಗೆ, ಮನೆಯವರಿಗೆ ಹೇಳೋಕೆ ಸಂಕೋಚ. ಇತ್ತ ಮೇಘನಾಗೂ ಅಷ್ಟೆ.. ಅಪ್ಪಅಮ್ಮ, ಫ್ರೆಂಡ್ಸ್ ರೀತಿಯೇ ಇದ್ದರೂ, ಪ್ರೀತಿ ವಿಚಾರ ಹೇಳೋಕೆ ಹೆಜ್ಜೆ ಹಿಂದೆ ಹೋಗುತ್ತಿತ್ತು. ಆಗ ಅದನ್ನು ಸರಳ ಮಾಡಿದ್ದು, ಮೀಡಿಯಾಗಳಂತೆ. ಹೀಗಾಗಿ ಮೀಡಿಯಾಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ ಚಿರು-ಮೇಘನಾ. ಚಿರು ತಮ್ಮ ಲವ್ ವಿಷಯವನ್ನು ಮೊದಲು ಹೇಳಿದ್ದು ತಮ್ಮ ಧ್ರುವ ಸರ್ಜಾಗಂತೆ.

  ಮೇಘನಾ, ಚಿರುಗೆ ಆಂಟಿಕ್ ರಿಂಗ್ ತೊಡಿಸಿದರೆ, ಸರ್ಜಾ ಮೇಘನಾಗೆ ನಕ್ಷತ್ರ ಮಾದರಿಯ ಡೈಮಂಡ್ ರಿಂಗ್ ತೊಡಿಸಿದರು. ಆ ರಿಂಗುಗಳಿಗಿಂತ ಮಿರಮಿರನೆ ಮಿಂಚುತ್ತಿದ್ದುದು ಇಬ್ಬರ ಮುಖದಲ್ಲಿದ್ದ ಮುಗುಳುನಗೆ..ಉಲ್ಲಾಸ..ಉತ್ಸಾಹ.. ಎರಡೂ ಕುಟುಂಬಗಳಲ್ಲಿ ಹೆಚ್ಚು ಕಡಿಮೆ 25 ವರ್ಷಗಳ ನಂತರ ನಡೆಯುತ್ತಿರುವ ಶುಭ ಕಾರ್ಯ. ಹೀಗಾಗಿ ಚಿರು-ಮೇಘನಾ ಎಂಗೇಜ್‍ಮೆಂಟ್ ಅದ್ದೂರಿಯಾಗಿ ನೆರವೇರಿತು.

 • ಶಟಪ್ & ಡೂ ಇಟ್ - ಚಿರುಗೆ ಹೇಳಿದ್ಯಾರು ಗೊತ್ತಾ..?

  shut up and do it who said this to chiru

  ಚಿರಂಜೀವಿ ಸರ್ಜಾ ಅಭಿಯನದ ಅಮ್ಮ ಐ ಲವ್ ಯೂ ಇದೇ ವಾರ ತೆರೆ ಕಾಣುತ್ತಿದೆ. ಈಗಾಗಲೇ ಗೊತ್ತಿರುವಂತೆ ಚಿತ್ರದಲ್ಲಿ ಚಿರು ಕೋಟ್ಯಧಿಪತಿ ಮತ್ತು ಭಿಕ್ಷುಕನಾಗಿ ಕಾಣಿಸಿಕೊಂಡಿದ್ದಾರೆ. ಕಥೆ ಕೇಳಿದಾಗ ಮತ್ತು ಮೂಲ ಚಿತ್ರವನ್ನು ನೋಡಿದಾಗ, ನಾನು ಭಿಕ್ಷುಕನ ಪಾತ್ರ ಮಾಡೋದಾ..? ಎನ್ನಿಸಿ ಮುಜುಗರಕ್ಕೊಳಗಾಗಿದ್ದರಂತೆ ಚಿರಂಜೀವಿ. 

  ಯೋಗಿ ಮತ್ತು ಚೈತನ್ಯ ಎಲ್ಲವನ್ನೂ ವಿವರಿಸಿದ ಮೇಲೆ ಕೂಡಾ ಸುಮಾರು 3 ತಿಂಗಳು ಪ್ರಾಜೆಕ್ಟ್‍ಗೆ ಓಕೆ ಎಂದಿರಲಿಲ್ಲ. 3 ತಿಂಗಳಾದ ಮೇಲೆ ಇಬ್ಬರೂ ಒಮ್ಮೆ ಬಂದು ಶಟಪ್ & ಡೂ ಇಟ್ ಅಂದ್ರು. ಅವರಿಗೇ ಅಷ್ಟು ಕಾನ್ಫಿಡೆನ್ಸ್ ಇರುವಾಗ, ನಾನು ಆ ಪಾತ್ರ ಮಾಡಬಲ್ಲೆ ಎನ್ನಿಸಿತು. ಅಮ್ಮ ಐ ಲವ್ ಯೂ ಚಿತ್ರವನ್ನು ಒಪ್ಪಿಕೊಂಡೆ. ಇದು ಚಿರಂಜೀವಿ ಸರ್ಜಾ ಪ್ರಾಜೆಕ್ಟ್ ಒಪ್ಪಿಕೊಂಡ ಕುರಿತಂತೆ ಹೇಳಿರುವ ಮಾತು.

  ಯೋಗಿ ಮತ್ತು ಚೈತನ್ಯ ಜೊತೆ ಚಿರು ಅವರದ್ದು ವೃತ್ತಿ ಬಾಂಧವ್ಯಕ್ಕಿಂತ ಮಿಗಿಲಾದ ಸ್ನೇಹವಿದೆ. ಹೀಗಾಗಿಯೇ ನಮ್ಮ ಜೋಡಿ ರಿಪೀಟ್ ಆಗುತ್ತಿದೆ ಎಂದು ಹೇಳಿಕೊಳ್ತಾರೆ ಚಿರು. ಎಂಗೇಜ್‍ಮೆಂಟ್ ಆದ ಮೇಲೆ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾದ ಬಗ್ಗೆ ಚಿರು ಅವರಿಗೂ ನಿರೀಕ್ಷೆ ಇದೆ.

 • ಸಂಹಾರ-2ಗೆ ವೇದಿಕೆ ಸಿದ್ಧ

  samhara part 2 soon

  ಚಿರಂಜೀವಿ ಸರ್ಜಾ ಹಾಗೂ ಹರಿಪ್ರಿಯಾ ಅಭಿನಯದ, ಗುರುದೇಶಪಾಂಡೆ ನಿರ್ದೇಶನದ ಸಂಹಾರ ಚಿತ್ರ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಾಗಲೇ, ಚಿತ್ರದ 2ನೇ ಭಾಗಕ್ಕೆ ಸಿದ್ಧರಾಗುತ್ತಿದ್ದಾರೆ ನಿರ್ದೇಶಕ ಗುರುದೇಶಪಾಂಡೆ.

  ಸಂಹಾರದಲ್ಲಿ ಹರಿಪ್ರಿಯಾ ಅವರದ್ದು ನೆಗೆಟಿವ್ ಪಾತ್ರ. ಆ ಪಾತ್ರ ನೋಡಿದವರು, ಮೊದಲು ಶಾಕ್ ಆಗ್ತಾರೆ. ನಂತರ ಹರಿಪ್ರಿಯಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸ್ತಾರೆ. ಆದರೆ, ವರೇಕೆ ಆ ಹಾದಿ ತುಳಿಯುತ್ತಾರೆ..? ಅದಕ್ಕೆ ಸಂಹಾರದಲ್ಲಿ ಉತ್ತರ ಸಿಗಲ್ಲ. ಅದಕ್ಕೆ ಉತ್ತರ, ಸಂಹಾರ-2ನಲ್ಲಿ ಸಿಗಲಿದೆ ಅಂತಾರೆ ಗುರು ದೇಶಪಾಂಡೆ.

  ಹರಿಪ್ರಿಯಾ ಅವರನ್ನೇ ಮುಖ್ಯವಾಗಿಟ್ಟುಕೊಂಡು ಸಂಹಾರ-2 ಮಾಡುವುದಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದ್ದೇನೆ. ಒಂದು ಹೆಣ್ಣು ವಿಲನ್ ಆಗುವುದರ ಹಿಂದೆ ಒಂದು ಕಥೆ ಇದೆ. ಅದೇ ಮುಂದುವರಿದ ಭಾಗದಲ್ಲಿರುವ ಕಥೆ ಎಂದಿದ್ದಾರೆ ಗುರು ದೇಶಪಾಂಡೆ.

 • ಸಂಹಾರದಲ್ಲಿ ಏನಚ್ಚರಿಯೋ.. ಪುನೀತ್ ರಾಜ್‍ಕುಮಾರ್

  puneeth sings for samhara

  ಸಂಹಾರ ಚಿತ್ರದ ವಿಶೇಷತೆಗಳ ಪಟ್ಟಿ ಏರುತ್ತಲೇ ಹೋಗುತ್ತಿದೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾರದ್ದು ಅಂಧನ ಪಾತ್ರ. ಅವರಿಗೆ ನಾಯಕಿ ಹರಿಪ್ರಿಯಾ. ಆಕೆಯದ್ದು ಎಂಥ ಪಾತ್ರ..? ರಾಕ್ಷಸಿಯೋ ಹಾಡು ಕೇಳಿ ಕನ್‍ಫ್ಯೂಸ್ ಆಗಿ ಏನ್ ಕಥೆ ಅಂದ್ರೆ ಯಾರೊಬ್ಬರೂ ಬಾಯಿಬಿಡಲ್ಲ. ನಿರ್ದೇಶಕ ಗುರು ದೇಶಪಾಂಡೆ ಅವರಂತೂ ಚಿತ್ರವನ್ನು ಮುದ್ದು ಮುದ್ದಾಗಿ ಕಟ್ಟಿಕೊಟ್ಟಿದ್ದಾರೆ. ಈಗ ಚಿತ್ರದ ವಿಶೇಷಕ್ಕೆ ಇನ್ನೊಂದು ಸೇರ್ಪಡೆ ಪುನೀತ್ ರಾಜ್‍ಕುಮಾರ್.

  ಸಂಹಾರ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಏನಚ್ಚರಿಯೋ ಎಂಬ ಹಾಡು ಹಾಡಿದ್ದಾರೆ. ಅದು ನಾಯಕಿಗೆ ನಾಯಕನ ಮೇಲೆ ಲವ್ವಾಗೋ ಸಮಯದಲ್ಲಿ ಮೂಡುವ ಹಾಡು. ಚಿತ್ರದ ಬಿಡುಗಡೆಗೆ ಕೆಲವೇ ದಿನಗಳಿರುವಾಗ ಹಾಡನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ರವಿ ಬಸ್ರೂರ್ ಸಂಗೀತ ನೀಡಿರುವ ಹಾಡುಗಳು ಗುನುಗುವಂತಿವೆ ಅನ್ನೋದು ಚಿತ್ರಕ್ಕೊಂದು ದೊಡ್ಡ ಪ್ಲಸ್ ಪಾಯಿಂಟ್.

   

   

   

   

   

 • ಸಂಹಾರದಲ್ಲಿ ನಿರ್ಮಾಪಕರ ಪುತ್ರನ ಪಾತ್ರವೇನು..?

  samhara producer son manu gowda

  ಸಂಹಾರ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಚಿರಂಜೀವಿ ಸರ್ಜಾರ ಅಂಧನ ಪಾತ್ರ, ಹರಿಪ್ರಿಯಾರ ವಿಲನ್ ಪಾತ್ರ ಹಾಗೂ ಚಿಕ್ಕಣ್ಣರ ಕಾಮಿಡಿ ರೋಲ್. ಆದರೆ, ಇವರೆಲ್ಲರ ನಿರ್ಮಾಪಕ ವೆಂಕಟೇಶ್ ಅವರ ಪುತ್ರ ಮನುಗೌಡ ಅಷ್ಟೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಡೀ ಸಿನಿಮಾದಲ್ಲಿ ಮನುಗೌಡ, ನಾಯಕಿ ಹರಿಪ್ರಿಯಾ ಜೊತೆಯಲ್ಲಿರುತ್ತಾರೆ.

  ಯಾರೋ ಮಾಡಬೇಕಿದ್ದ ಪಾತ್ರ, ಅನಿವಾರ್ಯವಾಗಿ ನಾನು ನಟಿಸಿದೆ. ಮೊದಲ ಬಾರಿ ಕ್ಯಾಮೆರಾ ಎದುರಿಸುವಾಗ ಆತಂಕಗಳಿದ್ದುದು ನಿಜ. ಆದರೆ, ಹರಿಪ್ರಿಯಾ ಪ್ರತಿಯೊಂದನ್ನು ತಿದ್ದಿ ತೀಡಿ ಹೇಳಿಕೊಟ್ರು. ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದು ಹೇಳಿಕೊಂಡಿದ್ದಾರೆ ಮನುಗೌಡ.

  ಮಗನ ಅಭಿನಯದ ಬಗ್ಗೆ ಅಪ್ಪ ವೆಂಕಟೇಶ್ ಕೂಡಾ ತೃಪ್ತಿಯಾಗಿದ್ದಾರೆ. ಚಿತ್ರದ ಬಗ್ಗೆಯೂ ಖುಷಿಯಾಗಿದ್ದಾರೆ. ನಿರ್ದೇಶಕ ಗುರು ದೇಶಪಾಂಡೆ, ತಾವು ಹೇಳಿದಂತೆಯೇ ಸಿನಿಮಾ ಮಾಡಿಕೊಟ್ಟಿದ್ದಾರೆ ಎನ್ನುವ ತೃಪ್ತಿ ನಿರ್ಮಾಪಕರದ್ದು. ಚಿತ್ರ ಈ ಶುಕ್ರವಾರದಿಂದ ತೆರೆಯಲ್ಲಿ ಮಿನುಗಲಿದೆ.

   

   

   

 • ಸೀಜರ್ ಅಂದ್ರೆ  ಯಾರು ಗುರು..?

  who is seizer

  ಸೀಜರ್ ಅಂದ್ರೆ ಯಾರು..? ಇತಿಹಾಸ ಅಲ್ಪಸ್ವಲ್ಪ ಗೊತ್ತಿದ್ದವರಿಗೆ ತಕ್ಷಣ ನೆನಪಿಗೆ ಬರೋದು ಜೂಲಿಯಸ್ ಸೀಸರ್‍ನ ಹೆಸರು. ಆತ ರೋಮನ್ ಸಾಮ್ರಾಜ್ಯದ ಸೇನಾಧಿಪತಿ.. ಸರ್ವಾಧಿಕಾರಿಯಂತೆ ಮೆರೆದಿದ್ದವನು. ಕ್ರಿ.ಪೂ.60ರಲ್ಲಿ ಬದುಕಿದ್ದವನು. ಅಂದರೆ ಕ್ರಿಸ್ತ ಹುಟ್ಟುವುದಕ್ಕೂ ಮೊದಲು. ಈಗ ಆತನ ಹೆಸರನ್ನಿಟ್ಟುಕೊಂಡು ಬರುತ್ತಿರುವುದು ಸೀಜರ್ ಸಿನಿಮಾ.

  ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಮತ್ತು ರವಿಚಂದ್ರನ್ ಕಾಂಬಿನೇಷನ್ ಇದೆ. ರವಿಚಂದ್ರನ್ ಫೈನಾನ್ಷಿಯರ್ ಆದ್ರೆ, ಚಿರು ಸರ್ಜಾ ರೌಡಿ. ಪರೂಲ್ ಯಾದವ್ ನಾಯಕಿಯಾಗಿರೋ ಸಿನಿಮಾದಲ್ಲಿ ಪ್ರಕಾಶ್ ರೈ ವಿಲನ್. ಸಿನಿಮಾ ಈ ವಾರ ತೆರೆಗೆ ಬರೋಕೆ ರೆಡಿಯಾಗಿದೆ.

  ಈ ಥರದ ಪಾತ್ರ ನನಗೆ ಇದೇ ಮೊದಲು. ಸಾಮಾನ್ಯವಾಗಿ ಹೀರೊಯಿಸಂನೊಂದಿಗೆ ಕಥೆಗಳು ಸಾಗಿದರೆ, ಇಲ್ಲಿ ರೌಡಿಸಂನೊಂದಿಗೆ ಕಥೆ ಸಾಗುತ್ತೆ. ನೆಗೆಟಿವ್ ಶೇಡ್ ಇರುವ ಪಾತ್ರ. ರವಿಚಂದ್ರನ್ ಜೊತೆ ನಟಿಸಿರುವ ಖುಷಿಯೂ ಇದೆ ಎಂದು ಖುಷಿ ಹಂಚಿಕೊಳ್ಳುತ್ತಿದ್ದಾರೆ ಚಿರು. ಏಪ್ರಿಲ್ 13ಕ್ಕೆ ತೆರೆಗೆ ಬರುತ್ತಿರುವ ಸಿನಿಮಾ, ಗೋಹತ್ಯೆ ಡೈಲಾಗ್‍ನಿಂದಲೂ ಸುದ್ದಿಯಲ್ಲಿದೆ.

 • ಸೀಜರ್ ಗೋಹತ್ಯೆ ಡೈಲಾಗ್ - ನಿರ್ದೇಶಕರಿಗೆ ಪ್ರಕಾಶ್ ರೈ ಕ್ಲಾಸ್

  prakash raj slams seizer movie director

  ಗೋಹತ್ಯೆ ಮಾಡೋದು ಮತ್ತು ಹೆತ್ತ ತಾಯಿಯ ತಲೆ ಹಿಡಿಯೋದು ಎರಡೂ ಒಂದೇ. ಇದು ಸೀಜರ್ ಚಿತ್ರದಲ್ಲಿನ ಒಂದು ಡೈಲಾಗ್. ಇದು ಸದ್ಯಕ್ಕೆ ವಿವಾದವಾಗಿದೆ. ಚಿತ್ರ ಬಿಡುಗಡೆ ಹೊತ್ತಿನಲ್ಲಿಯೇ ವಿವಾದದ ಕಿಡಿ ಹೊತ್ತುಕೊಂಡಿದೆ.

  ಚಿತ್ರದಲ್ಲಿ ಈ ಡೈಲಾಗ್ ಹೇಳಿರುವುದು ರವಿಚಂದ್ರನ್ ಅವರ ಪಾತ್ರ. ಚಿರಂಜೀವಿ ಸರ್ಜಾ ಚಿತ್ರದ ನಾಯಕ. ಆ ಚಿತ್ರದಲ್ಲಿ ಪ್ರಕಾಶ್ ರೈ ಕೂಡಾ ಇದ್ದಾರೆ. ಹೇಳಿಕೇಳಿ ಪ್ರಕಾಶ್ ರೈ, ಗೋಹತ್ಯೆ ನಿಷೇಧದ ವಿರುದ್ಧ ಗುರುತಿಸಿಕೊಂಡಿರುವವರು. ಹೀಗಾಗಿಯೇ ಪ್ರಕಾಶ್ ರೈ ಕೂಡಾ ಈ ಡೈಲಾಗ್ ಬಗ್ಗೆ ಬೇಸರಗೊಂಡಿದ್ದಾರೆ.

  ಡೈರೆಕ್ಟರ್‍ಗೆ ಫೋನ್ ಮಾಡಿದ್ದ ಪ್ರಕಾಶ್ ರೈ `ಏನಯ್ಯಾ, ಹೀಗಾ ಡೈಲಾಗ್ ಬರೆಯೋದು. ನಿಂಗೇನ್ ತಲೆ ಇಲ್ವಾ' ಎಂದು ಬೈದಿದ್ದಾರೆ. ವಿಷಯ ಗೊತ್ತಾದ ತಕ್ಷಣ ಫೋನ್ ಮಾಡಿ ನಿರ್ದೇಶಕರಿಗೆ ಉಗಿದೆ ಅನ್ನೋದನ್ನ ಪ್ರಕಾಶ್ ರೈ ಅವರೇ ಹೇಳಿಕೊಂಡಿದ್ದಾರೆ. 

  ಆದರೆ ಆ ಡೈಲಾಗ್ ಹೇಳುವ ದೃಶ್ಯದಲ್ಲಿ ನಾನಿಲ್ಲ. ಅಷ್ಟೇ ಸಮಾಧಾನ ಎಂದು ಹೇಳಿದ್ದಾರೆ ಪ್ರಕಾಶ್ ರೈ. ಇಂಥವರೆನ್ನಲ್ಲ ನಿರ್ದೇಶಕರು ಎನ್ನುವುದು ಹೇಗೆ.. ನಾನ್ಸೆನ್ಸ್ ಎಂದಿದ್ದಾರೆ ಪ್ರಕಾಶ್ ರೈ. ಚಿತ್ರದ ನಿದೇಶಕ ವಿನಯ್ ಕೃಷ್ಣ. ಪರೂಲ್ ಯಾದವ್ ಚಿತ್ರದ ನಾಯಕಿ.

The Terrorist Movie Gallery

Thayige Thakka Maga Movie Gallery