` chiranjeevi sarja, - chitraloka.com | Kannada Movie News, Reviews | Image

chiranjeevi sarja,

 • ಅಮ್ಮ ಐ ಲವ್ ಯೂಗೆ `ಅಮ್ಮ'ನೇ ಪ್ರಾಬ್ಲಮ್ಮು..!

  amma i love youtitle proble

  `ಅಮ್ಮ ಐ ಲವ್ ಯೂ' ದ್ವಾರಕೀಶ್ ಬ್ಯಾನರ್‍ನ ಸಿನಿಮಾ. ನಿರ್ಮಾಪಕ ಯೋಗಿ ದ್ವಾರಕೀಶ್. ಚಿತ್ರೀಕರಣವನ್ನು ಈಗಾಗಲೇ ಸದ್ದಿಲ್ಲದೆ ಮುಗಿಸಿರುವ ಯೋಗಿ ದ್ವಾರಕೀಶ್‍ಗೆ ಚಿತ್ರದ ಪ್ರಚಾರವನ್ನೇ ಮಾಡೋಕೆ ಆಗ್ತಿಲ್ಲ. ಚಿತ್ರದ ಪ್ರಚಾರಕ್ಕೆ ತೊಡಕಾಗಿ ಕಾಡುತ್ತಿರುವುದು ಅಮ್ಮ.

  ಅಮ್ಮ ಐ ಲವ್ ಯೂ ಚಿತ್ರಕ್ಕೂ ಮೊದಲೇ, ಇನ್ಯಾರೋ ನಿರ್ಮಾಪಕರು ಅಮ್ಮ ಅನ್ನೋ ಟೈಟಲ್ ರಿಜಿಸ್ಟರ್ ಮಾಡಿಸಿಬಿಟ್ಟಿದ್ದಾರೆ. ಹೀಗಾಗಿ ಯೋಗೀಶ್‍ಗೆ ಇನ್ನೂ ಅಮ್ಮ ಐ ಲವ್ ಯೂ ಅನ್ನೋ ಟೈಟಲ್ಲೇ ಸಿಕ್ಕಿಲ್ಲ. ಚಿತ್ರವನ್ನು ಏಪ್ರಿಲ್‍ನಲ್ಲಿ ತೆರೆಗೆ ತರುವ ಸಿದ್ಧತೆಯಲ್ಲಿರುವ ಯೋಗಿ ದ್ವಾರಕೀಶ್, ಫಿಲಂ ಚೇಂಬರ್‍ಗೆ ಮತ್ತೊಮ್ಮೆ `ಅಮ್ಮ ಐ ಲವ್ ಯೂ' ಟೈಟಲ್ ಕೊಡಿ ಎಂದು ಮನವಿ ಮಾಡಿದ್ದಾರೆ.

  ಈ ಮೊದಲು ಅಮ್ಮ ಟೈಟಲ್ ಪಡೆದಿದ್ದ ನಿರ್ಮಾಪಕರು ಅದನ್ನು ಬಳಸಿಕೊಂಡಿಲ್ಲ. ಅದರ ಅವಧಿಯೂ ಮುಗಿದಿದೆ. ಹೀಗಾಗಿ ನಮಗೆ ಟೈಟಲ್ ಕೊಡಿ ಎಂದು ಚೇಂಬರ್‍ಗೆ ಮನವಿ ಮಾಡಿದ್ದಾರಂತೆ. ಚಿರಂಜೀವಿ ಸರ್ಜಾ, ನಿಶ್ವಿಕಾ ನಾಯ್ಡು, ಸಿತಾರಾ ನಟಿಸಿರುವ ಚಿತ್ರಕ್ಕೆ ಕೆ.ಎಂ.ಚೈತನ್ಯ ನಿರ್ದೇಶಕ.

 • ಅಮ್ಮನಿಗಾಗಿ ಭಿಕ್ಷುಕನಾಗುವ ಮಗನ ಕಥೆ

  amma i love you highlights the love and sentiment of mother and son

  ಅಮ್ಮ ಐ ಲವ್ ಯೂ ಇದೇ ವಾರ ರಿಲೀಸ್ ಆಗುತ್ತಿದೆ. ಹೆಸರು ಹೇಳುವಂತೆ ಇದು ತಾಯಿ, ಮಗನ ಬಾಂಧವ್ಯದ ಚಿತ್ರ. ಈ ಹಿಂದೆ ತಾಯಿ ಪ್ರೀತಿ ಸಾರುವ ನೂರಾರು ಸಿನಿಮಾಗಳು ಬಂದಿರಬಹುದು. ಆದರೆ, ಈ ಚಿತ್ರ ಮಾತ್ರ ಈ ಹಿಂದಿನ ಯಾವ ತಾಯಿ ಸೆಂಟಿಮೆಂಟ್ ಚಿತ್ರಗಳಿಗೂ ಹೋಲಿಕೆ ಆಗೋದಿಲ್ಲ. ಆ ಕಾರಣಕ್ಕಾಗಿಯೇ ರೀಮೇಕ್ ಆದರೂ, ಈ ಚಿತ್ರವನ್ನು ತೋರಿಸಲೇಬೇಕೆಂದು ಹೊರಟಿದೆ ದ್ವಾರಕೀಶ್ ಪ್ರೊಡಕ್ಷನ್ಸ್. ಏಕೆಂದರೆ, ಇದು ತಮಿಳಿನ ಪಿಚ್ಚೈಕಾರನ್ ಚಿತ್ರದ ರೀಮೇಕ್.

  ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿರುವ ತಾಯಿ, ಚಿಕಿತ್ಸೆಗೆ ಸ್ಪಂದಿಸದೇ ಹೋದಾಗ, ಸ್ವಾಮೀಜಿಯೊಬ್ಬರ ಬಳಿ ಪರಿಹಾರ ಹುಡುಕಿಕೊಂಡು ಹೋಗುತ್ತಾನೆ ಮಗ. ಆಗ ಆ ಸ್ವಾಮೀಜಿ, 48 ದಿನಗಳ ಕಾಲ, ಭಿಕ್ಷುಕನಾಗಿ ಬದುಕಿದರೆ ತಾಯಿ ಬದುಕುತ್ತಾಳೆ ಎನ್ನುತ್ತಾರೆ. ಆದರೆ, ಅದು ಯಾರಿಗೂ ಗೊತ್ತಾಗುವಂತಿಲ್ಲ ಎಂದು ಷರತ್ತು ವಿಧಿಸುತ್ತಾರೆ. ಕೋಟ್ಯಧಿಪತಿಯಾಗಿದ್ದರೂ, ತಾಯಿಗಾಗಿ ಎಲ್ಲವನ್ನೂ ಬಿಟ್ಟು ಭಿಕ್ಷುಕನಾಗುತ್ತಾನೆ ನಾಯಕ. ಆಮೇಲೆ ಏನಾಗುತ್ತೆ..?

  ತಾಯಿಯನ್ನು ಪ್ರೀತಿಯಿಂದ ನೋಡಕೊಳ್ಳುತ್ತಿರುವ ಮಕ್ಕಳು, ತಾಯಿಯನ್ನು ಕಸಕ್ಕಿಂತಲೂ ಕಡೆಯದಾಗಿ ನೋಡಿಕೊಳ್ಳುತ್ತಿರುವ ದ್ರೋಹಿಗಳು, ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಮಕ್ಕಳು, ತಾಯಿಯನ್ನೇ ಕಾಣದ ಅನಾಥರು..  ಹೀಗೆ ಪ್ರತಿಯೊಬ್ಬರ ಕಣ್ಣನ್ನೂ ಒದ್ದೆ ಮಾಡುವಂತ ಅದ್ಬುತ ಕತೆ, ಸಂದೇಶ ಸಿನಿಮಾದಲ್ಲಿದೆ.

  ಆ ದಿನಗಳು ಚೇತನ್ ನಿರ್ದೇಶನದ ಸಿನಿಮಾದಲ್ಲಿ ಕೋಟ್ಯಧಿಪತಿ, ಭಿಕ್ಷುಕನಾಗಿ ನಟಿಸಿರುವುದು ಚಿರಂಜೀವಿ ಸರ್ಜಾ. ಸಿತಾರಾ ತಾಯಿಗಾಗಿ ನಟಿಸಿದ್ದರೆ, ನಿಶ್ವಿಕಾ ನಾಯ್ಡು ನಾಯಕಿ. ಯೋಗಿ ದ್ವಾರಕೀಶ್ ನಿರ್ಮಾಣದ ಚಿತ್ರಕ್ಕೆ ಸಂಗೀತ ನೀಡಿರುವುದು ಗುರುಕಿರಣ್.

 • ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

  aaka image

  ಆಕೆ, ಚೈತನ್ಯ ನಿರ್ದೇಶನದ ಸಿನಿಮಾ. ಆ ದಿನಗಳು, ಆಟಗಾರ..ದಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಚೈತನ್ಯ, ಈಗ ಹೊಸ ಹಾರರ್ ಚಿತ್ರದೊಂದಿಗೆ ಬರುತ್ತಿದ್ದಾರೆ. ಚಿತ್ರದ ವಿಶೇಷವೆಂದರೆ, ಇದು ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್ ಚಿತ್ರ. 

  ಅರ್ಧ ಭಾಗ ಲಂಡನ್​ನಲ್ಲೇ ಶೂಟಿಂಗ್ ಆಗಿದ್ದರೆ, ಉಳಿದರ್ಧ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರಕ್ಕೆ ಕೆಲಸ ಮಾಡಿರುವವಱರೂ ಹೊಸಬರಲ್ಲ. ಆದರೆ, ಘಟಾನುಘಟಿಗಳು.  ಆಕೆ ಚಿತ್ರದ ಛಾಯಾಗ್ರಾಹಕ ಇಯಾನ್ ಹಾವ್ಸ್. ಹ್ಯಾರಿ ಪಾಟರ್ ಚಿತ್ರಕ್ಕೆ ಕೆಲಸ ಮಾಡಿದ್ದವರು. ಲಂಡನ್​ನಲ್ಲಿ ಶೂಟಿಂಗ್ ಆದ ಭಾಗದ ದೃಶ್ಯಗಳ ಛಾಯಾಗ್ರಹಣ ಮಾಡಿದ್ದಾರೆ.  ಭಾರತದಲ್ಲಿ ನಡೆದಿರುವ ಶೂಟಿಂಗ್​ನಲ್ಲಿ ಕ್ಯಾಮೆರಾ ಹಿಡಿದಿರೋದು  ಮನೋಹರ್‌ ಜೋಷಿ. 

  ಕಲಾ ನಿರ್ದೇಶಕ ಪಾಲ್‌ ಬರ್ನ್ಸ್‌ ಕೂಡ ಹಾಲಿವುಡ್ ಚಿತ್ರ ‘ದ ನಾಟ್‌’ತಂಡದಲ್ಲಿ ಕೆಲಸ ಮಾಡಿದವರು. ಗೇಮ್ ಆಫ್ ದಿ ಥ್ರೋನ್ಸ್ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದವರು. ಇಂಗ್ಲೆಂಡ್​ನಲ್ಲಿ ನಡೆದ ಶೂಟಿಂಗ್​ನಲ್ಲಂತೂ ಚೈತನ್ಯ ಜೊತೆಗಿದ್ದ ಇಬ್ಬರು ಅಸಿಸ್ಟೆಂಟ್​​ಗಳನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಅಲ್ಲಿನವರೇ. 

  ಚೈತನ್ಯ ಅವರಿಗೇನೂ ಬ್ರಿಟನ್​ ಹೊಸದಲ್ಲ. ಅಲ್ಲಿಯೇ ಸಾಕ್ಷ್ಯಚಿತ್ರ ತಯಾರಿಸಿದ ಅನುಭವವಿದೆ. 

  ಇರೋಸ್ ಇಂಟರ್​ನ್ಯಾಷನಲ್ ನಿರ್ಮಿಸುತ್ತಿರುವ ಮೊದಲ ಕನ್ನಡ ಚಿತ್ರವೂ ಆಕೆ. 

  ಆಟಗಾರದಲ್ಲಿ ಚೈತನ್ಯ ಕೊಟ್ಟಿದ್ದ ಹಾರರ್ ಅನುಭವಕ್ಕೆ ಬೆಚ್ಚಿ ಬಿದ್ದಿದ್ದವರು, ಈಗ ಮತ್ತೊಮ್ಮೆ ಬೆಚ್ಚಿ ಬೀಳೋಕೆ ಸಿದ್ಧರಾಗಿದ್ದಾರೆ. ಚೈತನ್ಯ ಹೆದರಿಸೋದು ಗ್ಯಾರಂಟಿ ಅನ್ನೋ ನಂಬಿಕೆ ಪ್ರೇಕ್ಷಕರು.

 • ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ

  ramya tweets about aake

  ಆಕೆ ಚಿತ್ರ ಇದೇ ಜೂನ್ 30ಕ್ಕೆ ತೆರೆ ಕಾಣುತ್ತಿದೆ. ಟ್ರೇಲರ್​ನಲ್ಲೇ ಚಿತ್ರದ ಹಾರರ್​ ಫೀಲಿಂಗ್​ ನೋಡಿ ಬೆಚ್ಚಿದವರ ಸಂಖ್ಯೆ ಕಡಿಮೆಯೇನಿಲ್ಲ. ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಕೆ ಚಿತ್ರವನ್ನು ಹೊಗಳಿದ್ದರು.

  ಈಗ ರಮ್ಯಾ ಕೂಡಾ ಅಂಥದ್ದೇ ಮಾತು ಹೇಳಿದ್ದಾರೆ.

  ಟ್ರೇಲರ್ ಈಸ್ ಹಾಂಟಿಂಗ್ ಎಂಬ ಮಾತಿನಲ್ಲೇ ಆಕೆ ಚಿತ್ರದ ಹಾರರ್ ಫೀಲಿಂಗ್ ಎಂಥದ್ದು ಎನ್ನುವುದು ಗೊತ್ತಾಗುತ್ತಿದೆ.

  ಚಿತ್ರ ಹಾಲಿವುಡ್ ಸಿನಿಮಾ ಫೀಲಿಗ್ ಕೊಡುತ್ತೆ ಎಂದಿದ್ದರು ದರ್ಶನ್. ಚಿತ್ರ ಭಯ ಹುಟ್ಟಿಸುವಂತಿದೆ ಎನ್ನುತ್ತಿದ್ದಾರೆ ರಮ್ಯಾ. ಭಯ ಪಡೋಕೆ ಸಿದ್ಧರಾಗಿ. ಗುಂಡಿಗೆ ಗಟ್ಟಿಯಿರಲಿ.

  Related Articles :-

  ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

  Aake Censored

  Will It Be 9th Or 16th For Aake?

  Aake Trailer Released

  Eros International Presents Aake

  Chaitanya - Chiru Film Titled Aake 

   

   

 • ಆಟೋ ಡ್ರೈವರ್ ಆದ ಚಿರಂಜೀವಿ ಸರ್ಜಾ

  chiru sarja turns auto driver

  ಚಿರಂಜೀವಿ ಸರ್ಜಾ ಅಂದ್ರೆ ಆ್ಯಕ್ಷನ್ ಮತ್ತು ರೊಮ್ಯಾನ್ಸ್. ಆದರೆ, ಈಗ ಚಿರಂಜೀವಿ ಸರ್ಜಾ ಆಟೋ ಡ್ರೈವರ್ ಆಗಿಬಿಟ್ಟಿದ್ದಾರೆ. ಮೈಸೂರಿನಲ್ಲಿ ಅಕ್ಷರಶಃ ಆಟೋ ಓಡಿಸಿದ್ದಾರೆ ಚಿರಂಜೀವಿ ಸರ್ಜಾ.

  chiru_sarja_auto_driving1.jpgಅಮ್ಮ ಐ ಲವ್ ಯೂ ಚಿತ್ರದ ಪ್ರಚಾರಕ್ಕೆ ಮೈಸೂರಿಗೆ ತೆರಳಿದ್ದ ಚಿರಂಜೀವಿ ಸರ್ಜಾ, ಅಲ್ಲಿನ ಸಿದ್ಧಾರ್ಥ ಹೋಟೆಲ್‍ಗೆ ಆಟೋದಲ್ಲಿ ಎಂಟ್ರಿ ಕೊಟ್ರು. ತಿಂಡಿ ತಿನ್ನೋಕೆ ಆಟೋದಲ್ಲಿ ಬಂದ ಚಿರಂಜೀವಿ ಸರ್ಜಾರನ್ನು ಕಂಡವರಿಗೆ ಸಣ್ಣದೊಂದು ಆಘಾತವಾಗಿದ್ದರೆ ಅಚ್ಚರಿಯೇನೂ ಇಲ್ಲ.

  ಆದರೆ, ಇದು ಚಿತ್ರದ ಪ್ರಚಾರಕ್ಕಷ್ಟೇ ಅಲ್ಲ, ಮೈಸೂರಿಗೆ ಹೋದಾಗಲೆಲ್ಲ ಚಿರಂಜೀವಿ ಸರ್ಜಾ ಇಂಥಹ ಕೆಲಸ ಮಾಡ್ತಾ ಇರ್ತಾರಂತೆ. ಜಸ್ಟ್ ಥ್ರಿಲ್‍ಗಾಗಿ.

 • ಆಪ್ತಮಿತ್ರನಾಗಿ ‘ಆಕೆ’ ನೋಡುತ್ತೇನೆ - ಅಪ್ಪು

  puneeth eager to watch aake

  ಆಕೆ ಚಿತ್ರ ಇದೇ ಜೂನ್ 30ರಂದು ಬಿಡುಗಡೆಯಾಗ್ತಾ ಇದೆ. ಈಗಾಗಲೇ ಚಿತ್ರದ ಹಾರರ್ ಟ್ರೇಲರ್, ನಿರೀಕ್ಷೆ ಹುಟ್ಟಿಸಿದೆ. ದರ್ಶನ್, ಸುದೀಪ್, ರಮ್ಯಾ ಸೇರಿದಂತೆ ಚಿತ್ರರಂಗದ ಹಲವರು ಟ್ರೇಲರ್ ನೋಡಿಯೇ ಥ್ರಿಲ್ ಆಗಿದ್ದಾರೆ. ಈಗ ಥ್ರಿಲ್ ಆಗಿರೋದು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್.

  ಆಕೆ ಚಿತ್ರದ ಟ್ರೇಲರ್, ಹಾಲಿವುಡ್ ಸಿನಿಮಾಗಳಿಗೆ ಸಡ್ಡು ಹೊಡೆಯುವಂತಿದೆ. ಚಿತ್ರವನ್ನು ನಾನು ನೋಡಿಯೇ ನೋಡುತ್ತೇನೆ. ಚೈತನ್ಯ ಚಿತ್ರವನ್ನು ಅದ್ಭುತವಾಗಿ ಸೃಷ್ಟಿಸಿದ್ದಾರೆ ಎಂದಿರುವ ಅಪ್ಪು ಚಿತ್ರವನ್ನು ನೋಡಲು ನಾನು ಕಾತರನಾಗಿದ್ದೇನೆ ಎಂದಿದ್ದಾರೆ.

  ಎಲ್ಲಕ್ಕಿಂತ ಹೆಚ್ಚಾಗಿ, ಆಪ್ತಮಿತ್ರ ಚಿರಂಜೀವಿ ಸರ್ಜಾಗಾಗಿ ಈ ಚಿತ್ರ ನೋಡುತ್ತೇನೆ ಎಂದಿರುವ ಅಪ್ಪು, ಅಭಿಮಾನಿಗಳಲ್ಲಿ ಆಕೆ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

  Related Articles :-

  ಆಕೆ ಚಿತ್ರದ ಭಯಾನಕ ಅನುಭವಗಳು - ಕೇಳಿದರೆ ಬೆಚ್ಚಿಬೀಳುತ್ತೀರಿ

  ಚಿರುವಿನ 'ಆಕೆ'ಗೆ ಕಿಚ್ಚನ ಮೆಚ್ಚುಗೆ

  ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ

  ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

  Aake Censored

  Aake Trailer Released

  Eros International Presents Aake

  Chaitanya - Chiru Film Titled Aake 

 • ಇಂದು ಚಿರು-ಮೇಘನಾ ನಿಶ್ಚಿತಾರ್ಥ

  chiru meghana engagement today

  ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ವೈವಾಹಿಕ ಬಂಧನದ ಮೊದಲ ಹೆಜ್ಜೆ ಇಡಲಿದ್ದಾರೆ. ಇಂದು ಅವರಿಬ್ಬರಿಗೂ ನಿಶ್ಚಿತಾರ್ಥ. ಸುಮಾರು 10 ವರ್ಷಗಳ ಪ್ರೀತಿಗೆ ಎಂಗೇಜ್‍ಮೆಂಟ್ ರಿಂಗ್‍ನ ಮುದ್ರೆ ಬೀಳುವ ದಿನ. 

  ಕಲಾವಿದರ ಕುಟುಂಬದ ಕುಡಿಗಳು, ಮದುವೆಯಾಗುತ್ತಿರುವುದು ಇಡೀ ಚಿತ್ರರಂಗದಲ್ಲಿ ಒಂದು ಹಬ್ಬವನ್ನೇ ಸೃಷ್ಟಿಸಿದೆ ಎನ್ನಬೇಕು. 

  ಮೇಘನಾ ರಾಜ್, ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಮಗಳು. ಚಿರಂಜೀವಿ ಸರ್ಜಾ, ಅರ್ಜುನ್ ಸರ್ಜಾ ಅವರ ಸೋದರಿಯ ಮಗ. ಚಿತ್ರರಂಗದ ಎರಡು ಕುಟುಂಬಗಳು ಬೀಗರ ಕುಟುಂಬವಾಗುತ್ತಿರುವುದೇ ಖುಷಿಗೆ ಕಾರಣ.

  ಇಂದು ಸಂಜೆ ಲೀಲಾ ಪ್ಯಾಲೇಸ್‍ನಲ್ಲಿ ವಿಧ್ಯುಕ್ತ ಸಮಾರಂಭ ನಡೆಯಲಿದೆ. ಬೆಳಗ್ಗೆ ಮನೆಗಳಲ್ಲಿ ಶಾಸ್ತ್ರೋಕ್ತ ಸಂಪ್ರದಾಯಗಳು ನೆರವೇರಲಿವೆ. 

 • ಕಾಮಿಡಿ ಅಲ್ಲ.. ಸೀರಿಯಸ್ ಚಿಕ್ಕಣ್ಣ

  chikkanna in rajahuli

  ಚಿಕ್ಕಣ್ಣ ಎಂದ ಕೂಡಲೇ ಜನರ ಮುಖದಲ್ಲಿ ನಗು ಅರಳುತ್ತೆ. ಮುಖ ನೋಡಿದರೆ ಹಲ್ಲು ಓಪನ್ ಆಗುತ್ತೆ. ಇನ್ನು ಚಿಕ್ಕಣ್ಣ ಡೈಲಾಗ್ ಹೊಡೆಯೋಕೆ ಶುರು ಮಾಡಿದ್ರೆ, ಗಹಗಹಿಸಿ ನಗುವುದಷ್ಟೇ ಬಾಕಿ. ಅದು ಚಿಕ್ಕಣ್ಣ ಕಾಮಿಡಿಗಿರುವ ಸ್ಪೆಷಾಲಿಟಿ.

  ಆದರೆ, ಅಂಥಾ ಚಿಕ್ಕಣ್ಣ ಈಗ ಸೀರಿಯಸ್ ಪಾತ್ರ ಮಾಡಿದ್ದಾರಂತೆ. ಸಂಹಾರ ಚಿತ್ರದಲ್ಲಿ ಚಿಕ್ಕಣ್ಣ ಅವರದ್ದು ಇನ್ಸ್‍ಪೆಕ್ಟರ್ ಪಾತ್ರ. ಸಿಕ್ಕಾಪಟ್ಟೆ ಸೀರಿಯಸ್ ಆಗಿದೆ ಎಂದಿದ್ದಾರೆ ಚಿಕ್ಕಣ್ಣ.

  ಆದರೆ, ಟ್ರೇಲರ್‍ನಲ್ಲಿ ಕಾಮಿಡಿಯೇ ಇದ್ಯಲ್ಲ ಅಂದ್ರೆ, ಅದು ಸಿಚುಯೇಷನ್ ಕಾಮಿಡಿ ಅಷ್ಟೆ, ಉಳಿದಂತೆ ಸೀರಿಯಸ್ ಪಾತ್ರ ಅಂತಾರೆ ಚಿಕ್ಕಣ್ಣ.

  ಅಂದಹಾಗೆ ಚಿಕ್ಕಣ್ಣಗೆ ಒಬ್ಬ ನಟನಾಗಿ ಇಮೇಜ್ ಸೃಷ್ಟಿಸಿದ್ದು ರಾಜಾಹುಲಿ. ಆ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನದಲ್ಲಿಯೇ ಚಿಕ್ಕಣ್ಣ ಹೊಸ ಇಮೇಜ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಗುಡ್‍ಲಕ್.

 • ಗೋ ಹತ್ಯೆ.. ಡೈಲಾಗ್‍ಗೆ ಕತ್ತರಿ..!

  cow slaughter dialogue removied from seizer

  ಸೀಜರ್ ಚಿತ್ರ ನಾಳೆ ತೆರೆಕಾಣುತ್ತಿದೆ. ಚಿತ್ರದಲ್ಲಿ ಒಂದು ಕಡೆ ಗೋಹತ್ಯೆ ಕುರಿತ ಡೈಲಾಗ್ ಇದೆ. ಪಾತ್ರಧಾರಿ ರವಿಚಂದ್ರನ್, ಹಸುವಿನ ತಲೆ ಕಡಿಯುವುದು ಹಾಗೂ ಹೆತ್ತ ತಾಯಿಯ ತಲೆ ಹಿಡಿಯುವುದು ಎರಡೂ ಒಂದೇ ಎಂದು ಹೇಳುವ ಡೈಲಾಗ್ ಅದು. ಆ ಸಂಭಾಷಣೆಗೆ ವಿರೋಧ ವ್ಯಕ್ತವಾಗಿತ್ತು. ಗೋಹತ್ಯೆ ಪರ ಇರುವ ಸಂಘಟನೆಗಳು ಹಾಗೂ ಚಿತ್ರತಂಡದ ಭಾಗವಾಗಿರುವ ಪ್ರಕಾಶ್ ರೈ, ನಿರ್ದೇಶಕ ವಿನಯ್ ಕೃಷ್ಣ ವಿರುದ್ಧ ಕೆಂಡಕಾರಿದ್ದರು. ಫೋನ್ ಮಾಡಿ ಬೈದಿದ್ದೇನೆ ಎಂದು ಹೇಳಿದ್ದರು ಪ್ರಕಾಶ್ ರೈ.

  ಸಂಭಾಷಣೆಗೂ ರೈಗೂ ಸಂಬಂಧ ಇಲ್ಲ. ಅವರು ನನಗೆ ಫೋನ್ ಮಾಡಿಲ್ಲ ಎಂದಿದ್ದ ವಿನಯ್ ಕೃಷ್ಣ, ಈಗ ಚಿತ್ರದಲ್ಲಿ ಡೈಲಾಗ್‍ಗೆ ಮ್ಯೂಟ್ ಹಾಕಿಸಿದ್ದಾರೆ. ಅಂದರೆ, ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡುವಾಗ ಆ ಸಂಭಾಷಣೆ ಬರುವ ವೇಳೆ ಬೀಪ್ ಸೌಂಡ್ ಮಾತ್ರ ಕೇಳುತ್ತೆ. 

  ನಟ ರವಿಚಂದ್ರನ್ ಕೂಡಾ ವಿವಾದ ಏಕೆ, ಡೈಲಾಗ್ ಬಿಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ನಿರ್ದೇಶಕ ವಿನಯ್ ಹಾಗೂ ನಿರ್ಮಾಪಕ ತ್ರಿವಿಕ್ರಮ್ ಡೈಲಾಗ್‍ಗೆ ಕತ್ತರಿ ಆಡಿಸಿದ್ದಾರೆ. ಗೋಹತ್ಯೆ ಡೈಲಾಗ್ ಇಲ್ಲದ ಸೀಜರ್ ಸಿನಿಮಾ ನಾಳೆ ತೆರೆ ಕಾಣಲಿದೆ.

 • ಗೋಹತ್ಯೆ ಕುರಿತ ರವಿಚಂದ್ರನ್ ಡೈಲಾಗ್ ವಿವಾದ

  ravichandran dialogue creates controversy

  `ಹಸು ತಲೆ ಕಡಿಯೋದೂ ಒಂದೇ.. ಹೆತ್ತ ತಾಯಿಯ ತಲೆ ಹಿಡಿಯೋದೂ ಒಂದೇ..' ಇದು ರವಿಚಂದ್ರನ್ ಅಭಿನಯದ ಸೀಜರ್ ಚಿತ್ರದಲ್ಲಿರೋ ಡೈಲಾಗ್. ಈ ಡೈಲಾಗ್ ಹೇಳೋದು ನಾಯಕ ಕ್ರೇಜಿಸ್ಟಾರ್ ರವಿಚಂದ್ರನ್. ಸೀಜರ್ ಚಿತ್ರದ ಟ್ರೇಲರ್‍ನಲ್ಲೂ ಈ ಡೈಲಾಗ್ ಇದೆ. ಆದರೆ, ಈ ಡೈಲಾಗ್ ಈಗ ವಿವಾದಕ್ಕೆ ಕಾರಣವಾಗಿದೆ. 

  ರವಿಚಂದ್ರನ್ ಅವರಿಗೆ ಈಗ ಮಾರ್ಕೆಟ್ ಇಲ್ಲ. ಹೀಗಾಗಿ ಇಂತಹ ಗಿಮಿಕ್ ಮಾಡಿದ್ದಾರೆ. ಬೇರೆಯವರ ಆಹಾರ ಅಭ್ಯಾಸಗಳ ಬಗ್ಗೆ ಮಾತನಾಡೋ ಹಕ್ಕು ಅವರಿಗೆ ಇಲ್ಲ ಎನ್ನುವುದು ವಕೀಲ ಬಿ.ಟಿ.ವೆಂಕಟೇಶ್ ಎಂಬುವರ ಹೇಳಿಕೆ. ಹಿರಿಯ ನಟರಾದ ರವಿಚಂದ್ರನ್, ಈ ರೀತಿಯ ಡೈಲಾಗ್‍ಗೆ ನೋ ಎನ್ನಬೇಕಿತ್ತು. ಇದು ಕೋಮುಗಲಭೆಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಜನವಾದಿ ಸಂಘಟನೆ ನಾಯಕಿ ವಿಮಲಾ. 

  ಒಬ್ಬ ಹಿಂದೂ ಆಗಿ ಹಸುಗಳನ್ನು ಕೊಲ್ಲಬೇಡಿ ಎಂದು ಹೇಳೋದು ನನ್ನ ಹಕ್ಕು. ಗೋವನ್ನು ನಾವು ಪೂಜಿಸುತ್ತೇವೆ. ಗೋಹತ್ಯೆ ನಿಲ್ಲಿಸಬೇಕು. ಚಿತ್ರದಲ್ಲಿ ನಾವು ಅದನ್ನೇ ಹೇಳಿದ್ದೇವೆ. ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿಯೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಒಂದೇ ಒಂದು ಕಟ್ ಇಲ್ಲದೆ ಪ್ರಮಾಣ ಪತ್ರ ಕೊಟ್ಟಿದೆ. ಇದರಲ್ಲಿ ವಿವಾದವೇ ಇಲ್ಲ ಎಂದಿದ್ದಾರೆ ನಿರ್ದೇಶಕ ವಿನಯ್ ಕೃಷ್ಣ.

  ಸೀಜರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ನಿಂತಿರುವಾಗ ಇಂತಹ ವಿವಾದವಾದರೆ ಬಿಡುಗಡೆ ಸಾಧ್ಯವೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ರವಿಚಂದ್ರನ್ ಜೊತೆ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಪ್ರಕಾಶ್ ರೈ ಕೂಡಾ ಇದ್ದಾರೆ.

 • ಚಂದನ್ ಶೆಟ್ಟಿ ಸಂಗೀತ ನಿರ್ದೇಶನದ ಸೀಜರ್

  chandan shetty's music in seizer

  ಚಂದನ್ ಶೆಟ್ಟಿ ಎಂದರೆ ತಕ್ಷಣ ನೆನಪಾಗುವುದು ಮೂರೇ ಮೂರು ಪೆಗ್ಗಿಗೆ.. ಹಾಡು. ಆದರೆ, ಚಂದನ್ ಶೆಟ್ಟಿ ಇದಿಷ್ಟೇ ಅಲ್ಲ, ಅವರು ಗಾಯಕರೂ ಹೌದು. ಹಾಡನ್ನು ಬರೆಯುವ ಕಲೆಯೂ ಅವರಿಗೆ ಸಿದ್ಧಿಸಿದೆ. ಸಂಗೀತ ಸಂಯೋಜಿಸುವುದೂ ಗೊತ್ತಿದೆ. ಇದೆಲ್ಲವೂ ಗೊತ್ತಿರುವ ಚಂದನ್ ಶೆಟ್ಟಿ, ಸೀಜರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  ಚಂದನ್ ಶೆಟ್ಟಿಯವರಿಗೆ ಇಂತಾದ್ದೊಂದು ಅವಕಾಶ ಕೊಟ್ಟಿದ್ದು ನಿರ್ಮಾಪಕ ತ್ರಿವಿಕ್ರಮ್. ಪವರ್ ಚಿತ್ರದ ಧಮ್ ಪವರೇ ಹಾಡು ಕೇಳಿದ ನಂತರ ತ್ರಿವಿಕ್ರಮ್, ಚಂದನ್ ಅವರನ್ನು ಆಯ್ಕೆ ಮಾಡಿದರಂತೆ.

  ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾಲ್ಕೂ ಹಾಡುಗಳು ಸದ್ಯಕ್ಕೆ ಹಿಟ್ ಲಿಸ್ಟ್‍ನಲ್ಲಿವೆ. ವೆಸ್ಟರ್ನ್ ಶೈಲಿಯಲ್ಲಿರುವ ಸಂಗೀತ, ಅಭಿಮಾನಿಗಳಿಗೆ ಇಷ್ಟವಾಗಿದೆ.ರವಿಚಂದ್ರನ್, ಚಿರಂಜೀವಿ ಸರ್ಜಾ, ಪಾರೂಲ್ ಯಾದವ್ ಅಭಿನಯದ ಚಿತ್ರಕ್ಕೆ ವಿನಯ್ ಕೃಷ್ಣ ನಿರ್ದೇಶಕರು. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

 • ಚಿರಂಜೀವಿ ಸರ್ಜಾ V/S ಅರ್ಜುನ್ ಸರ್ಜಾ

  chiranjeevi sarja vs arjun sarja

  ಚಿರಂಜೀವಿ ಸರ್ಜಾ ಅವರಿಗೆ ಅರ್ಜುನ್ ಸರ್ಜಾ ಗಾಡ್‍ಫಾದರ್ ಅನ್ನೊದು ರಹಸ್ಯವೇನೂ ಅಲ್ಲ. ಮಾವ ಅರ್ಜುನ್ ಸರ್ಜಾ ಹಾಕಿದ ಗೆರೆಯನ್ನು ಚಿರಂಜೀವಿ ಸರ್ಜಾ ಆಗಲೀ, ಧ್ರುವ ಸರ್ಜಾ ಆಗಲೀ ಇದುವರೆಗೂ ದಾಟಿಲ್ಲ. ಮುಂದೆಯೂ ಅಂತಹ ಯಾವುದೇ ಸೂಚನೆಗಳಿಲ್ಲ. ಹೀಗಿದ್ದರೂ ಅರ್ಜುನ್ ಸರ್ಜಾ ವಿರುದ್ಧವೇ ಚಿರಂಜೀವಿ ಸರ್ಜಾ ನಿಲ್ಲುವಂತಾ ಪರಿಸ್ಥಿತಿ ಎದುರಾಗಿದೆ.

  ಚಿರಂಜೀವಿ ಸರ್ಜಾ ನಿರ್ದೇಶನದ ಪ್ರೇಮ ಬರಹ ಚಿತ್ರ ಫೆಬ್ರವರಿ 9ರಂದು ಬಿಡುಗಡೆಯಾಗುತ್ತಿದೆ. ಪ್ರೇಮ ಬರಹ ಚಿತ್ರದ ಹೀರೋಯಿನ್ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ. ಅದು ಐಶ್ವರ್ಯಾ ಅವರ ಪ್ರಥಮ ಚಿತ್ರವೂ ಹೌದು.

  ಅದೇ ದಿನ ಚಿರಂಜೀವಿ ಸರ್ಜಾ ಅಭಿನಯದ ಸಂಹಾರ ಕೂಡಾ ಬಿಡುಗಡೆಯಾಗುತ್ತಿದೆ. ಗುರು ದೇಶ್‍ಪಾಂಡೆ ನಿರ್ದೇಶನದ ಸಂಹಾರ ಚಿತ್ರದಲ್ಲಿ ಹರಿಪ್ರಿಯಾ ನಾಯಕಿ. ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿರಂಜೀವಿ ಸರ್ಜಾ, ಆ ದಿನ ಪೈಪೋಟಿ ನೀಡಬೇಕಿರುವುದು ತನ್ನ ಮಾವನ ನಿರ್ದೇಶನದ, ಮಾವನ ಮಗಳ ಚಿತ್ರಕ್ಕೆ. 

  ಒಂದೇ ದಿನ, ಒಂದೇ ಕುಟುಂಬದ ಎರಡು ಚಿತ್ರಗಳು ತೆರೆಗೆ ಬರುತ್ತಿರುವುದು ಸ್ಯಾಂಡಲ್‍ವುಡ್ ವಿಶೇಷ ಎಂದಷ್ಟೇ ಈಗ ಹೇಳೋಬಹುದು.

   

 • ಚಿರಂಜೀವಿ ಸರ್ಜಾ..ಚೇತನ್ ಜೊತೆ ಜೊತೆಯಲಿ..

  chethan and chiranjeeivi sarja team up

  ಚಿರಂಜೀವಿ ಸರ್ಜಾ ಮತ್ತು ಚೇತನ್ ರಣಂ ಚಿತ್ರದಲ್ಲಿ ಒಟ್ಟಿಗೇ ನಟಿಸುತ್ತಿದ್ದಾರೆ. ವಿ ಸಮುದ್ರ ನಿರ್ದೇಶನದ ಈ ಚಿತ್ರದಲ್ಲಿ, ಚೇತನ್ ಕ್ರಾಂತಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಅದೂ ಚೆಗವೇರಾ ಮಾದರಿಯ ಕ್ರಾಂತಿಕಾರಿ. 

  ಈಗ ಆ ಚಿತ್ರಕ್ಕೆ ಚಿರಂಜೀವಿ ಸರ್ಜಾ ಪ್ರವೇಶವಾಗಿದೆ. ಚಿರು, ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರಂತೆ. ಚೇತನ್ ಇರುವ ದೃಶ್ಯಗಳ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿರಂಜೀವಿ ಸರ್ಜಾ ಅಭಿನಯದ ದೃಶ್ಯಗಳ ಚಿತ್ರೀಕರಣ ಬಾಕಿ ಇದೆ. ಚಿರು, 20 ದಿನಗಳ ಕಾಲ್‍ಶೀಟ್ ಕೊಟ್ಟಿದ್ದಾರೆ.

 • ಚಿರು ಮೇಘನಾ ಮದ್ವೆಯಂತೆ..! ನಿಜಾನಾ..?

  chiranjeevi sarja meghana raj

  ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಧ್ಯೆ ಪ್ರೀತಿಯಿದೆ.. ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಲು ಶುರುವಾಗಿ 2 ವರ್ಷಗಳೇ ಕಳೆದುಹೋದವು. ಊಹೂಂ.. ಸುದ್ದಿ ನಿಜವಾಗಲಿಲ್ಲ. 

  ಇಬ್ಬರೂ ಎರಡು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದರು. ಪ್ರೀತಿ ಮದುವೆ ಸುದ್ದಿಗೆ ರೆಕ್ಕೆ ಪುಕ್ಕ ಬಂದವು. ಖಾಸಗಿ ಸಮಾರಂಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಸುದ್ದಿಯ ಗಿಡ ಬೆಳೆದು ಹೆಮ್ಮರವಾಗೋಕೆ ಗೊಬ್ಬರ ಸಿಕ್ಕಂತಾಯ್ತು. ಮಧ್ಯೆ ಮಧ್ಯೆ ಇಬ್ಬರೂ ತಮ್ಮ ಮಧ್ಯೆ ಅಂಥದ್ದೇನೂ ಇಲ್ಲ ಎಂದು ಹೇಳುತ್ತಲೇ ಬಂದರು. 

  ಈಗ ಮತ್ತೊಂದು ಹೊಸ ಸುದ್ದಿ. ಇಬ್ಬರೂ ಡಿಸೆಂಬರ್ 2ನೇ ವಾರದಲ್ಲಿ ಸಪ್ತಪದಿ ತುಳಿಯುತ್ತಿದ್ದಾರಂತೆ. ಈ ಬಾರಿಯೂ ಮೇಘನಾ ಮತ್ತು ಚಿರಂಜೀವಿ ಸರ್ಜಾ, ಇದನ್ನು ನಿರಾಕರಿಸಿದ್ದಾರೆ. ತಮ್ಮ ಮದುವೆ ಬಗ್ಗೆಯೇ ಏಕೆ ಇಷ್ಟೊಂದು ಸುದ್ದಿ ಹಬ್ಬುತ್ತವೋ ನಮಗೂ ಗೊತ್ತಿಲ್ಲ ಎಂದಿದ್ದಾರೆ.

 • ಚಿರು ಸರ್ಜಾ ಕೋಟ್ಯಧಿಪತಿಯೋ.. ಭಿಕ್ಷುಕನೋ..?

  amma i love you poster creates curiosity

  ಅಮ್ಮ ಐ ಲವ್ ಯೂ.. ತಾಯಿಯನ್ನು ಇಷ್ಟಪಡುವ ಪ್ರತಿಯೊಬ್ಬರಿಗೂ ಇಷ್ಟವಾಗುವಂಥಾ ಟೈಟಲ್ಲು. ಚೈತನ್ಯ ನಿರ್ದೇಶನದ ಸಿನಿಮಾ ಆಗಿರೋದ್ರಿಂದ ಕುತೂಹಲವೂ ದೊಡ್ಡ ಮಟ್ಟದಲ್ಲೇ ಇದೆ. ಅಲ್ಲದೆ ಚಿತ್ರದ ನಿರ್ಮಾಪಕರಾಗಿರುವುದು ಯೋಗಿಶ್ ದ್ವಾರಕೀಶ್ ಮತ್ತು ದ್ವಾರಕೀಶ್. ಕಥೆಗೆ ಇನ್ನಿಲ್ಲದ ಪ್ರಾಮುಖ್ಯತೆ ಕೊಡುವ ಯೋಗಿ ದ್ವಾರಕೀಶ್, ಈ ಸಿನಿಮಾದಲ್ಲೂ ಕಥೆಯನ್ನೇ ಗಮನದಲ್ಲಿಟ್ಟುಕೊಂಡಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

  ಎಲ್ಲವನ್ನೂ ಸಿದ್ಧಪಡಿಸಿಕೊಂಡು ಸಿನಿಮಾಗೆ ಫೈನಲ್ ಟಚಪ್ ನೀಡುತ್ತಿರುವ ಚಿತ್ರತಂಡ ಆಡಿಯೋ ಬಿಡುಗಡೆಗೆ ಸಿದ್ಧವಾಗಿದೆ. ಈ ಮಧ್ಯೆ ಗಮನ ಸೆಳೆಯುತ್ತಿರುವ ಅಂಶವೆಂದರೆ ಚಿತ್ರದ ಪೋಸ್ಟರ್‍ಗಳು. ಒಂದು ಪೋಸ್ಟರ್‍ನಲ್ಲಿ ಚಾರ್ಟರ್ಡ್ ಪ್ಲೇನ್‍ನಿಂದ ಇಳಿಯುತ್ತಿರುವ ಕೋಟ್ಯಧಿಪತಿಯ ಲುಕ್‍ನಲ್ಲಿರುವ ಚಿರು, ಇನ್ನೊಂದು ಪೋಸ್ಟರ್‍ನಲ್ಲಿ ಅಪ್ಪಟ ಭಿಕ್ಷುಕನಂತೆ ಕಾಣಿಸುತ್ತಿರುವ ಚಿರು.. ಏನಿದು ಅನ್ನೋ ಕುತೂಹಲ ಹುಟ್ಟೋಕೆ ಅಷ್ಟು ಸಾಕು.

  ಅಂದಹಾಗೆ ಈ ಭಾನುವಾರ ಅಮ್ಮಂದಿರ ದಿನ. ಆ ದಿನದ ವಿಶೇಷವಾಗಿ ಚಿತ್ರತಂಡ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡುತ್ತಿದೆ. ಅದು, ಅಮ್ಮ ಐ ಲವ್ ಯೂ ಚಿತ್ರತಂಡದಿಂದ ಅಮ್ಮಂದಿರ ದಿನಕ್ಕೆ ಉಡುಗೊರೆ.

 • ಚಿರು, ಧ್ರುವಾ ಅಮ್ಮನ ದಿನದ ಸ್ಪೆಷಲ್ ವಿಡಿಯೋ

  mothers days special

  ಅಮ್ಮ ಐ ಲವ್ ಯೂ ಚಿತ್ರತಂಡ ಅಮ್ಮಂದಿರ ದಿನಕ್ಕಾಗಿ ಒಂದು ಸ್ಪೆಷಲ್ ವಿಡಿಯೋ ಹಾಗೂ ಒಂದು ಹಾಡನ್ನು ರಿಲೀಸ್ ಮಾಡ್ತಾ ಇದೆ. ತಾಯಿಯ ಕುರಿತು ಇದ್ದ ಒಂದು ಕೊಟೇಷನ್ ಗಿರಿ ದ್ವಾರಕೀಶ್ ಮತ್ತು ಚೈತನ್ಯಗೆ ಇಷ್ಟವಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸಿ ಚಿರು ಮುಂದಿಟ್ಟಾಗ ಚಿರು ಮತ್ತು ಧ್ರುವ ಒಟ್ಟಿಗೇ ಮಾಡುವ ಬಯಕೆ ತೋರಿಸಿದ್ರು. ಅದರಂತೆ ವಿಡಿಯೋ ಸಿದ್ಧವಾಯ್ತು. ಈಗ ಅಮ್ಮಂದಿರ ದಿನದ ಕೊಡುಗೆಯಾಗಿ ಬಂದಿದೆ. ಅಷ್ಟೇ ಅಲ್ಲ, ಚಿತ್ರದ ಒಂದು ಹಾಡಿನ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.

  ಇಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಅಂತೀರಾ.. ತಾಯಿಯಿಂದ ಏನು ಬಯಸುತ್ತೇವೆ ಮತ್ತು ತಾಯಿಗೆ ಏನು ಕೊಡುತ್ತೇವೆ ಅನ್ನೋ ಸಂದೇಶ ವಿಡಿಯೋದಲ್ಲಿದೆ. ಅಷ್ಟೇ ಅಲ್ಲ, ತಂದೆಯಾಗಲು ಒಂದು ಕ್ಷಣ ಬೇಕು ಆದರೆ, ತಾಯಿಯಾಗಲು ಒಂದು ಜೀವನ ಬೇಕು ಅನ್ನೋದು ವಿಡಿಯೋ ಸಂದೇಶ. ಇದು ಅಮ್ಮಂದಿರ ದಿನಕ್ಕಾಗಿ ಅಮ್ಮ ಐ ಲವ್ ಯೂ ಚಿತ್ರತಂಡ ನೀಡುತ್ತಿರುವ ಕಾಣಿಕೆ.

 • ಚಿರು-ಮೇಘನಾ ಎರಡನೇ ಮದುವೆ

  chiru meghana gets married

  ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ 2ನೇ ಬಾರಿಗೆ ಮದುವೆಯಾಗಿದ್ದಾರೆ. ಒಂದೇ ವಾರದೊಳಗೆ ಎರಡು ಬಾರಿ ಮದುವೆಯಾಗಿರೋದು ವಿಶೇಷ. ಏಪ್ರಿಲ್ 29ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದ ಚಿರು-ಮೇಘನಾ, ಈಗ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.

  ಬುಧವಾರ ಬೆಳಗ್ಗೆ 10ರಿಂದ 11.30ರೊಳಗೆ ನಡೆದ ಮಿಥುನ ಲಗ್ನದಲ್ಲಿ ಚಿರು-ಮೇಘನಾ ಸತಿಪತಿಗಳಾದರು. ತಾಳಿ ಕಟ್ಟುವಾಗ ಮೇಘನಾ ನಾನ್‍ಸ್ಟಾಪ್ ಆಗಿ ಮಾತನಾಡುತ್ತಲೇ ಇದ್ದರು. ಚಿರು ನಗುತ್ತಲೇ ಇದ್ದರು. ನೀಲಿ ಗೋಲ್ಡ್ ಮಿಶ್ರಿತ ಅಂಚಿನ ಸೀರೆ ಧರಿಸಿದ್ದ ಮೇಘನಾ, ಅದಕ್ಕೆ ತಕ್ಕಂತೆ ಮಾಂಗ್‍ಟಿಕಾ, ಡಾಬು, ಒಡವೆಗಳಿಂದ ನಕ್ಷತ್ರದಂತೆ ಮಿನುಗುತ್ತಿದ್ದರು. ವರ ಚಿರು, ಪೇಟ, ಬಿಳಿಪಂಚೆ, ಶಲ್ಯದಲ್ಲಿ ಮಿನುಗಿದರು.

  ನವದಂಪತಿಗಳ ವಿವಾಹ ಸಂಭ್ರಮಕ್ಕೆ ಇಡೀ ಸ್ಯಾಂಡಲ್‍ವುಡ್ ಸಾಕ್ಷಿಯಾಯ್ತು. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಕಲಾವಿದರು, ತಂತ್ರಜ್ಞರೂ ಮದುವೆಗೆ ಆಗಮಿಸಿ ವಧೂವರರಿಗೆ ಶುಭ ಕೋರಿದರು.

 • ಚಿರುವಿನ 'ಆಕೆ'ಗೆ ಕಿಚ್ಚನ ಮೆಚ್ಚುಗೆ

  sudeep wishes aake team

  ಚಿರಂಜೀವಿ ಸರ್ಜಾ ಅಭಿನಯದ ಆಕೆ ಚಿತ್ರಕ್ಕೆ ಚಿತ್ರರಂಗದಲ್ಲಿ ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ. ಈಗ ಆಕೆಯನ್ನು ಹೊಗಳುವ ಸರದಿ ಕಿಚ್ಚ ಸುದೀಪ್ ಅವರದ್ದು. ಆಕೆ ಚಿತ್ರದ ಟ್ರೇಲರ್ ನೋಡಿಯೇ ಸುದೀಪ್ ಫಿದಾ ಆಗಿ ಹೋಗಿದ್ದಾರೆ.

  ಚಿರು ಸರ್ಜಾ, ಸುದೀಪ್‍ರನ್ನ ತನ್ನ ಗಾಡ್‍ಫಾದರ್ ಎಂದೇ ಹೇಳಿಕೊಳ್ತಾರೆ. ಸುದೀಪ್ ಕೂಡಾ ಅಷ್ಟೆ. ಈ ಹಿಂದೆ ವರದನಾಯಕ ಚಿತ್ರದಲ್ಲಿ ಸುದೀಪ್ ಪೋಷಕ ನಟನಾಗಿ ನಟಿಸಿದ್ದರು. ಆ ಚಿತ್ರಕ್ಕೆ ಚಿರು ನಾಯಕರಾಗಿದ್ದರು.

  ಚಿರಂಜೀವಿ ಸರ್ಜಾಗೆ ಬೆನ್ನು ತಟ್ಟುವ, ಒಳ್ಳೆಯದು ಮಾಡಿದಾಗ ಮೆಚ್ಚುವ, ತಪ್ಪು ಮಾಡಿದಾಗ ಒಳಗೇ ಕರೆದು ಬುದ್ದಿ ಹೇಳುವ ಒಂದು ಆತ್ಮೀಯತೆಯನ್ನು ಸುದೀಪ್ ಇಟ್ಟುಕೊಂಡಿದ್ದಾರೆ.

  ಆ ಆತ್ಮೀಯತೆಯ ಇನ್ನೊಂದು ಹೆಜ್ಜೆಯೇ ಈ ಹೊಗಳಿಕೆ. ಸುದೀಪ್ ಬಳಿ ಹೊಗಳಿಸಿಕೊಳ್ಳೋದು ಸುಮ್ಮನೆ ಮಾತಲ್ಲ. ಇಷ್ಟವಾಗದೇ ಹೋದರೆ, ಏನೊಂದೂ ಮಾತನಾಡದೆ ಸುಮ್ಮನಾಗಿಬಿಡುವ ಸುದೀಪ್, ಆಕೆ ಚಿತ್ರವನ್ನು ಮೆಚ್ಚಿದ್ದಾರೆ ಎಂದರೆ, ಚಿತ್ರದಲ್ಲಿ ಸ್ಪೆಷಲ್ ಇದೆ ಎಂದೇ ಅರ್ಥ. 

  ಆಕೆ, ಇದೇ ಜೂನ್ 30ಕ್ಕೆ ತೆರೆ ಕಾಣ್ತಾ ಇದೆ. ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ ನಾಯಕ-ನಾಯಕಿ. ಚೈತನ್ಯ ನಿರ್ದೇಶನದ ಚಿತ್ರ ಆಕೆ. ಟ್ರೇಲರ್ ನೋಡಿಯೇ ಭಯಬಿದ್ದವರು, ಚಿತ್ರವನ್ನು ಮಿಸ್ ಮಾಡಿಕೊಳ್ಳೋದಿಲ್ಲ ಅನ್ನೋ ಗ್ಯಾರಂಟಿ ಚಿತ್ರತಂಡಕ್ಕಿದೆ. 

  Related Articles :-

  ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ

  ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

  Aake Censored

  Will It Be 9th Or 16th For Aake?

  Aake Trailer Released

  Eros International Presents Aake

  Chaitanya - Chiru Film Titled Aake 

   

   

   

 • ಚಿರುವಿನಂತಾ ಮಕ್ಕಳಿರಬೇಕು ಅಂದವರು ಮಹಿಳಾ ಪ್ರೇಕ್ಷಕರು..!

  women audience loves chiru sarja

  ಅಮ್ಮ ಐ ಲವ್ ಯು. ಥಿಯೇಟರುಗಳಲ್ಲಿ ಪ್ರೇಕ್ಷಕರ ಕಣ್ಣಾಲಿ ಒದ್ದೆ ಮಾಡುತ್ತಿರುವ ಸಿನಿಮಾ. ತಾಯಿಗಾಗಿ, ತಾಯಿಯ ಆರೋಗ್ಯಕ್ಕಾಗಿ ಭಿಕ್ಷೆ ಬೇಡುವ ಮಗನ ಕಥೆ, ತುಂಬಾ ಇಷ್ಟವಾಗಿರೋದು ಮಹಿಳಾ ಪ್ರೇಕ್ಷಕರಿಗೆ. ಥಿಯೇಟರಿನಿಂದ ಹೊರಬಂದ ಮಹಿಳೆಯರು, ಇದ್ದರೆ ಚಿರಂಜೀವಿ ಸರ್ಜಾನಂತಾ ಮಕ್ಕಳು ಇರಬೇಕು ಎನ್ನುತ್ತಿರುವುದು ಚಿತ್ರತಂಡಕ್ಕೆ ಸಿಕ್ಕಿರುವ ಅತಿದೊಡ್ಡ ಗೆಲುವು ಎಂದರೆ ತಪ್ಪಲ್ಲ.

  ಪ್ರೇಕ್ಷಕರು, ಕಳೆದ ವರ್ಷ ರಾಜಕುಮಾರ ಚಿತ್ರಕ್ಕೆ ಇಂತಾದ್ದೊಂದು ಪ್ರತಿಕ್ರಿಯೆ ಕೊಟ್ಟಿದ್ದರು. ಈ ಬಾರಿ ಅಮ್ಮ ಐ ಲವ್ ಯು ಚಿತ್ರಕ್ಕೆ ಅಂತಾದ್ದೊಂದು ಪ್ರತಿಕ್ರಿಯೆ ಸಿಕ್ಕಿದೆ. ತಾಯಿ ಅಂದ್ರೆ ಏನು ಅಂಥಾ ತಿಳಿದುಕೊಳ್ಳೋಕೆ ಮಕ್ಕಳು, ಮಕ್ಕಳು ಹೇಗಿರಬೇಕು, ಹೇಗೆ ಬೆಳೆಸಬೇಕು ಅಂತಾ ತಿಳಿದುಕೊಳ್ಳೋಕೆ ಹೆತ್ತವರು ಈ ಸಿನಿಮಾ ನೋಡಬೇಕು ಅಂಥಾ ಪ್ರೇಕ್ಷಕರು ಹೇಳಿ, ಸಿನಿಮಾದವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ. ಯೋಗಿ ದ್ವಾರಕೀಶ್, ಚೈತನ್ಯಗೆ ಸಿಕ್ಕಿರುವ ಅತಿದೊಡ್ಡ ಆಶೀರ್ವಾದ ಇದು.

 • ನಾನಾ.. ಮಾವನಾ..? ಚಿರಂಜೀವಿ ಸರ್ಜಾ ವಿಚಿತ್ರ ಸಂಕಟ

  chiranjeevi sarja in big dilema

  ಮುದ್ದಾಡೆಂದಿದೆ ಮಲ್ಲಿಗೆ ಹೂ.. ಬಳಸೂ ಎಂದಿದೆ ಸಂಪಿಗೆ ಹೂ.. ಅದು ಇಬ್ಬರ ಹೆಂಡಿರ ಗಂಡನ ತಾಕಲಾಟ. ಆದರೆ, ಚಿರಂಜೀವಿ ಸರ್ಜಾರದ್ದು ಆ ರೀತಿಯ ಸಂಕಟವಲ್ಲ. ಹೇಳಿಕೊಳ್ಳಲಾಗದ, ಸುಮ್ಮನಿರಲಾಗದ ವಿಚಿತ್ರ ತಳಮಳ. ಏಕೆಂದರೆ, ಈ ವಾರ ಅವರಿಗೆ ಎರಡು ಖುಷಿಯಿದೆ. ವಿಚಿತ್ರವೆಂದರೆ ಅವರೆಡೂ ಅವರಿಗೆ ಟೆನ್ಷನ್ ಕೂಡಾ ಹೌದು.

  ಈ ವಾರ ಚಿರಂಜೀವಿ ಸರ್ಜಾ ಅಭಿನಯದ ಸಂಹಾರ ಚಿತ್ರ ತೆರೆಗೆ ಬರುತ್ತಿದೆ. ಅದಕ್ಕೆ ಎದುರಾಗಿ ಬರುತ್ತಿರುವುದು ಪ್ರೇಮಬರಹ ಸಿನಿಮಾ. ಅದು ಐಶ್ವರ್ಯಾ ಸರ್ಜಾ ಲಾಂಚ್ ಆಗುತ್ತಿರುವ ಚಿತ್ರ. ಚಿರಂಜೀವಿ ಸರ್ಜಾ ತಮ್ಮ ಜೀವನದಲ್ಲಿ ತಮ್ಮ ಮಾಮ ಅರ್ಜುನ್ ಸರ್ಜಾರನ್ನು ಯಾವ ಎತ್ತರದಲ್ಲಿಟ್ಟಿದ್ದಾರೆ ಅನ್ನೋದನ್ನು ಬಿಡಿಸಿ ಹೇಳುವ ಅಗತ್ಯವೇ ಇಲ್ಲ. ಆದರೆ, ಈಗ ಅದೇ ಚಿತ್ರದ ಎದುರು ಅವರ ಚಿತ್ರವೇ ನಿಲ್ಲುವವಿಚಿತ್ರ ಪರಿಸ್ಥಿತಿ ಎದುರಾಗಿಬಿಟ್ಟಿದೆ.

  ಸಂಹಾರ ಚಿತ್ರ ಗೆಲ್ಲಬೇಕು. ಹಾಗೆಂದು ಪ್ರಾರ್ಥಿಸೋಕೆ ಕಾರಣ, ಆ ಚಿತ್ರಕ್ಕೆ ಅವರೇ ಹೀರೋ. ಪ್ರೇಮಬರಹ ಚಿತ್ರವೂ ಗೆಲ್ಲಬೇಕು. ಏಕೆಂದರೆ, ಆ ಚಿತ್ರದ ನಾಯಕಿ ಅರ್ಜುನ್ ಸರ್ಜಾ ಮಗಳು. ಅಷ್ಟೇ ಅಲ್ಲ, ಪ್ರೇಮಬರಹ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಒಂದು ಹಾಡಲ್ಲಿ ಕುಣಿದು ಕುಪ್ಪಳಿಸಿದ್ದಾರೆ ಕೂಡಾ. 

  ಹೀಗಾಗಿ ಒಂದೇ ವಾರ ಚಿರಂಜೀವಿ ಸರ್ಜಾ ಆಂಜನೇಯನ ಎದುರು ಎರಡು ಬೇಡಿಕೆ ಇಟ್ಟಿರೋದು ಸ್ಪಷ್ಟ. ಸಂಹಾರ ಚಿತ್ರ ಗೆಲ್ಲಬೇಕು. ಪ್ರೇಮಬರಹ ಚಿತ್ರವೂ ಗೆಲ್ಲಬೇಕು. ಆಂಜನೇಯ ಆ ಬೇಡಿಕೆಯನ್ನು ಈಡೇರಿಸಬೇಕು. 

The Terrorist Movie Gallery

Rightbanner02_taarakasura_inside

Thayige Thakka Maga Movie Gallery