` shivarajkumar birthday - chitraloka.com | Kannada Movie News, Reviews | Image

shivarajkumar birthday

 • Raghavendra Rajakumar's Gift to Shivarajakumar

  shivarajkumar birthday image

  Raghavendra Rajakumar on Sunday gifted his brother Shivarajakumar a DVD and wished him a great life and future ahead. The DVD which is called 'Bro You Are My Father' is a tribute to Shivarajakumar from Raghavendra Rajakumar. The brothers share a great bond among themselves and Raghavendra Rajakumar says that Shivarajakumar is more like a father rather than his brother.

  The DVD which has a visual footage of around seven minutes shows the rapport and the bond the brothers share. Raghavendra Rajakumar has explained how Shivarajakumar is like a father to him.

 • Shivarajakumar Celebrates his 53rd Birthday

  shivarajkumar birthday image

  Actor Shivarajakumar on Sunday celebrated his 53rd birthday with his family, friends and fan. From morning fans of Shivarajakumar thronged his residence in Nagavara. The fans had brought huge garlands apart from cakes and sweets for their favourite actor. Shivarajakumar greeted all of them and celebrated his birthday with them. The fans had organised blood donation and other health related camps onn this occasion.

  Shivarajakumar's cousin and actor Vijay Raghavendra and many others from the film fraternity wished Shivarajakumar on this occasion.

 • ಪತ್ನಿ, ತಮ್ಮನೊಂದಿಗೆ ಶಿವಣ್ಣ ಹುಟ್ಟುಹಬ್ಬ

  shivarajkumar celebrates his birthday post surgery

  ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಲಂಡನ್‍ನಲ್ಲಿಯೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಲಭುಜದ ಶಸ್ತ್ರ ಚಿಕಿತ್ಸೆಗಾಗಿ ತೆರಳಿರುವ ಶಿವಣ್ಣ ಅಪರೇಷನ್ ಮುಗಿದಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.

  ಪತ್ನಿ ಗೀತಾ ಶಿವರಾಜ್‍ಕುಮಾರ್ ಹಾಗೂ ತಮ್ಮ ಪುನೀತ್ ರಾಜ್‍ಕುಮಾರ್ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಈ ನಡುವೆಯೇ ಶಿವಣ್ಣನ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಿ, ಶುಭ ಹಾರೈಸಿದ್ದಾರೆ ಗೀತಾ ಮತ್ತು ಪುನೀತ್.

  ಹ್ಯಾಪಿ ಹುಟ್ದಬ್ಬ ಶಿವಣ್ಣ.

 • ಶಿವಣ್ಣ 57ನೇ ಹುಟ್ಟುಹಬ್ಬಕ್ಕೆ ಕಾಣಿಕೆಗಳ ಸುರಿಮಳೆ

  shivanna;s 57th birthday highloghts

  ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ 57ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತ್ನಿ ಗೀತಾ ಹಾಗೂ ತಮ್ಮ ಪುನೀತ್ ಜೊತೆ ಲಂಡನ್‍ನಲ್ಲಿರುವ ಶಿವಣ್ಣ, ಅಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ರು. ನಂತರ ಲಂಡನ್‍ನಲ್ಲಿರುವ ಗೆಳೆಯರು ಶಿವಣ್ಣಗೊಂದು ಪುಟ್ಟ ಪಾರ್ಟಿ ಕೊಟ್ಟರು. ಆದರೆ, ಅಭಿಮಾನಿಗಳ ಸಂಭ್ರಮವೇ ಬೇರೆ. 

  ಮೊದಲು ಶಿವಣ್ಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಎಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮಗಳನ್ನು ಮಾಡಿಸಿದ್ದ ಅಭಿಮಾನಿಗಳು, ಹುಟ್ಟುಹಬ್ಬದ ದಿನ ಕರುನಾಡ ಮನೆ ಮಗನು, ಕರುಣೆಯಲಿ ರಾಜರ ಮಗನು.. ಎಂಬ ಒಂದು ವಿಶೇಷ ಗೀತೆಯನ್ನೇ ರೆಡಿ ಮಾಡಿದ್ದಾರೆ. ಆ ಹಾಡನ್ನು ಪುನೀತ್ ರಾಜ್‍ಕುಮಾರ್ ಅವರ ಅಧಿಕೃತ ಪಿಆರ್‍ಕೆ ಯೂಟ್ಯೂಬ್ ಚಾನೆಲ್‍ನಲ್ಲಿ ರಿಲೀಸ್ ಮಾಡಿ ಖುಷಿ ಪಟ್ಟಿದ್ದಾರೆ. ಪ್ರಮೋದ್ ಜೋಯಿಸ್ ಸಾಹಿತ್ಯಕ್ಕೆ ಚೇತನ್ ಕೃಷ್ಣ ಧ್ವನಿ ನೀಡಿದ್ದಾರೆ.

  ಇನ್ನು ಇದೇ ವೇಳೆ ಚಿತ್ರರಂಗದ ಗಣ್ಯರು ಶುಭಾಶಯ ಕೋರಿದ್ದಾರೆ. ಪಿ.ವಾಸು ನಿರ್ದೇಶನದ ದ್ವಾರಕೀಶ್ ಬ್ಯಾನರ್‍ನ ಆಯುಷ್ಮಾನ್ ಭವ ಚಿತ್ರದ ಪೋಸ್ಟರ್ ಹೊರಬಂದಿದೆ.

  ಹರ್ಷ ನಿರ್ದೇಶನದ, ಜಯಣ್ಣ ಕಂಬೈನ್ಸ್‍ನ ಭಜರಂಗಿ2 ಚಿತ್ರದ ಫಸ್ಟ್‍ಲುಕ್ ಇದೇ ವೇಳೆ ಹೊರಬಿದ್ದಿದೆ. ದ್ರೋಣ ರಿಲೀಸ್‍ಗೆ ರೆಡಿ ಎಂದು ಸಾರಿದೆ. ಶಿವಣ್ಣ ಹ್ಯಾಪಿ.. ಹ್ಯಾಪಿ.

 • ಶಿವಣ್ಣ ಹುಟ್ಟುಹಬ್ಬದ ಸಂಭ್ರಮವಿಲ್ಲ - ಪೊಲೀಸ್ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ

  no birthday celebrations this years for shivarajkumar

  ಜುಲೈ 12ನೇ ತಾರೀಕಿಗೆ ಶಿವರಾಜ್ ಕುಮಾರ್ ಹುಟ್ಟುಹಬ್ಬವಿದೆ. ಆದರೆ, ಈ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಿಸುತ್ತಿಲ್ಲ.

  ಶಿವಣ್ಣನವರ ತಾಯಿ ಪಾರ್ವತಮ್ಮ ರಾಜ್ಕುಮಾರ್ ನಿಧನದ ಹಿನ್ನೆಲೆಯಲ್ಲಿ ಹುಟ್ಟುಹಬ್ಬದ ಸಂಭ್ರಮದಿಂದ ದೂರವೇ ಉಳಿದಿದ್ದಾರೆ ಶಿವಣ್ಣ. ಹುಟ್ಟುಹಬ್ಬದ ಸಂಭ್ರಮದ ಬದಲಿಗೆ ರಾಜ್ಯ ಸಶಸ್ತ್ರ ಮೀಸಲು ಪಡೆ ಪೊಲೀಸ್ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅವರಷ್ಟೇ ಅಲ್ಲ, ಟಗರು ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಕೂಡಾ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ.