` actor prabhas - chitraloka.com | Kannada Movie News, Reviews | Image

actor prabhas

 • 2022 ಏಪ್ರಿಲ್ 14ಕ್ಕೆ ಸಲಾರ್

  2022 ಏಪ್ರಿಲ್ 14ಕ್ಕೆ ಸಲಾರ್

  ಪ್ರಭಾಸ್.  ನ್ಯಾಷನಲ್ ಸ್ಟಾರ್. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್. ಇವರ ಜೊತೆ ಕೈಜೋಡಿಸಿರುವುದು ಸ್ಯಾಂಡಲ್‍ವುಡ್ ಸೆನ್ಸೇಷನ್ ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರು. ಕೆಜಿಎಫ್ ಚಾಪ್ಟರ್ 2 ಮುಗಿಸಿದ ಬೆನ್ನಲ್ಲೇ ಸಲಾರ್ ಕೈಗೆತ್ತಿಕೊಂಡಿರೋ ಪ್ರಶಾಂತ್ ನೀಲ್, ಸಲಾರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.

  ಒಂದು ವರ್ಷ ಮೊದಲೇ.. ಪಕ್ಕಾ ಲೆಕ್ಕ ಹಾಕಿದರೆ 13 ತಿಂಗಳು 14 ದಿನ ಮೊದಲೇ ರಿಲೀಸ್ ಡೇಟ್ ಘೋಷಿಸಿದೆ ಹೊಂಬಾಲೆ ಫಿಲಂಸ್. ಪ್ರಭಾಸ್, ಶ್ರುತಿ ಹಾಸನ್ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಸಲಾರ್, 2022ರ ಸೆನ್ಸೇಷನಲ್  ಮೂವಿ ಆಗೋದಂತೂ ಪಕ್ಕಾ.

 • Another PAN Indian Film From Hombale Films Launched 

  Another PAN Indian Film From Hombale Films Launched 

  Prashanth Neel's PAN India film 'Salaar' being produced by Vijay Kiragandur of Hombale Films was launched in Hyderabad on Friday. Deputy Chief Minister Ashhwathnaryan, Yash, Prabhas and others were present during the occasion.

  'Salaar' is a Telugu and will be released in other Indian languages including Kannada. The film is said to be a remake of Prashanth Neel's debut film 'Ugram'. Prashanth and Prabhas were supposed to collaborate for the film five years ago. However, the film got delayed as both of them got busy with their prior commitments. Now, the film has finally been launched with Vijay Kiragandur bankrolling the project.

  The regular shooting for the film will commence from February as Prabhas is busy with the final leg of 'Radhe Shyam'. The shooting for the film will be held in specially erected sets in Bangalore and Hyderabad. Bhuvan Gowda is the cinematographer, while Ravi Basrur is in charge of the music.

 • Baahubali Destroys Tamil and English in Bengaluru - Exclusive

  bahubali image

  The Telugu film Baahubali is being blamed for creating a huge crisis for Kannada films in Bengaluru and rest of Karnataka. But a closer look reveals that it is Tamil and English films that have borne the maximum burnt. The Telugu film has taken over all the screens that were screening Tamil films in Bengaluru. And surprisingly it is not the Tamil version that is being screened here. Though the film is being released in four languages most of the theatres are screening only the Telugu version. Only a small number of theatres Kannada films have been occupied.

  The Tamil, Malayalam and Hindi versions have been released only in a handful of theatres in Bengaluru. The Telugu version has been released in 51 theatres including multiplexes. In multiplexes alone there are 301 shows of the Telugu version of the film on Friday. The statistics show that Tamil films are losing. While Kannada films are also losing some shows it is not as dramatic as what is being felt by Tamil. 

  Kannada films Ranna and Vajrakaya have completed 25 days. On Thursday they had 20 and 7 shows in multiplexes respectively. They are down to 6 and 2 respectively on Friday. Rangi Taranga which was getting a good response is down to 6 shows on Friday from 18 on Thursday in multiplexes. Two Tamil films that were doing well in Bengaluru multiplexes were Kaaka Muttai and Papanasham. Kaaka Muttai has lost all eight shows going from Thursday to Friday. Paapanasham starring Kamal Hassan is the biggest loser though it was hailed as a very good film. From 101 shows on Thursday, it is down to 11 shows on Friday and only 8 shows on Saturday and Sunday! Even English films are facing a problem. Terminator Genisys is down from 130 shows on Thursday to just 13 shows on Friday. Another English film Jurassic World has fared a little better. From 60 shows in multiplexes on Thursday it has maintained 30 shows on Friday.

  Baahubali thus has taken over most of the Tamil and English screens and to a lesser extent Kannada films. But since there is no big Kannada film released this week, there is  no competition to Baabhubali in Karnataka. But how it will affect collections of already released Kannada films this week has to be seen.

  Also See

  Bahubali Prabhakar Acts in Lakshmana - Exclusive

  RX Soori Trailer with Bahubali - Exclusive

  RS Productions to Distribute Bahubali - Exclusive

  Lahari bags the Audio Rights of Bahubali

  Rajamouli Releases the First Look of Sudeep in Bahubali

  Notice Against Telugu Bahubali From Karnataka

 • Prabhas To Star in Hombale Productions Next Film 'Salaar'

  Prabhas To Star in Hombale Productions Next Film 'Salaar'

  PAN India actor Prabhas is all set to act in Hombale Productions next film called 'Salaar' to be directed by Prashanth Neel. The film is all set to go on floors in the month of January and the first poster of the film has been released.

  Hombale Productions had said that the new film will be announced on Wednesday afternoon and according to that, the first poster of 'Salaar' was released on 02:09 PM through social media. The film is said to be a remake of the Kannada hit 'Ugram' which was released in 2014.

  'Ugram' is said to be a PAN India film which will be released in mulitple languages across India. The shooting for the film will commence once Prabhas completes his work in 'Radhe Shyam' which is currently on floors.

 • ಆದಿಪುರುಷ್ : ಟೀಸರ್ ಬಂದಾಗ ಬೈದವರು ಟ್ರೇಲರ್ ಬಂದಾಗ ಮೆಚ್ಚಿದರು..!

  ಆದಿಪುರುಷ್ : ಟೀಸರ್ ಬಂದಾಗ ಬೈದವರು ಟ್ರೇಲರ್ ಬಂದಾಗ ಮೆಚ್ಚಿದರು..!

  ಬಾಹುಬಲಿ ಪ್ರಭಾಸ್, ಕೃತಿ ಸನೂನ್, ಸೈಫ್ ಅಲಿಖಾನ್… ಹೀಗೆ ಭರ್ಜರಿ ತಾರಾಗಣವೇ ಇರುವ ಚಿತ್ರ ಆದಿಪುರುಷ್. ರಾಮಾಯಣವನ್ನು ಆನಿಮೇಷನ್ ಮೂಲಕ, ಗ್ರಾಫಿಕ್ಸ್‍ನಲ್ಲಿಯೇ ಹೆಚ್ಚು ಕಟ್ಟಿಕೊಟ್ಟಿರುವ ಸಿನಿಮಾ. ಪ್ರಭಾಸ್ ಶ್ರೀರಾಮನಾಗಿ, ಕೃತಿ ಸನೂನ್ ಸೀತೆಯಾಗಿ ಹಾಗೂ ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿರುವ ಚಿತ್ರದ ಟೀಸರ್ ಈ ಹಿಂದೆ ರಿಲೀಸ್ ಆಗಿತ್ತು. ಟೀಸರ್ ನೋಡಿದವರು ಚಿತ್ರದ ನಿರ್ಮಾಪಕರು, ನಿರ್ದೇಶಕರ ಜನ್ಮ ಜಾಲಾಡಿದ್ದರು. ಪ್ರೇಕ್ಷಕರ ಆಕ್ರೋಶದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನೂ ಮುಂದಕ್ಕೆ ಹಾಕಿ, ಚಿತ್ರದ ಆನಿಮೇಷನ್ ಕೆಲಸಗಳನ್ನು, ತಪ್ಪುಗಳನ್ನು ತಿದ್ದಿಕೊಳ್ಳೋ ಕೆಲಸಕ್ಕೆ ಮುಂದಾಗಿದ್ದರು.

  ಈಗ ಟ್ರೇಲರ್ ರಿಲೀಸ್ ಆಗಿದೆ. ರಾಮಾಯಣದ ಕಥೆಯಾದ್ದರಿಂದ, ಕಥೆಯ ಬಗ್ಗೆ ಕುತೂಹಲ ಇಲ್ಲ. ಹೇಗೆ ಹೇಳಲಿದ್ದಾರೆ ಎಂಬುದಷ್ಟೇ ಕುತೂಹಲ. ಟೀಸರಿಗೆ ಹೋಲಿಸಿದರೆ ಟ್ರೇಲರ್ ಓಕೆ ಎನ್ನುವಂತಿದೆ. ಆದರೆ ಇದು ಗ್ರಾಫಿಕ್ಸ್ ಸ್ಕ್ರೀನ್ ಎನ್ನುವುದು ಎದ್ದು ಕಾಣುವಂತಿದೆ. ಹಾಲಿವುಡ್ ಬಿಡಿ, ಇದೇ ಪ್ರಭಾಸ್ ಅಭಿನಯದ ಬಾಹುಬಲಿ, ಆರ್.ಆರ್.ಆರ್. ನೋದಿವರಿಗೆ ಯಾವುದು ಗ್ರಾಫಿಕ್ಸ್.. ಯಾವುದು ಕ್ಯಾಮೆರಾ ಕೈಚಳಕ ಎನ್ನುವುದು ಗೊತ್ತಾಗದಂತಹ ಪ್ರೊಡಕ್ಷನ್ ವರ್ಕ್ ಇತ್ತು. ಆದರೆ ಆದಿಪುರುಷ್‍ನಲ್ಲಿ ಹಾಗಲ್ಲ.  ಇಷ್ಟಿದ್ದರೂ ಟೀಸರಿಗೆ ಹೋಲಿಸಿದರೆ ಉತ್ತಮ ಎನ್ನುವ ಅಭಿಪ್ರಾಯ ಪ್ರೇಕ್ಷಕರದ್ದು.

 • ಆರ್.ಆರ್.ಆರ್. ಭಯ ಬಿದ್ದರೂ ರಾಧೇ ಶ್ಯಾಂ ಹೆದರಲಿಲ್ಲ..!

  ಆರ್.ಆರ್.ಆರ್. ಭಯ ಬಿದ್ದರೂ ರಾಧೇ ಶ್ಯಾಂ ಹೆದರಲಿಲ್ಲ..!

  ಜನವರಿ ಮೊದಲ ವಾರ ರಿಲೀಸ್ ಆಗಬೇಕಿದ್ದ ಸಿನಿಮಾ ಆರ್.ಆರ್.ಆರ್. ಯಾವಾಗ ಸರ್ಕಾರಗಳು ಒಮಿಕ್ರಾನ್ ಭೂತವನ್ನು ಮುಂದಿಟ್ಟವೋ ತಕ್ಷಣ ಹಿಂದೆ ಸರಿದುಬಿಟ್ಟಿತು. ಹಲವು ಚಿತ್ರಗಳು ಈಗ ರಿಲೀಸ್ ಮಾಡಬೇಕಾ ಬೇಡವಾ ಎಂಬ ಗೊಂದಲದಲ್ಲಿವೆ. ಕಾರಣ ಇಷ್ಟೆ.. ದೆಹಲಿ, ಕೋಲ್ಕತಾ, ತಮಿಳುನಾಡು, ಮುಂಬೈಗಳಲ್ಲಿ ಆಗಲೇ 50:50 ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ಇಲ್ಲಿನ ರಾಜ್ಯ ಸರ್ಕಾರದವರ ಮಾತುಗಳಲ್ಲಿ ನಂಬಿಕೆ ಇಡೋದು ಕಷ್ಟ. 50:50 ನಿರ್ಬಂಧ ಕೂಡಾ ಇಲ್ಲ ಎನ್ನುತ್ತಲೇ ಲಾಕ್ ಡೌನ್ ಹೇರಿದ 2ನೇ ಅಲೆಯ ದೃಷ್ಟಾಂತ ಕಣ್ಣೆದುರೇ ಇದೆ. ಇಂತದ್ದರ ನಡುವೆಯೂ ರಾಧೇ ಶ್ಯಾಂ ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ.

  ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ರಾಧೇ ಶ್ಯಾಂ. ಈಗಾಗಲೇ ಚಿತ್ರವನ್ನು ಪ್ರಚಾರ ಮಾಡಿದ್ದೇವೆ. ಈಗ ಹಿಂದೆ ಸರಿಯಲ್ಲ. ಸರ್ಕಾರವೇನಾದರೂ ಲಾಕ್ ಡೌನ್ ಘೋಷಿಸಿದರೆ ಮಾತ್ರ ಸಿನಿಮಾ ರಿಲೀಸ್ ಎನ್ನಬಹುದು ಎಂದಿದೆ ರಾಧೇ ಶ್ಯಾಂ ಟೀಂ.

 • ಕನ್ನಡಕ್ಕೆ ಪ್ರಭಾಸ್.. ತೆಲುಗಿಗೆ ಪುನೀತ್.. ಸ್ವಾಗತ.. ಸುಸ್ವಾಗತಂ..

  Prabhas and Puneeth Rajkumar Welcomes Each Other

  ಸಲಾರ್.. ಉರ್ದು ಭಾಷೆಯಲ್ಲಿ ಈ ಪದಕ್ಕೆ ಸೈನ್ಯಾಧಿಕಾರಿ, ಕಮಾಂಡರ್, ಲೀಡರ್, ನಾಯಕ ಅನ್ನೋ ಅರ್ಥವಿದೆ. ಆ ಹೆಸರಿನಲ್ಲೀಗ ಸಿನಿಮಾ ಶುರುವಾಗಿದೆ. ಹೀರೋ ಬಾಹುಬಲಿ ಪ್ರಭಾಸ್. ಕರ್ನಾಟಕದ ಹೆಮ್ಮೆಯ ಚಿತ್ರಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಪಕ. ಡೈರೆಕ್ಟರ್ ಪ್ರಶಾಂತ್ ನೀಲ್.

  ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿರೋ ಸಿನಿಮಾ ಕನ್ನಡಕ್ಕೂ ಬರುತ್ತಿದೆ. ಈ ಮೂಲಕ ಪ್ರಭಾಸ್ ಕನ್ನಡಕ್ಕೆ ಬರುತ್ತಿದ್ದಾರೆ. ಪ್ರಭಾಸ್‍ಗೆ ಸ್ವಾಗತ ಕೋರಿರುವುದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.

  ಇನ್ನು ಪುನೀತ್ ಅಭಿನಯದ ಯುವರತ್ನ, ತೆಲುಗಿಗೆ ಹೊರಟಿದೆ. ಡೈರೆಕ್ಟರ್ ಸಂತೋಷ್ ಆನಂದರಾಮ್. ಒನ್ಸ್ ಎಗೇಯ್ನ್ ರಾಜಕುಮಾರ ಕಾಂಬಿನೇಷನ್. ಪವರ್ ಆಫ್ ಯೂತ್ ಅನ್ನೋ ಹಾಡು ತೆಲುಗಿನಲ್ಲೂ ಟ್ರೆಂಡ್ ಆಗಿದೆ. ಪುನೀತ್‍ಗೆ ಅತ್ತ ತೆಲುಗಿನಲ್ಲಿ ಸುಸ್ವಾಗತಂ ಎಂದಿರುವುದು ಪ್ರಭಾಸ್.

  ಎರಡು ಭಿನ್ನ ಭಾಷೆಗಳ ಚಿತ್ರರಂಗದ ಸೂಪರ್ ಸ್ಟಾರ್ ನಟರು ಪರಸ್ಪರ ಭಾಷೆಗಳ ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವುದು ಚಿತ್ರರಂಗದ ಹೊಸ ಮನ್ವಂತರಕ್ಕೆ ಸಾಕ್ಷಿಯಾಗುತ್ತಿದೆ.

 • ಕಾಂತಾರ ಮೆಚ್ಚಿದ ಅರುಂಧತಿ : 2ನೇ ಬಾರಿ ನೋಡಿದ ಪ್ರಭಾಸ್

  ಕಾಂತಾರ ಮೆಚ್ಚಿದ ಅರುಂಧತಿ : 2ನೇ ಬಾರಿ ನೋಡಿದ ಪ್ರಭಾಸ್

  ಕಾಂತಾರ ಚಿತ್ರವನ್ನು ಕರಾವಳಿ ಸಂಸ್ಕøತಿ ಗೊತ್ತಿಲ್ಲದವರೂ ನೋಡಿ ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಅಂತಹುದರಲ್ಲಿ ಕರಾವಳಿಯವರೇ ಆದ ಕನ್ನಡದ ಹುಡುಗಿ ತೆಲುಗು ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿಯವರೂ ಮೆಚ್ಚಿರೋದ್ರಲ್ಲಿ ಸಂಶಯವಿಲ್ಲ. ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ಅರುಂಧತಿ, ಬಾಹುಬಲಿ, ರುದ್ರಮದೇವಿಯಂತ ಸಿನಿಮಾಗಳ ಮೂಲಕ ತೆಲುಗರ ಹೃದಯದಲ್ಲಿ ನೆಲೆ ನಿಂತಿದ್ದಾರೆ. ಪ್ರತಿ ವರ್ಷ ತಮ್ಮ ಊರಿಗೆ ಬಂದು ದೈವಾರಾಧನೆ ಮಾಡುವುದನ್ನು ತಪ್ಪಿಸುವುದೇ ಇಲ್ಲ. ಏಕೆಂದರೆ ಅದು ಅವರ ನಂಬಿಕೆ. ಈಗ ತೆಲುಗಿನಲ್ಲಿ ರಿಲೀಸ್ ಆದ ಸಿನಿಮಾವನ್ನು ಅನುಷ್ಕಾ ಶೆಟ್ಟಿ ನೋಡಿ ಮೆಚ್ಚಿಕೊಂಡಿದ್ದಾರೆ.

  ಕಾಂತಾರ ನೋಡಿದ ಬಳಿಕ ಪೋಸ್ಟ್ ಹಾಕಿರುವ ನಟಿ ಅನುಷ್ಕಾ ಶೆಟ್ಟಿ, ಕಾಂತಾರ ಸಿನಿಮಾ ವೀಕ್ಷಿಸಿದೆ. ನನಗೆ ಈ ಸಿನಿಮಾ ತುಂಬಾ ತುಂಬಾ ಇಷ್ಟವಾಯಿತು. ಈ ಸಿನಿಮಾದ ಪ್ರತಿಯೊಬ್ಬ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. `ಕಾಂತಾರ’ ಇಡೀ ತಂಡ ಅದ್ಭುತವಾಗಿದೆ. ನಮಗೆ ಈ ಅದ್ಭುತ ಅನುಭವ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ಅದ್ಭುತ. ದಯವಿಟ್ಟು ಥಿಯೇಟರ್ನಲ್ಲಿ ಈ ಚಿತ್ರವನ್ನು ನೋಡಿ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.

  ಕಾಂತಾರ ನೋಡಿ ಮೆಚ್ಚಿದ ಬೇರೆ ಚಿತ್ರರಂಗದವರಲ್ಲಿ ಅನುಷ್ಕಾ ಶೆಟ್ಟಿ ಮೊದಲಿಗರೇನಲ್ಲ. ತೆಲುಗಿನಲ್ಲೇ ನಾನಿ ಫಿಲ್ಮ್‍ಫೇರ್ ಅವಾರ್ಡ್ ಸಮಾರಂಭದಲ್ಲಿಯೇ ಹಾಡಿ ಹೊಗಳಿದ್ದರು. ಇನ್ನು ಪ್ರಭಾಸ್ ಕನ್ನಡದಲ್ಲಿಯೇ ನೋಡಿ ಚಿತ್ರ ರಿಲೀಸ್ ಆದ ದಿನವೇ ಚಿತ್ರದ ಬಗ್ಗೆ ಪೋಸ್ಟ್ ಹಾಕಿದ್ದರು. ಇದಾದ ಮೇಲೆ ತೆಲುಗಿನಲ್ಲಿ ಬಂದ ಮೇಲೆ ಮತ್ತೊಮ್ಮೆ ಕಾಂತಾರ ನೋಡಿ ತೆಲುಗಿನಲ್ಲಿ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ. ಸಖತ್ತಾಗಿದೆ ಎಂದಿದ್ದಾರೆ.

  ನಮ್ಮ ಪ್ರಶಾಂತ್ ನೀಲ್ ಕೂಡಾ ತಮ್ಮ ಕೆಜಿಎಫ್‍ಗಿಂತ ಇದು ನನ್ನ ಆಲ್‍ಟೈಂ ಫೇವರಿಟ್ ಸಿನಿಮಾಗಳ ಲಿಸ್ಟಿಗೆ ಹೊಸ ಸೇರ್ಪಡೆ ಎಂದಿದ್ದಾರೆ.

  ತೆಲುಗಿನ ಮತ್ತೊಬ್ಬ ಸ್ಟಾರ್ ನಟ ವಿಷ್ಣು ಮಂಚು ಚಿತ್ರವನ್ನು ಬೆಂಗಳೂರಿಗೇ ಬಂದು ನೋಡಿದ್ದಾರೆ. ಮೆಚ್ಚಿಕೊಂಡಿದ್ದಾರೆ. ಹಿಂದಿ, ತೆಲುಗು, ತಮಿಳಿನಲ್ಲೂ ಆರ್ಭಟ ಮುಂದವರೆಸಿರುವ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೊಸ ಇತಿಹಾಸ ಬರೆಯುತ್ತಿದೆ.

 • ಪ್ರಭಾಸ್ ಅಂದ್ರೆ ರಶ್ಮಿಕಾಗೆ ಕ್ರಶ್ ಅಂತೆ..!

  ಪ್ರಭಾಸ್ ಅಂದ್ರೆ ರಶ್ಮಿಕಾಗೆ ಕ್ರಶ್ ಅಂತೆ..!

  ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಕ್ರಶ್ ಆಗಿರೋದು ಗೊತ್ತಿರೋ ವಿಷಯಾನೇ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ತಮಿಳುನಾಡಿನ ಸೊಸೆಯಾಗುವ ಆಸೆ ಹೇಳಿಕೊಂಡಿದ್ದರು. ಈಗ ಪ್ರಭಾಸ್ ಮೇಲಿರೋ ಕ್ರಶ್ ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ನೀವು ಯಾರ ಜೊತೆ ಡೇಟಿಂಗ್ ಹೋಗೋಕೆ ಇಷ್ಟಪಡ್ತೀರಿ ಎಂಬ ಪ್ರಶ್ನೆಗೆ ರಶ್ಮಿಕಾ ಥಟ್ ಅಂತಾ ಹೇಳಿದ ಉತ್ತರ ಬಾಹುಬಲಿ ಪ್ರಭಾಸ್.

  ನನಗೆ ಪ್ರಭಾಸ್ ಅಂದ್ರೆ ತುಂಬಾ ಇಷ್ಟ. ಆಕ್ಚಯಲಿ ನನಗೆ ಅವರ ಮೇಲೆ ಕ್ರಶ್ ಆಗಿದೆ. ಚಾನ್ಸ್ ಸಿಕ್ಕರೆ ಅವರ ಜೊತೆ ಡೇಟಿಂಗ್‍ಗೂ ಹೋಗುತ್ತೇನೆ. ಅವರ ಜೊತೆ ನಟಿಸೋಕೆ ಕಾಯುತ್ತಿದ್ದೇನೆ ಎಂದಿದ್ದಾರೆ ರಶ್ಮಿಕಾ.

 • ಪ್ರಭಾಸ್ ಚಿತ್ರ ಮಾಡ್ತಾರಾ ಕೆಜಿಎಫ್ ಪ್ರಶಾಂತ್ ನೀಲ್..?

  will prashanth neel to direct prabhas ?

  ಕೆಜಿಎಫ್ ಚಿತ್ರ ಇಡೀ ದೇಶವನ್ನು ಸಮ್ಮೋಹನಗೊಳಿಸಿದೆ. ಸಹಜವಾಗಿಯೇ ಕೆಜಿಎಫ್, ತೆಲುಗು ಸ್ಟಾರ್ ನಟ ಪ್ರಭಾಸ್‍ರನ್ನೂ ಆಕರ್ಷಿಸಿದೆ. ಚಿತ್ರ ನೋಡಿದ ಪ್ರಭಾಸ್‍ಗೆ ಇಷ್ಟವಾಗಿರೋದು ನಿರ್ದೇಶಕ ಪ್ರಶಾಂತ್ ನೀಲ್. ಹೀಗಾಗಿ ತಮಗೊಂದು ಸಿನಿಮಾ ಮಾಡಿಕೊಡಿ ಎಂದು ಪ್ರಭಾಸ್, ಪ್ರಶಾಂತ್ ನೀಲ್‍ರನ್ನು ಕೇಳಿಕೊಂಡಿದ್ದಾರಂತೆ.

  ಪ್ರಭಾಸ್ ಅವರ ಯುವಿ ಕ್ರಿಯೇಷನ್ಸ್‍ನಲ್ಲೇ ಪ್ರಭಾಸ್‍ರ ಮುಂದಿನ ಸಿನಿಮಾ ನಿರ್ಮಾಣವಾಗಲಿದೆ. ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗಿದೆ.

  ಪ್ರಶಾಂತ್ ನೀಲ್ ಅವರ ಬಗ್ಗೆ ಪ್ರಭಾಸ್ ಬಳಿ ಸ್ವತಃ ರಾಜಮೌಳಿ ಶಿಫಾರಸು ಮಾಡಿದ್ದಾರೆ ಎನ್ನುವುದು ತೆಲುಗು ಚಿತ್ರರಂಗದಿಂದ ತೇಲಿ ಬರುತ್ತಿರುವ ಸುದ್ದಿ. ಸುದ್ದಿಯನ್ನು ಇದುವರೆಗೆ ಪ್ರಶಾಂತ್ ನೀಲ್ ಕನ್‍ಫರ್ಮ್ ಮಾಡಿಲ್ಲ.