ಬಿಚ್ಚುಗತ್ತಿ, ಇದೇ ವಾರ ರಿಲೀಸ್ ಆಗಿ ಜನ ಮೆಚ್ಚುಗೆ ಪಡೆದಿರುವ ಸಿನಿಮಾ. ಬಿಚ್ಚುಗತ್ತಿ ಭರಮಣ್ಣನಾಗಿ ರಾಜವರ್ಧನ್, ಸಿದ್ದಾಂಬೆಯಾಗಿ ಹರಿಪ್ರಿಯಾ ಸಿನಿಮಾವನ್ನು ಆವರಿಸಿಬಿಟ್ಟಿದ್ದಾರೆ. ಚಿತ್ರದಲ್ಲಿ ಅಷ್ಟೇ ಪ್ರಮುಖವಾದ ಪಾತ್ರ ದಳವಾಯಿ ಮುದ್ದಣ್ಣನದ್ದು. ಈ ಪಾತ್ರಕ್ಕೆ ಜೀವ ತುಂಬಿರೋದು ಬಾಹುಬಲಿ ಪ್ರಭಾಕರ್. ಅಭಿನಯ ಬೊಂಬಾಟ್ ಇದ್ದರೂ, ತೆಲುಗಿನವರಾದ ಪ್ರಭಾಕರ್ ಡಬ್ಬಿಂಗ್‍ನಲ್ಲಿ ಕೆಲವು ಅಪಭ್ರಂಶಗಳಿದ್ದವು. ಇವುಗಳ್ನು ಪ್ರೇಕ್ಷಕರು ಗುರುತಿಸಿ, ಬದಲಿಸುವಂತೆ ಒತ್ತಡ ಬಂದ ಕಾರಣ, ಬಿಚ್ಚುಗತ್ತಿ ಚಿತ್ರತಂಡ ಧ್ವನಿ ಬದಲಿಸಲು ಮುಂದಾಗಿದೆ.
ಪ್ರಭಾಕರ್ ಅರ್ಥಾತ್ ಮುದ್ದಣ್ಣನ ಪಾತ್ರಕ್ಕೆ ಬೇರೊಬ್ಬ ಕಲಾವಿದರಿಂದ ಡಬ್ಬಿಂಗ್ ಮಾಡಿಸುತ್ತಿದೆ ಚಿತ್ರತಂಡ. ಈಗಾಗಲೇ ಡಬ್ಬಿಂಗ್ ಮುಕ್ತಾಯದ ಹಂತಕ್ಕೆ ಬಂದಿದೆ. ಮುಂದಿನ ವಾರ ಅಂದರೆ ಶುಕ್ರವಾರದಿಂದ ಹೊಸ ಮುದ್ದಣ್ಣನ ಧ್ವನಿ ಚಿತ್ರಮಂದಿರದಲ್ಲಿ ಮೊಳಗಲಿದೆ.