` puneeth rajkumar, - chitraloka.com | Kannada Movie News, Reviews | Image

puneeth rajkumar,

 • ಯುವರತ್ನ ಚಿತ್ರದ ಕಥೆಯ ಗುಟ್ಟು ರಟ್ಟಾಯ್ತು..!

  what is yuvaratna story

  ಯುವರತ್ನ ಚಿತ್ರಕ್ಕೆ ಅಭಿಮಾನಿಗಳು ಅದೆಷ್ಟು ಕಾತರದಿಮದ ಕಾಯುತ್ತಿದ್ದಾರೆಂದರೆ, ನಿರ್ದೇಶಕರಿಗೇ ಟೆನ್ಷನ್ ಶುರುವಾಗಿದೆ. ಅಭಿಮಾನಿಗಳೇ ಒಂದು ರಿಲೀಸ್ ಡೇಟ್ ಫಿಕ್ಸ್ ಮಾಡಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸಿಟ್ಟಿನಲ್ಲಿ ನಿರ್ದೇಶಕರಿಗೇ ಮೆಸೇಜ್ ಮಾಡುತ್ತಿದ್ದಾರೆ. ಹಾಗೆಲ್ಲ ಮಾಡಬೇಡಿ, ಒಳ್ಳೆಯ ಸಿನಿಮಾ ಬರಲಿದೆ ಎಂದು ಹೇಳಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್, ಕಥೆಯ ಗುಟ್ಟೊಂದನ್ನು ಬಿಟ್ಟುಕೊಟ್ಟಿದ್ದಾರೆ.

  ರಾಜಕುಮಾರ ಚಿತ್ರದಲ್ಲಿ ಮೆಡಿಕಲ್ ಮಾಫಿಯಾ, ವೃದ್ಧಾಶ್ರಮದ ಕಥೆಯಿತ್ತು. ಯುವರತ್ನ ಚಿತ್ರದಲ್ಲಿ ಎಜುಕೇಷನ್ ಮಾಫಿಯಾ ಹಾಗೂ ಅದರ ವಿರುದ್ಧ ನಾಯಕ ಹೇಗೆಲ್ಲ ಹೋರಾಡುತ್ತಾನೆ ಎನ್ನುವ ಕಥೆಯಿದೆ. ಈ ಮಾಫಿಯಾದಿಂದಾಗಿಯೇ ಹೈಯರ್ ಎಜುಕೇಷನ್ ಸಾಮಾನ್ಯರ ಕೈಗೆ ಸಿಗುತ್ತಿಲ್ಲ ಎಂಬ ಕಥೆಯನ್ನು ಕಟ್ಟಿಕೊಟ್ಟಿದ್ದೇವೆ ಎಂದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್.

  ಹೀರೋ ಪುನೀತ್, ಡೈರೆಕ್ಟರ್ ಸಂತೋಷ್ ಮತ್ತು ಪ್ರೊಡ್ಯೂಸರ್ ವಿಜಯ್ ಕಿರಗಂದೂರು. ರಾಜಕುಮಾರ ನಂತರ ಜೊತೆಯಾಗಿರುವ ತ್ರಿಮೂರ್ತಿಗಳ ಜೋಡಿ. ಜೊತೆಗೆ ಅತಿ ದೊಡ್ಡ ತಾರಾಬಳಗ. ದಸರಾಗೆ ಟೀಸರ್ ಬಿಡುತ್ತಿರುವ ಚಿತ್ರತಂಡ, ರಿಲೀಸ್ ಡೇಟ್‍ನ್ನು ಇನ್ನೂ ಅನೌನ್ಸ್ ಮಾಡಿಲ್ಲ.

 • ಯುವರತ್ನ ಟೀಂಗೆ ಇನ್ನೊಬ್ಬರು ಸ್ಟಾರ್ ಎಂಟ್ರಿ..!

  yuvaratna completes 3rd schedule

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ಈಗಾಗಲೇ ದೊಡ್ಡ ದೊಡ್ಡ ಸ್ಟಾರ್‍ಗಳೇ ಇದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್‍ರಾಮ್, ಈಗ ಯಾವ ಸ್ಟಾರ್‍ಗಳಿಗೂ ಕಡಿಮೆಯೇನಲ್ಲ. ಜೊತೆಗೆ ರಾಧಿಕಾ ಶರತ್‍ಕುಮಾರ್, ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ಸಯೇಷಾ ಸೈಗಲ್ ನಾಯಕಿ.

  ಇಷ್ಟೆಲ್ಲ ಸ್ಟಾರ್‍ಗಳ ಜೊತೆ ಇನ್ನೊಬ್ಬರು ಖ್ಯಾತ ಕಲಾವಿದರು ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಅವರ್ಯಾರು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. 

  ಅಂದಹಾಗೆ ಯುವರತ್ನ ಚಿತ್ರಕ್ಕೆ 10 ಶೆಡ್ಯೂಲ್‍ಗಳಲ್ಲಿ ಒಟ್ಟು 100 ದಿನ ಶೂಟಿಂಗ್ ನಡೆಯಲಿದೆ. ಸದ್ಯಕ್ಕೆ 3 ಹಂತದ ಶೂಟಿಂಗ್ ಮುಗಿದಿದೆ. ಕ್ರಿಸ್‍ಮಸ್‍ಗೆ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ ಸಂತೋಷ್ ಆನಂದ್‍ರಾಮ್.

 • ಯುವರತ್ನ ಟೀಂಗೆ ಭಗವಾನ್

  bhagwan joins yuvaratna team

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದರಾಮ್, ವಿಜಯ ಕಿರಗಂದೂರು ಕಾಂಬಿನೇಷನ್ನಿನ ಸಿನಿಮಾ ಯುವರತ್ನ. ಆ ಚಿತ್ರಕ್ಕೆ ಈಗಾಗಲೇ ಘಟಾನುಘಟಿಗಳು ಆಯ್ಕೆಯಾಗಿದ್ದಾರೆ. ಈಗ ಆ ಘಟಾನುಘಟಿಗಳ ತಂಡಕ್ಕೆ ಹಿರಿಯ ನಿರ್ದೇಶಕ ಭಗವಾನ್ ಸೇರಿಕೊಂಡಿದ್ದಾರೆ.

  ಕನ್ನಡಕ್ಕೆ ಹಲವಾರು ಗ್ರೇಟ್ ಚಿತ್ರಗಳನ್ನು ನೀಡಿರುವ ಭಗವಾನ್‍ಗೆ ಆ್ಯಕ್ಷನ್ ಹೇಳುತ್ತಿರುವುದು ನನ್ನ ಸೌಭಾಗ್ಯ ಎಂದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್. ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದೆ.

 • ಯುವರತ್ನ ಟೀಂಗೆ ಸಾಯಿಕುಮಾರ್, ರಂಗಾಯಣ ರಘು

  saikumar joins yuvaratna movie cast

  ಯುವರತ್ನ ಚಿತ್ರದ ತಾರಾಬಳಗ ದೊಡ್ಡದು..ದೊಡ್ಡದು.. ಇನ್ನೂ ದೊಡ್ಡದಾಗುತ್ತಿದೆ. ಪುನೀತ್ ರಾಜ್‍ಕುಮಾರ್‍ಗೆ ಸಯೇಷಾ ಜೋಡಿ. ಇನ್ನು ಚಿತ್ರದಲ್ಲಿ ರಾಧಿಕಾ ಶರತ್ ಕುಮಾರ್, ಡಾಲಿ ಧನಂಜಯ್, ದಿಗಂತ್, ಪ್ರಕಾಶ್ ರೈ, ಸೋನು ಗೌಡ, ವಸಿಷ್ಠ ಸಿಂಹ, ತ್ರಿವೇಣಿ ರಾವ್.. ಹೀಗೆ ದೊಡ್ಡ ತಾರಾಬಳಗವೇ ಇದೆ.

  ಇವರೆಲ್ಲರ ಜೊತೆಯಲ್ಲೀಗ ಸಾಯಿ ಕುಮಾರ್ ಸೇರಿಕೊಂಡಿದ್ದಾರೆ. ಪುನೀತ್ ಚಿತ್ರದಲ್ಲಿ ಸಾಯಿಕುಮಾರ್ ನಟಿಸುತ್ತಿರುವುದು ಇದೇ ಮೊದಲು. ಅಷ್ಟೇ ಅಲ್ಲ, ರಂಗಾಯಣ ರಘು ಕೂಡಾ ಯುವರತ್ನ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ.

  ಸಂತೋಷ್ ಆನಂದ್‍ರಾಮ್, ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು ಮತ್ತು ಪುನೀತ್ ರಾಜ್‍ಕುಮಾರ್ ಕಾಂಬಿನೇಷನ್ನಿನ ಸಿನಿಮಾದ ಕ್ಯಾನ್‍ವಾಸ್ ದೊಡ್ಡದಾಗುತ್ತಲೇ ಇದೆ.

 • ಯುವರತ್ನ ಟೀಸರ್ : ಸೆಲಬ್ರಿಟಿಗಳ ರಿಯಾಕ್ಷನ್ ಹೇಗಿದೆ..?

  yuvaratna trailer launch

  ಹೊಂಬಾಳೆ ಫಿಲಂಸ್, ಸಂತೋಷ್ ಆನಂದ್ ರಾಮ್ ಡೈರೆಕ್ಷನ್, ವಿಜಯ್ ಕಿರಗಂದೂರು ಪ್ರೊಡಕ್ಷನ್, ಪುನೀತ್ ರಾಜ್ಕುಮಾರ್ ಌಕ್ಷನ್. ದಸರಾಗೆ ರಿಲೀಸ್ ಆದ ಯುವರತ್ನ ಟೀಸರ್ ಬಗ್ಗೆ ಎಲ್ಲೆಲ್ಲೂ ಮೆಚ್ಚುಗೆಯ ಸುರಿಮಳೆ. ಯುವರತ್ನ ಟೀಸರ್ ಬಗ್ಗೆ.. ಯಾಱರು.. ಏನೇನೆಲ್ಲ ಹೇಳಿದ್ದಾರೆ. ಇಲ್ಲಿದೆ ಡೀಟೈಲ್ಸ್.

  ಸಂಜಯ್ ದತ್ : ನೋಡೋಕೆ ಸಖತ್ತಾಗಿದೆ. ಯುವರತ್ನ ಟೀಂಗೆ ಒಳ್ಳೆಯದಾಗಲಿ.

  ಕಿಚ್ಚ ಸುದೀಪ್ : ಪುನೀತ್ ಇನ್ನೂ 10 ವರ್ಷ ಯಂಗ್ ಆಗಿ ಕಾಣಿಸುತ್ತಿದ್ದಾರೆ. ಬಟರ್ ಕೇಕ್ ಮೇಲಿನ ಚೆರ್ರಿ ಹಣ್ಣು ಇದ್ದ ಹಾಗಿದೆ.

  ರಕ್ಷಿತ್ ಶೆಟ್ಟಿ : ಪುನೀತ್ ಸರ್, 20 ವರ್ಷದವರಾಗಿದ್ದಾಗ ಇದ್ದ ಹಾಗೆ ಕಾಣ್ತಿದ್ದಾರೆ.

  ರಿಷಬ್ ಶೆಟ್ಟಿ : ಫೆಂಟಾಸ್ಟಿಕ್

  ಮಾನ್ವಿತಾ ಹರೀಶ್ : ಟೀಸರ್ ಅಂದ್ರೆ ಇದು ಗುರು

  ಕಬೀರ್ ಸಿಂಗ್ ದುಲ್ಹನ್ : ಫ್ಯಾಬುಲಸ್

  ನೀನಾಸಂ ಸತೀಶ್ : ದಸರಾ ಹಬ್ಬಕ್ಕೆ ಬೋನಸ್

  ಪ್ರೀತಮ್ ಗುಬ್ಬಿ : ಆಟ ಆಡ್ತಿರೋದು ಪುನೀತ್. ಮೈದಾನವೂ ಅವರದ್ದೇ.. ರೂಲ್ಸೂ ಅವರದ್ದೇ..

  ಸಿಂಪಲ್ ಸುನಿ : ರೂಲ್ ಮಾಡಲು ಹೊರಟಿರುವ ಪುನೀತ್. ಕೊನೆಯ ಫ್ರೇಮ್ ಅಂತೂ ಅದ್ಭುತ

  ಅನೂಪ್ ಭಂಡಾರಿ : ರೂಲ್ ಮಾಡೋಕೆ ಬಂದ ಹಾಗಿದೆ

  ಪೈಲ್ವಾನ್ ಕೃಷ್ಣ : ಪವರ್ ಫುಲ್.. ಯೂತ್ ಫುಲ್.. ಎನರ್ಜೆಟಿಕ್..

  ಡಾಲಿ ಧನಂಜಯ್ : ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ಬಾರಿಸಲಿ

  ಪವನ್ ಒಡೆಯರ್ : ವೆರಿ ವೆರಿ ಪವರ್ ಫುಲ್.. ವೆರಿ ವೆರಿ ಸ್ಟೈಲಿಷ್.. ವೆರಿ ವೆರಿ ಅಗ್ರೆಸ್ಸಿವ್..

  ಪ್ರಶಾಂತ್ ನೀಲ್ : ಒಂದೊಂದು ಬಿಟ್ ಕೂಡಾ ಪ್ರೀತಿ ಹುಟ್ಟಿಸುವಂತಿದೆ. ಇನ್ನೊಂದು ಬ್ಲಾಕ್ ಬಸ್ಟರ್ ಆಗಲಿದೆ

  ಅಶಿಕಾ ರಂಗನಾಥ್ : ವ್ಹಾಟ್ ಎ ಪವರ್.  ಪವರ್ ಫುಲ್ ಟೀಸರ್

  ಸಯ್ಯೇಷಾ : ಓಹೋ.. ಇಲ್ನೋಡಿ..ಅಪ್ಪು ಸರ್..

  ತರುಣ್ ಸುಧೀರ್ : ಸೂಪರ್ಬ್ ಲುಕಿಂಗ್

  ಭಾವನಾ ರಾವ್ : ವ್ಹಾವ್.. ಲವ್ಲಿ

 • ಯುವರತ್ನ ಶೂಟಿಂಗ್ ಮುಗೀತಾ..? ಇನ್ನೂ ಇದ್ಯಾ..?

  yuvaratna mvie ststus

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಟೀಸರ್ ಹೊರಬಿದ್ದಿದ್ದೇ ತಡ, ಅಭಿಮಾನಿಗಳದ್ದೆಲ್ಲ... ಒಂದೇ ಪ್ರಶ್ನೆ. ರಿಲೀಸ್ ಯಾವಾಗ..? ಇಷ್ಟಕ್ಕೂ ರಿಲೀಸ್ ಮಾಡಬೇಕು ಅಂದ್ರೆ ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಯಬೇಕಲ್ಲವೇ..? ಹಾಗಾದರೆ ಯುವರತ್ನ ಶೂಟಿಂಗ್ ಮುಗಿದಿದೆಯಾ..? ಈ ಪ್ರಶ್ನೆಗೆ ಒನ್ ವರ್ಡ್ ಉತ್ತರ : ಇಲ್ಲ.

  ಯುವರತ್ನ ಚಿತ್ರಕ್ಕೆ ಇದುವರೆಗೆ ಸುಮಾರು 70 ದಿನಗಳ ಶೂಟಿಂಗ್ ಆಗಿದ್ದು, ಇನ್ನೂ 30ರಿಂದ 35 ದಿನಗಳ ಶೂಟಿಂಗ್ ಇದೆ. ಹಾಡುಗಳ ಚಿತ್ರೀಕರಣ, ಪುನೀತ್ ಮತ್ತು ಧನಂಜಯ್ ನಡುವಿನ ಫೈಟ್ ಸೀನ್ ಇನ್ನೂ ಶೂಟಿಂಗ್ ಆಗಿಲ್ಲ. ಕಲಾವಿದರ ದಂಡೇ ಚಿತ್ರದಲ್ಲಿದೆ. ಅವರೆಲ್ಲರ ಡೇಟ್ಸ್ ಪರಸ್ಪರ ಹೊಂದಿಸುವ ಸವಾಲೂ ಇದೆ. 3 ಕಾಲೇಜುಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಸ್ಸೋ.. ಸದ್ಯಕ್ಕೆ ಯುವರತ್ನ ರಿಲೀಸ್ ಇಲ್ಲ. ಸಿಂಪಲ್ಲಾಗ್ ಹೇಳ್ಬೇಕಂದ್ರೆ 2019ಕ್ಕೆ ಯುವರತ್ನ ರಿಲೀಸ್ ಆಗೋದು ಡೌಟ್.

  ಸಂತೋಷ್ ಆನಂದ್ ರಾಮ್ ಈ ಬಗ್ಗೆ ಸ್ಪಷ್ಟ ಉತ್ತರವನ್ನೇನೂ ಕೊಟ್ಟಿಲ್ಲ. ಆದರೆ, ಚಿತ್ರದ ಕ್ವಾಲಿಟಿಯಲ್ಲಿ ರಾಜಿಯಾಗಲ್ಲ. ವೇಯ್ಟ್ ಎನ್ನುತ್ತಿದ್ದಾರೆ. ಕಾರ್ತಿಕ್ ಗೌಡ ಅವರು ಅಭಿಮಾನಿಗಳಿಗೆ ಹೇಳ್ತಿರೋದು ಇದನ್ನೇ. ಡೇಟ್ ನೀವು ಫಿಕ್ಸ್ ಮಾಡಬೇಡಿ, ನಾವೇ ಅನೌನ್ಸ್ ಮಾಡ್ತೇವೆ. ಪ್ಲೀಸ್ ವೇಯ್ಟ್ ಮಾಡಿ ಎನ್ನುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ರೆಡಿಯಾಗುತ್ತಿರುವ ಯುವರತ್ನ ಟೀಸರ್ ಎಬ್ಬಿಸಿರುವುದು ಹವಾ ಅಲ್ಲ, ಬಿರುಗಾಳಿ.

 • ಯುವರತ್ನನ ಜೊತೆ ಡಾಲಿ ಅಷ್ಟೇ ಅಲ್ಲ, ಚಿಟ್ಟೇನೂ ಇರುತ್ತೆ..!

  vasistha simha joins yuvaratna team

  ಪ್ರೇಮಿಗಳ ದಿನದಂದು ಯುವರತ್ನ ಚಿತ್ರದ ಶೂಟಿಂಗ್ ಆರಂಭಿಸೋದಾಗಿ ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಅಂದುಕೊಂಡಂತೆಯೇ ಸ್ಟಾರ್ಟ್.. ಕ್ಯಾಮೆರಾ.. ಆ್ಯಕ್ಷನ್ ಹೇಳಿಬಿಟ್ಟಿದ್ದಾರೆ. ಚಿತ್ರಕ್ಕಿನ್ನೂ ನಾಯಕಿ ಫೈನಲ್ ಆಗಿಲ್ಲ. ಆದರೆ, ವಿಲನ್‍ಗಳು ಫಿಕ್ಸ್.

  ನಿನ್ನೆಯಷ್ಟೇ ಯುವರತ್ನ ಚಿತ್ರದಲ್ಲಿ ಡಾಲಿ ಧನಂಜಯ್ ಇರ್ತಾರೆ ಎಂಬ ಸುದ್ದಿ ಕೊಟ್ಟಿದ್ದ ಚಿತ್ರತಂಡ, ಈಗ ಇನ್ನೊಂದು ವಿಲನ್ ಸುದ್ದಿ ಕೊಟ್ಟಿದೆ. ಡಾಲಿ ಜೊತೆ ಚಿಟ್ಟೆ ಕೂಡಾ ಚಿತ್ರದಲ್ಲಿರ್ತಾರಂತೆ. 

  ಚಿಟ್ಟೆ ವಸಿಷ್ಠ ಸಿಂಹ ಪಾತ್ರ ಏನು..? ಖಳನೋ.. ಪೋಷಕ ನಟನೋ.. ಅನ್ನೋದು ಇನ್ನೂ ಪಕ್ಕಾ ಆಗಿಲ್ಲ. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಭರ್ಜರಿ ನಿರೀಕ್ಷೆ ಹುಟ್ಟಿಸುತ್ತಿರುವುದಂತೂ ನಿಜ.

 • ಯುವರತ್ನನ ನಾಯಕಿ ರತ್ನ ಇವಳೇನಾ..?

  has sayeesha shaigal been roped in to play lean in yuvaratna

  ಯುವರತ್ನ ಚಿತ್ರಕ್ಕೆ ಇನ್ನೂ ನಾಯಕಿ ಫೈನಲ್ ಆಗಿಲ್ಲ. ಯಾರು.. ಯಾರು.. ಎಂದು ಹುಡುಕಾಟ ನಡೆಯುತ್ತಿರುವಾಗಲೇ ಬಾಲಿವುಡ್ ಚೆಲುವೆ ಸಯೇಷಾ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸರಸರನೆ ಸರಿದಾಡೋಕೆ ಶುರುವಾಗಿದೆ. ಈ ಸಯೇಶಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್. ದೇವಗನ್ ಅವರ ಶಿವಾಯ್ ಚಿತ್ರದ ಮೂಲಕ ತೆರೆಗೆ ಬಂದ ಸುಂದರಿ, ತೆಲುಗಿನಲ್ಲಿ ಅಖಿಲ್, ತಮಿಳಿನಲ್ಲಿ ಘಜಿನಿಕಾಂತ್, ಜುಂಗಾ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. 

  ಆದರೆ, ಆಯ್ಕೆ ಫೈನಲ್ ಆಗಿಲ್ಲ ಎನ್ನುತ್ತಿರುವುದು ನಿರ್ದೇಶಕ ಸಂತೋಷ್ ಆನಂದ್‍ರಾಮ್. ಕನ್ನಡದ ಹುಡುಗಿಯೇ ಆದರೆ ಚೆಂದ ಎನ್ನುವುದು ನನ್ನ ಮತ್ತು ಇಡೀ ಚಿತ್ರತಂಡದ ನಿರೀಕ್ಷೆ. ಇನ್ನೂ ಹುಡುಕಾಟದಲ್ಲಿದ್ದೇವೆ. ಯಾವುದೂ ಫೈನಲ್ ಆಗಿಲ್ಲ ಅಂತಾರೆ ಸಂತೋಷ್.

 • ಯುವರತ್ನನ ಬೈಕ್ ನಂಬರ್ ಸೀಕ್ರೆಟ್ ಏನ್ ಗೊತ್ತಾ..?

  secret behind yuvaratna's bike number

  ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಸಿನಿಮಾ ಯುವರತ್ನ. ಶೂಟಿಂಗ್ ಜೋರಾಗಿ ನಡೆಯುತ್ತಿದೆ. ಕಾಲೇಜು ಹುಡುಗನ ಗೆಟಪ್ಪಲ್ಲಿ ಪುನೀತ್ ಯಂಗ್ ಆಗಿ ಕಾಣುತ್ತಿದ್ದಾರೆ. ಇದೆಲ್ಲದರ ಜೊತೆಗೆ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿರುವುದು ಪುನೀತ್ ಬೈಕ್ ನಂಬರ್.

  ಬೈಕ್ ನಂಬರ್ : KA 01 PS 0029 

  KA  01 ಎಂದರೆ ಕರ್ನಾಟಕ ನಂ.1 ಸ್ಟಾರ್.

  PS  ಅಂದ್ರೆ ಪವರ್ ಸ್ಟಾರ್ ಅಂತೆ. ಇನ್ನು 0029 ಅಂದ್ರೆ, ಅಪ್ಪು ಅಭಿನಯದ 29ನೇ ಸಿನಿಮಾ. 

  ನಂಬರ್ ಪ್ಲೇಟ್ ಅರ್ಥ ಗೊತ್ತಾಗಿದ್ದೇ ತಡ.. ಅಪ್ಪು ಫ್ಯಾನ್ಸ್ ಓಪನ್ ದ ಬಾಟಲ್..ಟಲ್..ಟಲ್.. ಎನ್ನುತ್ತಿದ್ದಾರೆ. 

 • ಯುವರತ್ನನಿಗೆ ಯುವರಾಣಿ ಫೈನಲ್

  sayeesha finalized as heroine for yuvaratna

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ, ಸಂತೋಷ್ ಆನಂದರಾಮ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ ಯುವರತ್ನ. ಈಗಾಗಲೇ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಚಿತ್ರದ ನಾಯಕಿಯನ್ನು ಫೈನಲ್ ಮಾಡಿದೆ. 

  ಪುನೀತ್‍ಗೆ ಹೀರೋಯಿನ್ ಆಗಿ ಬರುತ್ತಿರುವುದು ಸಯೇಷಾ. ಈಗಾಗಲೇ ತೆಲುಗು, ಹಿಂದಿಯಲ್ಲಿ ನಟಿಸಿರುವ ಸಯೇಷಾ ಪುನೀತ್ ಜೊತೆ ನಟಿಸುತ್ತಿರುವುದಕ್ಕೆ ಥ್ರಿಲ್ ಆಗಿದ್ದೇನೆ. ಶೀಘ್ರದಲ್ಲೇ ಟೀಂ ಸೇರಿಕೊಳ್ಳುತ್ತೇನೆ ಎಂದಿದ್ದಾರೆ. 

  ಉಳಿದಂತೆ.. ಕಥೆ, ಪಾತ್ರದ ಬಗ್ಗೆ ಅವರು ಏನೆಂದರೆ ಏನೂ ಹೇಳಿಲ್ಲ. ಹೇಳುವಂತೆಯೂ ಇಲ್ಲ. ಏಕೆಂದರೆ, ಅದು ನಿರ್ದೇಶಕರ ಕಂಡೀಷನ್ನು.

 • ಯುವರತ್ನನಿಗೆ ರಾಧಿಕಾ ಅಮ್ಮ

  radhika sharath kumara joins yuvaratna team

  ಯುವರತ್ನ ಚಿತ್ರಕ್ಕೆ ಒಬ್ಬೊಬ್ಬರೇ ಸ್ಟಾರ್‍ಗಳ ಎಂಟ್ರಿ ಆಗೋಕೆ ಶುರುವಾಗಿದೆ. ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರದಲ್ಲಿ ಈ ಬಾರಿ ರಾಧಿಕಾ ಎಂಟ್ರಿ ಕೊಟ್ಟಿದ್ದಾರೆ. ರಾಜಕುಮಾರ ಚಿತ್ರದಲ್ಲಿ ಶರತ್ ಕುಮಾರ್, ಅಪ್ಪುಗೆ ಅಪ್ಪನಾಗಿದ್ದರು. ಈ ಬಾರಿ ಯುವರತ್ನ ಚಿತ್ರದಲ್ಲಿ ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಅಮ್ಮನಾಗುತ್ತಿದ್ದಾರೆ. 

  ರಾಧಿಕಾಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಸತ್ಯಂ ಶಿವಂ ಸುಂದರಂ, ಜೀವನ ಚಕ್ರ, ಪ್ರಚಂಡ ಕುಳ್ಳ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದವರು. ಹೆಚ್ಚೂ ಕಡಿಮೆ 3 ದಶಕಗಳ ನಂತರ ಮತ್ತೆ ಬಂದಿದ್ದಾರೆ.

  ಸಂತೋಷ್ ಆನಂದ್ ರಾಮ್ ನಿರ್ದೇಶನದ ಚಿತ್ರಕ್ಕೆ ಸಯ್ಯೇಷಾ ನಾಯಕಿಯಾಗಿದ್ದು, ಹೊಂಬಾಳೆ ಬ್ಯಾನರ್ಸ್‍ನಲ್ಲಿ ಸಿನಿಮಾ ತಯಾರಾಗುತ್ತಿದೆ.

 • ರಕ್ಷಿತ್, ಧ್ರುವಾ, ಶ್ರೀಮುರಳಿಗೆ ಅಪ್ಪು ಚಾಲೆಂಜ್

  puneeth challenges rakshith, dhruva and others

  ಕೇಂದ್ರ ಕ್ರೀಡಾ ಸಚಿವರಿಂದ ಫಿಟ್‍ನೆಸ್ ಚಾಲೆಂಜ್, ಮೋದಿ, ಕೊಹ್ಲಿ, ಬಾಲಿವುಡ್ ರೌಂಡ್ ಮುಗಿಸಿ ಈಗ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್‍ಗೆ ಕ್ರಿಕೆಟಿಗ ವಿನಯ್ ಕುಮಾರ್ ಫಿಟ್‍ನೆಸ್ ಚಾಲೆಂಜ್ ಹಾಕಿದ್ದರು. ಸುದೀಪ್, ಅದನ್ನು ತಮ್ಮ ಪತ್ನಿ, ಯಶ್ ಹಾಗೂ ಶಿವರಾಜ್‍ಕುಮಾರ್‍ಗೆ ದಾಟಿಸಿದ್ದರು. ಈಗ ಫಿಟ್‍ನೆಸ್ ಚಾಲೆಂಜ್ ಹಾಕಿರೋದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್.

  ಪುನೀತ್ ಅವರಿಗೆ ಚಾಲೆಂಜ್ ಹಾಕಿರೋದು ಡಾ.ಅಶ್ವತ್ಥ್ ನಾರಾಯಣ ಹಾಗೂ ಹೇಮಂತ್ ಮುದ್ದಪ್ಪ ಎಂಬುವವರು. ಅದನ್ನು ಸ್ವೀಕರಿಸಿರುವ ಪುನೀತ್, ತಮ್ಮ ಪುಟ್ಟ ತಂಡದೊಂದಿಗೆ ಎಕ್ಸರ್‍ಸೈಜ್ ಮಾಡಿದ್ದಾರೆ. ಪ್ರತಿಯೊಬ್ಬರೂ ಫಿಟ್ ಆಗಿರಬೇಕು ಎಂದಿರುವ ಪುನೀತ್, ಚಾಲೆಂಜ್‍ನ್ನು ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ ಹಾಗೂ ಡ್ಯಾನಿಶ್ ಸೇಟ್‍ಗೆ ರವಾನಿಸಿದ್ದಾರೆ.

  ಇನ್ನು ಚಾಲೆಂಜ್ ಸ್ವೀಕರಿಸುರವ ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ ಹಾಗೂ ಡ್ಯಾನಿಶ್ ಸೇಟ್, ಮತ್ಯಾರಿಗೆ ಚಾಲೆಂಜ್ ಹಾಕ್ತಾರೆ.. ನೋಡಬೇಕು.

 • ರಚಿತಾ ರಾಮ್‍ಗೆ ಡೋಂಟ್‍ವರಿ ಎಂದ ಪುನೀತ್ 

  puneeth boosts rachitha's confidence

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ರಚಿತಾ ರಾಮ್ ನಾಯಕಿ. ಇದನ್ನು ಪುನೀತ್ ಅವರ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಆದರೆ, ಕೆಲವೇ ಕೆಲವು ಅಭಿಮಾನಿಗಳು ರಚಿತಾ ಬೇಡ ಎಂದು ಅಭಿಯನ ನಡೆಸಿರುವುದಕ್ಕೆ ಸ್ವತಃ ನಟಿ ರಚಿತಾ ರಾಮ್ ಆಘಾತ ವ್ಯಕ್ತಪಡಿಸಿದ್ದಾರೆ.

  ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹೀಗೇಕೆ ಆಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ನನಗೆ ಡಾ.ರಾಜ್‍ಕುಮಾರ್ ಫ್ಯಾಮಿಲಿ ಬಗ್ಗೆ ಗೌರವ ಇದೆ. ಪುನೀತ್ ರಾಜ್‍ಕುಮಾರ್ ಜೊತೆ ನಟಿಸುತ್ತಿರುವುದಕ್ಕೆ ಖುಷಿಯೂ ಇದೆ. ದಯವಿಟ್ಟು ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಬೇಡಿ. ನಾನು ನಿಮ್ಮ ಮನೆಯ ಹೆಣ್ಣು ಮಗಳು ಎಂದಿದ್ದಾರೆ ರಚಿತಾ.

  ಸ್ವತಃ ಪುನೀತ್ ರಾಜ್‍ಕುಮಾರ್ ಕೂಡಾ ರಚಿತಾ ಅವರಿಗೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ ಎಂದು ಧೈರ್ಯ ಹೇಳಿದ್ದಾರಂತೆ.

  Related Articles :-

  #ರಚಿತಾಬೇಡ ಅಭಿಯಾನ.. ನೈಜ ಅಭಿಮಾನಿಗಳದ್ದಲ್ಲ..!

  ಪುನೀತ್ ಜೊತೆ #ರಚಿತಾಬೇಡ. ಅಭಿಮಾನಿಗಳ ಅಭಿಯಾನ..

 • ರಾಕ್‍ಲೈನ್ ಬ್ಯಾನರ್ ನಮ್ದೇ - ಪುನೀತ್

  rockline banner is like family banner says puneeth

  ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ನಲ್ಲಿ ನಟಿಸುವಾಗ ನಾವು ಬೇರೆ ನಿರ್ಮಾಪಕರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನಿಸುವುದಿಲ್ಲ. ಅದು ನಮ್ಮದೇ ಬ್ಯಾನರ್ ಎನಿಸುತ್ತೆ. ಹೀಗಾಗಿಯೇ ಅವರು ಆಫರ್ ಕೊಟ್ಟಾಗ ಮರುಮಾತಿಲ್ಲದೆ ಒಪ್ಪಿಕೊಂಡೆ. ಇದು ಪುನೀತ್ ರಾಜ್‍ಕುಮಾರ್ ಮಾತು.

  ರಾಕ್‍ಲೈನ್ ವೆಂಕಟೇಶ್ ಮತ್ತು ಡಾ.ರಾಜ್ ಮನೆತನದ ಸಂಬಂಧ, ಗೆಳೆತನ, ಬಾಂಧವ್ಯ ಇಡೀ ಕರ್ನಾಟಕಕ್ಕೇ ಗೊತ್ತು. ಹೀಗಾಗಿಯೇ, 

  ಪುನೀತ್ ರಾಜ್‍ಕುಮಾರ್ ಈ ಮಾತು ಹೇಳಿದ್ದಾರೆ.

  ನಟಸಾರ್ವಭೌಮ, ರಾಕ್‍ಲೈನ್ ಮತ್ತು ಪುನೀತ್ ಕಾಂಬಿನೇಷನ್‍ನ 3ನೇ ಸಿನಿಮಾ. ಈ ಹಿಂದೆ ಅಪ್ಪು ಅವರಿಗಾಗಿ ಅಜಯ್ ಮತ್ತು ಮೌರ್ಯ ಚಿತ್ರಗಳನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು.

 • ರಾಕ್‍ಲೈನ್, ಪುನೀತ್ ಸಂಗಮಕ್ಕೆ ದಶಕ ಬೇಕಾಯ್ತು..!

  puneeth rockline combination waiting for good script

  ಭಾರತ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಾಕ್‍ಲೈನ್ ವೆಂಕಟೇಶ್, ಡಾ.ರಾಜ್ ಕುಟುಂಬದ ಪ್ರತಿಯೊಬ್ಬರಿಗೂ ಹತ್ತಿರ ಹತ್ತಿರ. ರಾಜ್ ಮನೆಯಲ್ಲಿ ಏನೇ ಆದರೂ ಅಲ್ಲಿ  ರಾಕ್‍ಲೈನ್ ಇರಲೇಬೇಕು. ಅಫ್‍ಕೋರ್ಸ್, ಚಿತ್ರರಂಗದ ಬಹುತೇಕರಿಗೆ ರಾಕ್‍ಲೈನ್ ವೆಂಕಟೇಶ್ ಇರೋದೇ ಹಾಗೆ. ಹೀಗಿದ್ದರೂ, ಪುನೀತ್ ಜೊತೆ ರಾಕ್‍ಲೈನ್ ವೆಂಕಟೇಶ್ 13 ವರ್ಷಗಳ ಕಾಲ ಸಿನಿಮಾ ಮಾಡೋಕೆ ಆಗಿರಲಿಲ್ಲ.

  2004ರಲ್ಲಿ ಮೌರ್ಯ ಹಾಗೂ 2006ರಲ್ಲಿ ಅಜಯ್ ಚಿತ್ರಗಳನ್ನು ಪುನೀತ್ ಅವರಿಗಾಗಿ ನಿರ್ಮಿಸಿದ್ದ ರಾಕ್‍ಲೈನ್ ವೆಂಕಟೇಶ್, 13 ವರ್ಷಗಳ ಕಾಲ ಪುನೀತ್ ಸಿನಿಮಾ ನಿರ್ಮಿಸೋಕೆ ಆಗಿರಲಿಲ್ಲ.

  ನಾನು ಮೊದಲು ಕಥೆ ಕೇಳ್ತೇನೆ. ಕಥೆ ಓಕೆ ಎನಿಸಿದ ನಂತರ ಅದಕ್ಕೆ ಯಾರು ಸೂಟ್ ಆಗಬಹುದು ಎಂದು ಹುಡುಕುತ್ತೇನೆ. ನನಗೆ ಪುನೀತ್ ಅವರಿಗೆ ಸೂಟ್ ಆಗಬಹುದಾದ ಕಥೆ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲ, ನನಗೆ ಇಷ್ಟವಾದ ಕಥೆ ಅವರಿಗೂ ಇಷ್ಟವಾಗಬೇಕಲ್ಲ. ಹೀಗಾಗಿ ವಿಳಂಬವಾಯಿತು ಎಂದು ಕಾರಣ ಹೇಳಿದ್ದಾರೆ ರಾಕ್‍ಲೈನ್ ವೆಂಕಟೇಶ್.

  ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅತ್ಯದ್ಭುತವಾಗಿ ನಟಿಸಿದ್ದಾರೆ. ಅವರ ಇದುವರೆಗಿನ ಚಿತ್ರಗಳಿಗಿಂತ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಖಂಡಿತಾ ಈ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸಲಿದೆ ಎನ್ನುತ್ತಾರೆ ರಾಕ್‍ಲೈನ್. ಪವನ್ ಒಡೆಯರ್ ನಿರ್ದೇಶನದ ಸಿನಿಮಾ ಫೆಬ್ರವರಿ 7ರಂದು ರಿಲೀಸ್ ಆಗುತ್ತಿದೆ.

 • ರಾಕ್‍ಲೈನ್‍ಗೆ ಸಿಕ್ಕರು ಅಪ್ಪು..!

  puneeth's next movie is with rockline venkatesh

  ಅಂಜನೀಪುತ್ರದ ನಂತರ ಪುನೀತ್ ರಾಜ್‍ಕುಮಾರ್ ಮುಂದಿನ ಚಿತ್ರ ಯಾವುದು..? ಇಂಥಾದ್ದೊಂದು ಗೊಂದಲಕ್ಕೆ ಕಾರಣಗಳಿದ್ದವು. ಪುನೀತ್ ಬ್ಯಾನರ್‍ನಲ್ಲೇ ಶಶಾಂಕ್ ಪುನೀತ್ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದರು. ಕಥೆಯೂ ಓಕೆಯಾಗಿತ್ತು. ಇನ್ನು ರಾಜಕುಮಾರ ಚಿತ್ರದ ನಂತರ ಮತ್ತೊಮ್ಮೆ ಸಂತೋಷ್ ಆನಂದ್‍ರಾಮ್ ಹಾಗೂ ಪುನೀತ್ ಮಿಲನ ಕನ್‍ಫರ್ಮ್ ಆಗಿತ್ತು. ಈ ಎರಡೂ ಚಿತ್ರಗಳ ಮಧ್ಯೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಸಿನಿಮಾ ಕುರಿತು ಮಾತು ಕೇಳಿ ಬರೋಕೆ ಶುರುವಾಯ್ತು.

  ಸದ್ಯಕ್ಕೆ ಯಾವುದೂ ಫೈನಲ್ ಆಗಿಲ್ಲ. ಫೆಬ್ರವರಿಯಲ್ಲಿ ಹೇಳ್ತೇನೆ ಎಂದಿದ್ದ ಪುನೀತ್, ಈಗ ರಾಕ್‍ಲೈನ್ ಚಿತ್ರಕ್ಕೆ ಗ್ರೀನ್‍ಸಿಗ್ನಲ್ ಕೊಟ್ಟಿದ್ದಾರೆ. ಪವನ್ ಒಡೆಯರ್ ನಿರ್ದೇಶಕ. ಇತ್ತ ಶಶಾಂಕ್, ತಮ್ಮ ನಿರ್ಮಾಣದ ತಾಯಿಗೆ ತಕ್ಕ ಮಗ ಚಿತ್ರದ ನಿರ್ದೇಶನದ ಹೊಣೆಯನ್ನೂ ಈಗ ತಾವೇ ಹೊತ್ತುಕೊಂಡಿದ್ದಾರೆ. ಸಂತೋಷ್ ಆನಂದ್‍ರಾಮ್ ಮುಂದೇನು ಮಾಡ್ತಾರೆ ಅನ್ನೋದು ಗೊತ್ತಿಲ್ಲ. ಒಟ್ಟಿನಲ್ಲಿ ಸುದೀರ್ಘ ವಿರಾಮದ ನಂತರ ಪುನೀತ್ ರಾಜ್‍ಕುಮಾರ್ ಮತ್ತು ರಾಕ್‍ಲೈನ್ ಜೋಡಿ ಮತ್ತೊಮ್ಮೆ ಒಂದಾಗಿದೆ.

 • ರಾಗಿಣಿ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್ ನಿರ್ಮಾಪಕ

  puneeth to produce ragini's movie

  ರಾಗಿಣಿ ಎಂದರೆ ರಾಗಿಣಿ ದ್ವಿವೇದಿ ಅಲ್ಲ. ರಾಗಿಣಿ ಚಂದ್ರನ್. ಪ್ರಜ್ವಲ್ ದೇವರಾಜ್ ಅವರ ಪತ್ನಿ. ದೇವರಾಜ್ ಅವರ ಸೊಸೆ. ಮೂಲತಃ ಮಾಡೆಲ್ ಆಗಿರುವ ರಾಗಿಣಿ, ನಾಯಕಿಪ್ರಧಾನ ಚಿತ್ರ ವಿಜಯದಶಮಿಯಲ್ಲಿ ನಟಿಸಬೇಕಿತ್ತು. ಎಲ್ಲವೂ ಓಕೆ ಆಗಿ, ಇನ್ನೇನು ಶೂಟಿಂಗ್ ಶುರುವಾಗಬೇಕು ಎನ್ನುವಾಗ ನಿರ್ಮಾಪಕರು ಬದಲಾಗಿದ್ದಾರೆ. ಚಿತ್ರ ನಿರ್ಮಾಣದ ಹೊಣೆಯನ್ನು ಪುನೀತ್ ಅವರ ಪಿಆರ್‍ಕೆ ಪ್ರೊಡಕ್ಷನ್ಸ್ ಹೊತ್ತುಕೊಂಡಿದೆ.

  ರಾಗಿಣಿ ಚಂದ್ರನ್ ಪ್ರಧಾನ ಪಾತ್ರದಲ್ಲಿದ್ದು, ಇನ್ನೊಂದು ಪ್ರಮುಖ ಪಾತ್ರಕ್ಕೆ ಯುಗಳ ಗೀತೆ ಸೀರಿಯಲ್ ಖ್ಯಾತಿಯ ಸಿರಿ ಪ್ರಹ್ಲಾದ್ ಬಂದಿದ್ದಾರೆ. ನಿರ್ದೇಶಕ ರಘು ಸಮರ್ಥ್ ಅವರೇ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

 • ರಾಗಿಣಿ ಪ್ರಜ್ವಲ್ ದೇವರಾಜ್ ಚಿತ್ರದ ಹೆಸರು law

  prk productions next movie name is law

  ದೇವರಾಜ್ ಅವರ ಸೊಸೆ, ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್, ಪುನೀತ್ ಬ್ಯಾನರ್ ಚಿತ್ರದಲ್ಲಿ ನಟಿಸುತ್ತಿರುವುದು ಭಾರಿ ಸುದ್ದಿಯಾಗಿತ್ತು. ವಿಶೇಷವೆಂದರೆ, ರಘು ಸಮರ್ಥ ನಿರ್ದೇಶನದ ಚಿತ್ರದ ಚಿತ್ರೀಕರಣವೇ ಮುಗಿದು ಹೋಗಿದೆ. ಚಿತ್ರದ ಟೈಟಲ್ ಈಗಷ್ಟೇ ಹೊರಬಿದ್ದಿದೆ. ಹೆಸರು ಲಾ.

  ಲಾ ಎಂದರೆ ಕಾನೂನು. ರಾಗಿಣಿ ಚಿತ್ರದಲ್ಲಿ ಲಾಯರ್ ಆಗಿ ನಟಿಸಿದ್ದಾರೆ. ಚಿತ್ರದ ಪ್ರತಿ ದೃಶ್ಯವನ್ನೂ ಅವರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಅವರು ಪ್ರತಿದಿನ ಸೆಟ್‍ಗೆ ಬರುವ ಮುನ್ನ ಸಂಪೂರ್ಣ ಸಿದ್ಧರಾಗಿ ಬರುತ್ತಿದ್ದರು ಎಂದಿದ್ದಾರೆ ರಘು ಸಮರ್ಥ.

  ಜಾಹೀರಾತುಗಳಲ್ಲಿ ನಟಿಸಿದ್ದ, ಮಾಡೆಲಿಂಗ್ ಮಾಡಿರುವ, ನೃತ್ಯ ಕಲಾವಿದೆಯೂ ಆಗಿರುವ ರಾಗಿಣಿ ಚಂದ್ರನ್, ಸಿನಿಮಾ ಮಾತ್ರ ಹೊಸದು.

 • ರಾಘಣ್ಣ ಕಂ ಬ್ಯಾಕ್ - ಅಪ್ಪು ಹೇಳಿದ್ದೇನು..?

  puneeth rjkumar talks about trayambakam

  ಅದು ತ್ರಯಂಬಕಂ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ. ಅಪ್ಪಟ ಶಿವನಂತೆ ಢಮರುಗ ಬಾರಿಸಿ ಟ್ರೇಲರ್ ರಿಲೀಸ್ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಣ್ಣ ಮತ್ತೆ ಬಣ್ಣ ಹಚ್ಚಿರುವ ಬಗ್ಗೆ ಮಾತನಾಡುತ್ತಾ ಹೋದ ಪುನೀತ್ ``ನಂಗೆ ಶಿವಣ್ಣ ಮತ್ತು ರಾಘಣ್ಣ ಇಬ್ಬರೂ ಪಿಲ್ಲರ್‍ಗಳಿದ್ದಂತೆ. ರಾಘಣ್ಣ ಮತ್ತೆ ನಟಿಸುತ್ತಿದ್ದಾರೆ ಎನ್ನುವುದೇ ನನಗೆ ಖುಷಿ. ನಾಲ್ಕೈದು ವರ್ಷಗಳ ಹಿಂದೆ ರಾಘಣ್ಣ ಆರೋಗ್ಯ ಹದಗೆಟ್ಟಾಗ, ಅವರು ಮತ್ತೆ ಬಣ್ಣ ಹಚ್ಚುತ್ತಾರೆ ಎಂಬ ಕಲ್ಪನೆಯೂ ನಮಗಿರಲಿಲ್ಲ.

  ಅಣ್ಣನಿಗೆ ಎಷ್ಟು ಖುಷಿಯಾಗಿದ್ಯೋ ಅದರ 10 ಪಟ್ಟು ಖುಷಿ ನನಗಾಗಿದೆ'' ಎಂದಿದ್ದಾರೆ ಪುನೀತ್.

 • ರಾಘಣ್ಣನ ಚಿತ್ರಕ್ಕೆ ಅಪ್ಪು ಕ್ಲಾಪ್

  puneeth claps for trayambhakam

  ರಾಘವೇಂದ್ರ ರಾಜ್‍ಕುಮಾರ್, ದಯಾಳ್ ಪದ್ಮನಾಭ್ ಕಾಂಬಿನೇಷನ್‍ನ ಹೊಸ ಸಿನಿಮಾ ತ್ರಯಂಬಕಂ. ಚಿತ್ರ ಶುರುವಾಗಿದೆ. ಚಿತ್ರಕ್ಕೆ ಕ್ಲಾಪ್ ಮಾಡಿರುವುದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ಇದೇ ಮೊದಲ ಬಾರಿಗೆ ಅಣ್ಣನ ಸಿನಿಮಾಗೆ ಕ್ಲಾಪ್ ಮಾಡಿದ್ದಾರಂತೆ ಪುನೀತ್.

  ಆರ್‍ಜೆ ರೋಹಿತ್ ಡಿಟೆಕ್ಟಿವ್ ಆಗಿ, ಅನುಪಮಾ ಗೌಡ ಜರ್ನಲಿಸ್ಟ್ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಅನುಪಮಾ ಗೌಡಗೆ ತಂದೆಯಾಗಿ ನಟಿಸುತ್ತಿದ್ದಾರೆ ರಾಘವೇಂದ್ರ ರಾಜ್‍ಕುಮಾರ್. ಕೋಲಾರದ ಅಂತರಗಂಗೆ ಬೆಟ್ಟದ ಸುತ್ತಮುತ್ತ ಚಿತ್ರೀಕರಣ ಶುರುವಾಗಿದೆ. ಶಿವರಾತ್ರಿಯ ವೇಳೆಗೆ ಸಿನಿಮಾ ರಿಲೀಸ್ ಎಂದಿದ್ದಾರೆ ದಯಾಳ್.

Babru Teaser Launch Gallery

Odeya Audio Launch Gallery