` puneeth rajkumar, - chitraloka.com | Kannada Movie News, Reviews | Image

puneeth rajkumar,

 • ರಾಜಕುಮಾರನಿಗೆ ಶರಣಾದ ಬಾಹುಬಲಿ 2

  baahubali 2 surrendered to raajkumara

  ಬಾಹುಬಲಿ ಎಲ್ಲ ಕಡೆ ದಾಖಲೆ ಬರೆದು ಮುನ್ನುಗ್ಗಿರಬಹುದು. ಆದರೆ, ಲಾಂಗ್ ರನ್ ವಿಚಾರಕ್ಕೆ ಬಂದರೆ, ಕರ್ನಾಟಕದಲಿ ಬಾಹುಬಲಿ ಕನ್ನಡದ ರಾಜಕುಮಾರನ ಎದುರು ಶರಣಾಗಿದೆ. 100ನೇ ದಿನ ಸಮೀಪಿಸಿದರೂ,  ರಾಜಕುಮಾರನ ಕ್ರೇಜ್ ಹಾಗೇ ಇದೆ. ಜನ ಥಿಯೇಟರುಗಳಿಗೆ ಬರುತ್ತಲೇ ಇದ್ದಾರೆ. ರಾಜಕುಮಾರನಿಗೆ ಹೋಲಿಸಿದರೆ, ಬಾಹುಬಲಿ ಕಡಿಮೆ ಇದೆ.

  ಬಾಹುಬಲಿ ರಿಲೀಸ್ ಆಗಿ 50 ದಿನ ಕಳೆದಿದೆ. ಈಗ ಬೆಂಗಳೂರು ಒಂದನ್ನೇ ನೋಡೋದಾದ್ರೆ, ಬಾಹುಬಲಿ ಪ್ರದರ್ಶನವಾಗ್ತಾ ಇರೋ ಚಿತ್ರಮಂದಿರಗಳ ಸಂಖ್ಯೆ 21. ಆದರೆ, ರಾಜಕುಮಾರ ಚಿತ್ರ 35ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಂಟಿನ್ಯೂ ಆಗ್ತಿದೆ.  

  ಒಂದು ಚಿತ್ರ ಕಡಿಮೆ ಅವಧಿಯಲ್ಲಿ ಬಾಕ್ಸಾಫೀಸ್ ಗೆಲ್ಲುವುದು ಬೇರೆ. ಆದರೆ, ಚಿತ್ರವೊಂದು 100 ದಿನ ಸಮೀಪಿಸಿದರೂ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದರೆ, ಚಿತ್ರದಲ್ಲಿ, ಚಿತ್ರದ ಕಥೆಯಲ್ಲಿ ಅಂಥಾದ್ದೊಂದು ತಾಕತ್ ಇರಬೇಕು.

  ಅಷ್ಟೇ ಅಲ್ಲ, ರಾಜಕುಮಾರ ಚಿತ್ರಕ್ಕೆ ಪೈರಸಿ ಕಾಟವೂ ಕಾಡಿದೆ. ಅದನ್ನು ಕೇಬಲ್ ಚಾನೆಲ್‍ನಲ್ಲಿ ಹಾಕಿ, ಪ್ರಸಾರವನ್ನೂ ಮಾಡಲಾಗಿದೆ. ಈ ಎಲ್ಲದರ ನಡುವೆಯೂ ಪ್ರೇಕ್ಷಕರು ಥಿಯೇಟರ್‍ಗೇ ಬಂದು ಚಿತ್ರವನ್ನು ಮೆಚ್ಚುತ್ತಿದ್ದಾರೆ. ಆ ದೃಷ್ಟಿಯಲ್ಲಿ ರಾಜಕುಮಾರನ ಗೆಲುವನ್ನು ಇಡೀ ಚಿತ್ರರಂಗ ಸಂಭ್ರಮಿಸಲೇಬೇಕು.

   

   

   

 • ರಾಜರಥ ಟೀಂನಿಂದ ಪವರ್‍ಸ್ಟಾರ್ ಮಿಕ್ಸ್ ಉಡುಗೊರೆ

  powerstar mix to app by rajaratha tema

  ರಾಜರಥ ಚಿತ್ರದ ಟೈಟಲ್ ರೋಲ್ ಯಾರು..? ಹೀರೋ ನಿರೂಪ್ ಭಂಡಾರಿ ಅಲ್ಲ. ಅದು ಒಂದು ಬಸ್ಸು. ಆ ಬಸ್ಸಿನ ಹೆಸರೇ ರಾಜರಥ. ಆ ರಾಜರಥದ ಧ್ವನಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಂದರೆ ರಿಯಲ್ ರಾಜರಥ ಪುನೀತ್ ಅವರೇ. ತಮ್ಮ ಚಿತ್ರಕ್ಕೆ ಧ್ವನಿ ನೀಡಿ ಸಹಕರಿಸಿದ ಪುನೀತ್‍ಗೆ ರಾಜರಥ ಚಿತ್ರತಂಡ ಪವರ್‍ಸ್ಟಾರ್ ಮಿಕ್ಸ್ ಉಡುಗೊರೆ ನೀಡಿದೆ.

  ಪುನೀತ್ ರಾಜ್‍ಕುಮಾರ್, ಬಾಲ್ಯದಲ್ಲೇ ನಟನಾಗಿ ಮಿಂಚಿದವರು. ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದವರು. ಹೀರೋ ಆದ ಮೇಲೆ ಸೂಪರ್ ಸ್ಟಾರ್ ಆದವರು. ಆದರೆ, ತಾನೊಬ್ಬ ಸ್ಟಾರ್ ಎಂಬ ಯಾವ ಹಮ್ಮು ಬಿಮ್ಮೂ ಇಲ್ಲದೆ ಬೆರೆಯುವ ಪುನೀತ್‍ಗೆ ಚಿತ್ರತಂಡ ಕೊಟ್ಟ ಉಡುಗೊರೆಯೇ ಪವರ್‍ಸ್ಟಾರ್ ಮಿಕ್ಸ್. ಅದು ಹುಟ್ಟುಹಬ್ಬದ ಕೊಡುಗೆ.

  ಪುನೀತ್ ಅಭಿನಯದ ಎಲ್ಲ ಚಿತ್ರಗಳ ಹೆಸರು ಮತ್ತು ಆ ಚಿತ್ರದಲ್ಲಿನ ಪುನೀತ್ ಲುಕ್ ಇರುವ ಫೋಟೋ ಬಳಸಿ ಸೃಷ್ಟಿಸಲಾಗಿರುವ ಪುಟ್ಟ ವಿಡಿಯೋದಲ್ಲಿ ರಾಜರಥ ಚಿತ್ರದ ಬಸ್ ಡೈಲಾಗುಗಳಿವೆ. 

  ರಾಜರ ವಂಶ ನಮ್ದು.. ನನ್ ಹೆಸರೇ ರಾಜರಥ ಅನ್ನೋ ಡೈಲಾಗ್‍ನೊಂದಿಗೆ ಎಂಡ್ ಆಗುವ ಈ ಪುಟ್ಟ ವಿಡಿಯೋ ಆನ್‍ಲೈನ್‍ನಲ್ಲಿ ಮ್ಯಾಜಿಕ್ ಸೃಷ್ಟಿಸಿದೆ. ಮೂರೇ ದಿನದಲ್ಲಿ ಲಕ್ಷಾಂತರ ಹಿಟ್ಸ್ ಗಿಟ್ಟಿಸಿರುವ ಪವರ್‍ಸ್ಟಾರ್ ಮಿಕ್ಸ್, ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. 

  ರಾಜರಥದಲ್ಲಿ ನಟನಾಗಿ ಅಲ್ಲದೆ, ಧ್ವನಿಯಾಗಿ ನಟಿಸಿರುವ ಪುನೀತ್, ರಾಜರಥದ ಹೀರೋಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲ. ರಾಜರಥ ಚಿತ್ರವನ್ನು ನೋಡೋಕೆ, ಅವರ ಅಭಿಮಾನಿಗಳೂ ಈಗ ತುದಿಗಾಲಲ್ಲಿ ಕಾಯುವಂತಾಗಿದೆ.

 • ರಾಜ್ ಸಮಾಧಿಯೆದರು ಪುನೀತ್, ಚರಣ್ ರಾಜ್ ಭೇಟಿಯಾದಾಗ...

  surprise meet of two rajsmaraka

  ಚರಣ್ ರಾಜ್, ಕನ್ನಡದವರೇ. ಸ್ಟಾರ್ ಆಗಿ ಬೆಳೆದಿದ್ದು ತಮಿಳು ಚಿತ್ರರಂಗದಲ್ಲಿ. ಇವರು ಇತ್ತೀಚೆಗೆ ಡಾ.ರಾಜ್ ಸಮಾಧಿಗೆ ಭೇಟಿ ಕೊಟ್ಟಿದ್ದರು. ಪಾರ್ವತಮ್ಮ ರಾಜ್‍ಕುಮಾರ್ ನಿಧನರಾದ ವೇಳೆ ಚರಣ್‍ರಾಜ್ ಬೆಂಗಳೂರಿನಲ್ಲಿ ಇರಲಿಲ್ಲ. ಅದಾದ ಮೇಲೆ ಬರಲೂ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಚರಣ್‍ರಾಜ್, ಇತ್ತೀಚೆಗೆ ಡಾ.ರಾಜ್ ಸಮಾಧಿ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. 

  ಇನ್ನು ಕಾಕತಾಳೀಯವೋ ಎಂಬಂತೆ ಪುನೀತ್ ರಾಜ್‍ಕುಮಾರ್ ಕೂಡಾ ಅಲ್ಲಿಗೆ ಬಂದಿದ್ದಾರೆ. ಪುನೀತ್ ರಾಜ್‍ಕುಮಾರ್ ಆಗಾಗ್ಗೆ ದಿಢೀರನೆ ಸಮಾಧಿಗೆ ಭೇಟಿ ಕೊಡುವುದು ಹೊಸದೇನೂ ಅಲ್ಲ. ಅಲ್ಲಿಯೇ ಚರಣ್‍ರಾಜ್ ಅವರನ್ನು ಭೇಟಿ ಮಾಡಿದ ಪುನೀತ್, ನಿಮ್ಮ ಜೊತೆ ಸಿನಿಮಾ ಮಾಡಲು ಕಾಲ ಕೂಡಿ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

  ದೊಡ್ಡಮನೆ ಸಿನಿಮಾ ಮಾಡೋದಕ್ಕಿಂತ ಭಾಗ್ಯ ಇನ್ನೇನಿದೆ. ಶಿವಣ್ಣನ ಜೊತೆ ಈಗಾಗಲೇ ಸಿನಿಮಾ ಮಾಡಿದ್ದೇನೆ. ನೀವು ಯಾವಾಗ ಕರೆದರೂ ನಾನು ರೆಡಿ ಎಂದರಂತೆ ಚರಣ್‍ರಾಜ್. ಬೇಗನೆ ಒಟ್ಟಿಗೇ ಸಿನಿಮಾ ಮಾಡೋ ಕಾಲ ಹತ್ತಿರದಲ್ಲಿದೆ ಎಂದರಂತೆ ಪುನೀತ್. ಅಭಿಮಾನಿಗಳು ಕಾಯುತ್ತಿದ್ದಾರೆ. 

   

 • ಲವ್ ಯೂ ಅಪ್ಪು ಸರ್ ಅಂದ್ರು ಶ್ರದ್ಧಾ..!

  shraddha feels happy wth

  ಪುನೀತ್ ರಾಜ್‍ಕುಮಾರ್ ಅವರನ್ನು ಕಣ್ಣಾರೆ ಕಂಡವರು, ಜೊತೆಯಲ್ಲಿ ನೋಡಿದವರಿಗೆ ಒಂದು ಶಾಕ್ ಖಂಡಿತಾ ಇರುತ್ತೆ. ಎಷ್ಟೆಂದರೂ ಡಾ.ರಾಜ್ ಪುತ್ರ, ಹ್ಯಾಟ್ರಿಕ್ ಹೀರೋ ತಮ್ಮ, ಸ್ವತಃ ಸ್ಟಾರ್ ನಟ...ಹೀಗೆಲ್ಲ ಇರುವಾಗ ಸ್ವಲ್ಪವಾದರೂ ಅಹಂ ಇದ್ದೇ ಇರುತ್ತೆ ಎಂದುಕೊಂಡವರಿಗೆ ಮೊದಲ ಶಾಕ್ ಸಿಗೋದು ಪುನೀತ್ ಅವರ ಸರಳತೆಯದ್ದು. ಪುನೀತ್ ಅವರ ಸರಳತೆ, ಸಜ್ಜನಿಕೆಗೆ ಮರುಳಾಗದವರೇ ಇಲ್ಲ. ಇದರಿಂದ ಶ್ರದ್ಧಾ ಶ್ರೀನಾಥ್ ಸಹ ಹೊರತಾಗಿಲ್ಲ.

  ಇತ್ತೀಚೆಗೆ ಏರ್‍ಪೋರ್ಟ್‍ವೊಂದರಲ್ಲಿ ಶ್ರದ್ಧಾ ಅವರಿಗೆ ಪುನೀತ್ ಆಕಸ್ಮಿಕವಾಗಿ ಎದುರಾಗಿದ್ದಾರೆ. ಅವರ ಜೊತೆ ಮಾತನಾಡಿ ಸೆಲ್ಫೀ ಕ್ಲಿಕ್ಕಿಸಿಕೊಂಡ ಶ್ರದ್ಧಾಗೆ, ಪುನೀತ್ ಅವರ ಸಿಂಪ್ಲಿಸಿಟಿ ಇಷ್ಟವಾಗಿಬಿಟ್ಟಿದೆ. ಆ ಸೆಲ್ಫಿಯನ್ನು ಪೋಸ್ಟ್ ಮಾಡಿರುವ ಶ್ರದ್ಧಾ, ನನ್ನ ಮುಖ ನೋಡಿದರೇ ನಿಮಗೆ ಅರ್ಥವಾಗಿರಬಹುದು. ಖುಷಿಯೇ ಖುಷಿ. ಪುನೀತ್ ನನ್ನ ಜೊತೆ ಮಾತನಾಡಿದರು. ನನ್ನ ಬಗ್ಗೆ ಅವರು ಒಳ್ಳೆಯ ಮಾತು ಹೇಳಿದರು. ಅವರು ಒಬ್ಬ ಸ್ಟಾರ್, ನನಗೆ ಅವನ್ನೆಲ್ಲ ಹೇಳಬೇಕಾಗಿಯೇನೂ ಇರಲಿಲ್ಲ. ಪವರ್‍ಸ್ಟಾರ್ ಮತ್ತು ಸ್ಟಾರ್‍ಗೆ ಇರುವ ವ್ಯತ್ಯಾಸ ಇದು. ಅವರ ಬಗ್ಗೆ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಅವರ ಭೇಟಿಯಿಂದ ಒಂದು ಸ್ಪಷ್ಟವಾಯಿತು. ಅವರದ್ದು ಬಂಗಾರದಂತಾ ಮನಸ್ಸು. ಲವ್ ಯೂ ಅಪ್ಪು ಸಾರ್ ಎಂದಿದ್ದಾರೆ ಶ್ರದ್ಧಾ.

 • ಶಿವಣ್ಣ, ಅಪ್ಪು ಒಟ್ಟಿಗೇ ನಟಿಸುವ ಯೋಗ ಯಾವಾಗ..?

  fans wait for puneeth shivanna combination

  ಶಿವರಾಜ್‍ಕುಮಾರ್, ಬಹುತೇಕ ತಮ್ಮ ಸಮಕಾಲೀನ ಸ್ಟಾರ್‍ಗಳು, ತಮಗಿಂತಲೂ ಮೊದಲಿನ ಸ್ಟಾರ್‍ಗಳು ಹಾಗೂ ತಮ್ಮ ನಂತರದ ಜನರೇಷನ್ ಸ್ಟಾರ್‍ಗಳೊಂದಿಗೆಲ್ಲ ತೆರೆ ಹಂಚಿಕೊಂಡಿದ್ದಾರೆ. ಡಾ.ರಾಜ್, ಅಂಬರೀಷ್, ರವಿಚಂದ್ರನ್, ಅನಂತ್‍ನಾಗ್, ಪ್ರಭಾಕರ್, ದೇವರಾಜ್, ರಮೇಶ್ ಅರವಿಂದ್, ಉಪೇಂದ್ರ, ಜಗ್ಗೇಶ್, ಶಶಿಕುಮಾರ್.. ಅವರದ್ದೆಲ್ಲ ಎರಡು ಜನರೇಷನ್. ತಮ್ಮ ನಂತರದ ಕಲಾವಿದರಾದ ದರ್ಶನ್, ವಿಜಯ್ ರಾಘವೇಂದ್ರ, ಶ್ರೀಮುರಳಿ, ಯೋಗಿ, ಧನಂಜಯ್.. ಇವರದ್ದೆಲ್ಲ ಇನ್ನೊಂದು ಜನರೇಷನ್. ಕಿಚ್ಚ ಸುದೀಪ್ ಜೊತೆ ನಟಿಸುತ್ತಿರುವ ದಿ ವಿಲನ್ ಅಂತೂ ಚಿತ್ರರಂಗವೇ ಎದುರು ನೋಡುವಂತೆ ಮಾಡಿದೆ.

  ಇನ್ನು ಪುನೀತ್ ರಾಜ್‍ಕುಮಾರ್ ಕೂಡಾ ಹಲವು ಸ್ಟಾರ್‍ಗಳ ಜೊತೆ ತೆರೆ ಹಂಚಿಕೊಂಡವರೇ. ತಮ್ಮ ಜನರೇಷನ್‍ನ ಯೋಗಿ, ಶ್ರೀನಗರ ಕಿಟ್ಟಿ, ದರ್ಶನ್, ಆದಿತ್ಯ.. ಮೊದಲಾದವರ ಜೊತೆ ತೆರೆ ಹಂಚಿಕೊಂಡಿದ್ದಾರೆ ಪುನೀತ್. ಆದರೆ, ಅಭಿಮಾನಿಗಳ ನಿರೀಕ್ಷೆ ಇರುವುದು ಅಣ್ಣ-ತಮ್ಮಂದಿರ ಮಿಲನದಲ್ಲಿ. ಯಾವಾಗ ಎನ್ನುವುದೇ ಎಲ್ಲರ ಪ್ರಶ್ನೆ.

  ಕಾಲ ಕೂಡಿ ಬರುತ್ತಿದೆ. ಬಹುಬೇಗನೆ ಒಟ್ಟಿಗೇ ನಟಿಸುತ್ತೇವೆ ಎಂಬ ಭರವಸೆ ಸಿಕ್ಕಿರುವುದು ಶಿವಣ್ಣ ಅವರಿಂದ. ಅಪ್ಪು ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಪುನೀತ್ ಮನೆಗೇ ಬಂದಿದ್ದ ಅಣ್ಣ ಶಿವಣ್ಣ, ಪುನೀತ್‍ಗೆ ಶುಭ ಕೋರಿದರು. ಅಭಿಮಾನಿಗಳ ಒಕ್ಕೊರಲ ಕೂಗಿಗೆ ಸ್ಪಂದಿಸಿದ ಶಿವಣ್ಣ, ತಮಗೂ ಅಪ್ಪು ಜೊತೆ ನಟಿಸುವ ಬಯಕೆ ಇದೆ ಎಂದು ಹೇಳಿಕೊಂಡರು.

  ಆದರೆ, ಯಾವಾಗ..? ಅಭಿಮಾನಿ ದೇವರುಗಳ ಕೂಗು ಈಡೇರಬೇಕೆಂದರೆ ನಿರ್ದೇಶಕ ದೇವರು ಮನಸ್ಸು ಮಾಡಬೇಕು. ಅಷ್ಟೆ. ಕಥೆ ಸಿಕ್ಕರೆ, ಅದು ಈಗಲೇ ಆಗಬಹುದು.

   

 • ಸಂಸ್ಕøತದಲ್ಲೂ..ಶಾಲೆಯಲ್ಲೂ..ಬೊಂಬೆ ಹೇಳುತೈತೆ ಮತ್ತೆ ಮತ್ತೆ..

  raajkumara movie image

  ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡು ಹುಟ್ಟುಹಾಕಿದ ಟ್ರೆಂಡ್ ಕನ್ನಡ ಚಿತ್ರರಸಿಕರಿಗೆಲ್ಲ ಗೊತ್ತಿರುವ ವಿಚಾರವೇ. ಈ ಹಾಡಿನ ಇನ್ನಷ್ಟು ಕಥೆಗಳನ್ನು ಹೇಳಿಕೊಂಡಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್.

  ಬೊಂಬೆ ಹೇಳುತೈತೆ ಹಾಡನ್ನು ಅಮೆರಿಕದಲ್ಲಿನ ಇಬ್ಬರು ಪುಟ್ಟ ಅಕ್ಕ-ತಮ್ಮ ಸೇರಿಕೊಂಡು ಸಂಸ್ಕøತದಲ್ಲಿ ಭಾಷಾಂತರ ಮಾಡಿ, ಹಾಡನ್ನು ಬಿಡುಗಡೆಯೂ ಮಾಡಿದ್ದಾರಂತೆ. ಸಂಸ್ಕøತ ಶಾಲೆಗಳಲ್ಲಿ ಕೂಡಾ ಈಗ ಈ ಹಾಡು ಜನಪ್ರಿಯವಾಗಿಬಿಟ್ಟಿದೆ. 

  ಇನ್ನು ಬೆಳಗಾವಿಯಲ್ಲಿ ಸರ್ಕಾರಿ ಶಾಲೆಯೊಂದರ ಮಕ್ಕಳು, ಶಾಲೆ ಬಿಟ್ಟವರನ್ನು ಮರಳಿ ಕರೆತರಲು ಹಾಡಿನ ಸಾಹಿತ್ಯವನ್ನು ಬದಲಾಯಿಸಿ, ಅದೇ ಟ್ಯೂನ್‍ನಲ್ಲಿ ಹಾಡಿರುವುದೂ ಸಂತೋಷ್ ಅವರಿಗೆ ಗೊತ್ತಾಗಿದೆ. ಹೀಗೆ ರಾಜಕುಮಾರ ಚಿತ್ರದ ಹಾಡಿನ 200ಕ್ಕೂ ಹೆಚ್ಚು ಕವರ್ ವರ್ಷನ್ ಬಂದಿವೆ ಎಂದು ಖುಷಿ ಹಂಚಿಕೊಂಡಿದ್ದಾರೆ ಸಂತೋಷ್ ಆನಂದ್ ರಾಮ್. 

 • ಸಂಹಾರದಲ್ಲಿ ಏನಚ್ಚರಿಯೋ.. ಪುನೀತ್ ರಾಜ್‍ಕುಮಾರ್

  puneeth sings for samhara

  ಸಂಹಾರ ಚಿತ್ರದ ವಿಶೇಷತೆಗಳ ಪಟ್ಟಿ ಏರುತ್ತಲೇ ಹೋಗುತ್ತಿದೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾರದ್ದು ಅಂಧನ ಪಾತ್ರ. ಅವರಿಗೆ ನಾಯಕಿ ಹರಿಪ್ರಿಯಾ. ಆಕೆಯದ್ದು ಎಂಥ ಪಾತ್ರ..? ರಾಕ್ಷಸಿಯೋ ಹಾಡು ಕೇಳಿ ಕನ್‍ಫ್ಯೂಸ್ ಆಗಿ ಏನ್ ಕಥೆ ಅಂದ್ರೆ ಯಾರೊಬ್ಬರೂ ಬಾಯಿಬಿಡಲ್ಲ. ನಿರ್ದೇಶಕ ಗುರು ದೇಶಪಾಂಡೆ ಅವರಂತೂ ಚಿತ್ರವನ್ನು ಮುದ್ದು ಮುದ್ದಾಗಿ ಕಟ್ಟಿಕೊಟ್ಟಿದ್ದಾರೆ. ಈಗ ಚಿತ್ರದ ವಿಶೇಷಕ್ಕೆ ಇನ್ನೊಂದು ಸೇರ್ಪಡೆ ಪುನೀತ್ ರಾಜ್‍ಕುಮಾರ್.

  ಸಂಹಾರ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಏನಚ್ಚರಿಯೋ ಎಂಬ ಹಾಡು ಹಾಡಿದ್ದಾರೆ. ಅದು ನಾಯಕಿಗೆ ನಾಯಕನ ಮೇಲೆ ಲವ್ವಾಗೋ ಸಮಯದಲ್ಲಿ ಮೂಡುವ ಹಾಡು. ಚಿತ್ರದ ಬಿಡುಗಡೆಗೆ ಕೆಲವೇ ದಿನಗಳಿರುವಾಗ ಹಾಡನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ರವಿ ಬಸ್ರೂರ್ ಸಂಗೀತ ನೀಡಿರುವ ಹಾಡುಗಳು ಗುನುಗುವಂತಿವೆ ಅನ್ನೋದು ಚಿತ್ರಕ್ಕೊಂದು ದೊಡ್ಡ ಪ್ಲಸ್ ಪಾಯಿಂಟ್.

   

   

   

   

   

 • ಸದ್ಗುರು ಜಗ್ಗಿ ವಾಸುದೇವ್ ಜೊತೆ ಪುನೀತ್ ರಾಜ್ಕುಮಾರ್ - ನದಿಗಳ ರಕ್ಷಣೆಗಾಗಿ

  puneeth rajkumar image

  ಸದ್ಗುರು ಜಗ್ಗಿ ವಾಸುದೇವ್. ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು. ಧರ್ಮಗುರು. ಭಾರತೀಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪರಿಚಯಿಸುತ್ತಿರುವ ಯೋಗಿಗಳಲ್ಲಿ ಒಬ್ಬರು. ಮೂಲತಃ ಮೈಸೂರಿನವರು. ಕನ್ನಡಿಗರು. ಇಂಥ ವಿಶ್ವ ಖ್ಯಾತಿಯ ಯೋಗಿಗಳ ಜೊತೆ ಈಗ ಪುನೀತ್ ರಾಜ್ಕುಮಾರ್ ಕೈ ಜೋಡಿಸಿದ್ದಾರೆ. ಇಶಾ ಫೌಂಡೇಶನ್ ಎಂಬ ಸಂಸ್ಥೆಯ ನದಿ ನೀರು ರಕ್ಷಣೆ ಜಾಗೃತಿ ಅಭಿಯಾನಕ್ಕೆ ಸದ್ಗುರು ಜೊತೆ ಸೇರಿದ್ದಾರೆ.

  ಇತ್ತೀಚೆಗಷ್ಟೇ  ಸದ್ಗುರು ವಾಸ್ ದೇವ್ ಅವರನ್ನು ಭೇಟಿ ಮಾಡಿದ ಪುನೀತ್ ರಾಜ್ ಕುಮಾರ್ , ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್ ಕುಮಾರ್ ಹಾಗು ವಿನಯ್ ರಾಜ್ ಕುಮಾರ್  ನದಿಗಳ ಜಾಗೃತಿ ಬಗ್ಗೆ  ಱಲಿಗೆ ಬೆಂಬಲಿಸಿದ್ದಾರೆ. ಇತ್ತೀಚೆಗಷ್ಟೇ ಗಣೇಶ್ ಕೂಡಾ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದೇಶಾದ್ಯಂತ ಈ ಜಲ ಜಾಗೃತಿ ಯಶಸ್ವಿಯಾಗಲಿ ಎಂದು ಹಾರೈಸೋಣ.

 • ಸುದೀಪ್, ಪುನೀತ್, ಉಪೇಂದ್ರ ಒಟ್ಟಿಗೇ ನಟಿಸ್ತಾರಾ..?

  sudeep, upendra, puneeth in chandragupta chanakya movie

  ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ... ಮೂವರೂ ಒಟ್ಟಿಗೇ.. ಒಂದೇ ಸಿನಿಮಾದಲ್ಲಿ ನಟಿಸ್ತಾರಾ..? ಹಾಗೇನಾದರೂ ಆಗಿಬಿಟ್ಟರೆ.. ಅದು ಚಿತ್ರರಂಗದ ಪಾಲಿನ ದೊಡ್ಡ ಹಬ್ಬವೇ ಆಗೋದು ಖಂಡಿತಾ. ಅದೊಂಥರಾ ಸಂಕ್ರಾಂತಿ, ದೀಪಾವಳಿ, ಯುಗಾದಿಯನ್ನು ಒಟ್ಟಿಗೇ ಆಚರಿಸಿದಂತೆ. ಆದರೆ, ಅಂಥಾದ್ದೊಂದು ಕನಸು ಕಂಡಿದ್ದಾರೆ ನಿರ್ಮಾಪಕ ಮುನಿರತ್ನ.

  ಸದ್ಯಕ್ಕೆ ಕುರುಕ್ಷೇತ್ರ ಚಿತ್ರವನ್ನು ಸಿದ್ಧ ಮಾಡುತ್ತಿರುವ ಮುನಿರತ್ನ ಅವರಿಗೆ ಚಾಣಕ್ಯ-ಚಂದ್ರಗುಪ್ತರ ಕಥೆಯನ್ನು ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟಿಕೊಂಡಿದೆ. ಸುದೀಪ್, ಅಲೆಕ್ಸಾಂಡರ್ ಪಾತ್ರ ಮಾಡಬೇಕು ಅನ್ನೊದು ಮುನಿರತ್ನ ಅವರ ಆಸೆ. ಮಗಧ ಸಾಮ್ರಾಜ್ಯ ಸ್ಥಾಪನೆಯ ಆ ಕಥೆಯನ್ನು ಅದ್ದೂರಿಯಾಗಿ ತೆರೆಯ ಮೇಲೆ ತರಬೇಕು ಅನ್ನೋದು ಮುನಿರತ್ನ ಕನಸು.

  ಕುರುಕ್ಷೇತ್ರ ಚಿತ್ರ ಮಾರ್ಚ್‍ನಲ್ಲಿ ಬಿಡುಗಡೆಯಾಗಲಿದ್ದು, ನಂತರ ಚುನಾವಣೆ ಬರಲಿದೆ. ಚುನಾವಣೆ ಮುಗಿದ ಮೇಲೆ ಈ ಕಥೆಯತ್ತ ಗಮನ ಹರಿಸೋದಾಗಿ ಹೇಳಿದ್ದಾರೆ ಮುನಿರತ್ನ. ಮುನಿರತ್ನ ಕನಸು ನನಸಾಗಲಿ ಎಂದು ಅಭಿಮಾನಿಗಳೂ ಕೇಳಿಕೊಳ್ತಾರೆ ಬಿಡಿ.

 • ಸ್ಕಾಟ್​ಲೆಂಡ್​ನಿಂದ ಪುನೀತ್ ರಾಜ್​ಕುಮಾರ್ ಟೀಂ ವಾಪಸ್

  anjaniputra teams returns from scotland

  ಪುನೀತ್ ರಾಜ್​ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿರುವ ಅಂಜನಿಪುತ್ರ ಚಿತ್ರತಂಡ ವಿದೇಶದ ಚಿತ್ರೀಕರಣ ಮುಗಿಸಿ ವಾಪಸ್ ಆಗಿದೆ. ಸ್ಕಾಟ್​ಲೆಂಡ್​ನಲ್ಲಿ ಹಾಡುಗಳ ಚಿತ್ರೀಕರಣಕ್ಕೆ ಹೋಗಿದ್ದ ಚಿತ್ರತಂಡ, ಈಗ ಶೇ.80ರಷ್ಟು ಚಿತ್ರೀಕರಣ ಪೂರೈಸಿದೆ. ಸ್ಕಾಟ್​ಲೆಂಡ್​ನಲ್ಲಿ ನಡೆದ ಶೂಟಿಂಗ್​ನ ಕೆಲವು ಫೋಟೋಗಳೂ ಕೂಡಾ ಲಭ್ಯವಾಗಿವೆ.

  ಡಿಸೆಂಬರ್​ನಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ತಮಿಳಿನ ಪೂಜೈ ಚಿತ್ರದ ರೀಮೇಕ್ ಆಗಿರುವ ಆಂಜನಿಪುತ್ರ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಏಕೆಂದರೆ, ಅದು ಹರ್ಷ ನಿರ್ದೇಶನದ ಚಿತ್ರ. ಭಜರಂಗಿ, ವಜ್ರಕಾಯ, ಮಾರುತಿ 800 ಚಿತ್ರಗಳ ನಂತರ ಮತ್ತೊಂದು ಆಂಜನೇಯ ಹೆಸರಿನಲ್ಲಿ ಬರುತ್ತಿರುವ ಚಿತ್ರ. ಇನ್ನು ಪುನೀತ್​ಗೆ ರಾಜಕುಮಾರದಂತಹ ಸೂಪರ್ ಹಿಟ್ ಚತ್ರ ಕೊಟ್ಟ ನಂತರ ಬರುತ್ತಿರುವ ಚಿತ್ರ. ಹೀಗಾಗಿ ಅವರಿಗೂ ಭಾರೀ ನಿರೀಕ್ಷೆಯಿದೆ. ರಶ್ಮಿಕಾ ಮಂದಣ್ಣಗೆ ಕೂಡಾ ಅಷ್ಟೆ. ಕಿರಿಕ್ ಪಾರ್ಟಿ ಚಿತ್ರದ ನಂತರ ತೆರೆಗೆ ಬರುತ್ತಿರುವ ಚಿತ್ರವಾದ್ದರಿಂದ ಅವರೂ ಚಿತ್ರದ ಮೇಲೆ ಭಾರೀ ಭರವಸೆ ಇರಿಸಿಕೊಂಡಿದ್ದಾರೆ.

  Related Articles :-

  ಆಂಜನಿಪುತ್ರ ಸೆಟ್​ನಲ್ಲಿ ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ

  Anjaniputra Shooting Put On Hold

  Puneeth's New Film Titled Anjaniputra

 • ಹಾಡನ್ನೇ ತೋರಿಸದೆ 2 ಕೋಟಿ ದಾಟಿದರು..!

  raajkumara creats song record

  ಇಂಥಾದ್ದೊಂದು ದಾಖಲೆ ಬರೆದಿರುವುದು ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ ಹಾಡು. ಹಾಡೇ ಹೇಳುವಂತೆ ಅದನ್ನು ಮತ್ತೆ ಮತ್ತೆ ನೋಡಿ ನೋಡಿ ಅಭಿಮಾನಿಗಳೇ ಆ ಹಾಡನ್ನು ಎರಡು ಕೋಟಿ ದಾಟಿಸಿಬಿಟ್ಟಿದ್ದಾರೆ.

  ಅಂದಹಾಗೆ ಇದು ಯೂಟ್ಯೂಬ್ ಹಿಟ್ಸ್ ಸ್ಟೋರಿ. ರಾಜಕುಮಾರ ಚಿತ್ರದ ಈ ಹಾಡನ್ನು ಯೂಟ್ಯೂಬ್​ನಲ್ಲಿ ನೋಡಿದವರ ಸಂಖ್ಯೆ 2 ಕೋಟಿ ದಾಟಿದೆ. ಚಿತ್ರದ ಲೈಕ್ಸ್​ಗಳೇ ಒಂದು ಕೋಟಿ ಹತ್ತಿರದಲ್ಲಿವೆ. 

  ಅಂದಹಾಗೆ ವಿಶೇಷವೇನು ಗೊತ್ತಾ..? ಯೂಟ್ಯೂಬ್​ನಲ್ಲಿ ಇದುವರೆಗೆ ಈ ಹಾಡಿನ ಜೊತೆ ಬಿಟ್ಟಿರೋದು ಚಿತ್ರದ ಮೇಕಿಂಗ್ ದೃಶ್ಯಗಳನ್ನು ಮಾತ್ರ. ವೊರಿಜಿನಲ್ ಹಾಡನ್ನು ಚಿತ್ರತಂಡ ಇನ್ನೂ ಯೂಟ್ಯೂಬ್​ಗೆ ಅಪ್​ಲೋಡ್ ಮಾಡಿಲ್ಲ. ವೊರಿಜಿನಲ್ ಹಾಡನ್ನು ಸಿನಿಮಾದಲ್ಲಿ ಮಾತ್ರ ತೋರಿಸಿರುವ ಚಿತ್ರತಂಡ, ಯೂಟ್ಯೂಬ್​ನಲ್ಲಿ  ಮೇಕಿಂಗಗ್ ತೋರಿಸಿಯೇ 2 ಕೋಟಿ ಹಿಟ್ಸ್ ದಾಟಿದೆ. 

  ಚಿತ್ರದ ಹಾಡಿನ ಜೊತೆ ಮೇಕಿಂಗ್​ ನೋಡುತ್ತಲೇ ಅಭಿಮಾನಿಗಳು ಖುಷಿಯಾಗಿದ್ದಾರೆ. ಚಿತ್ರ ಈಗ ಶತದಿನೋತ್ಸವದತ್ತ ಮುನ್ನುಗ್ಗುತ್ತಿದೆ.

   

 • ಹುಚ್ಚು ಅಭಿಮಾನಿಗೆ ಪುನೀತ್ ಹೇಳಿದ ಬುದ್ದಿವಾದ

  puneeth rajkumar's advice

  ಅಭಿಮಾನಿಗಳು ತಮ್ಮ ತಮ್ಮ ಮೆಚ್ಚಿನ ನಟನಿಗಾಗಿ ಏನೇನೆಲ್ಲ ಸಾಹಸ ಮಾಡ್ತಾರೆ ಅನ್ನೋಕೆ ಇಲ್ಲೊಬ್ಬ ಅಭಿಮಾನಿ ಉದಾಹರಣೆಯಾಗಿದ್ದಾನೆ. ಕೀರ್ತಿರಾಜ್ ಅನ್ನೋ ಹೆಸರಿನ ಈತ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ. ಮೈಸೂರಿನ ಹುಡುಗ. ಇತ್ತೀಚೆಗೆ ಮೈಸೂರಿಗೆ ಹೋಗಿದ್ದ ಪುನೀತ್ ಅವರನ್ನು ಕಂಡ ಅಭಿಮಾನಿ, ಅವರನ್ನು ಕಂಡವನೇ ಸುಮಾರು 6 ಕಿ.ಮೀ. ಫಾಲೋ ಮಾಡಿಕೊಂಡು ಬಂದಿದ್ದಾನೆ. ಪ್ರಾಣದ ಹಂಗನ್ನೂ ತೊರೆದು ಪುನೀತ್ ಕಾರು ಹಿಂಬಾಲಿಸಿದ್ದಾರೆ.

  ಅಭಿಮಾನಿಯ ಹುಚ್ಚಾಟ ಗಮನಿಸಿದ ಪುನೀತ್, ಕಾರು ನಿಲ್ಲಿಸಿ ಸೆಲ್ಫೀ ತೆಗೆದುಕೊಂಡು ಅಭಿಮಾನಿಗೆ ಬುದ್ದಿವಾದವನ್ನೂ ಹೇಳಿದ್ದಾರೆ.

  ಪ್ರಾಣ ಮುಖ್ಯ, ನಾನಲ್ಲ. ನಾನು ಇವತ್ತು ಸಿಗದೇ ಹೋದ್ರೆ, ನಾಳೆ ಸಿಗ್ತೇನೆ. ಸೆಲ್ಫೀಗೋಸ್ಕರ ಇಂತಹ ಸಾಹಸಕ್ಕೆಲ್ಲ ಕೈ ಹಾಕಬೇಡಿ ಎಂದು ಬುದ್ದಿವಾದವನ್ನೂ ಹೇಳಿದ್ದಾರೆ.

  ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುನೀತ್, ಅಭಿಮಾನಿಗಳೆಂದರೆ ನಮಗೂ ಇಷ್ಟವೇ. ಹಾಗಂತ, ಸೆಲ್ಫಿಗಳಿಗಾಗಿ ಇಂತಹ ಸಾಹಸಗಳಿಗೆಲ್ಲ ಕೈ ಹಾಕಬೇಡಿ. ಆ ಹುಡುಗನಿಗೆ ಬುದ್ದಿ ಹೇಳಿದ್ದೇನೆ. ಸೆಲ್ಫಿಗಾಗಿ ಇಂತಹ ರಿಸ್ಕ್ ತೆಗೆದುಕೊಳ್ಳಬೇಡಿ ಎಂದಿದ್ದಾರೆ. 

 • ಹೆಣ್ಣು ಮಕ್ಕಳ ಸ್ಮಗ್ಲಿಂಗ್ ತಡೆಗೆ ಕೈಜೋಡಿಸಿದ ಅಪ್ಪು

  puneeth lends voice to amoli movie

  ಪುನೀತ್ ರಾಜ್‍ಕುಮಾರ್, ಅಮೋಲಿ ಎಂಬ ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಆ ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡುವುದಕ್ಕೆ ಕಾರಣ, ಆ ಡಾಕ್ಯುಮೆಂಟರಿಯಲ್ಲಿದ್ದ ಕಥೆ ಮತ್ತು ಸಂದೇಶ. ಈ ಡಾಕ್ಯುಮೆಂಟರಿಯಲ್ಲಿರೋದು ಹೆಣ್ಣು ಮಕ್ಕಳ ಕಳ್ಳಸಾಗಾಣಿಕೆ ವಿರುದ್ಧದ ಜಾಗೃತಿಯ ಕಥೆ. ಹೀಗಾಗಿಯೇ ಈ ಡಾಕ್ಯುಮೆಂಟರಿಗೆ ಧ್ವನಿ ನೀಡಿದ್ದಾರೆ ಪುನೀತ್. ಅಷ್ಟೇ ಅಲ್ಲ, ತಮ್ಮದೇ ಪಿಆರ್‍ಕೆ ಆಡಿಯೋದಿಂದ ಡಾಕ್ಯುಮೆಂಟರಿಯನ್ನು ರಿಲೀಸ್ ಕೂಡಾ ಮಾಡಿದ್ದಾರೆ.

  ಜಾಸ್ಮಿನ್ ಕೌರ್ ಮತ್ತು ಅವಿನಾಶ್ ರಾಯ್ ಎಂಬುವರು ನಿರ್ದೇಶಿಸಿರುವ ಡಾಕ್ಯುಮೆಂಟರಿಯನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಬೇಕು ಎನ್ನುವುದೇ ನನ್ನ ಉದ್ದೇಶ. ನನ್ನ ಧ್ವನಿಯಿಂದಾಗಿ ಹೆಚ್ಚು ಜನಕ್ಕೆ ರೀಚ್ ಆದರೆ, ಜಾಗೃತಿ ಮೂಡಿದರೆ ಅದು ಕೊಡುವ ಸಂತೃಪ್ತಿಯೇ ಬೇರೆ ಎಂದಿದ್ದಾರೆ ಪುನೀತ್. 

  ಅಂದಹಾಗೆ ಇದೇ ಡಾಕ್ಯುಮೆಂಟರಿ ಬೇರೆ ಭಾಷೆಯಲ್ಲೂ ಬಂದಿದೆ. ತಮಿಳಿನಲ್ಲಿ ಕಮಲ್‍ಹಾಸನ್, ತೆಲುಗಿನಲ್ಲಿ ನಾನಿ, ಹಿಂದಿಯಲ್ಲಿ ರಾಜ್‍ಕುಮಾರ್ ರಾವ್, ಮರಾಠಿಯಲ್ಲಿ ಸಚಿನ್ ಖೇಡ್ಕರ್ ಡಾಕ್ಯುಮೆಂಟರಿಯನ್ನು ನಿರೂಪಣೆ ಮಾಡಿದ್ದಾರೆ.

  ಪುನೀತ್ ಅವರ ಜಾಕಿ ಚಿತ್ರದಲ್ಲೂ ಕೂಡಾ ಇದೇ ಕಥೆಯಿತ್ತು. ಸಾಮಾಜಿಕ ಜಾಗೃತಿ ಮೂಡಿಸುವ ವಿಚಾರ ಬಂದಾಗ ಇಲ್ಲ ಎನ್ನಲು ಸಾಧ್ಯವಾಗಲಿಲ್ಲ. ನಮ್ಮ ಸಂಸ್ಥೆಯಿಂದಲೂ ಇಂತಹ ಜಾಗೃತಿ ಮೂಡಿಸುವ ಡಾಕ್ಯುಮೆಂಟರಿ ಮಾಡುವ ಆಲೋಚನೆಯಿದೆ ಎಂದು ಹೇಳಿಕೊಂಡಿದ್ದಾರೆ ಪುನೀತ್.

 • ಹೆಬ್ಬುಲಿ ನಿರ್ಮಾಪಕರ ಜೊತೆ ಅಪ್ಪು ಹೊಸ ಚಿತ್ರ - ಯಾವ ಕಥೆ ಇಷ್ಟವಾಗುತ್ತೋ..?

  Hebbuli producer & puneeth team up in 2018

  ಎಸ್ಜಿಬಿ ಮೈನ್ಸ್ & ಕನ್ಸ್ಟ್ರಕ್ಷನ್ನ ಮಾಲೀಕ ಉಮಾಪತಿ, ಹೆಬ್ಬುಲಿ ಸಿನಿಮಾ ಮೂಲಕ ಖ್ಯಾತರಾದವರು. ಈಗ ಉಮಾಪತಿ ಪುನೀತ್ ಜೊತೆಗೊಂದು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಆ ಚಿತ್ರ ಸೆಟ್ಟೇರೋದು 2018ರಲ್ಲಿ. ಪುನೀತ್ಗೆ ಈಗ ಮೂವರು ನಿರ್ದೇಶಕರು

  ಕಥೆ ಹೇಳುತ್ತಿದ್ದಾರಂತೆ. ಆ ಮೂವರಲ್ಲಿ ಯಾರ ಕಥೆ ಇಷ್ಟವಾಗುತ್ತೋ, ಅದು ಸಿನಿಮಾ ಆಗಲಿದೆ. ಆ ಚಿತ್ರದಲ್ಲಿ ಪುನೀತ್, ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದೂ ಲೀಕ್ ಆಗಿದೆ. ಸದ್ಯಕ್ಕೆ ಆಂಜನಿಪುತ್ರ ಚಿತ್ರದಲ್ಲಿ ಬ್ಯುಸಿಯಾಗಿರುವ

  ಪುನೀತ್ ರಾಜ್ಕುಮಾರ್, ನಂತರ ಇನ್ನೆರಡು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಆ ಎರಡೂ ಚಿತ್ರಗಳು ಮುಗಿದ ನಂತರ, 3ನೇ ಸಿನಿಮಾ ಹೆಬ್ಬುಲಿ ನಿರ್ಮಾಪಕರ ಪಾಲಿಗೆ ದಕ್ಕಿದೆ.

   

   

   

 • ಹೊಸ ದಾಖಲೆ ಬರೆಯಲಿದೆ ಕಟಕ ಟ್ರೇಲರ್

  kataka trailer

  ರವಿ ಬಸ್ರೂರ್‌ ನಿರ್ದೇಶನದ 'ಕಟಕ' ಚಿತ್ರದ ಟ್ರೇಲರ್‌ ಹೊಸ ದಾಖಲೆ ಬರೆಯಲು ಸಿದ್ಧವಾಗಿದೆ. ಶನಿವಾರ ಸಂಜೆ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಟ್ರೇಲರ್ ರಿಲೀಸ್ ಮಾಡಲಿರುವುದು ಪವರ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್. 

  ಇಲ್ಲಿ ದಾಖಲೆ ಬರೆಯುತ್ತಿರುವುದು ಯಾವ ವಿಚಾರದಲ್ಲಿ ಗೊತ್ತಾ..? ಕಟಕ ಚಿತ್ರದ ಟ್ರೇಲರ್ ಏಕಕಾಲಕ್ಕೆ 13 ಭಾಷೆಗಳಲ್ಲಿ ರಿಲೀಸ್ ಅಗುತ್ತಿದೆ. ಕನ್ನಡ, ತುಳು, ಕೊಡವ, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ 13 ಭಾಷೆಗಳಲ್ಲಿ ಕಟಕ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

  ಇದೊಂದು ವಿಭಿನ್ನ ಪ್ರಯತ್ನವಾಗಿದ್ದು ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಂದು ಚಿತ್ರದ ಟ್ರೇಲರ್‌ ಅತೀ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

  Related Articles :-

  Puneeth and Yash To Release The Trailer of Kataka

 • ಹೊಸ ಬ್ಯಾನರ್, ಹೊಸ ಡೌಟ್ಸು - ಪುನೀತ್ ಉತ್ತರ

  puneeth image

  ಪುನೀತ್ ರಾಜ್‍ಕುಮಾರ್ ಪಿಆರ್‍ಕೆ ಪ್ರೊಡಕ್ಷನ್ಸ್ ಎಂಬ ಹೊಸ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಪುನೀತ್ ಹೊಸ ಬ್ಯಾನರ್ ನಿರ್ಮಿಸಿದರು ಎಂದ ಕೂಡಲೇ ಒಂದಷ್ಟು ಹೊಸ ಅನುಮಾನಗಳು, ಪ್ರಶ್ನೆಗಳು ಎದ್ದಿವೆ. ಆ ರೀತಿಯ ಪ್ರಶ್ನೆಗಳು ಏಳೋದು ಸಹಜ. ಅಂತಹ ಪ್ರಶ್ನೆಗಳಿಗೆಲ್ಲ ಪುನೀತ್ ಉತ್ತರ ಕೊಟ್ಟಿದ್ದಾರೆ. ಇನ್ನೊಂದು ವಿಶೇಷವಿದೆ ಕೇಳಿ. ಪಿಆರ್‍ಕೆ ಪ್ರೊಡಕ್ಷನ್ಸ್ ಎಂದರೆ, ಪುನೀತ್ ರಾಜ್‍ಕುಮಾರ್ ಪ್ರೊಡಕ್ಷನ್ಸ್ ಅಲ್ಲ. ಪಾರ್ವತಮ್ಮ ರಾಜ್‍ಕುಮಾರ್ ಪ್ರೊಡಕ್ಷನ್ಸ್. ಇದು ತಾಯಿಯ ಹೆಸರಲ್ಲಿ ಪುನೀತ್ ಆರಂಭಿಸಿರುವ ಹೊಸ ಚಿತ್ರ ನಿರ್ಮಾಣ ಸಂಸ್ಥೆ.

  ಪ್ರಶ್ನೆ : ವಜ್ರೇಶ್ವರಿಯಿಂದ ಪಿಆರ್‍ಕೆ ಹೇಗೆ ಭಿನ್ನ..? ಇದು ಬೇರೆಯೇ ಸಂಸ್ಥೆನಾ..?

  ಪುನೀತ್ : ಪಿಆರ್‍ಕೆ ಬ್ಯಾನರ್ ಉದ್ಘಾಟನೆಯಾಯಿತು ಎಂದ ಕೂಡಲೇ ವಜ್ರೇಶ್ವರಿ ಸಂಸ್ಥೆಯಿಂದ ದೂರವೇನೂ ಇರಲ್ಲ. ಅದರಂತೆಯೇ ಇದು ಕೂಡಾ ಇನ್ನೊಂದು ಬ್ಯಾನರ್ ಅಷ್ಟೆ. ಮುಂದಿನ ವರ್ಷ ಸ್ವಂತ ಬ್ಯಾನರ್‍ನಲ್ಲೇ ಚಿತ್ರ ನಿರ್ಮಾಣದ ಯೋಚನೆ ಇದೆ. ವಜ್ರೇಶ್ವರಿಯಲ್ಲಾದರೂ ನಿರ್ಮಾಣವಾಗಬಹುದು, ಪಿಆರ್‍ಕೆ ಬ್ಯಾನರ್‍ನಲ್ಲಾದರೂ ನಿರ್ಮಾಣವಾಗಬಹುದು.

  ಪ್ರಶ್ನೆ : ಇನ್ನು ಮುಂದೆ ಬೇರೆ ಬ್ಯಾನರ್‍ಗಳಲ್ಲಿ ನಟಿಸೋದಿಲ್ವಾ..?

  ಪುನೀತ್ : ಹಾಗೇನಿಲ್ಲ. ಬೇರೆ ಬ್ಯಾನರ್‍ಗಳಲ್ಲೂ ನಟಿಸುತ್ತೇನೆ. ನಮ್ಮ ಬ್ಯಾನರ್‍ನಲ್ಲೂ ನಟಿಸುತ್ತೇನೆ.

  ಪ್ರಶ್ನೆ : ನೀವು ನಿರ್ಮಿಸುತ್ತಿರುವ ಚಿತ್ರದಲ್ಲಿ ಬೇರೊಬ್ಬರು ಹೀರೋ ಆಗುವದು ಹೊಸ ಪ್ರಯತ್ನ ಅಲ್ಲವೇ..?

  ಪುನೀತ್ : ಹಾಗೇನಿಲ್ಲ. ಈ ಹಿಂದೆ, ಸುದೀಪ್, ದರ್ಶನ್ ಇಂಥ ಪ್ರಯತ್ನ ಮಾಡಿದ್ದಾರೆ. ನಮ್ಮಲ್ಲೂ ಹೊಸ ಹೊಸ ಪ್ರಯೋಗಗಳಿಗೆ ಜನ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂಥ ಕೆಲಸಕ್ಕೆ ಕೈ ಹಾಕಲು ಧೈರ್ಯವಾಯಿತು.

  ಪ್ರಶ್ನೆ : ನಿಮ್ಮ ಬ್ಯಾನರ್‍ನಿಂದ ಎಂಥ ಸಿನಿಮಾಗಳು ಬರುತ್ತವೆ..?

  ಪುನೀತ್ ; ಕಮರ್ಷಿಯಲ್ ಸಿನಿಮಾಗಳೇ ಬರುತ್ತವೆ. ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವ ಮನಸ್ಸಿದೆ. ನನ್ನ ಪ್ರಕಾರ, ಸಿನಿಮಾಗಳನ್ನು ಕಮರ್ಷಿಯಲ್, ಆರ್ಟ್ ಎಂದು ವಿಭಜಿಸಲೇಬಾರದು. ಒಂದು ಸಿನಿಮಾ ಎಲ್ಲರಿಗೂ ತಲುಪುವಂತಿರಬೇಕು.

Padarasa Movie Gallery

Kumari 21 Movie Gallery