` puneeth rajkumar, - chitraloka.com | Kannada Movie News, Reviews | Image

puneeth rajkumar,

 • ಅಣ್ಣನ ಸಿನಿಮಾ ಟ್ರೇಲರ್ ತಮ್ಮನಿಂದ ರಿಲೀಸ್

  puneeth rajkumar ro release tryambakam release

  ದಯಾಳ್ ಪದ್ಮನಾಭನ್ ನಿರ್ದೇಶನದ, ರಾಘವೇಂದ್ರ ರಾಜ್‍ಕುಮಾರ್ ಅಭಿನಯದ ತ್ರಯಂಬಕಂ ಸಿನಿಮಾದ ಟ್ರೇಲರ್ ರಿಲೀಸ್ ಮುಹೂರ್ತ ಫಿಕ್ಸ್ ಆಗಿದೆ. ಅಣ್ಣನ ಸಿನಿಮಾ ಟ್ರೇಲರ್ ಬಿಡುಗಡೆ ಮಾಡ್ತಿರೋದು ತಮ್ಮ ಪುನೀತ್ ರಾಜ್‍ಕುಮಾರ್.

  ತ್ರಯಂಬಕಂ ಚಿತ್ರದ ಮುಹೂರ್ತದ ದಿನ ಶುಭ ಹಾರೈಸಿದ್ದ ಪುನೀತ್, ಟ್ರೇಲರ್ ರಿಲೀಸ್ ಕೂಡಾ ಮಾಡುತ್ತಿದ್ದಾರೆ. 

  ಅನುಪಮಾ ಗೌಡ, ಆರ್‍ಜೆ ರೋಹಿತ್ ಕೂಡಾ ಪ್ರಧಾನ ಪಾತ್ರದಲ್ಲಿದ್ದಾರೆ. ನವೀನ್ ಕೃಷ್ಣ ಸಂಭಾಷನೆ, ಗಣೇಶ್ ನಾರಾಯಣ್ ಸಂಗೀತದ ಬಲ ಚಿತ್ರಕ್ಕಿದೆ. ಕರಾಳ ರಾತ್ರಿ, ಪುಟ 109 ಚಿತ್ರಗಳ ಮೂಲಕ ವಿಭಿನ್ನ ಅನುಭವ ನೀಡಿದ್ದ ದಯಾಳ್, ಮತ್ತೊಂದು ಡಿಫರೆಂಟ್ ಸ್ಟೋರಿಯೊಂದಿಗೇ ಥ್ರಿಲ್ ನೀಡಲು ಬರುತ್ತಿದ್ದಾರೆ.

 • ಅಣ್ಣನ ಸಿನಿಮಾಗೆ ಅಭಿಮಾನಿಯಾಗಿ ಬಂದ ತಮ್ಮ..!

  puneeth watched tagaru first day first show

  ಟಗರಿಗೆ ಪೊಗರಿಗೆ ಪವರ್‍ಸ್ಟಾರ್ ಫಿದಾ ಆಗಿಬಿಟ್ಟಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾವನ್ನನು ಅಭಿಮಾನಿಗಳ ಜೊತೆ ಅಭಿಮಾನಿಯಾಗಿ ನೋಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಊರ್ವಶಿ ಚಿತ್ರಮಂದಿರದಲ್ಲಿ ಗೆಳೆಯರು, ಅಭಿಮಾನಿಗಳ ಮಧ್ಯೆ ಚಿತ್ರ ವೀಕ್ಷಿಸಿದ ಪುನೀತ್, ಟಗರು ಚಿತ್ರಕ್ಕೆ ಫಿದಾ ಆಗಿಬಿಟ್ಟಿದ್ದಾರೆ.

  ನಿರ್ದೇಶಕ ಸೂರಿಯವರ ಕೆಲಸವನ್ನು ಹೊಗಳಿರುವ ಪುನೀತ್, ಸಿನಿಮಾದ ಮೇಕಿಂಗ್ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ತುರ್ತು ಕೆಲಸದ ಹಿನ್ನೆಲೆಯಲ್ಲಿ ಕ್ಲೈಮಾಕ್ಸ್‍ಗೆ ಮೊದಲೇ ಹೊರನಡೆದ ಪುನೀತ್, ಮತ್ತೊಮ್ಮೆ ಸಿನಿಮಾ ನೋಡುತ್ತೇನೆ ಎಂದಿದ್ದಾರೆ. ಟಗರು ಚಿತ್ರದ ಖದರು ಪ್ರೇಕ್ಷಕರಿಗೂ ಇಷ್ಟವಾಗಿದೆ.

 • ಅಣ್ಣನಿಗೆ ಅಪ್ಪು ಕೊಟ್ಟ ಹುಟ್ಟುಹಬ್ಬದ ಕಾಣಿಕೆ

  puneeth, shivarajkumar

  55ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದಿದ್ದ ಶಿವರಾಜ್ ಕುಮಾರ್ ಆಸೆ ಈಡೇರಲಿಲ್ಲ. ಪ್ರತಿವರ್ಷದಂತೆ ಈ ವರ್ಷವೂ ಅಭಿಮಾನಿಗಳ ದಂಡು ಶಿವಣ್ಣನ ಮನೆಗೆ ದಾಳಿಯಿಟ್ಟು, ಹುಟ್ಟುಹಬ್ಬ ಸಂಭ್ರಮಿಸಿತು.

  ಹುಟ್ಟುಹಬ್ಬದ ದಿನ ತಂದೆ ಮತ್ತು ತಾಯಿಯ ಸಮಾಧಿಗೆ ತೆರಳಿದ ಶಿವರಾಜ್ ಕುಮಾರ್, ನಮನ ಸಲ್ಲಿಸಿದರು. ಇದೆಲ್ಲದರ ಮಧ್ಯೆ ಅಣ್ಣನಿಗೆ ಪುನೀತ್ ರಾಜ್‍ಕುಮಾರ್ ವಿಶೇಷ ಉಡುಗೊರೆಯೊಂದನ್ನು ಕೊಟ್ಟರು. ಅದು ಬಿಎಂಡಬ್ಲ್ಯು ಸೈಕಲ್. ಆ ಸೈಕಲ್‍ನ ಬೆಲೆಯೇ 2 ಲಕ್ಷ ರೂ.

  ನೀಲಿ ಬಣ್ಣದ ಆ ಸೈಕಲ್ ನೋಡೋಕೆ ಸಖತ್ ಆಗಿದೆ. ಸೈಕಲ್‍ನ್ನೇ ಗಿಫ್ಟಾಗಿ ಕೊಡೋಕೆ ಕಾರಣವೂ ಇದೆ. ಶಿವರಾಜ್ ಕುಮಾರ್ ಪ್ರತಿದಿನ ಬೆಳಗ್ಗೆ ಸೈಕ್ಲಿಂಗ್ ಮಾಡ್ತಾರೆ. ಆರೋಗ್ಯ ಮತ್ತು ಫಿಟ್‍ನೆಸ್‍ಗೆ ಕಾಳಜಿ ವಹಿಸುವ ಅಣ್ಣನಿಗೆ ಸೈಕಲ್‍ನ್ನೇ ಉಡುಗೊರೆ ನೀಡಿ ಶುಭ ಹಾರೈಸಿದ್ದಾರೆ ತಮ್ಮ ಪುನೀತ್.

 • ಅದೇ ಜೋಡಿ.. ಅದೇ ಮೋಡಿ.. ಮತ್ತೆ ರಾಜಕುಮಾರ..

  rajkumara jodi to create craze again

  ರಾಜಕುಮಾರ ಜೋಡಿ ಮತ್ತೆ ಒಂದಾಗಿದೆ. ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಹೊಂಬಾಳೆ ಫಿಲ್ಮ್ಸ್ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರದ ಟೈಟಲ್ ಹೆಚ್ಚೂ ಕಡಿಮೆ ಫೈನಲ್ ಆಗಿದೆಯಂತೆ. ಅನೌನ್ಸ್ ಮಾಡೋದಷ್ಟೇ ಬಾಕಿ.

  ಇದು ಪುನೀತ್‍ಗೆ 29ನೇ ಸಿನಿಮಾ ಆದರೆ, ಸಂತೋಷ್ ಆನಂದ್‍ರಾಮ್‍ಗೆ 3ನೇ ಸಿನಿಮಾ. ಹೊಂಬಾಳೆ ಫಿಲ್ಸ್ಮ್‍ಗೆ 6ನೇ ಸಿನಿಮಾ. ನಟಸಾರ್ವಭೌಮ ಮುಗಿದ ನಂತರ ಹೊಂಬಾಳೆ ಸಿನಿಮಾ ಶುರುವಾಗಲಿದೆ. 

 • ಅನಂತ್ ನಾಗ್ ಸಂದರ್ಶನ ಮಾಡಿದ ಅಪ್ಪು 

  puneeth rajkumar interviws ananth nag

  ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ ಚಿತ್ರದ ಬಿಡುಗಡೆಗೆ ಮುನ್ನ ಪ್ರಮೋಷನ್‍ಗೆ ಮುಂದಾಗಿದೆ ಚಿತ್ರತಂಡ. ಅದರ ನೇತೃತ್ವ ವಹಿಸಿರುವುದು ಸ್ವತಃ ಪುನೀತ್ ರಾಜ್‍ಕುಮಾರ್. ಚಿತ್ರದ ಪ್ರಮುಖ ಪಾತ್ರಧಾರಿಯಲ್ಲೊಬ್ಬರಾದ ನಟ ಅನಂತ್‍ನಾಗ್ ಅವರನ್ನು ಖುದ್ದು ಪುನೀತ್ ಅವರೇ ಸಂದರ್ಶನ ಮಾಡಿದ್ದಾರೆ.

  ಚಿಕ್ಕ ಹುಡುಗನಾಗಿದ್ದಾಗ ನನಗೆ ನಿಮಗಿಂತ ಶಂಕರ್ ನಾಗ್ ಅವರೇ ಇಷ್ಟ ಎಂದು ನೇರವಾಗಿ ಅನಂತ್ ಅವರಲ್ಲೇ ಹೇಳಿದ್ದ ಅಪ್ಪು, ಈಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಆಗಿ ಸಂದರ್ಶನ ಮಾಡಿರುವುದೇ ವಿಶೇಷ.

  ಪುನೀತ್‍ನನ್ನು ನಾನು ಚಿಕ್ಕಂದಿನಿಂದ ನೋಡಿದ್ದೇನೆ. ನಾನು ವಜ್ರೇಶ್ವರಿ ಕಂಬೈನ್ಸ್‍ನಲ್ಲೂ ನಟಿಸಿದ್ದೇನೆ. ಪಿಆರ್‍ಕೆ ಪ್ರೊಡಕ್ಷನ್‍ನಲ್ಲಿಯೂ ನಟಿಸಿದ್ದೇನೆ. ಚಿಕ್ಕ ಹುಡುಗನಾಗಿದ್ದ ಪುನೀತ್, ಈಗ ದೊಡ್ಡ ಸ್ಟಾರ್ ಆಗಿ, ನಿರ್ಮಾಪಕನಾಗಿ ಸಿನಿಮಾ ಮಾಡಿದ್ದಾರೆ. ಅದೆಲ್ಲವನ್ನೂ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದೇನೆ ಎಂದಿದ್ದಾರೆ ಅನಂತ್ ನಾಗ್.

 • ಅಪ್ಪನ ಬಿರುದೇ ಅಪ್ಪು ಸಿನಿಮಾ ಟೈಟಲ್ಲು..!

  puneeth;s new movie titles natasarvabowma

  ಪುನೀತ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರದ ಟೈಟಲ್ ಏನು..? ಪಂಜುನಾ..? ಅಧಿಪತಿನಾ..? ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದವರಿಗೆ ಉತ್ತರ ಸಿಕ್ಕಿದೆ. ಪುನೀತ್ ಹೊಸ ಚಿತ್ರದ ಟೈಟಲ್ ನಟಸಾರ್ವಭೌಮ.

  ನಟಸಾರ್ವಭೌಮ ಎನ್ನುವುದು ಡಾ.ರಾಜ್‍ಕುಮಾರ್ ಅವರ ಬಿರುದುಗಳಲ್ಲಿ ಒಂದು ಹಾಗೂ ಅದು ಡಾ.ರಾಜ್ ಅವರ ಸಾಕ್ಷ್ಯಚಿತ್ರದ ಹೆಸರು ಕೂಡಾ ಹೌದು. 

  ಈ ಆ ಟೈಟಲ್‍ನ್ನು ಪುನೀತ್ ಅವರ ಹೊಸ ಚಿತ್ರಕ್ಕೆ ಫೈನಲ್ ಮಾಡಲಾಗಿದೆ. ಚಿತ್ರದ ಫಸ್ಟ್ ಲುಕ್ ಇಂದು ರಾತ್ರಿ (ಮಾರ್ಚ್ 16ರ ಮಧ್ಯರಾತ್ರಿ) ಪ್ರೇಕ್ಷಕರ ಎದುರು ಬರಲಿದೆ. ಕ್ಯಾಮೆರಾ ಹಿಡಿದುಕೊಂಡಿರುವ ಪುನೀತ್ ಅವರ ಫೋಟೋದಲ್ಲಿ ಚಿತ್ರದ ಕಥೆಯ ಗುಟ್ಟು ಮಾತ್ರ ಬಹಿರಂಗವಾಗುತ್ತಿಲ್ಲ.

  Related Articles :-

  Puneeth's New Film Titled 'Natasarvabhowma'

 • ಅಪ್ಪನಂತೆ ಮಗ.. ಪುನೀತ್‍ಗೆ ಶೋಭಾ ಕರಂದ್ಲಾಜೆ ಹೇಳಿದ್ದೇಕೆ..?

  shobha karandanjle meets puneeth rajkumar

  ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 4 ವರ್ಷ ಪೂರೈಸಿ, 5ನೇ ವರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನ ಆರಂಭಿಸಿದೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಸೆಲಬ್ರಿಟಿಗಳು ಹಾಗೂ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಈ ಕುರಿತು ಒಂದು ವಿಶೇಷ ಪುಸ್ತಕವನ್ನೇ ಮಾಡಿದೆ ಬಿಜೆಪಿ ಸರ್ಕಾರ. ಈ ಅಭಿಯಾನದ ಅಂಗವಾಗಿ ಸಂಸದೆ ಶೋಭಾ ಕರಂದ್ಲಾಜೆ, ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‍ರನ್ನು ಭೇಟಿ ಮಾಡಿದ್ದಾರೆ. ಸರ್ಕಾರದ ಸಾಧನೆಯ ಪುಸ್ತಕವನ್ನೂ ನೀಡಿದ್ದಾರೆ. 

  ಅಪರೂಪದ ಸರಳ ವ್ಯಕ್ತಿತ್ವ ಹೊಂದಿರುವ ಸ್ಯಾಂಡಲ್‍ವುಡ್ ಕಿಂಗ್ ಪುನೀತ್ ರಾಜ್‍ಕುಮಾರ್‍ರನ್ನು ಭೇಟಿ ಮಾಡಿದೆ. ನರೇಂದ್ರ ಮೋದಿ ಸರ್ಕಾರದ ಸಾಧನೆ, ಕೆಲಸಗಳ ಬಗ್ಗೆ ಪುಸ್ತಕ ನೀಡಿ ವಿವರಣೆ ನೀಡಿದೆ. ಅಪ್ಪನಂತೆ ಮಗ ಎಂದಿದ್ದಾರೆ ಶೋಭಾ.

  ಶೋಭಾ ಅವರಿಗೆ ಪುನೀತ್ ಅವರಲ್ಲಿ ಇಷ್ಟವಾಗಿರೋದು ಅವರ ಸರಳತೆ. ವಿನಯಪೂರ್ವ ವರ್ತನೆ. ಇತ್ತೀಚೆಗೆ ಶಾಸಕ ಶ್ರೀರಾಮುಲು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ಬಿಜೆಪಿ ಸಾಧನೆಯ ಪುಸ್ತಕ ಕೊಟ್ಟಿದ್ದರು. ಈಗ ಶೋಭಾ ಕರಂದ್ಲಾಜೆ, ಪುನೀತ್ ಅವರನ್ನು ಭೇಟಿ ಮಾಡಿದ್ದಾರೆ.

 • ಅಪ್ಪು 30ನೇ ಸಿನಿಮಾ ಯಾವ್ದು..?

  which is puneeth's 30th film

  ನಟಸಾರ್ವಭೌಮ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಪುನೀತ್ ರಾಜ್‍ಕುಮಾರ್, ಯುವರತ್ನ ಚಿತ್ರದ ಒಂದು ಹಂತದ ಶೂಟಿಂಗ್ ಮುಗಿಸಿಬಿಟ್ಟಿದ್ದಾರೆ. ಆಗಲೇ, 30ನೇ ಚಿತ್ರಕ್ಕೆ ತಯಾರಿಯೂ ಶುರುವಾಗಿದೆ.

  ಭರ್ಜರಿ, ಬಹದ್ದೂರ್ ಚಿತ್ರಗಳ ನಿರ್ದೇಶಕ ಚೇತನ್ ಕುಮಾರ್ ಹೇಳಿರುವ ಕಥೆಗೆ ಅಪ್ಪು ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅದು ಜೇಮ್ಸ್. ಪುನೀತ್ ಹುಟ್ಟುಹಬ್ಬದ ವೇಳೆ ಅದು ಅನೌನ್ಸ್ ಆಗಬಹುದು.

  `ಅದು ಅಪ್ಪು ಸರ್ ಅವರಿಗಾಗಿಯೇ ಮಾಡಿರೋ ಕಥೆ. ಅವರಿಗೆ ಕಥೆ ಇಷ್ಟವಾಗಿದೆ. ಓಕೆ ಎಂದಿದ್ದಾರೆ. ಯಾವಾಗ ಎಂದು ನಾನೂ ಕಾಯುತ್ತಿದ್ದೇನೆ' ಎಂದಿದ್ದಾರೆ ಚೇತನ್.

 • ಅಪ್ಪು ಅಂಜನೀಪುತ್ರ ಒಪ್ಪಿಕೊಳ್ಳೋಕೆ `ಅಮ್ಮ' ಕಾರಣ

  anjaniputra

  ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರ ನಾಳೆಯಿಂದ ಆವರಿಸಿಕೊಳ್ಳಲಿದ್ದಾನೆ. ಹರ್ಷ-ಪುನೀತ್-ರಶ್ಮಿಕಾ-ರಮ್ಯಕೃಷ್ಣ ಕಾಂಬಿನೇಷನ್‍ನ ಚಿತ್ರವನ್ನು ಪುನೀತ್ ಒಪ್ಪಿಕೊಳ್ಳೋಕೆ ಕಾರಣ ಏನ್ ಗೊತ್ತಾ..? ಅದು ಅಮ್ಮ. ರಾಜಕುಮಾರ ಚಿತ್ರದ ನಂತರ ಪುನೀತ್ ನಟಿಸಿದ ಚಿತ್ರ ಅಂಜನೀಪುತ್ರ. ಅಷ್ಟು ದೊಡ್ಡ ಸ್ವಮೇಕ್ ಹಿಟ್ ಕೊಟ್ಟಿದ್ದ ಪುನೀತ್, ರೀಮೇಕ್ ಚಿತ್ರ ಒಪ್ಪಿಕೊಳ್ಳೋಕೆ ಕಾರಣ, ಅಮ್ಮ.

  ತಮಿಳಿನ ಪೂಜೈ ಚಿತ್ರದ ರೀಮೇಕ್ ಅಂಜನೀಪುತ್ರ. ಆ ಚಿತ್ರದಲ್ಲಿನ ತಾಯಿ-ಮಗನ ಸೆಂಟಿಮೆಂಟ್ ಪುನೀತ್‍ಗೆ ತುಂಬಾ ಇಷ್ಟವಾಯ್ತಂತೆ. ಇನ್ನು ಸ್ವತಃ ಪುನೀತ್, ತಮ್ಮ ತಾಯಿಯಿಂದ ಬಹಳವಾಗಿ ಪ್ರೇರಿತರಾದವರು. ಆದರೆ, ನನ್ನ ತಾಯಿಯ ಪ್ರೀತಿಯನ್ನು ನಾನು ಯಾವುದರೊಂದಿಗೆ ಕನೆಕ್ಟ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುತ್ತಾರೆ ಪುನೀತ್.

  ಅಂಜನೀಪುತ್ರದಲ್ಲಿ ಪುನೀತ್ ತಾಯಿಯಾಗಿ ನಟಿಸಿರುವುದು ರಮ್ಯಕೃಷ್ಣ. ನಾಯಕನಷ್ಟೇ ತೂಕದ ಪಾತ್ರವದು. ಕಣ್ಣು ಮತ್ತು ಧ್ವನಿಯಲ್ಲೇ ಪ್ರೇಕ್ಷಕರ ಎದೆಗಿಳಿಯುವ ರಮ್ಯಕೃಷ್ಣ ಅಂಜನೀಪುತ್ರದಲ್ಲೂ ಆವರಿಸಿಕೊಳ್ಳುತ್ತಾರೆ ಅನ್ನೋದ್ರಲ್ಲಿ ಅನುಮಾನವಿಲ್ಲ.

 • ಅಪ್ಪು ಅಭಿಮಾನಿ ದೇವರ ದರ್ಶನ ಯಾತ್ರೆ

  natasarvabhouma success journey

  ನಟಸಾರ್ವಭೌಮ ಚಿತ್ರ ಯಶಸ್ವಿಯಾಗಿ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿರೋ ಪುನೀತ್ ರಾಜ್‍ಕುಮಾರ್, ಅಭಿಮಾನಿ ದೇವರುಗಳ ದರ್ಶನ ಯಾತ್ರೆ ಕೈಗೊಂಡಿದ್ದಾರೆ.

  ಹಾವೇರಿಯಿಂದ ಶುರುವಾದ ನಟಸಾರ್ವಭೌಮನ ಯಾತ್ರೆ, ರಾಣೆಬೆನ್ನೂರು, ಚಿತ್ರದುರ್ಗ, ಹಾವೇರಿ, ಶಿರಾ, ತುಮಕೂರುಗಳನ್ನೂ ತಲುಪಿದೆ. ಹಾವೇರಿಯಲ್ಲಿ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಟ್ಟಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಪುನೀತ್.

  ಈಗಾಗಲೇ ಮೈಸೂರು, ಮಂಡ್ಯದಲ್ಲೊಂದು ಸುತ್ತು ಮುಗಿಸಿರುವ ಪುನೀತ್, ಕರಾವಳಿ ಭಾಗದಲ್ಲೂ ಜರ್ನಿ ಮಾಡಿದ್ದಾರೆ. 

 • ಅಪ್ಪು ಅಭಿಮಾನಿಗಳಿಗೆ ಡಿಕೆಶಿ ಸಾಂತ್ವನ

  dk shivkumar says dobt worry to appu fans

  ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮನೆ ಇರೋದು ಸದಾಶಿವ ನಗರದಲ್ಲಿ. ಅದೇ ಮನೆಯ ಪಕ್ಕ ಇರೋದು ಪೊಲಿಟಿಕಲ್ ಪವರ್ ಸ್ಟಾರ್ ಡಿ.ಕೆ.ಶಿವಕುಮಾರ್ ಮನೆ. ಪುನೀತ್ ಮನೆಯಲ್ಲಿ ಐಟಿ ಅಧಿಕಾರಿಗಳು ಬೀಡುಬಿಟ್ಟಿರುವಾಗ ಅಭಿಮಾನಿಗಳು ಮನೆ ಬಳಿ ಜಮಾಯಿಸಿದ್ದರು. ಆಗ ಮನೆಗೆ ಹೋಗಲು ಬಂದ ಡಿ.ಕೆ.ಶಿವಕುಮಾರ್, ಪುನೀತ್ ಮನೆ ಬಳಿ ಕಾರು ನಿಲ್ಲಿಸಿ ``ಇನ್ನೂ ಮುಗಿದಿಲ್ವಾ'' ಎಂದು ಅಭಿಮಾನಿಗಳನ್ನೇ ಪ್ರಶ್ನಿಸಿದ್ದಾರೆ. 

  ಇನ್ನೂ ಇಲ್ಲ ಸಾರ್. ನೀವೇ ಏನಾದ್ರೂ ಮಾಡಿ ಎಂದು ಕೇಳಿಕೊಂಡ ಅಭಿಮಾನಿಗಳಿಗೆ, ಇದೆಲ್ಲ ಕಾನೂನು ಕಣ್ರಪ್ಪಾ.. ಡೋಂಟ್ ವರಿ.. ಏನೂ ಆಗಲ್ಲ ಎಂದು ಸಮಾಧಾನಿಸಿ ಮನೆಗೆ ತೆರಳಿದ್ದಾರೆ ಡಿಕೆ ಶಿವಕುಮಾರ್. ಇದೆಲ್ಲ ನಡೆದದ್ದು ಗುರುವಾರ ರಾತ್ರಿ. ಮುಂಜಾನೆ ಕೂಡಾ ಪುನೀತ್ ಮನೆಯಲ್ಲಿ ಪರಿಶೀಲನೆ ನಡೆಯುತ್ತಿದೆ.

  Related Articles :-

  ದೇಶದಲ್ಲೇ ನಡೆದಿರಲಿಲ್ಲ ಇಂಥಾದ್ದೊಂದು ಸಿನಿಮಾ ಐಟಿ ರೇಡ್..!

  IT Shock For Sandalwood, Raids On The Houses Of Producers And Star Actors

 • ಅಪ್ಪು ಅಭಿಮಾನಿಯಿಂದ ಇಡೀ ಥಿಯೇಟರ್ ಬುಕ್..!

  puneeth's fans buys total natasarvabhouma tickets

  ನಟಸಾರ್ವಭೌಮ ಚಿತ್ರದ ಬುಕ್ಕಿಂಗ್ ಶುರುವಾಗಿದ್ದೇ ತಡ, ಅಪ್ಪು ಅಭಿಮಾನಿಯೊಬ್ಬ ಇಡೀ ಥಿಯೇಟರ್‍ನ್ನೇ ಬುಕ್ ಮಾಡಿದ್ದಾನೆ. ಪುನೀತ್ ಅಭಿಮಾನಿಯಾಗಿರುವ ಅಭಿಷೇಕ್ ಎಂಬ ಈ ಹುಡುಗ ತನ್ನ ಹಾಗೂ ತನ್ನ ಗೆಳೆಯರಿಗಾಗಿ ಊರ್ವಶಿ ಥಿಯೇಟರ್‍ನ ಎಲ್ಲ 1200 ಸೀಟುಗಳನ್ನೂ ಬುಕ್ ಮಾಡಿದ್ದಾನೆ.

  ಸಾಮಾನ್ಯವಾಗಿ ಇಂಥದ್ದೊಂದು ಕ್ರೇಜ್ ತಮಿಳುನಾಡು ಅಭಿಮಾನಿಗಳಲ್ಲಿದೆ. ರಜನಿಕಾಂತ್, ವಿಜಯ್, ಅಜಿತ್ ಚಿತ್ರಗಳಿಗೆ ಈ ರೀತಿ ಇಡೀ ಥಿಯೇಟರನ್ನೇ ಬುಕ್ ಮಾಡುವ ಅಭಿಮಾನಿಗಳಿದ್ದಾರೆ. ಕನ್ನಡಕ್ಕಿದು ಹೊಸದು.

  ಪುನೀತ್ ಸಿನಿಮಾ ಯಾವುದೇ ರಿಲೀಸ್ ಆಗಲಿ. ಮೊದಲ ದಿನ, ಮೊದಲ ಶೋ ನೋಡಿದರೇನೇ ಸಮಾಧಾನ. ಈ ಬಾರಿ ನಾವೆಲ್ಲ ಗೆಳೆಯರೂ ಪ್ಲಾನ್ ಮಾಡಿಕೊಂಡು ಮೊದಲ ದಿನ ಎಲ್ಲರೂ ಒಟ್ಟಿಗೇ ಸಿನಿಮಾ ನೋಡಲು ಈ ರೀತಿ ಮಾಡಿದೆವು. ಕರ್ನಾಟಕದಲ್ಲೂ ಇಂತಹ ಫ್ಯಾನ್ಸ್ ಇದ್ದಾರೆ ಎನ್ನುವುದು ಬೇರೆ ಭಾಷೆಯವರಿಗೆ ಗೊತ್ತಾಗಲಿ ಬಿಡಿ ಎಂದು ಹೆಮ್ಮೆಯಿಂದ ಹೇಳಿದ್ದಾರೆ ಅಭಿ.

  ನಟಸಾರ್ವಭೌಮ ಚಿತ್ರ ಫೆಬ್ರವರಿ 7ರಂದು ರಿಲೀಸ್ ಆಗುತ್ತಿದ್ದು, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರು. ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.

 • ಅಪ್ಪು ಅಷ್ಟೇ ಅಲ್ಲ, ಅಪ್ಪು ಅಭಿಮಾನಿಗಳೂ ಕುರುಕ್ಷೇತ್ರಕ್ಕೆ ವೇಯ್ಟಿಂಗ್

  puneeth waiting for kurukshetra

  ಕುರುಕ್ಷೇತ್ರ ಚಿತ್ರ ರಿಲೀಸ್‍ಗೂ ಮುನ್ನವೇ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಅದು ಕೇವಲ ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ 50ನೇ ಸಿನಿಮಾ ಎಂಬ ಕಾರಣಕ್ಕೆ ಅಲ್ಲ. ಅದು ಇಡೀ ಕನ್ನಡ ಚಿತ್ರರಂಗದ ಕಲಾವಿದರ ದಂಡನ್ನೇ ಒಟ್ಟುಗೂಡಿಸಿರುವ ಸಿನಿಮಾ. ಅದರಲ್ಲೂ ದುರ್ಯೋಧನನಾಗಿ ಕಾಣಿಸಿಕೊಂಡಿರುವ ದರ್ಶನ್ ನಿರೀಕ್ಷೆಯ ಶಿಖರವನ್ನೇ ಅಭಿಮಾನಿಗಳ ಎದುರು ಇಟ್ಟುಬಿಟ್ಟಿದ್ದಾರೆ.

  ಸಹಜವಾಗಿಯೇ ಚಿತ್ರದ ಬಗ್ಗೆ ಕನ್ನಡ ಚಿತ್ರರಂಗದ ಎಲ್ಲ ತಾರೆಯರೂ ನಿರೀಕ್ಷೆಯಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಅಂಜನಿಪುತ್ರ ಚಿತ್ರದ ಬಿಡುಗಡೆ ವೇಳೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಕುರುಕ್ಷೇತ್ರ ಚಿತ್ರದ ಬಗ್ಗೆ ಪ್ರಶ್ನೆಗಳು ಎದುರಾದವು. ದರ್ಶನ್ ಅವರ ಲುಕ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಪುನೀತ್, ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದರು.

  ಈಗ ಡಿ ಬಾಸ್ ಫ್ಯಾನ್ಸ್ ಅಷ್ಟೇ ಅಲ್ಲ, ಅಪ್ಪು ಫ್ಯಾನ್ಸ್ ಕೂಡಾ ದರ್ಶನ್ ಲುಕ್ಕು, ಗೆಟಪ್‍ಗೆ ಮಾರು ಹೋಗಿದ್ದಾರೆ. ದರ್ಶನ್, ದುರ್ಯೋಧನನ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಎಂದು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಐತಿಹಾಸಿಕ ಅಥವಾ ಪೌರಾಣಿಕ ಪಾತ್ರಗಳಿದ್ದರೆ, ಅದಕ್ಕೆ ದರ್ಶನ್ ಮೊದಲ ಆಯ್ಕೆ ಎಂದಿದ್ದಾರೆ.

  ಇತ್ತೀಚೆಗೆ ಕನ್ನಡದ ಸ್ಟಾರ್‍ಗಳ ಅಭಿಮಾನಿಗಳ ನಡುವೆ ವಾರ್‍ಗಷ್ಟೇ ಸಾಕ್ಷಿಯಾಗುತ್ತಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಇದು ಸಂಚಲನ ಸೃಷ್ಟಿಸಿರುವುದು ನಿಜ. ಎಲ್ಲ ನಟರು, ಕಲಾವಿದರನ್ನೂ ಅಭಿಮಾನಿಸುವ ಅಭಿಮಾನಿಗಳ ಸಂಖ್ಯೆ ಕೋಟಿಯಾಗಲಿ.

 • ಅಪ್ಪು ಕೇಳಿದ್ದಾರೆ.. ಅಭಿಮಾನಿಗಳೇ ಉತ್ತರ ಕೊಡಿ..

  appu asks fans one question

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ, ಥಿಯೇಟರುಗಳಿಗೆ ಲಗ್ಗೆಯಿಟ್ಟು, ಪ್ರೇಕ್ಷಕರ ಮನಸ್ಸನ್ನೂ ಗೆದ್ದಿದೆ. ಚಿತ್ರದ ಕಥೆ, ಪುನೀತ್ ಅಭಿನಯ, ಪವನ್ ಒಡೆಯರ್ ಡೈರೆಕ್ಷನ್.. ಎಲ್ಲದಕ್ಕೂ ಪ್ರೇಕ್ಷಕರು ಜೈಕಾರ ಹಾಕುತ್ತಿರುವುದು ಸ್ವತಃ ಪುನೀತ್ ಅವರನ್ನೂ ಖುಷಿಗೊಳಿಸಿದೆ. ಹೀಗಾಗಿಯೇ ಅವರು ಚಿತ್ರವನ್ನು ವೀಕ್ಷಿಸುತ್ತಿರುವವರಿಗೆ, ಈಗಾಗಲೇ ನೋಡಿ ಮೆಚ್ಚಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.

  `ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ನಾನು, ನಮ್ಮ ಕುಟುಂಬ ಸದಾ ಋಣಿಯಾಗಿರುತ್ತೇವೆ. ಈ ಪ್ರೀತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ' ಎಂದಿದ್ದಾರೆ ಪುನೀತ್.

  ಇದೆಲ್ಲದರ ಜೊತೆಗೆ ಅವರು ಅಭಿಮಾನಿಗಳ ಎದುರು ಪುಟ್ಟದೊಂದು ಪ್ರಶ್ನೆಯಿಟ್ಟಿದ್ದಾರೆ. ಪುನೀತ್, ಕನ್ನಡಕಧಾರಿಯಾಗಿ ನಟಿಸಿರುವುದು ಇದೇ ಮೊದಲು. ಹೀಗಾಗಿಯೇ.. ಕನ್ನಡಕದ ಲುಕ್ ಹೇಗಿದೆ..? ದಯವಿಟ್ಟು ತಿಳಿಸಿ ಎಂದು ಕೇಳಿಕೊಂಡಿದ್ದಾರೆ ಅಪ್ಪು.

 • ಅಪ್ಪು ಡ್ಯಾನ್ಸ್‍ನ್ನು ಕಿಚ್ಚ ಹೊಗಳಿದ್ದು ಹೀಗೆ..

  sudeep praises puneeth's dancing skills

  `ನನಗೆ ಎರಡು ಆಪ್ಷನ್‍ಗಳನ್ನು ಕೊಡಲಾಗಿತ್ತು. ಒಂದು - ದೇಹವನ್ನು ದಂಡಿಸಿ ಟೋನ್ ಮಾಡಿಕೊಳ್ಳುವುದು. ಎರಡು - ಡ್ಯಾನ್ಸರ್ ಆಗುವುದು. ನನ್ನ ಆಯ್ಕೆ ಏನು ಎನ್ನುವುದು ಇಡೀ ಜಗತ್ತಿಗೇ ಗೊತ್ತು. ನಾನು ಇದ್ದುದರಲ್ಲಿ ಸುಲಭ ಎನ್ನಿಸಿದ ಮೊದಲನೆಯದನ್ನೇ ಆಯ್ಕೆ ಮಾಡಿಕೊಂಡೆ. ಜೀವನವನ್ನು ಸುಲಭ ಮಾಡಿಕೊಂಡಿದ್ದೇನೆ. ನೀವು ಡ್ಯಾನ್ಸ್ ಮಾಡೋದನ್ನು ನೋಡಿ ಖುಷಿಪಡುತ್ತೇನೆ'

  ಪುನೀತ್ ರಾಜ್‍ಕುಮಾರ್ ಡ್ಯಾನ್ಸ್ ಬಗ್ಗೆ ಕಿಚ್ಚ ಸುದೀಪ್ ಹೇಳಿರುವುದು ಹೀಗೆ. ನಟಸಾರ್ವಭೌಮ ರಿಲೀಸ್‍ಗೆ ಕಾಯುತ್ತಿದ್ದೇನೆ ಎಂದಿರುವ ಸುದೀಪ್, ಅಪ್ಪು ಚಿತ್ರಕ್ಕೆ ಶುಭ ಹಾರೈಸಿದ್ದಾರೆ. 

  ಸುದೀಪ್ ಅವರಿಗೆ ಥ್ಯಾಂಕ್ಸ್ ಹೇಳಿರುವ ಪುನೀತ್, `ಪೈಲ್ವಾನ್ ಚಿತ್ರದ ಟೀಸರ್ ಇಂಟರೆಸ್ಟಿಂಗ್ ಆಗಿದೆ' ಎಂದಿದ್ದಾರೆ. 

  ಕನ್ನಡದ ಇಬ್ಬರು ಸ್ಟಾರ್‍ಗಳ ನಡುವಿನ ಈ ಸ್ನೇಹ ಸಂಭಾಷಣೆ ಅಭಿಮಾನಿಗಳಿಗೆ ಹಬ್ಬ ಸೃಷ್ಟಿಸಿದೆ.

 • ಅಪ್ಪು ಬ್ಯಾನರ್ ಫಸ್ಟ್ ಸಿನಿಮಾ ಸೆನ್ಸಾರ್ ಪಾಸ್ - ಕವಲುದಾರಿ ಫಸ್ಟ್ ಕ್ಲಾಸ್

  kavaludaari censored u/a

  ಕವಲುದಾರಿ, ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ಯಶಸ್ವಿ ಚಿತ್ರ ಕೊಟ್ಟಿದ್ದ ಹೇಮಂತ್ ರಾವ್ ನಿರ್ದೇಶನದ ಸಿನಿಮಾ. ರಿಷಿ ಹೀರೋ ಆಗಿದ್ದರೆ, ರೋಹಿಣಿ ಪ್ರಕಾಶ್ ಹೀರೋಯಿನ್.

  ಅನಂತ್ ನಾಗ್, ಸುಮನ್ ರಂಗನಾಥ್, ಅಚ್ಯುತ್ ರಾವ್ ಅವರು ನಟಿಸಿರುವ ಚಿತ್ರ ಥ್ರಿಲ್ಲರ್ ಕಥೆ ಹೊಂದಿದೆ. ಈ ಚಿತ್ರಕ್ಕೀಗ ಸೆನ್ಸಾರ್ ಒಂದೇ ಒಂದು ಕಟ್ ಇಲ್ಲದೆ, ಮ್ಯೂಟ್ ಇಲ್ಲದೆ ಓಕೆ ಎಂದಿದೆ. ಯು/ಎ ಪ್ರಮಾಣ ಪತ್ರ ಕೊಟ್ಟಿದೆ. ಚಿತ್ರದ ಆಡಿಯೋ ನಾಳೆ ರಿಲೀಸ್ ಆಗುತ್ತಿದೆ. 

 • ಅಪ್ಪು ಬ್ಯಾನರ್‍ನಲ್ಲಿ 3ನೇ ಸಿನಿಮಾ ಶುರು

  puneeth starts new movie under prk productions

  ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್ ಹೌಸ್, 3ನೇ ಸಿನಿಮಾ ಶುರು ಮಾಡಿದೆ. ಈ ಬಾರಿ ಪುನೀತ್ ಪನ್ನಗಾಭರಣ ಅವರಿಗೆ ನಿರ್ದೇಶನದ ಹೊಣೆ ನೀಡಿದ್ದಾರೆ. ಡ್ಯಾನಿಷ್ ಸೇಠ್ ಚಿತ್ರದ ಹೀರೋ. ದಿಶಾ ಮದನ್ ನಾಯಕಿ.

  ಚಿತ್ರದಲ್ಲಿ ಇಬ್ಬರು ಆಟೋ ಡ್ರೈವರ್‍ಗಳ ಕಥೆಯಿದೆ. ಒಬ್ಬ ಶಿವಾಜಿನಗರದವನು. ಇನ್ನೊಬ್ಬ ಫ್ರಾನ್ಸ್‍ನಿಂದ ಬಂದು ಶಿವಾಜಿನಗರದಲ್ಲಿ ಬದುಕುತ್ತಿರುವವನು. ಚಿತ್ರದ ಕಥೆ ಕೇಳಿಯೇ ಪುನೀತ್ ಬಿದ್ದೂ ಬಿದ್ದು ನಕ್ಕರು ಎಂದಿದ್ದಾರೆ ನಿರ್ದೇಶಕ ಪನ್ನಗಾಭರಣ.

  ಪುನೀತ್ ಸರ್ ಹೋಮ್ ಬ್ಯಾನರ್‍ನಲ್ಲಿ ನಟಿಸುತ್ತಿರುವುದೇ ದೊಡ್ಡ ಥ್ರಿಲ್ ಎಂದಿದ್ದಾರೆ ಡ್ಯಾನಿಷ್ ಸೇಠ್. ಪಿಆರ್‍ಕೆ ಬ್ಯಾನರ್‍ನ ಕವಲುದಾರಿ ಹಾಗೂ ಮಾಯಾ ಬಜಾರ್, ರಿಲೀಸ್‍ಗೆ ರೆಡಿಯಾಗಿವೆ. 3ನೇ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ ನಡೆದಿದೆ.

 • ಅಪ್ಪು ಮೆಚ್ಚಿದ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್

  puneeth appreciates humble politician

  ರಾಜ್ಯಾದ್ಯಂತ.. ದೇಶಾದ್ಯಂತ.. ಜಗತ್ತಿನಾದ್ಯಂತ.. ಭರ್ಜರಿ ಸುದ್ದಿ ಮಾಡುತ್ತಿರುವ ಹಂಬಲ್ ಪೊಲಿಟಿಷಿಯನ್ ಚಿತ್ರಕ್ಕೆ ಸ್ವತಃ ಪುನೀತ್ ರಾಜ್‍ಕುಮಾರ್ ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಎಲ್ಲರಿಗಿಂತ ಮೊದಲು ತಮ್ಮ ಮನೆಯಲ್ಲೇ ಸಿನಿಮಾ ನೋಡಿದ ಪುನೀತ್ ರಾಜ್‍ಕುಮಾರ್ ಸಿನಿಮಾ ಸಖತ್ತಾಗಿದೆ ಎಂದಿದ್ದಾರೆ. ಡ್ಯಾನಿಶ್ ಸೇಟ್ ಅಭಿನಯಕ್ಕೆ ಹೊಟ್ಟೆ ತುಂಬಾ ನಕ್ಕಿದ್ದಾರೆ.

  ನಟ ಡ್ಯಾನಿಶ್ ಸೇಟ್, ರಕ್ಷಿತ್ ಶೆಟ್ಟಿ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಹೇಮಂತ್ ರಾವ್ ಮತ್ತು ಪುನೀತ್ ರಾಜ್‍ಕುಮಾರ್ ಒಟ್ಟಿಗೇ ತೆಗೆಸಿಕೊಂಡ ಫೋಟೋವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಎಫ್‍ಬಿ ಖಾತೆಯಲ್ಲಿ ಹಾಕುವವರೆಗೆ ಇದು ಗುಟ್ಟಾಗಿಯೇ ಇತ್ತು. 

  ಯಾಕೆ ಅಂದ್ರೆ, ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ತರಲೆ, ತಮಾಷೆ ಗುಟ್ಟಾಗಿ ನಡೆಯೋದೇ ಇಲ್ಲ. ಚಿತ್ರತಂಡದ ಸದಸ್ಯ ವಿಜಯ್ ಚೆಂಡೂರ್ ಜೊತೆ ಥೇಟು ರಶ್ಮಿಕಾ-ರಕ್ಷಿತ್ ಸ್ಟೈಲಲ್ಲಿ ಬೆಳಗೆದ್ದು ಹಾಡಿನ ಗೆಟಪ್‍ನಲ್ಲಿ ಟೂರ್‍ನ್ನೇ ಹೊಡೆದಿರುವವರು. ಇಷ್ಟಕ್ಕೂ ರಾಜಕಾರಣಿಗಳು ತೀರಾ ತೀರಾ ಪರ್ಸನಲ್ ಕೆಲಸಗಳನ್ನಷ್ಟೇ ಗುಟ್ಟಾಗಿ ಮಾಡ್ತಾರೆ.

  ಎಷ್ಟೆಂದರೂ ಹಂಬಲ್ ಪೊಲಿಟಿಷಿಯನ್ ಅಲ್ವಾ..? ನೋಡೋಣ. ನಾಯಕ ಗುಟ್ಟು ಮಾಡ್ತಾನಾ..? ಎಲ್ಲವನ್ನೂ ಓಪನ್ ಆಗಿಯೇ ಹೇಳ್ತಾನಾ..? ಒಳ್ಳೆಯವನಾ..? ಅಥವಾ ತುಂಬಾ ಒಳ್ಳೆಯವನಾ ಅನ್ನೋದು ಜನವರಿ 12ರಂದು ಗೊತ್ತಾಗುತ್ತೆ. ಎಳ್ಳುಬೆಲ್ಲ ತಿಂದ್ಕೊಂಡ್ ತಿಳ್ಕೊಂಡ್ರಾಯ್ತು.

 • ಅಪ್ಪು ಮೇಲೆ ರಚಿತಾಗಿರೋ ಬೇಸರ ಅದೊಂದೇ..

  rachita's dream dance with appu still pending

  ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಎದುರು ನಟಿಸಿರುವ ರಚಿತಾ ರಾಮ್‍ಗೆ, ಅಪ್ಪು ಜೊತೆ ಇದು 2ನೇ ಸಿನಿಮಾ. ಪುನೀತ್ ಜೊತೆ 2 ಚಿತ್ರಗಳಲ್ಲಿ ನಟಿಸಿರುವ ಖುಷಿಯಿದ್ದರೂ, ಅವರ ಆಸೆ ಕಂಪ್ಲೀಟ್ ಈಡೇರಿಲ್ಲ. ಈಗಲೂ ರಚಿತಾಗೆ ಅದೊಂದು ಬೇಸರ ಇದೆಯಂತೆ.

  ಚಿತ್ರರಂಗಕ್ಕೇ ಗೊತ್ತಿರೋ ಹಾಗೆ ಅಪ್ಪು ಅದ್ಭುತ ಡ್ಯಾನ್ಸರ್. ಆದರೆ, 2 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರೂ, ರಚಿತಾಗೆ ಪುನೀತ್ ಜೊತೆ ಡ್ಯಾನ್ಸ್ ಮಾಡುವ ಅವಕಾಶ  ಸಿಕ್ಕಿಲ್ಲ. 

  ನನಗೆ ಇನ್ನೂ ಒಂದು ಚಿತ್ರದಲ್ಲಿ ಅಪ್ಪು ಜೊತೆ ನಟಿಸುವ ಅವಕಾಶ ಸಿಕ್ಕೇ ಸಿಗುತ್ತೆ. ಆಗ ನನ್ನ ಮೊದಲ ಡಿಮ್ಯಾಂಡ್, ಅಪ್ಪು ಜೊತೆ ಒಂದು ಡ್ಯಾನ್ಸ್ ಬೇಕು ಅನ್ನೋದು ಅಂತಾರೆ ರಚಿತಾ.

 • ಅಪ್ಪು ಸೀಟ್ ಅಲಂಕರಿಸುತ್ತಾರಾ ಯಶ್..?

  yash to host kannadadha kotiyadhipathi?

  ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ಮತ್ತೆ ಶುರುವಾಗಲಿದೆ ಎಂಬ ಸುದ್ದಿಗೆ ಈಗ ರೆಕ್ಕೆಪುಕ್ಕ ಬಂದುಬಿಟ್ಟಿದೆ. ಕಾರ್ಯಕ್ರಮವನ್ನು ಮತ್ತೆ ಶುರು ಮಾಡುವ ಬಗ್ಗೆ ಸ್ಟಾರ್ ಸುವರ್ಣದವರು ಒಂದೆರಡು ಹೆಜ್ಜೆ ಮುಂದಿಟ್ಟಿದ್ದಾರೆ. ಆದರೆ, ಸದ್ಯಕ್ಕೆ ಅವರಿಗೆ ಪುನೀತ್ ಸಿಗಲ್ಲ. ಏಕೆಂದರೆ, ಕಲರ್ಸ್ ಕನ್ನಡ ವಾಹಿನಿಯ `ಫ್ಯಾಮಿಲಿ ಪವರ್' ರಿಯಾಲಿಟಿ ಶೋ ನಡೆಸಿಕೊಡಲು ಪುನೀತ್ ಒಪ್ಪಿಕೊಂಡಿದ್ದಾರೆ. 

  ಹೀಗಾಗಿಯೇ ಜನಮೆಚ್ಚುವ ಸ್ಟಾರ್ ಹುಡುಕಾಟದಲ್ಲಿದ್ದ ಸುವರ್ಣ ವಾಹಿನಿಯವರಿಗೆ ಯಶ್ ಈ ಕಾರ್ಯಕ್ರಮ ನಿರೂಪಿಸಿದರೆ ಹೇಗೆ ಎಂಬ ಆಲೋಚನೆ ಬಂದಿದೆ. ಯಶ್ ಅವರನ್ನು ಸಂಪರ್ಕಿಸಿಯೂ ಆಗಿದೆ.

  ಆ ಕಾರ್ಯಕ್ರಮ ನಿರ್ವಹಿಸಲು ಆಫರ್ ಬಂದಿರುವುದು ನಿಜ. ಆದರೆ, ನಾನಿನ್ನೂ ಒಪ್ಪಿಕೊಂಡಿಲ್ಲ. ಮುಂದೇನಾಗುತ್ತೋ ಗೊತ್ತಿಲ್ಲ ಎಂದಿದ್ದಾರೆ ಯಶ್. ಸದ್ಯಕ್ಕೆ ಯಶ್ ಭಾಗವಹಿಸಬೇಕೋ ಬೇಡವೋ ಎಂಬ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ. 

  ಹಾಗೆ ನೋಡಿದರೆ ಯಶ್ ಕಿರುತೆರೆಯಿಂದಲೇ ಬಣ್ಣದ ಜಗತ್ತಿಗೆ ಕಾಲಿಟ್ಟವರು. ಒಪ್ಪಿಕೊಂಡರೆ ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಲಿದ್ದಾರೆ ಯಶ್. ಅದೂ ಕನ್ನಡದ ಕೋಟ್ಯಧಿಪತಿ ಸೀಟ್‍ನಲ್ಲಿ.

#

Adi Lakshmi Purana Movie Gallery

Rightbanner02_butterfly_inside

Yaana Movie Gallery