` puneeth rajkumar, - chitraloka.com | Kannada Movie News, Reviews | Image

puneeth rajkumar,

 • ಅಪ್ಪು ಅಭಿಮಾನಿಗಳಿಗೆ ಡಿಕೆಶಿ ಸಾಂತ್ವನ

  dk shivkumar says dobt worry to appu fans

  ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮನೆ ಇರೋದು ಸದಾಶಿವ ನಗರದಲ್ಲಿ. ಅದೇ ಮನೆಯ ಪಕ್ಕ ಇರೋದು ಪೊಲಿಟಿಕಲ್ ಪವರ್ ಸ್ಟಾರ್ ಡಿ.ಕೆ.ಶಿವಕುಮಾರ್ ಮನೆ. ಪುನೀತ್ ಮನೆಯಲ್ಲಿ ಐಟಿ ಅಧಿಕಾರಿಗಳು ಬೀಡುಬಿಟ್ಟಿರುವಾಗ ಅಭಿಮಾನಿಗಳು ಮನೆ ಬಳಿ ಜಮಾಯಿಸಿದ್ದರು. ಆಗ ಮನೆಗೆ ಹೋಗಲು ಬಂದ ಡಿ.ಕೆ.ಶಿವಕುಮಾರ್, ಪುನೀತ್ ಮನೆ ಬಳಿ ಕಾರು ನಿಲ್ಲಿಸಿ ``ಇನ್ನೂ ಮುಗಿದಿಲ್ವಾ'' ಎಂದು ಅಭಿಮಾನಿಗಳನ್ನೇ ಪ್ರಶ್ನಿಸಿದ್ದಾರೆ. 

  ಇನ್ನೂ ಇಲ್ಲ ಸಾರ್. ನೀವೇ ಏನಾದ್ರೂ ಮಾಡಿ ಎಂದು ಕೇಳಿಕೊಂಡ ಅಭಿಮಾನಿಗಳಿಗೆ, ಇದೆಲ್ಲ ಕಾನೂನು ಕಣ್ರಪ್ಪಾ.. ಡೋಂಟ್ ವರಿ.. ಏನೂ ಆಗಲ್ಲ ಎಂದು ಸಮಾಧಾನಿಸಿ ಮನೆಗೆ ತೆರಳಿದ್ದಾರೆ ಡಿಕೆ ಶಿವಕುಮಾರ್. ಇದೆಲ್ಲ ನಡೆದದ್ದು ಗುರುವಾರ ರಾತ್ರಿ. ಮುಂಜಾನೆ ಕೂಡಾ ಪುನೀತ್ ಮನೆಯಲ್ಲಿ ಪರಿಶೀಲನೆ ನಡೆಯುತ್ತಿದೆ.

  Related Articles :-

  ದೇಶದಲ್ಲೇ ನಡೆದಿರಲಿಲ್ಲ ಇಂಥಾದ್ದೊಂದು ಸಿನಿಮಾ ಐಟಿ ರೇಡ್..!

  IT Shock For Sandalwood, Raids On The Houses Of Producers And Star Actors

 • ಅಪ್ಪು ಅಷ್ಟೇ ಅಲ್ಲ, ಅಪ್ಪು ಅಭಿಮಾನಿಗಳೂ ಕುರುಕ್ಷೇತ್ರಕ್ಕೆ ವೇಯ್ಟಿಂಗ್

  puneeth waiting for kurukshetra

  ಕುರುಕ್ಷೇತ್ರ ಚಿತ್ರ ರಿಲೀಸ್‍ಗೂ ಮುನ್ನವೇ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಅದು ಕೇವಲ ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ 50ನೇ ಸಿನಿಮಾ ಎಂಬ ಕಾರಣಕ್ಕೆ ಅಲ್ಲ. ಅದು ಇಡೀ ಕನ್ನಡ ಚಿತ್ರರಂಗದ ಕಲಾವಿದರ ದಂಡನ್ನೇ ಒಟ್ಟುಗೂಡಿಸಿರುವ ಸಿನಿಮಾ. ಅದರಲ್ಲೂ ದುರ್ಯೋಧನನಾಗಿ ಕಾಣಿಸಿಕೊಂಡಿರುವ ದರ್ಶನ್ ನಿರೀಕ್ಷೆಯ ಶಿಖರವನ್ನೇ ಅಭಿಮಾನಿಗಳ ಎದುರು ಇಟ್ಟುಬಿಟ್ಟಿದ್ದಾರೆ.

  ಸಹಜವಾಗಿಯೇ ಚಿತ್ರದ ಬಗ್ಗೆ ಕನ್ನಡ ಚಿತ್ರರಂಗದ ಎಲ್ಲ ತಾರೆಯರೂ ನಿರೀಕ್ಷೆಯಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಅಂಜನಿಪುತ್ರ ಚಿತ್ರದ ಬಿಡುಗಡೆ ವೇಳೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಕುರುಕ್ಷೇತ್ರ ಚಿತ್ರದ ಬಗ್ಗೆ ಪ್ರಶ್ನೆಗಳು ಎದುರಾದವು. ದರ್ಶನ್ ಅವರ ಲುಕ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಪುನೀತ್, ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದರು.

  ಈಗ ಡಿ ಬಾಸ್ ಫ್ಯಾನ್ಸ್ ಅಷ್ಟೇ ಅಲ್ಲ, ಅಪ್ಪು ಫ್ಯಾನ್ಸ್ ಕೂಡಾ ದರ್ಶನ್ ಲುಕ್ಕು, ಗೆಟಪ್‍ಗೆ ಮಾರು ಹೋಗಿದ್ದಾರೆ. ದರ್ಶನ್, ದುರ್ಯೋಧನನ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಎಂದು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಐತಿಹಾಸಿಕ ಅಥವಾ ಪೌರಾಣಿಕ ಪಾತ್ರಗಳಿದ್ದರೆ, ಅದಕ್ಕೆ ದರ್ಶನ್ ಮೊದಲ ಆಯ್ಕೆ ಎಂದಿದ್ದಾರೆ.

  ಇತ್ತೀಚೆಗೆ ಕನ್ನಡದ ಸ್ಟಾರ್‍ಗಳ ಅಭಿಮಾನಿಗಳ ನಡುವೆ ವಾರ್‍ಗಷ್ಟೇ ಸಾಕ್ಷಿಯಾಗುತ್ತಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಇದು ಸಂಚಲನ ಸೃಷ್ಟಿಸಿರುವುದು ನಿಜ. ಎಲ್ಲ ನಟರು, ಕಲಾವಿದರನ್ನೂ ಅಭಿಮಾನಿಸುವ ಅಭಿಮಾನಿಗಳ ಸಂಖ್ಯೆ ಕೋಟಿಯಾಗಲಿ.

 • ಅಪ್ಪು ಬ್ಯಾನರ್‍ನಲ್ಲಿ 3ನೇ ಸಿನಿಮಾ ಶುರು

  puneeth starts new movie under prk productions

  ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್ ಹೌಸ್, 3ನೇ ಸಿನಿಮಾ ಶುರು ಮಾಡಿದೆ. ಈ ಬಾರಿ ಪುನೀತ್ ಪನ್ನಗಾಭರಣ ಅವರಿಗೆ ನಿರ್ದೇಶನದ ಹೊಣೆ ನೀಡಿದ್ದಾರೆ. ಡ್ಯಾನಿಷ್ ಸೇಠ್ ಚಿತ್ರದ ಹೀರೋ. ದಿಶಾ ಮದನ್ ನಾಯಕಿ.

  ಚಿತ್ರದಲ್ಲಿ ಇಬ್ಬರು ಆಟೋ ಡ್ರೈವರ್‍ಗಳ ಕಥೆಯಿದೆ. ಒಬ್ಬ ಶಿವಾಜಿನಗರದವನು. ಇನ್ನೊಬ್ಬ ಫ್ರಾನ್ಸ್‍ನಿಂದ ಬಂದು ಶಿವಾಜಿನಗರದಲ್ಲಿ ಬದುಕುತ್ತಿರುವವನು. ಚಿತ್ರದ ಕಥೆ ಕೇಳಿಯೇ ಪುನೀತ್ ಬಿದ್ದೂ ಬಿದ್ದು ನಕ್ಕರು ಎಂದಿದ್ದಾರೆ ನಿರ್ದೇಶಕ ಪನ್ನಗಾಭರಣ.

  ಪುನೀತ್ ಸರ್ ಹೋಮ್ ಬ್ಯಾನರ್‍ನಲ್ಲಿ ನಟಿಸುತ್ತಿರುವುದೇ ದೊಡ್ಡ ಥ್ರಿಲ್ ಎಂದಿದ್ದಾರೆ ಡ್ಯಾನಿಷ್ ಸೇಠ್. ಪಿಆರ್‍ಕೆ ಬ್ಯಾನರ್‍ನ ಕವಲುದಾರಿ ಹಾಗೂ ಮಾಯಾ ಬಜಾರ್, ರಿಲೀಸ್‍ಗೆ ರೆಡಿಯಾಗಿವೆ. 3ನೇ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ ನಡೆದಿದೆ.

 • ಅಪ್ಪು ಮೆಚ್ಚಿದ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್

  puneeth appreciates humble politician

  ರಾಜ್ಯಾದ್ಯಂತ.. ದೇಶಾದ್ಯಂತ.. ಜಗತ್ತಿನಾದ್ಯಂತ.. ಭರ್ಜರಿ ಸುದ್ದಿ ಮಾಡುತ್ತಿರುವ ಹಂಬಲ್ ಪೊಲಿಟಿಷಿಯನ್ ಚಿತ್ರಕ್ಕೆ ಸ್ವತಃ ಪುನೀತ್ ರಾಜ್‍ಕುಮಾರ್ ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಎಲ್ಲರಿಗಿಂತ ಮೊದಲು ತಮ್ಮ ಮನೆಯಲ್ಲೇ ಸಿನಿಮಾ ನೋಡಿದ ಪುನೀತ್ ರಾಜ್‍ಕುಮಾರ್ ಸಿನಿಮಾ ಸಖತ್ತಾಗಿದೆ ಎಂದಿದ್ದಾರೆ. ಡ್ಯಾನಿಶ್ ಸೇಟ್ ಅಭಿನಯಕ್ಕೆ ಹೊಟ್ಟೆ ತುಂಬಾ ನಕ್ಕಿದ್ದಾರೆ.

  ನಟ ಡ್ಯಾನಿಶ್ ಸೇಟ್, ರಕ್ಷಿತ್ ಶೆಟ್ಟಿ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಹೇಮಂತ್ ರಾವ್ ಮತ್ತು ಪುನೀತ್ ರಾಜ್‍ಕುಮಾರ್ ಒಟ್ಟಿಗೇ ತೆಗೆಸಿಕೊಂಡ ಫೋಟೋವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಎಫ್‍ಬಿ ಖಾತೆಯಲ್ಲಿ ಹಾಕುವವರೆಗೆ ಇದು ಗುಟ್ಟಾಗಿಯೇ ಇತ್ತು. 

  ಯಾಕೆ ಅಂದ್ರೆ, ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ತರಲೆ, ತಮಾಷೆ ಗುಟ್ಟಾಗಿ ನಡೆಯೋದೇ ಇಲ್ಲ. ಚಿತ್ರತಂಡದ ಸದಸ್ಯ ವಿಜಯ್ ಚೆಂಡೂರ್ ಜೊತೆ ಥೇಟು ರಶ್ಮಿಕಾ-ರಕ್ಷಿತ್ ಸ್ಟೈಲಲ್ಲಿ ಬೆಳಗೆದ್ದು ಹಾಡಿನ ಗೆಟಪ್‍ನಲ್ಲಿ ಟೂರ್‍ನ್ನೇ ಹೊಡೆದಿರುವವರು. ಇಷ್ಟಕ್ಕೂ ರಾಜಕಾರಣಿಗಳು ತೀರಾ ತೀರಾ ಪರ್ಸನಲ್ ಕೆಲಸಗಳನ್ನಷ್ಟೇ ಗುಟ್ಟಾಗಿ ಮಾಡ್ತಾರೆ.

  ಎಷ್ಟೆಂದರೂ ಹಂಬಲ್ ಪೊಲಿಟಿಷಿಯನ್ ಅಲ್ವಾ..? ನೋಡೋಣ. ನಾಯಕ ಗುಟ್ಟು ಮಾಡ್ತಾನಾ..? ಎಲ್ಲವನ್ನೂ ಓಪನ್ ಆಗಿಯೇ ಹೇಳ್ತಾನಾ..? ಒಳ್ಳೆಯವನಾ..? ಅಥವಾ ತುಂಬಾ ಒಳ್ಳೆಯವನಾ ಅನ್ನೋದು ಜನವರಿ 12ರಂದು ಗೊತ್ತಾಗುತ್ತೆ. ಎಳ್ಳುಬೆಲ್ಲ ತಿಂದ್ಕೊಂಡ್ ತಿಳ್ಕೊಂಡ್ರಾಯ್ತು.

 • ಅಪ್ಪು ಸೀಟ್ ಅಲಂಕರಿಸುತ್ತಾರಾ ಯಶ್..?

  yash to host kannadadha kotiyadhipathi?

  ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ಮತ್ತೆ ಶುರುವಾಗಲಿದೆ ಎಂಬ ಸುದ್ದಿಗೆ ಈಗ ರೆಕ್ಕೆಪುಕ್ಕ ಬಂದುಬಿಟ್ಟಿದೆ. ಕಾರ್ಯಕ್ರಮವನ್ನು ಮತ್ತೆ ಶುರು ಮಾಡುವ ಬಗ್ಗೆ ಸ್ಟಾರ್ ಸುವರ್ಣದವರು ಒಂದೆರಡು ಹೆಜ್ಜೆ ಮುಂದಿಟ್ಟಿದ್ದಾರೆ. ಆದರೆ, ಸದ್ಯಕ್ಕೆ ಅವರಿಗೆ ಪುನೀತ್ ಸಿಗಲ್ಲ. ಏಕೆಂದರೆ, ಕಲರ್ಸ್ ಕನ್ನಡ ವಾಹಿನಿಯ `ಫ್ಯಾಮಿಲಿ ಪವರ್' ರಿಯಾಲಿಟಿ ಶೋ ನಡೆಸಿಕೊಡಲು ಪುನೀತ್ ಒಪ್ಪಿಕೊಂಡಿದ್ದಾರೆ. 

  ಹೀಗಾಗಿಯೇ ಜನಮೆಚ್ಚುವ ಸ್ಟಾರ್ ಹುಡುಕಾಟದಲ್ಲಿದ್ದ ಸುವರ್ಣ ವಾಹಿನಿಯವರಿಗೆ ಯಶ್ ಈ ಕಾರ್ಯಕ್ರಮ ನಿರೂಪಿಸಿದರೆ ಹೇಗೆ ಎಂಬ ಆಲೋಚನೆ ಬಂದಿದೆ. ಯಶ್ ಅವರನ್ನು ಸಂಪರ್ಕಿಸಿಯೂ ಆಗಿದೆ.

  ಆ ಕಾರ್ಯಕ್ರಮ ನಿರ್ವಹಿಸಲು ಆಫರ್ ಬಂದಿರುವುದು ನಿಜ. ಆದರೆ, ನಾನಿನ್ನೂ ಒಪ್ಪಿಕೊಂಡಿಲ್ಲ. ಮುಂದೇನಾಗುತ್ತೋ ಗೊತ್ತಿಲ್ಲ ಎಂದಿದ್ದಾರೆ ಯಶ್. ಸದ್ಯಕ್ಕೆ ಯಶ್ ಭಾಗವಹಿಸಬೇಕೋ ಬೇಡವೋ ಎಂಬ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ. 

  ಹಾಗೆ ನೋಡಿದರೆ ಯಶ್ ಕಿರುತೆರೆಯಿಂದಲೇ ಬಣ್ಣದ ಜಗತ್ತಿಗೆ ಕಾಲಿಟ್ಟವರು. ಒಪ್ಪಿಕೊಂಡರೆ ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಲಿದ್ದಾರೆ ಯಶ್. ಅದೂ ಕನ್ನಡದ ಕೋಟ್ಯಧಿಪತಿ ಸೀಟ್‍ನಲ್ಲಿ.

 • ಅಪ್ಪು ಹೊಸ ಚಿತ್ರ ರೀಮೇಕ್ ಅಲ್ಲ, ಸ್ವಮೇಕ್

  puneeth rajkumar's new movie is swamake

  ಪುನೀತ್ ರಾಜ್ಕುಮಾರ್ ಚೆನ್ನೈನಲ್ಲಿ ವೆಟ್ರಿಮಾರನ್ ಅವರನ್ನು ಭೇಟಿ ಮಾಡಿದ್ದು ಸಂಚಲನ ಸೃಷ್ಟಿಸಿತ್ತು.

  ವೆಟ್ರಿಮಾರನ್ ನಿರ್ದೇಶನದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ವಿಸಾರಣೈ ರೀಮೇಕ್ನಲ್ಲಿ ಪುನೀತ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಖಚಿತ ವರ್ತಮಾನ ಬಂದಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ಅಪ್ಪು ನಟಿಸ್ತಾ ಇರೋದು ನಿಜ. ಆ ಚಿತ್ರಕ್ಕೆ ವೆಟ್ರಿಮಾರನ್ ನಿರ್ದೇಶಕ ಅನ್ನೋದೂ ನಿಜ.

  ಆದರೆ, ಅದು ವಿಸಾರಣೈ ರೀಮೇಕ್ ಅಲ್ಲ ಎಂಬ ಸ್ಪಷ್ಟನೆ ಹೊರಬಿದ್ದಿದೆ. ಚಿತ್ರದ ಕಥೆ ಚಿತ್ರಕಥೆ ಸಿದ್ಧವಾಗುತ್ತಿದ್ದು, ಅಂಜನಿಪುತ್ರದ ನಂತರ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ಹಿಂದೆ ಮೌರ್ಯ, ಅಜಯ್ ಚಿತ್ರ ನಿರ್ಮಿಸಿದ್ದ ರಾಕ್ಲೈನ್ ವೆಂಕಟೇಶ್, 11 ವರ್ಷಗಳ ನಂತರ ಪುನೀತ್ ಜೊತೆ ಚಿತ್ರ ನಿರ್ಮಿಸಲಿದ್ದಾರೆ.

   

 • ಅಪ್ಪು ಹೊಸ ಚಿತ್ರ ವಿಸಾರಣೈ ರೀಮೇಕ್..?

  appu's new film is visaranai remake ?

  ವಿಸಾರಣೈ. ತಮಿಳಿನ ಸೂಪರ್ ಹಿಟ್ ಚಿತ್ರ. ಭಾರತದಿಂದ ಆಸ್ಕರ್ಗೂ ಹೋಗಿದ್ದ ಈ ಚಿತ್ರವನ್ನು ಪುನೀತ್ ರಾಜ್ಕುಮಾರ್ ಮಾಡ್ತಾರಾ..? ಸದ್ಯಕ್ಕೆ ಅಂಥಾದ್ದೊಂದು ಕುತೂಹಲ ಉದ್ಭವವಾಗಿದೆ. ಪಕ್ಕಾ ಆಗಿಲ್ಲ. ತಮಿಳು ನಿರ್ದೇಶಕ ವೇಟ್ರಿಮಾರನ್ ಅವರನ್ನು ಭೇಟಿ ಮಾಡಿರುವ ಪುನೀತ್, ಚಿತ್ರಕ್ಕೆ ಹೆಚ್ಚೂ ಕಡಿಮೆ ಓಕೆ ಎಂದಿದ್ದಾರಂತೆ.

  ವಿಸಾರಣೈ ಹೀರೋ ವೈಭವೀಕರಣದ ಚಿತ್ರವಲ್ಲ. ರಿಯಲೆಸ್ಟಿಕ್ ಚಿತ್ರ. ಅಮಾಯಕ ಯುವಕರು ಅಪರಾಧವೊಂದರಲ್ಲಿ ತಮಗೇ ಗೊತ್ತಿಲ್ಲದೆ ಸಿಕ್ಕಿ ಒದ್ದಾಡುವ ಕಥೆ. ಇನ್ನು ವೇಟ್ರಿಮಾರನ್ ಚಿತ್ರಗಳ ಇತಿಹಾಸ ನೋಡೋದಾದ್ರೆ, 'ಪೊಲ್ಲಾದವನ್', 'ಆಡುಕುಲಂ', 'ವಿಸಾರಣೈ', ಹಾಗೂ 'ವಡಾ ಚೆನ್ನೈ' ನಂತರ ಹಿಟ್ ಚಿತ್ರಗಳಿವೆ. 'ಆಡುಕುಲಂ' ಹಾಗೂ 'ವಿಸಾರಣೈ'  ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳು ಎನ್ನವುದು ವಿಶೇಷ.

  ಹೊಸತನದ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಇರುವ ಪುನೀತ್, ಈ ಬಾರಿ ವಿಸಾರಣೈನಲ್ಲಿ ನಟಿಸುವ ಸಾಧ್ಯತೆ ಹೆಚ್ಚು. ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಿಸುವ ಸಾಧ್ಯತೆಗಳಿವೆ. ಅದು ಸಾಧ್ಯವಾದರೆ ದಶಕದ ನಂತರ ಪುನೀತ್ ಮತ್ತು ರಾಕ್ಲೈನ್ ಜೋಡಿ ಒಂದಾಗಲಿದೆ. ಸದ್ಯಕ್ಕೆ ಪುನೀತ್ ಹರ್ಷ ನಿರ್ದೇಶನದ ಅಂಜನಿಪುತ್ರದಲ್ಲಿ ಬ್ಯುಸಿಯಾಗಿದ್ದಾರೆ.

   

 • ಅಪ್ಪು ಹೊಸ ಸಿನಿಮಾಗೆ ಪ್ರಿಯಾಂಕಾ ಹೀರೋಯಿನ್..!

  priyanka jawalkar is heroine for appu's next

  ರಾಕ್‍ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ, ಪವನ್ ಒಡೆಯರ್ ನಿರ್ದೇಶನದ ಹೊಸ ಚಿತ್ರ ಪಂಜುಗೆ ನಾಯಕಿ ಸಿಕ್ಕಿದ್ದಾಳೆ. ಚಿತ್ರದ ಟೈಟಲ್ ಇನ್ನೂ ಅಧಿಕೃತವಾಗಿಲ್ಲ. ನಾಯಕಿಯ ಆಯ್ಕೆಯಂತೂ ಆಗಿದೆ. ಚಿತ್ರಕ್ಕೆ ಪ್ರಿಯಾಂಕಾ ಜ್ವಾಲಕರ್ ನಾಯಕಿ.

  ಯಾರು ಈ ಪ್ರಿಯಾಂಕಾ ಜ್ವಾಲಕರ್ ಎಂದರೆ ವಿಜಯ್ ದೇವರಕೊಂಡ ಅಭಿಯನದ ಟ್ಯಾಕ್ಸಿವಾಲಾ ಚಿತ್ರದ ನಾಯಕಿ. ಇದು ಈಕೆಯ ಅಭಿನಯದ 2ನೇ ಸಿನಿಮಾ ಎನ್ನುವುದು ವಿಶೇಷ. ಮೊದಲ ಚಿತ್ರದಲ್ಲಿ ತೆಲುಗಿನಲ್ಲಿ ಯಂಗ್ ಹೀರೋ ವಿಜಯ್ ದೇವರಕೊಂಡ ಜೊತೆ ನಟಿಸಿದ್ದ ಪ್ರಿಯಾಂಕಾ, ಎರಡನೇ ಸಿನಿಮಾ ಕನ್ನಡ ಚಿತ್ರರಂಗದ ಸ್ಟಾರ್ ಜೊತೆ ಎನ್ನುವುದು ಸ್ಪೆಷಲ್. ಆಂಧ್ರಪ್ರದೇಶದ ಅನಂತಪುರಂನ ಈ ಹುಡುಗಿ ವೃತ್ತಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್. ಫ್ಯಾಷನ್ ಡಿಸೈನಿಂಗ್ ಪದವೀಧರೆ. ಹಲವು ಕಿರುಚಿತ್ರಗಳಲ್ಲಿ ನಟಿಸಿರುವ ಪ್ರಿಯಾಂಕಾ  ಅಭಿನಯದ ಟ್ಯಾಕ್ಸಿವಾಲಾ ಇನ್ನೂ ರಿಲೀಸ್ ಆಗಿಲ್ಲ.

  ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಡಿ.ಇಮ್ಮಾನ್ ಆಯ್ಕೆಯಾಗಿದ್ದರೆ, ಕೊರಿಯೋಗ್ರಫಿ ಹೊಣೆಯನ್ನು ವೈದಿ ವಹಿಸಿಕೊಂಡಿದ್ದಾರೆ. ಹಲವು ವರ್ಷಗಳ ನಂತರ ಈ ಸಿನಿಮಾ ಮೂಲಕ ಬಿ.ಸರೋಜಾದೇವಿ ಬಣ್ಣ ಹಚ್ಚುತ್ತಿರುವುದು ವಿಶೇಷ.

   

 • ಅಪ್ಪು ಹೊಸ ಹೆಜ್ಜೆಗೆ ಅಣ್ಣನ ಆಶೀರ್ವಾದ

  shivanna claps for appu's new movie

  ಪುನೀತ್ ರಾಜ್​ಕುಮಾರ್ ನಿರ್ಮಾಪಕರಾಗುತ್ತಿದ್ದಾರೆ. ಹಾಗೆಂದು ಅವರಿಗೆ ಚಿತ್ರ ನಿರ್ಮಾಣ ಹೊಸದೇನೂ ಅಲ್ಲ. ಈ ಹಿಂದೆ ತಂದೆ, ಅಣ್ಣಂದಿರ ಚಿತ್ರಗಳ ನಿರ್ಮಾಣದ ಹೊಣೆ ಹೊತ್ತು ಕೆಲಸ ಮಾಡಿದ ಅನುಭವ ಇದೆ. ಆದರೆ, ಈ ಬಾರಿ ಅವರು ಇಡುತ್ತಿರುವುದು ಕುಟುಂಬದ ಹಳೆಯ ಚಿತ್ರ ನಿರ್ಮಾಣ ಸಂಸ್ಥೆಯಿಂದ ಅಲ್ಲ. ಪಿಆರ್​ಕೆ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ ಪುನೀತ್ ರಾಜ್​ಕುಮಾರ್. ಅವರು ನಿರ್ಮಿಸುತ್ತಿರುವ ಚಿತ್ರ ಕವಲು ದಾರಿ.

  ನಿರ್ಮಾಪಕಿ ಸ್ಥಾನದಲ್ಲಿ ಅಶ್ವಿನಿ ಪುನೀತ್ ಇದ್ದಾರೆ. ಹೊಸ ಸಂಸ್ಥೆಯ ಮೂಲಕ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವ ಪುನೀತ್, ಈ ಚಿತ್ರದಲ್ಲಿ ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿಯನ್ನು ನಾಯಕರನ್ನಾಗಿಸಿದ್ದಾರೆ. ಚಿತ್ರದ ನಿರ್ದೇಶಕ ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್. ನಾಯಕಿಯಾಗಿರುವು ರೋಶನಿ ಪ್ರಕಾಶ್. ನಟ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

  ತಮ್ಮನ ಹೊಸ ಸಾಹಸಕ್ಕೆ ಶುಭ ಕೋರಿದ್ದು ಅಣ್ಣ ಶಿವರಾಜ್ ಕುಮಾರ್. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ಕೂಡಾ ಅವರೇ. ಮುಹೂರ್ತದ ಸ್ಥಳಕ್ಕೆ ಆಗಮಿಸಿದ ಅಣ್ಣನಿಗೆ ಪುನೀತ್ ರಾಜ್​ಕುಮಾರ್ ನಮಸ್ಕರಿಸಿದಾಗ, ಪ್ರೀತಿಯಿಂದ ಅಪ್ಪಿಕೊಂಡು ಆಶೀರ್ವದಿಸಿದ್ದಾರೆ ಶಿವಣ್ಣ. ಚಿತ್ರದ ಮುಹೂರ್ತದಲ್ಲಿ ರಾಕ್​ಲೈನ್ ವೆಂಕಟೇಶ್, ರಕ್ಷಿತ್ ಶೆಟ್ಟಿ, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ​ರಾಜ್​ಕುಮಾರ್ ಕೂಡಾ ಇದ್ದು, ಪುನೀತ್ ಹೊಸ ಸಾಹಸಕ್ಕೆ ಶುಭ ಕೋರಿದರು. 

 • ಅಪ್ಪು, ರಾಕ್‍ಲೈನ್, ಪವನ್ ಒಡೆಯರ್ ಕಾಂಬಿನೇಷನ್ ರೆಡಿ

  pavan appu, rockline team up

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮುಂದಿನ ಸಿನಿಮಾ ಯಾವುದು ಎಂಬ ಗೊಂದಲಕ್ಕೆ ಸದ್ಯಕ್ಕೆ ತೆರೆ ಬೀಳುತ್ತಿದೆ. ಅಂಜನೀಪುತ್ರ ಚಿತ್ರದ ನಂತರ ಅಪ್ಪು ಶಶಾಂಕ್ ನಿರ್ದೇಶನದ ಸಿನಿಮಾದಲ್ಲಿ ನಟಿಸ್ತಾರಾ..? ರಾಕ್‍ಲೈನ್ ಬ್ಯಾನರ್‍ನಲ್ಲಿ ನಟಿಸ್ತಾರಾ..? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಮುಂದಿನ ತಿಂಗಳು ರಾಕ್‍ಲೈನ್ ಬ್ಯಾನರ್‍ನಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ ಸೆಟ್ಟೇರಲಿದೆ. 

  ನಿರ್ದೇಶನ ಪವನ್ ಒಡೆಯರ್ ಅವರದ್ದು.

  ಸಿನಿಮಾದ ಕಥೆ ಓಕೆ ಆಗಿದೆ. ತಾಂತ್ರಿಕ ವರ್ಗ ಹಾಗೂ ಕಲಾವಿದರ ಆಯ್ಕೆ ನಡೆಯಬೇಕಿದೆ. ಅಪ್ಪು ಅಭಿಮಾನಿಗಳನ್ನು ರಂಜಿಸುವ ಎಲ್ಲ ಅಂಶಗಳೂ ಚಿತ್ರದಲ್ಲಿವೆ. ಆ ನಿಟ್ಟಿನಲ್ಲೇ ಪವನ್ ಒಡೆಯರ್ ಕಥೆ ಸಿದ್ಧ ಮಾಡಿದ್ದಾರೆ ಎಂದಿದ್ದಾರೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್.

  ಈಗ ಪವನ್ ಒಡೆಯರ್ ಏನು ಮಾಡ್ತಾರೆ..? ಅವರು ಅಂಬರೀಷ್ ಪುತ್ರ ಅಭಿಷೇಕ್‍ಗೆ ಕಥೆ ಹೇಳಿದ್ದಾರೆ. ಸಿನಿಮಾ ಬಗ್ಗೆ ಅಂತಿಮ ನಿರ್ಧಾರ ಹೊರಬಿದ್ದಿಲ್ಲವಾದರೂ ಅದು ಡ್ರಾಪ್ ಅಂತೂ ಆಗಿಲ್ಲ. ಈಗ ಅಪ್ಪು ಸಿನಿಮಾ ಒಪ್ಪಿಕೊಂಡರೆ ಮಿನಿಮಮ್ 6 ತಿಂಗಳು ಪವನ್ ಒಡೆಯರ್ ಬೇರೆ ಕಡೆ ಹೊರಳೋಕೆ ಸಾಧ್ಯವೇ ಇಲ್ಲ. ಈ ಎಲ್ಲದರ ಮಧ್ಯೆ ಫೆಬ್ರವರಿಯಲ್ಲಿ ರಾಕ್‍ಲೈನ್ ಬ್ಯಾನರ್ ಸಿನಿಮಾ ಸೆಟ್ಟೇರುತ್ತಿರುವುದು ನಿಜ.

  Related Articles :-

  Pavan Wodeyar To Direct A Film For Puneeth Rajakumar

 • ಅಪ್ಪು-ಶಿವಣ್ಣ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಗೊತ್ತಾ..?

  shiva mecchidha kannappa movie image

  ಶಿವರಾಜ್ ಕುಮಾರ್ ಮತ್ತು ಶಿವಣ್ಣ ಒಟ್ಟಿಗೇ ನಟಿಸಬೇಕು, ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು ಅನ್ನೋದು ಅಭಿಮಾನಿ ದೇವರುಗಳ ಬಯಕೆ. ನಿರೀಕ್ಷೆ. ಹಾರೈಕೆ..ಎಲ್ಲ. ಶಿವರಾಜ್‍ಕುಮಾರ್ ಮತ್ತು ಪುನೀತ್ ಇಬ್ಬರೂ ಒಟ್ಟಿಗೇ ನಟಿಸುವ ಚಿತ್ರ ಯಾವುದು..? ಯಾವಾಗ..? ಎಂಬ ನಿರೀಕ್ಷೆಗಳ ನಡುವೆಯೇ ಒಂದು ಇಂಟ್ರೆಸ್ಟಿಂಗ್ ಮಾಹಿತಿ ನಿಮಗಾಗಿ.

  ಶಿವರಾಜ್ ಕುಮಾರ್ ಹಾಗೂ ಪುನೀತ್ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಅಣ್ಣಾವ್ರು ಕೂಡಾ ಇದ್ದಾರೆ. ಅದು ಶಿವ ಮೆಚ್ಚಿದ ಕಣ್ಣಪ್ಪ ಚಿತ್ರ.

  ಬೇಡರ ಕಣ್ಣಪ್ಪ, ಡಾ.ರಾಜ್ ಎಂಬ ಅನಘ್ರ್ಯ ರತ್ನವನ್ನು ಕನ್ನಡ ಚಿತ್ರರಂಗಕ್ಕೆ ದಯಪಾಲಿಸಿತ್ತು. ಅದೇ ಕಥೆಯನ್ನಿಟ್ಟುಕೊಂಡು 1988ರಲ್ಲಿ ತೆರೆಗೆ ಬಂದಿದ್ದ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಈಶ್ವರನ ಪಾತ್ರದಲ್ಲಿ ನಟಿಸಿದ್ದರೆ, ಶಿವರಾಜ್ ಕುಮಾರ್ ಕಣ್ಣಪ್ಪನಾಗಿ ನಟಿಸಿದ್ದರು. ಆ ಚಿತ್ರದಲ್ಲಿ ಬಾಲಕ ಕಣ್ಣಪ್ಪನಾಗಿ ನಟಿಸಿದ್ದವರು ಪುನೀತ್ ರಾಜ್‍ಕುಮಾರ್. 

  ಮೂರು ರತ್ನಗಳು ಒಟ್ಟಿಗೇ ಸೇರಿದ್ದ ಆ ಚಿತ್ರದಲ್ಲಿ ಅಭಿಮಾನಿಗಳ ಬೇಡಿಕೆ ಭಾಗಶಃ ಈಡೇರಿತ್ತು. ಆದರೆ, ಅಭಿಮಾನಿಗಳ ಬೇಡಿಕೆ ಅಷ್ಟಕ್ಕೇ ಸುಮ್ಮನಾಗುವುದಿಲ್ಲವಲ್ಲ. ಆ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. 

 • ಅಪ್ಪುಗೆ ಚುಟು ಚುಟು ಡ್ಯಾನ್ಸರ್ ಸ್ಟೆಪ್

  natasarvabhouma introductions song being shot

  ಚುಟು ಚುಟು ಅಂತೈತಿ.. ಹಾಡಿನಷ್ಟೇ ಹಿಟ್ ಆಗಿದ್ದುದು ಚುಟು ಚುಟು ಹಾಡಿಗೆ ಮಾಡಿಸಿದ್ದ ಡ್ಯಾನ್ಸ್. ಶರಣ್ ಮತ್ತು ಅಶಿಕಾರ ಮೈಮೂಳೆಯ ಬಗ್ಗೆ ಅಚ್ಚರಿ ಪಡುವಂತೆ ಸ್ಟೆಪ್ಸ್ ಹಾಕಿಸಿದ್ದ ನೃತ್ಯ ನಿರ್ದೇಶಕ ಭೂಷಣ್, ಈಗ ಪುನೀತ್ ರಾಜ್‍ಕುಮಾರ್‍ಗೆ ಡ್ಯಾನ್ಸ್ ಮಾಸ್ಟರ್ ಆಗಿದ್ದಾರೆ.

  ನಟಸಾರ್ವಭೌಮ ಚಿತ್ರದ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್  ನಡೆಯುತ್ತಿದೆ. ಸ್ಟೆಪ್ಟ್ ಹೇಳಿಕೊಡ್ತಿರೋದು ಭೂಷಣ್. ಎಪಿಕ್ ಮಾದರಿಯ ಸೆಟ್‍ಗಳಲ್ಲಿ ಹಾಡಿನ ಶೂಟಿಂಗ್ ನಡೆಯುತ್ತಿದ್ದು, ಜನವರಿ ಹೊತ್ತಿಗೆ ಸಿನಿಮಾ ತೆರೆಗೆ ತರಲು ಸಿದ್ಧತೆ ನಡೆದಿದೆ. ಈ ಹಾಡು ಮುಗಿದರೆ ನಟಸಾರ್ವಭೌಮನ ಶೂಟಿಂಗ್ ಮುಗಿದಂತೆ ಎಂದಿದ್ದಾರೆ ಪವನ್ ಒಡೆಯರ್. 

  ಪುನೀತ್‍ಗೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವರನ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ಪುನೀತ್ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದಾರೆ.

 • ಅಪ್ಪುಗೆ ತೆಲುಗು ಹೀರೋಯಿನ್ ಫಿದಾ 

  surabhi happy to meet puneeth

  ಪುನೀತ್ ರಾಜ್‍ಕುಮಾರ್ ಏನೇ ದೊಡ್ಡ ಸ್ಟಾರ್ ಇರಬಹುದು. ಅವರನ್ನು ಮುಖಾಮುಖಿ ಭೇಟಿಯಾದವರು ಮೊದಲು ಶಾಕ್ ಆಗುವುದು ಅವರ ಸರಳತೆಗೆ. ಸಜ್ಜನಿಕೆಯ ಮಾತಿಗೆ. ಪ್ರತಿಯೊಬ್ಬರನ್ನೂ ಗೌರವದಿಂದಲೇ ಮಾತನಾಡಿಸುವ ಪುನೀತ್ ಅವರನ್ನು ನೋಡಿದ ಹೊಸಬರು ಮೊದಲು ಶಾಕ್ ಆಗ್ತಾರೆ. ಆಮೇಲೆ ಅಭಿಮಾನಿಯಾಗ್ತಾರೆ. ಈಗ.. ಹಾಗೆ ಅಭಿಮಾನಿಯಾಗುವ ಸರದಿ ತೆಲುಗು ನಟಿ ಸುರಭಿ ಅವರದ್ದು.

  ತೆಲುಗಿನಲ್ಲಿ `ಒಕ ಕ್ಷಣಂ' ಚಿತ್ರದ ಸೆಟ್‍ನಲ್ಲಿ ಸುರಭಿ, ಪುನೀತ್ ಅವರನ್ನು ಭೇಟಿ ಮಾಡಿದ್ದಾರೆ.ಪುನೀತ್ ಅವರ ಸರಳತೆಗೆ ಮಾರು ಹೋಗಿರುವ ಸುರಭಿ,  ಭೇಟಿಯ ಕ್ಷಣ ಅದ್ಭುತವಾಗಿದ್ದು ಎಂದು ಹೇಳಿಕೊಂಡಿದ್ದಾರೆ. ಸುರಭಿ ಅವರಿಗೆ ಇಷ್ಟವಾಗಿರುವುದ ಒನ್ಸ್ ಎಗೇಯ್ನ್, ಪುನೀತ್ ಅವರ ಸರಳತೆ, ಸಜ್ಜನಿಕೆ ಎನ್ನುವುದನ್ನು ಬೇರೆ ಹೇಳಬೇಕಿಲ್ಲ.

 • ಅಪ್ಪುಗೆ ರಚಿತಾ ಜೊತೆ ಅನುಪಮಾ ಕೂಡಾ ಜೋಡಿ..!

  natasarvabhowma gets his second heroine

  ಪುನೀತ್ ರಾಜ್‍ಕುಮಾರ್, ಪವನ್ ಒಡೆಯರ್ ಹಾಗೂ ರಾಕ್‍ಲೈನ್ ವೆಂಕಟೇಶ್ ಕಾಂಬಿನೇಷನ್‍ನ ಸಿನಿಮಾ ನಟಸಾರ್ವಭೌಮ. ಚಿತ್ರದ ಶೂಟಿಂಗ್ ಈಗಾಗಲೇ ಬಿರುಸಿನಿಂದ ನಡೆಯುತ್ತಿದೆ. ಚಿತ್ರದ ನಾಯಕಿ ರಚಿತಾ ರಾಮ್. ಚಿತ್ರಕ್ಕೆ ಇನ್ನೊಬ್ಬ ನಾಯಕಿ ಬರಲಿದ್ದಾರೆ ಎಂಬ ಸುದ್ದಿಯಿತ್ತು. ಅದೀಗ ಅಧಿಕೃತ. ಅಪ್ಪುಗೆ ಜೋಡಿಯಾಗುತ್ತಿರುವ ಇನ್ನೊಬ್ಬ ಹುಡುಗಿ ಮಲೆಯಾಳಿ ಅನುಪಮಾ ಪರಮೇಶ್ವರನ್.

  ಮಲಯಾಳಂನ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ಪ್ರೇಮಂ ಖ್ಯಾತಿಯ ಹುಡುಗಿ. ಚಿತ್ರದಲ್ಲಿ ಅವರದ್ದು ಜೂನಿಯರ್ ಲಾಯರ್ ಪಾತ್ರವಂತೆ. ಚಿತ್ರದ ಕಥೆ ಕೇಳಿ ಇಷ್ಟಪಟ್ಟಿದ್ದಾರಂತೆ. ರಚಿತಾ ರಾಮ್ ಇದ್ದರೂ, ಇಬ್ಬರ ಪಾತ್ರಗಳಿಗೂ ಅಭಿನಯಕ್ಕೆ ಅವಕಾಶವಿದೆ. ಪ್ರಾಧಾನ್ಯತೆಯೂ ಇದೆ ಎಂದಿದ್ದಾರೆ ಪವನ್ ಒಡೆಯರ್.

  ಪುನೀತ್ ರಾಜ್‍ಕುಮಾರ್ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಯಾಗುತ್ತಿದ್ದೇನೆ. ಪುನೀತ್ ಅವರ ಬಗ್ಗೆ ಕೇಳಿ ತಿಳಿದಿದ್ದೇನೆ. ಅವಾರ್ಡ್ ಫಂಕ್ಷನ್‍ಗಳಲ್ಲಿ ನೋಡಿದ್ದೇನೆ. ಸದ್ಯಕ್ಕಂತೂ ಥ್ರಿಲ್ ಆಗಿದ್ದೇನೆ ಎಂದು ಹೇಳಿಕೊಂಡಿರೋದು ಅನುಪಮಾ.

  ಅಗ್ರಿಮೆಂಟ್‍ಗೆ ಇನ್ನೂ ಸೈನ್ ಆಗಿಲ್ಲ. ಆದರೆ, ನಟಿಸೋದು ಹೆಚ್ಚೂ ಕಡಿಮೆ ಪಕ್ಕಾ ಆಗಿದೆ. 

 • ಅಪ್ಸರೆಯ ಜೊತೆ ಅಪ್ಪು ರಾಜಕುಮಾರ

  tamanah and puneeth in ad commercial

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕನ್ನಡಿಗರ ರಾಜಕುಮಾರ. ಇನ್ನು ಮಿಲ್ಕಿ ಬ್ಯೂಟಿ ಎಂದೇ ದ.ಭಾರತ ಚಿತ್ರರಂಗದಲ್ಲಿ ಖ್ಯಾತವಾಗಿರೋ ತಮನ್ನಾ, ಅಪ್ಸರೆಯೇ ಸರಿ. ಇವರಿಬ್ಬರೂ ಈಗ ಒಟ್ಟಿಗೇ ನಟಿಸಿದ್ದಾರೆ. ಆದರೆ, ಅದು ಸಿನಿಮಾದಲ್ಲಿ ಅಲ್ಲ, ಜಾಹೀರಾತೊಂದರಲ್ಲಿ.

  ಜ್ಯುವೆಲ್ಲರಿ ಶಾಪ್‍ವೊಂದರ ಜಾಹೀರಾತಿನಲ್ಲಿ ತಮನ್ನಾ ರಾಜಕುಮಾರಿಯಂತೆ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರನ ವೇಷದಲ್ಲಿದ್ದಾರೆ. ಅವಿನಾಶ್ ಹಾಗೂ ಸಾಧುಕೋಕಿಲ ಕೂಡಾ ಜಾಹೀರಾತಿನಲ್ಲಿ ಭಾಗವಹಿಸಿರುವುದು ವಿಶೇಷ.

 • ಅಬ್ಬಾ..! ನಟಸಾರ್ವಭೌಮ ಚಿತ್ರದಲ್ಲಿ 11 ಹಾಡುಗಳು..!

  natasarvabhouma has 11 songs

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲಿ ಎಷ್ಟು ಹಾಡುಗಳಿರಬಹುದು..? ನಾಲ್ಕು.. ಐದು.. ಆರು.. ಅಲ್ಲಲ್ಲ.. ಬರೋಬ್ಬರಿ 11 ಹಾಡುಗಳಿವೆ. ಲಹರಿ ಹೊರತಂದಿರುವ ಆಡಿಯೋ ಆಲ್ಬಂನಲ್ಲಿ ಒಟ್ಟು 11 ಸಾಂಗುಗಳಿವೆ.

  ಪವನ್ ಒಡೆಯರ್ ನಿರ್ದೇಶನದ ಚಿತ್ರ ಮ್ಯೂಸಿಕಲ್ ಸಿನಿಮಾ ಆಗಲಿದೆಯಾ..? ಹಾಗೇನಿಲ್ಲ ಎನ್ನುತ್ತಿದೆ ಚಿತ್ರತಂಡ. ಚಿತ್ರದಲ್ಲಿರೋದು 4 ಹಾಡುಗಳು ಮಾತ್ರ ಅಂತೆ. ಉಳಿದಂತೆ ಹಾಡುಗಳು ಜಸ್ಟ್ ಫಾರ್ ಫ್ಯಾನ್ಸ್.

  ಚಿತ್ರದಲ್ಲಿ ಅಪ್ಪುಗೆ ರಚಿತಾ ರಾಮ್, ಅನುಪಮಾ ಪರಮೇಶ್ವರನ್ ಜೋಡಿಯಾಗಿ ನಟಿಸಿದ್ದು, ಬಿ.ಸರೋಜಾದೇವಿ ಸುದೀರ್ಘ ಅವಧಿಯ ನಂತರ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ.

   

 • ಅಭಿಮಾನಿ ದೇವರ ಮನೆಗೆ ಅಪ್ಪು ಹೋದಾಗ..

  puneeth with his fans

  ಭಕ್ತರು ದೇವರ ಬಳಿ ಹೋಗೋದು ಕಾಮನ್. ದೇವರೇ ಭಕ್ತರ ಬಳಿ ಬಂದರೆ, ಅದು ಅದ್ಭುತ. ಆದರೆ, ಇದು ಒಂಥರಾ ಡಿಫರೆಂಟು. ಬಳ್ಳಾರಿಯಲ್ಲಿ ವಿಶ್ವ ಎಂಬ ಯುವಕನಿದ್ದಾನೆ. ಆತ ಪುನೀತ್ ರಾಜ್‍ಕುಮಾರ್ ಅವರ ಕಟ್ಟಾ ಅಭಿಮಾನಿ. ಇತ್ತೀಚೆಗೆ ಅವರ ತಂಗಿಯ ಮದುವೆಯಾಗಿತ್ತು. ಮದುವೆಗೆ ಬರಲೇಬೇಕೆಂದು ಆಹ್ವಾನ ಪತ್ರಿಕೆ ಕೊಟ್ಟಿದ್ದ ವಿಶ್ವ, ಪುನೀತ್ ಬಂದೇ ಬರುತ್ತಾರೆ ಎಂದು ಕಾಯುತ್ತಿದ್ದ. ಆದರೆ, ಆ ವೇಳೆಯಲ್ಲಿಯೇ ಪಾರ್ವತಮ್ಮ ರಾಜ್‍ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಪುನೀತ್ ಹೋಗಲು ಸಾಧ್ಯವಾಗಲೇ ಇಲ್ಲ.

  ಪುನೀತ್ ಸಮಸ್ಯೆ ಅರ್ಥ ಮಾಡಿಕೊಂಡ ವಿಶ್ವ ತನಗೆ ತಾನೇ ಸಮಾಧಾನಪಟ್ಟುಕೊಂಡಿದ್ದರು. ಆದರೆ, ಮೊನ್ನೆ ಮೊನ್ನೆ ವಿಶ್ವಗೆ ದಿಢೀರ್ ಅಚ್ಚರಿ ಕಾದಿತ್ತು. ಅವರ ಮನೆ ಬಾಗಿಲಲ್ಲಿ ಅಭಿಮಾನದ ದೇವರು ಪುನೀತ್ ನಿಂತಿದ್ದರು. ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಅನಂದ್‍ರಾಮ್ ನಿಶ್ಚಿತಾರ್ಥಕ್ಕೆ ಬಿಡುವು ಮಾಡಿಕೊಂಡು ಬಳ್ಳಾರಿಗೆ ಹೋಗಿದ್ದ ಪುನೀತ್, ಅಭಿಮಾನಿ ವಿಶ್ವನನ್ನು ಮರೆತಿರಲಿಲ್ಲ. ಸೀದಾ ಅವರ ಮನೆಗೆ ಹೋಗಿ, ಅವರ ಮನೆಯ ಆತಿಥ್ಯ ಸ್ವೀಕರಿಸಿದರು.

  ರಾಜ್ ಕುಟುಂಬದವರು ಅಭಿಮಾನಿಗಳನ್ನೇ ದೇವರು ಅಂತಾರೆ. ಪುನೀತ್ ಕೂಡಾ ಹೊರತಲ್ಲ. ಅಭಿಮಾನಿಗಳು, ತಮ್ಮ ಸ್ಟಾರ್‍ನನ್ನೇ ದೇವರು ಅಂತಾರೆ. ಈಗ.. ದೇವರು ಯಾರು.. ಭಕ್ತ ಯಾರು ನೀವೇ ನಿರ್ಧಾರ ಮಾಡಿ.

 • ಅಭಿಮಾನಿ ದೇವರುಗಳೇ.. ನೀವೂ ನಟಸಾರ್ವಭೌಮರಾಗಿ..

  natasarvabhouma challenge to fans

  ನೀವು ಮಾಡಬೇಕಾದ್ದು ಇಷ್ಟೆ. ನಟಸಾರ್ವಭೌಮ ಚಿತ್ರದ ಟೀಸರ್ ನೋಡಿದ್ದೀರಲ್ವಾ..? ಅ ಟೀಸರ್‍ನಲ್ಲಿ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿದ್ರಲ್ಲಾ.. ಅದೇ ಸ್ಟೈಲ್‍ನಲ್ಲಿ ನೀವು ಪುಟ್ಟದೊಂದು ವಿಡಿಯೋ ಮಾಡಬೇಕು. ಆ ವಿಡಿಯೋವನ್ನ #Natasarvabhouma ಹ್ಯಾಷ್‍ಟ್ಯಾಗ್ ಬಳಸಿ, ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಬೇಕು.

  ಹೀಗೆ ಮಾಡಿದ ವಿಡಿಯೋಗಲ್ಲಿ ದಿ ಬೆಸ್ಟ್ ವಿಡಿಯೋಗಳನ್ನ ನಟಸಾರ್ವಭೌಮ ಚಿತ್ರತಂಡ ಸೆಲೆಕ್ಟ್ ಮಾಡುತ್ತೆ. ಆ ಅಭಿಮಾನಿ ದೇವರುಗಳು ನಟಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ದಿನದ ಕಾರ್ಯಕ್ರಮದಲ್ಲಿ ಅಪ್ಪು ಜೊತೆ ಸ್ಟೇಜ್ ಮೇಲಿರ್ತಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾ ರಾಮ್-ಅನುಪಮಾ ಪರಮೇಶ್ವರನ್ ನಾಯಕಿಯಾಗಿರುವ ಚಿತ್ರದಲ್ಲಿ ಬಿ.ಸರೋಜಾದೇವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 • ಅಯೋಗ್ಯ.. ಹಿಂದೆ ಹಿಂದೆ ಹೋಗು..

  ayogya's second song released by puneeth

  ಮುಂದೆ ಬನ್ನಿ, ಮುಂದೆ ಬನ್ನಿ ಅಂದೋರು ಕಮಲ್ ಹಾಸನ್. ಹಿಂದೆ ಹಿಂದೆ ಹೋಗು ಅಂತಿರೋವ್ರು ನೀನಾಸಂ ಸತೀಶ್. ಯೆಸ್, ಇದು ಅಯೋಗ್ಯ ಚಿತ್ರದ ಹಾಡು.

  ಏನಮ್ಮಿ.. ಏನಮ್ಮಿ ಹಾಡಿನ ಮೂಲಕ ಅದ್ಭುತ ಸದ್ದು ಮಾಡುತ್ತಿರುವ ಅಯೋಗ್ಯ ಚಿತ್ರತಂಡ, 2ನೇ ಹಾಡನ್ನೂ ಬಿಡುಗಡೆ ಮಾಡಿದೆ. ಈ ಹಾಡಿನ ಅರಂಭದ ಸಾಹಿತ್ಯವೇ ಇದು, ಹಿಂದೆ ಹಿಂದೆ ಹೋಗು.. ಮಕ್ ಉಗುದ್ರು ಹಿಂದೆ ಹೋಗು.. ಅಂತಾ. ಹಾಡನ್ನು ಬಿಡುಗಡೆ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಟೈಟಲ್ ಸಾಂಗ್‍ನ್ನು ರೆಬಲ್‍ಸ್ಟಾರ್‍ರಿಂದ ರಿಲೀಸ್ ಮಾಡಿಸಿದ್ದ ನಿರ್ಮಾಪಕ  ಚಮಕ್ ಚಂದ್ರಶೇಖರ್, ಈ ಹಾಡನ್ನು ಪವರ್‍ಸ್ಟಾರ್‍ರಿಂದ ರಿಲೀಸ್ ಮಾಡಿಸಿದ್ದಾರೆ.

  ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ಎಸ್. ಮಹೇಶ್ ಕುಮಾರ್.

 • ಅರ್ಧ ವರ್ಷದ ಸಂಭ್ರಮ ಹೆಚ್ಚಿಸಿದ ರಾಜಕುಮಾರ

  puneeth and team visits theater

  ಜೂನ್ ಮುಗಿದಿದೆ. ಅಲ್ಲಿಗೆ 2017ರ ಅರ್ಧ ವರ್ಷವೂ ಮುಗಿದಿದೆ.ಅರ್ಧ ವರ್ಷ ಮುಗಿಯುವಾಗಲೇ ರಾಜಕುಮಾರ ಚಿತ್ರ ಶತದಿನೋತ್ಸವ ಆಚರಿಸಿದೆ. ಅದೂ ಒಂದಲ್ಲ..ಎರಡಲ್ಲ..45ಕ್ಕೂ ಹೆಚ್ಚು ಕೇಂದ್ರಗಳಲ್ಲಿ. ಅದು ಸುಮ್ಮನೆ ಮಾತಲ್ಲ. 

  ಮಾರ್ಚ್ 24ಕ್ಕೆ ರಿಲೀಸ್ ಆಗಿದ್ದ ರಾಜಕುಮಾರ, ಸುದೀರ್ಘ ವಿರಾಮದ ನಂತರ ಕುಟುಂಬಗಳನ್ನು ಚಿತ್ರಮಂದಿರಕ್ಕೆ ಎಳೆದು ತಂದ ಚಿತ್ರ. ಪುನೀತ್ ರಾಜ್​ಕುಮಾರ್ ಚಿತ್ರ ಜೀವನದಲ್ಲಿ ಮೈಲುಗಲ್ಲಾಗಬಹುದಾದ ಚಿತ್ರ, ಬಾಕ್ಸಾಫಿಸ್​ನಲ್ಲೂ ದಾಖಲೆ ಮಾಡಿದೆ. 

  ಮೈಸೂರಿನಲ್ಲಂತೂ 3 ಚಿತ್ರಮಂದಿರಗಳಲ್ಲಿ 100 ದಿನ ಪೂರೈಸಿರುವ ಚಿತ್ರ, ದಾಖಲೆಯನ್ನೇ ಬರೆದಿದೆ. 12 ವರ್ಷಗಳ ಹಿಂದೆ ಜೋಗಿ ಚಿತ್ರ ಮೈಸೂರಿನಲ್ಲಿ ಏಕಕಾಲದಲ್ಲಿ 100 ದಿನ ಪ್ರದರ್ಶನ ಕಂಡಿತ್ತಂತೆ. ಅದಾದ ನಂತರ ಆ ದಾಖಲೆ ಬರೆದಿರುವುದು ರಾಜಕುಮಾರ.

  ಇದು ಅಭಿಮಾನಿಗಳ ಪ್ರೀತಿ ಹಾರೈಕೆಯ ಫಲ ಎಂದಿದ್ದಾರೆ ಪುನೀತ್ ರಾಜ್​ಕುಮಾರ್. ನಟ ಪುನೀತ್ ರಾಜ್​ ಕುಮಾರ್ ಮತ್ತು ಚಿತ್ರತಂಡ ನರ್ತಕಿ ಥಿಯೇಟರ್​ಗೆ ತೆರಳಿ ಅಭಿಮಾನಿಗಳ ಜೊತೆ ಹಬ್ಬ ಮಾಡಿಕೊಂಡಿದ್ದಾರೆ. 

  ಚಿತ್ರ ಪೈರಸಿ ಹಾವಳಿಯ ನಡುವೆಯೂ ಶತದಿನ ದಾಖಲಿಸಿ ಮುನ್ನುಗ್ಗುತ್ತಿರುವುದು ಚಿತ್ರರಂಗದ ಸಂಭ್ರಮ ಹೆಚ್ಚಿಸಿದೆ. ಚಿತ್ರರಂಗಕ್ಕೆ ಇಂಥಾದ್ದೊಂದು ಸಂಭ್ರಮ ಬೇಕಿತ್ತು. 

   

   

   

Yajamana Movie Gallery

Bazaar Movie Gallery