` puneeth rajkumar, - chitraloka.com | Kannada Movie News, Reviews | Image

puneeth rajkumar,

  • ಅಪ್ಪು, ಸುದೀಪ್ ಶೋ ಒಟ್ಟೊಟ್ಟಿಗೇ ಬರ್ತಾರೆ

    sudeep puneeth during rajakumara successmeet

    ಮೊನ್ನೆ ಮೊನ್ನೆಯಷ್ಟೇ ಪುನೀತ್ ಮತ್ತು ಸುದೀಪ್ ಒಟ್ಟಿಗೇ ಕಿರುತೆರೆ ಶೋವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಇದೇ ಚಿತ್ರಲೋಕದಲ್ಲಿ ಓದಿದ್ದಿರಿ. ಅದು ಈಗ ನಿಜವಾಗುತ್ತಿದೆ. ಆದರೆ, ಇಬ್ಬರೂ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಹೋಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಬಿಗ್ ಸ್ಟಾರ್‍ಗಳನ್ನು ಒಂದುಗೂಡಿಸಿರುವುದು ಕಲರ್ಸ್ ಸೂಪರ್ ಕನ್ನಡ ಚಾನೆಲ್.

    ಇದೇ ತಿಂಗಳು ಬಿಗ್‍ಬಾಸ್ 5ನೇ ಆವೃತ್ತಿ ಶುರುವಾಗುತ್ತಿದೆ. ಈ ಕಾರ್ಯಕ್ರಮವನ್ನು ನಡೆಸಿಕೊಡೋದು ಕಿಚ್ಚ ಸುದೀಪ್. ಇದೇ ತಿಂಗಳು ಪುನೀತ್ ರಾಜ್‍ಕುಮಾರ್ ಶೋ ಕೂಡಾ ಶುರುವಾಗಲಿದೆ. ಭಾರತದ ಜಿಇಸಿ ವಾಹಿನಿ(ಮನರಂಜನವಾ ವಾಹಿನಿ(ಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಟಾಪ್ 10ನಲ್ಲಿ ಕಾಣಿಸಿಕೊಂಡಿರುವ ಕಲರ್ಸ್ ಕನ್ನಡ, ಈಗ ಇಬ್ಬರು ದೊಡ್ಡ ಸ್ಟಾರ್‍ಗಳನ್ನು ಒಟ್ಟಿಗೇ ಕಾಣಿಸಿಕೊಳ್ಳುವಂತೆ ಮಾಡಿದೆ.

    Relayed Articles :-

    ಫ್ಯಾಮಿಲಿ ಶೋ ನಡೆಸಿಕೊಡ್ತಾರೆ ಪುನೀತ್

  • ಕನ್ನಡ ಚಿತ್ರರಂಗದ ಹಬ್ಬವಾಯ್ತು ರಾಜಕುಮಾರನ ಸಂಭ್ರಮ - ತಾರೆಯರ ಸಮಾಗಮ

    rajakumara 100 days function

    ಕನ್ನಡ ಚಿತ್ರರಂಗದ ಹಬ್ಬವಾಯ್ತು ರಾಜಕುಮಾರನ ಸಂಭ್ರಮ - ತಾರೆಯರ ಸಮಾಗಮ ಬಹುಶಃ ಇಂಥಾದ್ದೊಂದು ಸಂಭ್ರಮ ನಡೆದು ಯಾವ ಕಾಲವಾಗಿತ್ತೋ. ಚಿತ್ರವೊಂದರ ಶತದಿನೋತ್ಸವ ಸಮಾರಂಭದಲ್ಲಿ ಚಿತ್ರರಂಗದ ತಾರೆಯರೆಲ್ಲ ಒಂದಾಗಿ ಸೇರುವುದು, ಶುಭ ಹಾರೈಸುವುದು

    ನಿಜಕ್ಕೂ ಅತ್ಯುತ್ತಮ ಬೆಳವಣಿಗೆ. ಆ ಸಮಾರಂಭದಲ್ಲಿ ಎಲ್ಲರೂ ಇದ್ದರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸುದೀಪ್, ಯಶ್, ಜಗ್ಗೇಶ್, ಶ್ರೀಮುರಳಿ, ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು...ಹೀಗೆ ಹೆಚ್ಚೂ ಕಡಿಮೆ ಇಡೀ ಚಿತ್ರರಂಗದ ಸಮಾಗಮವಾಗಿತ್ತು.

    ಇನ್ನು ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರು ಹೇಳಿದ ಮಾತುಗಳು ಚೇತೋಹಾರಿಯಾಗಿದ್ದವು. ಸುದೀಪ್ಗೆ ಖುಷಿ ಕೊಟ್ಟಿದ್ದು ಚಿತ್ರದಲ್ಲಿನ  ಅಪ್ಪು ಡ್ಯಾನ್ಸ್. ನಮಗೆ ಅದೆಲ್ಲ ಬರೋಲ್ಲ. ಬಿಡುವಾದಾಗ ಪುನೀತ್ ಬಳಿ ಡ್ಯಾನ್ಸ್ ಹೇಳಿಸಿಕೊಳ್ತೇನೆ ಎಂದರು. ಅಪ್ಪು ನಾಚಿ ನೀರಾದರು. ಬೊಂಬೆ ಹೇಳುತೈತೆ ಹಾಡನ್ನೂ ಹಾಡಿದರು. ಸುದೀಪ್ ಮತ್ತು ಪುನೀತ್ ವೇದಿಕೆ ಮೇಲೆ ಸ್ಟೆಪ್ಪು ಹಾಕಿದರು. ಬೊಂಬೆ ಹೇಳುತೈತೆ ಹಾಡು ಹೇಳುತ್ತ ಶಿವಣ್ಣ, ತಮ್ಮನನ್ನು ಅಪ್ಪಿಕೊಂಡು ಖುಷಿಪಟ್ಟರು. ಜಗ್ಗೇಶ್ ವೇದಿಕೆಯಲ್ಲಿದ್ದವರ ಖುಷಿಗೆ ಒಗ್ಗರಣೆ ಹಾಕಿದರು.

    ಇದು ಕನ್ನಡಿಗರ ಗೆಲುವು ಎನ್ನುವ ಮೂಲಕ ಚಿತ್ರದ ಯಶಸ್ಸನ್ನು ಇನ್ನೂ ಮೇಲ್ಮಟ್ಟಕ್ಕೆ ಏರಿಸಿದ್ದು ನಟ ಯಶ್.ಒಟ್ಟಿನಲ್ಲಿ ರಾಜಕುಮಾರನ ಸಂಭ್ರಮದ ವೇದಿಕೆ ಅಕ್ಷರಶಃ ಚಿತ್ರರಂಗದ ಹಬ್ಬವಾಗಿತ್ತು.ಚಿತ್ರದ ಲಾಭದಲ್ಲಿನ ಪಾಲನ್ನು ತಂತ್ರಜ್ಞರಿಗೆ ಹಂಚಿದ ನಿರ್ಮಾಪಕ ಕಾರ್ತಿಕ್ ಗೌಡ, ಎಲ್ಲರ ಮೆಚ್ಚುಗೆ ಗಳಿಸಿದರು.

  • ಜೇಮ್ಸ್ : 4 ದಿನ.. 100,0000000+ ದಾಖಲೆ

     ಜೇಮ್ಸ್ : 4 ದಿನ.. 100,0000000+ ದಾಖಲೆ

    ಜೇಮ್ಸ್ ದಾಖಲೆ ಮೇಲೆ ದಾಖಲೆ ಬರೆಯುತ್ತಲೇ ಇದೆ. ಈಗ ಆ ದಾಖಲೆಗೆ ಹೊಸ ಸೇರ್ಪಡೆ ಬಾಕ್ಸಾಫೀಸ್ ದಾಖಲೆ. ರಿಲೀಸ್ ದಿನವೇ 30 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಸುದ್ದಿ ಮಾಡಿದ್ದ ಜೇಮ್ಸ್, ಕೇವಲ 4 ದಿನದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಇಷ್ಟು ವೇಗವಾಗಿ 100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಜೇಮ್ಸ್.

    ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್, ಪುನೀತ್ ರಾಜಕುಮಾರ್ ಹೀರೋ ಆಗಿ ನಟಿಸಿರುವ ಕೊನೆಯ ಸಿನಿಮಾ ಕೂಡಾ. ಜೇಮ್ಸ್ ಚಿತ್ರದ ಸ್ಯಾಟಲೈಟ್, ಆಡಿಯೋ, ಒಟಿಟಿ, ಡಬ್ಬಿಂಗ್ ರೈಟ್ಸ್‍ಗಳಲ್ಲೂ ದಾಖಲೆ ಪ್ರಮಾಣದ ಗಳಿಕೆ ಬರೆದಿದೆ. ನಿರ್ಮಾಪಕರಿಗೆ 80 ಕೋಟಿಗೂ ಹೆಚ್ಚು ಲಾಭ ಬರಲಿದೆ ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.

    ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅಧಿಕೃತವಾಗಿ ಬಾಕ್ಸಾಫೀಸ್ ಮತ್ತು ಇತರೆ ಲೆಕ್ಕಗಳನ್ನು ಕೊಟ್ಟಿಲ್ಲ. ಅಫ್‍ಕೋರ್ಸ್, ಚಿತ್ರದ ಬಜೆಟ್ ಬಗ್ಗೆಯಾಗಲೀ, ಪುನೀತ್ ಸಂಭಾವನೆಯ ವಿಷಯವನ್ನಾಗಲೀ ಅವರು ಮಾತನಾಡಿಯೇ ಇಲ್ಲ. 100 ಕೋಟಿಯಂತೆ ನಿಜವಾ ಎಂದರೆ ಹೌದು ಎಂದೂ ಹೇಳಿಲ್ಲ. ಇಲ್ಲ ಎಂದೂ ಹೇಳಿಲ್ಲ.

  • ಪುನೀತ್ ಹೊಸ ಚಿತ್ರ - ನಿರ್ದೇಶನ ಶಶಾಂಕ್, ನಿರ್ಮಾಪಕ ಪುನೀತ್ ರಾಜ್‍ಕುಮಾರ್ 

    puneeth rajkumar to produce

    ಪುನೀತ್ ರಾಜ್‍ಕುಮಾರ್ ಆಂಜನಿಪುತ್ರದ ಶೂಟಿಂಗ್ ಮುಗಿಸಿದ ನಂತರ ರಾಕ್‍ಲೈನ್ ನಿರ್ಮಾಣದ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆ ಚಿತ್ರ ಮುಗಿದ ನಂತರ ಪುನೀತ್ ತಮ್ಮದೇ ಬ್ಯಾನರ್‍ನಲ್ಲಿ ಹೊಸ ಚಿತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ. ನಿರ್ದೇಶಕ ಶಶಾಂಕ್.

    ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲೆ, ಬಚ್ಚನ್, ಮುಂಗಾರು ಮಳೆ-2.. ಹೀಗೆ ಡಿಫರೆಂಟ್ ಸಿನಿಮಾಗಳ ಮೂಲಕ ಸ್ಟಾರ್ ಡೈರೆಕ್ಟರ್ ಆಗಿರುವ ಶಶಾಂಕ್‍ಗೆ, ಪುನೀತ್ ಜೊತೆ ಇದು ಮೊದಲ ಚಿತ್ರ. 

    ಪಿಆರ್‍ಕೆ ಬ್ಯಾನರ್‍ನಲ್ಲಿ ನಿರ್ಮಾಣವಾಗುವ ಈ ಚಿತ್ರ ಜನವರಿಯಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. 

    ಪಿಆರ್‍ಕೆ ಬ್ಯಾನರ್‍ನಲ್ಲಿ ಈಗಾಗಲೇ ಬೇರೆಯವರಿಗೆ ಅವಕಾಶ ಕೊಡಲಾಗಿದೆ. ಈ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಕವಲುದಾರಿ. ಆಲಮೇಲಮ್ಮ ಖ್ಯಾತಿಯ ರಿಷಿ ಆ ಚಿತ್ರದ ನಾಯಕ. ಎರಡನೇ ಚಿತ್ರಕ್ಕೆ ಶಶಾಂಕ್ ನಿರ್ದೇಶರಾಗುತ್ತಿದ್ದಾರೆ.

    Related Articles :-

    Puneeth To Team Up With Shashank For A New Film

  • ಮುಜಾ ಟಾಕೀಸ್‍ನಲ್ಲಿ ಮೊತ್ತಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್

    puneeth rajkumar in maja talkies

    ಕನ್ನಡ ಕಿರುತೆರೆಯ ಕಾಮಿಡಿ ರಿಯಾಲಿಟಿ ಷೋನಲ್ಲಿ ಮಜಾ ಟಾಕೀಸ್‍ಗೆ ಬೇರೆಯದ್ದೇ ಸ್ಥಾನವಿದೆ. 200 ಎಪಿಸೋಡ್ ದಾಟಿ ಮುನ್ನುಗ್ಗುತ್ತಿರುವ ಈ ಕಾಮಿಡಿ ಶೋಗೆ ಚಿತ್ರರಂಗದ ಸ್ಟಾರ್‍ಗಳೆಲ್ಲ ಬಂದು ಹೋಗಿದ್ದಾರೆ. ಆದರೆ, ಇದುವರೆಗೆ ಮಜಾ ಟಾಕೀಸ್‍ನಲ್ಲಿ ಪುನೀತ್ ರಾಜ್‍ಕುಮಾರ್ ಎಂಟ್ರಿ ಕೊಟ್ಟಿರಲಿಲ್ಲ.

    ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್‍ನಲ್ಲಿ ಇದೇ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿದ್ದಾರೆ. ಅದು ರಾಜಕುಮಾರ ಸಕ್ಸಸ್ ಹಿನ್ನೆಲೆಯಲ್ಲಿ. 

    ರಾಜಕುಮಾರ ಚಿತ್ರ 50 ದಿನ ಪೂರೈಸಿದಾಗಲೇ ಮಜಾ ಟಾಕೀಸ್‍ಗೆ ಪುನೀತ್ ಎಂಟ್ರಿ ಕೊಟ್ಟಿದ್ದರು. ಕಾರ್ಯಕ್ರಮ ಶೂಟಿಂಗ್ ಕೂಡಾ ಆಗಿತ್ತು. ಆದರೆ, ಪುನೀತ್ ಭಾಗವಹಿಸಿರುವ ಕಾರ್ಯಕ್ರಮವನ್ನು ವಿಶೇಷ ದಿನದಂದೇ ಪ್ರಸಾರ ಮಾಡಬೇಕು ಎಂದು ನಿರ್ಧರಿಸಿದ್ದ ಕಾಯಕ್ರಮ ನಿರ್ಮಾಪಕರು, ಈಗ ರಾಜಕುಮಾರ ಚಿತ್ರದ ಶತದಿನೋತ್ಸವ ದಿನದಂದು ಡೇಟ್ ಫಿಕ್ಸ್ ಮಾಡಿದ್ದಾರೆ.

    ಕಾರ್ಯಕ್ರಮದ ವಿಶೇಷತೆಗಳೇನು ಗೊತ್ತಾ..?

    ಜುಲೈ 1ರಂದು ರಾಜಕುಮಾರ ಚಿತ್ರ 100 ದಿನ ಪೂರೈಸಲಿದೆ. ಅದೇ ದಿನ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

    ಇದು ಮಜಾ ಟಾಕೀಸ್ ಸರಣಿಯ 250ನೇ ಎಪಿಸೋಡ್

    ಈ ಕಾರ್ಯಕ್ರಮದಲ್ಲಿ ಅಪ್ಪು ಪುಟ್ಟ ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿರೋದು ವಿಶೇಷ.

  • ಯುವರತ್ನ ಬರೋ ಟೈಂ ಫಿಕ್ಸ್ ಆಯ್ತಾ..?

     ಯುವರತ್ನ ಬರೋ ಟೈಂ ಫಿಕ್ಸ್ ಆಯ್ತಾ..?

    ಜನವರಿ 22. ಯೆಸ್, ಎಲ್ಲವೂ ಅವರು ನಿರೀಕ್ಷಿಸಿದಂತೆಯೇ ಆದರೆ ಜನವರಿ 22ಕ್ಕೆ ಪವರ್ ಸ್ಟಾರ್ ಅಭಿನಯದ ಪವರ್‍ಫುಲ್ ಸಿನಿಮಾ ಯುವರತ್ನ ತೆರೆಗೆ ಬರಲಿದೆ. ಆದರೆ.. ಅವರು ಅಂದುಕೊಂಡ ಅದೆಲ್ಲವೂ ಅಷ್ಟರೊಳಗೆ ಆಗಬೇಕು. ಇಷ್ಟಕ್ಕೂ ಆಗಬೇಕಾದ್ದು ಏನು..?

    ಥಿಯೇಟರುಗಳಿಗೆ ಈಗ ಇರುವ ಪ್ರೇಕ್ಷಕರ ಮಿತಿ ಶೇ.50. ಅದನ್ನು ಸರ್ಕಾರ ಅಟ್‍ಲೀಸ್ಟ್ ಶೇ.75ಕ್ಕಾದರೂ ಹೆಚ್ಚಿಸಬೇಕು. ಇಲ್ಲದಿದ್ದರೆ ಕಷ್ಟ ಕಷ್ಟ.

    ಇನ್ನು ಯುವರತ್ನ ಚಿತ್ರವನ್ನು ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಮಾಡೋ ಪ್ಲಾನ್ ಇದೆ. ಸ್ಸೋ.. ಅಲ್ಲಿ ಡಬ್ಬಿಂಗ್ ಕೆಲಸ ಮುಗಿಯಬೇಕು.

    ಮತ್ತೊಂದು ಆ ದಿನ ಕನ್ನಡದ ಬೇರೆ ಯಾವ ಚಿತ್ರಗಳೂ ರಿಲೀಸ್ ಆಗಬಾರದು. ಅಕಸ್ಮಾತ್ ಹಾಗಿದ್ದರೆ ಅವರ ಜೊತೆ ಮಾತುಕತೆ ನಡೆಸಿಕೊಂಡು ಯಾರಿಗೂ ಸ್ಪರ್ಧೆ ಮತ್ತು ತೊಂದರೆ ಆಗದ ರೀತಿಯಲ್ಲಿ ರಿಲೀಸ್ ಮಾಡೋ ಆಲೋಚನೆ ಇದೆ.

    ಇದೆಲ್ಲವನ್ನು ಸ್ವತಃ ನಿರ್ದೇಶಕ ಸಂತೋಷ್ ಆನಂದರಾಮ್ ಅವರೇ ಹೇಳಿರೋದ್ರಿಂದ ಆದರೂ ಆಗಬಹುದು. ಆದರೆ ಇವುಗಳಲ್ಲಿ ಮೊದಲ ಷರತ್ತು ಇದೆಯಲ್ಲ, ಶೇ.75ರಷ್ಟು ಪ್ರೇಕ್ಷಕರಿಗೆ ಅನುಮತಿ. ಅದು ಸಿಕ್ಕೋದು ಕಷ್ಟವಾಗಬಹುದೇನೋ.. ಕಾರಣ ಇಷ್ಟೆ, ಈಗಾಗಲೇ ದೇಶದ ಕೋವಿಡ್ ತಜ್ಞರೆಲ್ಲ ಜನವರಿ ಫೆಬ್ರವರಿಯಲ್ಲಿ ಕೊರೊನಾ 2ನೇ ಅಲೆ ಭೀಕರ ಸ್ವರೂಪ ತಾಳಲಿದೆ ಎನ್ನುತ್ತಿದ್ದಾರೆ. ಅವರ ಎಚ್ಚರಿಕೆಯನ್ನೂ ಮೀರಿ ಸರ್ಕಾರ ಪ್ರೇಕ್ಷಕರ ಶೇ.75ರಷ್ಟು ಪ್ರವೇಶಕ್ಕೆ ಅನುಮತಿ ಕೊಡುತ್ತಾ ಅನ್ನೋದು ಪ್ರಶ್ನೆ.

  • ಶಾಸಕನ ಪುತ್ರನ ದಾಂಧಲೆ - ವಿದ್ವತ್‍ಗೆ ಪುನೀತ್ ರಾಜ್‍ಕುಮಾರ್ ಸಾಂತ್ವನ

    puneeth meets vidvath

    ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್‍ರ ಪುತ್ರ ಮಹಮ್ಮದ್ ನಲಪ್ಪಾಡ್‍ನ ದಾದಾಗಿರಿ, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ನಲಪ್ಪಾಡ್‍ನ ರೌಡಿಸಂ ಆರ್ಭಟಕ್ಕೆ, ವಿದ್ವತ್ ಎಂಬ ಹುಡುಗನ ಎದೆ ಮೂಳೆಗಳು ಮುರಿದಿವೆ. ದವಡೆಯ ಎಲುಬುಗಳು ನಲುಗಿವೆ. ಮೂರು ದಿನ ಕಳೆದರೂ ಐಸಿಯುನಿಂದ ಹೊರಬಂದಿಲ್ಲ ವಿದ್ವತ್. ಇನ್ನೂ ಒಂದು ವಾರ ವಿದ್ವತ್ ಐಸಿಯುನಲ್ಲೇ ಇರಬೇಕೆಂದು ಹೇಳಿದ್ದಾರೆ ವೈದ್ಯರು. ಹೀಗೆ ಹೊಡೆತ ತಿಂದು ಆಸ್ಪತ್ರೆಯಲ್ಲಿ ಮಲಗಿರುವ ವಿದ್ವತ್‍ಗೆ ಸಾಂತ್ವನ ಹೇಳಲು ಹೋದವರು ಪುನೀತ್ ರಾಜ್‍ಕುಮಾರ್.

    ಅಂದಹಾಗೆ ನಲಪ್ಪಾಡ್‍ನ ಗೂಂಡಾಗಿರಿಗೆ ಏಟು ತಿಂದು ರಕ್ತದ ಮಡುವಿನಲ್ಲಿ ಬಿದ್ದವನನ್ನು ಆಸ್ಪತ್ರೆಗೆ ಸೇರಿಸಿದ್ದವರು ಗುರು ರಾಜ್‍ಕುಮಾರ್. ಪುನೀತ್ ಅವರ ಅಣ್ಣ ರಾಘವೇಂದ್ರ ರಾಜ್‍ಕುಮಾರ್ ಅವರ 2ನೇ ಮಗ. ಗುರು ಮತ್ತು ವಿದ್ವತ್ ಬಾಲ್ಯ ಸ್ನೇಹಿತರು. ಚಿಕ್ಕಂದಿನಿಂದ ಒಟ್ಟಿಗೇ ಬೆಳೆದಿದ್ದವರು ಸಹಜವಾಗಿಯೇ ವಿದ್ವತ್, ಪುನೀತ್ ಅವರಿಗೆ ಚಿರಪರಿಚಿತ. 

    ವಿದ್ವತ್‍ನನ್ನು ಆಸ್ಪತ್ರೆಯಲ್ಲಿ ನೋಡಿಬಂದ ಪುನೀತ್ ಭಾವುಕರಾಗಿದ್ದುದು ಸುಳ್ಳಲ್ಲ. ಇಂತಹ ಘಟನೆ ನಡೆಯಬಾರದಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ವತ್ ನನ್ನ ತಮ್ಮ ಅಥವಾ ಮಗನಿದ್ದ ಹಾಗೆ ಎಂದರು ಪುನೀತ್ ರಾಜ್‍ಕುಮಾರ್.

    ಇನ್ನು ಜೀವದ ಗೆಳೆಯ ವಿದ್ವತ್ ಮೇಲೆ ನಡೆದ ಹಲ್ಲೆ, ಗುರು ರಾಜ್‍ಕುಮಾರ್ ಅವರನ್ನೂ ಕೆರಳಿಸಿದೆ. ಜಸ್ಟಿಸ್ ಫಾರ್ ವಿದ್ವತ್ ಎಂಬ ಅಭಿಯಾನ ಆರಂಭಿಸಿದ್ದಾರೆ ಗುರು ರಾಜ್‍ಕುಮಾರ್. ವಿದ್ವತ್ ಜೊತೆಗಿನ ಪುಟ್ಟ ಮಕ್ಕಳಾಗಿದ್ದಾಗಿನ ಫೋಟೋವೊಂದನ್ನು ಹಾಕಿಕೊಂಡಿದ್ದಾರೆ. 

    ಇನ್ನೊಂದು ವಿಷಯವೇನೆಂದರೆ, ವಿದ್ವತ್ ಅಂಗವಿಕಲರೇನಲ್ಲ. ಆದರೆ, ಅವರ ಒಂದು ಕಾಲು ಸೊಟ್ಟಗಿದ್ದು, ಸರಿಯಾಗಿ ಕೂರಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಹೋಟೆಲ್‍ನಲ್ಲಿ ಅವರ ಕಾಲು ತಾಗಿತು ಎಂದು ನಲಪ್ಪಾಡ್ ಅಬ್ಬರಿಸಿರುವುದು. ವಿದ್ವತ್ ಎರಡು ಬಾರಿ ಕ್ಷಮೆ ಕೇಳಿದರೂ ಬಿಡದೆ ಹೊಡೆದಿರುವುದು. ವಿದ್ವತ್‍ಗೆ ನ್ಯಾಯ ಸಿಗಬೇಕಿದೆ.

  • ಸಾವಿರ ಸಿನಿಮಾ ಸರದಾರ ಹೊನ್ನವಳ್ಳಿ ಕೃಷ್ಣ

    honnavall krishna is now the king of 1000 films

    ಹೊನ್ನವಳ್ಳಿ ಕೃಷ್ಣ ಅಭಿನಯದ ಮೊದಲ ಚಿತ್ರ ನ್ಯಾಯವೇ ದೇವರು. 1000ನೇ ಚಿತ್ರ ಭೂತಯ್ಯನ ಮಗ ಅಯ್ಯು. ಆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕಳೆ ತಂದವರು ಪುನೀತ್ ರಾಜ್​ಕುಮಾರ್. ಅದಕ್ಕೆ ಕಾರಣ,  ಹೊನ್ನವಳ್ಳಿ ಮೇಲಿನ ಪ್ರೀತಿ. ಪುನೀತ್​ರನ್ನು ಚಿಕ್ಕ ಹುಡುಗನಾಗಿದ್ದಾಗ ಹೆಗಲ ಮೇಲೆ ಹೊತ್ತು ಬೆಳೆಸಿದ್ದವರು ಹೊನ್ನವಳ್ಳಿ ಕೃಷ್ಣ. ಗುರು, ಗಾರ್ಡಿಯನ್ ಎಲ್ಲವೂ ಆಗಿದ್ದ ಹೊನ್ನವಳ್ಳಿ ಕೃಷ್ಣ ಅವರ ಬಗ್ಗೆ ಪುನೀತ್ ಇಂದಿಗೂ ಅದೇ ಪ್ರೀತಿ ಇಟ್ಟುಕೊಂಡಿರುವುದು ವಿಶೇಷ. 

    ನನಗೆ ಗೊತ್ತಿರೋದು ಬಣ್ಣದ ಬದುಕು. ನಾನು ಈಗಲೂ ನಿರ್ದೇಶಕರು, ನಿರ್ಮಾಪಕರ ಬಳಿ ಚಾನ್ಸ್‌ ಕೇಳುತ್ತೇನೆ. ಈಗಲೂ ನಿನಗೆ ಚಾನ್ಸ್‌ ಕೊಡಬೇಕೇ? ಎನ್ನುತ್ತಾರೆ. ಆದರೆ, ನಾನು ಸಿನಿಮಾ ವಿದ್ಯಾರ್ಥಿ. ನಟನೆ ಮೂಲಕ ಕಲಿಯುತ್ತಲೇ ಇದ್ದೇನೆ ಅಂತಾರೆ ಹೊನ್ನವಳ್ಳಿ ಕೃಷ್ಣ. 

    ವರನಟ ರಾಜ್‌ಕುಮಾರ್, ಅಂಬರೀಷ್‌, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಜಗ್ಗೇಶ್‌ ಸೇರಿದಂತೆ ಹೊಸಪೀಳಿಗೆಯ ಕಲಾವಿದರ ಸಿನಿಮಾಗಳಲ್ಲಿಯೂ ನಟಿಸಿರುವುದು ಅವರ ಹೆಗ್ಗಳಿಕೆ. ಗಜಪತಿ ಗರ್ವಭಂಗ, ಮುತ್ತಣ್ಣ, ಶ್ರತಿ, ಗಣೇಶನ ಮದುವೆ.. ಹೀಗೆ ನೆನಪಿನಲ್ಲುಳಿಯುವ ಪಾತ್ರಗಳಿವೆ. 

    ಪುನೀತ್​ಗೋಸ್ಕರ ಸಹ ನಿರ್ದೇಶನ ಮಾಡುತ್ತಿದೆ. ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದ ನಂತರ ಅದನ್ನು ಬಿಟ್ಟುಬಿಟ್ಟೆ ಎಂದು ನೆನಪಿಸಿಕೊಳ್ಳುವ ಹೊನ್ನವಳ್ಳಿ, 40ಕ್ಕೂ ಹೆಚ್ಚು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿದ್ಧಾರೆ. ಆದರೆ, ನಿರ್ದೇಶನದ ಅವಕಾಶ ಸಿಕ್ಕಿಲ್ಲ.

    ನನಗೆ ಒಂದು ಸಾವಿರ ಸಿನಿಮಾಗಳಲ್ಲಿ ನಟಿಸಿದ್ದೇನೆಂಬ ಅಹಂ ಇಲ್ಲ. ಕಲಾವಿದರಿಗೆ ವೃತ್ತಿಯಲ್ಲಿ ನಯ, ವಿನಯ ಇರಬೇಕು. ಆಗ ಮಾತ್ರವೇ ಉನ್ನತಮಟ್ಟಕ್ಕೇರಲು ಸಾಧ್ಯ. ಅದನ್ನು ನಾನು ರಾಜ್​ರಿಂದ ಕಲಿತೆ ಎಂದು ಸ್ಮರಿಸಿಕೊಳ್ಳುವ ಹೊನ್ನವಳ್ಳಿ ಕೃಷ್ಣ, ಗಾಂಧಿನಗರಕ್ಕೆ ಬಂದಿದ್ದೇ ರಾಜ್ ಅವರನ್ನು ಕಣ್ತುಂಬಾ ನೋಡುವ ಸಲುವಾಗಿ. ಆಮೇಲೆ ಅವರ ಮನೆ ಮಗನಂತೆಯೇ ಆಗಿ ಹೋದರು ಹೊನ್ನವಳ್ಳಿ ಕೃಷ್ಣ.

    45 ವರ್ಷಗಳಿಂದ ಚಿತ್ರರಂಗದಲ್ಲಿರುವ ಹೊನ್ನವಳ್ಳಿ ಕೃಷ್ಣ, ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್, ಲೋಕೇಸ್, ಎಂ.ಪಿ. ಶಂಕರ್ ಹಾಗೂ ಸಿದ್ಧಲಿಂಗಯ್ಯ ಜೋಡಿಯ ಹಳೆಯ ಭೂತಯ್ಯನ ಮಗ ಅಯ್ಯು ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಹೆಸರೊಂದನ್ನು ಹೊರತುಪಡಿಸಿ.

    ಭೂತಯ್ಯನ ಮಗು ಅಯ್ಯು, ಹೊನ್ನವಳ್ಳಿ ಕೃಷ್ಣ ಅವರಿಗೆ ಸ್ಮರಣೀಯ ಚಿತ್ರವಾಗಲಿ.

  • ``ದಯವಿಟ್ಟು ನಿರ್ಧಾರ ವಾಪಸ್ ತೆಗೆದುಕೊಳ್ಳಿ''

    ``ದಯವಿಟ್ಟು ನಿರ್ಧಾರ ವಾಪಸ್ ತೆಗೆದುಕೊಳ್ಳಿ''

    ಯುವರತ್ನ ರಿಲೀಸ್ ಆಗಿ ಎರಡು ದಿನವೂ ಮುಗಿದಿರಲಿಲ್ಲ. ಏಪ್ರಿಲ್ 1ಕ್ಕೆ ಸಿನಿಮಾ ರಿಲೀಸ್ ಆಗಿತ್ತು. ಪ್ರೇಕ್ಷಕರ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ನೋಡಿದವರೇ ಇದು ಪ್ರತಿಯೊಬ್ಬರೂ ತಮ್ಮ ಕುಟುಂಬ, ಮಕ್ಕಳೊಂದಿಗೆ ನೋಡಲೇಬೇಕಾದ ಸಿನಿಮಾ ಎಂದು ಪ್ರಚಾರಕ್ಕಿಳಿದುಬಿಟ್ಟಿದ್ದರು. ಮೌತ್‍ಪೀಸ್ ಕ್ಯಾಂಪೇನ್ ಶುರುವಾಗಿತ್ತು. ಇದನ್ನೆಲ್ಲ ನೋಡಿ ಖುಷಿಯಾದ ಪುನೀತ್ ಮತ್ತು ಸಂತೋಷ್ ಆನಂದರಾಜ್ ಒಟ್ಟಿಗೇ ಫೇಸ್‍ಬುಕ್ ಲೈವ್‍ನಲ್ಲಿ ಕುಳಿತಿದ್ದಾಗಲೇ ದಿಢೀರನೆ ಬರಸಿಡಿಲಿನಂತೆ ಎರಗಿದ ಸುದ್ದಿ ಥಿಯೇಟರುಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ ಎನ್ನುವುದು.

    ಕಟ್ಟಕಡೆಯ ಕ್ಷಣದವರೆಗೂ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದವರಿಗೆ ಲಾಕ್ ಡೌನ್ ಇಲ್ಲ. ಸೆಮಿ ಲಾಕ್ ಡೌನ್ ಇಲ್ಲ. ನೈಟ್ ಕಫ್ರ್ಯೂ ಇಲ್ಲ. ಯಾವುದೇ ನಿರ್ಬಂಧದ ಆದೇಶಗಳೂ ಇಲ್ಲ. ಡೋಂಟ್ ವರಿ ಎಂದೇ ಹೇಳಿಕೊಂಡು ಬಂದಿತ್ತು ಸರ್ಕಾರ. ಸಿಎಂ ಅಧಿಕೃತ ಟ್ವಿಟರ್ ಖಾತೆಯಲ್ಲೂ ಇದೇ ಸಂದೇಶವಿತ್ತು. ಇದೇ ಧೈರ್ಯದ ಮೇಲೆ ರಿಲೀಸ್ ಮಾಡಿದ ಚಿತ್ರಕ್ಕೆ ಸರ್ಕಾರ ಅನಿರೀಕ್ಷಿತ ಪೆಟ್ಟು ಕೊಟ್ಟಿದೆ. ಇದರಿಂದ ಶಾಕ್‍ಗೆ ಒಳಗಾಗಿರುವ ಚಿತ್ರತಂಡ ಸರ್ಕಾರ ತನ್ನ ನಿರ್ಧಾರವನ್ನು ಪುನರ್‍ಪರಿಶೀಲಿಸಬೇಕು ಎಂದು ಮನವಿ ಮಾಡಿದೆ.

    ಮಾರ್ಚ್ 31ರ ರಾತ್ರಿ ಗೊತ್ತಾಗಿದ್ದರೂ ಸಿನಿಮಾ ರಿಲೀಸ್ ಮಾಡ್ತಾ ಇರಲಿಲ್ಲ. ದಯವಿಟ್ಟು ಈ ನಿರ್ಧಾರ ವಾಪಸ್ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ ಪುನೀತ್.

    ಜನ ಎಲ್ಲ ಮುಂಜಾಗ್ರತೆ ವಹಿಸುತ್ತಿದ್ದಾರೆ. ನಿಯಮ ಪಾಲನೆ ಮಾಡುತ್ತಿದ್ದಾರೆ. ಥಿಯೇಟರುಗಳಲ್ಲಿ ಮಾಸ್ಕ್, ಸ್ಯಾನಿಟೈಸೇಷನ್, ಅಂತರ ಎಲ್ಲವನ್ನೂ ಕಾಪಾಡಿಕೊಳ್ಳುತ್ತಿದ್ದೇವೆ. ಸರ್ಕಾರ ದಯವಿಟ್ಟು ಈ 50% ನಿರ್ಬಂಧವನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ ಪುನೀತ್ ರಾಜ್‍ಕುಮಾರ್.

    ನಿರ್ದೇಶಕ ಸಂತೋಷ್ ಆನಂದರಾಮ್, ನಿರ್ಮಾಪಕ ವಿಜಯ್ ಕಿರಗಂದೂರು.. ಅಷ್ಟೇ ಏಕೆ ಚಿತ್ರ ನೋಡಿದ ಪ್ರೇಕ್ಷಕರೂ ಸೇರಿದಂತೆ ಎಲ್ಲರೂ ಇದು ಸರಿಯಾದ ನಿರ್ಧಾರ ಅಲ್ಲ. ದಯವಿಟ್ಟು ಈ ನಿರ್ಬಂಧ ವಾಪಸ್ ಪಡೆಯಿರಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • `ಅಪ್ಪು ಫ್ಯಾಮಿಲಿ ಪ್ಯಾಕ್

    puneeth's next is family man

    ಪುನೀತ್ ಕನ್ನಡ ಚಿತ್ರರಂಗದ ಅಪ್ಪಟ ಫ್ಯಾಮಿಲಿ ಮ್ಯಾನ್. ಅದರಲ್ಲೇನು ಅನುಮಾನವಿಲ್ಲ. ಅವರ ಚಿತ್ರಗಳಿಗೆ ರಿಲೀಸ್ ಆದ ದಿನವೇ ಫ್ಯಾಮಿಲಿ ಪ್ರೇಕ್ಷಕರು ಬರುತ್ತಾರೆ. ಆದರೆ, ಅವರೀಗ ಅಪ್ಪಟ ಫ್ಯಾಮಿಲಿ ಮ್ಯಾನ್ ಆಗುತ್ತಿದ್ದಾರೆ. ಅವರ ನಿರ್ಮಾಣದ ಹೊಸ ಚಿತ್ರದ ಹೆಸರೇ ಫ್ಯಾಮಿಲಿ ಮ್ಯಾನ್.

    ಪಿಆರ್‍ಕೆ ಪ್ರೊಡಕ್ಷನ್ಸ್ ಮೂಲಕ ಹೊಸಬರ ಚಿತ್ರಗಳನ್ನೇ ನಿರ್ಮಿಸುತ್ತ, ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿರುವ ಪುನೀತ್, ಈ ಬಾರಿ ಫ್ಯಾಮಿಲಿ ಮ್ಯಾನ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಸಂಕಷ್ಟಕರ

    ಗಣಪತಿ ಅನ್ನೋ ವಿಭಿನ್ನ ಚಿತ್ರದ ಮೂಲಕ ಗಮನ ಸೆಳೆದಿದ್ದ ಎಸ್.ಅರ್ಜುನ್, ಈ ಚಿತ್ರಕ್ಕೆ ನಿರ್ದೇಶಕ. ಆ ಚಿತ್ರದ ಹೀರೋ ಲಿಖಿತ್ ಶೆಟ್ಟಿಯೇ ಈ ಚಿತ್ರಕ್ಕೂ ಹೀರೋ. ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸುತ್ತಿದ್ದಾರೆ. ಗುರುಕಿರಣ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

     

  • `ರಾಜಕುಮಾರ' ಸೃಷ್ಟಿಕರ್ತರ ಪುನರ್ ಮಿಲನ

    rajakumar team reunites

    ರಾಜಕುಮಾರ, 2017ರ ಸೂಪರ್ ಡ್ಯೂಪರ್ ಹಿಟ್ ಚಿತ್ರ. ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ದಾಖಲೆಗಳನ್ನೆಲ್ಲ ದೂಳೀಪಟ ಮಾಡಿದ ಈ ಸಿನಿಮಾದ ರೂವಾರಿ ನಿರ್ದೇಶಕ ಸಂತೋಷ್ ಆನಂದ್ ರಾಮ್. ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ರಾಜಕುಮಾರ ಪುನೀತ್ ರಾಜ್‍ಕುಮಾರ್. ಈ ಜೋಡಿ ಈಗ ಪುನಃ ಒಂದಾಗುತ್ತಿದೆ.

    ಕಥೆ ಬರೆಯುತ್ತಿದ್ದೇನೆ ಎಂದು ಹೇಳಿದ್ದ ಸಂತೋಷ್ ಆನಂದ್ ರಾಮ್, ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದು, ಅದು ಪುನೀತ್ ರಾಜ್‍ಕುಮಾರ್‍ಗೆ ಇಷ್ಟವಾಗಿದೆ. ಹೊಂಬಾಳೆ ಬ್ಯಾನರ್‍ನಲ್ಲಿಯೇ ಸಿನಿಮಾ ರೆಡಿಯಾಗುತ್ತಿದೆ. ಮಾನವೀಯ ಸಂಬಂಧ, ಮೌಲ್ಯಗಳೇ ಚಿತ್ರದ ಪ್ರಮುಖ ಭಾಗ ಎಂದಿದ್ದಾರೆ ಸಂತೋಷ್ ಆನಂದ್‍ರಾಮ್.

    ರಾಜಕುಮಾರ ಚಿತ್ರದಲ್ಲಿ ವೃದ್ಧರ ಕಣ್ಣೀರ ಕಥೆಯನ್ನು ಪರಿಣಾಮಕಾರಿಯಾಗಿ ಹೇಳಿ, ಸಂದೇಶ ನೀಡಿದ್ದ ಸಂತೋಷ್, ಇಲ್ಲಿ ಯಾವ ಸಂದೇಶ ಕೊಡುತ್ತಾರೆ ಎಂಬ ಕುತೂಹಲವಂತೂ ಖಂಡಿತಾ ಇದೆ. ರಾಜಕುಮಾರ ಚಿತ್ರಕ್ಕಿಂತ ಇದು ದೊಡ್ಡ ದಾಖಲೆ ಸೃಷ್ಟಿಸಲಿದೆ ಎಂಬುದು ನಿರ್ಮಾಪಕ ವಿಜಯ್ ಕಿರಗಂದೂರು ನಿರೀಕ್ಷೆ.

  • 'Kannadada Kotyadipathi' on June 22nd

    kannada kotyadipathi on june 23rd

    The hugely popular reality programme 'Kannadada Kotyadipathi' is all set to be launched in the Colors Kannada channel from the 22nd of June. The programme will be aired in the channel on Saturday and Sundays at 8 PM.

    'Kannadada Kotyadipathi' was launched seven years back in Suvarna and the first two seasons were hosted by Puneeth Rajakumar. However, the third edition was hosted by Ramesh Aravind. Now Puneeth is back to host the show once again after a gap of five years.

    'Kannadada Kotyadipathi' is adapted from the iconic global format 'Who Wants To Be A Millionaire'.

  • 'Kavalu Daari' Audio Release On March 5th

    kavalu daari audio release on march 5th

    Rishi starrer 'Kavalu Daari' is complete and the film is likely to be released in the end of March. Meanwhile, the audio release is scheduled on the 05th of March. The songs of the film is being released through PRK Audio.

    'Kavalu Daari' is a thriller and is being directed by Hemanth Rao of 'Godhi Banna Sadharana Maikattu' fame. Hemanth  himself has written the story and screenplay for the film. Ananth Nag, Avinash, Achyuth Kumar, Suman Ranganath plays prominent roles in the film.

    The film is being produced by Ashwini Puneeth Rajakumar under the PRK Productions banner. Charan Raj is the music director, while Advaitha Gurumurthy is the cameraman.

  • 'Kavalu Daari' Audio Released

    kavaludaari audio released

    The first song of Rishi starrer 'Kavalu Daari' sung by Sanchith Hegde was released on Monday evening. Puneeth Rajakumar, Raghavendra Rajakumar, Ananth Nag, music composer Charan Raj and others were present at the occasion.

    The songs of the film is being released through PRK Audio and the rest of four songs will be released on every Monday from next week onwards. 

    'Kavalu Daari' is a thriller and is being directed by Hemanth Rao of 'Godhi Banna Sadharana Maikattu' fame. Rishi, Ananth Nag, Avinash, Achyuth Kumar, Suman Ranganath plays prominent roles in the film. The film is being produced by Ashwini Puneeth Rajakumar under the PRK Productions banner.

  • 'Kavalu Daari' To Release In USA From April 18th OnWards

    kavaludari to release in usa

    PRK Productions first production 'Kavalu Daari' was released last week across Karnataka. Now the film is all set to release across America from April 18th on wards. The film is being released in 60 plus locations by Weekend Cinema.

    'Kavalu Daari' is a thriller and is directed by Hemanth Rao of 'Godhi Banna Sadharana Maikattu' fame. He himself has scripted the film apart from directing it. The film is produced by Ashwini Puneeth Rajakumar under the PRK Productions banner. Charan Raj is the music director, while Advaitha Gurumurthy is the cinematographer.

    Rishi, Ananth Nag, Avinash, Achyuth Kumar, Suman Ranganath plays prominent roles in the film. 

  • 'Kavalu Daari' Trailer Released

    kavalu daari trailer released

    PRK Productions first production 'Kavalu Daari' is all set to release on the 12th of April. Meanwhile, the trailer of the film was released on Thursday and the trailer is getting good response all over.

    'Kavalu Daari' is a thriller and is being directed by Hemanth Rao of 'Godhi Banna Sadharana Maikattu' fame. He himself has scripted the film apart from directing it. The film is being produced by Ashwini Puneeth Rajakumar under the PRK Productions banner. Charan Raj is the music director, while Advaitha Gurumurthy is the cinematographer.

    Rishi, Ananth Nag, Avinash, Achyuth Kumar, Suman Ranganath plays prominent roles in the film. 

  • 'Maya Bazaar 2016' Launched

    maya bazar launched

    Puneeth Rajakumar's second film as a producer, 'Maya Bazaar 2016' was launched at Kanteerava Studios in Bangalore. Shivarajakumar came over as a chief guest and sounded the clap for the first shot of the film.

    'Maya Bazaar 2016' is written and directed by debutante Radhakrishna and produced by Ashwini Puneeth Rajakumar and M Govindu jointly. The film stars Vasishta Simha, Raj B Shetty, Prakash Rai, Achyuth Kumar, Sadhu Kokila and others.

    As the title itself suggests, the film is set in the year 2016 and the film is said to be an out and out entertainer. Mithun Mukundan is the music director, while Abhishek Kasaragod is the cameraman.

  • 'Maya Bazaar 2016' Teaser Release in Qatar

    maya bazar 2016 teaser release in qtar

    The shooting of Puneeth Rajakumar's second film as a producer, 'Maya Bazaar 2016' is complete and the teaser is all set to be released on November 15th.

    The teaser of the film will be launched by Puneeth himself a Karnataka Sangha in Qatar. Puneeth will be in Qatar on November 15th to attend the Rajyotsava function in Qatar. He will be releasing the teaser in the same function.

    'Maya Bazaar 2016' is written and directed by debutante Radhakrishna and produced by Ashwini Puneeth Rajakumar and M Govindu jointly. The film stars Vasishta Simha, Raj B Shetty, Prakash Rai, Achyuth Kumar, Sadhu Kokila and others. Mithun Mukundan is the music director, while Abhishek Kasaragod is the cameraman.

  • 'Natasarvabhowma' On October 5th

    natasarvabhouma on oct 5th

    Puneeth Rajakumar's new film 'Natasarvabhowa' being directed by Pavan Wodeyar is all set to be released on the 05th of October during the Dasara season.

    'Natasarvabhowma'  is being produced by Rockline Venkatesh and 50 percent of the shooting for the film has been completed. Currently, the shooting for the film is being held at Badami and the makers plan to complete the film soon and release the film on the 05th of October.

    Pawan Wodeyar himself has written the story, screenplay and dialogues apart from directing the film. Vaidhi is the cameraman, while D Imaan is the music director. Chikkanna, Ravishankar, Achyuth Kumar, B Saroja Devi and others in prominent roles. Actress Rachita Ram has been roped in as the heroine of the film.

     

  • 'Yuvaratna' and 'James' poster for Puneeth's birthday

    yuvaratna and james poster for ouneeth's birthday

    Puneeth Rajakumar will be celebrating his 44th birthday today and on the occasion of his birthday, the posters of his new films 'Yuvaratna' and 'James' will be released on Sunday.

    The shooting for Santhosh Anandaram's directorial, 'Yuvaratna' is in full progress and Santhosh had planned to release the teaser of the film on Puneeth's birthday. However, due to to various reasons, the teaser got delayed and Santhosh is releasing the first look poster of the film.

    Apart from that, Chethan Kumar who is directing Puneeth in 'James' will be releasing the motion poster of the film.