` sharan - chitraloka.com | Kannada Movie News, Reviews | Image

sharan

 • ಚುಟು ಚುಟು ಸೃಷ್ಟಿಸಿದ ವಿನೂತನ ದಾಖಲೆ

  Raambo 2 image

  ಚುಟು ಚುಟು ಅಂತೈತಿ.. ಮಾವಾ.. ಚುಮು ಚುಮು ಆಗತೈತಿ.. ರ್ಯಾಂಬೋ 2 ಚಿತ್ರದ ಈ ಹಾಡು ಇವತ್ತಿಗೂ ಕ್ರೇಜ್ ಉಳಿಸಿಕೊಂಡಿದೆ. ಶರಣ್, ಅಶಿಕಾ ರಂಗನಾಥ್ ಅಭಿನಯದ ರ್ಯಾಂಬೋ 2, 2018ರ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. 2018ರ ಮಾರ್ಚ್ 21ರಂದು ಯೂಟ್ಯೂಬ್‍ನಲ್ಲಿ ರಿಲೀಸ್ ಆಗಿದ್ದ ಹಾಡು ಹೊಸ ದಾಖಲೆಯನ್ನೇ ಬರೆದುಬಿಟ್ಟಿದೆ.

  ಅರ್ಜುನ್ ಜನ್ಯ ಕಂಪೋಸ್ ಮಾಡಿದ್ದ ಹಾಡಿಗೆ ಸಾಹಿತ್ಯ ಬರೆದಿದ್ದವರು ಶಿವು ಬೇವರ್ಗಿ. ರವೀಂದ್ರ ಸೊರಗಾವಿ, ಶಮಿತಾ ಮಲ್ನಾಡ್ ಹಾಡಿದ್ದ ಹಾಡಿಗೆ ಶರಣ್, ಅಶಿಕಾ ಸಖತ್ತಾಗಿ ಕುಣಿದಿದ್ದರು.

  ಆನಂದ್ ಆಡಿಯೋ ಮೂಲಕ ರಿಲೀಸ್ ಆಗಿದ್ದ ಸಿನಿಮಾದ ಆಡಿಯೋ ಯೂಟ್ಯೂಬ್‍ನಲ್ಲಿ 100 ಮಿಲಿಯನ್ ವೀಕ್ಷಣೆ  ದಾಟಿದೆ. ಇದು ಕನ್ನಡದಲ್ಲೇ ಅಪರೂಪದ ದಾಖಲೆ. ಈ ದಾಖಲೆ ಬರೆದ ಮೊದಲ ಕನ್ನಡದ ಹಾಡು ಎಂಬ ದಾಖಲೆಗೆ ಚುಟು ಚುಟು ಪಾತ್ರವಾಗಿದೆ. ಅನಿಲ್ ಕುಮಾರ್ ನಿರ್ದೇಶನದ ರ್ಯಾಂಬೋ 2 ಚಿತ್ರ ಶರಣ್ ಸೇರಿದಂತೆ ತಂತ್ರಜ್ಞರೇ ಒಟ್ಟು ಸೇರಿ ನಿರ್ಮಾಣ ಮಾಡಿದ್ದ ಸಿನಿಮಾ.

 • ದಸರಾದಲ್ಲಿ ಅಮೆರಿಕ ಅಧ್ಯಕ್ಷನದ್ದೇ ಜಂಬೂ ಸವಾರಿ

  adhyaksha's jamboo savari in dasara

  ಅಮೆರಿಕ ಅಧ್ಯಕ್ಷರು ದಸರಾಗೆ ಬರುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅಂದ್ಕೊಬೇಡಿ. ಈ ಅಧ್ಯಕ್ಷರು ಇಲ್ಲಿಯವರೇ.. ಅಮೆರಿಕಕ್ಕೆ ಹೋಗಿ, ಈಗ ಬರುತ್ತಿದ್ದಾರೆ. ಶರಣ್ ಅಭಿನಯದ ಅಧ್ಯಕ್ಷ ಇನ್ ಅಮೆರಿಕ ರಿಲೀಸ್ ಆಗುತ್ತಿರುವುದು ಅಕ್ಟೋಬರ್ 2ಕ್ಕೆ.

  ಶರಣ್ ಜೊತೆ ಇದೇ ಮೊದಲ ಬಾರಿಗೆ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದರೆ, ಯೋಗಾನಂದ್ ಮದ್ದಾನ್ ನಿರ್ದೇಶನ ಮಾಡಿದ್ದಾರೆ.

  ಯೋಗಾನಂದ್ ಮೂಲತಃ ರಂಗಭೂಮಿಯವರು. ನಾಟಕಗಳನ್ನು ಸ್ಟೇಜ್ ಮೇಲೆ ಆಡಿಸುವುದು ಅಚ್ಚುಮೆಚ್ಚು. ಅಲ್ಲಿಂದ ಟಿವಿ ಲೋಕಕ್ಕೆ ಎಂಟ್ರಿ ಕೊಟ್ಟರೂ, ಅಲ್ಲಿನ ಟಿಆರ್‍ಪಿಗಾಗಿ ಹೋರಾಟ ಉತ್ಸಾಹವನ್ನು ಕುಗ್ಗಿಸಿತ್ತು. ಅದೇ ಸಮಯದಲ್ಲಿ ಬಿರುಗಾಳಿ ಚಿತ್ರಕ್ಕೆ ಕೊರಿಯೋಗ್ರಫಿ ಡೈರೆಕ್ಟರ್ ಆಗುವ ಅವಕಾಶ ಬಂತು. ಅಲ್ಲಿಂದ ಯೋಗಾನಂದ್ ಹಣೆಬರಹ ಬದಲಾಯ್ತು.

  ನಿರ್ದೇಶಕ ಹರ್ಷ ಅವರಿಗೆ ಯೋಗಾನಂದ್ ಅವರ ಸಾಹಿತ್ಯ, ಬರವಣಿಗೆ ಇಷ್ಟವಾಯ್ತು. ಅಲ್ಲಿಂದ ಮುಂದೆ ಅವರ ಜೊತೆಯಲ್ಲೇ ಅಸಿಸ್ಟೆಂಟ್ ಡೈರೆಕ್ಟರ್ ಆದ ಯೋಗಾನಂದ್, ಸಂಭಾಷಣೆಕಾರರಾಗಿಯೇ ಗುರುತಿಸಿಕೊಂಡರು. ಇದರ ನಡುವೆಯೇ ನಿರ್ದೇಶಕರಾಗಲು ಸಿದ್ಧರಾಗುತ್ತಿದ್ದರು. ರ್ಯಾಂಬೋ ಚಿತ್ರಕ್ಕೆ ಡೈಲಾಗ್ ಬರೆಯುವ ಆಫರ್ ಬಂದರೂ ಮಾಡೋಕೆ ಆಗಿರಲಿಲ್ಲ. ಮತ್ತೊಮ್ಮೆ ನಿರ್ದೇಶನಕ್ಕೇ ಅವಕಾಶ ಬಂದಾಗ ನಾನು ಧರ್ಮಸ್ಥಳದಲ್ಲಿದ್ದೆ. ಇದು ಮಂಜುನಾಥನ ಆಶೀರ್ವಾದವೇ ಇರಬೇಕು ಎಂದು ಒಪ್ಪಿಕೊಂಡೆ ಎನ್ನುತ್ತಾರೆ ಯೋಗಾನಂದ್.

 • ನಗ್ತಾ ನಗಿಸ್ತಾ ಹೆದರಿಸ್ತಾನೆ ಅವತಾರ್ ಪುರುಷ

  avatara purusha is a horror comedy

  ಶರಣ್, ಅಶಿಕಾ ರಂಗನಾಥ್, ಸಿಂಪಲ್ ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಸಿನಿಮಾ ಅವತಾರ್ ಪುರುಷ. ಶರಣ್ ಇರುವ ಕಾರಣಕ್ಕೆ ಇದು ಕಾಮಿಡಿ ಸಿನಿಮಾ ಎನ್ನುವುದಕ್ಕೆ ನೋ ಪ್ರಾಬ್ಲಂ. ಆದರೆ, ಈ ಕಾಮಿಡಿ ಜೊತೆ ಜೊತೆಯಲ್ಲೇ ಹಾರರ್ ಕೂಡಾ ಇದೆಯಂತೆ.

  ಆಪ್ತಮಿತ್ರ ಶೈಲಿಯ ಹಾರರ್ ಅಂಶಗಳೂ ಚಿತ್ರದ ಕಥೆಯಲ್ಲಿವೆ ಎಂದಿರುವ ಸುನಿ, ಇದನ್ನು ಹಾರರ್ ಕಾಮಿಡಿ ಎಂದೇ ಕರೆದಿದ್ದಾರೆ. ಸುಧಾರಾಣಿ, ಸಾಯಿಕುಮಾರ್ ಕೂಡಾ ಚಿತ್ರದ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಕ್ಟೋಬರ್‍ನಲ್ಲಿ ರಿಲೀಸ್ ಆಗಲಿರುವ ಅವತಾರ್ ಪುರುಷ, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ, ಥ್ರಿಲ್ ಕೊಡ್ತಾನೆ ಅನ್ನೋದು ಪುಷ್ಕರ್ ಭರವಸೆ. 

 • ಪ್ರೇಕ್ಷಕ ನಕ್ಕುಬಿಟ್ಟ.. ಅಧ್ಯಕ್ಷ ಮತ್ತೆ ಗೆದ್ದುಬಿಟ್ಟ..!

  adhyaksha in america producer feels happy

  ಅಧ್ಯಕ್ಷ ಇನ್ ಅಮೆರಿಕ ಗೆದ್ದಿದ್ದಾರೆ. ಸತತ 2 ಗಂಟೆಯ ನಿರಂತರ ಕಾಮಿಡಿಗೆ ಪ್ರೇಕ್ಷಕರು ನಕ್ಕಿದ್ದಾರೆ. ಶರಣ್-ರಾಗಿಣಿ ಜೋಡಿ ಮೋಡಿ ಮಾಡಿದ್ದರೆ, ನಿರ್ದೇಶಕ ಯೋಗಾನಂದ್ ಚೊಚ್ಚಲ ಪ್ರಯತ್ನದಲ್ಲೇ ಬೌಂಡರಿ ಬಾರಿಸಿದ್ದಾರೆ. ನಿರ್ಮಾಪಕ ವಿಶ್ವಪ್ರಸಾದ್ ಅವರ ಖುಷಿಯೇ ಬೇರೆ. ಖಜಾನೆ ತುಂಬಿದೆ. ಯೆಸ್, ಅಧ್ಯಕ್ಷ ಗೆದ್ದಿದ್ದಾನೆ.

  ಇದು ಮಲಯಾಳಂನ 2 ಕಂಟ್ರಿಸ್ ಚಿತ್ರದ ರೀಮೇಕ್. ಮಲಯಾಳಂನ ಸಿನಿಮಾ ತೆಲುಗಿಗೂ ರೀಮೇಕ್ ಆಗಿತ್ತು.  ಈಗ ಕನ್ನಡದಲ್ಲಿ ನಾನೇ ಸಿನಿಮಾ ಮಾಡಿ ಗೆದ್ದಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ ನಿರ್ಮಾಪಕ ವಿಶ್ವಪ್ರಸಾದ್.

  ಪ್ರೇಕ್ಷಕರ ನಗು ಚಪ್ಪಾಳೆ ಸಹಜವಾಗಿಯೇ ಶರಣ್, ರಾಗಿಣಿ, ಯೋಗಾನಂದ್ ಮುದ್ದಾನ್ ಅವರಿಗೆ ಖುಷಿ ಕೊಡುತ್ತೆ. ನಿರ್ಮಾಪಕರು ಕೂಡಾ ನಕ್ಕುಬಿಟ್ಟರೆ.. ಅದಕ್ಕಿಂತ ಖುಷಿ ಇನ್ನೇನಿದೆ.

 • ಬಾಕ್ಸಾಫೀಸ್‍ನಲ್ಲಿ ಚುಟುಚುಟು ಅಂತೈತಿ..

  rambo 2 rocks at box office

  ಶರಣ್ ಅಭಿನಯದ ರ್ಯಾಂಬೋ 2 ಸಿನಿಮಾ ಬಾಕ್ಸ್‍ಆಫೀಸ್‍ನಲ್ಲಿ ಚುಟುಚುಟು ಅಂತಿದೆ. ಹಾಡಿನಷ್ಟೇ ಮೋಡಿ ಮಾಡಿರೋದು ಸಿನಿಮಾ. ಥಿಯೇಟರುಗಳಲ್ಲಿ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ವಾರದಲ್ಲೇ 5 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆಯಂತೆ. 

  ರ್ಯಾಂಬೋದಂತೆಯೇ ರ್ಯಾಂಬೋ 2 ಕೂಡಾ ಭರ್ಜರಿ ಸದ್ದು ಮಾಡುತ್ತಿದೆ.

  ಹೀಗೆ ರಾಜ್ಯಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿರುವಾಗಲೇ ರ್ಯಾಂಬೋ 2, ಅಮೆರಿಕ, ಆಸ್ಟ್ರೇಲಿಯಾದಲ್ಲಿ ರಿಲೀಸ್ ಆಗುತ್ತಿದೆ. ಜೂನ್ 2ರಂದು ವಿದೇಶದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ, ಈ ವರ್ಷದ ಬಿಗ್ ಹಿಟ್ ಆಗುವ ಎಲ್ಲ ಸೂಚನೆಗಳೂ ಇವೆ. 

  ಶರಣ್, ಅಶಿಕಾ ರಂಗನಾಥ್ ನಟಿಸಿರುವ ಚಿತ್ರ, ತಂತ್ರಜ್ಞರೇ ನಿರ್ಮಿಸಿರುವ ಸಿನಿಮಾ. ಶರಣ್, ಚಿಕ್ಕಣ್ಣ, ಅಟ್ಲಾಂಟ ನಾಗೇಂದ್ರ, ಅರ್ಜುನ್ ಜನ್ಯ ಸೇರಿದಂತೆ ಹಲವರು ನಿರ್ಮಾಪಕರಾಗಿರುವ ಚಿತ್ರ ರ್ಯಾಂಬೋ2. ಈ ಇಡೀ ತಂಡವನ್ನು ಒಗ್ಗೂಡಿಸಿರುವುದು ತರುಣ್ ಸುಧೀರ್. ತಂತ್ರಜ್ಞರ ಚಿತ್ರದ ಅದ್ಬುತ ಗೆಲುವು, ಚಿತ್ರರಂಗದ ಉತ್ಸಾಹ ಹೆಚ್ಚಿಸಿರೋದು ಸುಳ್ಳಲ್ಲ.

 • ಮತ್ತೆ ಬಂದ ರಾಂಬೋ

  rambo 2 coming soon

  ಶರಣ್ ಮತ್ತೊಮ್ಮೆ ರಾಂಬೋ ಆಗಿದ್ದಾರೆ. ಎರಡನೇ ಬಾರಿ ನಾಯಕರಾದಾಗ ಶರಣ್‍ಗೆ ಅದ್ಭುತ ಸಕ್ಸಸ್ ನೀಡಿದ್ದ ಚಿತ್ರ ರಾಂಬೋ. ಬಾಕ್ಸಾಫೀಸ್‍ನಲ್ಲೂ ದಾಖಲೆ ಬರೆದಿತ್ತು. ಈಗ ಅದೇ ರಾಂಬೋ ಟೈಟಲ್ ಇಟ್ಟುಕೊಂಡು ರ್ಯಾಂಬೋ-2 ಸಿನಿಮಾ ನಿರ್ಮಿಸಿದ್ದಾರೆ ಶರಣ್.

  ರಾಂಬೋ ಚಿತ್ರದಲ್ಲಿ ಕಾರು ಮತ್ತು ಹಂದಿ ಪ್ರಮುಖ ಪಾತ್ರದಲ್ಲಿದ್ದವು. ಈ ಚಿತ್ರದ ಫಸ್ಟ್‍ಲುಕ್ ನೋಡಿದರೆ, ಈ ಚಿತ್ರದಲ್ಲೂ ಕಾರು ಪ್ರಮುಖ ಪಾತ್ರವಾಗುವ ನಿರೀಕ್ಷೆ ಇದೆ. ಲಡ್ಡು ಬ್ಯಾನರ್‍ನಲ್ಲಿ ರೆಡಿಯಾಗಿರುವ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವುದು ಅನಿಲ್‍ಕುಮಾರ್. ರಾಂಬೋ ಚಿತ್ರಕ್ಕೆ ಹಣ ಹೂಡಿದ್ದವರೆಲ್ಲ ಮತ್ತೆ ಈ ಸಿನಿಮಾ ಮೂಲಕ ಒಂದಾಗಿರುವುದು ಚಿತ್ರದ ವಿಶೇಷ.

  ಕೆಲವೇ ದಿನಗಳಲ್ಲಿ ಚಿತ್ರ ಫೈನಲ್ ಹಂತ ತಲಲುಪಲಿದೆ. ನಗೋಕೆ ರೆಡಿಯಾಗಿ.

 • ಲೇಡಿಸ್ ಟೈಲರ್ ಶರಣ್

  sharan is ladies tailor

  ನಟ ಶರಣ್ ಲೇಡಿಸ್ ಟೈಲರ್ ಆಗುತ್ತಿದ್ದಾರೆ. ಸಿದ್ಲಿಂಗು,  ನೀರ್‍ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ಸಿನಿಮಾ ಲೇಡಿಸ್ ಟೈಲರ್. ಆರಂಭದಲ್ಲಿ ಚಿತ್ರಕ್ಕೆ ರವಿಶಂಕರ್ ಗೌಡ ಹೀರೋ ಆಗಿದ್ದರು. ನಂತರ ಬದಲಾಗಿ ಜಗ್ಗೇಶ್ ಹೆಸರು ಕೇಳಿಬಂದಿತ್ತು. ಮತ್ತೊಮ್ಮೆ ನೀನಾಸಂ ಸತೀಶ್ ಹೆಸರು ಕೇಳಿಬಂತು. ಮಗದೊಮ್ಮೆ.. ರವಿಶಂಕರ್ ಗೌಡ ಹೆಸರೇ ಬಂತು. ಈಗ ಶರಣ್ ಹೆಸರು ಪ್ರಸ್ತಾಪವಾಗಿದೆ.

  ಚಿತ್ರದ ಬಜೆಟ್ ಹೆಚ್ಚಾಗಿರುವ ಕಾರಣ, ಸ್ಟಾರ್‍ನಟರೇ ಇರಲಿ ಎಂಬ ಕಾರಣಕ್ಕೆ ಶರಣ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುತ್ತಿದೆ ಚಿತ್ರತಂಡ. ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.

  Related Articles :-

  Sharan Is The New 'Ladies Tailor'

 • ಶರಣ್ ಡಬಲ್ ಹ್ಯಾಟ್ರಿಕ್ ಸೀಕ್ವೆಲ್ ಸೀಕ್ರೆಟ್

  sharan's double hattrick secret

  100 ಚಿತ್ರಗಳಲ್ಲಿ ಕಾಮಿಡಿಯನ್ ಆಗಿದ್ದ ನಟ ಹೀರೋ ಆಗಿದ್ದು 101ನೇ ಚಿತ್ರದಲ್ಲಿ. ಸದ್ಯಕ್ಕೆ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಸಕ್ಸಸ್ಸಿನಲ್ಲಿ ತೇಲುತ್ತಿರುವ ಶರಣ್ ಅವರ ಸೀಕ್ವೆಲ್ ಸೀಕ್ರೆಟ್ ಇದು.

  ಶರಣ್ ಹೀರೋ ಆಗಿ ನಟಿಸಿದ ಚಿತ್ರ ರ್ಯಾಂಬೋ ದೊಡ್ಡ ಸಕ್ಸಸ್ ಕೊಟ್ಟಿತು. ಅದಾದ ನಂತರ ಬಂದ ಸಿನಿಮಾ ವಿಕ್ಟರಿ. ಮತ್ತೆ ಹಿಟ್. ತದನಂತರ ಬಂದಿದ್ದು ಅಧ್ಯಕ್ಷ. ಅದೂ ಸೂಪರ್ ಹಿಟ್. ಅದು ಶರಣ್ ಹೀರೋ ಜರ್ನಿಯ ಮೊದಲ ಹ್ಯಾಟ್ರಿಕ್. ಈಗ ಮತ್ತೊಮ್ಮೆ ಹ್ಯಾಟ್ರಿಕ್ ಸಾಧಿಸಿದ್ದಾರೆ. ಅದೂ ಸೀಕ್ವೆಲ್‍ಗಳಲ್ಲಿ. ಅಲ್ಲೂ ಒಂದು ಸ್ಪೆಷಾಲಿಟಿ ಇದೆ.

  ಶರಣ್ ಡಬಲ್ ಹ್ಯಾಟ್ರಿಕ್ ಜರ್ನಿ ಶುರುವಾಗಿದ್ದು ರ್ಯಾಂಬೋ-2ನಿಂದ. ಅದಾದ ನಂತರ ವಿಕ್ಟರಿ-2 ಹಿಟ್ ಆಯ್ತು. ಈಗ.. ಅಧ್ಯಕ್ಷ ಇನ್ ಅಮೆರಿಕ ಕೂಡಾ ಹಿಟ್. ಸೀಕ್ವೆಲ್‍ನಲ್ಲೂ ಹ್ಯಾಟ್ರಿಕ್ ಸಾಧಿಸಿದ ಮೊದಲ ಹೀರೋ ಶರಣ್ ಅವರೇ ಇರಬೇಕು.

 • ಶರಣ್'ಗೆ ಲಡ್ಡೂ ಬಂದು ಬಾಯಿಗೆ ಬಿದ್ದ ಕಥೆ..!

  sweet story behind laddu banner

  ಲಡ್ಡೂ ಅಂದ್ರೆ ಎಲ್ಲರಿಗೂ ನೆನಪಾಗೋದು ಸಿಹಿ ಸಿಹಿ ಬೂಂದಿಯಿರೋ ಲಡ್ಡುನೇ. ಚೋಟಾ ಭೀಮ್ ನೋಡೊ ಮಕ್ಕಳಿಗೆ ಲಡ್ಡು ಎಂದರೆ ಶಕ್ತಿಮದ್ದು. ಆದರೆ ಶರಣ್ ಮತ್ತವರ ಕೆಲವು ಗೆಳೆಯರ ಪಾಲಿಗೆ ಲಡ್ಡು ಎಂದರೆ, ಲೈಫ್ ಟರ್ನಿಂಗ್ ಪಾಯಿಂಟ್.

  ಲಡ್ಡೂ ಸಿನಿಮಾ ಬ್ಯಾನರ್ ಹುಟ್ಟಿಕೊಂಡಿದ್ದು ರ್ಯಾಂಬೋ ಚಿತ್ರಕ್ಕೆ. ಅದು ಶರಣ್ ಅಭಿನಯದ 100ನೇ ಸಿನಿಮಾ. ಅದಕ್ಕೂ ಮುನ್ನ ಹೀರೋ ಆಗಿದ್ದರೂ, ಸಕ್ಸಸ್ ಸಿಕ್ಕಿರಲಿಲ್ಲ. ರ್ಯಾಂಬೋ ಯಶಸ್ಸು ಕೊಟ್ಟಿದ್ದಷ್ಟೇ, ಶರಣ್‍ಗೆ ಸ್ಟಾರ್ ಪಟ್ಟವನ್ನೂ ಕೊಟ್ಟಿತು.

  ನಮ್ಮ ಬ್ಯಾನರ್‍ಗೆ ಲಡ್ಡೂ ಅನ್ನೋ ಹೆಸರು ಕೊಟ್ಟವರು ತರುಣ್ ಸುಧೀರ್. ಆ ಬ್ಯಾನರ್ ಕಟ್ಟುವಾಗ ನನ್ನ ಜೊತೆ ತರುಣ್, ನಾಗೇಂದ್ರ, ಅರ್ಜುನ್ ಜನ್ಯ, ಪ್ರಕಾಶ್, ಮೋಹನ್ ಬಿ.ಕೆರೆ ಎಲ್ಲರೂ ಇದ್ದರು ಎಂದು ನೆನಪಿಸಿಕೊಳ್ಳೋ ಶರಣ್, ರ್ಯಾಂಬೋ 3 ಪ್ಲಾನ್‍ನಲ್ಲಿದ್ದಾರೆ.

  ಲಡ್ಡೂ ಅನ್ನೋದು ನಮ್ಮ ಮನೆ ದೇವರು ತಿರುಪತಿ ವೆಂಕಟೇಶ್ವರನ ಮಹಾಪ್ರಸಾದ. ಲಡ್ಡೂ ಅನ್ನೋದು ನಮ್ಮ ಮಗನ ಮುದ್ದಿನ ಹೆಸರು. ಲಡ್ಡೂ ಬ್ಯಾನರ್ ಸಿನಿಮಾ ಎಂದರೆ ಈ ಕ್ಷಣವೇ ಎಲ್ಲರೂ ಒಂದಾಗ್ತಾರೆ ಎನ್ನುವ ಶರಣ್, ರ್ಯಾಂಬೋ 3ಗೆ ಒಳ್ಳೆಯ ಕಥೆ ಸಿಕ್ಕರೆ ಅದನ್ನು ಲಡ್ಡೂ ಬ್ಯಾನರ್‍ನಲ್ಲೇ ಮಾಡುತ್ತೇವೆ ಎನ್ನುತ್ತಾರೆ.

  ಸದ್ಯಕ್ಕೆ ಶರಣ್, ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್‍ನಲ್ಲಿ ತಯಾರಾಗ್ತಿರೋ ಅವತಾರ್ ಪುರುಷ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಅಲ್ಲಿ ಶರಣ್ ಜೊತೆ ಅಶಿಕಾ ರಂಗನಾಥ್ ಜೋಡಿಯಾದರೆ, ಸ್ಪೆಷಲ್ ಕ್ಯಾರೆಕ್ಟರ್ ಆಗಿ ಬರುತ್ತಿರೋದು ಶ್ರೀನಗರ ಕಿಟ್ಟಿ.

 • ಸಿಂಪಲ್ಲಾಗೇ ಶುರುವಾಯ್ತು ಅವತಾರ್ ಪುರುಷ

  avatara pirisha launched

  ಸಿಂಪಲ್ ಸುನಿ ನಿರ್ದೇಶನ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ, ಶರಣ್-ಅಶಿಕಾ ರಂಗನಾಥ್ ಎಂಬ ಚುಟು ಚುಟು ಜೋಡಿಯ ಸಮ್ಮಿಶ್ರಣದ ಸಿನಿಮಾ ಅವತಾರ್ ಪುರುಷ ಚಿತ್ರ ಸಿಂಪಲ್ಲಾಗಿಯೇ ಶುರುವಾಗಿದೆ. ಬೆಂಗಳೂರಿನ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.

  ಮಹಾಭಾರತದ ಎಳೆಯೊಂದನ್ನು ಆಧರಿಸಿ, ಚಿತ್ರದ ಕಥೆ ಮಾಡಲಾಗಿದೆಯಂತೆ. ಇಡೀ ಚಿತ್ರ ಕಾಮಿಡಿ ಮಯ ಎಂಬ ಮಾಹಿತಿ ಇದೆ. ಅವತಾರ್ ಪುರುಷನ ಅವತಾರ ನೋಡೋಕೆ ರೆಡಿಯಾಗಿ.

 • ಹೊಸ ಮನೆಗೆ ಶರಣ್ ಗೃಹ ಪ್ರವೇಶ

  sharan with his wife

  ಕನ್ನಡದ ಕಾಮಿಡಿ ಕಿಂಗ್ ಆದ ಶರಣ್, ಹೊಸ ಮನೆ ಕಟ್ಟಿಸಿದ್ದಾರೆ. ನಾಗರಭಾವಿಯಲ್ಲಿ ಹೊಸ ಮನೆ ಕಟ್ಟಿಸಿ, ಗೃಹ ಪ್ರವೇಶವನ್ನೂ ಮಾಡಿದ್ದಾರೆ. ಮಡದಿ, ಮಕ್ಕಳು, ಪೋಷಕರ ಜೊತೆ ಹೊಸ ಮನೆಯ ಗೃಹ ಪ್ರವೇಶ ಶಾಸ್ತ್ರಗಳನ್ನು ಮುಗಿಸಿ ಹೊಸ ಮನೆಗೆ ಬಲಗಾಲಿಟ್ಟಿದ್ದಾರೆ.

  ಶರಣ್ ಮನೆ ಗೃಹ ಪ್ರವೇಶದಲ್ಲಿ ತಂಗಿ ಶೃತಿ ಸಡಗರದಿಂದ ಓಡಾಡುತ್ತಿದ್ದರೆ, ಸ್ಯಾಂಡಲ್‍ವುಡ್ ತಾರೆಯರು ಬಂದು ಶರಣ್‍ಗೆ ಶುಭ ಹಾರೈಸಿದ್ರು.k

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery