` meghana raj - chitraloka.com | Kannada Movie News, Reviews | Image

meghana raj

 • ಮೇಘನಾ-ಚಿರುಗೆ ಎರಡೆರಡು ಮದುವೆ..! 

  chiranjeeivi meghana raj to tie knot in two traditions

  ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಸಪ್ತಪದಿ ತುಳಿಯುತ್ತಿದ್ದಾರೆ. ಮದುವೆ ಇರೋದು ಮೇ 2ನೇ ತಾರೀಕು. ಮೇಘನಾ ಅವರ ತಂದೆ ಸುಂದರ್ ರಾಜ್ ಹಿಂದೂ. ತಾಯಿ ಪ್ರಮೀಳಾ ಜೋಷಾಯ್ ಕ್ಯಾಥೊಲಿಕ್ ಕ್ರಿಶ್ಚಿಯನ್. ಹೀಗಾಗಿ ಎರಡೂ ಸಂಪ್ರದಾಯಗಳಲ್ಲಿ ಮದುವೆ ನಡೆಯಲಿದೆ.

  ಮೇಘನಾ ಮನೆಯಲ್ಲಿ ಈಗಾಗಲೇ ಅರಿಶಿಣ ಮತ್ತು ಚಪ್ಪರ ಶಾಸ್ತ್ರ ಮುಗಿದಿದೆ. ನಾಳೆ ಅಂದರೆ 27ನೇ ತಾರೀಕು ಚಿರಂಜೀವಿ ಸರ್ಜಾ ಮನೆಯಲ್ಲಿ ಚಪ್ಪರ ಶಾಸ್ತ್ರ. ಇದಾದ ಮೇಲೆ ಮದುವೆ.

  ಏಪ್ರಿಲ್ 29ನೇ ತಾರೀಕು ಅಂದ್ರೆ ಭಾನುವಾರ ಕೋರಮಂಗಲದ ಚರ್ಚ್‍ನಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆಯಾಗಲಿದ್ದಾರೆ. ಅದು ಕ್ರೈಸ್ತ ಸಂಪ್ರದಾಯದಂತೆ. ಭಾನುವಾರ ಸಂಜೆ 4 ಗಂಟೆಗೆ ಸೆಂಟ್ ಬೆಸಲಿಕಾ ಥೀಮ್‍ನಲ್ಲಿ ನಡೆಯುವ  ಕಾರ್ಯಕ್ರಮಕ್ಕೆ ಬಂಧುಗಳು ಹಾಗೂ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.

  ಇದಾದ ಮೇಲೆ ಏಪ್ರಿಲ್ 30ನೇ ತಾರೀಕು ಸಂಗೀತ್ ಕಾರ್ಯಕ್ರಮ ಇದೆ. ಅದಾದ ಮೇಲೆ ಮೇ 1ಕ್ಕೆ ವರಪೂಜೆ. ಮೇ 2ಕ್ಕೆ ಮದುವೆ. ಬೆಳಗ್ಗೆ 10.30ರ ಮುಹೂರ್ತದಲ್ಲಿ ಮೇಘನಾಗೆ ಚಿರು ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಅದು 2ನೇ ಮದುವೆ.

 • ಮೇಘನಾಗೂ ನಂಗೂ ಮದ್ವೆ ಗ್ಯಾರಂಟಿ - ಚಿರಂಜೀವಿ

  meghana chiru engagement confirmed

  ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾಗೆ ಎಂಗೇಜ್‍ಮೆಂಟ್ ಫಿಕ್ಸ್ ಆಗಿದೆ ಎಂದು ಸುದ್ದಿಯಾದಾಗ, ನ್ಯೂಸ್ ಚಾನೆಲ್ಲುಗಳಲ್ಲಿ ಸ್ವತಃ ಮಾತನಾಡಿದ್ದ ಚಿರಂಜೀವಿ ಸರ್ಜಾ, ಮದುವೆಯ ಸುದ್ದಿ ನಿರಾಕರಿಸಿದ್ದರು. ಮೇಘನಾ ಸೈಲೆಂಟ್ ಆಗಿದ್ದುಬಿಟ್ಟಿದ್ದರು. ಸುಂದರ್‍ರಾಜ್-ಪ್ರಮೀಳಾ ಜೋಷಾಯ್ ಕೂಡಾ ಮದುವೆ ಸುದ್ದಿ ಒಪ್ಪಿಕೊಂಡಿರಲಿಲ್ಲ. 

  ಆದರೆ, ಈಗ ಚಿರಂಜೀವಿ ಸರ್ಜಾ ಅವರೇ ತಾನು ಮತ್ತು ಮೇಘನಾ ಮದುವೆಯಾಗುತ್ತಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಂಡ ಚಿರಂಜೀವಿ ಸರ್ಜಾರ, 22ಕ್ಕೆ ನಿಶ್ಚಿತಾರ್ಥ, ಆದರೆ, ಮದುವೆ ಡೇಟ್ ಫಿಕ್ಸ್ ಆಗಿಲ್ಲ ಎಂದಿದ್ದಾರೆ. 

  ಚಿತ್ರರಂಗದ ಮತ್ತೊಂದು ಜೋಡಿ, ಈಗ ಮದುವೆಯ ಬಂಧನಕ್ಕೆ ಸಿಲುಕಲು ಸಿದ್ಧವಾಗಿದೆ. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ..

  Related Articles :-

  Chiru Confirms His Engagement With Meghana Raj

  ಅ.22ಕ್ಕೆ ಚಿರು-ಮೇಘನಾ ನಿಶ್ಚಿತಾರ್ಥ

  ಚಿರು ಮೇಘನಾ ಮದ್ವೆಯಂತೆ..! ನಿಜಾನಾ..?

 • ಮೈದುನನಿಗಾಗಿ ಮೇಘನಾ ನಿರ್ಮಾಪಕಿ

  meghana t produce dhruva movie

  ನಿಶ್ಚಿತಾರ್ಥದ ನಂತರ ಇರುವುದೆಲ್ಲವ ಬಿಟ್ಟು.. ಸಿನಿಮಾದಲ್ಲಿ ನಟಿಸುತ್ತಿರುವ ಮೇಘನಾ ರಾಜ್, ಈಗ ಇನ್ನೊಂದು ಸವಾಲಿಗೆ ಕೈ ಹಾಕಿದ್ದಾರೆ. ಮೇಘನಾ ರಾಜ್ ನಿರ್ಮಾಪಕಿಯಾಗುತ್ತಿದ್ದಾರಂತೆ. ತಮ್ಮದೇ ಹೊಸ ಬ್ಯಾನರ್ ಶುರು ಮಾಡಲಿದ್ದಾರಂತೆ. ಅಂದಹಾಗೆ ಮೇಘನಾ ಬ್ಯಾನರ್‍ನ ಮೊದಲ ಚಿತ್ರಕ್ಕೆ ನಾಯಕರಾಗಿ  ಧ್ರುವ ಸರ್ಜಾ ನಟಿಸುವ ಸಾಧ್ಯತೆಗಳಿವೆ.

  ಮೇಘನಾ ಕುಟುಂಬಕ್ಕೆ ಚಿತ್ರ ನಿರ್ಮಾಣದ ಅನುಭವ ಹೊಸದೇನಲ್ಲ. ಸುಂದರ್ ರಾಜ್, ಪ್ರಮೀಳಾ ಜೋಷಾಯ್ ನಿರ್ಮಾಪಕರಾಗಿದ್ದವರು. ಇನ್ನು ಸರ್ಜಾ ಫ್ಯಾಮಿಲಿಗೂ ಚಿತ್ರ ನಿರ್ಮಾಣ ಹೊಸದಲ್ಲ. ಆದರೆ, ಭಾವೀ ಪತಿಯ ತಮ್ಮನಿಗಾಗಿ ಮೇಘನಾ ನಿರ್ಮಾಪಕಿಯಾಗಲಿದ್ದಾರೆ ಎನ್ನುವುದೇ ಸುದ್ದಿ ಸ್ವಾರಸ್ಯ.

 • ರಾಘವೇಂದ್ರ ರಾಜ್ ಕುಮಾರ್ ಶ್ರೇಷ್ಟ ನಟ, ಮೇಘನಾ ರಾಜ್ ಶ್ರೇಷ್ಟ ನಟಿ

  Raghavendra Rajkumar, Meghana Raj Image

  ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ರಾಜ್ಯ ಸರ್ಕಾರ ಚಲನಚಿತ್ರ ರಂಗದ ಸಾಧಕರಿಗೆ ಜೀವಮಾನ ಸಾಧನೆಗಾಗಿ ಮತ್ತು ಚಲನಚಿತ್ರದ ವಿವಿಧ ವಿಭಾಗಗಳಲ್ಲಿ ನೀಡುವ 2018ನೇ ಪ್ರಶಸ್ತಿಗಳು ಘೋಷಣೆಯಾಗಿವೆ. ಬಸಂತ್ ಕುಮಾರ್ ಪಾಟೀಲ್ ಅಧ್ಯಕ್ಷತೆಯ ಸಮಿತಿಯಲ್ಲಿ ಪಿ.ಎಚ್‌.ವಿಶ್ವನಾಥ್, ಮಾರ್ಸ್ ಸುರೇಶ್, ರವೀಂದ್ರ ಭಟ್  ಇದ್ದರು.  ಆಯ್ಕೆ ಸಮಿತಿಗೆ ಕಳಿಸಲಾಗಿದ್ದ 162 ಚಿತ್ರಗಳನ್ನು ವೀಕ್ಷಿಸಿದ ಸಮತಿ ವಾರ್ಷಿ ಪ್ರಶಸ್ತಿ ಮತ್ತು ಜೀವಮಾನ ಸಾಧನೆಯ ಪ್ರಶಸ್ತಿಗಳನ್ನು ಘೋಷಿಸಿದೆ.

  ಜೀವಮಾನ ಸಾಧನೆ ಪ್ರಶಸ್ತಿ :

  ಡಾ.ರಾಜ್‌ಕುಮಾರ್ ಪ್ರಶಸ್ತಿ -ಜೆ.ಕೆ.ಶ್ರೀನಿವಾಸ ಮೂರ್ತಿ

  ಪುಟ್ಟಣ್ಣ ಕಣಗಾಲ್ ಪ್ರಶಸ್ತಿ-ಪಿ.ಶೇಷಾದ್ರಿ

  ಡಾ.ವಿಷ್ಣುವರ್ಧನ್ ಪ್ರಶಸ್ತಿ-ಬಿ.ಎಸ್.ಬಸವರಾಜು

  ಮೊದಲನೇ ಅತ್ಯುತ್ತಮ ಚಿತ್ರ: ಆ ಕರಾಳ ರಾತ್ರಿ

  ಎರಡನೇ ಅತ್ಯುತ್ತಮ ಚಿತ್ರ: ರಾಮನ ಸವಾರಿ

  ಮೂರನೇ ಅತ್ಯುತ್ತಮ ಚಿತ್ರ: ಒಂದಲ್ಲಾ ಎರಡಲ್ಲಾ

  ಅತ್ಯುತ್ತಮ ನಟ: ರಾಘವೇಂದ್ರ ರಾಜ್‌ಕುಮಾರ್ (ಅಮ್ಮನ ಮನೆ)

  ಅತ್ಯುತ್ತಮ ನಟಿ: ಮೇಘನಾ ರಾಜ್ (ಇರುವುದೆಲ್ಲವ ಬಿಟ್ಟು)

  ಅತ್ಯುತ್ತಮ ಪೋಷಕ ನಟ: ಬಾಲಾಜಿ ಮನೋಹರ್ (ಚೂರಿಕಟ್ಟೆ)

  ಅತ್ಯುತ್ತಮ ಪೋಷಕ ನಟಿ: ವೀಣಾ ಸುಂದರ್ (ಆ ಕರಾಳ ರಾತ್ರಿ)

  ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಸಂತಕವಿ ಕನಕದಾಸರ ರಾಮಧಾನ್ಯ

  ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

  ಅತ್ಯುತ್ತಮ ಮಕ್ಕಳ ಚಿತ್ರ: ಹೂವು ಬಳ್ಳಿ

  ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಬೆಳಕಿನ ಕನ್ನಡಿ

  ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ದೇಯಿ ಬೈದೇತಿ

  ಅತ್ಯುತ್ತಮ ಕತೆ: ಹರೀಶ್ ಎಸ್ (ನಾಯಿಗೆರೆ)

  ಅತ್ಯುತ್ತಮ ಚಿತ್ರಕಥೆ: ಪಿ.ಶೇಷಾದ್ರಿ (ಮೂಕಜ್ಜಿಯ ಕನಸುಗಳು)

  ಅತ್ಯುತ್ತಮ ಸಂಭಾಷಣೆ: ಶಿರಿಷಾ ಜೋಶಿ (ಸಾವಿತ್ರಿ ಭಾಯಿ ಪುಲೆ)

  ಅತ್ಯುತ್ತಮ ಸಂಗೀತ ನಿರ್ದೇಶನ: ರವಿ ಬಸ್ರೂರು (ಕೆಜಿಎಫ್)

  ಅತ್ಯುತ್ತಮ ಕಲಾ ನಿರ್ದೇಶನ : ಶಿವಕುಮಾರ್ (ಕೆಜಿಎಫ್)

  ಅತ್ಯುತ್ತಮ ಬಾಲನಟ: ಮಾಸ್ಟರ್ ಆರೆನ್(ರಾಮನ ಸವಾರಿ)

  ಅತ್ಯುತ್ತಮ ಬಾಲನಟಿ: ಬೇಬಿ ಸಿಂಚನಾ (ಅಂದವಾದ ಸಿನಿಮಾ)

  ಅತ್ಯುತ್ತಮ ಗೀತ ರಚನೆ: ಡಾ.ಬರಗೂರು ರಾಮಚಂದ್ರಪ್ಪ (ಬಯಲಾಟದ ಭೀಮಣ್ಣ ಚಿತ್ರದ ಸಾವೇ ಸಾವೇ ಹಾಡು)

  ಅತ್ಯುತ್ತಮ ಕಿರುಚಿತ್ರ: ಪಡುವಾರಳ್ಳಿ

  ಅತ್ಯುತ್ತಮ ಹಿನ್ನಲೆ ಗಾಯಕ: ಸಿದ್ದಾರ್ಥ್ ಬೆಳ್ಮಣ್ಣು (ಸಂತಕವಿ ಕನಕದಾಸರ ರಾಮಧಾನ್ಯ ಚಿತ್ರದ ಇರುಳ ಚಂದಿರನ.. )

  ಅತ್ಯುತ್ತಮ ಹಿನ್ನಲೆ ಗಾಯಕಿ: ಕಲಾವತಿ ದಯಾನಂದ (ದೇಯಿ ಬೈದೇತಿ ಚಿತ್ರದ ಗೆಜ್ಜೆಗಿರಿ ನಂದನಾ.. )

  ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಯನ್ನು ಇಬ್ಬರು ಲೇಖಕರಿಗೆ ಜಂಟಿಯಾಗಿ ನೀಡಲಾಗಿದೆ. ಚಿತ್ರಕಥೆ ಹಾಗೆಂದರೇನು?  ಕೃತಿಗೆ ಎನ್‌.ಎಸ್‌.ಶಂಕರ್ ಮತ್ತು ಅಂಬರೀಶ್ ವ್ಯಕ್ತಿ-ವ್ಯಕ್ತಿತ್ವ-ವರ್ಣರಂಜಿತ ಬದುಕು ಕೃತಿಗೆ ಡಾ.ಶರಣು ಹುಲ್ಲೂರು ಪ್ರಶಸ್ತಿ ಪಡೆದಿದ್ದಾರೆ.

 • ಲವ್ವಿನಲ್ಲಿ ಬಿದ್ದವರು, ಮನೆಯವರಿಗೆ ಹೇಳಿದ್ದು ಹೇಗೆ..?

  meghana chiru says special thanks to media

  ಚಿರು, ಮೇಘನಾ ಎಂಗೇಜ್‍ಮೆಂಟ್ ಆಗಿಹೋಯ್ತು. ಇಬ್ಬರೂ ಪರಸ್ಪರ ಉಂಗುರ ಬದಲಿಸಿಕೊಂಡಿದ್ದೂ ಆಯ್ತು. ಅವರಿಬ್ಬರು 10 ವರ್ಷಗಳ ಲವ್‍ಸ್ಟೋರಿಯನ್ನು ಕೇಳಿ, ಖುಷಿಪಟ್ಟು ಶುಭ ಹಾರೈಸಿದ್ದೂ ಆಯ್ತು. ಆದರೆ, ಇವರಿಬ್ಬರ ಲವ್ ವಿಷಯವನ್ನು ಮನೆಯವರಿಗೆ ತಿಳಿಸಿದ್ದು ಹೇಗೆ..? 

  ಮೇಘನಾಗೆ ನೇರವಾಗಿ ಪ್ರಪೋಸ್ ಮಾಡಿದ್ದ ಚಿರುಗೆ, ಮನೆಯವರಿಗೆ ಹೇಳೋಕೆ ಸಂಕೋಚ. ಇತ್ತ ಮೇಘನಾಗೂ ಅಷ್ಟೆ.. ಅಪ್ಪಅಮ್ಮ, ಫ್ರೆಂಡ್ಸ್ ರೀತಿಯೇ ಇದ್ದರೂ, ಪ್ರೀತಿ ವಿಚಾರ ಹೇಳೋಕೆ ಹೆಜ್ಜೆ ಹಿಂದೆ ಹೋಗುತ್ತಿತ್ತು. ಆಗ ಅದನ್ನು ಸರಳ ಮಾಡಿದ್ದು, ಮೀಡಿಯಾಗಳಂತೆ. ಹೀಗಾಗಿ ಮೀಡಿಯಾಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ ಚಿರು-ಮೇಘನಾ. ಚಿರು ತಮ್ಮ ಲವ್ ವಿಷಯವನ್ನು ಮೊದಲು ಹೇಳಿದ್ದು ತಮ್ಮ ಧ್ರುವ ಸರ್ಜಾಗಂತೆ.

  ಮೇಘನಾ, ಚಿರುಗೆ ಆಂಟಿಕ್ ರಿಂಗ್ ತೊಡಿಸಿದರೆ, ಸರ್ಜಾ ಮೇಘನಾಗೆ ನಕ್ಷತ್ರ ಮಾದರಿಯ ಡೈಮಂಡ್ ರಿಂಗ್ ತೊಡಿಸಿದರು. ಆ ರಿಂಗುಗಳಿಗಿಂತ ಮಿರಮಿರನೆ ಮಿಂಚುತ್ತಿದ್ದುದು ಇಬ್ಬರ ಮುಖದಲ್ಲಿದ್ದ ಮುಗುಳುನಗೆ..ಉಲ್ಲಾಸ..ಉತ್ಸಾಹ.. ಎರಡೂ ಕುಟುಂಬಗಳಲ್ಲಿ ಹೆಚ್ಚು ಕಡಿಮೆ 25 ವರ್ಷಗಳ ನಂತರ ನಡೆಯುತ್ತಿರುವ ಶುಭ ಕಾರ್ಯ. ಹೀಗಾಗಿ ಚಿರು-ಮೇಘನಾ ಎಂಗೇಜ್‍ಮೆಂಟ್ ಅದ್ದೂರಿಯಾಗಿ ನೆರವೇರಿತು.

 • ಲಾಯರ್ ಮೇಘನಾ.. ಸ್ಫೂರ್ತಿಯಾದ ಮಹಾಭಾರತದ ಅರ್ಜುನ..!

  meghana raj's role is inspired from arjuna's role

  ಎಲ್ಲಿಯ ಲಾಯರ್‍ಗಿರಿ.. ಎಲ್ಲಿಯ ಮಹಾಭಾರತ.. ಆದರೆ, ಅಂಥಾದ್ದೊಂದು ವಿಶೇಷ ಸ್ಫೂರ್ತಿ ಇಟ್ಟುಕೊಂಡು ರೆಡಿಯಾಗುತ್ತಿರೋ ಬುದ್ದಿವಂತ 2 ಚಿತ್ರದಲ್ಲಿ ಮೇಘನಾ ರಾಜ್ ಅವರದ್ದು ಲಾಯರ್ ಪಾತ್ರ. ಆ ಪಾತ್ರಕ್ಕೆ ಸ್ಫೂರ್ತಿ ಮಹಾಭಾರತದ ಅರ್ಜುನನ ಪಾತ್ರ. ಜೊತೆಗೆ ಮುಸ್ಲಿಂ ಹುಡುಗಿ...

  ಕನ್‍ಫ್ಯೂಸ್ ಆಗಬೇಕು. ಕುತೂಹಲ ಹುಟ್ಟಬೇಕು. ಅಷ್ಟರಮಟ್ಟಿಗೆ ಬುದ್ದಿವಂತ 2 ಕುತೂಹಲ ಹುಟ್ಟಿಸಿದೆ. ಮೌರ್ಯ ನಿರ್ದೇಶನದ ಈ ಚಿತ್ರದಲ್ಲಿ ಹಳೆಯ ಬುದ್ದಿವಂತ ಚಿತ್ರದ ಒಂದೆಳೆಯೂ ಇರೋದಿಲ್ವಂತೆ. ಕೋರ್ಟ್ ದೃಶ್ಯಗಳಿರುತ್ತವೆ. ಆದರೆ, ಅದು ಕೂಡಾ ಡಿಫರೆಂಟ್ ಎಂಬ ಭರವಸೆ ಕೊಟ್ಟಿದ್ದಾರೆ ಮೌರ್ಯ.

 • ಸೆಲ್ಫಿ ಮೇಘನಾ.. ಗೂಗಲ್ ಸೃಜನ್

  selfie meghana google srujan

  ಒಂದೆಡೆ ತಮ್ಮದೇ ನಿರ್ಮಾಣದಲ್ಲಿ ಎಲ್ಲಿದ್ದೆ ಇಲ್ಲಿ ತನಕ ಚಿತ್ರವನ್ನು ಕಟ್ಟುತ್ತಿರುವ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ಮತ್ತೊಂದು ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಮೇಘನಾ ರಾಜ್ ಜೊತೆ ನಾಯಕರಾಗಿರುವ ಈ ಚಿತ್ರಕ್ಕೆ ಮಧುಚಂದ್ರ ಡೈರೆಕ್ಟರ್. ಈಗಾಗಲೇ ಶೂಟಿಂಗ್ ಮುಗಿದಿದೆ.

  ಚಿತ್ರದ ಟೈಟಲ್ ಏನ್ ಗೊತ್ತಾ..? ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ. ಮೊಬೈಲ್‍ಗೆ ಅಂಟಿಕೊಂಡಿರುವ ಹೆತ್ತವರು, ಅದು ಕುಟುಂಬದಲ್ಲಿ ಸೃಷ್ಟಿಸುವ ಸಮಸ್ಯೆ, ಸಂಕಟಗಳೇ ಚಿತ್ರದ ಕಥೆ. ಈ ಚಿತ್ರಕ್ಕೆ ಟ್ಯಾಗ್‍ಲೈನ್ .. ಮಕ್ಕಳ ಕಥೆ ಕೇಳಲೇಬೇಡಿ.

 • ಹೀಗಿದ್ದಾರೆ ಭಾನುಮತಿ..!

  bhanumathi 's look

  ಕುರುಕ್ಷೇತ್ರದಲ್ಲಿ ದುರ್ಯೋಧನ ಹೇಗಿದ್ದಾನೆ ಅನ್ನೋದನ್ನು ನೋಡಿದ್ದವರಿಗೆ ಈಗ ಭಾನುಮತಿಯನ್ನು ನೋಡುವ ಸಮಯ. ಮೇಘನಾ ರಾಜ್ ಕುರುಕ್ಷೇತ್ರದಲ್ಲಿ ಭಾನುಮತಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಸೆಟ್‍ನಲ್ಲಿರುವ ಮೇಘನಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅರ್ಜುನ್ ಸರ್ಜಾ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

  ದರ್ಶನ್ ಜೊತೆ ಮೇಘನಾಗೆ ಇದು ಮೊದಲನೇ ಚಿತ್ರ. ಜೊತೆಯಲ್ಲಿ ಅರ್ಜುನ್ ಸರ್ಜಾ ಕೂಡಾ ಇದ್ದಾರೆ. ಚಾಲೆಂಜಿಂಗ್ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ಮೇಘನಾ, ಕುರುಕ್ಷೇತ್ರದ ಭಾನುಮತಿ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವಿದೆ.

  Related Articles :-

  ದುರ್ಯೋಧನನಿಗೆ ಮೇಘನಾ ಭಾನುಮತಿ

Sagutha Doora Doora Movie Gallery

Popcorn Monkey Tiger Movie Gallery