` meghana raj - chitraloka.com | Kannada Movie News, Reviews | Image

meghana raj

 • ಇಂದು ಚಿರು-ಮೇಘನಾ ನಿಶ್ಚಿತಾರ್ಥ

  chiru meghana engagement today

  ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ವೈವಾಹಿಕ ಬಂಧನದ ಮೊದಲ ಹೆಜ್ಜೆ ಇಡಲಿದ್ದಾರೆ. ಇಂದು ಅವರಿಬ್ಬರಿಗೂ ನಿಶ್ಚಿತಾರ್ಥ. ಸುಮಾರು 10 ವರ್ಷಗಳ ಪ್ರೀತಿಗೆ ಎಂಗೇಜ್‍ಮೆಂಟ್ ರಿಂಗ್‍ನ ಮುದ್ರೆ ಬೀಳುವ ದಿನ. 

  ಕಲಾವಿದರ ಕುಟುಂಬದ ಕುಡಿಗಳು, ಮದುವೆಯಾಗುತ್ತಿರುವುದು ಇಡೀ ಚಿತ್ರರಂಗದಲ್ಲಿ ಒಂದು ಹಬ್ಬವನ್ನೇ ಸೃಷ್ಟಿಸಿದೆ ಎನ್ನಬೇಕು. 

  ಮೇಘನಾ ರಾಜ್, ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಮಗಳು. ಚಿರಂಜೀವಿ ಸರ್ಜಾ, ಅರ್ಜುನ್ ಸರ್ಜಾ ಅವರ ಸೋದರಿಯ ಮಗ. ಚಿತ್ರರಂಗದ ಎರಡು ಕುಟುಂಬಗಳು ಬೀಗರ ಕುಟುಂಬವಾಗುತ್ತಿರುವುದೇ ಖುಷಿಗೆ ಕಾರಣ.

  ಇಂದು ಸಂಜೆ ಲೀಲಾ ಪ್ಯಾಲೇಸ್‍ನಲ್ಲಿ ವಿಧ್ಯುಕ್ತ ಸಮಾರಂಭ ನಡೆಯಲಿದೆ. ಬೆಳಗ್ಗೆ ಮನೆಗಳಲ್ಲಿ ಶಾಸ್ತ್ರೋಕ್ತ ಸಂಪ್ರದಾಯಗಳು ನೆರವೇರಲಿವೆ. 

 • ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ಮೇಘನಾ ರಾಜ್

  meghana's next is iruvudella bittu

  ಮೊನ್ನೆ ಮೊನ್ನೆಯಷ್ಟೇ ಎಂಗೇಜ್‍ಮೆಂಟ್ ಆಯ್ತಲ್ರೀ... ಮುದ್ದಾದ ಹುಡ್ಗೀ ಏನ್ರೀ ಆಯ್ತು ಅಂತಾ ಕೇಳೋಕ್ ಹೋಗ್ಬೇಡಿ. ಇದು ಮೇಘನಾ ರಾಜ್ ನಟಿಸಲಿರುವ ಹೊಸ ಚಿತ್ರದ ಹೆಸರು. ಇರುವುದೆಲ್ಲವರ ಬಿಟ್ಟು..

  ಎಂಗೇಜ್‍ಮೆಂಟ್ ಆದ ನಂತರ ಚಿರಂಜೀವಿ ಸರ್ಜಾ ದ್ವಾರಕೀಶ್ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರೆ, ಇತ್ತ ಮೇಘನಾ ರಾಜ್ ಕಾಂತ ಕನ್ನಲ್ಲಿ ನಿರ್ದೇಶನದ `ಇರುವುದೆಲ್ಲವ ಬಿಟ್ಟು' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ನೀಲಿ ಧಾರಾವಾಹಿಯಲ್ಲಿ ನಟಿಸುತ್ತಿರುವ ಶ್ರೀ, ಈ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಹೀರೋ ಆಗುತ್ತಿದ್ದಾರೆ. ದೇವರಾಜ್ ದಾವಣಗೆರೆ ಎಂಬುವರು ನಿರ್ಮಿಸುತ್ತಿರುವ ಚಿತ್ರದ ಶೂಟಿಂಗ್ ನ.2ರಿಂದ ಶುರುವಾಗಲಿದೆ. ನ.7ರ ನಂತರ ಮೇಘನಾ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

  ಇರುವುದೆಲ್ಲವ ಬಿಟ್ಟು ಚಿತ್ರಕ್ಕೆ ಇರುವೆ ಬಿಟ್ಟುಕೊಳ್ಳುವುದೇ ಜೀವನ ಎಂಬ ಟ್ಯಾಗ್‍ಲೈನ್ ಇದೆ. ಮೇಘನಾ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದರೆ, ಶ್ರೀ ಅನಾಥ ಯುವಕನ ಪಾತ್ರ. ಸಂಭ್ರಮ ಶ್ರೀಧರ್ ಸಂಗೀತದ ಚಿತ್ರಕ್ಕೆ ವಿಭಿನ್ನ ಮಾದರಿಯ ಸಂಗೀತ ಸಂಯೋಜನೆ ಮಾಡಲಾಗಿದೆಯಂತೆ.

 • ಈ ಗಂಡು ಅನ್ನೋ ಒಬ್ಬ ಕಚಡ ನನ್‌ ಮಗಾನೂ..ಡೈಲಾಗ್​ನಲ್ಲೇನಿದೆ ಪ್ರಾಬ್ಲಂ?

  jinda stills

  ‘‘ಈ ಗಂಡು ಅನ್ನೋ ಒಬ್ಬ ಕಚಡ ನನ್‌ ಮಗಾನೂ ಪ್ರೀತಿ ಮಾಡುವಾಗ ಸತ್ಯ ಹೇಳಲ್ವಲ್ಲ ಯಾಕೆ ಸರ್‌?

  ಎಲ್ಲನೂ ಫ್ರೀಯಾಗಿ ಮುಗಿಸ್ಕೋಬಹುದು ಅಂತಾನಾ..? ’’

  ಇದು ಜಿಂದಾ ಚಿತ್ರದಲ್ಲಿ ಮೇಘನಾ ರಾಜ್ ಪಾತ್ರದ ಡೈಲಾಗ್.  ಮತ್ತೊಮ್ಮೆ ಓದಿಕೊಳ್ಳಿ. ಈ ಡೈಲಾಗ್ ಹೇಳೋದು ಮೇಘನಾ ರಾಜ್ ಅಲ್ಲ. ಮೇಘನಾ ರಾಜ್​ ಅಭಿನಯಿಸಿರುವ ಪಾತ್ರ. 

  ಅದೊಂದು ಡೈಲಾಗ್​ಗೆ ಕೆಲವು ಸಂಘಟನೆಗಳು ಸಿಡಿದೆದ್ದು ನಿಂತುಬಿಟ್ಟಿವೆ. ಮೇಘನಾ ರಾಜ್, ಇಡೀ ಗಂಡಸು ಜಾತಿಗೇ ಅವಮಾನ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕು. ಸಿನಿಮಾದಲ್ಲಿ ಆ ಡೈಲಾಗ್ ತೆಗೆದುಹಾಕಬೇಕು ಎಂದು ಕೂಗು ಹಾಕುತ್ತಿವೆ.

  ಇಷ್ಟಕ್ಕೂ ಹಾಗೆ ಕೂಗುತ್ತಿರುವವರಿಗೆ ಚಿತ್ರದ ಡೈಲಾಗ್ ಬರೆದವರು ನಿರ್ದೇಶಕ ಮುಸ್ಸಂಜೆ ಮಹೇಶ್ ಅನ್ನೋದು ಗೊತ್ತಾ..? ಆ ಬಗ್ಗೆ ಅನುಮಾನವಿದೆ. ಇನ್ನು ಆ ಡೈಲಾಗ್​ನ್ನ ಮೇಘನಾ ರಾಜ್ ಪಾತ್ರ ಹೇಳೋದು ದೇವರಾಜ್ ಅನ್ನೋ ಸೀನಿಯರ್ ನಟನ ಎದುರಿಗೆ. ಚಿತ್ರದಲ್ಲಿ ನಟಿಸಿರುವ ದೇವರಾಜ್​ಗೆ ನೂರಾರು ಚಿತ್ರಗಳಲ್ಲಿ ನಟಿಸಿರುವ ಕಲಾವಿದ. ಈ ಹಿಂದಿನ ಚಿತ್ರಗಳಲ್ಲೂ ದೇವರಾಜ್ ತಮ್ಮ ಸಂಭಾಷಣೆಯ ಜವಾಬ್ದಾರಿ ಇಟ್ಟುಕೊಂಡೇ ಬಂದವರು. 

  ನಿರ್ದೇಶಕ ಮುಸ್ಸಂಜೆ ಮಹೇಶ್ ಕೂಡಾ ಸದಭಿರುಚಿಯ ಚಿತ್ರಗಳಿಂದಲೇ ಬೆಳಕಿಗೆ ಬಂದ ಪ್ರತಿಭೆ. ಚಿತ್ರದ ನಿರ್ಮಾಪಕರಾದ ದತ್ತಾತ್ರೇಯ ಬಚ್ಚೇಗೌಡ ಮತ್ತು ಭಾನು ದತ್ತಾ ಕೂಡಾ ಅಂತಹ ಡೈಲಾಗ್ ಪ್ರೇಮಿಗಳಲ್ಲ. ಮೇಘನಾ ರಾಜ್​ಗೂ ಅಷ್ಟೆ. ಅವರ ಹೆತ್ತವರ ಹೆಸರು ಕೆಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ತನ್ನ ಮೇಲಿದೆ ಎನ್ನುವ ಅರಿವೂ ಇದೆ.

  ಇನ್ನು ಚಿತ್ರದ ವಿಷಯಕ್ಕೆ ಬರೋಣ. ಚಿತ್ರ ರಿಲೀಸ್ ಆಗುತ್ತಿರುವುದು ಮುಂದಿನ ವಾರ. ಚಿತ್ರದ ಟ್ರೇಲರ್ ನೋಡಿದರೆ, ಅದು ಕ್ರೈಂ, ಪ್ರೀತಿ  ಮತ್ತು ವಂಚನೆಯ ಸುತ್ತ ಹೆಣೆದಿರುವ ಕಥೆಯಂತೆ ಕಾಣುತ್ತಿದೆ. ಚಿತ್ರದ ಯಾವ ಸನ್ನಿವೇಶದಲ್ಲಿ ಆ ಡೈಲಾಗ್ ಬರುತ್ತೆ. ಚಿತ್ರದ ಕಥೆಗೆ ಅದು ಎಷ್ಟು ಮುಖ್ಯ..? ಅದು ನಿರ್ದೇಶಕರಿಗಷ್ಟೇ ಗೊತ್ತು.  ಒಂದೊಂದು ಡೈಲಾಗ್ ಹೊಸೆಯುವಾಗಲೂ ನಿರ್ದೇಶಕರು ಅಳೆದು ತೂಗಿ ತೆಗೆದುಕೊಳ್ಳುತ್ತಾರೆ. ಹಾಗೇನಾದರೂ ಈ ಪ್ರತಿಭಟನೆಗೆ ಮಣಿದರೆ, ನಿರ್ದೇಶಕನ ಸ್ವಾತಂತ್ರ್ಯಕ್ಕೆ ಬೆಲೆಯೇ ಇರಲ್ಲ.

  ಇಷ್ಟಕ್ಕೂ ಅದು ಮೇಘನಾ ರಾಜ್ ನಟಿಸಿರುವ ಪಾತ್ರ ಒಪ್ಪಿಸುವ ಸಂಭಾಷಣೆ ಎನ್ನುವುದು ಪ್ರತಿಭಟಿಸುವವರ ನೆನಪಿನಲ್ಲಿರಬೇಕು. ಆ ಪಾತ್ರ ಯಾವ ಸಂದರ್ಭದಲ್ಲಿ ಆ ಡೈಲಾಗ್ ಹೇಳುತ್ತದೋ..ಅದನ್ನು ತಿಳಿದುಕೊಳ್ಳೋಕೆ ಜಿಂದಾ ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕು. ಇಷ್ಟಾಗಿ, ಚಿತ್ರದಲ್ಲಿ ಆ ಡೈಲಾಗ್ ಇಷ್ಟವಾಗದೇ ಹೋದರೆ, ಆಗಲೂ ಪ್ರತಿಭಟಿಸುವ ಹಕ್ಕು ಯಾರಿಗೂ ಇಲ್ಲ. 

  ಜಿಂದಾ ಟ್ರೇಲರ್ ನೋಡಿದರೆ, ಹೊಸತನದ ಸ್ಪರ್ಶವಿದೆ. ಒಂದು ಹೊಸ ಚಿತ್ರವನ್ನು ವಿನಾಕಾರಣದ ವಿವಾದಗಳಲ್ಲಿ  ಸಿಲುಕಿಸುವುದು ಬೇಡ. ಚಿತ್ರ ಬಿಡುಗಡೆಯಾಗಲಿ. ಯಶಸ್ವಿಯಾಗಲಿ. ಹಾಗೆಂದು ಹಾರೈಸೋಣ.

  Related Articles :-

  Youths Protest In Front Of Meghana Raj's House

 • ಎಂಎಂಸಿಹೆಚ್ ಡೈಲಾಗ್ಸ್.. ಥಂಡಾ ಥಂಡಾ ಹಾಟ್ ಹಾಟ್

  mmch dialogues creates curiosity

  ತಾನು ಮದುವೆ ಆಗೋ ಹುಡುಗಿ ಶೀಲವಂತೆ ಆಗಿರ್ಲಿ ಅಂತಾನೇ ಎಲ್ಲರೂ ಬಯಸೋದು. ಯಾಕ್ ಗೊತ್ತಾ..? ತಾನು ಶೀಲ ಕಳ್ಕೊಂಡಿರೋರೋದು ಯಾವ ಸ್ಟೆತಾಸ್ಕೋಪ್‍ಗೂ ಗೊತ್ತಾಗಲ್ಲ ಅಂತಾ...

  ಒಂಭತ್ತು ತಿಂಗಳಿಗೆ ಒಬ್ಬ ಮನುಷ್ಯ ಹುಟ್ತಾನೆ. ಆದರೆ, ಮನುಷ್ಯತ್ವ ಇರೋವ್ರು ಹುಟ್ಟಲ್ಲ...

  ಈ 65 ದಾಟಿರೋವ್ರನ್ನ, ಯೌವ್ವನದಲ್ಲಿರೋವ್ರನ್ನ ಕೇಳಿ, ನೀವು ಮೊದ್ಲು ಯಾವ ದೇವಸ್ಥಾನಕ್ಕೆ ಹೋಗಿದ್ರಿ ಅಂತಾ..ನೆನಪೇ ಇರಲ್ಲ. ಆದರೆ ಸೆಕ್ಸ್ ಸಿನಿಮಾ ನೆನಪಿರುತ್ತೆ. ಅದಕ್ಕೇ ಅದನ್ನ ದೇವ್ರ ಸಿನಿಮಾ ಅನ್ನೋದು...

  ಅಪ್ಪ ಅಮ್ಮನ್ ವೆಡ್ಡಿಂಗ್ ಆನಿವರ್ಸರಿ ಕೇಳ್ನೋಡಿ.. ನೆನಪಿರಲ್ಲ.. ಆದರೆ, ಮೊದಲನೇ ಸರಿ ಯಾವಳ್ ಜೊತೆ ಅಂತಾ ಕೇಳ್ನೋಡಿ..

  ಅತ್ತೆ ಸೊಸೆಯರು ದಿನ ಕಚ್ಚಾಡೋ ಮನೆ ಮುಂದೆ ನಾಯಿಗಳಿವೆ ಎಚ್ಚರಿಕೆ ಅನ್ನೋ ಬೋರ್ಡ್ ಇರಬೇಕು..

  ಒಂದಾ.. ಎರಡಾ.. ಎಂಎಂಸಿಹೆಚ್ ಡೈಲಾಗ್‍ಗಳು ಇರೋದೇ ಹಾಗೆ.. ಡಬ್ಬಲ್ ಮೀನಿಂಗ್, ಸಿಂಗಲ್ ಮೀನಿಂಗ್ ಇಲ್ಲ. ಎಲ್ಲ ಸ್ಟ್ರೈಟ್ ಫಾರ್ವರ್ಡ್. ಇಂಥಾ ಡೈಲಾಗ್‍ಗಳೇ ಎಂಎಂಸಿಹೆಚ್ ಬಗ್ಗೆ ಕ್ರೇಜ್ ಹೆಚ್ಚಿಸಿದೆ. ಇಷ್ಟೆಲ್ಲ ಆಗಿ ಈ ಎಲ್ಲ ಡೈಲಾಗ್ ಹೇಳಿರೋದು ಹುಡುಗೀರೇ ಅನ್ನೋದು ವಿಶೇಷ. ಮೇಘನಾರಾಜ್, ಸಂಯುಕ್ತ ಹೊರನಾಡು, ನಕ್ಷತ್ರ, ದೀಪ್ತಿ, ರಾಗಿಣಿ ದ್ವಿವೇದಿ.. ಹೀರೋ ಯಾರು ಅಂತಾ ಕೇಳಿದ್ರೆ, ಕಥೆ ಅಂತಾರೆ ಮುಸ್ಸಂಜೆ ಮಹೇಶ್.

  ಹಾಗಂತ ಇದು ಹುಡುಗರನ್ನ ಟಾರ್ಗೆಟ್ ಮಾಡಿರೋ ಸಿನಿಮಾ ಅಲ್ವಂತೆ. ಆದರೆ, ಟ್ಯಾಗ್‍ಲೈನ್ ಇರೋದೇ ಹುಡುಗಿಯರಿದ್ದಾರೆ ಎಚ್ಚರಿಕೆ ಅಂತಾ. ಕುತೂಹಲ ತಣಿಯೋಕೆ ತುಂಬಾ ಕಾಯಬೇಕಿಲ್ಲ. ಇನ್ನೊಂದ್ ದಿನ. ಅಷ್ಟೆ..

 • ಎಂಎಂಸಿಹೆಚ್ ಸಿನಿಮಾಗೆ ಪ್ರೇರಣೆ ಏನು ಗೊತ್ತಾ..?

  inspiration behind mmch

  ಎಂಎಂಸಿಹೆಚ್ ಅನ್ನೋ ವಿಭಿನ್ನ ಟೈಟಲ್‍ನ ಸಿನಿಮಾದಲ್ಲಿ ಐವರು ನಾಯಕಿಯರು. ಮುಸ್ಸಂಜೆ ಮಹೇಶ್ ನಿರ್ದೇಶನದ ಸಿನಿಮಾಗೆ ಪುರುಷೋತ್ತಮ್ ನಿರ್ಮಾಪಕರು. ಅವರು ಈ ಚಿತ್ರಕ್ಕೆ ನಿರ್ಮಾಪಕರಾಗೋಕೆ ಕಾರಣ ಏನು ಗೊತ್ತೇ..? ಕಥೆ. ಮಹೇಶ್ ಈ ಕಥೆ ಹೇಳಿದಾಗ ತುಂಬಾ ಇಂಪ್ರೆಸ್ ಆದರಂತೆ ಪುರುಷೋತ್ತಮ್. ಕಥೆಯನ್ನು ಮುಸ್ಸಂಜೆ ಮಹೇಶ್ ಹಲವು ರಿಸರ್ಚ್ ಮಾಡಿ ಸಿದ್ಧಪಡಿಸಿದ್ದಾರಂತೆ.

  ನಾಲ್ವರು ನಾಯಕಿಯರು ಮತ್ತು ರಾಗಿಣಿ ಇರೋದ್ರಿಂದ ಇದು ಮಹಿಳಾ ಪ್ರಧಾನ ಚಿತ್ರ ಎಂಬಂತೆ ಬಿಂಬಿತವಾಗ್ತಾ ಇದೆ. ಆದರೆ, ಇದು ಫ್ರೆಂಡ್‍ಶಿಪ್ ಆಧರಿಸಿದ ಸಿನಿಮಾ. ಕ್ರೈಂ, ಥ್ರಿಲ್ಲರ್, ಸಸ್ಪೆನ್ಸ್, ಮರ್ಡರ್ ಮಿಸ್ಟರಿ ಇರುವ ಕಥೆ. ಒಟ್ಟು ಐವರು ಹುಡುಗಿಯರೇ ಇದ್ದರೂ, ನಾಯಕರು ಇಬ್ಬರೇ. ರಘು ಭಟ್ ಮತ್ತು ಯುವರಾಜ್. 

  ಮೇಘನಾ, ರಾಗಿಣಿ, ನಕ್ಷತ್ರ, ದೀಪ್ತಿ ಮತ್ತು ಸಂಯುಕ್ತಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ತುಂಬಾ ಚೆನ್ನಾಗಿ ನಟಿಸಿದ್ದಾರೆ ಎನ್ನುವ ಪುರುಷೋತ್ತಮ್, ಸಿನಿಮಾವನ್ನು 150ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ.

 • ಐವರು ಹೀರೋಯಿನ್ಸ್.. ಐದು ಅವತಾರ..

  five heroines.. panchavatara

  ಎಂಎಂಸಿಹೆಚ್ ಗಮನ ಸೆಳೆಯೋಕೆ ಮೊದಲ ಕಾರಣವೇ ಅದು. ಚಿತ್ರದಲ್ಲಿ ಐವರು ಹೀರೋಯಿನ್ಸ್ ಅನ್ನೋದು. ಮುಸ್ಸಂಜೆ ಮಹೇಶ್ ಐವರು ಹೀರೋಯಿನ್‍ಗಳನ್ನಿಟ್ಟುಕೊಂಡು ಎಂತಹ ಕಥೆ ಮಾಡಿರಬಹುದು ಅನ್ನೋ ಕುತೂಹಲಿಗಳಿಗೆ ಇಲ್ಲಿ ಸಣ್ಣದೊಂದು ಇಂಟ್ರೊಡಕ್ಷನ್ ಇದೆ. 

  ಮೇಘನಾ ರಾಜ್ : ಕಾಲೇಜು ಹುಡುಗಿ. ಒಳ್ಳೆಯ ಹುಡುಗಿ. ತನಗೆ ಕೇಡಾದರೂ ಪರವಾಗಿಲ್ಲ..ಬೇರೆಯವರಿಗೆ ತೊಂದರೆ ಆಗಬಾರದು ಎಂದು ಬಯಸುವ ಹೆಣ್ಣು ಮಗಳು. ಪ್ರಬುದ್ಧತೆಯ ಜೊತೆಗೆ ರೆಬಲ್ ಅಂಶಗಳೂ ಇವೆ.

  ಸಂಯುಕ್ತ ಹೊರನಾಡು : ಲೋಕಜ್ಞಾನ ಕಡಿಮೆ. ಮಾತು ಜಾಸ್ತಿ. ಸೌಮ್ಯ ಸ್ವಭಾವ. ಇಡೀ ಗುಂಪಿನಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಆಗಿರುವ ಹುಡುಗಿ ಆಮೇಲೆ ವಯೊಲೆಂಟ್ ಆಗ್ತಾಳೆ. ಯಾಕೆ..? ಸಿನಿಮಾ ನೋಡಿ.

  ದೀಪ್ತಿ : ರೌಡಿ ಛಾಯಾ. ಹುಡುಗರನ್ನೇ ಚುಡಾಯಿಸುವ ಎದೆಗಾರಿಕೆಯ ಹುಡುಗಿ. ಕಿಕ್‍ಬಾಕ್ಸಿಂಗ್ ಕೂಡಾ ಗೊತ್ತಿರುವ ಸಂಯುಕ್ತಾರದ್ದು ಡೋಂಟ್‍ಕೇರ್ ಪಾತ್ರ.

  ನಕ್ಷತ್ರ : ಟಾಮ್‍ಬಾಯ್ ಕ್ಯಾರೆಕ್ಟರ್. ಪಾತ್ರಕ್ಕಾಗಿ ಕಲರಿಯಪಯಟ್ಟು ಕಲಿತಿದ್ದಾರಂತೆ. 

  ರಾಗಿಣಿ ದ್ವಿವೇದಿ : ಈ ನಾಲ್ವರ ಗುಣವನ್ನೂ ಹೊಂದಿರುವ ಪೊಲೀಸ್ ಅಧಿಕಾರಿಯ ಪಾತ್ರ. ಫುಲ್ ಆಕ್ಷನ್ ಇರುವ ಝಾನ್ಸಿರಾಣಿಯ ಪಾತ್ರ ರಾಗಿಣಿಯದ್ದು.

  ಈ ಐವರನ್ನೂ ಒಟ್ಟುಗೂಡಿಸಿ, ಪ್ರತಿ ಪಾತ್ರವನ್ನು ಸುಂದರವಾಗಿ ಚಿತ್ರಿಸಿರುವ ಮಹೇಶ್ ಹಾಗೂ ನಿರ್ಮಾಪಕ ಪುರುಷೋತ್ತಮ್ ಪ್ರಕಾರ, ಚಿತ್ರದ ಹೀರೋ ಕಥೆ. 

 • ಕನಸೊಂದು ನನಸಾಗಿದೆ : ರಾಜ್ಯ ಪ್ರಶಸ್ತಿ ಪುರಸ್ಕೃತ ನಟಿ ಮೇಘನಾ ರಾಜ್

  meghana raj image

  ಮೇಘನಾ ರಾಜ್ ಈ ವರ್ಷದ ಅತ್ಯುತ್ತಮ ನಟಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿಯನ್ನು ನಿರೀಕ್ಷೆ ಮಾಡಿರಲಿಲ್ಲ. ಕನಸು ಮನಸಿನಲ್ಲೂ ನಿರೀಕ್ಷೆ ಮಾಡಿರದ ಪ್ರಶಸ್ತಿ ಇದು. ಖುಷಿಯಾಗಿದೆ ಎಂದಿದ್ದಾರೆ ಮೇಘನಾ ರಾಜ್.

  ತಂದೆ ತಾಯಿಯನ್ನು ಧಿಕ್ಕರಿಸಿ ಲಿವಿಂಗ್ ಟುಗೆದರ್ನಲ್ಲಿ ಬದುಕಿ ತಾಯಿಯಾಗುವ ಪೂರ್ವಿ, ನಂತರ ಮನಸ್ತಾಪದಿಂದಾಗಿ ಪತಿಯಿಂದ ದೂರವಾಗುತ್ತಾಳೆ. ಸಿಂಗಲ್ ಮದರ್ ಆಗಿ ಮಗುವನ್ನು ಬೆಳೆಸುವ ಹಠಕ್ಕೆ ಬೀಳುತ್ತಾಳೆ. ಧಿಕ್ಕರಿಸಿದ ತಂದೆ, ತಾಯಿಯೇ ಮತ್ತೆ ಆಕೆಗೆ ಆಸರೆಯಾಗುತ್ತಾರೆ. ಇಂಥಾದ್ದೊಂದು ಹಲವು ಶೇಡ್ಗಳಿದ್ದ ಪಾತ್ರದಲ್ಲಿ ಗಂಭೀರ ಅಭಿನಯ ನೀಡಿದ್ದರು ಮೇಘನಾ ರಾಜ್. ದೇವರಾಜ್ ದಾವಣಗೆರೆ ನಿರ್ಮಾಣದ ಚಿತ್ರವನ್ನು ಕಾಂತರಾಜ್ ಕನ್ನಳ್ಳಿ ನಿರ್ದೇಶಿಸಿದ್ದರು.

 • ಕುರುಕ್ಷೇತ್ರಕ್ಕೆ ದರ್ಶನ್ ನಿದ್ದೆ ಮಾಡಿದ್ದು ಎಷ್ಟು ಗಂಟೆ..?

  how many hours did darshan sleep for kurukshetra

  ಕುರುಕ್ಷೇತ್ರ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಕಲಾವಿದರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಅದರಲ್ಲೂ ಪ್ರಧಾನ ಪಾತ್ರಧಾರಿ ದರ್ಶನ್ ಸ್ವಲ್ಪ ಹೆಚ್ಚೇ ಕಷ್ಟಪಟ್ಟಿದ್ದಾರೆ.

  ನನ್ನ ಕೆಲಸ ಶುರುವಾಗುತ್ತಿದ್ದುದು ಬೆಳಗ್ಗೆ 5 ಗಂಟೆಗೆ. 5ರಿಂದ 7.30 ಜಿಮ್‍ನಲ್ಲಿರುತ್ತಿದ್ದೆ. ಅಲ್ಲಿಂದ ರೆಡಿಯಾಗಿ ಸೆಟ್ಟಿಗೆ ಹೋಗುತ್ತಿದ್ದುದು ಬೆಳಗ್ಗೆ 9ಕ್ಕೆ.

  9ರಿಂದ ಸಂಜೆ 6 ಗಂಟೆಯವರೆಗೆ ಚಿತ್ರೀಕರಣ. ತಲೆ  ಮೇಲೆ ಕಿರೀಟ, ಮೈತುಂಬಾ ಆಭರಣ. 6 ಗಂಟೆಗೆ ಶೂಟಿಂಗ್ ಮುಗಿದರೆ ಮತ್ತೆ ಜಿಮ್. ಅದಾದ ಮೇಲೆ ಎಲ್ಲ ಕಲಾವಿದರ ಜೊತೆ ಒಂದಷ್ಟು ಹರಟೆ. ಅದು ರಾತ್ರಿ 1 ಗಂಟೆಯವರೆಗೂ ಆಗೋದು. ಎಲ್ಲರೂ ರೂಮಿಗೆ ಹೋದ ಮೇಲೆ 2 ಗಂಟೆಯವರೆಗೆ ಸ್ಕ್ರಿಪ್ಟ್ ಓದಿಕೊಂಡು ಡೈಲಾಗ್ ಪ್ರಾಕ್ಟೀಸ್ ಮಾಡುತ್ತಿದ್ದೆ..

  ಹೀಗೆ ತಮ್ಮ ಇಡೀ ದಿನದ ಟೈಂ ಟೇಬಲ್ ಹೇಳಿಕೊಂಡಿದ್ದಾರೆ ದರ್ಶನ್. ದರ್ಶನ್ ಸೇರಿದಂತೆ ಎಲ್ಲ ಕಲಾವಿದರು, ತಂತ್ರಜ್ಞರು ಹಾಕಿರುವ ಒಟ್ಟು ಶ್ರಮ ಆಗಸ್ಟ್ 9ಕ್ಕೆ ತೆರೆ ಮೇಲೆ ಬರುತ್ತಿದೆ.

  2ಡಿಯಲ್ಲಿ ನೋಡಿ ಸುಮ್ಮನಾಗಬೇಡಿ, 3ಡಿಯಲ್ಲಿ ಮಿಸ್ ಮಾಡದೇ ನೋಡಿ, ಮಜಾ ಇದೆ ಎಂದಿದ್ದಾರೆ ದರ್ಶನ್.

 • ಕುರುಕ್ಷೇತ್ರದ ಸ್ತ್ರೀಶಕ್ತಿ..!

  meet the strong women in kurukshetra

  ಕುರುಕ್ಷೇತ್ರ ಯುದ್ಧ ನಡೆಯುವುದೇ ಹೆಣ್ಣಿನಿಂದ.. ಹೆಣ್ಣಿಗಾಗಿ.. ಹಾಗಾಗಿಯೇ ಮಹಾಭಾರತದಲ್ಲಿ ಮಹಿಳಾ ಪಾತ್ರಗಳೂ ಅಷ್ಟೇ ಗಟ್ಟಿತನದಿಂದ ಕೂಡಿವೆ. ಕುರುಕ್ಷೇತ್ರ ಎಂದರೆ ಕೇವಲ ಪುರುಷರಷ್ಟೇ ಅಲ್ಲ, ಸ್ತ್ರೀಶಕ್ತಿಯ ದರ್ಬಾರೇ ಇದೆ. ಮುನಿರತ್ನ ಕುರುಕ್ಷೇತ್ರದಲ್ಲೂ ಅಷ್ಟೆ.. ಸ್ಟಾರ್ ನಟಿಯರು ಚಿತ್ರದ ಪ್ರಧಾನ ಪಾತ್ರಗಳಲ್ಲಿ ಕಂಗೊಳಿಸುತ್ತಿದ್ದಾರೆ.

  ಮೇಘನಾ ರಾಜ್ : ಭಾನುಮತಿಯ ಪಾತ್ರ, ದುರ್ಯೋಧನನ ಪತ್ನಿ.

  ಹರಿಪ್ರಿಯಾ : ಮಾಯಾ ಹೆಸರಿನ ನರ್ತಕಿ

  ಸ್ನೇಹಾ : ದ್ರೌಪದಿಯ ಪಾತ್ರ

  ಪವಿತ್ರಾ ಲೋಕೇಶ್ - ಸುಭದ್ರೆ ಅರ್ಜುನನ ಪತ್ನಿ, ಅಭಿಮನ್ಯುವಿನ ತಾಯಿ ಹಾಗೂ ಶ್ರೀಕೃಷ್ಣನ ಮುದ್ದಿನ ತಂಗಿ

  ಭಾರತಿ ವಿಷ್ಣುವರ್ಧನ್ : ಕುಂತಿಯ ಪಾತ್ರ

  ಅದಿತಿ ಆರ್ಯ : ಉತ್ತರೆ, ಅಭಿಮನ್ಯುವಿನ ಪತ್ನಿಯ ಪಾತ್ರ

  ಅನುಪಮಾ : ಗಾಂಧಾರಿ

  ಹೀಗೆ ಪ್ರಮುಖ ಪಾತ್ರಧಾರಿಗಳ ಜೊತೆ ನೂರಾರು ಸಹನಟಿಯರು ಚಿತ್ರದಲ್ಲಿ ಹಗಲಿರುಳೂ ದುಡಿದಿದ್ದಾರೆ. ತೆರೆಯ ಮೇಲೆ ಹಬ್ಬದಂತೆ ಕಂಗೊಳಿಸಲಿದ್ದಾರೆ ಎನ್ನುವುದು ನಿರ್ದೇಶಕ ನಾಗಣ್ಣ ಮಾತು. ಸಿನಿಮಾ ಆಗಸ್ಟ್ 2ರಂದು ತೆರೆ ಕಾಣುತ್ತಿದೆ.

   

 • ಗಂಡ ಬೇರೆ ಹುಡುಗಿನ ರೇಗಿಸಿದ್ರೆ, ಹೆಂಡತಿ ಸಪೋರ್ಟ್ಮಾ ಡೋದ್ ಹಿಂಗಾ..?

  meghana raj sings for her husband's movie

  ಗಂಡ, ಇನ್ಯಾವುದೋ ಹುಡುಗಿಯನ್ನು ರೇಗಿಸಿಕೊಂಡು ಡ್ಯುಯೆಟ್ ಹಾಡ್ತಿದ್ರೆ, ಹೆಂಡತಿ ಏನ್ ಮಾಡ್ತಾರೆ ಹೇಳಿ.. ಅಟ್ಟಿಸಿಕೊಂಡು ಹೋಗಿ ಗ್ರಹಚಾರ ಬಿಡಿಸ್ತಾರೇ ತಾನೇ.. ಆದರೆ, ಮೇಘನಾ ರಾಜ್ ಹಂಗಲ್ಲ, ಅವರು ಹಾಡು ಹಾಡ್ತಾರೆ. ಗಂಡನಿಗೆ ಸಪೋರ್ಟ್ ಮಾಡ್ತಾರೆ. ಹ್ಞೂಂ ಕಂಣ್ರೀ.. ಇದು ನಿಜ.. ದೇವರಾಣೆ ಸತ್ಯ. ಸಿಂಗ ಚಿತ್ರದ ಆಣೆಯಾಗಿಯೂ ಸತ್ಯ.

  ಸಿಂಗ ಚಿತ್ರದ ಶ್ಯಾನೆ ಟಾಪಾಗವ್ಳೆ.. ಹಾಡು ಕೇಳಿದ್ದೀರಲ್ಲ. ಆ ಹಾಡು ಈಗ ಟಿಕ್‍ಟಾಕ್‍ನಲ್ಲಿ ವೈರಲ್ಲು. ಆ ಹಾಡು ಹಾಡಿರೋದು ಸಂಚಿತ್ ಹೆಗ್ಡೆ. ಫೀಮೇಲ್ ಗಾಯಕಿ ಬೇರೆ ಯಾರೋ ಅಲ್ಲ, ಸ್ವತಃ ಮೇಘನಾ ರಾಜ್.

  ಉದಯ್ ಮೆಹ್ತಾ ನಿರ್ಮಾಣದ ಸಿಂಗ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕ. ಆದಿತಿ ಪ್ರಭುದೇವ ನಾಯಕಿ. ವಿಜಯ್ ಕಿರಣ್ ನಿರ್ದೇಶನದ ಸಿನಿಮಾದ ಈ ಹಾಡು, ಯುಗಾದಿಗೆ ರಿಲೀಸ್.

 • ಗಂಡನ ಲವ್ವರ್ ಬ್ಯೂಟಿ ಹೊಗಳೋ ಹೆಂಡತಿ ನೋಡಿದ್ರಾ..?

  meghana raj sings for chiru's movie

  ಎಲ್ಲಾದರೂ ಕಂಡಿದ್ದೀರಾ..? ಕೇಳಿದ್ದೀರಾ..? ಆದರೆ ಇದು ಸತ್ಯ.. ಸತ್ಯ.. ಸತ್ಯ.. ಪತಿ ಚಿರಂಜೀವಿ ಸರ್ಜಾ ಕಣ್ಣು ಹಾಕಿರೋ ಹುಡುಗಿ ಶ್ಯಾನೆ ಟಾಪ್ ಆಗಿರೋ ಆದಿತಿ ಪ್ರಭುದೇವ. ಆ ಹುಡುಗಿಯನ್ನು ನವೀನ್ ಸಜ್ಜು ಧ್ವನಿಯಲ್ಲಿ ಚಿರು ಹಾಡಿ ಹೊಗಳಿ ಕುಣಿದು ಕುಪ್ಪಳಿಸುತ್ತಿದ್ದರೆ, ಮೇಘನಾ ರಾಜ್ ಅವರ ಜೊತೆಯಲ್ಲೇ ಹಾಡಿ, ಹಾಡಿನ ಕಿಕ್ಕೇರಿಸಿದ್ದಾರೆ.

  ವ್ಹಾಟ್ ಎ ಬ್ಯೂಟಿಫುಲ್ ಹುಡುಗಿ.. ಅನ್ನೋ ಈ ಹಾಡು ಸಿಂಗ ಚಿತ್ರದ್ದು. ಹಾಡನ್ನು ಬಿಡುಗಡೆ ಮಾಡಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆ ಚಿತ್ರದ ಶ್ಯಾನೆ ಟಾಪಾಗವ್ಳೆ ಹಾಡು ಕೇಳಿ, ಅವರೇ ಚಿರುಗೆ ಕೇಳಿದ್ರಂತೆ. ಯಾವ ಚಿತ್ರದ್ದು ಈ ಹಾಡು, ವಿಚಾರಿಸು ಅಂತಾ. ಚಿರು ಚಿತ್ರದ್ದೇ ಎಂದು ಗೊತ್ತಾದಾಗ ಖುಷಿಯಾಗಿ ಅಭಿನಂದಿಸಿದ್ದರಂತೆ.

  ಉದಯ್ ಮೆಹ್ತಾ ನಿರ್ಮಾಣದ ಚಿತ್ರಕ್ಕೆ ವಿಜಯ್ ಕಿರಣ್ ನಿರ್ದೇಶನ ಮಾಡಿದ್ದಾರೆ. ಧರ್ಮ ವಿಶ್ ಸಂಗೀತ ನೀಡಿದ್ದಾರೆ.

 • ಚಿರು ಮೇಘನಾ ಮದ್ವೆಯಂತೆ..! ನಿಜಾನಾ..?

  chiranjeevi sarja meghana raj

  ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಧ್ಯೆ ಪ್ರೀತಿಯಿದೆ.. ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಲು ಶುರುವಾಗಿ 2 ವರ್ಷಗಳೇ ಕಳೆದುಹೋದವು. ಊಹೂಂ.. ಸುದ್ದಿ ನಿಜವಾಗಲಿಲ್ಲ. 

  ಇಬ್ಬರೂ ಎರಡು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದರು. ಪ್ರೀತಿ ಮದುವೆ ಸುದ್ದಿಗೆ ರೆಕ್ಕೆ ಪುಕ್ಕ ಬಂದವು. ಖಾಸಗಿ ಸಮಾರಂಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಸುದ್ದಿಯ ಗಿಡ ಬೆಳೆದು ಹೆಮ್ಮರವಾಗೋಕೆ ಗೊಬ್ಬರ ಸಿಕ್ಕಂತಾಯ್ತು. ಮಧ್ಯೆ ಮಧ್ಯೆ ಇಬ್ಬರೂ ತಮ್ಮ ಮಧ್ಯೆ ಅಂಥದ್ದೇನೂ ಇಲ್ಲ ಎಂದು ಹೇಳುತ್ತಲೇ ಬಂದರು. 

  ಈಗ ಮತ್ತೊಂದು ಹೊಸ ಸುದ್ದಿ. ಇಬ್ಬರೂ ಡಿಸೆಂಬರ್ 2ನೇ ವಾರದಲ್ಲಿ ಸಪ್ತಪದಿ ತುಳಿಯುತ್ತಿದ್ದಾರಂತೆ. ಈ ಬಾರಿಯೂ ಮೇಘನಾ ಮತ್ತು ಚಿರಂಜೀವಿ ಸರ್ಜಾ, ಇದನ್ನು ನಿರಾಕರಿಸಿದ್ದಾರೆ. ತಮ್ಮ ಮದುವೆ ಬಗ್ಗೆಯೇ ಏಕೆ ಇಷ್ಟೊಂದು ಸುದ್ದಿ ಹಬ್ಬುತ್ತವೋ ನಮಗೂ ಗೊತ್ತಿಲ್ಲ ಎಂದಿದ್ದಾರೆ.

 • ಚಿರು-ಮೇಘನಾ ಎರಡನೇ ಮದುವೆ

  chiru meghana gets married

  ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ 2ನೇ ಬಾರಿಗೆ ಮದುವೆಯಾಗಿದ್ದಾರೆ. ಒಂದೇ ವಾರದೊಳಗೆ ಎರಡು ಬಾರಿ ಮದುವೆಯಾಗಿರೋದು ವಿಶೇಷ. ಏಪ್ರಿಲ್ 29ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದ ಚಿರು-ಮೇಘನಾ, ಈಗ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.

  ಬುಧವಾರ ಬೆಳಗ್ಗೆ 10ರಿಂದ 11.30ರೊಳಗೆ ನಡೆದ ಮಿಥುನ ಲಗ್ನದಲ್ಲಿ ಚಿರು-ಮೇಘನಾ ಸತಿಪತಿಗಳಾದರು. ತಾಳಿ ಕಟ್ಟುವಾಗ ಮೇಘನಾ ನಾನ್‍ಸ್ಟಾಪ್ ಆಗಿ ಮಾತನಾಡುತ್ತಲೇ ಇದ್ದರು. ಚಿರು ನಗುತ್ತಲೇ ಇದ್ದರು. ನೀಲಿ ಗೋಲ್ಡ್ ಮಿಶ್ರಿತ ಅಂಚಿನ ಸೀರೆ ಧರಿಸಿದ್ದ ಮೇಘನಾ, ಅದಕ್ಕೆ ತಕ್ಕಂತೆ ಮಾಂಗ್‍ಟಿಕಾ, ಡಾಬು, ಒಡವೆಗಳಿಂದ ನಕ್ಷತ್ರದಂತೆ ಮಿನುಗುತ್ತಿದ್ದರು. ವರ ಚಿರು, ಪೇಟ, ಬಿಳಿಪಂಚೆ, ಶಲ್ಯದಲ್ಲಿ ಮಿನುಗಿದರು.

  ನವದಂಪತಿಗಳ ವಿವಾಹ ಸಂಭ್ರಮಕ್ಕೆ ಇಡೀ ಸ್ಯಾಂಡಲ್‍ವುಡ್ ಸಾಕ್ಷಿಯಾಯ್ತು. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಕಲಾವಿದರು, ತಂತ್ರಜ್ಞರೂ ಮದುವೆಗೆ ಆಗಮಿಸಿ ವಧೂವರರಿಗೆ ಶುಭ ಕೋರಿದರು.

 • ದುರ್ಯೋಧನನಿಗೆ ಮೇಘನಾ ಭಾನುಮತಿ

  meghana as bhanumathi

  ಕುರುಕ್ಷೇತ್ರ, ಚಿತ್ರ ಶುರುವಾದಾಗಿನಿಂದ ಪಾತ್ರಧಾರಿಗಳ ಆಯ್ಕೆ, ಬದಲಾವಣೆ ಸುದ್ದಿಯಾಗುತ್ತಲೇ ಇದೆ. ಚಿತ್ರದ ಚಿತ್ರೀಕರಣ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಡಬ್ಬಿಂಗ್ ಕೂಡಾ ಶುರುವಾಗಿದೆ. ಆದರೆ, ದುರ್ಯೋಧನನಿಗೆ ನಾಯಕಿ ಯಾರು ಎಂಬುದರ ಬಗ್ಗೆ ಗೊಂದಲವಿದ್ದೇ ಇತ್ತು.

  ರಮ್ಯಾ ನಂಬೀಸನ್ ಭಾನುಮತಿಯಾಗಿ ನಟಿಸುತ್ತಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತಾದರೂ, ರಮ್ಯಾ ನಂಬೀಸನ್ ಡೇಟ್ಸ್ ಸಿಗಲೇ ಇಲ್ಲವಂತೆ. ಹೀಗಾಗಿ ರಮ್ಯಾ ನಂಬೀಸನ್ ಅವರನ್ನು ಕೈಬಿಟ್ಟಿರುವ ಚಿತ್ರತಂಡ ಈಗ ಆ ಪಾತ್ರಕ್ಕೆ ಮೇಘನಾ ಅವರನ್ನು ಆಯ್ಕೆ ಮಾಡಿದೆ. ಅಲ್ಲಿಗೆ ಮೇಘನಾ ಭಾನುಮತಿಯಾಗಿ ನಟಿಸಲಿರುವುದು ಖಚಿತ.

  ಕುರುಕ್ಷೇತ್ರ ಚಿತ್ರದಲ್ಲಿ ಸ್ಟಾರ್‍ಗಳ ಸಮಾಗಮವೇ ಆಗಿದೆ. ಆ ಸ್ಟಾರ್‍ಗಳ ಪಟ್ಟಿಗೆ ಹೊಸ ಸೇರ್ಪಡೆ ಮೇಘನಾ ರಾಜ್. ಟೆಸ್ಟ್ ಶೂಟ್ ಮುಗಿದಿದ್ದು, ಮೇಘನಾ ಅವರ ಪಾತ್ರದ  ಚಿತ್ರೀಕರಣ ಕೆಲವೇ ದಿನಗಳಲ್ಲಿ ಶುರುವಾಗಲಿದೆ.

 • ಭಾನುಮತಿ ಜೊತೆ ದುರ್ಯೋಧನನ ಪ್ರಣಯಗೀತೆ

  kurukshetra romantic songs goes viral

  ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಅಬ್ಬರಿಸಲು ರೆಡಿಯಾಗಿರುವ ದರ್ಶನ್, ಚಿತ್ರದಲ್ಲಿ ಪ್ರಣಯೇಶ್ವರನಾಗಿಯೂ ನಟಿಸಿದ್ದಾರೆ. ಮುನಿರತ್ನ ಕುರುಕ್ಷೇತ್ರದ ಪ್ರಣಯಗೀತೆಯ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಭಾನುಮತಿಯಾಗಿ ಮೇಘನಾ ರಾಜ್ ಅವರೊಂದಿಗೆ `ಚಾರುತಂತಿ ನಿನ್ನ ತನುವು.. ನುಡಿಸ ಬರುವೆನು ದಿನಾ.. ಹಾಡು ಪ್ರೇಮಪರ್ವದ ಸರಸ ಸಲ್ಲಾಪದ ಗೀತೆ.

  ಸೋನು ನಿಗಮ್, ಶ್ರೇಯಾ ಘೋಷಾಲ್ ಹಾಡಿಗೆ ಭಾವನೆ ತುಂಬಿದ್ದರೆ, ಸಾಹಿತ್ಯ ನೀಡಿರುವುದು ಡಾ.ನಾಗೇಂದ್ರ ಪ್ರಸಾದ್. ಹರಿಕೃಷ್ಣ ಸಂಗೀತದ ಹಾಡು ವೈಭವಯುತವಾಗಿ ಚಿತ್ರೀಕರಣಗೊಂಡಿದೆ.

 • ಮೇ 2ಕ್ಕೆ ಚಿರು-ಮೇಘನಾ ಮದುವೆ

  meghana raj chiu sarja on may 2nd

  ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ವಿವಾಹಕ್ಕೆ ಮೇ2ನೇ ತಾರೀಕು ಮುಹೂರ್ತ ಫಿಕ್ಸ್ ಆಗಿದೆ. ಆ ದಿನ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮೈದಾನದಲ್ಲಿ ಚಿರು-ಮೇಘನಾ ಸತಿಪತಿಗಳಾಗುತ್ತಿದ್ದಾರೆ.

  ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಮದುವೆಗೆ ವೇದಿಕೆ ಸಿದ್ಧಗೊಳ್ಳಲಿದೆ. ಅದೇ ದಿನ ಸಂಜೆ 7 ಗಂಟೆಗೆ ಆರತಕ್ಷತೆ.

  ಈಗಾಗಲೇ ಎರಡೂ ಕುಟುಂಬಗಳು ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿ. ಸರ್ಜಾ ಕುಟುಂಬ ಹಾಗೂ ಸುಂದರ್‍ರಾಜ್.. ಎರಡೂ ಕುಟುಂಬಗಳು ಬಣ್ಣದಲೋಕದ ನಂಟು ಹೊಂದಿವೆ. ಹೀಗಾಗಿ ಮೇ 2ನೇ ತಾರೀಕು, ಅರಮನೆ ಮೈದಾನದಲ್ಲಿ ಚಿತ್ರರಂಗದ ನಕ್ಷತ್ರಗಳೆಲ್ಲ ಹೊಳೆಯಲಿವೆ.

  Related Articles :-

  Chiru And Meghana Raj's Wedding On May 2nd

 • ಮೇಘನಾ ರಾಜ್ ಈಗ ಒಂಟಿ

  meghana raj is now onti

  ಮದುವೆಯಾಗಿ, ಕೆಲವು ತಿಂಗಳು ಆರಾಮಾಗಿದ್ದ ಬಳಿಕ ಮೇಘನಾ ರಾಜ್ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ದಾರೆ. ಒಂದರ ಹಿಂದೊಂದು ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರೀಗ ಒಂಟಿಯಾಗಿದ್ದಾರೆ.

  ಒರಟ ಐ ಲವ್ ಯೂ ಸಿನಿಮಾದ ಬಳಿಕ ನಿರ್ದೇಶಕ ಶ್ರೀ ನಿರ್ದೇಶಿಸುತ್ತಿರುವ ಚಿತ್ರವಿದು. ಸಿನಿಮಾದಲ್ಲಿ ಮೇಘನಾ, ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಲೇಜು ಹುಡುಗಿಯ ಪಾತ್ರವಾದರೂ ಡಿಫರೆಂಟ್ ಲುಕ್, ಗೆಟಪ್ ನನಗಿದೆ ಎನ್ನುತ್ತಾರೆ ಈಗಲೂ ಸ್ವೀಟ್ ಸಿಕ್ಸ್‍ಟೀನ್‍ರಂತೆಯೇ ಕಾಣುವ ಮೇಘನಾ.

  ಈ ಸಂಜೆ ಚಿತ್ರದ ಹೀರೋ ಆರ್ಯ ಕಥಾ ನಾಯಕ. ಭೂಗತ ಜಗತ್ತು, ಲವ್ ಸ್ಟೋರಿ ಎಲ್ಲವೂ ಇರುವ ಮಾಸ್ & ಕ್ಲಾಸ್ ಸಿನಿಮಾ ಎನ್ನುವುದು ನಿರ್ದೇಶಕರ ಭರವಸೆ.

 • ಮೇಘನಾ ರಾಜ್ ಕನಸು ಕುರುಕ್ಷೇತ್ರದಲ್ಲಿ ನನಸಾಯ್ತು..!!

  meghana raj's dreams come true with kurukshetra

  ಕನ್ನಡ ಮತ್ತು ಮಲಯಾಳಂನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಮೇಘನಾ ರಾಜ್, ಆರಂಭದಲ್ಲಿ ಸುಂದರ್ ರಾಜ್-ಪ್ರಮೀಳಾ ಜೋಷಾಯ್ ಮಗಳಾಗಿ ಗುರುತಿಸಿಕೊಂಡರೂ, ಕೆಲವೇ ದಿನಗಳಲ್ಲಿ ಸುಂದರ್ ರಾಜ್-ಪ್ರಮೀಳಾ ಜೋಷಾಯ್.. ಮೇಘನಾ ರಾಜ್ ತಂದೆ ತಾಯಿಯಂತೆ ಎನ್ನುವಷ್ಟರ ಮಟ್ಟಿಗೆ ಬೆಳೆದವರು. ಅದು ಮೇಘನಾ ರಾಜ್ ಪ್ರತಿಭೆಗೆ ಸಾಕ್ಷಿ. ಹೀಗಿದ್ದರೂ ಮೇಘನಾ ರಾಜ್ ಅವರಿಗೆ ದರ್ಶನ್ ಜೊತೆ ನಟಿಸುವ ಕನಸಿತ್ತಂತೆ.

  ದರ್ಶನ್ ಜೊತೆ ನಟಿಸಬೇಕು ಎನ್ನುವುದು ನನ್ನ ಕನಸಾಗಿತ್ತು. ಆದರೆ, ಈಡೇರಿರಲೇ ಇಲ್ಲ. ಕುರುಕ್ಷೇತ್ರದಲ್ಲಿ ಭಾನುಮತಿಯ ಆಫರ್ ಬಂದಾಗ ಥ್ರಿಲ್ಲಾಗಿದ್ದೆ ಎನ್ನುವ ಮೇಘನಾಗೆ ಕುರುಕ್ಷೇತ್ರ ಹಲವು ಪ್ರಥಮಗಳ ಸಿನಿಮಾ.

  ಮೊದಲ ಪೌರಾಣಿಕ ಚಿತ್ರ, ಮೊದಲ 3ಡಿ ಸಿನಿಮಾ, ಸೆಟ್ಟಿನಲ್ಲಿಯೇ ಚಿತ್ರೀಕರಿಸಲ್ಪಟ್ಟ ಮೊದಲ ಸಿನಿಮಾ, ಮಾವ ಅರ್ಜುನ್ ಸರ್ಜಾ ಜೊತೆಯಲ್ಲೂ ಮೊದಲನೇ ಸಿನಿಮಾ ಮತ್ತು ದರ್ಶನ್ ಜೊತೆ ಮೊದಲ ಸಿನಿಮಾ. 

  ಮೊದಲ ದಿನವೇ ಅರ್ಜುನ್ ಸರ್ಜಾ ಮತ್ತು ದರ್ಶನ್ ಎದುರು ನಟಿಸುವ ದೃಶ್ಯ, ಜೊತೆಗೆ ದೊಡ್ಡ ಡೈಲಾಗು.. ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ ಮೇಘನಾ ರಾಜ್.

  ಕುರುಕ್ಷೇತ್ರದಲ್ಲಿ ಮೇಘನಾ ರಾಜ್ ಭಾನುಮತಿ ಪಾತ್ರದಲ್ಲಿ ನಟಿಸಿದ್ದು, ಚಾರುತಂತಿ ಹಾಡು ಹಿಟ್ ಆಗಿದೆ.  ಇಡೀ ಚಿತ್ರತಂಡದಲ್ಲಿ ನಾನೇ ಚಿಕ್ಕವಳು. ಜೊತೆಯಲ್ಲಿದ್ದವರೆಲ್ಲ ದಿಗ್ಗಜರು. ಹೀಗಾಗಿ ಸೆಟ್‍ಗೆ ಹೋಗುವಾಗ ಒಂದು ಭಯ ಇರುತ್ತಿತ್ತು ಎಂದಿದ್ದಾರೆ ಮೇಘನಾ.

   

 • ಮೇಘನಾ-ಚಿರು 10 ವರ್ಷದ ಲವ್ ಸ್ಟೋರಿ

  meghana reveals her 10 years love story

  ನಮ್ಮಿಬ್ಬರ ಪ್ರೀತಿ ವಿಚಾರ ಹೇಳೋವಾಗ ತಡವಾಯ್ತು. ಆದರೆ ಬೇಜಾರೇನಿಲ್ಲ. ಸಂಬಂಧ ಮುಚ್ಚಿಡುವ ಅವಶ್ಯಕತೆಯೆನೂ ಇರಲಿಲ್ಲ. ಅದನ್ನು ಜನರಿಗೆ ಹೇಳುವ ಸಂದರ್ಭ ಕೂಡಿ ಬಂದಿರಲಿಲ್ಲ ಅಷ್ಟೆ. ಹೀಗೆ ಹೆಳುತ್ತಾ ಮತ್ತು ಚಿರು ನಡುವಿನ 10 ವರ್ಷದ ಪ್ರೇಮಕಥೆ ಬಿಚ್ಚಿಟ್ಟಿದ್ದಾರೆ ಮೇಘನಾ. 

  ಅವರಿಬ್ಬರ ಪರಿಚಯವಾಗಿದ್ದು ಯಾವುದೋ ಕಾರ್ಯಕ್ರಮದಲ್ಲಿ. ಅಮ್ಮನೇ ಪರಿಚಯ ಮಾಡಿಸಿದರು. ಚಿರಂಜೀವಿ ಸರ್ಜಾ ನೋಡೋಕೆ ರಫ್ ಅಷ್ಟೆ. ನಾಚಿಕೆ ಸ್ವಭಾವದ ಕರುಣಾಮಯಿ. ಹೀಗಾಗಿಯೇ ಚಿರು ಇಷ್ಟವಾದರು ಎನ್ನುತ್ತಾರೆ ಮೇಘನಾ. ನಿಶ್ಚಿತಾರ್ಥದ ವಿಚಾರವನ್ನು ತಂದೆ ಮುಚ್ಚಿಟ್ಟಿದ್ದಕ್ಕೆ ಕಾರಣ, ಅದು ನಮ್ಮ ಖಾಸಗಿ ವಿಷಯ ಎಂಬುದಷ್ಟೆ.  ಅಲ್ಲದೆ ಆ ವಿಷಯವನ್ನು ಚಿರಂಜೀವಿ ಹುಟ್ಟುಹಬ್ಬದ ದಿನವೇ ಅನೌನ್ಸ್ ಮಾಡಬೇಕು ಎಂದು ನಿರ್ಧರಿಸಿದ್ದೆವು. ಇದರ ಹೊರತಾಗಿ ಬೇರೆ ಯಾವ ಕಾರಣವೂ ಇಲ್ಲ. ಇಷ್ಟನ್ನೂ ಹೇಳಿಕೊಂಡಿರುವ ಮೇಘನಾ, ಮದುವೆ ಯಾವಾಗ ಅನ್ನೋದು ಫಿಕ್ಸ್ ಆಗಿಲ್ಲ ಎಂದಿದ್ದಾರೆ.

  ನನ್ನದು ಕೋಪದ ಸ್ವಭಾವ. ನನಗೆ ವಿರುದ್ಧವಾದ ವ್ಯಕ್ತಿತ್ವ ಚಿರಂಜೀವಿಯದ್ದು. ಅವರು ಸಿಟ್ಟು ಮಾಡಿಕೊಳ್ಳಲ್ಲ ಎಂದು ಚಿರಂಜೀವಿ ವ್ಯಕ್ತಿತ್ವ ಹೊಗಳುವ ಮೇಘನಾಗೆ, ತನ್ನ ತಾಯಿ ಹುಷಾರಿಲ್ಲದಿದ್ದಾಗ, 200 ಕಿ.ಮೀ. ಡ್ರೈವ್ ಮಾಡಿಕೊಂಡು ಬಂದು ನನ್ನ ಜೊತೆ ಇದ್ದ ಚಿರಂಜೀವಿ ಬಗ್ಗೆ ವಿಶೇಷ ಅಕ್ಕರೆಯೂ ಇದೆ. 

  ಮದುವೆ ಯಾವಾಗ ಅಂತಾ ತಲೆ ಕೆಡಿಸಿಕೊಂಡ್ರೆ ಸೌಂದರ್ಯ ಹಾಳಾಗುತ್ತೆ. ಅದನ್ನೆಲ್ಲ ಹಿರಿಯರಿಗೆ ಬಿಟ್ಟಿದ್ದೇವೆ ಎಂದು ನಗುವ ಮೇಘನಾ, ಎಂಜೇಜ್‍ಮೆಂಟ್‍ಗೆ ರೆಡಿಯಾಗುತ್ತಿದ್ದಾರೆ.

  Related Articles :-

  ಮೇಘನಾಗೂ ನಂಗೂ ಮದ್ವೆ ಗ್ಯಾರಂಟಿ - ಚಿರಂಜೀವಿ

  Chiru Confirms His Engagement With Meghana Raj

  ಅ.22ಕ್ಕೆ ಚಿರು-ಮೇಘನಾ ನಿಶ್ಚಿತಾರ್ಥ

  ಚಿರು ಮೇಘನಾ ಮದ್ವೆಯಂತೆ..! ನಿಜಾನಾ..?

   

 • ಮೇಘನಾ-ಚಿರು ಮೊದಲ ಮದುವೆ ಆಯ್ತು..!

  chiranjeevi meghana first wedding completed

  ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮೊದಲ ಮದುವೆ ನೆರವೇರಿದೆ. ಕ್ರೈಸ್ತ ಸಂಪ್ರದಾಯದಂತೆ ಚಿರು ಮತ್ತು ಮೇಘನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಮೇ 2ರಂದು ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಶಾಸ್ತ್ರೋಕ್ತವಾಗಿ ವಿವಾಹವಾಗಲಿದ್ದಾರೆ.

  ಕೋರಮಂಗಲದಲ್ಲಿರುವ ಸೆಂಟ್ ಆಂಥೋನಿ ಫ್ರೈರಿ ಚರ್ಚ್‍ನಲ್ಲಿ ಫಾದರ್ ಪ್ರವೀಣ್ ಕುಮಾರ್, ವಿವಾಹ ವಿಧಿ ನೆರವೇರಿಸಿಕೊಟ್ಟರು. ಕ್ರೈಸ್ತ ಸಂಪ್ರದಾಯದಂತೆ ಮೇಘನಾ ಶ್ವೇತಧಾರಿಣಿಯಾಗಿದ್ದರೆ, ಚಿರು ನೀಲಿ ಸೂಟ್‍ನಲ್ಲಿದ್ದರು. ಉಂಗುರ ಬದಲಾಯಿಸಿಕೊಂಡ ನಂತರ, ವಿವಾಹದ ನೋಂದಣಿಯನ್ನು ಮಾಡಿಕೊಳ್ಳಲಾಯ್ತು. ಬೈಬಲ್ ಮುಟ್ಟಿ ಪ್ರಮಾಣ ಸ್ವೀಕರಿಸಿ, ಉಂಗುರ ಬದಲಾಯಿಸಿ ಕೊಂಡರು.

  ಚಿರಂಜೀವಿ ಪರವಾಗಿ ಅರ್ಜುನ್ ಸರ್ಜಾ, ಆಶಾ ರಾಣಿ, ಧ್ರುವ ಸರ್ಜಾ ಸಹಿ ಹಾಕಿದರೆ, ಮೇಘನಾ ಅವರ ಪರವಾಗಿ ಸಂತೋಷ್ ಕೋಷಿ, ಸೋಫಿಯಾ ಕೋಷಿ ಸಹಿ ಹಾಕಿದರು. ಕಲಾವಿದರಾದ ತಾರಾ, ಪ್ರಜ್ವಲ್ ದೇವರಾಜ್ ನವವಧುವರರಿಗೆ ಶುಭ ಹಾರೈಸಿದ್ರು.

  ಮೇಘನಾ ಅವರ ತಾಯಿ ಪ್ರಮೀಳಾ ಜೋಷಾಯ್ ಕ್ಯಾಥೊಲಿಕ್ ಕ್ರೈಸ್ತರಾಗಿದ್ದರೆ, ಸುಂದರ್ ರಾಜ್ ಅಯ್ಯಂಗಾರ್ ಬ್ರಾಹ್ಮಣರು. ಮೇ 2ರಂದು ಅಯ್ಯಂಗಾರ್ ಸಂಪ್ರದಾಯದಂತೆ ಶಾಸ್ತ್ರೋಕ್ರವಾಗಿ ಮದುವೆ ನಡೆಯಲಿದೆ.

Shivarjun Movie Gallery

Popcorn Monkey Tiger Movie Gallery