` shakeela - chitraloka.com | Kannada Movie News, Reviews | Image

shakeela

 • Love You Aaliya Audio Released

  love you aaliya imeag

  Crazy Star Ravichandran released the audio of his forthcoming film 'Love You Aaliya' being directed by Stylish director Indrajith Lankesh. The audio release was held at the sets of 'Maja With Sruja' programmed being aired in Colors Kannada. Indrajith Lankesh plays a judge for the famous reality show and the audio release will be released through the programme.

  Apart from Indrajith Lankesh and Ravichandran, Bhumika Chawla, Shakeela and others were also present at the occasion.

 • ಬಂಗಾರದ ಗೊಂಬೆ ಶಕೀಲಾ ಪೋರ್ನ್ ಸ್ಟಾರ್ ಅಲ್ಲ.. !

  indrajith lankesh's shakeela first look out

  ಶಕೀಲಾ.. ಒಂದಾನೊಂದು ಕಾಲದ ವಯಸ್ಸಕರಿಗೆ ಮಾತ್ರ ಚಿತ್ರಗಳ ಸೂಪರ್ ಸ್ಟಾರ್. ಆಕೆಯ ಚಿತ್ರಗಳು ತಯಾರಾಗುತ್ತಿದ್ದುದು ಮಲಯಾಳಂನಲ್ಲಾದರೂ.. ಕನ್ನಡ,ತೆಲುಗು, ತಮಿಳು ಭಾಷಿಕರೂ ಆಕೆಯ ಚಿತ್ರಗಳನ್ನು ಹುಚ್ಚೆದ್ದು ನೋಡುತ್ತಿದ್ದರು. ಆಕೆಯ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಹೊರಟಿರುವ ಇಂದ್ರಜಿತ್ ಲಂಕೇಶ್, ಈಗ ಆ ಚಿತ್ರದ ಫಸ್ಟ್‍ಲುಕ್ ಬಿಡುಗಡೆ ಮಾಡಿದ್ದಾರೆ.

  ಶಕೀಲಾ - ನಾಟ್ ಎ ಪೋರ್ನ್ ಸ್ಟಾರ್ ಚಿತ್ರದ ಫಸ್ಟ್‍ಲುಕ್‍ನಲ್ಲಿ ರಿಚಾಚಡ್ಡಾ ಅಲಿಯಾಸ್ ಶಕೀಲಾ, ಸಂಪೂರ್ಣ ಬಂಗಾರದಲ್ಲೇ ಮುಳುಗಿದ್ದಾರೆ. ಥೇಟು ಬಂಗಾರದ ಗೊಂಬೆ. ಏಕೆ ಹೀಗೆ.. ಶಕೀಲಾ ಪಾತ್ರಧಾರಿ ಆಭರಣ ಸುಂದರಿಯಾಗಿದ್ದು ಏಕೆ.. ಎಂದರೆ ಅದನ್ನು ಚಿತ್ರದಲ್ಲೇ ನೋಡಿ. ಆ ಫೋಟೋಗೂ, ಚಿತ್ರದ ಕಥೆಗೂ ಲಿಂಕ್ ಇದೆ. ಈಗಲೇ ಹೇಳಲ್ಲ ಅಂತಾರೆ ಇಂದ್ರಜಿತ್.

 • ಬರೆದವರನ್ನು ಕಾಡಿದ ಶಕೀಲ ಕಥೆಗಳು

  shakeel's biography

  ಶಕೀಲ. ಒಂದಾನೊಂದು ಕಾಲದಲ್ಲಿ ಯುವಕರ ನಿದ್ದೆಗೆಡಿಸಿದ್ದ ನಟಿ. ಆದರೆ, ಆಕೆಯ ಬದುಕು ಅಷ್ಟು ರೋಮಾಂಚಕವಲ್ಲ. ಕಣ್ಣೀರ ಧಾರೆ. ಆಕೆಯ ಜೀವನ ಚರಿತ್ರೆ ಮಲಯಾಳಂನಲ್ಲಿ ಬಂದಿತ್ತು. ಅದನ್ನು ಕನ್ನಡಕ್ಕೆ ಅನುವಾದಿಸಿದ್ದವರು ಕೆ.ಕೆ. ಗಂಗಾಧರನ್. ಪುಸ್ತಕ ಬರೆದು ಎಷ್ಟೋ ವರ್ಷಗಳಾಗಿವೆ. ಆದರೆ, ಇವತ್ತಿಗೂ ಅವರನ್ನು ಆ ಪುಸ್ತಕ ಕಾಡುತ್ತಲೇ ಇದೆ. ಅವರೇ ಹೇಳಿಕೊಂಡಿರುವ ಕಥೆಗಳನ್ನೊಮ್ಮೆ ಓದಿ.

  ಶಕೀಲ ಕೃತಿಯನ್ನು ಮಲಯಾಳಂನಲ್ಲಿ ಬರೆದಿದ್ದವರು ಮಲಯಾಳಂನ ಖ್ಯಾತ ಲೇಖಕ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತ. ಆದರೆ, ಶಕೀಲ ಪುಸ್ತಕ ಬರೆದೆನೆಂದು ಗೊತ್ತಾದರೆ, ತನ್ನ ಇಮೇಜ್ ಹಾಳಾಗುತ್ತೆ ಎಂಬ ಕಾರಣಕ್ಕೆ, ಆತ ಕೃತಿಯಲ್ಲಿ ತನ್ನ ಹೆಸರನ್ನೇ ಹಾಕಿಕೊಂಡಿರಲಿಲ್ಲ.

  ಪುಸ್ತಕ ಓದಿದ ಶಿವಮೊಗ್ಗದ ವೈದ್ಯರೊಬ್ಬರು ಶಕೀಲಾರನ್ನು ತನಗೆ ಮದುವೆ ಮಾಡಿಸುವಂತೆ ಗಂಗಾಧರನ್‍ಗೆ ದುಂಬಾಲು ಬಿದ್ದಿದ್ದರು. ನೀವೇ ನಿಂತು ಮದುವೆ ಮಾಡಿಸಬೇಕು ಎಂದು ಗೋಗರೆದಿದ್ದರು. ಕೊನೆಗೆ ನಾನು ಬ್ರೋಕರ್ ಅಲ್ಲ, ಅನುವಾದಕನಷ್ಟೇ ಎಂದು ಜಾರಿಕೊಂಡಿದ್ದರು ಗಂಗಾಧರನ್. 

  ಪುಸ್ತಕ ಓದಿ, ಯುವತಿಯೊಬ್ಬಳು ತನ್ನ ಗಂಡನಿಗೆ ಡೈವೋರ್ಸ್ ನೀಡಿ, ನನ್ನನ್ನು ಮದುವೆಯಾಗುವುದಾಗಿ ದುಂಬಾಲು ಬಿದ್ದಿದ್ದಳು. ಕೊನೆಗೆ ಆಕೆಗೆ ಗಂಗಾಧರನ್ ತಮ್ಮ ಪತ್ನಿಯಿಂದ ಬುದ್ದಿ ಹೇಳಿಸಬೇಕಾಯಿತಂತೆ.

  ಒಮ್ಮೆ ಕನ್ನಡ ಭವನಕ್ಕೆ ಹೋಗಿ, ಎರಡು ಪುಸ್ತಕಗಳನ್ನು ಕೊಟ್ಟು ಸ್ವೀಕೃತಿ ಪತ್ರ ಪಡೆದು ಹೋಗುತ್ತಿದ್ದರಂತೆ.  ಆಗ ಅಲ್ಲಿದ್ದ ಇಬ್ಬರು ವಿದ್ವಾಂಸರು ಗಂಗಾಧರನ್ ಅವರನ್ನು ಕಡೆದು ಮಾತನಾಡಿಸಿ ಶಕೀಲ ಪುಸ್ತಕದ ಅನುವಾದ ಚೆನ್ನಾಗಿದೆ ಎಂದು ಹೊಗಳಿದರಂತೆ. ಕೊನೆಗೂ ಕನ್ನಡ ಭವನದಲ್ಲಿ ನನಗೆ ಕಾಫಿಯ ಗೌರವ ಕೊಡಿಸಿದ್ದು ಶಕೀಲ ಎಂಬ ನಟಿ ಎಂದು ನಕ್ಕು ಹೊರಬಂದಿದ್ದರಂತೆ ಗಂಗಾಧರನ್.

  ಅಷ್ಟೇ ಏಕೆ, ಪುಸ್ತಕದಲ್ಲಿ ತಾನೇ ತನ್ನ ತಾಯಿಯ ಬಗ್ಗೆ ಹೇಳಿದ್ದ ಮಾತನ್ನು ಪತ್ರಕರ್ತರು ಪ್ರಶ್ನಿಸಿದಾಗ ತಾನು ಹಾಗೆ ಹೇಳೇ ಇಲ್ಲ ಎಂದು ಹಠ ಸಾಧಿಸಿದ್ದರಂತೆ ಶಕೀಲ. ಇನ್ನು ಶಕೀಲಾ ಅವರ ಜೀವನ ಚರಿತ್ರೆ ಓದಿ ಕನ್ನಡದ ಮೂವರು ನಟಿಯರು ಫೋನ್ ಮಾಡಿ ಕಣ್ಣೀರಿಟ್ಟಿದ್ದರಂತೆ.

  ಆದರೆ, ಅದೆಲ್ಲಕ್ಕಿಂತ ಮಿಗಿಲಾದದ್ದು ಆಟೋ ಡ್ರೈವರ್ ಒಬ್ಬರ ಕಮೆಂಟ್. ಆಟೋದಲ್ಲಿ ಹೋಗುತ್ತಿದ್ದಾಗ ಜೊತೆಗಿದ್ದ ಮಿತ್ರರೊಬ್ಬರು ನೀವೀಗ ಕೆ.ಕೆ. ಗಂಗಾಧರನ್ ಅಲ್ಲ, ಶಕೀಲ ಗಂಗಾಧರನ್ ಎಂದು ರೇಗಿಸಿದರಂತೆ. ಆಟೋ ಡ್ರೈವರ್ ತಕ್ಷಣ ಆಟೋವನ್ನು ಬದಿಯಲ್ಲಿ ನಿಲ್ಲಿಸಿ, ಶಕೀಲಾ ಪುಸ್ತಕ ಬರೆದಿದ್ದು ನೀವಾ ಸರ್, ಸಖತ್ತಾಗಿದೆ.. ಎಂದು ಹೇಳಿ ಮೆಚ್ಚಿದ್ದನಂತೆ. 

  ಹೀಗೆ ಶಕೀಲಾ ಪುಸ್ತಕ ಹಲವು ವರ್ಷಗಳ ನಂತರವೂ ಕಾಡುತ್ತಿದೆ ಎಂಬುದನ್ನು ಗಂಗಾಧರನ್ ಸ್ಮರಿಸಿಕೊಂಡಿದ್ದಾರೆ. 

   

 • ಯಾರನ್ನೂ ನಂಬಬಾರದು.. ಇದು ಶಕೀಲಾ ಕಲಿತ ಜೀವನಪಾಠ

  shakeela shares her life experience

  ಶಕೀಲಾ... ಒಂದಾನೊಂದು ಕಾಲದ ಪಡ್ಡೆ ಹುಡುಗರ ಸ್ವಪ್ನ ಸುಂದರಿ. ಈಗ ಅವರ ಜೀವನವೇ ಸಿನಿಮಾ ಆಗುತ್ತಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಬಾಲಿವುಡ್ ಸುಂದರಿ ರಿಚಾ ಚಡ್ಡಾ, ಶಕೀಲಾ ಪಾತ್ರ ಮಾಡುತ್ತಿದ್ದಾರೆ. ರಿಚಾ ಸ್ಲಿಂ & ಬ್ಯೂಟಿಫುಲ್. ಆದರೆ, ಶಕೀಲಾ ಪಾತ್ರಕ್ಕಾಗಿ ಡುಮ್ಮಗಾಗುತ್ತಿಲ್ಲ. ಚಿತ್ರದಲ್ಲಿ ಆ ಅಂಶಗಳಿಗಿಂತ ಹೆಚ್ಚು, ಶಕೀಲಾ ಅವರ ವೈಯಕ್ತಿಕ ಜೀವನಕ್ಕೆ ಒತ್ತು ಕೊಡಲಾಗಿದೆ ಎಂದಿದ್ದಾರೆ ಎಂದಿದ್ದಾರೆ ರಿಚಾ ಚಡ್ಡಾ.

  ಇಷ್ಟು ವರ್ಷಗಳ ವೃತ್ತಿ ಜೀವನ, ವೈಯಕ್ತಿಕ ಬದುಕಿನ ಏರಿಳಿತಗಳನ್ನು ಕಂಡಿರುವ ಶಕೀಲಾ, ಈಗ ಸಿಂಗಲ್. ನಿಮಗೆ ಜೀವನ ಕಲಿಸಿದ ದೊಡ್ಡ ಪಾಠವೇನು ಎಂದರೆ ಶಕೀಲಾ ಹೇಳುವುದಿಷ್ಟೆ.. ಯಾರನ್ನೂ ನಂಬಬಾರದು.. ಹೆತ್ತವರನ್ನು, ಬಂಧುಗಳನ್ನು ಯಾರನ್ನೂ ನಂಬಬಾರದು. 

  ಹೌದು, ಶಕೀಲಾರ ಬದುಕನ್ನು ಪಾಪದ ಕೂಪಕ್ಕೆ ತಳ್ಳಿದ್ದು ಅವರ ತಾಯಿ. ವೇಶ್ಯಾವಾಟಿಕೆಗೆ ದೂಡಿದ್ದರು ಎಂಬುದನ್ನು ಶಕೀಲಾ ತಮ್ಮ ಆತ್ಮಕಥನದಲ್ಲಿ ಬರೆದುಕಂಡಿದ್ದಾರೆ. ಮಗಳು ವಯಸ್ಕರ ಚಿತ್ರಗಳಲ್ಲಿ ನಟಿಸುತ್ತಿರುವಾಗ, ಹಣ ಬರುತ್ತದೆ ಎಂಬ ಕಾರಣಕ್ಕೆ ಪ್ರೋತ್ಸಾಹಿಸಿದವರು ಅವರ ತಾಯಿ. ಇನ್ನು ಶಕೀಲ ಅವರು ದುಡಿದಿದ್ದ ಹಣವನ್ನು ದೋಚಿಕೊಂಡು ಅವರನ್ನು ಬೀದಿಗೆ ತಳ್ಳಿದವರು ಅವರ ಒಡಹುಟ್ಟಿದವರು. ಈ ಕಥೆಗಳೆಲ್ಲ ಸಿನಿಮಾದಲ್ಲಿ ಬರಲಿವೆ.

 • ಸಿನಿಮಾ ಆಗುತ್ತಿದೆ ಶಕೀಲಾ ಜೀವನ..!

  movie on shakeel to starts soon

  ಒಂದಾನೊಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಶಕೀಲಾ. ಶಕೀಲಾ ಅಭಿನಯದ ಅರೆನೀಲಿ ಚಿತ್ರಗಳ ಎದುರು ಮೋಹನ್‍ಲಾಲ್, ಮುಮ್ಮಟ್ಟಿಯಂಥವರ ಚಿತ್ರಗಳೂ ಪರದಾಡುತ್ತಿದ್ದ ಕಾಲವೂ ಇತ್ತು. ಹೆಚ್ಚೂ ಕಡಿಮೆ ಒಂದು ದಶಕದ ಕಾಲ ಮಲ್ಲು ಚಿತ್ರರಂಗವನ್ನು `ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ' ಚಿತ್ರಗಳ ಮೂಲಕ ಆಳಿದವರು ಶಕೀಲಾ.

  ಆಕೆಯ ಮೈಮಾಟ ನೋಡಿ ಖುಷಿ ಪಡುತ್ತಿದ್ದ ಅಭಿಮಾನಿಗಳಿಗೆ ಆಕೆಯ ಜೀವನದ ಕಥೆ ಹೊರಬಿದ್ದಾಗ ಶಾಕ್ ಆಗಿತ್ತು. ಏಕೆಂದರೆ, ಶಕೀಲಾ ಅವರ ಜೀವನದಲ್ಲಿ ಎದುರಿಸಿದ್ದ ಸಂಕಟಗಳು ಆಘಾತ ತರುವಂತಿದ್ದವು. ಜೀವನದ ಪ್ರತಿ ಹಂತದಲ್ಲೂ ಆಕೆ ಎದುರಿಸಿದ ಅವಮಾನ, ಅನುಮಾನದ ಕಥೆಗಳನ್ನು ಆತ್ಮಕಥೆಯಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದರು ಶಕೀಲಾ.

  ಈಗ ಅವರ ಆ ಜೀವನವನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. ಇದು ಹಳೆಯ ಪ್ರಾಜೆಕ್ಟೇ. 2015ರಲ್ಲಿಯೇ ಇಂದ್ರಜಿತ್ ಈ ಚಿತ್ರದ ಬಗ್ಗೆ ಮಾತನಾಡಿದ್ದರು. ಈಗ ಆ ಚಿತ್ರಕ್ಕೆ ಜೀವ ಬಂದಿದೆ. ಶಕೀಲಾ ಪಾತ್ರದಲ್ಲಿ ನಟಿಸೊಕೆ ಬಾಲಿವುಡ್ ನಟಿ ರಿಚಾ ಚಡ್ಡಾ ಒಪ್ಪಿಕೊಂಡಿದ್ದಾರಂತೆ. ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ.

Adachanege Kshamisi Teaser Launch Gallery

Mataash Movie Gallery