ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಬೃಹಸ್ಪತಿ ಚಿತ್ರ ತೆರೆಗೆ ಬರುತ್ತಿದೆ. ಮುಂದಿನ ವರ್ಷದ ಜನವರಿ ಮೊದಲ ವಾರದಲ್ಲೇ ಮನೋರಂಜನ್, ಬೃಹಸ್ಪತಿಯಾಗಿ ಟಾಕೀಸ್ ಟಾಕೀಸ್‍ಗಳಲ್ಲಿ ದರ್ಶನ ಕೊಡಲಿದ್ದಾರೆ.
ಚಿತ್ರದ ವಿಶೇಷವೇನು ಗೊತ್ತಾ..? ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ತಮಿಳು, ತೆಲುಗು, ಹಿಂದಿಯಲ್ಲಿ ಬಿಗ್ ಬಜೆಟ್ ಸಿನಿಮಾಕ್ಕಿಳಿದು ಗೆದ್ದ ರಾಕ್‍ಲೈನ್, ಕನ್ನಡ ಚಿತ್ರರಂಗವನ್ನು ಬಿಟ್ಟರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಉತ್ತರ ಕೊಟ್ಟಿದ್ದಾರೆ ರಾಕ್‍ಲೈನ್.
ಈಗ ವಿಶೇಷ ವಿಷಯಕ್ಕೆ ಬರೋಣ. ರಾಕ್‍ಲೈನ್ ವೆಂಕಟೇಶ್, ನಟ ರವಿಚಂದ್ರನ್ ಆಪ್ತಮಿತ್ರರಲ್ಲಿ ಒಬ್ಬರು. ರವಿಚಂದ್ರನ್ ಅಭಿನಯದ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದ ರಾಕ್‍ಲೈನ್ ವೆಂಕಟೇಶ್, ಈಗ ಅವರ ಮಗನ ಚಿತ್ರವನ್ನೂ ನಿರ್ಮಿಸಿದ್ದಾರೆ. ರಾಕ್‍ಲೈನ್-ರವಿಚಂದ್ರನ್ ಜೋಡಿಗೆ ಸಿಕ್ಕಂಥ ಯಶಸ್ಸು, ರಾಕ್‍ಲೈನ್-ಮನೋರಂಜನ್ ಜೋಡಿಗೂ ಸಿಗಲಿ.
ಚಿತ್ರಕ್ಕೆ ನಂದಕಿಶೋರ್ ನಿರ್ದೇಶಕ. ಮಿಶ್ತಿ ಚಕ್ರವರ್ತಿ ನಾಯಕಿ. ಇನ್ನು ರವಿಚಂದ್ರನ್ ಅವರ ಗರಡಿಯಲ್ಲೇ ಇದ್ದ ಹರಿಕೃಷ್ಣ ಮ್ಯೂಸಿಕ್ ಡೈರೆಕ್ಟರ್. ಸಿತಾರಾ, ಅವಿನಾಶ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ್ ಮೊದಲಾದವರು ನಟಿಸಿರುವ ಸಿನಿಮಾ, ತಮಿಳಿನ ವಿಐಪಿ ಚಿತ್ರದ ರೀಮೇಕ್.