` radhika pandit, - chitraloka.com | Kannada Movie News, Reviews | Image

radhika pandit,

 • ಯಾರೀಕೆ ಆದಿಲಕ್ಷ್ಮಿಯ ಸೃಷ್ಟಿಕರ್ತೆ..?

  who is the director of adilakshmi purana

  ಆದಿಲಕ್ಷ್ಮಿ ಪುರಾಣ.. ಇದೇ ವಾರ ರಿಲೀಸ್ ಆಗುತ್ತಿರುವ ಸಿನಿಮಾ. ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ನಟಿಸಿರುವ ಚಿತ್ರದ ನಿರ್ದೇಶಕಿ ಪ್ರಿಯಾ. ತಮಿಳುನಾಡಿನವರಾದ ಪ್ರಿಯಾ ಮಣಿರತ್ನಂ ಅವರ ಬಳಿ ಅಸಿಸ್ಟೆಂಟ್ ಆಗಿದ್ದವರು. ಮಣಿರತ್ನಂ ಅವರ ಪತ್ನಿ ಸುಹಾಸಿನಿ ಜೊತೆಯಲ್ಲೂ ಕೆಲಸ ಮಾಡಿದ್ದಾರೆ.

  ತಮಿಳಿನಲ್ಲಿ ಕಂಡನಾಳ್ ಮುದುಲ್, ಕಣ್ಣಾಮೂಚಿ ಏನಡ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮಣಿರತ್ನಂ ದೃಶ್ಯಗಳನ್ನು ಸೃಷ್ಟಿಸುವ ಕಲೆ ಮತ್ತು ಸುಹಾಸಿನಿಯವರ ಬರವಣಿಗೆಯನ್ನು ಇಷ್ಟಪಡುವ ಪ್ರಿಯಾಗೆ ಕನ್ನಡದಲ್ಲಿದು ಮೊದಲ ಚಿತ್ರ.

  ಅಂದಹಾಗೆ ಚಿತ್ರಕ್ಕೆ ನಾಯಕ, ನಾಯಕಿಯ ಆಯ್ಕೆಯನ್ನು ರಾಕ್‍ಲೈನ್ ಅವರೇ ಮಾಡಿದ್ದರಂತೆ. ಹಾಗೆಂದು ಬೇಸರವೇನಿಲ್ಲ. ಅವರಿಬ್ಬರೂ ತಮ್ಮ ಪಾತ್ರಕ್ಕೆ ಅದ್ಭುತವಾಗಿ ನ್ಯಾಯ ಒದಗಿಸಿದ್ದಾರೆ. ಈಗ ಅವರ ಜಾಗದಲ್ಲಿ ಇನ್ನೊಬ್ಬರನ್ನು ಕಲ್ಪಿಸಿಕೊಳ್ಳುವುದೂ ಕಷ್ಟ ಎನ್ನುತಾರೆ ಪ್ರಿಯಾ.

  ಪ್ರಿಯಾ ನಿರ್ದೇಶನದ ಮೊದಲ ಚಿತ್ರಕ್ಕೆ ಕ್ಯಾಮೆರಾಮನ್ ಆಗಿರುವುದು ಅವರ ಗೆಳತಿ ಪ್ರೀತಾ. ಕನ್ನಡದಲ್ಲಿ ಸಿನಿಮಾ ಯಶಸ್ವಿಯಾದರೆ ತಮಿಳಿನಲ್ಲೂ ರಿಲೀಸ್ ಮಾಡುವ ಆಲೋಚನೆ ಪ್ರಿಯಾ ಅವರಿಗೆ ಇದೆ.

 • ರವಿಚಂದ್ರನ್ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ನಾಯಕಿ

  ravichandran, radhika kumaraswamy

  ರವಿಚಂದ್ರನ್ ನಿರ್ದೇಶನದ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ನಾಯಕಿಯಾಗಿ  ರಾಧಿಕಾ ಕುಮಾರಸ್ವಾಮಿ ನಟಿಸುತ್ತಿದ್ದಾರೆ. ಈ ಹಿಂದೆ ರವಿಚಂದ್ರನ್ - ರಾಧಿಕಾ 'ಹಠವಾದಿ' ಮತ್ತು 'ಒಡಹುಟ್ಟಿದವಳು' ಚಿತ್ರದಲ್ಲಿ ನಟಿಸಿದ್ದ ರಾಧಿಕಾ, ಸುಮಾರು 11 ವರ್ಷಗಳ ನಂತರ ಮತ್ತೊಮ್ಮೆ ರವಿಚಂದ್ರನ್ ಜೊತೆಯಾಗಿದ್ದಾರೆ.

  ಈ ಚಿತ್ರಕ್ಕೆ ರವಿಚಂದ್ರನ್ ಬರೀ ನಾಯಕನಷ್ಟೇ ಅಲ್ಲ,  ಕಥೆ, ಚಿತ್ರಕಥೆಯೂ ಅವರದ್ದೇ. ನಿರ್ದೇಶಕರೂ ಅವರೇ. ಚಿತ್ರವನ್ನು ಈಶ್ವರಿ ಪ್ರೊಡಕ್ಷನ್ ಬ್ಯಾನರ್‌ನಡಿ ನಿರ್ಮಿಸುತ್ತಿದ್ದಾರೆ ಗೌತಮ್ ಶ್ರೀವತ್ಸ ಸಂಗೀತ ಮತ್ತು ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ ಚಿತ್ರಕ್ಕಿದೆ. ರವಿಚಂದ್ರನ್ ಈಗಾಗಲೇ 'ದಶರಥ' ಮತ್ತು 'ಬಕಾಸುರ' ಚಿತ್ರಗಳನ್ನು ಬಹುತೇಕ ಮುಗಿಸಿದ್ದಾರೆ.

  Related Articles :-

  Radhika Is The Heroine For Rajendra Ponnappa

   

   

 • ರಾಜಕುಮಾರಿಗೆ ಹೆಸರಿಡುವ ಹೊಣೆ ಯಶ್ ಅವರದ್ದೇ..

  yash to name his princess soon

  ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಅವರ ಮನೆಗೀಗ ಮುದ್ದಾದ ರಾಜಕುಮಾರಿ ಬಂದಿದ್ದಾಳೆ. ಮಗಳನ್ನು ತಮ್ಮ ವಿವಾಹ ವಾರ್ಷಿಕೋತ್ಸವದ ದಿನವೇ ಮನೆದುಂಬಿಸಿಕೊಂಡಿದ್ದಾರೆ ಯಶ್ ದಂಪತಿ. ನಮ್ಮ ಮಗು, ನಮ್ಮ ವಿವಾಹ ವಾರ್ಷಿಕೋತ್ಸವದ ಉಡುಗೊರೆ ಎಂದು ಹೇಳಿದ್ದಾರೆ ರಾಧಿಕಾ. 

  ಎಲ್ಲ ಓಕೆ.. ನಿಮ್ಮ ರಾಜಕುಮಾರಿಯ ಹೆಸರೇನು ಅಂದ್ರೆ ಅದರ ಹೊಣೆ ಇರೋದು ಯಶ್ ಮೇಲೆ. ಗಂಡು ಮಗು ಆಗಲಿದೆ ಎಂದು ರಾಧಿಕಾ, ಹೆಣ್ಣು ಮಗು ಆಗಲಿದೆ ಎಂದು ಯಶ್ ಬೆಟ್ ಕಟ್ಟಿದ್ದರಂತೆ. ಗಂಡು ಮಗು ಹುಟ್ಟಿದರೆ ಏನು ಹೆಸರಿಡಬೇಕು ಎಂದು ರಾಧಿಕಾ ಮೊದಲೇ ನಿರ್ಧರಿಸಿದ್ದರಂತೆ. ಹೆಣ್ಣು ಹುಟ್ಟಿದರೆ ಏನು ಹೆಸರಿಡಬೇಕು ಎಂದು ಯಶ್ ಫೈನಲ್ ಮಾಡಬೇಕಿತ್ತು.

  ನಾನು ಕೆಲಸದ ಬ್ಯುಸಿಯಲ್ಲಿ ಹೆಸರು ಫೈನಲ್ ಮಾಡೋಕೆ ಆಗಲಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಹೆಸರು ನಿರ್ಧರಿಸುತ್ತೇನೆ ಎಂದಿದ್ದಾರೆ ಯಶ್.

  ಆಸ್ಪತ್ರೆಯಿಂದ ಮನೆಗೆ ಹೋಗುವ ಮುನ್ನ ಸುದ್ದಿಗೋಷ್ಟಿಯಲ್ಲಿ ಮಗುವಿನೊಂದಿಗೆ ಬಂದಿದ್ದ ಯಶ್ ದಂಪತಿ, ತಮ್ಮ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ಧನ್ಯವಾದ ಎಂದರು.

  ಅಂಬರೀಷ್ ಅವರು ನೀಡಿದ ತೊಟ್ಟಿಲು ಉಡುಗೊರೆಯನ್ನು ಪ್ರೀತಿಯಿಂದ ಸ್ಮರಿಸಿದ ಯಶ್, ನಮಗೆ ಅವರು ತಂದೆಯ ಸ್ಥಾನದಲ್ಲಿದ್ರು. ಮಗಳನ್ನು ನೋಡಲು ಅವರು ಇರಬೇಕಿತ್ತು ಎಂದು ಭಾವುಕರಾದರು ಯಶ್.

 • ರಾಧಿಕಾ ಪಂಡಿತ್ ಕುಟುಂಬಕ್ಕೆ ಲಕ್ಷ್ಮಿ ಬಂದಳು..!

  radhika pandit welcomes brothers daughter

  ಯಶ್ ಅವರನ್ನು ಮದುವೆಯಾದ ಮೇಲೆ ರಾಧಿಕಾ ಪಂಡಿತ್ ಅವರಿಗೆ ಆಗಾಗ ಮುಂದಿನ ಗುಡ್ ನ್ಯೂಸ್ ಯಾವಾಗ ಅನ್ನೋ ಪ್ರಶ್ನೆ ಎದುರಾಗ್ತಾನೇ ಇರುತ್ತೆ. ಸದ್ಯಕ್ಕಿಲ್ಲ ಎಂದು ನಕ್ಕು ಮುಂದೆ ಸಾಗುವ ರಾಧಿಕಾ ಪಂಡಿತ್, ಈಗ ಅತ್ತೆಯಾಗಿದ್ದಾರೆ. ರಾಧಿಕಾ ಅವರ ಸಹೋದರ ಗೌರಂಗ್ ಪಂಡಿತ್, ಅತ್ತಿಗೆ ಸಹನಾ ದಂಪತಿ ಮುದ್ದು ಮಗುವಿಗೆ ಜನ್ಮ ನೀಡಿದ್ದಾರೆ. ಅತ್ತಿಗೆಯ ಹೆರಿಗೆಗಾಗಿ ಅಮೆರಿಕಕ್ಕೇ ಹೋಗಿದ್ದ ರಾಧಿಕಾ, ಮಗುವಿನ ಫೋಟೋ ಜೊತೆ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ಸಾರಿದ್ದಾರೆ.

  `ನಾನು ಈಗ ಅತ್ತೆ ಆಗಿದ್ದೇನೆ. ಮುದ್ದು ಕಂದನನ್ನು ನೋಡಿದ ತಕ್ಷಣ ನಾನು ಎಮೋಷನಲ್ ಆದೆ. ನನ್ನ ನೋಟವನ್ನು ಬೇರೆಡೆ ಬದಲಿಸಲು ಆಗುತ್ತಿಲ್ಲ. ಈಗ ಅಣ್ಣ ಅತ್ತಿಗೆ ಪೋಷಕರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ ರಾಧಿಕಾ.

  ಸದ್ಯಕ್ಕೆ ಚಿಕಾಗೋದಲ್ಲಿರುವ ರಾಧಿಕಾ, ಇನ್ನೂ 22 ದಿನ  ಯಶ್‍ರನ್ನು ನೋಡದೇ ಇರಬೇಕು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

 • ರಾಧಿಕಾ ಪಂಡಿತ್ ಸ್ವಾಗತಕ್ಕೆ ಸಿದ್ಧರಾಗಿ..

  adilakshmi purana coming soon

  ರಾಧಿಕಾ ಪಂಡಿತ್ ತೆರೆಯ ಮೇಲೆ ಕಾಣಿಸಿಕೊಂಡು ಹೆಚ್ಚೂ ಕಡಿಮೆ 3 ವರ್ಷ. ಮದುವೆ.. ಬಾಣಂತನ, ಕಂದನ ಆರೈಕೆಗಳಲ್ಲೇ ಮುಳುಗಿಹೋಗಿದ್ದ ರಾಧಿಕಾ ಪಂಡಿತ್ ಮತ್ತೆ ಬರುತ್ತಿದ್ದಾರೆ. ಅಫ್‍ಕೋರ್ಸ್, ಇದು ಯಶ್ ಮದುವೆಯಾದ ಮೇಲೆ ಅವರು ನಟಿಸಿದ್ದ ಸಿನಿಮಾ. ಆದಿಲಕ್ಷ್ಮೀ ಪುರಾಣ.

  ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಹೀರೋ.

  ಮಣಿರತ್ನಂ ಅವರ ಬಳಿ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ಈ ಚಿತ್ರದ ನಿರ್ದೇಶಕಿ. ಚಿತ್ರದ ಬಿಡುಗಡೆಗೆ ವ್ಯವಸ್ಥೆಗಳಾಗುತ್ತಿದ್ದು, ಜೂನ್ 21ಕ್ಕೆ ಆದಿಲಕ್ಷ್ಮೀ ಪುರಾಣದ ಆಡಿಯೋ ರಿಲೀಸ್ ಆಗಲಿದೆ. ಜುಲೈನಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ.

 • ರಾಧಿಕಾ ಪಂಡಿತ್ ಹೀಗಿದ್ದಾರ್ ನೋಡಿ..

  second year engagement anniversary for yash and radhika

  ರಾಧಿಕಾ ಪಂಡಿತ್ ತಾಯಿಯಾಗುತ್ತಿದ್ದಾರೆ. ತಾವು ತಾಯಿಯಾಗುತ್ತಿರುವುದನ್ನು ಖಚಿತ ಪಡಿಸಿರುವ ರಾಧಿಕಾ, ತುಂಬಿದ ಹೊಟ್ಟೆಯಲ್ಲಿ ಹೇಗೆ ಕಾಣಿಸುತ್ತಿದ್ದಾರೆ ಅನ್ನೋದನ್ನ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಯಶ್ ಜೊತೆ ಬಸುರಿ ರಾಧಿಕಾರನ್ನು ನೋಡುವುದೇ ಒಂದು ಚೆಂದ.

  ಅಂದಹಾಗೆ ಆಗಸ್ಟ್ 12, ಯಶ್-ರಾಧಿಕಾ ನಿಶ್ಚಿತಾರ್ಥವಾದ ದಿನ. 2 ವರ್ಷಗಳ ಹಿಂದೆ ಆಗಸ್ಟ್ 12ರಂದೇ ಮದುವೆಯ ಗುಟ್ಟು ಮುರಿದಿದ್ದ ಜೋಡಿ, ಈಗ ಅದೇ ಆಗಸ್ಟ್ 12ರಂದು ಮಗುವಿನ ಗುಟ್ಟು ಹೇಳಿದೆ. ಮರಿ ಕೃಷ್ಣನೋ.. ರಾಧೆಯೋ.. ಚೆಂದದ ಮಗು ಮಡಿಲಿಗೆ ಬರಲಿ. ಅದು ಅಭಿಮಾನಿಗಳ ಹಾರೈಕೆ.

 • ರಾಧಿಕಾ ಶೂಟಿಂಗ್ ಸ್ಟಾರ್ಟ್..!

  radhika shoots for simple sundari

  ಯಶ್ ಅವರ ಜೊತೆ ವಿವಾಹವಾದ ನಂತರ ಸಿನಿಮಾ ರಂಗದಿಂದ ಸ್ವಲ್ಪ ಬಿಡುವು ತೆಗೆದುಕೊಂಡಿದ್ದ ರಾಧಿಕಾ ಪಂಡಿತ್, ಮತ್ತೆ ಶೂಟಿಂಗ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಆಲ್‍ಮೋಸ್ಟ್ ಒಂದು ವರ್ಷದ ಬಳಿಕ ರಾಧಿಕಾ ನಟಿಸುತ್ತಿರುವ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಹೀರೋ.

  ಸಿಂಪಲ್ ಸುಂದರಿಯ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿ.ಪ್ರಿಯಾ. ಮಣಿರತ್ನಂ ಅವರ ಜೊತೆಗೆ ಅಸಿಸ್ಟೆಂಟ್ ಆಗಿದ್ದ ನಿರ್ದೇಶಕಿ ಪ್ರಿಯಾಗೆ ಇದು ಮೊದಲ ಕನ್ನಡ ಚಿತ್ರ. ಶೂಟಿಂಗ್‍ನಲ್ಲಿದ್ದ ಒಂದು ಫೋಟೋವನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್, ನಿಮ್ಮ ಶುಭ ಹಾರೈಕೆಗಳಿರಲಿ ಎಂದಿದ್ದಾರೆ. 

 • ರಾಧಿಕಾ-ನಿರೂಪ್ ಆದಿ ಲಕ್ಷ್ಮೀ ಪುರಾಣ

  radhika nirup's new movie title is aadi lakshmi purana

  ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಅಭಿನಯದ ಹೊಸ ಸಿನಿಮಾ ಟೈಟಲ್ ಕೊನೆಗೂ ಫಿಕ್ಸ್ ಆಗಿದೆ. ಶೂಟಿಂಗ್ ಮುಗಿಸಿ, ಈಗಾಗಲೇ ಪೋಸ್ಟ್ ಪ್ರೊಡಕ್ಷನ್‍ನಲ್ಲಿರೋ ಸಿನಿಮಾಗೆ ಟೈಟಲ್ ಇಟ್ಟಿರಲಿಲ್ಲ. ಈಗ ಚಿತ್ರಕ್ಕೆ ಆದಿ ಲಕ್ಷ್ಮೀ ಪುರಾಣ ಎಂಬ ಟೈಟಲ್ ಫೈನಲ್ ಮಾಡಿದ್ದಾರೆ ನಿದೇಶಕಿ ಪ್ರಿಯಾ.

  ಯಶ್ ಜೊತೆ ಮದುವೆಯಾದ ನಂತರ ರಾಧಿಕಾ ಪಂಡಿತ್ ನಟಿಸಿರುವ ಸಿನಿಮಾ ಇದು. ರಂಗಿತರಂಗ, ರಾಜರಥ ನಂತರ, ಅಣ್ಣನನ್ನು ಬಿಟ್ಟು ಬೇರೆ ನಿರ್ದೇಶಕರ ಜೊತೆ ನಿರೂಪ್ ಭಂಡಾರಿ ನಟಿಸಿರುವ ಮೊದಲ ಸಿನಿಮಾ ಇದು. ಮಣಿರತ್ನಂ, ಸುಹಾಸಿನಿ ಜೊತೆ ಕೆಲಸ ಮಾಡಿದ್ದ ಪ್ರಿಯಾ ಈ ಚಿತ್ರದ ನಿರ್ದೇಶಕಿ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ. ಹೀಗಾಗಿಯೇ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

  ಆದಿ ಅನ್ನೊದು ನಾಯಕನ ಹೆಸರು. ಲಕ್ಷ್ಮೀ ಅನ್ನೋದು ನಾಯಕಿ ಹೆಸರು. ಹೀಗಾಗಿ ಚಿತ್ರಕ್ಕೆ ಆದಿ ಲಕ್ಷ್ಮೀ ಪುರಾಣ ಎಂಬ ಹೆಸರಿಟ್ಟಿದ್ದೇವೆ. ಶೀರ್ಷಿಕೆಗೆ ತಕ್ಕಂತೆ ಸಿನಿಮಾದಲ್ಲಿ ಮುದ್ದಾದ ವಿಭಿನ್ನವಾದ ಪ್ರೇಮ ಕಥೆ ಇದೆ ಎಂದು ಭರವಸೆ ಕೊಟ್ಟಿದ್ದಾರೆ ಪ್ರಿಯಾ.

 • ರಾಧಿಕಾ-ಯಶ್ ಮಾಲ್ಡೀವ್ಸ್‍ನಲ್ಲಿ ಬೇಬಿ ಮೂನ್

  yash and radhika pandit o their babymoon

  ರಾಧಿಕಾ ಪಂಡಿತ್ ತಾಯಿಯಾಗುತ್ತಿದ್ದಾರೆ. ಕುಟುಂಬಕ್ಕೆ ಬರುತ್ತಿರುವ ಹೊಸ ಅತಿಥಿಯ ಸ್ವಾಗತವನ್ನು ವಿಶೇಷವಾಗಿ ಸಂಭ್ರಮಿಸುತ್ತಿದ್ದಾರೆ ಯಶ್ ಮತ್ತು ರಾಧಿಕಾ. ದಂಪತಿಯ ಸಂಭ್ರಮ ಈಗ ಮಾಲ್ಡೀವ್ಸ್‍ಗೆ ಕಾಲಿಟ್ಟಿದೆ.

  ಪತ್ನಿಯೊಂದಿಗೆ ಮಾಲ್ಡೀವ್ಸ್‍ನಲ್ಲಿ ಬೇಬಿ ಮೂನ್ ಸೆಲಬ್ರೇಟ್ ಮಾಡುತ್ತಿದ್ದಾರೆ ರಾಧಿಕಾ ಪಂಡಿತ್. ಪತಿಯೊಂದಿಗೆ ಮಾಲ್ಡೀವ್ಸ್‍ನ ಸುಂದರ ಬೀಚುಗಳಲ್ಲಿ ಸುತ್ತಾಡುತ್ತಿದ್ದಾರೆ. ವಿಶೇಷ ಫೋಟೋಶೂಟ್ ಕೂಡಾ ಮಾಡಿಸಿದ್ದಾರೆ. 

 • ರಾಧಿಕಾರದ್ದು ಕಮ್‍ಬ್ಯಾಕ್ ಎನ್ನಬೇಡಿ - ಯಶ್

  radhika's is not a come back film

  ಪತ್ನಿ ರಾಧಿಕಾ ಪಂಡಿತ್ ಮತ್ತೆ ಬಣ್ಣ ಹಚ್ಚುತ್ತಿರುವುದಕ್ಕೆ ಪತಿ ಯಶ್ ನೀಡಿರುವ ಪ್ರತಿಕ್ರಿಯೆ ಇದು. ಅವರೇನೂ ಚಿತ್ರರಂಗದಿಂದ ದೂರ ಹೋಗಿರಲಿಲ್ಲ. ಗ್ಯಾಪ್ ತೆಗೆದುಕೊಂಡಿದ್ದರು, ಅಷ್ಟೆ. ಅದು ಕಮ್‍ಬ್ಯಾಕ್ ಅಲ್ಲ. ಈಗ ನಾನೂ ಕೂಡಾ ಮದುವೆಯಾದ ಮೇಲೆ ಕೆಜಿಎಫ್‍ನಲ್ಲಿ ನಟಿಸುತ್ತಿದ್ದೇನೆ.

  ನನ್ನ ಚಿತ್ರವನ್ನೇಕೆ ಕಮ್‍ಬ್ಯಾಕ್ ಎನ್ನುವುದಿಲ್ಲ. ಮಹಿಳೆಯರು ಮದುವೆಯಾದ ಮೇಲೆ ನಟಿಸಿದರೆ ಮಾತ್ರ ಕಮ್‍ಬ್ಯಾಕ್ ಎನ್ನುವುದೇಕೆ..ಎಂದೆಲ್ಲ ಪ್ರಶ್ನಿಸಿದ್ದಾರೆ ನಟ ಯಶ್.

  Related Articles :-

  ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ರಾಧಿಕಾ ಪಂಡಿತ್

 • ರಾಯ'ರ ಮಗಳ ಹೆಸರೇನ್ ಗೊತ್ತಾಯ್ತ..?

  yash radhika pandit's baby name will be announced tomorrow

  ರಾಕಿಂಗ್ ಸ್ಟಾರ್ ಯಶ್, ಮೊಗ್ಗಿನ ಮನಸ್ಸಿನ ರಾಧಿಕಾ ಪಂಡಿತ್ ದಂಪತಿಯ ಮುದ್ದಾದ ಮಗಳ ಹೆಸರೇನು..? ಅಭಿಮಾನಿಗಳು ಕುತೂಹಲದಿಂದ ಕಾಯ್ತಿರೋ ಆ ಹೆಸರು ಈಗಾಗಲೇ ಫೈನಲ್ ಆಗಿದೆ. ಕೆಲವು ಅಭಿಮಾನಿಗಳು ಹೆಸರನ್ನೂ ಸೂಚಿಸಿದ್ದಾರೆ. ಬೇಬಿ ವೈಆರ್ ಅರ್ಥಾತ್ ರಾಯರ ಮಗಳ ಹೆಸರನ್ನು ಯಶ್ ಮತ್ತು ರಾಧಿಕಾ ಓಕೆ ಮಾಡಿದ್ದಾರೆ.

  ಆದರೆ, ಅದು ಏನು ಎಂದು ಗೊತ್ತಾಗಬೇಕೆಂದರೆ ನಾಳೆವರೆಗೆ ಅಂದ್ರೆ ಜೂನ್ 23ರವರೆಗೆ ಕಾಯಬೇಕು. ಆ ಹೆಸರಿನಲ್ಲಿ ವೈ ಮತ್ತು ಆರ್ ಎರಡೂ ಇರುತ್ತಾ..? ಸಸ್ಪೆನ್ಸ್ ಮುಗಿದಿಲ್ಲ.

 • ರಾಯರ ಮಗಳು ಐರಾ : ಏನಿದರ ಅರ್ಥ..?

  what is the meaning of ayra

  ಯಶ್, ರಾಧಿಕಾ ಪಂಡಿತ್‍ರ ಮುದ್ದು ಕೂಸಿಗೆ ನಾಮಕರಣವಾಗಿದೆ. ಹೆಸರು ಐರಾ. ಏನಿದು.. ಹೆಸರು..? ಏನೋ ಹೊಸದಾಗಿದೆಯಲ್ಲ ಎಂದು ತಲೆಕೆಡಿಸಿಕೊಂಡಿರಾ..? 

  ಐರಾ ಅಂದ್ರೆ ಲಕ್ಷ್ಮೀ ಎಂದರ್ಥ. ಐರಾ ಅಂದ್ರೆ ಗೌರವಾನ್ವಿತ ಎಂಬ ಅರ್ಥವೂ ಇದೆ.

  ಐರಾ ಎನ್ನುವುದು ಇಂದ್ರನ ಐರಾವತದ ಮೊದಲ ಎರಡು ಅಕ್ಷರ. ಇಷ್ಟೆಲ್ಲ ಆಗಿ ಐರಾ ಅನ್ನೋ ಹೆಸರಿನಲ್ಲಿ ರಾಧಿಕಾ ಮತ್ತು ಯಶ್ ಇಬ್ಬರ ಹೆಸರುಗಳೂ ಇವೆ. 

 • ಸುಹಾಸಿನಿ ಮೆಚ್ಚಿದ ಕಥೆ, ರಾಕ್‍ಲೈನ್‍ಗೆ ತಲುಪಿದ ಹಾದಿಯೇ ರೋಚಕ

  adi lakshmi purana has interesting story

  ಆದಿ ಲಕ್ಷ್ಮೀ ಪುರಾಣ ಬಿಡುಗಡೆಗೆ ರೆಡಿಯಾಗಿದೆ. ಮುಂದಿನ ವಾರ ತೆರೆಗೆ ಬರುತ್ತಿರುವ ಈ ಚಿತ್ರದ ನಿರ್ದೇಶಕಿ ಪ್ರಿಯಾ ಹಾಗೂ ಕ್ಯಾಮೆರಾಮನ್ ಪ್ರೀತಾ ಜಯರಾಮನ್ ಇಬ್ಬರೂ ಮಹಿಳೆಯರೇ. ರಾಧಿಕಾ ಪಂಡಿತ್ ಹೆಚ್ಚೂ ಕಡಿಮೆ 3 ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ರಾಧಿಕಾ ಪಂಡಿತ್ ಮದುವೆಯಾದ ಮೇಲೆ ನಟಿಸಿರುವ ಮೊದಲ ಚಿತ್ರವೂ ಇದೇ.. ಹೀಗೆ ವಿಶೇಷಗಳ ಮೇಲೆ ವಿಶೇಷವಿರುವ ಚಿತ್ರದ ಮತ್ತೂ ಒಂದು ವಿಶೇಷವೆಂದರೆ ಚಿತ್ರದ ಕಥೆ.

  ಮಣಿರತ್ನಂ ಬಳಿ ಸಹಾಯಕಿಯಾಗಿದ್ದ ಪ್ರಿಯಾ, ತಮ್ಮ ಕಥೆಯನ್ನು ಸುಹಾಸಿನಿ ಅವರ ಬಳಿಯೂ ಹೇಳಿದ್ದರು. ಕಥೆ ಸುಹಾಸಿನಿಗೆ ಇಷ್ಟವಾಗಿತ್ತು. ಆ ಕಥೆಯನ್ನು ಅವರು ಯಶ್‍ಗೆ ಹೇಳಿದರು. ಹೀಗೆ ಸುಹಾಸಿನಿ ಇಷ್ಟ ಪಟ್ಟು ಶುರುವಾದ ಕಥೆ ಈಗ ಸಿನಿಮಾ ಆಗಿದೆ.

  ನಿರೂಪ್ ಭಂಡಾರಿ, ರಾಧಿಕಾ ಪಂಡಿತ್ ಪಾತ್ರಗಳು, ಆ ಪಾತ್ರಗಳು ಪರಸ್ಪರ ಹೇಳಿಕೊಳ್ಳುವ ಸುಳ್ಳುಗಳು, ಅವು ಸೃಷ್ಟಿಸುವ ಅವಾಂತರಗಳು.. ಅಬ್ಬಾ.. ತೆರೆಯ ಮೇಲೆ ಅದರಿಂದ ಸೃಷ್ಟಿಯಾಗುವ ಗೊಂದಲಗಳು ಮಜಾ ಕೊಡುತ್ತವೆ ಎನ್ನುತ್ತಾರೆ ರಾಕ್‍ಲೈನ್ ವೆಂಕಟೇಶ್.

 • ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್

  yash and radhika pandit blessed with baby girl

  ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ರಾಧಿಕಾ ಪಂಡಿತ್, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆ 20 ನಿಮಿಷಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ರಾಧಿಕಾ ಪಂಡಿತ್. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

  ಯಶ್ ತಮಗೆ ಹೆಣ್ಣು ಮಗು ಬೇಕು ಎಂದು ಆಸೆಪಟ್ಟಿದ್ದರು. ಅವರ ಆಸೆ ಈಡೇರಿದಂತಾಗಿದೆ.

Ayushmanbhava Movie Gallery

Ellidhe Illitanaka Movie Gallery