` gururaj jaggesh - chitraloka.com | Kannada Movie News, Reviews | Image

gururaj jaggesh

 • Jaggesh turns Grandfather

  jaggesh, parimala jaggesh image

  Actor Jaggesh on Monday morning turned grandfather with his daughter-in-law, wife of actor Gururaj giving birth to a bay boy at six in the morning. Jaggesh himself tweeted that he is a proud grandfather of a baby boy. 'DO I look like grandfather.? dear frnds i bcame:).by grace of rayaru guru became father fr boy baby' tweeted Jaggesh in the morning.

 • Leader Brisk Shooting In Progress

  leader image

  Hatrick hero Shivarajkumar's Movie Leader directed by Sahana Murthy shooting is going on in Bengaluru. Movie is produced by Tarun Shivappa. Movie Chasing and scenes are shot at Kamakshi Palya where Shivarajkumar, Vijay Raghavendra, Chi Gurudutt, Gururaj Jaggesh participated in the stunts shooting headed by Thriller Manju.

  leader_shooting2.jpg

  Movie introduction song, fight and talkie is almost over and the first schedule will be completed in three days. Second schedule will start from October 10th at Kashmir or Gangtok with Praneetha participating in the shooting.

   

 • ಜಂಪ್ ಮಾಡದೇ ಇದ್ದಿದ್ದರೆ ಜೀವಕ್ಕೇ ಅಪಾಯವಿತ್ತು - ಗುರುರಾಜ್ ಜಗ್ಗೇಶ್

  Gururaj Jaggesh Speaks About Rowdies Attack

  ತಮ್ಮ ಮೇಲೆ ರೌಡಿಗಳ ದಾಳಿ ಮತ್ತು ಚಾಕು ಇರಿತ ನಡೆದ ನಂತರ ಜಗ್ಗೇಶ್ ಅವರ ಹಿರಿಯ ಮಗ  ಗುರುರಾಜ್ ಜಗ್ಗೇಶ್ ಮಾತನಾಡಿದ್ದಾರೆ. ಅವರ ಕಾರಿಗೆ ಡಿಕ್ಕಿ ಹೊಡೆದ ಡ್ರೈವರ್ ನಂತರ ಜಗಳಕ್ಕೆ ನಿಂತ. ಕಾರ್​ನಲ್ಲಿದ್ದ ಡ್ರ್ಯಾಗರ್ ಹೊರತೆಗೆದು ಅಟ್ಯಾಕ್ ಮಾಡಿದ. ಅದನ್ನು ಗುರುರಾಜ್ ನಿರೀಕ್ಷಿಸಿರಲಿಲ್ಲ. ಮಗ ಕಾರ್​ನಲ್ಲೇ ಇದ್ದ. ಹೀಗಾಗಿ ಗುರುರಾಜ್ ಜಂಪ್ ಮಾಡಿದರು. ಹೊಟ್ಟೆಗೆ ಬೀಳಬೇಕಿದ್ದ ಡ್ರ್ಯಾಗರ್​ ಏಟು, ತೊಡೆಗೆ ಬಿತ್ತು ಎಂದು ಘಟನೆಯನ್ನು ವಿವರಿಸಿದ್ದಾರೆ.

  ಆದರೆ, ಹಾಗೆ ದಾಳಿ ನಡೆಯುವಾಗ ಪಕ್ಕದಲ್ಲಿದ್ದ ಯಾರೊಬ್ಬರೂ ಸಹಾಯಕ್ಕೆ ಬರದೇ ಇದ್ದದ್ದು ಆಶ್ಚರ್ಯ ಉಂಟು ಮಾಡಿತು. ಜನ ಹೆದರಿದ್ದರು ಎಂದು ಜನರ ಅಸಹಾಯಕತೆ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ತನಗೆ ಚಾಕು ಹಾಕಿದವನಿಗೆ ತಾನು ಜಗ್ಗೇಶ್ ಮಗ ಎಂಬುದೂ ಗೊತ್ತಾಯಿತು. ಗೊತ್ತಾದ ನಂತರವೂ ಅವನು ದಾಳಿ ಮಾಡಿದ ಎಂಬುದನ್ನೂ ಹೇಳಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದು, ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  Related Articles :-

  ಜಗ್ಗೇಶ್ ಪುತ್ರನ ಮೇಲೆ ರೌಡಿಗಳ ದಾಳಿ - ಕಾರ್ ಗುರುತು ಪತ್ತೆ

  ನಟ ಜಗ್ಗೇಶ್ ಪುತ್ರನಿಗೆ ರೌಡಿಗಳಿಂದ ಚಾಕು ಇರಿತ

 • ಜಗ್ಗೇಶ್ ಪುತ್ರನ ಮೇಲೆ ರೌಡಿಗಳ ದಾಳಿ - ಕಾರ್ ಗುರುತು ಪತ್ತೆ

  guru jaggesh

  ನಟ ಜಗ್ಗೇಶ್ ಪುತ್ರ ಗುರುರಾಜ್ ಮೇಲೆ ನಡೆದ ರೌಡಿಗಳ ದಾಳಿ ಕುರಿತು ಆರ್​ಟಿ ನಗರ ಪೊಲೀಸರು ಮಹತ್ವದ ಸುಳಿವು ಸಂಗ್ರಹಿಸಿದ್ದಾರೆ. KA 04 ML 8883 ಎಂಬುದು ಕಾರ್​ನ ನಂಬರ್. ಆಗ ಕಾರ್​ನಲ್ಲಿದ್ದದ್ದು ಶಿವಶಂಕರ್ ಎಂಬ ವ್ಯಕ್ತಿ. ಈ ನಂಬರ್​ನ ಮಾರುತಿ ಸುಝುಕಿ ಕಾರು. ಹೆಬ್ಬಾಳದ ಸುಲೋಚನಾ ಕೃಷ್ಣೇಗೌಡ ಎಂಬುವರ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಇಷ್ಟು ಸುಳಿವು ಮತ್ತು ಸಮೀಪದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿರುವ ಪೊಲೀಸರು ಆರೋಪಿಯ ಬೆನ್ನು ಬಿದ್ದಿದ್ದಾರೆ.

  ಮಗನ ಮೇಲಿನ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್, ಇದು ವಿಕೃತ ಮನಸ್ಸಿನವರ ಕೀಳು ಕೃತ್ಯ. ಜನ ಹೀಗೆ ಚಾಕು ಹಿಡಿದುಕೊಂಡು ಓಡಾಡುತ್ತಿದ್ದಾರೆ ಎನ್ನುವುದೇ ಶಾಕಿಂಗ್ ನ್ಯೂಸ್. ಇಂಥವರಿಗೆ ಸರಿಯಾಗಿ ಶಿಕ್ಷೆ ನೀಡಬೇಕು. ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.    

  ಇಂಥಹ ಘಟನೆಗಳಿಂದ ಜನ ಹೆದರಬಾರದು. ಧೈರ್ಯದಿಂದ ಪ್ರಶ್ನಿಸಬೇಕು. ಪ್ರಶ್ನಿಸದೇ ಹೋದರೆ, ನಾವು ಧೈರ್ಯ ಪ್ರದರ್ಶಿಸದೇ ಹೋದರೆ, ಇಂಥವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತೆ ಎಂದಿದ್ದಾರೆ ಜಗ್ಗೇಶ್.

  Related Articles :-

  ನಟ ಜಗ್ಗೇಶ್ ಪುತ್ರನಿಗೆ ರೌಡಿಗಳಿಂದ ಚಾಕು ಇರಿತ

 • ಜಗ್ಗೇಶ್ ಪುತ್ರನ ಮೇಲೆ ರೌಡಿಸಂ - ಆರೋಪಿ ಕಾಂಗ್ರೆಸ್ ಕಾರ್ಯಕರ್ತನೆಂಬ ಕಾರಣಕ್ಕೇ ಬಂಧನವಾಗಿಲ್ಲವಾ..?

  jaggesh son gururaj jaggesh

  ಜಗ್ಗೇಶ್ ಕೇವಲ ನಟರಲ್ಲ. ಮಾಜಿ ಶಾಸಕರೂ ಹೌದು. ಕರ್ನಾಟಕದ ಐಕಾನ್​ಗಳಲ್ಲಿ ಒಬ್ಬರು. ಈಗ ಹಲ್ಲೆಗೊಳಗಾಗಿರುವ,  ಚಾಕು ಇರಿತಕ್ಕೊಳಗಾಗಿರುವ ಗುರುರಾಜ್ ಕೂಡಾ ಉದಯೋನ್ಮುಖ ಕಲಾವಿದ. ರೌಡಿಸಂ ನಡೆದಿರೋದು ನಟ್ಟನಡುರಾತ್ರಿಯಲ್ಲಿ ಅಲ್ಲ. ಬೆಳ್ಳಂಬೆಳಗ್ಗೆ ಹೊತ್ತಿನಲ್ಲಿ. ಕಾರ್ ನಂಬರ್ ಸಿಕ್ಕಿದೆ. ಆರೋಪಿ ಶಿವರಾಂನ ಹೆಸರು, ವಿಳಾಸ ಎಲ್ಲವೂ ಸಿಕ್ಕಿದೆ. ಆದರೆ, ಇದುವರೆಗೆ ಆರೋಪಿ ಬಂಧನವಾಗಿಲ್ಲ.

  ನಟ ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್, ಮಗ ಹೇಗೋ ದೊಡ್ಡ ಗಂಡಾಂತರದಿಂದ ಪಾರಾದ ಎಂದು ನಿಟ್ಟುಸಿರುಬಿಟ್ಟಿದ್ದಾರೆ. ಆ ಹಲ್ಲೆ ನಡೆದಾಗ ಅವರ ಮಗ ಕಾರಿನಲ್ಲೇ ಇದ್ದ. ಅವನಿಗೆ ಏನೂ ಆಗಲಿಲ್ಲವಲ್ಲ, ದೇವರು ದೊಡ್ಡವನು ಎನ್ನುತ್ತಿದ್ದಾರೆ. 

  ಇಷ್ಟು ಹೊತ್ತಾದರೂ ಆರೋಪಿ ಬಂಧನವಾಗದೇ ಇರಲು ಕಾರಣವೇನು..? ಹುಡುಕುತ್ತಾ ಹೊರಟರೆ ಆತ ಕಾಂಗ್ರೆಸ್ ಕಾರ್ಯಕರ್ತ ಎಂಬ ಮಾತು ಕೇಳಿಬಂದಿದೆ. ಆತ ಕಾಂಗ್ರೆಸ್​ನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಫೋಟೋಗಳು ಸಿಕ್ಕಿವೆ. ಶಾಸಕರ ಜೊತೆ ಇರುವ ಫೋಟೋಗಳೂ ಇವೆ. ಇದೇ ಕಾರಣಕ್ಕೆ ಆತನನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲವಾ..? 

  ಸದ್ಯಕ್ಕೇನೋ ಪೊಲೀಸರ ಬಗ್ಗೆ ಜಗ್ಗೇಶ್ ಒಳ್ಳೆಯ ಮಾತುಗಳನ್ನೇ ಹೇಳುತ್ತಿದ್ದಾರೆ. ಆದರೆ, ಜಗ್ಗೇಶ್  ಅಭಿಮಾನಿಗಳು ಮತ್ತು ನಾಗರಿಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಮತ್ತು ಸಮಾಧಾನ ಸಿಗುವುದು ಆತನ ಬಂಧನದ ನಂತರವೇ. ಆತನ ಬಂಧನಕ್ಕೆ ಎರಡು ವಿಶೇಷ ತಂಡ ರಚಿಸಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

  Related Articles :-

  ಜಗ್ಗೇಶ್ ಪುತ್ರನ ಮೇಲೆ ರೌಡಿಗಳ ದಾಳಿ - ಕಾರ್ ಗುರುತು ಪತ್ತೆ

  ಜಂಪ್ ಮಾಡದೇ ಇದ್ದಿದ್ದರೆ ಜೀವಕ್ಕೇ ಅಪಾಯವಿತ್ತು - ಗುರುರಾಜ್ ಜಗ್ಗೇಶ್

  ನಟ ಜಗ್ಗೇಶ್ ಪುತ್ರನಿಗೆ ರೌಡಿಗಳಿಂದ ಚಾಕು ಇರಿತ

 • ಜಗ್ಗೇಶ್ ಪುತ್ರನಿಗೆ ಚಾಕು ಹಾಕಿದವ 4 ದಿನವಾದರೂ ಪೊಲೀಸರಿಗೆ ಸಿಗಲಿಲ್ಲ. ಆದರೆ..

  jaggesh son attacked

  ನಟ ಜಗ್ಗೇಶ್ ಅವರ ಪುತ್ರ ಗುರುರಾಜ್ ಜಗ್ಗೇಶ್ ಮೇಲೆ ಚಾಕು ಹಾಕಿ ಪರಾರಿಯಾಗಿದ್ದ ಆರೋಪಿ ಶಿವಶಂಕರ್, 4 ದಿನವಾದರೂ ಪೊಲೀಸರ ಕೈಗೆ ಸಿಕ್ಕಿಲ್ಲ. ಕಾಂಗ್ರೆಸ್ ಕಾರ್ಯಕರ್ತನೂ ಆಗಿರುವ ಆರೋಪಿ ಶಿವಶಂಕರ್, ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ. ಈ ಮಧ್ಯೆಯೇ ಬೆಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಶಿವಶಂಕರ್ ಪರ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

  ಆಗಸ್ಟ್  14ರಂದು ಆರ್.ಟಿ.ನಗರದ ಮಠದಹಳ್ಳಿ ಮೈದಾನ ರಸ್ತೆಯಲ್ಲಿ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ಜಗ್ಗೇಶ್ ಮೇಲೆ ಹಲ್ಲೆಯಾಗಿತ್ತು. ಮಗನನ್ನು ಶಾಲೆಗೆ ಬಿಡಲು ಹೋಗುವಾಗ ಗುರುರಾಜ್ ಕಾರ್​ನ್ನು ಓವರ್​ಟೇಕ್ ಮಾಡಿದ್ದ ಶಿವಶಂಕರ್, ಕಾರಿಗೆ ಗುದ್ದಿದ್ದೂ ಅಲ್ಲದೆ, ಗುರುರಾಜ್ ಮೇಲೆ ಹಲ್ಲೆ ನಡೆಸಿದ್ದ. ತೊಡೆಗೆ ಗಾಯವಾಗಿತ್ತು. ಆರೋಪಿ ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾರಣಕ್ಕೇ ಬಂಧಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು.

  Related Articles :-

  ಜಗ್ಗೇಶ್ ಪುತ್ರನ ಮೇಲೆ ರೌಡಿಸಂ - ಆರೋಪಿ ಕಾಂಗ್ರೆಸ್ ಕಾರ್ಯಕರ್ತನೆಂಬ ಕಾರಣಕ್ಕೇ ಬಂಧನವಾಗಿಲ್ಲವಾ..?

  ಜಂಪ್ ಮಾಡದೇ ಇದ್ದಿದ್ದರೆ ಜೀವಕ್ಕೇ ಅಪಾಯವಿತ್ತು - ಗುರುರಾಜ್ ಜಗ್ಗೇಶ್

  ನಟ ಜಗ್ಗೇಶ್ ಪುತ್ರನಿಗೆ ರೌಡಿಗಳಿಂದ ಚಾಕು ಇರಿತ

 • ನಟ ಜಗ್ಗೇಶ್ ಪುತ್ರನಿಗೆ ರೌಡಿಗಳಿಂದ ಚಾಕು ಇರಿತ

  jaggesh, guru jaggesh image

  ನಟ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಜಗ್ಗೇಶ್ ಮೇಲೆ ರೌಡಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಆರ್‍ಟಿ ನಗರದಲ್ಲಿ ಬೆಳ್ಳಂಬೆಳಗ್ಗೆಯೇ ಈ ಘಟನೆ ನಡೆದಿದೆ. 

  ಇಂದು ಬೆಳಗ್ಗೆ ತಮ್ಮ ಮಗನನ್ನು ಶಾಲೆಗೆ ಬಿಡಲು ಹೋಗಿದ್ದ ಗುರು, ಓವರ್‍ಸ್ಪೀಡ್‍ನಲ್ಲಿ ಬೈಕ್ ಓಡಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ಶುರುವಾದ ಜಗಳ ಚಾಕು ಇರಿತದಲ್ಲಿ ಕೊನೆಯಾಗಿದೆ. ರೌಡಿಗಳು ಗುರುರಾಜ್‍ನ ಎಡತೊಡೆಗೆ ಚಾಕು ಹಆಕಿ ಎಸ್ಕೇಪ್ ಆಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಗುರುರಾಜ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆಕಸ್ಮಿಕವಾಗಿ ನಡೆದಿರುವ ಘಟನೆ ಎಂದು ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ಪ್ರತ್ಯಕ್ಷದರ್ಶಿಗಳ ಮೂಲಕ ಮಾಹಿತಿ ಸಂಗ್ರಹಿಸಿ ಚಾಕು ಹಾಕಿದವರನ್ನು ಹುಡುಕುತ್ತಿದ್ದಾರೆ.

 • ಮತ್ತೆ ಆಕ್ಟಿಂಗ್‍ಗೆ ಇಳಿದ ಜಗ್ಗೇಶ್ ಪುತ್ರ

  gururaj jaggesh

  ಇತ್ತೀಚೆಗಷ್ಟೇ ರೌಡಿಯೊಬ್ಬನಿಂದ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದ ಜಗ್ಗೇಶ್ ಅವರ ಮಗ ಗುರುರಾಜ್ ಜಗ್ಗೇಶ್, ಈಗ ಮತ್ತೆ ನಟನೆಗಿಳಿದಿದ್ದಾರೆ. ಗುರುರಾಜ್ ಅಭಿನಯದ ವಿಷ್ಣು ಸರ್ಕಲ್ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

  ವಿಷ್ಣು ಅಭಿಮಾನಿಯ ಕಥೆ ಇರುವ ಚಿತ್ರಕ್ಕೆ ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಅನ್ನೋದು ಟ್ಯಾಗ್‍ಲೈನ್. ಹಾಫ್‍ಮೆಂಟಲ್ ಎಂಬ ಚಿತ್ರ ನಿರ್ದೇಶಿಸಿದ್ದ ಲಕ್ಷ್ಮೀ ದಿನೇಶ್, ಈ ಚಿತ್ರಕ್ಕೆ ನಿರ್ದೇಶಕ. ಆರ್.ಬಿ. ನಿರ್ಮಾಣದ ಚಿತ್ರಕ್ಕೆ ಈಗ ಚಾಲನೆ ಸಿಗುತ್ತಿದೆ. ಗುರುರಾಜ್ ಜಗ್ಗೇಶ್ ಮೇಲೆ ನಡೆದಿದ್ದ ಹಲ್ಲೆಯಿಂದಾಗಿ ಚಿತ್ರದ ಮುಹೂರ್ತಕ್ಕೆ ಬ್ರೇಕ್ ಬಿದ್ದಿತ್ತು.

  ಈಗ ಮತ್ತೆ ಚಿತ್ರ ಶುರುವಾಗುತ್ತಿದೆ.

Shivarjun Movie Gallery

KFCC 75Years Celebrations and Logo Launch Gallery