` kiccha sudeepa - chitraloka.com | Kannada Movie News, Reviews | Image

kiccha sudeepa

  • ಒಂದು ಸೀಕ್ರೆಟ್ ಬಿಟ್ಟೇ ಬಿಟ್ರು ವಿಲನ್ ಪ್ರೇಮ್

    prem reveals one of the villain's secret

    ದಿ ವಿಲನ್ ಚಿತ್ರದ ಕಥೆಯನ್ನೇ ನಂಗೆ ಹೇಳಿಲ್ಲ. ಶಿವಣ್ಣಂಗೂ ಹೇಳಿಲ್ಲ. ಅವರಿಗೆ ಹೇಳಿದ್ದೀನಿ ಡಾರ್ಲಿಂಗ್ ಅಂತಾ ನಂಗೆ, ನಂಗೆ ಹೇಳಿದ್ದೀನಿ ಅಂಥಾ ಶಿವಣ್ಣಂಗೆ ಯಾಮಾರಿಸಿದ್ದಾರೆ ಪ್ರೇಮ್.. ಇದು ಆಗಾಗ್ಗೆ ವಿಲನ್ ನಿರ್ದೇಶಕ ಪ್ರೇಮ್ ಅವರನ್ನು ಸುದೀಪ್ ಅವರು ಗೋಳಾಡಿಸುವ ಪರಿ. ಪ್ರೇಮ್ ಇರೋದೇ ಹಾಗೆ. ಗುಟ್ಟು ಬಿಟ್ಟುಕೊಡಲ್ಲ. ಇಷ್ಟೆಲ್ಲ ಆಗಿಯೂ.. ಈ ಬಾರಿ ಪ್ರೇಮ್ ದಿ ವಿಲನ್ ಚಿತ್ರದ ಒಂದು ಮಹಾ ಸೀಕ್ರೆಟ್ ಹೊರಹಾಕಿದ್ದಾರೆ.

    ದಿ ವಿಲನ್ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಫೈಟ್ ಇಲ್ಲವಂತೆ. ಅದು ಸೆಂಟಿಮೆಂಟ್ ದೃಶ್ಯ ಎಂಬ ಮಾಹಿತಿಯನ್ನು ಸ್ವತಃ ಪ್ರೇಮ್ ಅವರೇ ಹೊರಹಾಕಿರುವುದು ವಿಶೇಷ. ಶಿವಣ್ಣ ಮತ್ತು ಸುದೀಪ್ ಇಬ್ಬರೂ ಕಮರ್ಷಿಯಲ್ ಹೀರೋಗಳು. ಅವರನ್ನಿಟ್ಟುಕೊಂಡು ಆ್ಯಕ್ಷನ್ ಸಿನಿಮಾ ಮಾಡೋದು ದೊಡ್ಡದಲ್ಲ. ಒಂದು ಉದ್ದೇಶ, ಸಂದೇಶ ಇಟ್ಟುಕೊಂಡು ಸೆಂಟಿಮೆಂಟ್ ಕಥೆ ಇರುವ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ ಪ್ರೇಮ್.

    ಕ್ಲೈಮಾಕ್ಸ್‍ನಲ್ಲಿ ಫೈಟ್ ಸೀನ್ ಇಲ್ಲ ಎನ್ನುವ ಮೂಲಕ ಪ್ರೇಮ್ ಒಂದು ಗುಟ್ಟನ್ನಷ್ಟೇ ಹೊರಹಾಕಿದ್ದಾರೆ. ಉಳಿದ ಗುಟ್ಟುಗಳನ್ನೆಲ್ಲ ಈಗಲೇ ಹೇಳೋಕೆ ಸಾಧ್ಯವಿಲ್ಲ. ಸಿ.ಆರ್.ಮನೋಹರ್ ನಿರ್ಮಾಣದ ಈ ಸಿನಿಮಾದ ಮಿಕ್ಕ ಎಲ್ಲ ಗುಟ್ಟುಗಳನ್ನೂ ನೋಡೋಕೆ ಆಯುಧಪೂಜೆವರೆಗೆ ಕಾಯಲೇಬೇಕು.

  • ಕನ್ನಡದಲ್ಲೇ ಬರುತ್ತಾ ಸೈರಾ..?

    is syera releasing in kannada

    ಸೈರಾ. ತೆಲುಗಿನ ಬಿಗ್ ಬಜೆಟ್ ಸಿನಿಮಾ. ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರನ ಕಥೆ. ಮೆಗಾಸ್ಟಾರ್ ಚಿರಂಜೀವಿ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ಕಿಚ್ಚ ಸುದೀಪ್, ಅಮಿತಾಬ್ ಬಚ್ಚನ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತೆಲುಗಿನಲ್ಲಷ್ಟೆ ಅಲ್ಲ, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಮಾಡುತ್ತೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಈಗ... ಸೈರಾ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ, ಒಟ್ಟಿಗೇ ಕನ್ನಡದಲ್ಲಿ ರಿಲೀಸ್ ಮಾಡುತ್ತಾರೆ ಎಂಬ ಸುದ್ದಿ ಹೊರಬಿದ್ದಿದೆ. ಸೈರಾ ಚಿತ್ರದ ವಿಕಿಪೀಡಿಯಾ ಪೇಜ್‍ನಲ್ಲಿ ಕೂಡಾ, ಸೈರಾ ಕನ್ನಡದಲ್ಲೂ ರಿಲೀಸ್ ಆಗಲಿದೆ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಡಬ್ಬಿಂಗ್ ಚಿತ್ರಗಳ ಮೇಲಿನ ನಿಷೇಧ ತೆರವಾಗಿದ್ದು, ಸೈರಾ ಚಿತ್ರ ಕನ್ನಡದಲ್ಲಿಯೇ ರಿಲೀಸ್ ಆಗಿ ಇತಿಹಾಸ ಸೃಷ್ಟಿಸುತ್ತಾ..? ಸದ್ಯಕ್ಕೆ ಇದು ಪ್ರಶ್ನೆ ಮತ್ತು ಕುತೂಹಲ ಮಾತ್ರ.

  • ಕಾರ್ತಿಕ್ ಸುಬ್ಬರಾಜುರಿಂದ ಕಿಚ್ಚನಿಗಾಗಿ ಕನ್ನಡ ಸಿನಿಮಾ

    karthik subbaraju to direct sudeep

    ಪಿಜ್ಜಾ, ಜಿಗರ್‍ಥಂಡಾ, ಇರೈವಿ, ಮಕ್ರ್ಯುರಿ.. ಮತ್ತು ಈಗ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜು ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅದೂ ಕಿಚ್ಚನಿಗಾಗಿ. ಚಿತ್ರದ ಕುರಿತ ಮಾತುಕತೆ ಪ್ರಗತಿಯಲ್ಲಿದ್ದು, ವರ್ಷದ ಕೊನೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಕೊಡುವುದಾಗಿ ಹೇಳಿದ್ದಾರೆ ಜಾಕ್ ಮಂಜು.

    ಕಾರ್ತಿಕ್ ಸುಬ್ಬರಾಜು ಸಿನಿಮಾ ಜಿಗರ್‍ಥಂಡ ಚಿತ್ರವನ್ನು ಕನ್ನಡದಲ್ಲಿ ಸುದೀಪ್ ಮಾಡಿದ್ದರು. ತಾವೇ ನಿರ್ಮಿಸಿದ್ದರು. ಈಗ ಅದೇ ನಿರ್ದೇಶಕರ ಚಿತ್ರದಲ್ಲಿ ನಟಿಸುವ ಕಾಲ ಕೂಡಿ ಬಂದಿದೆ. ಆ ಚಿತ್ರ ಕನ್ನಡ ಹಾಗೂ ತಮಿಳು, ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ ಜಾಕ್ ಮಂಜು.

  • ಕಿಚ್ಚ ಈಗ ಸ್ಯಾಂಡಲ್‍ವುಡ್ ಬಾದ್‍ಷಾ..!

    palwan team renames him badshah

    ಪ್ರತಿಯೊಬ್ಬ ಸ್ಟಾರ್ ನಟನಿಗೂ ಒಂದಲ್ಲ ಒಂದು ಬಿರುದುಗಳಿದ್ದೇ ಇರುತ್ತವೆ. ಆ ಬಿರುದುಗಳನ್ನೆಲ್ಲ ಬದಿಗಿಟ್ಟು, ತಮ್ಮ ಚಿತ್ರದ ಪಾತ್ರದ ಹೆಸರಿನ ಮೂಲಕವೇ ಗುರುತಿಸಿಕೊಳ್ಳೋ ಅದೃಷ್ಟ ಎಲ್ಲರಿಗೂ ಇರೋದಿಲ್ಲ. ಸುದೀಪ್ ಅಂತಹ ಅದೃಷ್ಟವಂತ. ಅವರಿಗೆ ಅಭಿಮಾನಿಗಳು ಅಭಿನಯ ಚಕ್ರವರ್ತಿಯೆಂದರೂ, ಇಡೀ ಭಾರತೀಯ ಚಿತ್ರರಂಗ ಅವರನ್ನು ಗುರುತಿಸುವುದೇ ಕಿಚ್ಚ ಸುದೀಪ ಎಂದು. 

    ಈಗ ಈ ಕಿಚ್ಚ ಸುದೀಪ್‍ಗೆ ಪೈಲ್ವಾನ್ ಟೀಂ ಹೊಸ ಬಿರುದನ್ನಿತ್ತಿದೆ. ಬಾದ್‍ಷಾ..! ಈ ಬಿರುದು ಕೊಟ್ಟೇ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ ಆರ್.ಆರ್.ಮೋಷನ್ ಪಿಕ್ಚರ್ಸ್. ಗರಡಿ ಮನೆಯ ಮಣ್ಣಿನಲ್ಲೇ ಮಿಂದೆದ್ದಂತಿರುವ ಸುದೀಪ್‍ರ ಲುಕ್ ಹಿಂದಿರೋದು ನಿರ್ದೇಶಕ ಕೃಷ್ಣ ಕೈಚಳಕ.

    ಬಾಲಿವುಡ್‍ನಲ್ಲಿ ಬಾದ್‍ಷಾ ಎಂದು ಗುರುತಿಸಿಕೊಳ್ಳೋದು ಶಾರೂಕ್ ಖಾನ್. ಬಾದ್‍ಷಾ ಎಂದು ಕರೆಯಲ್ಪಡುತ್ತಿದ್ದ ದೊರೆ ದೆಹಲಿಯನ್ನಾಳಿದ ಅಕ್ಬರ್. ಈಗ ಪೈಲ್ವಾನ್ ಸುದೀಪ್, ಬಾದ್‍ಷಾ ಸುದೀಪ್ ಆಗಿದ್ದಾರೆ ಜಹಾಪನಾ..

  • ಕಿಚ್ಚ ಮತ್ತು ಜುಲೈ 6ರ ಗುಟ್ಟು

    sudeep's sentiment to july 6th

    ಕಿಚ್ಚ ಸುದೀಪ್, ಜುಲೈ 6ನೇ ತಾರೀಕನ್ನು ಮರೆಯುವ ಹಾಗೆಯೇ ಇಲ್ಲ. ಆ ದಿನಾಂಕ, ಅವರ ಬದುಕಿನಲ್ಲಿ ಆ ರೀತಿಯಲ್ಲಿ ಮೈಲುಗಲ್ಲು ಸೃಷ್ಟಿಸಿದೆ. ಕಿಚ್ಚ ಸುದೀಪ್ ಬೆಳ್ಳಿತೆರೆಗೆ ಬಂದಿದ್ದು ಬ್ರಹ್ಮ ಚಿತ್ರದ ಮೂಲಕ. ಆದರೆ, ಆ ಸಿನಿಮಾ ಮುಹೂರ್ತಕ್ಕೇ ಮುಕ್ತಾಯವಾಯ್ತು. ನಂತರ ನಟಿಸಿದ್ದು ತಾಯವ್ವ ಚಿತ್ರದಲ್ಲಿ. ಅದು ಹಿಟ್ ಆಗಲಿಲ್ಲ. ಪ್ರತ್ಯರ್ಥದಲ್ಲಿ ಪೋಷಕ ನಟನಾಗಿ ನಟಿಸಿದ ಸುದೀಪ್, ಸ್ಪರ್ಶ ಚಿತ್ರದಲ್ಲಿ ತಮ್ಮ ಛಾಪು ಮೂಡಿಸಿದರು. ಆದರೆ, ಸುದೀಪ್‍ರನ್ನು ಸ್ಟಾರ್ ಆಗಿಸಿದ್ದು, ಕನ್ನಡಿಗರ ಕಿಚ್ಚನನ್ನಾಗಿಸಿದ್ದು ಹುಚ್ಚ ಸಿನಿಮಾ.

    ಅಂದಹಾಗೆ ಹುಚ್ಚ ಬಿಡುಗಡೆಯಾದ ದಿನ ಜುಲೈ 6. ಆ ಸಿನಿಮಾ ಬಿಡುಗಡೆಯಾಗಿ 17 ವರ್ಷಗಳಾಗಿವೆ. ಸುದೀಪ್ ಹಲವಾರು ಹಿಟ್ ಕೊಟ್ಟಿದ್ದಾರೆ. ಆದರೆ, ಹುಚ್ಚನ ನೆನಪು ಕಾಡುತ್ತಲೇ ಇರುತ್ತೆ. ಜುಲೈ 6ರ ಗುಟ್ಟು ಅಷ್ಟಕ್ಕೇ ನಿಲ್ಲೋದಿಲ್ಲ. ಸುದೀಪ್ ಅಭಿನಯದ ಈಗ ಸಿನಿಮಾ ರಿಲೀಸ್ ಆಗಿದ್ದು ಕೂಡಾ ಅದೇ ಜುಲೈ 6ನೇ ತಾರೀಕು. ಈಗ ರಿಲೀಸ್ ಆಗಿ ಈಗ 6 ವರ್ಷ.

    ಒಂದು ಸಿನಿಮಾ ನನ್ನನ್ನು ಕನ್ನಡಿಗರಿಗೆ ಪರಿಚಯಸಿತು. ಕನ್ನಡಿಗರ ಹೃದಯದಲ್ಲೊಂದು ಶಾಶ್ವತ ಸ್ಥಾನ ಕೊಡಿಸಿತು. ಇನ್ನೊಂದು ಸಿನಿಮಾ ನನ್ನನ್ನು ವಿಶ್ವ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿತು. ಆ ಎರಡೂ ಚಿತ್ರತಂಡಗಳಿಗೆ ನಾನು ಋಣಿ. ಥ್ಯಾಂಕ್ಸ್ ಎಂಬ ಪದ ತುಂಬಾ ಚಿಕ್ಕದೇನೋ. ಆದರೆ, ಇದನ್ನು ನಾನು ಹೃದಯದಿಂದ ಹೇಳುತ್ತಿದ್ದೇನೆ. ಎರಡೂ ಚಿತ್ರತಂಡಗಳಿಗೆ ಧನ್ಯವಾದ ಎಂದಿದ್ದಾರೆ ಸುದೀಪ್.

  • ಕಿಚ್ಚ ಸುದೀಪನ ಜಪಾನ್ ಅಭಿಮಾನಿ

    kiccha's japanese fan art work

    ಕಿಚ್ಚ ಸುದೀಪ್, ಕನ್ನಡದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೇ ಸಲ್ಲುವ ಸ್ಟಾರ್ ನಟ. ಹೀಗಾಗಿ ಸುದೀಪ್ ಅಭಿಮಾನಿಗಳು ದೇಶ ವಿದೇಶದಲ್ಲೆಲ್ಲ ಇದ್ದಾರೆ. ಈಗ ನಾವು ಹೇಳ್ತಿರೋದು ಜಪಾನ್‍ನ ಅಂತಹ ಒಬ್ಬ ಕಿಚ್ಚನ ಅಭಿಮಾನಿಯ ಬಗ್ಗೆ.

    ಈತನ ಹೆಸರು ಮೋಹಿಶ್‍ಮೊಟೊ. ಕಿಚ್ಚ ಸುದೀಪ್‍ಗೆ ಈತ ಎಷ್ಟರಮಟ್ಟಿಗಿನ ಅಭಿಮಾನಿಯೆಂದರೆ, ಸುದೀಪ್‍ರ ಪ್ರತಿ ಚಿತ್ರದ ಪೋಸ್ಟರ್‍ನ್ನು ತನ್ನ ಕುಂಚದಲ್ಲಿ ಅರಳಿಸಿದ್ದಾನೆ. ರನ್ನ, ವೀರಮದಕರಿ, ಬಾಹುಬಲಿಯ ಸುಲ್ತಾನ, ಹೆಬ್ಬುಲಿ.. ಹೀಗೆ ಸುದೀಪ್ ಅಭಿನಯದ ಹಲವು ಚಿತ್ರಗಳ ಪಾತ್ರಗಳು ಮೋಹಿಶ್‍ಮೋಟೋ ಕೈಯ್ಯಲ್ಲಿ ರೇಖಾಚಿತ್ರಗಳಾಗಿವೆ.

    ರನ್ನ ಚಿತ್ರದಲ್ಲಿ ಸುದೀಪ್‍ರನ್ನು ಬಬ್ಬರ್ ಶೇರ್ ಎಂದು ಹೊಗಳುವ ಹಾಡಿದೆ. ಸುದೀಪ್ ಕುರಿತ ರೇಖಾಚಿತ್ರಗಳ ಸರಣಿಗೆ ಬಬ್ಬರ್ ಶೇರ್ ಎಂದೇ ಹೆಸರಿಟ್ಟಿದ್ದಾರೆ ಮೋಹಿಶ್‍ಮೋಟೊ. ಈ ಸರಣಿಯಲ್ಲಿ ಇನ್ನಷ್ಟು ರೇಖಾಚಿತ್ರಗಳನ್ನು ಬರೆಯುವುದಾಗಿಯೂ ತಿಳಿಸಿದ್ದಾರೆ. 

    ಮುದ್ದಾದ ರೇಖಾಚಿತ್ರಗಳನ್ನು ನೋಡಿದ ಸುದೀಪ್, ಅಭಿಮಾನಿಯ ಅಭಿಮಾನಕ್ಕೆ ಶರಣಾಗಿಬಿಟ್ಟಿದ್ದಾರೆ.

  • ಕಿಚ್ಚ ಸುದೀಪ್ 5 ವರ್ಷ ಚಿಕ್ಕವರಾಗಿದ್ದಾರಂತೆ..!

    big boss 5

    ಕಿಚ್ಚ ಸುದೀಪ್ ಕನ್ನಡದ ಸ್ಮಾರ್ಟ್ ಹೀರೋ. ಅದನ್ನು ಅವರ ಮಹಿಳಾ ಅಭಿಮಾನಿಗಳಂತೂ ಇನ್ನೂ ಪ್ರೀತಿಯಿಂದ ಹೇಳ್ತಾರೆ. ಆದರೆ, ಈ ಬಾರಿ ಆ ಮಾತು ಹೇಳಿರೋದು ಬಿಗ್‍ಬಾಸ್ ಡೈರೆಕ್ಟರ್ ಪರಮೇಶ್ವರ್ ಗುಂಡ್ಕಲ್. ಬಿಗ್‍ಬಾಸ್ 5ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಆವೃತ್ತಿಯಲ್ಲಿ ಸುದೀಪ್ ಅವರ ಹೇರ್‍ಸ್ಟೈಲ್ ತುಂಬಾನೇ ಡಿಫರೆಂಟಾಗಿದೆಯಂತೆ. ಪ್ರತಿ ಆವೃತ್ತಿಗೂ ಸುದೀಪ್ ಭಿನ್ನ ಭಿನ್ನ ಗೆಟಪ್‍ಗಳಲ್ಲಿ ಕಾಣಿಸಿಕೊಳ್ತಾರೆ. ಈ ಬಾರಿಯ ಅವರ ಹೇರ್‍ಸ್ಟೈಲ್ ದಿ ಬೆಸ್ಟ್ ಎಂದಿದ್ದಾರೆ ಪರಮೇಶ್ವರ್ ಗುಂಡ್ಕಲ್.

    ಬಿಗ್‍ಬಾಸ್ ನಿರ್ದೇಶಕರಿಗೆ ಇಷ್ಟವಾಗಿರೋದು ಸುದೀಪ್ ಅವರ ಕಮಿಟ್‍ಮೆಂಟ್. ಸ್ಯಾಂಡಲ್‍ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್, ಹಾಲಿವುಡ್‍ಗಳಲ್ಲಿ ಏಕಕಾಲಕ್ಕೆ ಬ್ಯುಸಿಯಾಗಿರುವ ಸುದೀಪ್, ಬಿಗ್‍ಬಾಸ್‍ಗೆ ಪ್ರತಿ ವಾರದ ಶನಿವಾರ ಡೇಟ್ಸ್ ಕೊಟ್ಟಿದ್ದಾರೆ. ಶನಿವಾರ ರೆಕಾರ್ಡಿಂಗ್ ಎಂದರೆ, ಹಿಂದಿನ ರಾತ್ರಿ ನಿದ್ದೆಗೆಡಲೇಬೇಕು. ಬಿಗ್‍ಬಾಸ್‍ನ ಎಲ್ಲ ಎಪಿಸೋಡ್‍ಗಳನ್ನೂ ನೋಡಬೇಕು. ನಂತರ ರೆಕಾರ್ಡಿಂಗ್. ಅದನ್ನು ಸ್ಕ್ರೀನ್ ಮೇಲೆ ಎಲ್ಲಿಯೂ ಕಾಣಿಸದಂತೆ ನೋಡಿಕೊಳ್ಳುವುದು ಸುದೀಪ್ ಅವರ ಗುಣ.

    ಸುದೀಪ್ ಎತ್ತರದ ನಟ. 6.2 ಅಡಿ ಎತ್ತರದ ಸುದೀಪ್‍ಗೆ ಅದ್ಭುತವಾದ ಧ್ವನಿಯೂ ಇದೆ. ಆಟಗಾರ, ಗಾಯಕ, ನಿರ್ದೇಶಕ..ಎಲ್ಲಕ್ಕಿಂತ ಮಿಗಿಲಾಗಿ ಅಪರೂಪದ ವ್ಯಕ್ತಿತ್ವ. ಅವರ ಜೊತೆ ಕೆಲಸ ಮಾಡುವುದು ಖುಷಿ ಎಂದಿದ್ದಾರೆ ಪರಮೇಶ್ವರ್ ಗುಂಡ್ಕಲ್.

    ಎಲ್ಲ ಓಕೆ.. ಸುದೀಪ್ ಇನ್ನೂ 5 ವರ್ಷ ಚಿಕ್ಕವರಾದ್ರೆ ಹೇಗೆ ಕಾಣ್ತಾರೆ..? ಅಭಿಮಾನಿಗಳ ಕುತೂಹಲಕ್ಕೆ ಉತ್ತರ.. ಕೆಲವೇ ದಿನಗಳಲ್ಲಿ.

  • ಕಿಚ್ಚನ `ಕಿಚ್ಚನ್ ಟೈಂ' ಟೇಸ್ಟಿ ಟೇಸ್ಟಿ..

    big boss 5

    ಕಿಚ್ಚ ಸುದೀಪ್ ನಟನೆ, ನಿರ್ದೇಶನದಲ್ಲಷ್ಟೇ ಅಡುಗೆ ಮನೆ ಹೊಕ್ಕರೆ ಸಾಕ್ಷಾತ್ ನಳ ಮಹಾರಾಜ.. ಭೀಮಸೇನನಿದ್ದ ಹಾಗೆ. ಕಿಚ್ಚನ ಕೈಪಾಕವನ್ನು ಸವಿದವರಿಗೆ, ಅಡುಗೆ ಮಾಡುವಾಗ ಸುದೀಪ್ ಅವರು ತೋರಿಸುವ ಶ್ರದ್ಧೆಯನ್ನು ನೆನಪಿಸಿಕೊಂಡೇ ನೆನಪಿಸಿಕೊಳ್ತಾರೆ. ರುಚಿಯನ್ನು ಚಪ್ಪರಿಸ್ತಾರೆ. ಅಡುಗೆ ಮಾಡೋದು ಸುದೀಪ್ ಹವ್ಯಾಸ.

    ಹೀಗೆ ಅಡುಗೆ ಮನೆಯನ್ನು ಇಷ್ಟಪಡುವ ಸುದೀಪ್, ಬಿಗ್‍ಬಾಸ್ ಮನೆಯಲ್ಲಿ ಕಿಚ್ಚನ್ ಟೈಂ ನಡೆಸಿಕೊಡುತ್ತಿದ್ದಾರೆ. ಈ ಬಾರಿಯ ಕಿಚ್ಚನ್ ಟೈಂನಲ್ಲಿ ಸುದೀಪ್ ಜೊತೆ ಕಿರಿಕ್ ಸಂಯುಕ್ತಾ ಹೆಗ್ಡೆ, ಕೆಂಡಸಂಪಿಗೆಯ ಮುಗ್ದ ಹುಡುಗ ವಿಕ್ಕಿ ಇದ್ದರು. ಅವರಿಬ್ಬರೂ ಕಾಲೇಜ್‍ಕುಮಾರ್ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದಾರೆ. ಆ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಕಿಚ್ಚನ್ ಟೈಮ್‍ನಲ್ಲಿ  ರುಚಿರುಚಿಯಾಗಿ ಚಿಕನ್ ಫ್ರೈ ಮಾಡಿದ ಸಂಯುಕ್ತಾ ಹೆಗ್ಡೆ, ಸುದೀಪ್‍ಗೆ ಕೊಟ್ಟರು.

    ಇನ್ನು ಕಿಚ್ಚನ್ ಟೈಂನಲ್ಲಿ ಅಡುಗೆಗೆ ಬಿಗ್‍ಬಾಸ್ ಖುಷಿಯಾಗಿದ್ದಾರೆ. ಟಿವಿಯಲ್ಲಿ ನೋಡಿದವರಿಗೆ ಇಷ್ಟವಾಗಿರೋದು ಒನ್ಸ್ ಎಗೇಯ್ನ್.. ಕಿಚ್ಚನ್ ಸ್ಟೈಲ್. ಅವರ ಡ್ರೆಸ್ಸು, ಮಾತು..

     

  • ಕಿಚ್ಚನ ಎದುರು ಗುಂಡಪ್ಪ ಹೇಳಿದ ಮೊಟ್ಟೆಯ ಕಥೆ

    kicchanan kitchen with gundappa vishwanath

    ಕಿಚ್ಚ ಸುದೀಪ್ ಅವರ ಬಿಗ್‍ಬಾಸ್ ಶೋನಲ್ಲಿ ಬರುವ ಅತಿಥಿಗಳು ಒಂದಲ್ಲಾ ಒಂದು ಸ್ವಾರಸ್ಯದ ಕಥೆ ಹೇಳಿಕೊಂಡೇ ಹೇಳಿಕೊಳ್ತಾರೆ. ಕಲ್ಲುಬಂಡೆಯನ್ನೂ ಮಾತನಾಡಿಸುವ ಛಾತಿಯುಳ್ಳ ಸುದೀಪ್‍ಗೆ ಅತಿಥಿಗಳಿಂದ ಅಂತಹ ಕಥೆಗಳನ್ನು ಹೊರತೆಗೆಸುವುದು ಹೊಸದಲ್ಲ.

    ವಿಶ್ವನಾಥ್ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದು 1969ರಲ್ಲಿ. ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್‍ನಲ್ಲಿಯೇ ವಿಶ್ವನಾಥ್ ಸೊನ್ನೆ ಸುತಿದರು. ಔಟಾಗಿ ಪೆವಿಲಿಯನ್‍ಗೆ ವಾಪಸ್ ಆಗುವಾಗ ಪ್ರೇಕ್ಷಕರ್ಯಾರೋ ಕೊಳೆತ ಮೊಟ್ಟೆಯನ್ನು ವಿಶ್ವನಾಥ್ ಅವರತ್ತ ಎಸೆದಿದ್ದರಂತೆ. 

    ಅಷ್ಟೊತ್ತಿಗಾಗಲೇ ದೇಸೀ ಟೂರ್ನಿಗಳಲ್ಲಿ ಅದ್ಭುತ ಆಟವಾಡುತ್ತಿದ್ದ ವಿಶ್ವನಾಥ್, ಏನಾಗಿ ಹೋಯ್ತು ನನಗೆ ಎಂದುಕೊಂಡು ಕುಳಿತಿದ್ದಾಗ, ತಂಡದ ಕ್ಯಾಪ್ಟನ್ ಬಂದು ಧೈರ್ಯ ಹೇಳಿದರಂತೆ. ಮುಂದಿನ ಇನ್ನಿಂಗ್ಸ್‍ನಲ್ಲಿ ಸೆಂಚುರಿ ಹೊಡೀತಿಯ, ಬಿಡು ಎಂದು ಸಮಾಧಾನಿಸಿದ್ದರಂತೆ. 

    ಅದು ನಿಜವೂ ಆಯ್ತು. ಅದೇ ಟೆಸ್ಟ್‍ನ 2ನೇ ಇನ್ನಿಂಗ್ಸ್‍ನಲ್ಲಿ ವಿಶ್ವನಾಥ್ 137 ರನ್ ಹೊಡೆದರು. ಇನ್ನೂ ಒಂದು ವಿಶೇಷ ಗೊತ್ತಾ..? ಆ 137 ರನ್‍ನಲ್ಲಿ 100 ರನ್ ಕೇವಲ ಬೌಂಡರಿಗಳಿಂದಲೇ ಬಂದಿದ್ದವು. 25 ಬೌಂಡರಿ. ಮೊಟ್ಟೆ ಎಸೆದಿದ್ದ ಪ್ರೇಕ್ಷಕರೇ, ಎದ್ದು ನಿಂತಿ ಕಿವಗಡಚಿಕ್ಕುವಂತೆ ಚಪ್ಪಾಳೆ ತಟ್ಟಿದ್ದರು.

    ಇದೆಲ್ಲವನ್ನೂ ಗುಂಡಪ್ಪ ವಿಶ್ವನಾಥ್, ಕಿಚ್ಚನ ಎದುರು ಹೇಳಿಕೊಂಡಿದ್ದಾರೆ. ಮೊಟ್ಟೆ ಹೊಡೆದ ಕೈಗಳೇ ಚಪ್ಪಾಳೆ ತಟ್ಟಿದ್ದ ಕಥೆಯಲ್ಲಿ, ಜೀವನ ಸಂದೇಶವೂ ಇದೆ. ಹೌದು ತಾನೇ.

  • ಕಿಚ್ಚನ ಎಫೆಕ್ಟ್, ರಾಜು ಕನ್ನಡ ಮೀಡಿಯಂಗೆ ಫಾರಿನ್ ಡಿಮ್ಯಾಂಡ್

    kiccha effect

    ಕೆ.ಎ. ಸುರೇಶ್‌ ನಿರ್ಮಾಣದ  'ರಾಜು ಕನ್ನಡ ಮೀಡಿಯಂ' ಚಿತ್ರ, ಭರ್ಜರಿ ಸದ್ದು ಮಾಡುತ್ತಿದೆ. ಟೀಸರ್ ಬಿಡುಗಡೆಯ ನಂತರವಂತೂ ಡಿಮ್ಯಾಂಡ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆಯಂತೆ. ಅದರಲ್ಲೂ ಸುರೇಶ್ ಥ್ರಿಲ್ಲಾಗೋಕೆ ಕಾರಣ, ವಿದೇಶಗಳಲ್ಲಿ ಸೃಷ್ಟಿಯಾಗಿರುವ ಕ್ರೇಜ್. ಚಿತ್ರವನ್ನು ವಿದೇಶಗಳಲ್ಲಿ ವಿತರಣೆ ಮಾಡಲು ವಿತರಕರು ಬೆನ್ನು ಬಿದ್ದಿದ್ದಾರಂತೆ. ಕಾರಣವೇನೆಂದು ಹುಡುಕಿದರೆ ಸಿಕ್ಕಿರುವ ಉತ್ತರ ಕಿಚ್ಚ ಸುದೀಪ್.

    ಚಿತ್ರದ ಟೀಸರ್ ಬಾಲಿವುಡ್​ ಲೆವೆಲ್ಲಿನಲ್ಲಿದೆ. 'ಫಸ್ಟ್ ರ‍್ಯಾಂಕ್ ರಾಜು' ಖ್ಯಾತಿಯ ಗುರುನಂದನ್, ರಾಜು ಪಾತ್ರ ನಿಭಾಯಿಸಿದ್ದಾರೆ. ರಂಗಿತರಂಗ ಖ್ಯಾತಿಯ ಅವಂತಿಕಾ ಶೆಟ್ಟಿ ನಾಯಕಿ.  ಇವರ ಜೊತೆ ಆಶಿಕ ರಂಗನಾಥ್ ಹಾಗೂ ಅಂಜೇಲಿನ ಕೂಡಾ ನಾಯಕಿಯರಾಗಿ ನಟಿಸಿದ್ದಾರೆ. ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಸುಚಿಂದ್ರ ಪ್ರಸಾದ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಕಿರಿಕ್ ಕೀರ್ತಿ, ನಿರ್ದೇಶಕರಾದ ಓಂ ಪ್ರಕಾಶ್ ರಾವ್, ಇಂದ್ರಜಿತ್ ಲಂಕೇಶ್.. ಹೀಗೆ ಅದ್ಧೂರಿ ತಾರಾಗಣದ ಚಿತ್ರ, ರಿಲೀಸ್ ಆಗೋಕೆ ರೆಡಿಯಾಗಿದೆ.

  • ಕಿಚ್ಚನ ಚಿತ್ರಕ್ಕೆ ಬರುತ್ತಿದ್ದಾರೆ ಸುನಿಲ್ ಶೆಟ್ಟಿ

    suneil shetty in phailwan

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಸುನಿಲ್ ಶೆಟ್ಟಿ ಆಯ್ಕೆಯಾಗಿದ್ದಾರೆ. ನಟಿಸುವುದು ಪಕ್ಕಾ. ಆದರೆ, ಸುನಿಲ್ ಶೆಟ್ಟಿ ಪಾತ್ರ ಏನು ಅನ್ನೋದ್ರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. 

    ಸುನಿಲ್ ಶೆಟ್ಟಿ ನಟಿಸೋಕೆ ಒಪ್ಪಿದ್ದಾರೆ. ಪಾತ್ರ ಇನ್ನಷ್ಟೇ ಫೈನಲೈಸ್ ಆಗಬೇಕು ಎಂದಿದ್ದಾರೆ ನಿರ್ದೇಶಕ ಕೃಷ್ಣ. ಸುನಿಲ್ ಶೆಟ್ಟಿ ಸರ್ ಬರುತ್ತಿರುವುದೇ ನನಗೊಂದು ಎಕ್ಸೈಟ್‍ಮೆಂಟ್ ಎಂದಿದ್ದಾರೆ ಸುದೀಪ್.

    ಸುನಿಲ್ ಶೆಟ್ಟಿ, ಕನ್ನಡ ಚಿತ್ರರಂಗಕ್ಕೆ ಬರುತ್ತಿರುವುದಕ್ಕೆ ಮೂಲ ಕಾರಣ, ಸುದೀಪ್ ಮತ್ತು ಸುನಿಲ್ ಶೆಟ್ಟಿ ನಡುವೆ ಇರುವ ಸ್ನೇಹ. ಸೆಲಬ್ರಿಟಿ ಕ್ರಿಕೆಟ್ ಲೀಗ್‍ನಿಂದ ಶುರುವಾದ ಸ್ನೇಹ ನಿರಂತರವಾಗಿ ಮುಂದುವರೆಯುತ್ತಿದೆ. ಆ ಸ್ನೇಹವೇ ಸುನಿಲ್ ಶೆಟ್ಟಿಯವರನ್ನು ಕನ್ನಡ ಚಿತ್ರರಂಗದತ್ತ ಕರೆತಂದಿದೆ. ಪೈಲ್ವಾನ್ ಚಿತ್ರದ ಚಿತ್ರೀಕರಣ ಮೇ 17ರಿಂದ ಶುರುವಾಗಲಿದೆ.

    Related Articles :-

    Sunil Shetty To Act In 'Phailwan'

  • ಕಿಚ್ಚನ ಪೈಲ್ವಾನ್ ಶುರುವಾಯ್ತು

    phailwan started on ugadi festival

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಓಂಕಾರ ಬಿದ್ದಿದೆ. ಚಿತ್ರಕ್ಕೆ ಹನುಮಂತನಗರದ ಶ್ರೀರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಕಿಚ್ಚ ಸುದೀಪ್ ಅಭಿನಯದ ಮೊದಲ ದೃಶ್ಯಕ್ಕೆ ಪ್ರಿಯಾ ಸುದೀಪ್ ಕ್ಲಾಪ್ ಮಾಡಿದರು.

    ಚಿತ್ರವನ್ನು ನಿರ್ದೇಶಿಸುತ್ತಿರುವುದು ಹೆಬ್ಬುಲಿ ಕೃಷ್ಣ. ಸ್ವಪ್ನ ಕೃಷ್ಣ ನಿರ್ಮಾಪಕಿ. ಇನ್ನುಳಿದಂತೆ ಹೆಬ್ಬುಲಿ ಚಿತ್ರತಂಡವೇ ಈ ಚಿತ್ರದಲ್ಲೂ ಕೆಲಸ ಮಾಡಲಿದೆ.

    ಹೆಬ್ಬುಲಿಯಲ್ಲಿ ಸುದೀಪ್‍ರನ್ನು ಸೈನಿಕನಾಗಿ ತೋರಿಸಿದ್ದ ಕೃಷ್ಣ, ಈ ಚಿತ್ರದಲ್ಲಿ ಸುದೀಪ್ ಅವರನ್ನು ಬಾಕ್ಸರ್ ಆಗಿ ತೋರಿಸಲಿದ್ದಾರೆ.

  • ಕಿಚ್ಚನ ಬಿಗ್​ಬಾಸ್ ಮನೆಗೆ ನೀವೂ ಹೋಗಬಹುದು

    big boss season 5

    ಬಿಗ್​ಬಾಸ್ ಎಂದರೆ, ಖ್ಯಾತ ನಟ, ನಟಿಯರು, ಸೆಲೆಬ್ರಿಟಿಗಳೇ ತುಂಬಿರುವ ಮನೆ ಎನ್ನೋದು ಇದುವರೆಗಿನ ನಂಬಿಕೆ. ಈ ಬಾರಿ ಕಾನ್ಸೆಪ್ಟ್ ಬದಲಾಗಿದೆ. ಬಿಗ್‌ ಬಾಸ್‌ ಮನೆಗೆ ನೀವೂ ಹೋಗಬಹುದು.  ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಷೋದ ಐದನೇ ಆವೃತ್ತಿಯಲ್ಲಿ ಜನಸಮಾನ್ಯರಿಗೂ ಅವಕಾಶ ನೀಡಲು ಕಲರ್ಸ್‌ ಕನ್ನಡ ವಾಹಿನಿ ನಿರ್ಧರಿಸಿದೆ. ಸೆಲೆಬ್ರಿಟಿಗಳ ಆಟ ತುಂಟಾಟಗಳನ್ನೇ ನೋಡಿ ಖುಷಿಪಡುತ್ತಿದ್ದ ಜನಸಾಮಾನ್ಯರು ಬಿಗ್​ಬಾಸ್​ನಲ್ಲಿ ಕಾಣಿಸಿಕೊಳ್ಳಬಹುದು. ಕಿಚ್ಚ ಸುದೀಪ್ ಎದುರು ಮಾತನಾಡಬಹುದ

    ಅರ್ಜಿ ಸಲ್ಲಿಕೆ ಶೀಘ್ರದಲ್ಲೇ ಶುರುವಾಗಲಿದೆ. ಈ ಬಾರಿಯೂ ಒಟ್ಟು 15 ಸ್ಪರ್ಧಿಗಳಿರಲಿದ್ದಾರೆ. ಆ 15ರಲ್ಲಿ ಮೂವರು ಜನಸಾಮಾನ್ಯರು. ಸ್ಪರ್ಧಿಗಳ ಆಯ್ಕೆಗೆ ಈ ವಾರವೇ ವಾಹಿನಿ ಅಧಿಕೃತವಾಗಿ ಅರ್ಜಿ ಕರೆಯಲಿದೆ. ವೂಟ್‌ ಡಾಟ್‌ ಕಾಂನಲ್ಲಿ ಅರ್ಜಿ ನಮೂನೆ ಲಭ್ಯವಿದೆ. ಅರ್ಜಿ ಸಲ್ಲಿಕೆಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

    ನೀವು ಮಾಡಬೇಕಾದ್ದು ಇಷ್ಟೆ. 

    ಅರ್ಜಿಯಲ್ಲಿ ಕೇಳಲಾಗಿರುವ 3 ಪ್ರಶ್ನೆಗಳಿಗೆ ಉತ್ತರಿಸುವುದು. ನಿಮ್ಮನ್ನು ನಿಮ್ಮದೇ ಆದ ರೀತಿಯಲ್ಲಿ ಪರಿಚಯಿಸಿಕೊಳ್ಳಬೇಕು. ನೀವು ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುತ್ತಿರುವುದು ಏಕೆ ಎಂದು ಹೇಳಬೇಕು. ಅಷ್ಟೇ ಅಲ್ಲ,  ಇತರರಿಗಿಂತ ನೀವು ಹೇಗೆ ಭಿನ್ನ ಎಂದು ತೋರಿಸಿಕೊಳ್ಳಬೇಕು. ಇದಕ್ಕೆ ಮೂರು ನಿಮಿಷದ ಉತ್ತರವನ್ನು ವಿಡಿಯೊ ಮಾಡಿ ಕಳಿಸಿಕೊಡಬೇಕು. ನಿಮ್ಮ ವಿಡಿಯೋ ಕ್ರಿಯೇಟಿವಿಟಿ ಮೇಲೆ ನಿಮ್ಮ ಆಯ್ಕೆ ನಿರ್ಧಾರವಾಗಬಹುದು. 

    ಇಂಥ ಪ್ರಯತ್ನ ಕನ್ನಡದಲ್ಲಷ್ಟೇ ಹೊಸದು. ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಈ ಕಾನ್ಸೆಪ್ಟ್ ಈಗಾಗಲೇ ಪ್ರಯೋಗವಾಗಿದ್ದು, ಯಶಸ್ವಿಯೂ ಆಗಿದೆ.

     

  • ಕಿಚ್ಚನಿಗೆ ಹುಟ್ಟುಹಬ್ಬದ ಉಡುಗೊರೆಗಳ ಸುರಿಮಳೆ

    sudeep imag

    ಈ ವರ್ಷದ ಕಿಚ್ಚ ಸುದೀಪ್ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್. ಹುಟ್ಟುಹಬ್ಬಗಳ ಸುರಿಮಳೆಯೇ ಆಗುತ್ತಿದೆ. ಅವರು ನಟಿಸುತ್ತಿರುವ ಚಿತ್ರಗಳ ಟೀಂ, ತಲಾ ಒಂದೊಂದು ಗಿಫ್ಟ್ ನೀಡಿದೆ.

    ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದ ಪೋಸ್ಟರ್ ಕ್ರೇಝ್ ಸೃಷ್ಟಿಸಿದ್ದರೆ, ರಾಜು ಕನ್ನಡ ಮೀಡಿಯಂನ ಸ್ಟೈಲಿಷ್ ಲುಕ್ ಬೇರೆಯೇ ಟೇಸ್ಟ್‍ನಲ್ಲಿದೆ. ದಿ ವಿಲನ್ ಚಿತ್ರದ ಮೋಷನ್ ಪೋಸ್ಟರ್‍ನ ಮ್ಯಾಜಿಕ್ಕೇ ಬೇರೆ. ಇವುಗಳಿಗೆಲ್ಲ ಕಳಶವಿಟ್ಟಂತೆ ಅಭಿಮಾನಿಗಳಿಂದ ಸಮಾಜಸೇವೆ. ಅನ್ನದಾನ, ರಕ್ತದಾನ, ಅನಾಥರಿಗೆ ಅನುದಾನಗಳು. ಸುದೀಪ್ ಬರ್ತ್‍ಡೇಯನ್ನು ಸ್ಪೆಷಲ್ ಮಾಡಿರುವುದೇ ಇವು.

  • ಕಿಚ್ಚನಿಗೇ ಬಿಗ್‍ಬಾಸ್ ಸರ್‍ಪ್ರೈಸ್

    big boss host sudeep

    ಕಿಚ್ಚ ಸುದೀಪ್ ಯಾವಾಗಲೂ ತಮ್ಮ ಗೆಳೆಯರಿಗೆ, ಆತ್ಮೀಯರಿಗೆ ಸರ್‍ಪ್ರೈಸ್ ಕೊಡೋದ್ರಲ್ಲಿ ಹೆಸರುವಾಸಿ. ಇಂಥ ಕಿಚ್ಚನಿಗೇ ಸರ್‍ಪ್ರೈಸ್ ಕೊಟ್ಟಿರೋದು ಬಿಗ್‍ಬಾಸ್. ಬಿಗ್‍ಬಾಸ್ 50 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸುದೀಪ್‍ಗೆ ಬಿಗ್‍ಬಾಸ್ ಸಿಬ್ಬಂದಿ ಒಂದು ಅಚ್ಚರಿಯ ಉಡುಗೊರೆ ಕೊಟ್ಟರು. 

    ಬಿಗ್‍ಬಾಸ್ ಸೀಸನ್ 5 ಶುರುವಾದಾಗಿನಿಂದ ಸುದೀಪ್ ಪಾಲ್ಗೊಂಡಿದ್ದ ಬಿಗ್‍ಬಾಸ್ ಪಂಚಾಯಿತಿಗಳ ಸ್ಪೆಷಲ್ ವಿಡಿಯೋ ತುಣುಕು ಮಾಡಿದ್ರು. ಅದು ಕಿಚ್ಚನಿಗೂ ಸರ್‍ಪ್ರೈಸ್.

    ಇಂಥಾದ್ದೊಂದು ವಿಡಿಯೋ ಮಾಡಿರುವುದು ನನಗೆ ಗೊತ್ತಿರಲಿಲ್ಲ. ನಿಜಕ್ಕೂ ಸಂತೋಷವಾಯ್ತು ಎಂದ ಸುದೀಪ್, ಬಿಗ್‍ಬಾಸ್‍ಗೆ ಧನ್ಯವಾದ ಅರ್ಪಿಸಿದ್ರು.

     

  • ಕಿಚ್ಚನ್ ಕಿಚನ್‍ನಲ್ಲಿ ಖುಷಿಖುಷಿಯಾದ ಕಿಚ್ಚ

    kicchana kitchen with gundappa vishwanath

    ಕಿಚ್ಚ ಸುದೀಪ್ ಬಿಗ್‍ಬಾಸ್ ವೀಕೆಂಡ್‍ನಲ್ಲಿ ಕಿಚ್ಚನ್ ಕಿಚನ್ ಶೋ ಕೂಡಾ ಮಾಡ್ತಾರೆ. ಅದು ಬಿಗ್‍ಬಾಸ್ ನಿರೂಪಣೆಯ ಒಂದು ಭಾಗ. ಈ ವಾರದ ಕಿಚ್ಚನ್ ಕಿಚನ್‍ನಲ್ಲಿ ಸ್ವತಃ ಸುದೀಪ್ ಥ್ರಿಲ್ ಆಗುವಂತಾ ಅತಿಥಿಯೊಬ್ಬರು ಬಂದಿದ್ದರು.

    ಭಾರತೀಯ ಕ್ರಿಕೆಟ್ ಕಂಡ ಕ್ರಿಕೆಟ್ ಕಲಾವಿದ ಜಿ.ಆರ್.ವಿಶ್ವನಾಥ್ ಅವರ ಆಗಮನ ಸುದೀಪ್ ಅವರ ಖುಷಿಯನ್ನು ಹೆಚ್ಚಿಸಿತ್ತು. ಗುಂಡಪ್ಪ ವಿಶ್ವನಾಥ್ ಅವರ ಬ್ಯಾಟಿಂಗ್ ನೋಡಿದವರು ಅವರನ್ನು ಆಟಗಾರ ಎನ್ನುವ ಬದಲಿಗೆ ಕ್ರಿಕೆಟ್ ಕಲಾವಿದ ಎಂದೇ ಬಣ್ಣಿಸುತ್ತಾರೆ. ಅದೊಂದು ರೀತಿ ಕ್ರಿಕೆಟ್ ಕಲಾವಿದ ಹಾಗೂ ಚಿತ್ರರಂಗದ ಕಲಾವಿದರ ಸಮ್ಮಿಲನವಾಗಿತ್ತು. 

    ಇಬ್ಬರೂ ಕಲಾವಿದರ ಮಧ್ಯೆ ಶೃತಿ ಹರಿಹರನ್ ಮಿನುಗಲೆ ಮಿನುಗಲೆ ನಕ್ಷತ್ರ ಎಂಬಂತೆ ಮಿಂಚುತ್ತಿದ್ದರು.

  • ಕೆಸಿಸಿ ಟಿ-10 ಕ್ರಿಕೆಟ್ ಟೂರ್ನಿ - ಯಾವ ಹೀರೋ ಯಾವ ಟೀಂನಲ್ಲಿ..?

    star players in kcc t 0 cricket tournament

    ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್. ಕೆಸಿಸಿ ಟಿ-10 ಕ್ರಿಕೆಟ್ ಟೂರ್ನಿಯಲ್ಲಿ 6 ತಂಡಗಳಿರುತ್ತವೆ. ಕಿಚ್ಚ ಸುದೀಪ್ ಸ್ವತಃ ಆಸಕ್ತಿವಹಿಸಿ ರೂಪಿಸಿರುವ ಈ ಕ್ರಿಕೆಟ್ ಟೂರ್ನಿ, ಮನರಂಜನೆಗಾಗಿ. ಈಗ ಟೂರ್ನಿಯ 6 ತಂಡಗಳಲ್ಲಿ ಯಾವ್ಯಾವ ನಾಯಕರು ಯಾವ್ಯಾವ ಟೀಂನಲ್ಲಿ ಆಡ್ತಾರೆ ಅನ್ನೋದು ಬಹಿರಂಗವಾಗಿದೆ. ಇದನ್ನು ಲಕ್ಕಿ ಡ್ರಾ ಮೂಲಕ ಆರಿಸಿದವರು ಭಾರತೀಯ ಕ್ರಿಕೆಟ್ ದಂತಕತೆ ಅನಿಲ್ ಕುಂಬ್ಳೆ.

    ಶಿವರಾಜ್‍ಕುಮಾರ್, ಸುದೀಪ್, ಪುನೀತ್ ರಾಜ್‍ಕುಮಾರ್, ಯಶ್,  ರಕ್ಷಿತ್ ಶೆಟ್ಟಿ ಹಾಗೂ ದಿಗಂತ್. ಇವರು ಆರು ತಂಡಗಳಲ್ಲಿ ಆಡಲಿದ್ದಾರೆ. ನಂದಕಿಶೋರ್, ಸದಾಶಿವ ಶೆಣೈ, ಇಂದ್ರಜಿತ್ ಲಂಕೇಶ್, ಜಾಕ್ ಮಂಜು, ಕೆ.ಪಿ.ಶ್ರೀಕಾಂತ್, ಕೃಷ್ಣ.. ಟೀಂಗಳ ಕ್ಯಾಪ್ಟನ್‍ಗಳು. 

  • ಕೆಸಿಸಿ-10 ಟೂರ್ನಿ - ಶಿವಣ್ಣ ಟೀಂ ಚಾಂಪಿಯನ್

    kcc cup

    ಕರ್ನಾಟಕ ಚಲನಚಿತ್ರ ಕಪ್ ಟೂರ್ನಮೆಂಟ್‍ನ ಮೊದಲ ವರ್ಷದ ಚಾಂಪಿಯನ್ ಆಗಿ ಶಿವರಾಜ್‍ಕುಮಾರ್ ನೇತೃತ್ವದ ಟೀಂ ಹೊರಹೊಮ್ಮಿದೆ. 10 ಓವರ್‍ಗಳ ಮ್ಯಾಚ್ ಟೂರ್ನಮೆಂಟ್‍ನಲ್ಲಿ ಶಿವಣ್ಣ ಟೀಂ, ಫೈನಲ್‍ನಲ್ಲಿ ಒಡೆಯರ್ ಚಾರ್ಜರ್ಸ್ ವಿರುದ್ಧ ಗೆಲುವು ಸಾಧಿಸಿದೆ. ವಿಜಯನಗರ ಪೇಟ್ರಿಯಾಟ್ಸ್ ತಂಡದ ಸ್ಟಾರ್ ಆಟಗಾರರಾಗಿದ್ದವರು ಶಿವರಾಜ್ ಕುಮಾರ್.

    ಹೊಯ್ಸಳ ಈಗಲ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧ ಗೆದ್ದಿದ್ದ ಶಿವರಾಜ್‍ಕುಮಾರ್ ಟೀಂ ಫೈನಲ್ ಪ್ರವೇಶಿಸಿತ್ತು.

  • ಕೋಟಿಗೊಬ್ಬನಿಗೆ ಅದೆಷ್ಟು ಕೋಟಿ ಡಿಮ್ಯಾಂಡಪ್ಪಾ..?

    kotigobba 3 in full demand

    ಕೋಟಿಗೊಬ್ಬ 3 ಸಿನಿಮಾದ ಶೂಟಿಂಗೇ ಮುಗಿದಿಲ್ಲ. ಆಗಲೇ ಸಿನಿಮಾಗೆ ಕೋಟಿ ಕೋಟಿ ಡಿಮ್ಯಾಂಡ್ ಶುರುವಾಗಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಇರುವ ಕಾರಣಕ್ಕೇ ಈ ಡಿಮ್ಯಾಂಡ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. 

    ಚಿತ್ರದ ಹಿಂದಿ ಡಬ್ಬಿಂಗ್ ಮತ್ತು ಸ್ಯಾಟಲೈಟ್ ಹಕ್ಕುಗಳು ಭಾರೀ ಮೊತ್ತಕ್ಕೆ ಸೇಲ್ ಆಗಿವೆಯಂತೆ. ಇತ್ತೀಚೆಗೆ 9 ಕೋಟಿಗೆ ಹಿಂದಿ ಮತ್ತು ಟಿವಿ ರೈಟ್ಸ್ ಮಾರಾಟವಾಗಿವೆ ಎನ್ನಲಾಗಿತ್ತು. ಆದರೆ, ಈಗ ಚಿತ್ರಕ್ಕೆ 21 ಕೋಟಿ ಡಿಮ್ಯಾಂಡ್ ಎಂಬ ಹೊಸ ಮಾಹಿತಿ ಬಂದಿದೆ.

    ನಿರ್ಮಾಪಕ ಸೂರಪ್ಪ ಬಾಬು ಯಾವುದನ್ನೂ ಇನ್ನೂ ಫೈನಲ್ ಮಾಡಿಲ್ಲ. ಶಿವ ಕಾರ್ತಿಕ್ ನಿರ್ದೇಶನದ ಚಿತ್ರಕ್ಕೆ ಮಡೋನಾ ಸೆಬಾಸ್ಟಿನ್ ನಾಯಕಿ. ಟೀಸರ್‍ನಿಂದಲೇ ದೊಡ್ಡ ಹವಾ ಎಬ್ಬಿಸಿದೆ ಕೋಟಿಗೊಬ್ಬ 3 ಸಿನಿಮಾ.

  • ಕ್ರಿಸ್‍ಮಸ್‍ಗೆ ಬರ್ತಾನಂತೆ ಕೋಟಿಗೊಬ್ಬ 3

    sudeep's kotigobba 3 launched

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಶಿವ ಕಾರ್ತಿಕ್ ನಿರ್ದೇಶನದ ಈ ಚಿತ್ರಕ್ಕೆ ಸೂರಪ್ಪ ಬಾಬು ನಿರ್ಮಾಪಕ. ಕಥೆ ಸ್ವತಃ ಸುದೀಪ್ ಅವರದ್ದು.

    ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಸುದೀಪ್ ಅವರ ಇಡೀ ಕುಟುಂಬವೇ ಭಾಗವಹಿಸಿತ್ತು. ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದು  ಸುದೀಪ್ ಅವರ ತಂದೆ ಸರೋವರ್ ಸಂಜೀವ್. ಜ್ಯೋತಿ ಬೆಳಗಿದ್ದು ಸುದೀಪ್ ಅವರ ಪತ್ನಿ ಪ್ರಿಯಾ. ಕ್ಲಾಪ್ ಮಾಡಿದ್ದು ನಿರ್ಮಾಪಕ ಮುನಿರತ್ನ. 

    ರಾಕ್‍ಲೈನ್ ವೆಂಕಟೇಶ್, ಗುರುದತ್, ಸಿ.ಆರ್. ಮನೋಹರ್ ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸಿದ್ದರು. ಚಿತ್ರದ ಚಿತ್ರೀಕರಣ ಮಾರ್ಚ್ ತಿಂಗಳ ಕೊನೆಯಲ್ಲಿ ಶುರುವಾಗಲಿದೆ. ಚೆನ್ನೈ, ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ಕ್ರಿಸ್‍ಮಸ್ ವೇಳೆಗೆ ಕೋಟಿಗೊಬ್ಬ 3 ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾನೆ. 

Chemistry Of Kariyappa Movie Gallery

BellBottom Movie Gallery