` kiccha sudeepa - chitraloka.com | Kannada Movie News, Reviews | Image

kiccha sudeepa

  • ಸೆನ್ಸಾರ್ ಪರೀಕ್ಷೆಯಲ್ಲಿ ಗೆದ್ದ ಪೈಲ್ವಾನ

    pailwan censore u/a

    ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಸಿಕ್ಸ್‍ಪ್ಯಾಕ್ ಮಾಡಿಕೊಂಡೇ ನಟಿಸಿರುವ ಚಿತ್ರ ಪೈಲ್ವಾನ್. ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಕಬೀರ್ ಸಿಂಗ್ ದುಲ್ಹನ್, ಚಿಕ್ಕಣ್ಣ,  ನಟಿಸಿರುವ ಚಿತ್ರಕ್ಕೆ ಕೃಷ್ಣ ನಿರ್ದೇಶಕ. ಸ್ವಪ್ನಾ ಕೃಷ್ಣ ನಿರ್ಮಾಪಕಿ. ಅರ್ಜುನ್ ಜನ್ಯ ಸಂಗೀತ ನೀಡಿರುವ ಚಿತ್ರ, ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. 

    ಕನ್ನಡದ ಬಹುನಿರೀಕ್ಷೆಯ ಚಿತ್ರವೀಗ ಸೆನ್ಸಾರ್ ಪರೀಕ್ಷೆ ಪಾಸ್ ಆಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ ಸೆನ್ಸಾರ್ ಮಂಡಳಿ. 

  • ಸೆನ್ಸಾರ್‍ಗೆ ಹೊರಟ ವಿಲನ್

    the villain reached censor office

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ದಿ ವಿಲನ್. ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್ ಆಗಿ ಜನಪ್ರಿಯಗೊಂಡಿವೆ. ಒಂದೊಂದು ಹಾಡೂ ಒಂದೊಂದು ರೀತಿ ಸ್ಪೆಷಲ್. ಹೀಗಿರುವಾಗಲೇ ಶೀಘ್ರದಲ್ಲೇ ರಿಲೀಸ್ ಡೇಟ್ ಪ್ರಕಟಿಸೋದಾಗಿ ಘೋಷಿಸಿದ್ದಾರೆ ನಿರ್ದೇಶಕ ಪ್ರೇಮ್.

    ಕಾಯುವಿಕೆ ಮುಗಿಯಿತು. ಅಭಿಮಾನಿಗಳೇ.. ಉಸಿರು ಬಿಗಿ ಹಿಡಿದುಕೊಳ್ಳಿ. ಚಿತ್ರ ಸೆನ್ಸಾರ್‍ಗೆ ಹೊರಟಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ ಜೋಗಿ ಪ್ರೇಮ್.

    ಸಿ.ಆರ್. ಮನೋಹರ್ ನಿರ್ಮಾಣದ ದಿ ವಿಲನ್ ಚಿತ್ರಕ್ಕೆ ಆ್ಯಮಿ ಜಾಕ್ಸನ್ ನಾಯಕಿ. ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿರುವ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಎಂಬುದು ನಿರ್ವಿವಾದ.

  • ಸೆಪ್ಟೆಂಬರ್ 20ಕ್ಕೆ ದಿ ವಿಲನ್ ಹಬ್ಬ..?

    the villain to release on sep 20th

    ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಸಿನಿಮಾ, ರಿಲೀಸ್‍ಗೂ ಮೊದಲೇ ಹವಾ ಸೃಷ್ಟಿಸಿದೆ. ರಾಜ್ಯದ ಹಲವಾರು ಥಿಯೇಟರುಗಳಲ್ಲಿ ಈಗಾಗಲೇ ದಿ ವಿಲನ್ ನಮ್ಮ ಥಿಯೇಟರ್‍ಗೇ ಬರಲಿದೆ ಎಂಬ ಪೋಸ್ಟರ್‍ಗಳು ರಾರಾಜಿಸುತ್ತಿವೆ. ನಿರ್ಮಾಪಕ ಸಿ.ಆರ್.ಮನೋಹರ್ ಆಗಲೀ, ನಿರ್ದೇಶಕ ಪ್ರೇಮ್ ಆಗಲೀ, ಇದುವರೆಗೆ ಯಾವುದೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಚಿತ್ರಲೋಕಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ದಿ ವಿಲನ್ ಸಿನಿಮಾ, ಸೆಪ್ಟೆಂಬರ್ 20ಕ್ಕೆ ರಿಲೀಸ್ ಆಗಲಿದೆ.

    ಅಲ್ಲಿಗೆ ಗೌರಿ ಗಣೇಶ ಹಬ್ಬವನ್ನು ಮುಗಿಸಿಕೊಂಡೇ ದಿ ವಿಲನ್ ಬರಲಿದ್ದಾನೆ. ಹಾಗೆಂದು ಸೆಪ್ಟೆಂಬರ್ 20ಕ್ಕೆ ರಿಲೀಸ್ ಆದರೂ, ದಿ ವಿಲನ್‍ಗೆ ಲಾಭಗಳೂ ಇವೆ. ಗೌರಿ ಗಣೇಶ ಹಬ್ಬದಂತೆಯೇ, 20ರ ನಂತರವೂ ಸಾಲು ಸಾಲು ರಜೆ ಸಿಗಲಿವೆ. ಸೆಪ್ಟೆಂಬರ್ 21ಕ್ಕೆ ಮೊಹರಂ ಹಬ್ಬ. ಸೆಪ್ಟೆಂಬರ್ 22, 4ನೇ ಶನಿವಾರ, ಬ್ಯಾಂಕ್ ರಜಾ. ಸೆಪ್ಟೆಂಬರ್ 21 ಭಾನುವಾರ. ಅಲ್ಲಿಗೆ ದಿ ವಿಲನ್‍ಗೆ ರಜೆಗಳ ಸೌಭಾಗ್ಯವೂ ಸಿಗಲಿದೆ. ಅಬ್ಬರಕ್ಕೆ ಅಷ್ಟು ಸಾಕಲ್ಲವೇ.

    ಆ್ಯಮಿ ಜಾಕ್ಸನ್ ನಾಯಕಿಯಾಗಿರುವ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಅಕ್ಷರಶಃ ಮೋಡಿ ಮಾಡಿಬಿಟ್ಟಿವೆ. ಸಿನಿಮಾ ರಿಲೀಸ್‍ಗೆ ಅಭಿಮಾನಿಗಳೇ ಏನು, ಚಿತ್ರರಂಗವೇ ಚಾತಕ ಪಕ್ಷಿಯಂತೆ ಕಾಯುತ್ತಿದೆ.

  • ಸೆಲಬ್ರೇಷನ್ ಆಫ್ ದ ಇಯರ್ : ಕಬ್ಬದ ಸುರ್ ಸುರ್ ಬತ್ತಿ

    ಸೆಲಬ್ರೇಷನ್ ಆಫ್ ದ ಇಯರ್ : ಕಬ್ಬದ ಸುರ್ ಸುರ್ ಬತ್ತಿ

    ಕಬ್ಜದ ಮತ್ತೊಂದು ಹಾಡು ಅದ್ಧೂರಿಯಾಗಿ ರಿಲೀಸ್ ಆಗಿದೆ. ಆರ್.ಚಂದ್ರು ನಿರ್ಮಾಣ ಮತ್ತು ನಿರ್ದೇಶನದ ಸುರ್ ಸುರ್ ಬತ್ತಿ ಸಾಂಗು, ಪಡ್ಡೆ ಹೈಕಳ ಎದೆಯಲ್ಲಿ ಸರ್ ಸರ್ ಅಂತಾ ಸುರ್ ಸುರ್ ಬತ್ತಿ ಇಟ್ಟಿದೆ. ಈ ಹಾಡನ್ನು ಬಿಡುಗಡೆ ಮಾಡುವ ಮುನ್ನ ದ ಸೆಲೆಬ್ರೇಷನ್ ಸಾಂಗ್ ಆಫ್ ದ ಇಯರ್ ಎಂದು ಹೇಳಿಲದ್ದ ಚಿತ್ರತಂಡ ಮಾತನ್ನು ಉಳಿಸಿಕೊಂಡಿದೆ. ಕೇಳುಗರಿಗೆ ಹಾಗೂ ನೋಡುಗರಿಗೆ ಇಬ್ಬರಲ್ಲೂ ಕಿಚ್ಚು ಹತ್ತಿಸಿದೆ ಈ ಹಾಡು.

    ಬಸಣ್ಣಿಯಾಗಿ ಬಾಂಬೆ ಮಿಠಾಯಿ ತಿನ್ನಿಸಿದ್ದ ತಾನ್ಯಾ ಹೋಪ್, ಸುರ್ ಸುರ್ ಬತ್ತಿಯಲ್ಲಿ ಸೊಂಟ ಬಳುಕಿಸಿದ್ದಾರೆ. ಉಪೇಂದ್ರ ವಿಂಟೇಜ್ ಸೂಟ್ ಧರಿಸಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಪ್ರಮೋದ್ ಮರವಂತೆ ಈ ಹಾಡಿನ ಸಾಹಿತ್ಯ ಬರೆದಿದ್ದು, ಏರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ದನಿ ನೀಡಿದ್ದಾರೆ‌

    ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ, ನಟ ಸಾರ್ವಭೌಮ ಹಾಗೂ ಯುವರತ್ನ ಮತ್ತು ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ರಾರಾ ರಕ್ಕಮ್ಮ ಹಾಡಿಗೆ ನೃತ್ಯ ಸಂಯೋಜಿಸಿದ್ದ ಜಾನಿ ಮಾಸ್ಟರ್ ಕೊರಿಯೋಗ್ರಫಿ ಅದ್ಭುತವಾಗಿ ಮೂಡಿ ಬಂದಿದೆ ಅನ್ನೋದು ಲಿರಿಕಲ್ ವಿಡಿಯೋದಲ್ಲಿನ ಕಟ್ಸ್ಗಳಿಂದಲೇ ಗೊತ್ತಾಗುತ್ತಿದೆ.

    ಉಪ್ಪಿ, ಸುದೀಪ್, ಶ್ರೇಯಾ ಸರಣ್ ಅಭಿನಯದ ಚಿತ್ರದ ಹಾಡು ರಿಲೀಸ್ ಆಗಿದ್ದು ಶಿಡ್ಲಘಟ್ಟದಲ್ಲಿ. ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಯಿಂದ ಬಿಡುಗಡೆಯಾದ ಹಾಡಿದು. ಶಿವರಾತ್ರಿಯಂದು ನಮಾಮಿ ಹಾಡಿನ ಮೂಲಕ ಭಕ್ತಿಯ ಉತ್ತುಂಗ ತೋರಿಸಿದ್ದ ಚಂದ್ರು, ಈ ಹಾಡಿನಲ್ಲಿ ಮಾದಕತೆಯ ಮತ್ತೊಂದು ಮಜಲು ತೋರಿಸಿದ್ದಾರೆ.

  • ಸೈರಾ ಹಬ್ಬಕ್ಕೆ ಸಿದ್ಧನಾದ ಪೈಲ್ವಾನ

    kiccha all set for sye ra festival

    ಒಂದೆಡೆ ಪೈಲ್ವಾನ್ ಸಿನಿಮಾ ಥಿಯೇಟರುಗಳಲ್ಲಿ ಬೊಂಬಾಟ್ ಪ್ರದರ್ಶನ ಕಾಣುತ್ತಿರುವಾಗಲೇ, ಕಿಚ್ಚ ಸುದೀಪ್ ಗಾಂಧಿ ಜಯಂತಿಗೆ ಇನ್ನೊಂದು ಹಬ್ಬಕ್ಕೆ ಸಿದ್ಧರಾಗುತ್ತಿದ್ದಾರೆ. ಅದು ಸೈರಾ ಹಬ್ಬ.

    ಅಕ್ಟೋಬರ್ 02ರಂದು, ಗಾಂಧಿ ಜಯಂತಿಗೆ ರಿಲೀಸ್ ಆಗುತ್ತಿದೆ ಸೈರಾ ನರಸಿಂಹ ರೆಡ್ಡಿ ಸಿನಿಮಾ. ಅದು ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಸೈರಾ ನರಸಿಂಹ ರೆಡ್ಡಿಯ ಚರಿತ್ರೆ. ಮೆಗಾಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿಯಾಗಿ ಕಂಗೊಳಿಸಿದ್ದಾರೆ.

    ಚಿತ್ರದ ಟ್ರೇಲರ್ ಹೊರಬಿದ್ದಿದೆ. ಕಿಚ್ಚ ಸುದೀಪ್ ಚಿತ್ರದಲ್ಲಿ ಅವುಕ ರಾಜು ಹೆಸರಿನ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ ಜೊತೆ ಅಮಿತಾಬ್ ಬಚ್ಚನ್, ವಿಜಯ್ ಸೇತುಪತಿ, ಜಗಪತಿ ಬಾಬು, ಅನುಷ್ಕಾ ಶೆಟ್ಟಿ, ನಯನತಾರಾ, ತಮನ್ನಾ.. ಹೀಗೆ ಘಟಾನುಘಟಿಗಳೇ ನಟಿಸಿರುವ ಸಿನಿಮಾ ಇದು. ತೆಲುಗಿನಲ್ಲಿ ತಯಾರಾಗಿರುವ ಚಿತ್ರ, ಕನ್ನಡದಲ್ಲೂ ಡಬ್ ಆಗಿ ಬರುತ್ತಿದೆ.

  • ಸೋಮವಾರದಿಂದ ಮೈಸೂರು ಪ್ಯಾಲೇಸ್‍ನಲ್ಲಿ ಮೆಗಾಸ್ಟಾರ್ 

    syera reddy shooting in mysore palace

    ತೆಲುಗು ಚಿತ್ರರಂಗದ ಅದ್ಧೂರಿ ಚಿತ್ರ, ಸ್ವಾತಂತ್ರ್ಯ ಹೋರಾಟಗಾರನ ಕಥೆ ಹೊಂದಿರುವ ಸೈರಾ ಚಿತ್ರತಂಡ ಸೋಮವಾರದಿಂದ ಮೈಸೂರಿನಲ್ಲಿ ಬೀಡು ಬಿಡಲಿದೆ. ಮೈಸೂರು ಅರಮನೆಯಲ್ಲಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಸುಮಾರು 25 ದಿನ ಇಡೀ ಚಿತ್ರತಂಡ ಮೈಸೂರಿನಲ್ಲಿ ಶೂಟಿಂಗ್ ನಡೆಸಲಿದೆ.

    ಮೆಗಾಸ್ಟಾರ್ ಚಿರಂಜೀವಿ ಜೊತೆ, ಕಿಚ್ಚ ಸುದೀಪ್ ಕೂಡಾ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ವಿಜಯ್ ಸೇತುಪತಿ, ಅಮಿತಾಬ್ ಬಚ್ಚನ್ ಕೂಡಾ ಚಿತ್ರದಲ್ಲಿದ್ದಾರೆ. 

  • ಸ್ವಾತಂತ್ರ್ಯ ಹೋರಾಟಗಾರನ ಮಗ ಭೂಗತ ನಾಯಕನಾಗುವ ಕಥೆ : ಕಬ್ಬ

    ಸ್ವಾತಂತ್ರ್ಯ ಹೋರಾಟಗಾರನ ಮಗ ಭೂಗತ ನಾಯಕನಾಗುವ ಕಥೆ : ಕಬ್ಬ

    ಅಪ್ಪ ಸ್ವಾತಂತ್ರ್ಯ ಹೋರಾಟಗಾರ. ಅಮರೇಶ್ವರ. ಆತನ ಮಗ ಅರ್ಕೇಶ್ವರ, 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುವ ಕಥೆ ಕಬ್ಬ ಚಿತ್ರದ್ದು. ಡಾನ್ ಆಗುವುದಷ್ಟೇ ಅಲ್ಲ, ತನ್ನದೇ ಛಾಪನ್ನೂ ಮೂಡಿಸುವ ವ್ಯಕ್ತಿಯ ಕಥೆ ಕಬ್ಜ ಚಿತ್ರದಲ್ಲಿದೆ.

    ‘ಕಬ್ಜ’ ಚಿತ್ರದ ಬಗ್ಗೆ ಬರೀ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ.

    ಉಪೇಂದ್ರ ಮತ್ತು ‘ಕಿಚ್ಚ’ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕು ಗಳನ್ನು ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ. ಮೊದಲ ಹಂತವಾಗಿ ಹಿಂದಿ ಟೀಸರ್ ಬಿಡುಗಡೆಯಾಗಿದೆ.  ಶ್ರೀ ಸಿದ್ಧೇಶ್ವರ ಎಂಟರ್‍ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.

    ಭೂಗತಲೋಕದ ಹೊಸ ಅಧ್ಯಾಯವಾದ ಕಬ್ಜ ಚಿತ್ರೆದ ಹಿಂದಿ ಅವತರಣಿಕೆಯನ್ನು ಬಾಲಿವುಡ್ನ ಹೆಸರಾಂತ ನಿರ್ಮಾಪಕರಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಅವರ ಸಹಕಾರ ಹೀಗೆಯೇ ಮುಂದುವರೆಯಲಿ ಎಂದಿದ್ದಾರೆ ನಟ ಉಪೇಂದ್ರ. ಕಿಚ್ಚ ಸುದೀಪ್ ಸಹ ದಕ್ಷಿಣ ಭಾರತೀಯ ಸಿನಿಮಾಗಳು ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ ಈ ಅದ್ಭುತ ಸಂದರ್ಭದಲ್ಲಿ ಖ್ಯಾತ ವಿತರಕ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಮ್ಮ ‘ಕಬ್ಜ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದು ಚಿತ್ರತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ  ಪ್ರತಿಫಲ’ ಎಂದಿದ್ದಾರೆ.

    ‘ಕಬ್ಜ’ ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿರುವ ಆನಂದ್ ಪಂಡಿತ್ ಮಾತನಾಡಿ, ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಅಂತಹ ಒಂದು ಮನರಂಜನೆಯಾಗಲಿದೆ ಎಂದು ನಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿಕೊಂಡಿದ್ದಾರೆ.

  • ಹಸಿರು ಹಂಚಿದರು ಜೋಗಿ ಪ್ರೇಮ್

    the villain team

    ಶಿವರಾಜ್ ಕುಮಾರ್ ಮತ್ತು ಸುದೀಪ್ ಎಂಬ ಎರಡು ಧೃವತಾರೆಗಳನ್ನು ಒಂದುಗೂಡಿಸಿ, ದಿ ವಿಲನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಪ್ರೇಮ್, ಈ ಬಾರಿಯ ದೀಪಾವಳಿಯನ್ನು ಹಸಿರು ಹಂಚುವ ಮೂಲಕ ಆಚರಿಸಿದ್ದಾರೆ. ದಿ ವಿಲನ್ ಚಿತ್ರತಂಡದ ಸದಸ್ಯರಿಗೆ ಸಸಿ ಹಂಚಿದ್ದಾರೆ.

    ಇದಕ್ಕೆಲ್ಲ ಯಾರು ಕಾರಣ ಎಂದರೆ, ಅವರ ಮಗನಂತೆ, ದೀಪಾವಳಿಗೆ ಯಾವ ಪಟಾಕಿ ಬೇಕು ಎಂದು ಕೇಳಿದಾಗ, ಅವರ ಮಗ ಬೇಡ ಪಪ್ಪಾ, ಪೊಲ್ಯೂಷನ್ ಆಗುತ್ತೆ. ಬೊಂಬೆ ತಂದುಕೊಡು ಎಂದನಂತೆ. ಮಗ ಸೂರ್ಯ ಹೇಳಿದ ಮಾತು ಪ್ರೇರನೆಯಾಯಿತು. ಹೀಗಾಗಿ ಚಿತ್ರತಂಡದವರಿಗೂ ಪಟಾಕಿ ಬದಲು, ಸಸಿ ಹಂಚಿದೆ ಎಂದಿದ್ದಾರೆ ಪ್ರೇಮ್.

  • ಹಾಲಿವುಡ್ ಸ್ಟೈಲ್`ನಲ್ಲಿ ಕಬ್ಜಾ ಪೋಸ್ಟರ್

    ಹಾಲಿವುಡ್ ಸ್ಟೈಲ್`ನಲ್ಲಿ ಕಬ್ಜಾ ಪೋಸ್ಟರ್

    ಕಬ್ಜ ಚಿತ್ರದ ಪೋಸ್ಟರ್ ವೈರಲ್ ಆಗುತ್ತಿದೆ. ಪೋಸ್ಟರ್ ನೋಡುತ್ತಿದ್ದರೆ, ಪಕ್ಕಾ ಹಾಲಿವುಡ್ ಸ್ಟೈಲ್ ನೆನಪಿಸುತ್ತಿದೆ. ಅಭಿಮಾನಿಗಳಂತೂ ಫುಲ್ ಫಿದಾ. ಉಪೇಂದ್ರ ಮತ್ತು ಸುದೀಪ್ ಅವರ ಸ್ಟೈಲಿಷ್ ಲುಕ್ ಹಾಗಿದೆ.

    ಸಚಿವ ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕರಾಗಿರುವುದು ಸ್ವತಃ ನಿರ್ದೇಶಕ ಆರ್.ಚಂದ್ರು. ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಮಾರ್ಕೆಟ್‍ಗಾಗಿಯೇ ನಿರ್ಮಾಣವಾಗುತ್ತಿರುವ ಚಿತ್ರ ಕಬ್ಜ. ಚಿತ್ರದಲ್ಲಿ ಖ್ಯಾತನಾಮರ ಸೈನ್ಯವೇ ಸೇರಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಮ್ಯೂಸಿಕ್, ತಮಿಳಿನ ಐ ಖ್ಯಾತಿಯ ಕಾಮರಾಜನ್, ಜಗಪತಿ ಬಾಬು, ಅನೂಪ್ ರೇವಣ್ಣ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರೇ ಉಪ್ಪಿ ಕಿಚ್ಚ ಚಿತ್ರದಲ್ಲಿ ಸಾಥ್ ಕೊಡುತ್ತಿದ್ದಾರೆ.

    ಸದ್ಯಕ್ಕೆ ಸೆನ್ಸೇಷನ್‍ನಲ್ಲಿರುವ ಕೆಜಿಎಫ್ 2, ವಿಕ್ರಾಂತ್ ರೋಣ, ತೆಲುಗಿನ ಪುಷ್ಪ, ಆರ್‍ಆರ್‍ಆರ್ ಚಿತ್ರಗಳ ಜೊತೆ ಕಬ್ಜ ಕೂಡಾ ಇದೆ ಎನ್ನುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಆರ್.ಚಂದ್ರು. ಚಿತ್ರಕ್ಕೆ ಇನ್ನೂ ನಾಯಕಿ ಫಿಕ್ಸ್ ಆಗಿಲ್ಲ. ಈಗಾಗಲೇ ದೊಡ್ಡ ದೊಡ್ಡ ಸಂಸ್ಥೆಗಳನ್ನು ಚಿತ್ರವನ್ನು ಕೊಳ್ಳುವುದಕ್ಕೆ ಮುಂದೆ ಬಂದಿವೆ.

  • ಹಿಂದಿ ರಾಷ್ಟ್ರ ಭಾಷೆ ಅಲ್ಲ : ಕಿಚ್ಚ ಹೇಳಿದ ಪ್ಯಾನ್ ಇಂಡಿಯಾ ಸ್ಟೋರಿ

    ಹಿಂದಿ ರಾಷ್ಟ್ರ ಭಾಷೆ ಅಲ್ಲ : ಕಿಚ್ಚ ಹೇಳಿದ ಪ್ಯಾನ್ ಇಂಡಿಯಾ ಸ್ಟೋರಿ

    ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಸದ್ದು ಜೋರಾಗಿದೆ. ಎಲ್ಲರೂ ಮಿನಿಮಮ್ 5 ಭಾಷೆಗಳಲ್ಲಿ ಸಿನಿಮಾ ಮಾಡ್ತಿದ್ದಾರೆ. ಈಗ ಎಲ್ಲೆಡೆ ಕನ್ನಡ ಮತ್ತು ತೆಲುಗು ಚಿತ್ರಗಳದ್ದೇ ಸದ್ದು. ಕೆಜಿಎಫ್, ಆರ್.ಆರ್.ಆರ್. ಪುಷ್ಪ ಸರಣಿ ಮುಂದುವರೆಯುತ್ತಿವೆ. ಇದೇ ವೇಳೆ ಕನ್ನಡದಲ್ಲಿ ಮತ್ತೊಮ್ಮೆ ಸಿನಿಮಾ ಮಾಡೋಕೆ ಬಂದಿರೋ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮುಂಬೈನಲ್ಲಿ ದಕ್ಷಿಣದ ಭಾಷೆಗಳ ಬಗ್ಗೆ ಇದ್ದ ಗೌರವದ ಕಥೆ ಹೇಳಿದರು.

    ನಾನು ಮೊದಲಿಗೆ ಮುಂಬೈಗೆ ಹೋದಾಗ ಅವರಿಗೆ ದಕ್ಷಿಣ ಭಾರತ ಅಂದ್ರೆ ಮದ್ರಾಸಿಗಳು ಅಂತಷ್ಟೇ ಗೊತ್ತಿತ್ತು. ತಮಿಳರನ್ನೂ ಅವರು ಕರೆಯುತ್ತಿದ್ದುದು ಮದ್ರಾಸಿಗಳು ಅಂತಾನೆ. ತೆಲುಗು, ಕನ್ನಡದ ಬಗ್ಗೆ ಮಾಹಿತಿಯೂ ಇರಲಿಲ್ಲ. ಕೆಲವರಂತೂ ಮದ್ರಾಸ್‍ನಿಂದ ಫೋನ್ ಮಾಡಿ ಇಲ್ಲಿಂದ ಕನ್ನಡ ಎಷ್ಟು ದೂರ ಅಂತಿದ್ದರು. ಅವರಿಗೆ ಕನ್ನಡ ಮತ್ತು ಕರ್ನಾಟಕದ ವ್ಯತ್ಯಾಸವೂ ಗೊತ್ತಿರಲಿಲ್ಲ. ತೆಲುಗಿನ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಈಗ ಅವರೆಲ್ಲರೂ ಕನ್ನಡದ ಬಗ್ಗೆ ಕನ್ನಡ ಸಿನಿಮಾ ಕೆಜಿಎಫ್ ಬಗ್ಗೆ ಮಾತನಾಡುತ್ತಿದ್ದಾರೆ. ಗೆಲುವಿಗೆ ಇರೋ ಶಕ್ತಿಯೇ ಅದು ಎಂದು ಕೆಜಿಎಫ್ ಚಿತ್ರ, ಪ್ರಶಾಂತ್ ನೀಲ್, ಯಶ್ ಅವರನ್ನು ಹೊಗಳಿದರು ರಾಮ್ ಗೋಪಾಲ್ ವರ್ಮಾ.

    ನಂತರ ಮಾತನಾಡಿದ ಸುದೀಪ್ ಕನ್ನಡ ಚಿತ್ರರಂಗವನ್ನು ಹೊಗಳಿದ ವರ್ಮಾಗೆ ಥ್ಯಾಂಕ್ಸ್ ಹೇಳುತ್ತಲೇ ಹಿಂದಿ ಅನ್ನೋದು ರಾಷ್ಟ್ರ ಭಾಷೆಯಲ್ಲ. ನಮ್ಮ ಕನ್ನಡದಂತೆಯೇ ಅದೂ ಒಂದು ಭಾಷೆ ಅಷ್ಟೆ ಎಂದರು. ಚಪ್ಪಾಳೆ ಬಿತ್ತು.

    ಪ್ಯಾನ್ ಇಂಡಿಯಾ ಅನ್ನೋದು ಈಗ ಶುರುವಾಗಿದ್ದಲ್ಲ. 1970ರಿಂದಲೇ ಇದೆ. ನಾವೆಲ್ಲ ಹಿಂದಿಗೆ ಹೋಗ್ತಿಲ್ಲ. ಅಲ್ಲಿನವರೇ ಅವರ ಚಿತ್ರಗಳನ್ನು ಇಲ್ಲಿನ ಭಾಷೆಗಳಿಗೆ ಡಬ್ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಪ್ಯಾನ್ ಇಂಡಿಯಾ ಅನ್ನೋದು ಅಲ್ಲಿಂದಲೇ ಶುರುವಾಯ್ತು. ಈಗ ನಾವು ಮಾಡ್ತಿರೋದು ಸಿನಿಮಾ ಮಾತ್ರ. ಎಲ್ಲ ಭಾಷೆಗಳಿಗೂ ಹೋಗ್ತಿದೆ. ದೊಡ್ಡ ಮಟ್ಟದಲ್ಲಿ ಅದು ಶುರುವಾಗಿದ್ದು ಜಾಕಿ ಚಾನ್ ಚಿತ್ರಗಳಿಂದ ಎಂಬ ಕಥೆಯನ್ನೂ ಬಿಚ್ಚಿಟ್ಟರು ಸುದೀಪ್.

  • ಹೆಂಗೆ.. ಕಿಚ್ಚ ಮದಕರಿ ನಾಯಕ..?

    fan made poster of madakari nayaka

    ಏಳು ಸುತ್ತಿನ ಕೋಟೆಯ ದೊರೆ, ಮದಿಸಿದ ಕರಿ(ಆನೆ)ಯ ಮದವಡಗಿಸುತ್ತಿದ್ದ ಮದಕರಿ ನಾಯಕನ ಪಾತ್ರದಲ್ಲಿ ದರ್ಶನ್ ಮತ್ತು ಸುದೀಪ್ ಇಬ್ಬರೂ ನಟಿಸುವುದು ಪಕ್ಕಾ. ದರ್ಶನ್ ಮದಕರಿ ನಾಯಕನ ಚಿತ್ರ, ಜನವರಿಯಲ್ಲಿ ಸೆಟ್ಟೇರಲಿದೆ. ಸುದೀಪ್ ಮದಕರಿ ನಾಯಕನ ಸಿನಿಮಾ ಕೂಡಾ ಮುಂದಿನ ವರ್ಷ ಶುರುವಾಗಬಹುದು. ಇಷ್ಟಿದ್ದ ಮೇಲೆ ಅಭಿಮಾನಿಗಳದ್ದೇನು..? 

    ಇದು ಸುದೀಪ್ ಅಭಿಮಾನಿಯೊಬ್ಬನ ಕೈಚಳಕದ ಚಿತ್ರ. ಸುದೀಪ್ ಮದಕರಿ ನಾಯಕನಾದರೆ ಹೇಗೆ ಕಾಣಬಹುದು ಅನ್ನೋದನ್ನ ಕುಂಚದಲ್ಲಿ ಬಿಡಿಸಿದ್ದಾರೆ ಕಿಚ್ಚ ಸುದೀಪ್‍ರ ಅಭಿಮಾನಿ. 

  • ಹೇಗಿದೆ ಕೋಟಿಗೊಬ್ಬ 3 ಟ್ರೇಲರ್?

    ಹೇಗಿದೆ ಕೋಟಿಗೊಬ್ಬ 3 ಟ್ರೇಲರ್?

    2 ನಿಮಿಷ 42 ಸೆಕೆಂಡುಗಳ ಟ್ರೇಲರ್. ಕಿಚ್ಚ ಆರಂಭದಲ್ಲಿ ಕಾಣಿಸಿಕೊಳ್ಳೋದೇ ಇಲ್ಲ. ಐ ಆ್ಯಮ್ ದ ಮರ್ಚೆಂಟ್ ಆಫ್ ಡೆತ್ ಎಂದು ನವಾಬ್ ಶಾ ಹೇಳೋ ಮೂಲಕ ಶುರುವಾಗೋ ಟ್ರೇಲರ್‍ನಲ್ಲಿ ಮೆಡಿಕಲ್ ಮಾಫಿಯಾದ ಕಥೆ ಇಣುಕುತ್ತೆ. ಆಮೇಲೆ ಸುದೀಪ್ ಎಂಟ್ರಿ ಲೈವ್ಲಿಯಾಗಿಯೇ ಆಗುತ್ತೆ. ಹಾಗಂತ ಇದು ಕಾಮಿಡಿ ಸಿನಿಮಾ ಅಲ್ಲ. ಸಸ್ಪೆನ್ಸ್ ಥ್ರಿಲ್ಲರ್.

    ನಾಯಕಿ ಮಡೋನ್ನಾ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಪಾತ್ರಗಳಲ್ಲಿ ಒಂದಿಷ್ಟು ನಿಗೂಢತೆಯೂ ಇದೆ. ರವಿಶಂಕರ್ ಪಾತ್ರ ಕಾಮಿಡಿಯೋ.. ಏನು ಅನ್ನೋದು ಗೊತ್ತಾಗಲ್ಲ.

    ಸತ್ಯ ಮತ್ತು ಶಿವ ಪಾತ್ರಗಳ ಗೊಂದಲವನ್ನು ಇಲ್ಲೂ ಮುಂದುವರೆಸಿದ್ದಾರೆ ಡೈರೆಕ್ಟರ್ ಶಿವ ಕಾರ್ತಿಕ್. ಇಲ್ಲಿ ಪೊಲೀಸ್ ಆಗಿರೋದು ಅಫ್ತಾಬ್ ಶಿವದಾಸನಿ.

    ಚಿನ್ನಾ.. ಓವರ್ ಆಗಿ ಮಾತನಾಡಬಾರದು. ಓವರ್ ಆಗಿ ಮಾತನಾಡೋರ ಮಾತನ್ನ ಕೇಳಿಸಿಕೊಳ್ಳೋಕೂ ಹೋಗಬಾರದು. ನೀನು ಮಾತಾಡ್ತಾ ಇರು, ನಾನು ತುಟಿ ಹೊಲಿದುಕೊಂಡಿರ್ತೇನೆ ಅನ್ನೋ ಡೈಲಾಗ್ ಸಿನಿಮಾಗಷ್ಟೇ ಅಲ್ಲ, ಲೈಫಿಗೂ ಅಪ್ಲೈ ಆಗುತ್ತೆ. ಸೂರಪ್ಪ ಬಾಬು ಹಣವನ್ನು ನೀರಿನಂತೆ ಸುರಿದಿದ್ದಾರೆ ಅನ್ನೋದು ಟ್ರೇಲರಿನಲ್ಲಿ ಗೊತ್ತಾಗುತ್ತೆ.

  • ಹೇಗಿದೆ ಪೈಲ್ವಾನ್ ಕಲೆಕ್ಷನ್..?

    pailan collection summary

    ಪೈಲ್ವಾನ್ ಕೃಷ್ಣ ಅಲಿಯಾಸ್ ಕಿಚ್ಚನ ಅಬ್ಬರ, ಕೃಷ್ಣ ನಿರ್ದೇಶನದ ಪೈಲ್ವಾನ್, ನಿರ್ಮಾಪಕಿ ಸ್ವಪ್ನಾ ಕೃಷ್ಣ ಅವರ ಮುಖದಲ್ಲಿ ನಗು ಅರಳಿಸಿದೆ. ಒಂದು ಲೆಕ್ಕಾಚಾರದ ಪ್ರಕಾರ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ನಿರ್ಮಾಪಕರು ಸೇಫ್ ಆಗಿದ್ದರು. ಈಗ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ.

    ಪೈಲ್ವಾನ್ ಮೊದಲ ದಿನ 10 ಕೋಟಿ ಎಂಬ ಸುದ್ದಿಯಿತ್ತಲ್ಲ, ಅದು ಕನ್ನಡದ್ದು ಮಾತ್ರ. ಎಲ್ಲ 5 ಭಾಷೆಗಳ ಕಲೆಕ್ಷನ್ ಲೆಕ್ಕ ತೆಗೆದುಕೊಂಡರೆ ಮೊದಲ ದಿನ ಕಲೆಕ್ಷನ್ 18 ಕೋಟಿ ದಾಟಿದೆ.

    ಇನ್ನು 2ನೇ ದಿನದ ಕಲೆಕ್ಷನ್ 15 ಕೋಟಿ. ಕನ್ನಡವೊಂದರ ಕಲೆಕ್ಷನ್ 9 ಕೋಟಿ. ಈ ಎರಡೂ ಕಲೆಕ್ಷನ್ ಆಗಿರೋದು ಬ್ಯುಸಿ ವೀಕ್ ಡೇಗಳಲ್ಲಿ ಎನ್ನುವುದು ವಿಶೇಷ.

    ಚಿತ್ರಕ್ಕೆ ಸಿಕ್ಕಿರುವ ಅದ್ಭುತ ರೆಸ್ಪಾನ್ಸ್ ವೀಕೆಂಡ್ ರಜಾದಿನಗಳಲ್ಲಿ ಕಲೆಕ್ಷನ್‍ನ್ನು ಹೆಚ್ಚಿಸುವ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಅಡ್ವಾನ್ಸ್ ಬುಕ್ಕಿಂಗ್ ಹೌಸ್ ಫುಲ್ ಆಗಿದ್ದು, ಹೊಸ ದಾಖಲೆ ಬರೆಯಲು ಹೊರಟಿದ್ದಾನೆ ಪೈಲ್ವಾನ್.

  • ಹೇಗಿದೆ ವಿಕ್ರಾಂತ್ ರೋಣನ ಗುಮ್ಮ ಟೀಸರ್?

    ಹೇಗಿದೆ ವಿಕ್ರಾಂತ್ ರೋಣನ ಗುಮ್ಮ ಟೀಸರ್?

    ಮಕ್ಕಳು ಹೇಳೋ ಕಥೆ.. ಮಕ್ಕಳು ಕಥೆಗಾಗಿ ಕಾಯುತ್ತಿರೋ ಕಥೆ.. ಆ ಮಕ್ಕಳ ಕಥೆಯಲ್ಲಿ ಬರೋ ಸಿಂಹಕ್ಕಿಂತ ಭಯಾನಕ ವ್ಯಕ್ತಿ.. ಗುಮ್ಮ.. ಆ ಗುಮ್ಮ ಬರೋದನ್ನೇ ಕಾಯ್ತಿರೋ ಮಕ್ಕಳ ಮೂಲಕವೇ ಟೀಸರ್ ಬಿಟ್ಟಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಕಾನ್ಸೆಪ್ಟ್ ಹೊಸದು. ಟ್ರೀಟ್‍ಮೆಂಟೂ ಹೊಸದು. ಪುಟ್ಟ ಟೀಸರಿನಲ್ಲೇ ವಿಕ್ರಾಂತ್ ರೋಣನ ದೃಶ್ಯ ವೈಭವ ಹೇಗಿರಲಿದೆ ಅನ್ನೋದರ ಸ್ಯಾಂಪಲ್ ಕೊಟ್ಟಿದ್ದಾರೆ ಅನೂಪ್ ಭಂಡಾರಿ.

    ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಟೀಸರ್‍ನ್ನು ಯುಗಾದಿಯ ದಿನ 5 ಭಾಷೆಗಳಲ್ಲೂ ರಿಲೀಸ್ ಮಾಡಲಾಗಿದೆ. ಜುಲೈ 28ರ ಭೀಮನ ಅಮಾವಾಸ್ಯೆಗೆ ರಿಲೀಸ್. ಹಿಂದಿಯಲ್ಲಿ ಸಲ್ಮಾನ್ ಖಾನ್, ಮಲಯಾಳಂನಲ್ಲಿ ಮೋಹನ್ ಲಾಲ್, ತೆಲುಗಿನಲ್ಲಿ ಚಿರಂಜೀವಿ ಹಾಗೂ ತಮಿಳಿನಲ್ಲಿ ಸಿಂಬು ಟೀಸರ್ ರಿಲೀಸ್ ಮಾಡಿದ್ದಾರೆ. ನಜಾಫ್‍ಗಡ್ ಸುಲ್ತಾನ್ ವೀರೇಂದ್ರ ಸೆಹ್ವಾಗ್ ಕೂಡಾ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಇಂಗ್ಲಿಷ್ ಟೀಸರ್‍ನ್ನು ರಿಲೀಸ್ ಮಾಡಿದ್ದು ವೀರೂ.

    ಜಾಕ್ ಮಂಜು, ಶಾಲಿನಿ ಮಂಜುನಾಥ್ ನಿರ್ಮಾಣದ ಚಿತ್ರದಲ್ಲಿ ಕಿಚ್ಚನ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ನಟಿಸಿರೋ ಚಿತ್ರವಿದು. 

  • ಹೈದರಾಬಾದ್`ನತ್ತ ಹೊರಟ ಕನ್ನಡ ಚಿತ್ರರಂಗ

    phantom movie team to fly hyderabad for shooting

    ಕರ್ನಾಟಕದಲ್ಲಿ ಸಿನಿಮಾಗಳಿಗೆ ಲಾಕ್ ಡೌನ್ ಸಡಿಲಿಕೆ ಮಾಡನಬೇಕು ಎಂಬ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಚಿತ್ರಮಂದಿರ ಓಪನ್ ಮಾಡೋದು ಬಿಡಿ, ಚಿತ್ರೀಕರಣಕ್ಕೂ ಅವಕಾಶ ಕೊಟ್ಟಿಲ್ಲ. ಆದರೆ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿಗಳಲ್ಲಿ ಸಿನಿಮಾಗಳಿಗಿದ್ದ ಕೊರೊನಾ ಲಾಕ್ ಓಪನ್ ಆಗಿದೆ. ಹೀಗಾಗಿ ಕನ್ನಡ ಚಿತ್ರಗಳೂ ಹೈದರಾಬಾದ್‍ನತ್ತ ತಿರುಗಿವೆ.

    ಸುದೀಪ್ ಅಭಿನಯದ ಫ್ಯಾಂಟಮ್ ಟೀಂ ಹೈದರಾಬಾದ್`ಗೆ ತೆರಳುತ್ತಿದೆ. ಅದೂ ಎಷ್ಟು ಸೀರಿಯಸ್ ಆಗಿ ಕೊರೊನಾ ರೂಲ್ಸ್ ಫಾಲೋ ಮಾಡ್ತಿದೆ ಅಂದ್ರೆ, ಸಿನಿಮಾ ಟೀಂ ಹೈದರಾಬಾದ್`ಗೆ ತೆರಳಿ ಮೊದಲ ಒಂದು ವಾರ ಸೆಲ್ಫ್ ಕ್ವಾರಂಟೈನ್ ಆಗಲಿದೆ. 40 ಜನಕ್ಕಿಂತ ಕಡಿಮೆ ಟೀಂ, ಶೂಟಿಂಗ್ ಮುಗಿಸಿದ ನಂತರ ತಂಡದವರು ನೇರ ರೂಂಗೆ ಹೋಗಬೇಕು. ಹೊರಗೆ ತೆರಳುವ ಹಾಗಿಲ್ಲ.. ಹೀಗೆ ಹತ್ತಾರು ಕಂಡೀಷನ್ನುಗಳ ನಡುವೆ ಶೂಟಿಂಗ್ ಶುರುವಾಗುತ್ತಿದೆ. ನಟ ಸುದೀಪ್, ತಮಗೆ ತಾವೇ ಮೇಕಪ್ ಮಾಡಿಕೊಳ್ಳೋದಾಗಿ ಹೇಳಿದ್ದಾರೆ.

    ಜೂನ್ 22 ಅಥವಾ 23ರಂದು ಹೈದರಾಬಾದ್‍ಗೆ ತೆರಳುತ್ತೇವೆ. ಜುಲೈ 1ರಿಂದ ಶೂಟಿಂಗ್ ಶುರು ಮಾಡುತ್ತೇವೆ ಎಂದು ತಿಳಿಸಿದ್ದಾರೆ ನಿರ್ಮಾಪಕ ಜ್ಯಾಕ್ ಮಂಜು.