` kiccha sudeepa - chitraloka.com | Kannada Movie News, Reviews | Image

kiccha sudeepa

  • ಸಿದ್ದರಾಮಯ್ಯ ಸುದೀಪ್ ಭೇಟಿ - ನಿಜಕ್ಕೂ ನಡೆದಿದ್ದೇನು..?

    sudeep meets sm siddaramaiah

    ಕಿಚ್ಚ ಸುದೀಪ್ ರಾಜಕೀಯ, ಈಗ ರಾಜಕೀಯ ಪಕ್ಷಗಳ ಪಡಸಾಲೆಯಲ್ಲಷ್ಟೇ ಅಲ್ಲ, ಅಭಿಮಾನಿಗಳ ಮನದಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಮೊನ್ನೆ ಮೊನ್ನೆಯಷ್ಟೇ ಹೆಚ್.ಡಿ.ಕುಮಾರಸ್ವಾಮಿ ಜೊತೆ 2 ಗಂಟೆ ಮಾತುಕತೆ ನಡೆಸಿದ್ದ ಸುದೀಪ್, ಈಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

    ಸುದ್ದಿ ಗೊತ್ತಾಗಿದ್ದೇ ತಡ, ಕೆಲವರು ಕಿಚ್ಚ ಸುದೀಪ್ ಕಾಂಗ್ರೆಸ್ ಸೇರ್ತಾರಂತೆ ಅಂದ್ರೆ, ಇನ್ನೂ ಕೆಲವರು ಇಲ್ವಂತೆ, ಅವರು ಎಲ್ಲ ಪಕ್ಷಗಳಲ್ಲೂ ಇರೋ ತಮ್ಮ ಸ್ನೇಹಿತರ ಪರವಾಗಿ ಪ್ರಚಾರ ಮಾಡ್ತಾರಂತೆ ಅಂದ್ರು. ಇನ್ನೂ ಕೆಲವರು ಜೆಡಿಎಸ್ ಸೇರೋದು ಪಕ್ಕಾ ಅಂದ್ರು. ಆದರೆ, ಇದ್ಯಾವುದಕ್ಕೂ ಸುದೀಪ್ ತಲೆಕೆಡಿಸಿಕೊಂಡಿಲ್ಲ. ಅವರ ಪಾಡಿಗೆ ಅವರು ಕರ್ನಾಟಕ ಚಲನಚಿತ್ರ ಕ್ರಿಕೆಟ್ ಲೀಗ್‍ಗೆ ಪ್ರಾಕ್ಟೀಸ್‍ನಲ್ಲ ನಿರತರಾಗಿದ್ದಾರೆ. 

    ಇಷ್ಟಕ್ಕೂ ನಡೆದಿರುವುದೇನೆಂದರೆ, ಸಿಎಂ ಸಿದ್ದರಾಮಯ್ಯ ಕರ್ನಾಟಕ ಕ್ರಿಕೆಟ್ ಲೀಗ್ ಉದ್ಘಾಟನೆ ಮಾಡಬೇಕು. ಅದು ಸುದೀಪ್ ಅವರದ್ದೇ ಯೋಜನೆ. ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸುದೀಪ್ ಹೋಗಿದ್ದಾರೆ. ಆದರೆ, ಎಲೆಕ್ಷನ್ ಬಿಸಿ, ಮೊನ್ನೆ ಮೊನ್ನೆಯಷ್ಟೇ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದ ವಿಷಯಗಳೂ ಸೇರಿಕೊಂಡು ರೆಕ್ಕೆಪುಕ್ಕ ಹಬ್ಬಿಬಿಟ್ಟಿದೆ. ಸುದೀಪ್ ನಕ್ಕು ಸುಮ್ಮನಾಗಿದ್ದಾರೆ. ಅಷ್ಟೆ. 

    ಇನ್ನು ಸುದೀಪ್ ರಾಜಕೀಯದ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಕ್ರಿಕೆಟ್ ಟೂರ್ನಿ ಉದ್ಘಾಟನೆಗೆ ಕರೆಯಲು ಬಂದಿದ್ದರು. ಅಷ್ಟೆ, ಪಕ್ಷಕ್ಕೆ ಬನ್ನಿ, ಪ್ರಚಾರ ಮಾಡಿ ಎಂದು ನಾವು ಆಹ್ವಾನ ಕೊಟ್ಟಿಲ್ಲ. ಸುಮ್ಮನೆ ಸುದ್ದಿ ಹಬ್ಬಿಸಬೇಡಿ ಎಂದಿದ್ದಾರೆ.

    ಕುಮಾರಸ್ವಾಮಿ ಮಾತ್ರ, ನಾನು ಕರೆದಿರುವುದು ನಿಜ. ಆದರೆ, ಒಪ್ಪಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಅವರಿಗೆ ಉತ್ತಮ ಚಿಂತನೆಗಳಿವೆ. ಆದರೆ, ಅವರು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

    ಸುದೀಪ್ ಅವರು ಮಾತ್ರ, ಆ ಕುತೂಹಲ ಹಾಗೆಯೇ ಇರಲಿ ಬಿಡಿ ಎಂದಿದ್ದಾರೆ. ಸ್ಸೋ.. ಕುತೂಹಲ ಜಾರಿಯಲ್ಲಿದೆ.

     

  • ಸಿನಿಮಾ ಕೆಟ್ಟದಾಗಿದ್ದರೆ ಬಯ್ಯಿರಿ, ಆದರೆ.. - ಜೋಗಿ ಪ್ರೇಮ್

    the villain bangkok shooting

    ಶಿವರಾಜ್‍ಕುಮಾರ್, ಸುದೀಪ್ ಒಟ್ಟಿಗೇ ನಟಿಸುತ್ತಿರುವ ದಿ ವಿಲನ್ ಸಿನಿಮಾ ತಡವಾಗುತ್ತಿರುವುದಕ್ಕೆ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ಮುಗಿಬಿದ್ದಿದ್ದಾರೆ. ಪ್ರೇಮ್ ಸರಿಯಾಗಿ ಪ್ಲಾನ್ ಮಾಡಿಕೊಂಡು ಸಿನಿಮಾ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಾಗ, ಸ್ವತಃ ಕಿಚ್ಚ ಸುದೀಪ್ ಪ್ರೇಮ್ ರಕ್ಷಣೆಗೆ ಬಂದಿದ್ದರು. ಪ್ರೇಮ್ ಒಬ್ಬ ಫ್ಯಾಷನೇಟ್ ನಿರ್ದೇಶಕ. ಪ್ಲಾನ್ ಇಟ್ಟುಕೊಂಡೇ ಮಾಡಿದ್ದಾರೆ. ಕೆಲವು ಸಂದರ್ಭ, ಸನ್ನಿವೇಶ ಹಾಗೂ ವ್ಯಕ್ತಿಗಳಿಂದಾಗಿ ಚಿತ್ರ ನಿಧಾನವಾಯ್ತು. ಪ್ರೇಮ್‍ರನ್ನು ದೂಷಿಸಬೇಡಿ ಎಂದು ಅಭಿಮಾನಿಗಳಲ್ಲೂ ಕೇಳಿಕೊಂಡಿದ್ದರು. ಈಗ ಸ್ವತಃ ಪ್ರೇಮ್, ಈ ಎಲ್ಲ ಆಕ್ಷೇಪಗಳಿಗೆ ಉತ್ತರ ಕೊಟ್ಟಿದ್ದಾರೆ.

    ಈ ತಿಂಗಳ ಕೊನೆಯ ಹೊತ್ತಿಗೆ ಚಿತ್ರದ ಶೂಟಿಂಗ್ ಮುಗಿಯುವ ವಿಶ್ವಾಸ ಇದೆ. ಚಿತ್ರದ 3 ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಯಾರೊಬ್ಬರೂ ತಮ್ಮ ಸಿನಿಮಾ ನಿಧಾನವಾಗಲಿ ಎಂದು ಕೆಲಸ ಮಾಡುವುದಿಲ್ಲ. ದಿ ವಿಲನ್, ನಟರಷ್ಟೇ ಅಲ್ಲ, ತಂತ್ರಜ್ಞರೂ ಸೇರಿದಂತೆ ಸಂಪೂರ್ಣವಾಗಿ ಸ್ಟಾರ್‍ಗಳೇ ಇರುವ ಚಿತ್ರ. ಒಂದು ಏರುಪೇರಾದಾಗ, ಉಳಿದ ಎಲ್ಲವೂ ಏರುಪೇರಾಗುವುದು ಸಹಜ. ಏನೇ ಇರಲಿ, ಈ ತಿಂಗಳ ಕೊನೆಯ ಹೊತ್ತಿಗೆ ಸಿನಿಮಾ ಶೂಟಿಂಗ್ ಮುಗಿಸುತ್ತೇನೆ ಎಂದು ವಿಶ್ವಾಸದಿಂದ ಹೇಳಿದ್ದಾರೆ ಪ್ರೇಮ್.

    ಸಿನಿಮಾ ಚೆನ್ನಾಗಿಲ್ಲ ಅಂದ್ರೆ, ನನ್ನನ್ನು ಬಯ್ಯಿರಿ. ನಾನು ಟೀಕೆಗಳನ್ನು ಸ್ವೀಕರಿಸುತ್ತೇನೆ. ದಯವಿಟ್ಟು ವೈಯಕ್ತಿಕವಾಗಿ ಟೀಕಿಸಬೇಡಿ. ವೈಯಕ್ತಿಕ ಟೀಕೆಗಳು ನಿಜಕ್ಕೂ ನೋಯಿಸುತ್ತವೆ. ಸಿನಿಮಾ ನಿಧಾನವಾದರೆ, ಹಣ ಕಳೆದುಕೊಳ್ಳುವುದು ನಿರ್ಮಾಪಕರೇ ಹೊರತು, ಅಭಿಮಾನಿಗಳಲ್ಲ. ನಾನು ಸಿನಿಮಾವನ್ನು ಕೇವಲ ಅಭಿಮಾನಿಗಳಿಗಾಗಿ ಮಾಡುತ್ತಿಲ್ಲ. ಪ್ರತಿಯೊಬ್ಬರೂ ಈ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಾರೆ. ಆ ವಿಶ್ವಾಸ ನನಗಿದೆ ಎಂದಿದ್ದಾರೆ ಪ್ರೇಮ್. 

    ಒಂದಂತೂ ಸತ್ಯ, ದಿ ವಿಲನ್ ವಿಳಂಬವಾಗುತ್ತಿರುವುದಕ್ಕೆ ಪ್ರೇಮ್ ಅವರನ್ನು ದೂಷಿಸುತ್ತಿರುವ ಅಭಿಮಾನಿಗಳು, ಒಂದು ಹಂತದಲ್ಲಿ ಗೌರವದ ಎಲ್ಲೆ ದಾಟಿದ್ದಾರೆ. ಅದು ಪ್ರೇಮ್ ಅವರನ್ನು ನೋಯಿಸಿದೆ. ಕನಸಿನ ಸಿನಿಮಾ ಮಾಡುತ್ತಿರುವ ಪ್ರೇಮ್, ಸಿನಿಮಾವನ್ನು ಯಶಸ್ವಿಯಾಗಿ, ಶೀಘ್ರವಾಗಿ ಮುಗಿಸಿ ತೆರೆಗೆ ತರಲಿ.

    Related Articles :-

    ವಿಲನ್ ವಿಳಂಬಕ್ಕೆ ಪ್ರೇಮ್ ಕಾರಣ ಅಲ್ಲ - ಸುದೀಪ್

    ದಿ ವಿಲನ್ ವಿಳಂಬಕ್ಕೆ ಯಾರು ಕಾರಣ..?

  • ಸುದೀಪ್ ಕಬ್ಜ ಬಿಟ್ಟರು ಎಂಬ ಸುದ್ದಿ ಹಬ್ಬಿದ್ದಾದರೂ ಹೇಗೆ..?

    ಸುದೀಪ್ ಕಬ್ಜ ಬಿಟ್ಟರು ಎಂಬ ಸುದ್ದಿ ಹಬ್ಬಿದ್ದಾದರೂ ಹೇಗೆ..?

    ಕಬ್ಜ. ಈ ವರ್ಷವೇ ರಿಲೀಸ್ ಆಗಬೇಕಿರುವ ಬಹು ನಿರೀಕ್ಷಿತ ಸಿನಿಮಾ. ಉಪೇಂದ್ರ ಮತ್ತು ಕಿಚ್ಚ ಸುದೀಪ್ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಕಬ್ಜ. ಆರ್. ಚಂದ್ರು ಅವರೇ ನಿರ್ಮಾಪಕರಾಗಿದ್ದು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಚಿತ್ರದ ಬಗ್ಗೆ ಇತ್ತೀಚೆಗೆ ಗಾಂಧಿ ನಗರದಲ್ಲಿ ಒಂದು ಸುದ್ದಿ ಹರಿದಾಡೋಕೆ ಶುರುವಾಗಿತ್ತು.

    ಸುದೀಪ್ ಕಬ್ಜ ಚಿತ್ರದಿಂದ ಹೊರ ನಡೆದಿದ್ದಾರಂತೆ. ವಿಕ್ರಾಂತ್ ರೋಣ ಪ್ರಮೋಷನ್`ಗೆ ಟೈಂ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಬ್ಜ ಬಿಟ್ಟಿದ್ದಾರಂತೆ ಅನ್ನೋ ಸುದ್ದಿಗಳವು. ಈ ಬಗ್ಗೆ ಈಗ ಸ್ವತಃ ಆರ್.ಚಂದ್ರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸುದೀಪ್ ಕಬ್ಜ ಚಿತ್ರತಂಡದ ಜೊತೆಯಲ್ಲಿದ್ದಾರೆ. ಗಾಳಿಸುದ್ದಿಗಳನ್ನೆಲ್ಲ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

    ಕಬ್ಜ ಸೆಟ್ಟೇರಿದ್ದು ಸುಮಾರು 2 ವರ್ಷಗಳ ಹಿಂದೆ. 7 ಭಾಷೆಗಳಲ್ಲಿ ಸಿದ್ಧವಾಗುತ್ತಿರೋ ಚಿತ್ರದಲ್ಲಿ 80ರ ದಶಕದ ಅಂಡರ್‍ವಲ್ರ್ಡ್ ಸ್ಟೋರಿ ಇದೆ. ಉಪ್ಪಿ, ಸುದೀಪ್ ಜೊತೆ ಶ್ರಿಯಾ ಸರಣ್ ನಟಿಸುತ್ತಿದ್ದು, ಇನ್ನೊಬ್ಬ ನಾಯಕಿ ಯಾರು ಅನ್ನೋದನ್ನ ಈಗಲೂ ಸಸ್ಪೆನ್ಸ್‍ನಲ್ಲೇ ಇಟ್ಟಿದ್ದಾರೆ ಚಂದ್ರು. ಜೊತೆಗೆ ಪೊಸಾನಿ ಕೃಷ್ಣ ಮುರಳಿ, ಮುರಳಿ ಶರ್ಮಾ ಸೇರಿದಂತೆ ಬೃಹತ್ ತಾರಾಬಳಗ ಇದೆ.

  • ಸುದೀಪ್ ಚೇತರಿಕೆ : ಮುಂದಿನ ವಾರ ಬರ್ತಾರಾ ಬಿಗ್ ಬಾಸ್..?

    ಸುದೀಪ್ ಚೇತರಿಕೆ : ಮುಂದಿನ ವಾರ ಬರ್ತಾರಾ ಬಿಗ್ ಬಾಸ್..?

    ಕಳೆದ 2 ವಾರಗಳಿಂದ ಅನಾರೋಗ್ಯದಿಂದಾಗಿ ವಿಶ್ರಾಂತಿಯಲ್ಲಿದ್ದ ಕಿಚ್ಚ ಸುದೀಪ್, ಈಗ ಗುಣಮುಖರಾಗಿದ್ದಾರೆ. ಅಷ್ಟೇ ಅಲ್ಲ, ಶೀಘ್ರದಲ್ಲೇ ಸೆಟ್‍ಗೆ ಬರುವುದಾಗಿಯೂ ಹೇಳಿದ್ದಾರೆ. ಕಳೆದ ವಾರ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುದೀಪ್, ಶುಕ್ರವಾರ ಡಿಸ್‍ಚಾರ್ಜ್ ಆಗಿದ್ದರು.

    `ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಡಾ.ವೆಂಕಟೇಶ್ ಮತ್ತು ಡಾ.ವಿನಯ್ ಅವರಿಗೆ ಧನ್ಯವಾದಗಳು. ಅಭಿಮಾನಿಗಳು ಹಲವು ಕಡೆ ಪೂಜೆ ಮಾಡಿಸಿದ ವಿಡಿಯೋಗಳನ್ನು ನೋಡಿದೆ. ನಿಮ್ಮೆಲ್ಲರ ಪ್ರೀತಿಗೆ ಅಭಾರಿ. ಐ ಲವ್ ಯೂ ಎಂದಷ್ಟೇ ಹೇಳಬಲ್ಲೆ' ಎಂದಿದ್ದಾರೆ ಸುದೀಪ್.

    ಬಹುಶಃ ಈ ವೀಕೆಂಡ್ ಸಾಧ್ಯವಾಗದೇ ಹೋಗಬಹುದು. ಮುಂದಿನ ವಾರ ಸುದೀಪ್ ತೆರೆಯ ಮೇಲೆ ಬರೋದಂತೂ 100% ಪಕ್ಕಾ.

  • ಸುದೀಪ್ ಪತ್ನಿ ಪ್ರಿಯಾರ ಹೊಸ ದಾಖಲೆ

    priya sudeep's new record

    ಕಿಚ್ಚ ಸುದೀಪ್ ದಿನಕ್ಕೊಂದು ದಾಖಲೆ ಬರೆಯುತ್ತಲೇ ಇರುತ್ತಾರೆ. ಆನ್‍ಲೈನ್‍ನಲ್ಲಿ ಸದಾ ಆಕ್ಟಿವ್ ಆಗಿರುವ ಸುದೀಪ್, 1.3 ಮಿಲಿಯನ್‍ಗೂ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ಕಲಾವಿದ. ಆದರೆ, ಇದು ಸುದೀಪ್ ಕಥೆಯಲ್ಲ. ಸುದೀಪ್ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರ ಕಥೆ. 

    ಟ್ವಿಟರ್‍ನಲ್ಲಿ ಸುದೀಪ್ ಅವರ ಪತ್ನಿ ಪ್ರಿಯಾ ಅವರ ಫಾಲೋವರ್ಸ್ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಇದು ಸ್ವತಃ ಪ್ರಿಯಾ ಅವರಿಗೂ ಅಚ್ಚರಿ ತಂದಿದೆ. ಪತ್ನಿಯ ಫಾಲೋವರ್ಸ್ ಸಂಖ್ಯೆ 50 ಸಾವಿರದ ಗಡಿ ದಾಟಿದ ಬಗ್ಗೆ ಸುದೀಪ್ ಕೂಡಾ ಟ್ವಿಟರ್‍ನಲ್ಲೇ ಶುಭಕೋರಿದ್ದಾರೆ.

  • ಸುದೀಪ್ ಬೇಟೆಗೆ ಇಂಟರ್‍ಪೋಲ್ ಆಫೀಸರ್ ಶ್ರದ್ಧಾ ದಾಸ್ 

    shraddha das will jpin kotigobba 3

    ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಯೂರೋಪ್‍ನ ಬೆಲ್‍ಗ್ರೇಡ್‍ನಲ್ಲಿ ಶುರುವಾಗಿದೆ. ಚಿತ್ರದಲ್ಲಿ ಸುದೀಪ್ ಹೀರೋ. ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ಅಫ್ತಾಬ್ ಶಿವದಾಸನಿ, ನವಾಬ್ ಶಾ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಶ್ರದ್ಧಾ ದಾಸ್, ಇಂಟರ್‍ಪೋಲ್ ಅಧಿಕಾರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. 

    ಶ್ರದ್ಧಾ ದಾಸ್, ಮೂಲತಃ ತೆಲುಗಿನವರು. ತೆಲುಗು ಹಾಗೂ ಕನ್ನಡಕ್ಕೆ ಬಹಳ ಸಾಮ್ಯತೆ ಇರುವ ಕಾರಣ, ಕನ್ನಡ ಭಾಷೆ ಸವಾಲಾಗುವುದಿಲ್ಲ ಎನ್ನುವುದು ಅವರ  ನಂಬಿಕೆ. ಚಿತ್ರದಲ್ಲಿ ಅವರದ್ದು ಇಂಟರ್‍ಪೋಲ್ ಅಧಿಕಾರಿಯ ಪಾತ್ರ. ಸುದೀಪ್ ಬೆನ್ನ ಹಿಂದೆ ಬೀಳುವ ಅವರ ಪಾತ್ರ, ಡಾನ್ 2 ಚಿತ್ರದ ಪ್ರಿಯಾಂಕಾ ಚೋಪ್ರಾ ಅವರ ಪಾತ್ರವನ್ನು ಹೋಲುತ್ತದಂತೆ.

    ಸುದೀಪ್ ಜೊತೆ ನಟಿಸುತ್ತಿದ್ದೇನೆ ಎನ್ನುವುದೇ ಈಗ ಶ್ರದ್ಧಾಗೆ ಥ್ರಿಲ್. 

  • ಸುದೀಪ್ ರಾಜಕೀಯಕ್ಕೆ ಬರ್ತಾರಾ..? ಬರಲ್ವಾ..?

    ಸುದೀಪ್ ರಾಜಕೀಯಕ್ಕೆ ಬರ್ತಾರಾ..? ಬರಲ್ವಾ..?

    ಪ್ರತಿ ಎಲೆಕ್ಷನ್ ಬಂದಾಗಲೂ ಸುದ್ದಿಯಾಗುವಂತೆ ಈ ಬಾರಿಯೂ ಸುದೀಪ್ ರಾಜಕೀಯ ಪ್ರವೇಶ ದೊಡ್ಡ ಸುದ್ದಿಯಾಗಿದೆ. ಅದರಲ್ಲಿಯೂ ಡಿಕೆ ಶಿವಕುಮಾರ್ ಮತ್ತು ಸುದೀಪ್ ಭೇಟಿ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ನಾನು ಸುದೀಪ್ ಅವರನ್ನು ರಾಜಕೀಯಕ್ಕೆ ಕರೆತರಲು ಅಥವಾ ಪಕ್ಷಕ್ಕೆ ಕರೆಯಲು ಹೋಗಿರಲಿಲ್ಲ. ಪ್ರಣಾಳಿಕೆ ಸಿದ್ಧಪಡಿಸುವುಕ್ಕೆ ಮಾಹಿತಿ ಕೇಳುವುದಕ್ಕೆ ಹೋಗಿದ್ದೆ ಎಂದು ಡಿಕೆ ಹೇಳಿದರೂ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಟ್ಟಿಲ್ಲ. ಸುದೀಪ್ ಎಲ್ಲಿಯೇ ಹೋದರೂ ಅವರಿಗೆ ಎದುರಾಗುವ ಪ್ರಶ್ನೆ ಇದೇ. ರಾಜಕೀಯಕ್ಕೆ ಬರುತ್ತೀರಾ ಎಂಬುದು. ಈ ಕುರಿತಂತೆ ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿರುವ ಸುದೀಪ್ ನೀಡಿರುವ ಉತ್ತರ ಇದು.

    ನನಗೆ ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಪ್ರೀತಿ ಪಾತ್ರರಿದ್ದಾರೆ. ಬಿಜೆಪಿಯಲ್ಲೂ ಇದ್ದಾರೆ. ಕಾಂಗ್ರೆಸ್ಸಿನಲ್ಲೂ ಇದ್ದಾರೆ. ಆದರೆ ಒಳ್ಳೆಯ ಕೆಲಸ ಮಾಡುವುದಕ್ಕೆ ರಾಜಕೀಯಕ್ಕೇ ಬರಬೇಕಿಲ್ಲ. ಈಗಾಗಲೇ ನನ್ನ ಕೈಲಾದಷ್ಟು ಕೆಲಸ ಮಾಡುತ್ತಿದ್ದೇನೆ. ಅದನ್ನು ಮುಂದುವರೆಸುತ್ತೇನೆ ಎಂದಿರುವ ಸುದೀಪ್ ಅಷ್ಟಕ್ಕೇ ಸುಮ್ಮನಾಗಲ್ಲ. ಅದನ್ನೂ ಮೀರಿದ ಸಹಾಯ, ಸೇವೆ ಮಾಡುವ ಅವಕಾಶ ರಾಜಕೀಯದಲ್ಲಿ ಇದ್ದರೆ ಸಾಧ್ಯ ಎಂದು ನನಗೆ ಅರಿವಾದರೆ ಆಗ ರಾಜಕೀಯಕ್ಕೆ ಬರುವ, ಪಕ್ಷ ಸೇರುವ ಬಗ್ಗೆ ಆಲೋಚನೆ ಮಾಡುತ್ತೇನೆ ಎಂದಿದ್ದಾರೆ. ಆ ಮೂಲಕ ರಾಜಕೀಯ ಪ್ರವೇಶವನ್ನು ಮುಕ್ತವಾಗಿಟ್ಟುಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ರಾಜಕೀಯ ಪಕ್ಷ ಸೇರಬಾರದು. ರಾಜಕೀಯಕ್ಕೇ ಬರಬಾರದು. ಚಿತ್ರರಂಗದಲ್ಲಿದ್ದಾರೆ. ಚಿತ್ರರಂಗದಲ್ಲಿಯೇ ಇರಲಿ ಎನ್ನುವ ಅಭಿಪ್ರಾಯವೂ ಜನರಲ್ಲಿದೆ. ಅದನ್ನೂ ಗೌರವಿಸಬೇಕು ಎಂದಿರುವ ಸುದೀಪ್, ಚುನಾವಣೆ ಸಮಯದಲ್ಲಿ ಎಲ್ಲ ಪಕ್ಷಗಳಲ್ಲೂ ಇರುವ, ತಮ್ಮ ಆಪ್ತರ ಪರ ಪ್ರಚಾರ ಮಾಡುವ ಸುಳಿವು ಕೊಟ್ಟಿದ್ದಾರೆ. ಆ ರೀತಿಯ ಆಪ್ತರ ಪ್ರಚಾರಕ್ಕೆ ಸುದೀಪ್ ಪಕ್ಷದ ಬಾರ್ಡರ್ ಇಟ್ಟುಕೊಳ್ಳದೆ ಕೆಲಸ ಮಾಡಲಿದ್ದಾರೆ.

  • ಸುದೀಪ್ ವಿರುದ್ಧ ವ್ಯವಸ್ಥಿತ ಸಂಚು : ಯಾರದು ಸೂತ್ರಧಾರಿ?

    ಸುದೀಪ್ ವಿರುದ್ಧ ವ್ಯವಸ್ಥಿತ ಸಂಚು : ಯಾರದು ಸೂತ್ರಧಾರಿ?

    ನನ್ನನ್ನು ಟೀಕಿಸುವವರೂ ಇದ್ದಾರೆ. ಆದರೆ ಮೆಚ್ಚಿಕೊಳ್ಳುವವರು.. ಪ್ರೀತಿಸುವವರ ಸಂಖ್ಯೆ ದೊಡ್ಡದು. ಹೀಗಾಗಿ ನಾನು ತೆಗಳುವವರ ಬಗ್ಗೆ.. ಅದರಲ್ಲೂ ವಿನಾಕಾರಣ ಸುಖಾಸುಮ್ಮನೆ ತೆಗಳುವವರ ಬಗ್ಗೆ ತಲೆಕೆಡಿಸಿಕೊಳ್ಳೋದೂ ಇಲ್ಲ. ಪ್ರೀತಿಸುವವರ ಸಂಖ್ಯೆಯೇ ದೊಡ್ಡದಿರುವಾಗ.. ಅವರ ಬಗ್ಗೆ ನಾನ್ಯಾಕೆ ಯೋಚಿಸಿ ಸಮಯ ಹಾಳುಮಾಡಿಕೊಳ್ಳಲಿ..

    ಇದು ಸುದೀಪ್ ತಮ್ಮನ್ನು ಟೀಕಿಸುವ.. ಲೇವಡಿ ಮಾಡುವ.. ಮನಸ್ಸಿಗೆ ಬಂದಂತೆ ಬಯ್ಯುವವರ ಬಗ್ಗೆ ನೀಡಿದ್ದ ಹೇಳಿಕೆ. ಅದು ನಿಜವೂ ಕೂಡಾ.

    ಸುದೀಪ್ ಅವರಿಗೆ ವಿವಾದಗಳು ಹೊಸದಲ್ಲ. ಅಪಪ್ರಚಾರವೂ ಹೊಸದಲ್ಲ. ಅವರ ತಪ್ಪೇ ಇಲ್ಲದಿದ್ದರೂ ಟೀಕೆಗೆ ಗುರಿಯಾಗಿದ್ದಿದೆ.

    ಸುದೀಪ್ ಸಂಕಷ್ಟದಲ್ಲಿರುವ ಯಾರಿಗಾದರೂ ಆರ್ಥಿಕ ನೆರವು ನೀಡಿದರೆ.. ಕೊಟ್ಟಿದ್ದು ಇಷ್ಟೇನಾ.. ಇನ್ನೂ ಕೊಡಬೇಕಿತ್ತು ಎಂದೂ..

    ಸುದೀಪ್ ತಮ್ಮ ಟ್ರಸ್ಟ್ ಮೂಲಕ ನೀಡಿದ ನೆರವು ಸುದ್ದಿಯಾದರೆ.. ಪ್ರಚಾರಕ್ಕಾಗಿ ಮಾಡ್ತಾರೆ ಎಂದೂ..

    ಇನ್ಯಾರದೋ ಕಷ್ಟಕ್ಕೆ ಸ್ಪಂದಿಸಿದರೆ.. ಅವರಿಗ್ಯಾಕೆ ಸ್ಪಂದಿಸಲಿಲ್ಲ ಎಂದೂ..

    ತಮ್ಮ ಆಪ್ತರು, ಗೆಳೆಯರಿಗೆ ಸಹಾಯ ಮಾಡಿದರೆ.. ಅವರಿಗೆ ಮಾತ್ರನಾ.. ಇವರಿಗ್ಯಾಕೆ ಮಾಡಲಿಲ್ಲ ಎಂದೂ..

    ಅಡುಗೆಯ ಫೋಟೋ ಹಾಕಿದರೆ ಎಷ್ಟ್ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯ್ತಿದ್ದಾರೆ ಗೊತ್ತಾ ಎಂದೂ..

    ಥರಹೇವಾರಿ ಟೀಕೆಗಳು. ಈಗಲೂ ಅಷ್ಟೆ.. ವಿಕ್ರಾಂತ್ ರೋಣ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲ ಶೋಗಳು ಹೌಸ್‍ಫುಲ್. ಕಲೆಕ್ಷನ್ ಮೊದಲ ದಿನವೇ 35 ಕೋಟಿ ದಾಟಿದೆ. 2ನೇ ದಿನದ ಶೋಗಳೂ ಭರ್ತಿ. ಸಿನಿಮಾ ನೋಡಿದವರಿಗೆಲ್ಲ ಚಿತ್ರದ ಪ್ರತಿಯೊಂದು ಅಂಶಗಳೂ ಇಷ್ಟವಾಗಿವೆ. ಹಾಡುಗಳು ವೈರಲ್ ಆಗಿವೆ. ಆದರೆ.. ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ಸ್ ಬರತೊಡಗಿವೆ. ಹೀಗೆ ಟೀಕೆ ಮಾಡುವವರು ಮೊದಲು ಸಿನಿಮಾ ನೋಡಿ. ನಂತರ ಕಮೆಂಟ್ ಮಾಡಿ ಎಂದು ಬರೆದುಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್. ಬರುತ್ತಿರುವ ಕಮೆಂಟ್ಸ್ ಶೈಲಿ ನೋಡಿದರೆ ಇದೊಂದು ವ್ಯವಸ್ಥಿತ ಷಡ್ಯಂತ್ರದಂತೆ ಕಾಣುತ್ತಿದ್ದರೆ ಅಚ್ಚರಿಯಿಲ್ಲ.

    ಕನ್ನಡ ಸಿನಿಮಾಗಳು ಗೆಲ್ಲಬೇಕು. ಅದರಲ್ಲೂ ಚೆನ್ನಾಗಿರುವ ಸಿನಿಮಾಗಳು ಇನ್ನೂ ಇನ್ನೂ ಗೆಲ್ಲಬೇಕು. ಭರ್ಜರಿಯಾಗಿ ಗೆಲ್ಲುತ್ತಿರುವ ಸಿನಿಮಾವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ದು ಗೆಲ್ಲಿಸಬೇಕು. ಚಿತ್ರರಂಗ ಗೆಲ್ಲುವುದು.. ಕನ್ನಡ ಗೆಲ್ಲುವುದು ಆವಾಗಲೇ.. ಇದು ಕೆಲವರಿಗೆ ಅದ್ಯಾಕೆ ಅರ್ಥವಾಗುತ್ತಿಲ್ಲವೋ..

  • ಸುದೀಪ್ ಸಿನಿಮಾ ರಿಲೀಸ್ ಹತ್ತಿರವಾದಂತೆ.. ರೊಚ್ಚಿಗೇಳೋದ್ಯಾಕೆ ಅಹೋರಾತ್ರ..?

    ಸುದೀಪ್ ಸಿನಿಮಾ ರಿಲೀಸ್ ಹತ್ತಿರವಾದಂತೆ.. ರೊಚ್ಚಿಗೇಳೋದ್ಯಾಕೆ ಅಹೋರಾತ್ರ..?

    ಅಹೋರಾತ್ರ ಎಂಬ ವ್ಯಕ್ತಿ ಕಳೆದ ಕೆಲವು ತಿಂಗಳಿಂದ ಕಿಚ್ಚ ಸುದೀಪ್ ವಿರುದ್ಧ ಕಿಡಿ ಕಾರುತ್ತಿರೋದು ಎಲ್ಲರಿಗೂ ಗೊತ್ತೇ ಇದೆ. ರಮ್ಮಿ ಜಾಹೀರಾತಿನಲ್ಲಿ ನಟಿಸಿದ್ದೇ ತಪ್ಪು ಎನ್ನುವಂತೆ ಮಾತನಾಡುತ್ತಿರೋ ಅಹೋರಾತ್ರ ಎಂಬ ವ್ಯಕ್ತಿ, ಅಸಭ್ಯ ಭಾಷೆ ಬಳಸಿ ಕಿಚ್ಚನ ವಿರುದ್ಧ ಕಿಡಿ ಕಾರಿದ್ದು, ರೊಚ್ಚಿಗೆದ್ದ ಸುದೀಪ್ ಫ್ಯಾನ್ಸ್ ನೇರವಾಗಿ ಅಹೋರಾತ್ರನ ಮನೆಗೇ ನುಗ್ಗಿದ್ದು.. ಎಲ್ಲವೂ ಹಳೆಯ ವಿಷಯ. ಆಗ ಸ್ವತಃ ಸುದೀಪ್ ಅವರೇ ಅಭಿಮಾನಿಗಳನ್ನು ಸಮಾಧಾನ ಮಾಡಿದ್ದರು. ಕಾನೂನು ಕ್ರಮ ಕೈಗೊಳ್ಳಬೇಕು, ನಾವಲ್ಲ ಎಂದು ಬುದ್ದಿ ಹೇಳಿ ಕಳಿಸಿದ್ದರು.

    ಸುದೀಪ್ ಸಿನಿಮಾ ರಿಲೀಸ್ ಹತ್ತಿರ ಬಂದಾಗಲೇ ಈ ರೀತಿಯ ವಿಡಿಯೋ ಬಿಡುವುದು ಅಹೋರಾತ್ರನ ಚಾಳಿಯಾಗಿರೋದೇಕೆ ಅನ್ನೋದು ಎಲ್ಲರನ್ನೂ ಕಾಡುತ್ತಿರೋ ಅನುಮಾನ.

    ಒಂದು ಕಡೆ ಸುದೀಪ್ ತಮ್ಮ ಚಿತ್ರಗಳ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೆ, ಆ ಹೊತ್ತಿನಲ್ಲೇ ಸುದೀಪ್ ಇಮೇಜ್`ಗೆ ಡ್ಯಾಮೇಜ್ ಮಾಡುವ ಕೆಲಸ ಶುರು ಹಚ್ಚುತ್ತಾನೆ ಅಹೋರಾತ್ರ. ಸುದೀಪ್ ಸಿನಿಮಾ ರಿಲೀಸ್ ಇಲ್ಲ ಎಂದರೆ ಅಹೋರಾತ್ರನ ಸದ್ದೂ ಇರಲ್ಲ. ಹಾಗಾದರೆ ಇದರ ಹಿಂದೆ ಇರೋ ಸಂಚಾದರೂ ಏನು? ಅಹೋರಾತ್ರನ ಹಿಂದೆ ಯಾರಿದ್ದಾರೆ? ಆತನಿಗೆ ಇದರಿಂದ ಏನು ಲಾಭ? ಒಂದೂ ಅರ್ಥವಾಗಿಲ್ಲ. ಈ ಬಾರಿ ಅಹೋರಾತ್ರನ ಜೊತೆ ಚರಣ್ ಎಂಬ ಮತ್ತೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಈ ಬಾರಿ ಫಿಲಂ ಚೇಂಬರ್`ನ್ನೂ ಟೀಕಿಸಿರೋ ಕಾರಣಕ್ಕೆ ಚೇಂಬರ್ ಎಚ್ಚೆತ್ತುಕೊಂಡು ದೂರು ನೀಡಿದೆ.

    ಆದರೆ.. ಈಗಲೂ ಅರ್ಥವಾಗದ ಪ್ರಶ್ನೆ ಒಂದೇ.. ಸುದೀಪ್ ಸಿನಿಮಾ ಹತ್ತಿರ ಬಂದಾಗಲೇ ಅಹೋರಾತ್ರ ಗ್ಯಾಂಗ್ ರೊಚ್ಚಿಗೇಳೋದ್ಯಾಕೆ? ತನಿಖೆಯಲ್ಲಿ ಉತ್ತರ ಸಿಗುತ್ತಾ?

  • ಸುದೀಪ್ ಸ್ಪೀಕಿಂಗ್.. ವಿಲನ್ ಲಾಫಿಂಗ್..

    sudeep talks about the villain moments

    ಶಿವಣ್ಣನ ಮಗಳ ಮದುವೆ ಆಯ್ತು. ಅವರೀಗ ಅಜ್ಜ ಆಗೋ ಸಮಯ ಬಂತು. ಆದರೂ ಸಿನಿಮಾ ರಿಲೀಸ್ ಮಾಡ್ತಾ ಇಲ್ಲ. ಈ ಪ್ರೇಮ್, ನನ್ನ ಮಗಳ ಮದುವೆವರೆಗೂ ಕಾಯ್ತಾನೇನೋ ಗೊತ್ತಿಲ್ಲ. ನನ್ನ ಎರಡು ಬೆರಳು ಇಟ್ಟುಕೊಂಡೇ ಟೀಸರ್ ರಿಲೀಸ್ ಮಾಡಿ ಸುದ್ದಿ ಮಾಡಿದ್ರು ಪ್ರೇಮ್. ಅದೇನೋ ದೊಡ್ಡ ಸೌಂಡ್ ಮಾಡ್ತು. ಅದರ ಕಷ್ಟ ಏನು ಅಂಥಾ ನಿರ್ಮಾಪಕರಿಗಷ್ಟೇ ಗೊತ್ತು.

    ಪ್ರೇಮ್ ಕಥೆ ಹೇಳೋಕೆ ಒಂದ್ ವರ್ಷ ಮಾಡಿದ್ರು. ಇನ್ನೊಂದ್ ವರ್ಷ ಕ್ಲೈಮಾಕ್ಸ್ ಹೇಳಿದ್ರು. ಅದಾದ ಮೇಲೆ ಒಂದ್ ವರ್ಷ ಪ್ರೊಡ್ಯೂಸರ್ ಫಿಕ್ಸ್ ಮಾಡಿದ್ರು. ಆಮೇಲೆ ಗೊತ್ತಾಯ್ತು. ನಾನು ಶಿವಣ್ಣ ನಟಿಸ್ತಿದ್ದೀವಿ ಅಂಥಾ. ಆಮೇಲೆ, ನಾನಾಗ್ಲೀ, ಶಿವಣ್ಣ ಆಗಲೀ ಕಥೆ ಕೇಳಲೇ ಇಲ್ಲ.

    ಇದು ದಿ ವಿಲನ್ ಆಡಿಯೋ ರಿಲೀಸ್ ವೇಳೆ ಸುದೀಪ್ ಹೇಳಿದ ಮಾತುಗಳು. ಸುದೀಪ್ ಹಾಗೆ ಶಿವಣ್ಣ, ಪ್ರೇಮ್ ಇಬ್ಬರ ಕಾಲು ಎಳೆಯುತ್ತಾ, ವೇದಿಕೆಯಲ್ಲಿದ್ದವರನ್ನೆಲ್ಲ ನಕ್ಕು ನಗಿಸುತ್ತಾ ಹೋದರು. ಜೊತೆ ಜೊತೆಗೆ ವಿಲನ್ ಚಿತ್ರದ ಹಾಡುಗಳೂ ಹೊರಬಿದ್ದವು. ಪ್ರೇಮ್ ಅವರ ಬಿಲ್ಡಪ್ ಬಗ್ಗೆ ಸಮರ್ಥನೆ ಮಾಡಿಕೊಂಡ ಸುದೀಪ್, ಪ್ರೇಮ್ ಅವರ ಸಿನಿಮಾಗೆ ಬಿಲ್ಡಪ್ ಕೊಡೋದ್ರಲ್ಲಿ ತಪ್ಪೇನಿದೆ. ಅವರಲ್ಲಿ ಸಿನಿಮಾ ಬಗ್ಗೆ ಒಂದು ಪ್ಯಾಷನ್ ಇದೆ. ಹೀಗೆಲ್ಲ ಮಾತಾಡಿಕೊಳ್ಳೋವ್ರು ಕೈಲಾಗದವರು ಮಾತ್ರ. ಅಂಥಾದ್ದೊಂದು ಪ್ಯಾಷನ್ ಇಲ್ಲದೇ ಇದ್ರೆ, ಅವರ ಜೊತೆ ಶಿವಣ್ಣ ಮೂರು ಸಿನಿಮಾ ಮಾಡ್ತಾ ಇರಲಿಲ್ಲ. ದಿ ವಿಲನ್ ಏನಾಗುತ್ತೋ ಏನೋ.. ನೋಡಬೇಕು. ಆದರೆ, ಪ್ರೇಮ್ ವೆರಿ ಗುಡ್ ವರ್ಕರ್. ಪ್ರೇಮ್ ಬಗ್ಗೆ ನನ್ನ ಅಭಿಪ್ರಾಯ ಯಾವತ್ತಿಗೂ ಬದಲಾಗಲ್ಲ ಅಂದ್ರು ಸುದೀಪ್.

    ನಟಿ ಆಮಿ ಜಾಕ್ಸನ್‍ಗೆ ಪ್ರೇಮ್ ದೃಶ್ಯಗಳ ಬಗ್ಗೆ ವಿವರಣೆ ನೀಡುತ್ತಿದ್ದನ್ನು ಮನಸಾರೆ ಎಂಜಾಯ್ ಮಾಡಿ ಹೇಳಿದರು ಸುದೀಪ್.

    ಪ್ರೇಮ್ ಆಮಿ ಜಾಕ್ಸನ್ ಅವರನ್ನ ಏಮಿ ಜಾಕ್ಸನ್ ಅಂತಾನೇ ಕರೀತಿದ್ರಂತೆ. ಅವರು ಪ್ರೇಮ್ ಜೀ ಎಂದ್ರೆ,  ಯೆಸ್ ಅಮ್ಮಿ, ವಾಟ್ ಎನ್ನುತ್ತಿದ್ದರಂತೆ ಪ್ರೇಮ್. ಆಮಿ ಏನಾದ್ರೂ ಪಟಪಟ ಅಂಥಾ ಇಂಗ್ಲಿಷ್‍ನಲ್ಲಿ ಹೇಳಿಬಿಟ್ಟರೆ.. ಪ್ರೇಮ್ ಅಸಿಸ್ಟೆಂಟ್‍ಗಳನ್ನ ಕರೀತಿದ್ರಂತೆ. ನಿಮ್ಮಜ್ಜಿ ಬರ್ರಲೇ.. ಆಯಮ್ಮಂಗೆ ಸೀನ್ ಹೇಳ್ರೋ ಅನ್ನೋರಂತೆ. ಅವರೋ.. ಹೇಳಿ ಕೇಳಿ ಪ್ರೇಮ್ ಶಿಷ್ಯರು. ಕೊನೆಗೆ ಅದೂ ಫೇಲ್ ಆದಾಗ.. ಏಮಿ ಜಾಕ್ಸನ್ ಯು ಸೀ.. ಜಸ್ಟ್ ಯು ಫಾಲ್.. ಅಂಡ್ ಲುಕ್.. ಅಂಡ್ ಗೋ.. ದಟ್ಸ್ ಇಟ್ ಎಂದುಬಿಡ್ತಿದ್ದರಂತೆ. 

    ಇನ್ನೂ ಕೆಲವೊಮ್ಮೆ ಆಯಮ್ಮಂಗೆ ನೀನೇ ಸೀನ್ ಹೇಳಿಬಿಡು ಡಾರ್ಲಿಂಗ್ ಎಂದು ಸುದೀಪ್ ಬೆನ್ನು ಹತ್ತುತ್ತಿದ್ದರಂತೆ ಪ್ರೇಮ್. ನೀನೇ ಹೇಳು, ನಾನೇನು ನಿನ್ ಅಸಿಸ್ಟೆಂಟಾ ಅಂತಿದ್ರಂತೆ ಸುದೀಪ್. 

    ಪ್ರೇಮ್ ಇಂಗ್ಲಿಷ್ ಕೇಳಿದ್ರೆ, ಅಕ್ಸ್‍ಫರ್ಡ್ ಯುನಿವರ್ಸಿಟಿ ಬಾಗಿಲು ಮುಚ್ಚುತ್ತೆ ಎಂದು ನಕ್ಕರು ಸುದೀಪ್.

    ಆಡಿಯೋ ರಿಲೀವ್ ವೇಳೆ ಹಾಡೊಂದಕ್ಕೆ ಹೆಜ್ಜೆ ಹಾಕಿದ ಶಿವರಾಜ್‍ಕುಮಾರ್, ಕೊಡಗಿನ ಸಂತ್ರಸ್ತರನ್ನು ಸ್ಮರಿಸಿದರು. ನಾನು ನಿರ್ದೇಶಕ ಹೇಳಿದಂತೆ ಕೇಳೋವ್ನು. ನಿರ್ದೇಶಕರು ಕಸ ಗುಡಿಸೋ ಪಾತ್ರ ಕೊಟ್ಟರೂ ಸೈ. ಮಾಡ್ತೀನಿ ಅಷ್ಟೆ ಎಂದರು. ರೆಬಲ್ ಸ್ಟಾರ್ ಅಂಬರೀಷ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ರು.

  • ಸುದೀಪ್ ಹೊಸ ಚಿತ್ರಕ್ಕೆ ಮಂಕಾಥಾ ವೆಂಕಟ್ ಪ್ರಭು ಡೈರೆಕ್ಷನ್

    ಸುದೀಪ್ ಹೊಸ ಚಿತ್ರಕ್ಕೆ ಮಂಕಾಥಾ ವೆಂಕಟ್ ಪ್ರಭು ಡೈರೆಕ್ಷನ್

    ಮಂಕಾಥ, ಮನ್ನಾಡು ನಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ತಮಿಳು ಸಿನಿಮಾ ಡೈರೆಕ್ಟರ್ ವೆಂಕಟ್ ಪ್ರಭು ಸುದೀಪ್ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಒಂದೆಡೆ ವಿಕ್ರಾಂತ್ ರೋಣ ತಲೆಬಿಸಿಯಲ್ಲಿರೋ ಸುದೀಪ್ ಅದು ಮುಗಿಯುತ್ತಿದ್ದಂತೆ ವೆಂಕಟ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕೆಲವು ತಿಂಗಳ ಹಿಂದೆ ವೆಂಕಟ್ ಪ್ರಭು ಸುದೀಪ್ ಅವರಿಗೆ ಕಥೆ ಹೇಳಿದ್ದರು. ಕಥೆಯೂ ಓಕೆಯಾಗಿತ್ತು.

    ಒನ್ಸ್ ಎಗೇಯ್ನ್.. ಈ ಚಿತ್ರವೂ ಹಲವು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಚಿತ್ರ ಯಾವಾಗ ಸೆಟ್ಟೇರಲಿದೆ ಅನ್ನೋದು ಇನ್ನೂ ಕನ್‍ಫರ್ಮ್ ಆಗಿಲ್ಲ.

  • ಸುದೀಪ್`ಗೆ ಶ್ರದ್ಧಾ ಶ್ರೀನಾಥ್ ಜೋಡಿ..?

    will sharddha srinath pair opposite sudeep in phantom

    ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ಎದುರು ಶ್ರದ್ಧಾ ಶ್ರೀನಾಥ್ ನಟಿಸಲಿದ್ದಾರಾ..? ಹೌದು ಎನ್ನುತ್ತಿವೆ ಗಾಂಧಿನಗರದ ಮೂಲಗಳು. ಚಿತ್ರತಂಡ ಸುದ್ದಿಯನ್ನು ನಿರಾಕರಿಸುತ್ತಿಲ್ಲವಾದರೂ ಇನ್ನೂ ಅಧಿಕೃತವಾಗಿ ಹೇಳಿಲ್ಲ.

    ಫ್ಯಾಂಟಮ್ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶಕರಾದರೆ, ಕಿಚ್ಚ ಸುದೀಪ್ ಹೀರೋ. ಸುದೀಪ್ ಜೊತೆ ನಿರೂಪ್ ಭಂಡಾರಿ ಕೂಡಾ ಇನ್ನೊಂದು ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಸದ್ಯಕ್ಕೆ ನೀತಾ ಅಶೋಕ್ ನಟಿಸುತ್ತಿರುವ ಅಪರ್ಣಾ ಬಲ್ಲಾಳ್ ಅಲಿಯಾಸ್ ಪನ್ನಾ ಪಾತ್ರದ ಲುಕ್ ರಿವೀಲ್ ಆಗಿದೆ. ಚಿತ್ರದ ಒಂದೊಂದು ಪಾತ್ರವನ್ನೂ ಆ ಪಾತ್ರಗಳ ಹೆಸರಿನಲ್ಲೇ ಪರಿಚಯಿಸುತ್ತಿರುವ ಅನೂಪ್ ಭಂಡಾರಿ, ಫ್ಯಾಂಟಮ್ ಚಿತ್ರವನ್ನು ಬೇರೆಯದೇ ಲೆವೆಲ್‍ಗೆ ಕೊಂಡೊಯ್ಯುತ್ತಿರುವಂತಿದೆ. ಜಾಕ್ ಮಂಜು ನಿರ್ಮಾಣದ ಫ್ಯಾಂಟಮ್ ಚಿತ್ರ ಸದ್ಯಕ್ಕೆ ಹೈದರಾಬಾದ್‍ನಲ್ಲಿ ಶೂಟಿಂಗ್‍ನಲ್ಲಿದೆ.

  • ಸುದೀಪ್-ಸೂರಿ ಕಾಂಬಿನೇಷನ್ ಫಿಕ್ಸ್

    duniya suri and sudeep comibanation movie soon

    ಕಿಚ್ಚ ಸುದೀಪ್ ಮತ್ತು ದುನಿಯಾ ಸೂರಿ ಒಂದಾದರೆ ಎಂತಹ ಸಿನಿಮಾ ಸಿದ್ಧವಾಗಬಹುದು..? ರಿಯಲಿಸ್ಟಿಕ್ ಸಿನಿಮಾಗಳನ್ನು ಸಿನಿಮ್ಯಾಟಿಕ್ ಆಗಿ ಹೇಳುವ ಕಲೆ ಸಿದ್ಧಿಸಿಕೊಂಡಿರುವ ಸೂರಿ, ಎಂಥದ್ದೇ ಪಾತ್ರವಾದರೂ ಪರಕಾಯ ಮಾಡಬಲ್ಲ ತಾಕತ್ತಿರುವ ಸುದೀಪ್ ಇಬ್ಬರೂ ಒಂದಾದರೆ, ಒಂದೊಳ್ಳೆ ಸಿನಿಮಾ ಬರೋದು ಫಿಕ್ಸ್. ಆದರೆ, ಇಬ್ಬರೂ ಇದುವರೆಗೆ ಒಟ್ಟಿಗೇ ಸಿನಿಮಾ ಮಾಡಿಲ್ಲ. ರಂಗ ಎಸ್‍ಎಸ್‍ಎಲ್‍ಸಿ ಚಿತ್ರದಲ್ಲಿ ಸೂರಿ ಕೆಲಸ ಮಾಡಿದ್ದರೂ, ನಿರ್ದೇಶಕರಾಗಿದ್ದವರು ಯೋಗರಾಜ್ ಭಟ್. ಈಗ ಕಾಲ ಕೂಡಿ ಬಂದಂತೆ ಕಾಣುತ್ತಿದೆ.

    ಒಂದರ ಹಿಂದೊಂದು ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಾಗಿರುವ ಸುದೀಪ್‍ರನ್ನು, ಮಂಕಿ ಟೈಗರ್ ಚಿತ್ರದ ಬ್ಯುಸಿ ಶೆಡ್ಯೂಲ್ ನಡುವೆಯೇ ಭೇಟಿ ಮಾಡಿದ್ದಾರೆ ಸೂರಿ. ಮೊದಲ ಹಂತದ ಮಾತುಕತೆ ನಡೆದಿದೆ. ಬಹುತೇಕ ಕೆ.ಪಿ.ಶ್ರೀಕಾಂತ್ ನಿರ್ಮಾಪಕರಾಗುವ ಸಾಧ್ಯತೆ ಇದೆ.

    ಭೇಟಿಯಾಗಿರುವುದು ನಿಜ. ಮಾತುಕತೆ ನಡೆದಿರುವುದೂ ನಿಜ. ಆದರೆ, ಎಲ್ಲವೂ ಪ್ರಾಥಮಿಕ ಹಂತದಲ್ಲೇ ಇದೆ. ಈಗಲೇ ಫೈನಲ್ ಎನ್ನಲು ಸಾಧ್ಯವಿಲ್ಲ ಎಂದಿದ್ದಾರೆ ಶ್ರೀಕಾಂತ್. ಫೈನಲ್ ಆಗಲಿ ಎನ್ನುವುದು ಅಭಿಮಾನಿಗಳ ನಿರೀಕ್ಷೆ.

  • ಸುದೀಪ್‍ಗೆ ಸುಮಲತಾ ಥ್ಯಾಂಕ್ಯೂ ಎಂದಾಗ..

    sumalatha praises sudeep

    ಅಂಬಿ ಮಾಮಂಗೆ ಆರೋಗ್ಯ ಆಗಾಗ್ಗೆ ಕೈ ಕೊಡುತ್ತಲೇ ಇತ್ತು. ಸಹಕರಿಸ್ತಾ ಇರಲಿಲ್ಲ. ಆದರೆ, ಸಿನಿಮಾಗೆ ಎಲ್ಲಿಯೂ ತೊಂದರೆ ಮಾಡಲಿಲ್ಲ. ಬದಲಿಗೆ ಇಡೀ ಸಿನಿಮಾ ತಂಡಕ್ಕೆ ಅವರೇ ಹುರುಪು ತುಂಬಿದರು. ಶಕ್ತಿ ತುಂಬಿದರು. ನಿಮ್ಮೊಂದಿಗೆ ಸಿನಿಮಾ ಮಾಡುವ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಯೂ ಮಾಮಾ..

    ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರದ ನಿರ್ಮಾಪಕರೂ ಆಗಿರುವ ಸುದೀಪ್ ಇಂಥಾದ್ದೊಂದು ಟ್ವೀಟ್ ಮಾಡಿದ್ರು. ಎಷ್ಟೆಂದರೂ 14 ವರ್ಷಗಳ ನಂತರ ಅಂಬರೀಷ್ ಸೋಲೋ ಹೀರೋ ಆಗಿ ನಟಿಸಿರುವ ಸಿನಿಮಾ ಇದು. ಗುರುದತ್ ಗಾಣಿಗ ಅನ್ನೋ ಹೊಸ ಹುಡುಗ ನಿರ್ದೇಶಿಸಿರುವ ಸಿನಿಮಾ.

    ಅಂಬಿಯ ಈ ಟ್ವೀಟ್ ನೋಡುತ್ತಿದ್ದಂತೆಯೇ ಸುಮಲತಾ ಅವರ ರಿಯಾಕ್ಷನ್ ಹೀಗಿತ್ತು. ಅಂಬಿಯನ್ನು ಅಂಥಾದ್ದೊಂದು ಪಾತ್ರ ಮಾಡಲು ಪ್ರೇರೇಪಿಸಿದ್ದಕ್ಕೆ ಥ್ಯಾಂಕ್ಯೂ. ಅಂಬಿಯ ಇದುವರೆಗಿನ ಎಲ್ಲ ಚಿತ್ರಗಳನ್ನು ನೋಡಿದ್ರೆ, ಇದು ಅವರ ದಿ ಬೆಸ್ಟ್ ಎನಿಸುತ್ತೆ. ಅಂಥಾದ್ದೊಂದು ಸಿನಿಮಾ ಮಾಡಿದ್ದಕ್ಕೆ ನೀನು ಗರ್ವ ಪಡಬೇಕು ಎಂದರು ಸುಮಲತಾ.

    ಸುದೀಪ್ ಸುಮಲತಾ ಅವರ ಪ್ರೀತಿಯ ಮಾತಿಗೆ ಹೇಳಿದ್ದು ಒಂದೇ ಮಾತು. `ಥ್ಯಾಂಕ್ಯೂ ಅಕ್ಕಾ, ಇದು ನನಗೆ ಸಿಕ್ಕ ಗೌರವ'. 

    ಸುದೀಪ್‍ಗೆ ಗೌರವ ತಂದುಕೊಟ್ಟ, ಸುಮಲತಾಗೆ ಇಷ್ಟವಾದ, ಚಿತ್ರರಂಗಕ್ಕೆ ಚಿತ್ರರಂಗವೇ ಕಾತುರದಿಂದ ಎದುರು ನೋಡುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ.. ಇದೇ ವಾರ ರಿಲೀಸ್. 

  • ಸುನಿಲ್ ಶೆಟ್ಟಿಯ ತುಳು ಪ್ರೇಮ

    suniel shetty appreciates tulu film industry

    ಬಾಲಿವುಡ್ ನಟ ಸುನಿಲ್ ಶೆಟ್ಟಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ಪೈಲ್ವಾನ್ ಮೂಲಕ. ಪೈಲ್ವಾನ್ ಕಿಚ್ಚನ ಗುರುವಿನ ಪಾತ್ರದಲ್ಲಿ ಖಡಕ್ ಆಗಿ ಮಿಂಚಿದ್ದಾರೆ ಸುನಿಲ್ ಶೆಟ್ಟಿ. ಈ ಚಿತ್ರವನ್ನು ಒಪ್ಪಿಕೊಳ್ಳೋಕೆ ಮೊದಲನೆ ಕಾರಣ ಸುದೀಪ್, 2ನೇ ಕಾರಣ ಕಥೆ ಮತ್ತು ಮೂರನೇ ಕಾರಣ ನಿರ್ದೇಶಕ ಕೃಷ್ಣ ಎಂದಿದ್ದಾರೆ ಸುನಿಲ್ ಶೆಟ್ಟಿ.

    ಕೃಷ್ಣ ಅವರಿಗೆ ನನಗೆ ಕನ್ನಡ ಬರಲ್ಲ, ತುಳು ಬರುತ್ತೆ ಎನ್ನುವುದು ಗೊತ್ತಿತ್ತು. ಅದನ್ನು ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡಿದರು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ತುಳು ಚಿತ್ರರಂಗ ಒಳ್ಳೆಯ ಬೆಳವಣಿಗೆ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಸುನಿಲ್ ಶೆಟ್ಟಿ.

  • ಸುಮಲತಾ ಪರ ಪ್ರಚಾರ - ಸುದೀಪ್ ಹೇಳಿದ್ದೇನು..?

    sudeep reacts on sumalatha's political campaign

    ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು 100% ಪಕ್ಕಾ. ಕಾಂಗ್ರೆಸ್ ಟಿಕೆಟ್ ಇಲ್ಲ ಎಂದಿರುವ ಕಾರಣ, ಅವರು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಇನ್ನು ಚಿತ್ರರಂಗದಿಂದ ಸುಮಲತಾ ಪರ ಯಾರು ಪ್ರಚಾರಕ್ಕೆ ಹೋಗ್ತಾರೆ ಎಂಬ ಬಗ್ಗೆ ಅನುಮಾನಗಳೇನೂ ಇಲ್ಲ. ದರ್ಶನ್, ಅಮ್ಮನ ಪರ ಪ್ರಚಾರ ಮಾಡ್ತೀನಿ ಎಂದು ಈಗಾಗಲೇ ಘೋಷಿಸಿ ಆಗಿದೆ. ಯಶ್ ಕೂಡಾ ಹೋಗಬಹುದು. ಸುದೀಪ್ ಹೋಗ್ತಾರಾ..?

    ಈ ಪ್ರಶ್ನೆಗೆ ಸುದೀಪ್ ಕೊಟ್ಟಿರುವ ಉತ್ತರ ಇದು. ಅಲ್ಲಿ ದರ್ಶನ್ ಹೋಗ್ತಾರೆ.  ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ..? ನನಗೆ ಯಾರೂ ಕರೆದಿಲ್ಲ. ನಾನು ರಾಜಕೀಯದಿಂದ ದೂರ. ನನ್ನನ್ನು ನಂಬಿ ಹಲವು ನಿರ್ಮಾಪಕರು ಹಣ ಹಾಕಿದ್ದಾರೆ. ಹಾಗಾಗಿ ನಾನು ಸಿನಿಮಾಗಳಲ್ಲಿ ಬ್ಯುಸಿ ಎಂದಿದ್ದಾರೆ ಕಿಚ್ಚ ಸುದೀಪ್.

  • ಸೆನ್ಸಾರ್ ಪರೀಕ್ಷೆಯಲ್ಲಿ ಗೆದ್ದ ಪೈಲ್ವಾನ

    pailwan censore u/a

    ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಸಿಕ್ಸ್‍ಪ್ಯಾಕ್ ಮಾಡಿಕೊಂಡೇ ನಟಿಸಿರುವ ಚಿತ್ರ ಪೈಲ್ವಾನ್. ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಕಬೀರ್ ಸಿಂಗ್ ದುಲ್ಹನ್, ಚಿಕ್ಕಣ್ಣ,  ನಟಿಸಿರುವ ಚಿತ್ರಕ್ಕೆ ಕೃಷ್ಣ ನಿರ್ದೇಶಕ. ಸ್ವಪ್ನಾ ಕೃಷ್ಣ ನಿರ್ಮಾಪಕಿ. ಅರ್ಜುನ್ ಜನ್ಯ ಸಂಗೀತ ನೀಡಿರುವ ಚಿತ್ರ, ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. 

    ಕನ್ನಡದ ಬಹುನಿರೀಕ್ಷೆಯ ಚಿತ್ರವೀಗ ಸೆನ್ಸಾರ್ ಪರೀಕ್ಷೆ ಪಾಸ್ ಆಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ ಸೆನ್ಸಾರ್ ಮಂಡಳಿ. 

  • ಸೆನ್ಸಾರ್‍ಗೆ ಹೊರಟ ವಿಲನ್

    the villain reached censor office

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ದಿ ವಿಲನ್. ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್ ಆಗಿ ಜನಪ್ರಿಯಗೊಂಡಿವೆ. ಒಂದೊಂದು ಹಾಡೂ ಒಂದೊಂದು ರೀತಿ ಸ್ಪೆಷಲ್. ಹೀಗಿರುವಾಗಲೇ ಶೀಘ್ರದಲ್ಲೇ ರಿಲೀಸ್ ಡೇಟ್ ಪ್ರಕಟಿಸೋದಾಗಿ ಘೋಷಿಸಿದ್ದಾರೆ ನಿರ್ದೇಶಕ ಪ್ರೇಮ್.

    ಕಾಯುವಿಕೆ ಮುಗಿಯಿತು. ಅಭಿಮಾನಿಗಳೇ.. ಉಸಿರು ಬಿಗಿ ಹಿಡಿದುಕೊಳ್ಳಿ. ಚಿತ್ರ ಸೆನ್ಸಾರ್‍ಗೆ ಹೊರಟಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ ಜೋಗಿ ಪ್ರೇಮ್.

    ಸಿ.ಆರ್. ಮನೋಹರ್ ನಿರ್ಮಾಣದ ದಿ ವಿಲನ್ ಚಿತ್ರಕ್ಕೆ ಆ್ಯಮಿ ಜಾಕ್ಸನ್ ನಾಯಕಿ. ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿರುವ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಎಂಬುದು ನಿರ್ವಿವಾದ.

  • ಸೆಪ್ಟೆಂಬರ್ 20ಕ್ಕೆ ದಿ ವಿಲನ್ ಹಬ್ಬ..?

    the villain to release on sep 20th

    ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಸಿನಿಮಾ, ರಿಲೀಸ್‍ಗೂ ಮೊದಲೇ ಹವಾ ಸೃಷ್ಟಿಸಿದೆ. ರಾಜ್ಯದ ಹಲವಾರು ಥಿಯೇಟರುಗಳಲ್ಲಿ ಈಗಾಗಲೇ ದಿ ವಿಲನ್ ನಮ್ಮ ಥಿಯೇಟರ್‍ಗೇ ಬರಲಿದೆ ಎಂಬ ಪೋಸ್ಟರ್‍ಗಳು ರಾರಾಜಿಸುತ್ತಿವೆ. ನಿರ್ಮಾಪಕ ಸಿ.ಆರ್.ಮನೋಹರ್ ಆಗಲೀ, ನಿರ್ದೇಶಕ ಪ್ರೇಮ್ ಆಗಲೀ, ಇದುವರೆಗೆ ಯಾವುದೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಚಿತ್ರಲೋಕಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ದಿ ವಿಲನ್ ಸಿನಿಮಾ, ಸೆಪ್ಟೆಂಬರ್ 20ಕ್ಕೆ ರಿಲೀಸ್ ಆಗಲಿದೆ.

    ಅಲ್ಲಿಗೆ ಗೌರಿ ಗಣೇಶ ಹಬ್ಬವನ್ನು ಮುಗಿಸಿಕೊಂಡೇ ದಿ ವಿಲನ್ ಬರಲಿದ್ದಾನೆ. ಹಾಗೆಂದು ಸೆಪ್ಟೆಂಬರ್ 20ಕ್ಕೆ ರಿಲೀಸ್ ಆದರೂ, ದಿ ವಿಲನ್‍ಗೆ ಲಾಭಗಳೂ ಇವೆ. ಗೌರಿ ಗಣೇಶ ಹಬ್ಬದಂತೆಯೇ, 20ರ ನಂತರವೂ ಸಾಲು ಸಾಲು ರಜೆ ಸಿಗಲಿವೆ. ಸೆಪ್ಟೆಂಬರ್ 21ಕ್ಕೆ ಮೊಹರಂ ಹಬ್ಬ. ಸೆಪ್ಟೆಂಬರ್ 22, 4ನೇ ಶನಿವಾರ, ಬ್ಯಾಂಕ್ ರಜಾ. ಸೆಪ್ಟೆಂಬರ್ 21 ಭಾನುವಾರ. ಅಲ್ಲಿಗೆ ದಿ ವಿಲನ್‍ಗೆ ರಜೆಗಳ ಸೌಭಾಗ್ಯವೂ ಸಿಗಲಿದೆ. ಅಬ್ಬರಕ್ಕೆ ಅಷ್ಟು ಸಾಕಲ್ಲವೇ.

    ಆ್ಯಮಿ ಜಾಕ್ಸನ್ ನಾಯಕಿಯಾಗಿರುವ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಅಕ್ಷರಶಃ ಮೋಡಿ ಮಾಡಿಬಿಟ್ಟಿವೆ. ಸಿನಿಮಾ ರಿಲೀಸ್‍ಗೆ ಅಭಿಮಾನಿಗಳೇ ಏನು, ಚಿತ್ರರಂಗವೇ ಚಾತಕ ಪಕ್ಷಿಯಂತೆ ಕಾಯುತ್ತಿದೆ.

  • ಸೆಲಬ್ರೇಷನ್ ಆಫ್ ದ ಇಯರ್ : ಕಬ್ಬದ ಸುರ್ ಸುರ್ ಬತ್ತಿ

    ಸೆಲಬ್ರೇಷನ್ ಆಫ್ ದ ಇಯರ್ : ಕಬ್ಬದ ಸುರ್ ಸುರ್ ಬತ್ತಿ

    ಕಬ್ಜದ ಮತ್ತೊಂದು ಹಾಡು ಅದ್ಧೂರಿಯಾಗಿ ರಿಲೀಸ್ ಆಗಿದೆ. ಆರ್.ಚಂದ್ರು ನಿರ್ಮಾಣ ಮತ್ತು ನಿರ್ದೇಶನದ ಸುರ್ ಸುರ್ ಬತ್ತಿ ಸಾಂಗು, ಪಡ್ಡೆ ಹೈಕಳ ಎದೆಯಲ್ಲಿ ಸರ್ ಸರ್ ಅಂತಾ ಸುರ್ ಸುರ್ ಬತ್ತಿ ಇಟ್ಟಿದೆ. ಈ ಹಾಡನ್ನು ಬಿಡುಗಡೆ ಮಾಡುವ ಮುನ್ನ ದ ಸೆಲೆಬ್ರೇಷನ್ ಸಾಂಗ್ ಆಫ್ ದ ಇಯರ್ ಎಂದು ಹೇಳಿಲದ್ದ ಚಿತ್ರತಂಡ ಮಾತನ್ನು ಉಳಿಸಿಕೊಂಡಿದೆ. ಕೇಳುಗರಿಗೆ ಹಾಗೂ ನೋಡುಗರಿಗೆ ಇಬ್ಬರಲ್ಲೂ ಕಿಚ್ಚು ಹತ್ತಿಸಿದೆ ಈ ಹಾಡು.

    ಬಸಣ್ಣಿಯಾಗಿ ಬಾಂಬೆ ಮಿಠಾಯಿ ತಿನ್ನಿಸಿದ್ದ ತಾನ್ಯಾ ಹೋಪ್, ಸುರ್ ಸುರ್ ಬತ್ತಿಯಲ್ಲಿ ಸೊಂಟ ಬಳುಕಿಸಿದ್ದಾರೆ. ಉಪೇಂದ್ರ ವಿಂಟೇಜ್ ಸೂಟ್ ಧರಿಸಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಪ್ರಮೋದ್ ಮರವಂತೆ ಈ ಹಾಡಿನ ಸಾಹಿತ್ಯ ಬರೆದಿದ್ದು, ಏರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ದನಿ ನೀಡಿದ್ದಾರೆ‌

    ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ, ನಟ ಸಾರ್ವಭೌಮ ಹಾಗೂ ಯುವರತ್ನ ಮತ್ತು ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ರಾರಾ ರಕ್ಕಮ್ಮ ಹಾಡಿಗೆ ನೃತ್ಯ ಸಂಯೋಜಿಸಿದ್ದ ಜಾನಿ ಮಾಸ್ಟರ್ ಕೊರಿಯೋಗ್ರಫಿ ಅದ್ಭುತವಾಗಿ ಮೂಡಿ ಬಂದಿದೆ ಅನ್ನೋದು ಲಿರಿಕಲ್ ವಿಡಿಯೋದಲ್ಲಿನ ಕಟ್ಸ್ಗಳಿಂದಲೇ ಗೊತ್ತಾಗುತ್ತಿದೆ.

    ಉಪ್ಪಿ, ಸುದೀಪ್, ಶ್ರೇಯಾ ಸರಣ್ ಅಭಿನಯದ ಚಿತ್ರದ ಹಾಡು ರಿಲೀಸ್ ಆಗಿದ್ದು ಶಿಡ್ಲಘಟ್ಟದಲ್ಲಿ. ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಯಿಂದ ಬಿಡುಗಡೆಯಾದ ಹಾಡಿದು. ಶಿವರಾತ್ರಿಯಂದು ನಮಾಮಿ ಹಾಡಿನ ಮೂಲಕ ಭಕ್ತಿಯ ಉತ್ತುಂಗ ತೋರಿಸಿದ್ದ ಚಂದ್ರು, ಈ ಹಾಡಿನಲ್ಲಿ ಮಾದಕತೆಯ ಮತ್ತೊಂದು ಮಜಲು ತೋರಿಸಿದ್ದಾರೆ.