ಯಶಸ್ಸಿಗೆ ಸಾವಿರ ಸರದಾರರು..ಸೋಲಿಗೆ ಯಾರೂ ಇಲ್ಲ ಎಂಬುದು ಗಾದೆಯೂ ಹೌದು..ನಾಣ್ಣುಡಿಯೂ ಹೌದು. ಈಗ ಕಬ್ಜ ರಿಲೀಸ್ ಹೊತ್ತಿನಲ್ಲಿ ಕೂಡಾ ಅದು ಚರ್ಚೆಗೆ ಬಂದಿದೆ. ಕಬ್ಜ ಈಗಾಗಲೇ ಒಂದು ಮಟ್ಟಕ್ಕೆ ಗೆದ್ದಾಗಿದೆ. ರಿಲೀಸ್ ಆಗುವುದಕ್ಕೂ ಮೊದಲೇ 100 ಕೋಟಿ ಕ್ಲಬ್ ಸೇರಿರುವ ಕಬ್ಜ ಚಿತ್ರ ಥಿಯೇಟರ್ ಓಪನಿಂಗ್ಸ್ ಎದುರು ನೋಡುತ್ತಿದೆ. 4000+ ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗಲಿರೋ ಕಬ್ಜ ಚಿತ್ರದ ರೂವಾರಿ ಆರ್.ಚಂದ್ರು.
ಕಬ್ಜ ಚಿತ್ರಕ್ಕೆ ನಿರ್ದೇಶಕರೂ ಅವರೇ..ನಿರ್ಮಾಪಕರೂ ಅವರೇ. ಪ್ರೊಡಕ್ಷನ್ ಹೆಡ್ ಯಮುನಾ ಚಂದ್ರಶೇಖರ್. ಸ್ಟಾರ್ ಗಿರಿಯೋ.. ಅಬ್ಬಬ್ಬಾ ಎನ್ನುವಂತಿದೆ. ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ಶ್ರೇಯಾ.. ಹೀಗೆ ಸ್ಟಾರ್‍ಗಳೇ ತುಂಬಿರುವ ಚಿತ್ರದಲ್ಲಿ ಪೋಷಕ ಕಲಾವಿದರೂ ಸ್ಟಾರ್ ನಟರೇ. ಮುರಳಿ ಕೃಷ್ಣ, ಪೋಸಾನಿ ಕೃಷ್ಣ ಮುರಳಿ, ಅನೂಪ್ ರೇವಣ್ಣ, ಕಬೀರ್ ದುಲ್ಹಾನ್ ಸಿಂಗ್, ದೇವ್‍ಗಿಲ್, ಕಾಮರಾಜನ್, ನವಾಬ್ ಷಾ, ಜಾನ್ ಕೊಕೆನ್, ಡ್ಯಾನಿಷ್ ಅಖ್ತರ್.. ಹೀಗೆ.. ಹೀಗಾಗಿಯೇ ಚಿತ್ರದ ಬಗ್ಗೆ ಮಾತನಾಡಿದ ಎಲ್ಲರೂ ಕ್ರೆಡಿಟ್ ಸಲ್ಲಿಸಿದ್ದು ಆರ್.ಚಂದ್ರು ಅವರಿಗೆ.
ಈ ಚಿತ್ರಕ್ಕೆ ನಾನು ಓಕೆ ಎಂದಿದ್ದು ಚಿತ್ರದ ಮೇಕಿಂಗ್ ನೋಡಿ ಅಲ್ಲ. ಆರ್.ಚಂದ್ರು ಅವರನ್ನು ನೋಡಿ. ಚಂದ್ರು ಅವರ ಡೆಡಿಕೇಷನ್ ಅದ್ಭುತ. ಇದು ಅವರ ಸ್ನೇಹಕ್ಕಾಗಿ ಮಾಡಿದ ಸಿನಿಮಾ ಎಂದ ಸುದೀಪ್ ಉಪ್ಪಿ ಸರ್ ಸಿನಿಮಾದಲ್ಲಿ ನಾನಿದ್ದೇನೆ ಎನ್ನುವುದೇ ಖುಷಿ. ಈ ಸಿನಿಮಾ ಚಂದ್ರುಗೋಸ್ಕರ ಗೆಲ್ಲಬೇಕು ಎಂದರು.
ಸಮಸ್ಯೆಗಳನ್ನೇ ತುಳಿದು ಕಬ್ಜ ಮಾಡಿದವರು ಚಂದ್ರು. ಆ ವಾಮನ ಬಲಿ ಚಕ್ರವರ್ತಿಯನ್ನು ತುಳಿದರೆ, ಈ ವಾಮನ ಆರ್.ಚಂದ್ರು ಸಮಸ್ಯೆಗಳನ್ನೆಲ್ಲ ತುಳಿದು ಒಳ್ಳೆಯ ಸಿನಿಮಾ ಮಾಡಿದ್ದಾರೆ ಎಂದವರು ಉಪೇಂದ್ರ.
ಆರ್.ಚಂದ್ರು ಅವರ ಕನಸುಗಳನ್ನು ಹೊಗಳಿದ ನೆನಪಿರಲಿ ಪ್ರೇಮ್ ಎಲ್ಲ ಒಳ್ಳೆಯ ಮನಸ್ಸುಗಳ ಸಾಥ್ ಸಿಕ್ಕಿರುವ ಕಬ್ಜ ಖಂಡಿತಾ ಗೆಲ್ಲಲಿದೆ ಎಂದರು. ನಮ್ಮ ಸೀನಿಯರ್ ಅಣ್ಣಂದಿರೆಲ್ಲ ದೊಡ್ಡ ದಾರಿ ತೋರಿಸುತ್ತಿದ್ದಾರೆ. ದೊಡ್ಡ ದೊಡ್ಡ ಗ್ಯಾಂಗ್‍ಸ್ಟರ್ಸ್ ಕಥೆ ಇದೆ. ಆದರೆ ಮತ್ತೊಬ್ಬ ಗ್ಯಾಂಗ್‍ಸ್ಟರ್ ಡಾಲಿನ ಮಿಸ್ ಮಾಡಿದ್ದೀರಾ ಎನ್ನುತ್ತಲೇ ಶ್ರೇಯಾ ಸರಣ್ ಜೊತೆ ಡ್ಯಾನ್ಸ್ ಮಾಡುವ ಆಸೆಯನ್ನೂ ಹೇಳಿಕೊಂಡರು.
ಚಿತ್ರದ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞರೂ ಎಲ್ಲರೂ ಚಂದ್ರು ಅವರನ್ನು ಹಾಡಿ ಹೊಗಳುತ್ತಿದ್ದರೆ, ಚಂದ್ರು ನಾಚುತ್ತಲೇ ಮೂಕ ಪ್ರೇಕ್ಷಕರಾಗಿದ್ದರು.ಅಂದಹಾಗೆ ನರ್ತಕಿಯಲ್ಲಿ ಮೂವರೂ ಸ್ಟಾರ್ಸ್ ಇರುವ 72 ಅಡಿ ಎತ್ತರದ ಕಟೌಟ್ ಇರಲಿದೆ. 'ಕಬ್ಜ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, ಕರ್ನಾಟಕದಲ್ಲಿ ಈ ಸಿನಿಮಾ ಹವಾನೇ ಬೇರೆ. ಕನ್ನಡ ಮೂವರು ಸೂಪರ್ಸ್ಟಾರ್ಗಳು ಒಂದೇ ಸಿನಿಮಾದಲ್ಲಿ ಕಂಡಿರಲಿಲ್ಲ. ಉಪೇಂದ್ರ-ಕಿಚ್ಚ ಸುದೀಪ್, ಉಪೇಂದ್ರ-ಶಿವಣ್ಣ, ಶಿವಣ್ಣ-ಕಿಚ್ಚ ಸುದೀಪ್ ಒಟ್ಟಿಗೆ ನಟಿಸಿದ್ದರು. ಆದ್ರೀಗ 'ಕಬ್ಜ'ದಲ್ಲಿ ಮೂವರನ್ನೂ ಒಟ್ಟಿಗೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ನಿರ್ದೇಶಕ ಆರ್ ಚಂದ್ರು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಿದು. ಇದೂವರೆಗೂ ರೊಮ್ಯಾಂಟಿಕ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರು, ಇದೇ ಮೊದಲ ಬಾರಿಗೆ ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ 'ಕಬ್ಜ' ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತೆ? ಅನ್ನೋ ಕುತೂಹಲವಿದೆ.