` sadhu kokila - chitraloka.com | Kannada Movie News, Reviews | Image

sadhu kokila

 • ಮಸಾಜ್ ಮಸಾಲಾಗೆ ಟ್ವಿಸ್ಟ್ - ಸಾಧು, ಮಂಡ್ಯ ರಮೇಶ್ ಅಲ್ಲಿಗೆ ಹೋಗೇ ಇಲ್ಲ..!

  massage masala twist

  ಮೈಸೂರ ಮಸಾಜ್ ಪಾರ್ಲರ್ ವಿವಾದಕ್ಕೆ ವಿಭಿನ್ನ ತಿರುವು ಸಿಕ್ಕಿದೆ. ಮಸಾಜ್ ಪಾರ್ಲರ್‍ಗೆ ಸಾಧು ಕೋಕಿಲಾ ಹಾಗೂ ಮಂಡ್ಯ ರಮೇಶ್ ಬರುತ್ತಿದ್ದರು. ನನಗೆ ಲೈಂಗಿಕವಾಗಿ ಹಿಂಸಿಸುತ್ತಿದ್ದರು ಎಂದು ಯುವತಿಯೊಬ್ಬರು ಆರೋಪ ಮಾಡಿದ್ದು ಚಿತ್ರರಂಗದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಜಗ್ಗೇಶ್, ಭಾವನಾ ಸೇರಿದಂತೆ ಹಲವು ಚಿತ್ರನಟರು ನಟರ ಬೆಂಬಲಕ್ಕೆ ನಿಂತಿದ್ದರು.

  ಈಗ ಅದೇ ಮಸಾಜ್ ಪಾರ್ಲರ್ ಮಾಲೀಕ ರಾಜೇಶ್‍ರ ಪತ್ನಿ ಸವಿತಾ, ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ನಮ್ಮ ಸಲೂನ್ ಉದ್ಘಾಟಿಸಿದ್ದವರು ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್. ಆದರೆ, ಉದ್ಘಾಟನೆ ಮಾಡಿ ಹೋದವರು, ಮತ್ತೆ ಇಲ್ಲಿಗೆ ಬಂದೇ ಇಲ್ಲ. ಬೇಕಾದರೆ ಸಿಸಿಟಿವಿಗಳನ್ನು ಪರಿಶೀಲಿಸಿಕೊಳ್ಳಿ ಎಂದಿದ್ದಾರೆ ಸವಿತಾ.

  ಇನ್ನು ಈ ಸಲೂನ್ ಆರಂಭಿಸಿರುವುದೇ 3 ತಿಂಗಳ ಹಿಂದೆ. ವ್ಯವಹಾರ ಕೂಡಾ ಇನ್ನೂ ಕಷ್ಟದಲ್ಲಿದೆ. ನಾವೇ 2 ತಿಂಗಳಿಂದ ಮನೆ ಬಾಡಿಗೆ ಕಟ್ಟಿಲ್ಲ. ಹೀಗಿರುವಾಗ ಇಂತಹ ಆರೋಪ ಸರಿಯಲ್ಲ ಎಂದಿದ್ದಾರೆ ಸವಿತಾ. ಸಂತ್ರಸ್ತೆ ಎಂದು ಹೇಳಿಕೊಳ್ಳುತ್ತಿರುವ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಕೊಡುವುದಿಲ್ಲ ಎಂದಾಗ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ ಸವಿತಾ.

  ಇನ್ನು ಆ ಸಲೂನ್‍ನಲ್ಲಿ ಕಟಿಂಗ್, ಶೇವಿಂಗ್, ಫೇಸ್‍ವಾಶ್ ಬಿಟ್ಟು ಬೇರೇನೂ ಮಾಡಲ್ಲ. ಹೀಗಿರುವಾಗ ಮಸಾಜ್ ಎಲ್ಲಿಂದ ಮಾಡಿಸೋಣ ಅನ್ನೋದು ಸವಿತಾ ಅವರ ಪ್ರಶ್ನೆ. ಆ ಸಲೂನ್‍ನಲ್ಲಿ ಮಸಾಜ್ ಮಾಡುವಷ್ಟು ಜಾಗವೂ ಇಲ್ಲವಂತೆ. ಹಾಗಾದರೆ, ಸಂತ್ರಸ್ತೆ ಎನ್ನುತ್ತಿರುವ ಯುವತಿ ಆರೋಪಗಳೆಲ್ಲ ಸುಳ್ಳಾ..?

  Related Articles :-

  ಮಸಾಜ್ ಮಸಾಲಾ - ನಟರ ಬೆಂಬಲಕ್ಕೆ ಜಗ್ಗೇಶ್

  ಮಸಾಜ್ ಮಸಾಲಾ ಆರೋಪ - ಸಾಧು ಹೇಳಿದ್ದೇನು..?

  ಸೆಕ್ಸ್​ ಸ್ಕ್ಯಾಂಡಲ್​ನಲ್ಲಿ ಮಂಡ್ಯ ರಮೇಶ್, ಸಾಧು ಕೋಕಿಲಾ ಹೆಸರು..!

 • ರಾಜ್ ವಿಷ್ಣುನಲ್ಲಿ ಸಾಧು ಮಹಾರಾಜ್ ಅವತಾರವೇ ಡಿಫರೆಂಟು..!

  raj vishnu

  ಸಿನಿಮಾ ಯಾವುದೇ ಇರಲಿ, ಸಾಧು ಕೋಕಿಲ ಕಾಣಿಸಿಕೊಂಡರೆ ಸಾಕು, ಶಿಳ್ಳೆ ಹೊಡೆಯೋ ಅಭಿಮಾನಿಗಳಿಗೆ ಬರವಿಲ್ಲ. ಸಾಧು ಮಹಾರಾಜ್ ಅನ್ನೋದು ಅದ್ಯಾವ ಸಿನಿಮಾದಲ್ಲಿ ಪ್ರಸ್ತಾಪವಾಯಿತೋ ಗೊತ್ತಿಲ್ಲ, ಈಗಂತೂ ಅಭಿಮಾನಿಗಳು ಅವರನ್ನು ಕರೆಯೋದೇ ಸಾಧು ಮಹಾರಾಜ್ ಅಂತಾ. ಇತ್ತೀಚೆಗಂತೂ ಸಾಧು ಕೋಕಿಲಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಇಂಥ ಸಾಧು ಕೋಕಿಲಾ ರಾಜ್ ವಿಷ್ಣು ಚಿತ್ರದಲ್ಲಿ ನಾಲ್ಕು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ರಾಜ್ ವಿಷ್ಣು ಚಿತ್ರದಲ್ಲಿ ಸಾಧು ಜ್ಯೋತಿಷ್ಯ ಹೇಳ್ತಾರೆ.. ಐಸ್‍ಕ್ರೀಂ ಮಾರ್ತಾರೆ.. ತಮಟೆ ಹೊಡೀತಾರೆ.. & ವಾಗಾಬಾಂಡ್. ಅದೊಂಥರಾ ಬೇರೆಯೇ ಎಕ್ಸ್‍ಪೀರಿಯನ್ಸ್ ಅಂತಾರೆ ಡೈರೆಕ್ಟರ್ ಮಾದೇಶ್. ಅಷ್ಟೂ ಪಾತ್ರಗಳಲ್ಲಿ ಸಾಧು ಅಭಿನಯ, ಒಂದನ್ನೊಂದು ಮೀರಿಸುವ ಹಾಗಿದೆ. ಚಿತ್ರದಲ್ಲಿ ಅದು ತುಂಬಾನೇ ಮುಖ್ಯ ಪಾತ್ರ ಎನ್ನುವ ಮಾತು ಚಿತ್ರ ತಂಡದಲ್ಲಿದೆ.

  ಶರಣ್ ಮತ್ತು ಚಿಕ್ಕಣ್ಣ ಮುಖ್ಯ ಪಾತ್ರದಲ್ಲಿರುವ ಸಿನಿಮಾದಲ್ಲಿ, ಶ್ರೀ ಮುರಳಿ ಅತಿಥಿ ನಟರಾಗಿದ್ದಾರೆ. ಇನ್ನು ಸಾಧು ಕೋಕಿಲ 4 ಅವತಾರಗಳಲ್ಲಿದ್ದಾರೆ ಎಂದರೆ ಅಭಿಮಾನಿಗಳ ನಿರೀಕ್ಷೆಯೂ 

 • ಸಂಗೀತ ಬಿಟ್ಟು, ನಟನೆ ಹಿಂದೆ ಬಿದ್ದಿರೋದೇಕೆ ಸಾಧು ಕೋಕಿಲ..?

  sadhu kokila reveals hard truth about film industry

  ಸಾಧು ಕೋಕಿಲ, ಕನ್ನಡ ಚಿತ್ರರಸಿಕರಿಗೆ ಹಾಸ್ಯನಟರಾಗಿ ಚಿರಪರಿಚಿತ ಮುಖ. ಜಾನಿ ಲಿವರ್ ನೆನಪಿಸುವ ಸಾಧು, ಅದ್ಭುತ ಸಂಗೀತ ನಿರ್ದೇಶಕರೂ ಹೌದು. ಒಳ್ಳೆಯ ಗಾಯಕರೂ ಹೌದು. ದೇಶದ ಕೆಲವೇ ಕೆಲವು ಬೆಸ್ಟ್ ಮ್ಯೂಸಿಕಲ್ ಕೀಬೋರ್ಡ್ ಪ್ಲೇಯರುಗಳಲ್ಲಿ ಸಾಧು ಒಬ್ಬರು. ನಿರ್ದೇಶಕರಾಗಿಯೂ ಹೆಸರು ಮಾಡಿರುವ ಸಾಧು, ಸಂಗೀತ ನೀಡಿರುವ ಹಲವು ಚಿತ್ರಗಳು ಮ್ಯೂಸಿಕಲಿ ಹಿಟ್ ಆಗಿವೆ.

  ಶ್, ನಂ.1, ಮೆಜೆಸ್ಟಿಕ್, ಕಾವ್ಯ, ಗಂಡುಗಲಿ, ಹೆಚ್2ಒ, ಲಾಲಿಹಾಡು, ರಕ್ತಕಣ್ಣೀರು, ದಾಸ, ರಾಕ್ಷಸ, ಇಂತಿ ನಿನ್ನ ಪ್ರೀತಿಯ, ಎದೆಗಾರಿಕೆ, ಮಾಸ್ತಿಗುಡಿ.. ಹೀಗೆ ಹಲವಾರು ಚಿತ್ರಗಳಿವೆ. ಹಿನ್ನೆಲೆ ಸಂಗೀತದಲ್ಲಿ ಇವತ್ತಿಗೂ ಇವರೇ ಮಾಸ್ಟರ್. ಸಂಗೀತಕ್ಕೆ ಎರಡೆರಡು ಬಾರಿ ರಾಜ್ಯಪ್ರಶಸ್ತಿ ಪಡೆದಿರೋ ಸಾಧು, ಸಂಗೀತ ಬಿಟ್ಟು ನಟನಾಗಿಯೇ ಹೆಚ್ಚು ತೊಡಗಿಸಿಕೊಳ್ಳೋದೇಕೆ..? ಈ ಪ್ರಶ್ನೆಗೆ ಸಾಧು ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ.

  ಸಂಗೀತ ನೀಡುವುದು ಮನಸ್ಸಿಗೆ ತೃಪ್ತಿ ಕೊಡುತ್ತದೆ ನಿಜ. ಆದರೆ, ಅಲ್ಲಿ ದುಡ್ಡಿಲ್ಲ. ಹೆಸರು ಸಿಗುತ್ತೆ. ಮನಸ್ಸಿಗೆ ತೃಪ್ತಿ ಸಿಗುತ್ತೆ. ದುಡ್ಡು ಸಿಗುವುದು ನಟನೆಯಲ್ಲಿ. ಜೀವನಕ್ಕಾಗಿ ನಟಿಸುತ್ತೇನೆ. ತೃಪ್ತಿಗಾಗಿ ಆಗಾಗ್ಗೆ ಸಂಗೀತ ನಿರ್ದೇಶನ ಮಾಡುತ್ತೇನೆ' ಎಂದಿದ್ದಾರೆ ಸಾಧು.

 • ಸಾಧು ಕೋಕಿಲ ನನ್ನ ಗುರು - ಎಸ್‍ಪಿ ಬಾಲಸುಬ್ರಹ್ಮಣ್ಯಂ

  spb inaugurates sadhu kokila's loop studios

  ಸಂಗೀತ ನಿರ್ದೇಶಕ ಸಾಧು ಕೋಕಿಲಾಗೆ ಗುರುವಿನ ಸ್ಥಾನ ನೀಡಿದ್ದಾರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ. ಸಾಧುಗೆ ಈ ಗೌರವ ನೀಡಿದ್ದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಸಾಧು ಅವರಷ್ಟೇ ಅಲ್ಲ, ನನಗೆ ಹಾಡಲು ಅವಕಾಶ ನೀಡುವ ಪ್ರತಿಯೊಬ್ಬ ಸಂಗೀತ ನಿರ್ದೇಶಕರೂ ನನಗೆ ಗುರುಗಳೇ. ನಾನು ಹೇಗೆ ಹಾಡಬೇಕು ಎನ್ನುವುದನ್ನು ನನಗೆ ಮೊದಲು ಹೇಳಿಕೊಡುವುದೇ ಸಂಗೀತ ನಿರ್ದೇಶಕರು. ಹೀಗಾಗಿ ಸಾಧು ಕೋಕಿಲ ಕೂಡಾ ನನಗೆ ಗುರು ಎಂದಿದ್ದಾರೆ ಎಸ್‍ಪಿಬಿ.

  ಸಾಧು ಕೋಕಿಲ ಹೊಸ ಸ್ಟುಡಿಯೋ ಆರಂಭಿಸಿದ್ದು, ಅದನ್ನು ತಮ್ಮ ಅಚ್ಚುಮೆಚ್ಚಿನ ಗಾಯಕ ಎಸ್‍ಪಿಬಿಯವರಿಂದಲೇ ಉದ್ಘಾಟನೆ ಮಾಡಿಸಿದ್ದಾರೆ ಸಾಧು. ಆ ಸ್ಟುಡಿಯೋದಲ್ಲಿ ಗ್ರಾಫಿಕ್ಸ್, ಮ್ಯೂಸಿಕ್, ಡಬ್ಬಿಂಗ್, ರೆಕಾರ್ಡಿಂಗ್ ಎಲ್ಲವೂ ನಡೆಯಲಿದೆ.

 • ಸಾಧು ಕೋಕಿಲ ಮಗ ಈಗ ಸಂಗೀತ ನಿರ್ದೇಶಕ

  surag kokila

  ಸಾಧು ಕೋಕಿಲ ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ಕಲಾವಿದ. ಸಾಧು ತೆರೆ ಮೇಲೆ ಕಾಣಿಸಿದರೆ ಸಾಕು, ಪ್ರೇಕ್ಷಕರ ಮುಖದಲ್ಲೊಂದು ಸಣ್ಣ ನಗೆ ಅರಳುತ್ತೆ. ಆದರೆ, ಸಾಧು ಮೂಲತಃ ನಟರಲ್ಲ. ಅವರ ಮೊದಲ ಆದ್ಯತೆ ಸಂಗೀತ. ಸಂಗೀತ ನಿರ್ದೇಶಕರಾಗಿ ಅತ್ಯುತ್ತಮ ಹಾಡುಗಳನ್ನು ಕೊಟ್ಟಿರುವ ಸಾಧು, ಅದ್ಭುತ ಕಂಠಸಿರಿಯನ್ನೂ ಹೊಂದಿದ್ದಾರೆ. ಬ್ಯಾಕ್‍ಗ್ರೌಂಡ್ ಮ್ಯೂಸಿಕ್‍ನಲ್ಲಂತೂ ಸಾಧು ಎಕ್ಸ್‍ಪರ್ಟ್. ಹಲವು ಹೊಸಬರಿಗೆ ಚಾನ್ಸ್ ಕೊಟ್ಟು ಬೆಳೆಸಿರುವ ಹೆಮ್ಮೆಯೂ ಸಾಧು ಅವರಿಗೆ ಇದೆ. 

  ಹೀಗೆ ನಟನೆ, ಸಂಗೀತದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸಾಧು, ಈಗ ಇನ್ನೊಂದು ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಆತ ಬೇರ್ಯಾರೂ ಅಲ್ಲ. ಅವರ ಪುತ್ರ ಸುರಾಗ್.

  ಮಹೇಶ್ ಬಾಬು ನಿರ್ದೇಶನದ ಅತಿರಥ ಚಿತ್ರದ ಮೂಲಕ ಸುರಾಗ್ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ವೆಸ್ಟ್ರನ್, ಕ್ಲಾಸಿಕ್ ಮ್ಯೂಸಿಕ್ ಎರಡನ್ನೂ ಕಲಿತಿರುವ ಸುರಾಗ್, ತಂದೆಯ ಗರಡಿಯಲ್ಲೂ ಪಳಗಿದ್ದಾರೆ. ಕಿರಗೂರಿನ ಗಯ್ಯಾಳಿಗಳು, ಗೋಲಿಸೋಡ ಸೇರಿದಂತೆ ಹಲವಾರು ಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನು ಪ್ರೋಗ್ರಾಮಿಂಗ್ ಮಾಡಿದ ಅನುಭವೂ ಇದೆ.

  ಎಲ್ಲ ನಿರೀಕ್ಷೆಯಂತೆಯೇ ನಡೆದು ಹೋಗಿದ್ದರೆ, ಗಡಿಯಾರ ಚಿತ್ರಕ್ಕೇ ಸಂಗೀತ ನಿರ್ದೇಶಕರಾಗಬೇಕಿತ್ತು ಸುರಾಗ್. ಏನೇನೋ ಕಾರಣಗಳಿಂದ ಚಿತ್ರ ಅರ್ಧಕ್ಕೆ ನಿಂತು ಹೋಗಿ, ಈಗ ಅತಿರಥದ ಮೂಲಕ ಸಂಗೀತ ನಿರ್ದೇಶನದ ಲೋಕಕ್ಕೆ ಕಾಲಿಡುತ್ತಿದ್ದಾರೆ ಸುರಾಗ್. ಶುಭವಾಗಲಿ.

 • ಸಾಧು ಕೋಕಿಲಾ.. ಜಾನಿ ಲೀವರ್ ಒಟ್ಟಿಗೇ ಬಂದರು..!

  johnny lever and sadhu kokila image

  ಸಾಧು ಕೋಕಿಲಾ, ಕನ್ನಡದ ಹಾಸ್ಯನಟ. ಜಾನಿ ಲೀವರ್ ಬಾಲಿವುಡ್‍ನ ಹಾಸ್ಯನಟ. ಕೆಲವು ಹಂತದಲ್ಲಿ ಸಾಧು ಅವರನ್ನು ಕನ್ನಡದ ಜಾನಿ ಲೀವರ್ ಎಂದು ಕರೆಯುವವರಿಗೂ ಕೊರತೆಯಿಲ್ಲ. ಈಗ ಅವರಿಬ್ಬರೂ ಒಂದಾಗಿದ್ದಾರೆ. ಒಂದೇ ಚಿತ್ರದಲ್ಲಿ ಒಟ್ಟಿಗೇ ಅಣ್ಣತಮ್ಮಂದಿರಾಗಿ ನಟಿಸುತ್ತಿದ್ದಾರೆ.

  ಕೆ.ಆರ್. ಮುರಳೀಕೃಷ್ಣ ನಿರ್ದೇಶನದ `ಗರ' ಚಿತ್ರದಲ್ಲಿ ಸಾಧು ಹಾಗೂ ಜಾನಿ ಒಟ್ಟಿಗೇ ನಟಿಸುತ್ತಿದ್ದಾರೆ. ಅಣ್ಣತಮ್ಮಂದಿರ ಪಾತ್ರದಲ್ಲಿ ನಟಿಸುತ್ತಿರುವ ಇಬ್ಬರಿಗೂ ಒಂದೇ ರೀತಿಯ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ.

  ನಿರ್ದೇಶಕ ಮುರಳೀಕೃಷ್ಣ, ನಿರ್ದೇಶಕ ಶಾಂತಾರಾಮ್ ಅವರ ಪುತ್ರ. ಚಿತ್ರದಲ್ಲಿ ಆವಂತಿಕಾ ಮೋಹನ್, ಆರ್ಯನ್, ನ್ಯೂಸ್ ಆ್ಯಂಕರ್ ಆಗಿದ್ದ ರೆಹಮಾನ್ ಮೊದಲಾದವರು ನಟಿಸುತ್ತಿದ್ದಾರೆ.

 • ಸಾಧು ಮಹರಾಜ್‍ರನ್ನ.. ಸಿಂಗ್ ಮಾಡಿದ್ದು ಇವರೇ..

  sadhu kokila is now sadhu singh

  ಸಾಧು ಕೋಕಿಲ.. ಅಭಿಮಾನಿಗಳ ಪಾಲಿಗೆ ಸಾಧು ಮಹರಾಜ್. ಅವರನ್ನೀಗ ಸಿಂಗ್ ಮಾಡಿದ್ದಾರೆ. ಸಾಧು ಕೋಕಿಲ, ಅಮೃತಸರದಲ್ಲಿ ಸೈಕಲ್ ವಾಲಾ ಆಗಿದ್ದಾರೆ. ಏನು.. ಗೋಲ್ಡನ್ ಟೆಂಪಲ್‍ಗೆ ಹೋಗ್ಬೇಕಾ.. ಬನ್ನಿ ಬನ್ನಿ ಅಂತಿದ್ದಾರೆ.

  ಸಾಧು ಕೋಕಿಲರನ್ನ ಸಿಂಗ್ ಮಾಡಿದ್ದು ಬೇರೆ ಯಾರೋ ಅಲ್ಲ, ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್. ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದ್ದು, ಲಂಡನ್‍ನಿಂದ ಇಂಡಿಯಾಗೆ ಬಂದಿದ್ದಾರೆ ನಾಗತಿ. ಬಂದವರೇ.. ಸಾಧುಗೆ ಸಿಂಗ್ ವೇಷ ಹಾಕಿಸಿಬಿಟ್ಟಿದ್ದಾರೆ.

 • ಸಾಧು, ಚಿಕ್ಕಣ್ಣ, ರವಿಶಂಕರ್ ಗೌಡ, ಕುರಿ ಮತ್ತು ಶೃತಿ ಹರಿಹರನ್ ಕಾಮಿಡಿ

  sruthi, chikkana in horror comedy

  ರಘುಪತಿ ರಾಘವ ರಾಜಾರಾಮ್. ಇದು ಹೀರೋಗಳ ಹೆಸರು ಅಷ್ಟೇ ಅಲ್ಲ, ಚಿತ್ರದ ಹೆಸರೂ ಹೌದು. ಚಿತ್ರಕ್ಕೆ ನಾಲ್ವರು ಹೀರೋಗಳು. ಸಾಧುಕೋಕಿಲ ಮಹಾನ್ ಮಹಾನ್ ಕುಡುಕ ಪೂಜಾರಿಯಾಗಿ, ಚಿಕ್ಕಣ್ಣ ಬಾರ್ ಸರ್ವರ್ ಆಗಿ, ರವಿಶಂಕರ್ ಗೌಡ ಎಟಿಎಂ ವಾಚ್‍ಮನ್ ಆಗಿ ಹಾಗೂ ಕುರಿ ಪ್ರತಾಪ್ ಹೇರ್ ಕಟಿಂಗ್ ಮಾಡುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಾಲ್ವರಿಗೂ ಒಬ್ಬಳೇ ನಾಯಕಿ ಶೃತಿ ಹರಿಹರನ್.

  ಶ್ರೀಕಂಠ ಹಾಗೂ ಪಟಾಕಿ ಚಿತ್ರಗಳ ನಂತರ ಮಂಜು ಸ್ವರಾಜ್ ನಿರ್ದೇಶಿಸುತ್ತಿರುವ ಹಾರರ್ ಕಾಮಿಡಿ ಚಿತ್ರವಿದು. ಎಸ್.ವಿ.ಬಾಬು ನಿರ್ಮಾಣದ ಚಿತ್ರ ಈಗಾಗಲೇ ಅರ್ಧ ಶೂಟಿಂಗ್ ಮುಗಿಸಿದೆ. ಭಯ ಬೀಳಿಸುತ್ತಲೇ ನಕ್ಕು ನಲಿಸುವ ಕಥೆ ಚಿತ್ರದಲ್ಲಿದೆಯಂತೆ. 

 • ಸಾಧುಕೋಕಿಲಾ ಪೋಟಾಗ್ಬುಟ್ರಾ..? 

  was sadhu kokila teleported

  ಸಾಧುಕೋಕಿಲಾ, ತೆರೆಯ ಮೇಲೆ ಕಾಮಿಡಿ ಮಾಡ್ತಾರೆ. ಕೀಬೋರ್ಡ್ ಮುಂದೆ ಕುಳಿತರೆ ಅದ್ಭುತ ಸಂಗೀತ ಸಂಯೋಜಿಸ್ತಾರೆ. ಮೈಕು ಹಿಡಿದರೆ, ಅದ್ಭುತವಾಗಿ ಹಾಡುತ್ತಾರೆ. ಅದರಲ್ಲೂ ವಿಷಾದ ಗೀತೆಗಳು ಸಿಕ್ಕಿಬಿಟ್ಟರಂತೂ, ಸಾಧುಗೆ ಸಾಧುವೇ ಸಾಟಿ. ಆದರೆ, ಅವರು ಕೈಗೆ ಸಿಗುವುದೇ ಕಷ್ಟ. ಅಂತಾದ್ದೊಂದು ಪರಿಸ್ಥಿತಿಯಲ್ಲಿ ಈಗ ತೊಳಲಾಡುತ್ತಿರುವುದು ತಾರಕಾಸುರ ಚಿತ್ರತಂಡ.

  ಇತ್ತೀಚೆಗೆ ಸಾಧು, ತಾರಕಾಸುರ ಚಿತ್ರದ ಹಾಡು ಹಾಡಲು ಬಂದಿದ್ದರಂತೆ. ಎರಡು ಸಾಲುಗಳನ್ನು ಅದ್ಭುತವಾಗಿ ಹಾಡಿದರಂತೆ. ಅಷ್ಟೆಲ್ಲ ಆದ ಮೇಲೆ ಈಗ್ ಬಂದೆ, ಅರ್ಧ ಗಂಟೆಯಲ್ಲಿ ವಾಪಸ್ ಬರ್ತೀನಿ ಎಂದು ಹೋದವರು, ಕಾಣೆಯಾಗಿಬಿಟ್ಟಿದ್ದಾರೆ. ಎಲ್ಲಿ ಹೋದರು ಎಂದು ಹುಡುಕಿದವರಿಗೆ ಸಾಧು ಕಾಣಿಸಿಕೊಂಡಿರೋದು ಕಾಂಗ್ರೆಸ್ ಪ್ರಚಾರ ಯಾತ್ರೆಯಲ್ಲಿ. 

  ಇದನ್ನು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಟ್ವಿಟರ್‍ನಲ್ಲಿ ಬಹಿರಂಗಪಡಿಸಿ, ಸಾಧು ಕಂಡರೆ ನಮ್ಮಲ್ಲಿಗೆ ಕರೆತನ್ನಿ ಎಂದು ಕೇಳಿಕೊಂಡಿದ್ದಾರೆ. ರಥಾವರ ಚಿತ್ರದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಾಕಾಸುರ ಚಿತ್ರಕ್ಕೆ ವೈಭವ್ ನಾಯಕ. ಧರ್ಮ ವಿಶ್ ಸಂಗೀತವಿರುವ ಚಿತ್ರದ ಹಾಡಿಗೆ ಧ್ವನಿಯಾಗಬೇಕಿದ್ದ ಸಾಧು, ಈಗ ಪಲ್ಲವಿಯನ್ನಷ್ಟೇ ಹಾಡಿ, ಚರಣ ಹಾಡದೆ ಪೋಟಾಗ್ಬುಟ್ಟವ್ರೆ.

  ಅಂದಹಾಗೆ ಈ ಪೋಟ್ ಆಗ್ಬುಟ್ರಾ ಅನ್ನೋ ಪದ ಇದ್ಯಲ್ಲ, ಅದು ಯಾರೇ ನೀನು ಚೆಲುವೆಯಲ್ಲಿ ಅವರಿಂದಲೇ ಫೇಮಸ್ ಆದ ಪದ.

 • ಸೆಕ್ಸ್​ ಸ್ಕ್ಯಾಂಡಲ್​ನಲ್ಲಿ ಮಂಡ್ಯ ರಮೇಶ್, ಸಾಧು ಕೋಕಿಲಾ ಹೆಸರು..!

  sadhu kokila, mandya ramesh in sex scandal

  ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಮಸಾಜ್ ಪಾರ್ಲರೊಂದರಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಯುವತಿಯೊಬ್ಬರನ್ನು ರಕ್ಷಿಸಿತ್ತು. ಆಕೆ ಪೊಲೀಸರ ಎದುರು ಸ್ಫೋಟಕ ಮಾಹಿತಿ ಹೊರಹಾಕಿದ್ದಳು. ಅದು ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಚಿತ್ರರಂಗದ ಇಬ್ಬರು ಖ್ಯಾತ ನಟರು ಕೂಡಾ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದರ. ಆ ನಟರು ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

  ಆ ಹುಡುಗಿ ಬಾಯ್ಬಿಟ್ಟಿರುವುದು ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಹೆಸರು. ಮೈಸೂರು ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿರುವ ಯುವತಿ, ಮಸಾಜ್ ಪಾರ್ಲರ್​ಗೆ ಈ ಇಬ್ಬರೂ ಚಿತ್ರನಟರು ಆಗಾಗ್ಗೆ ಬರುತ್ತಿದ್ದರು. ಮಸಾಜ್ ನೆಪದಲ್ಲಿ  ಎರಡು ಬಾರಿ ಭೇಟಿ ನೀಡಿದ್ದ ಇಬ್ಬರೂ ಚಿತ್ರನಟರು ತಮ್ಮ ಗುಪ್ತಾಂಗಗಳನ್ನು ಮುಟ್ಟುವಂತೆ ಒತ್ತಾಯಿಸುತ್ತಿದ್ದರು. ಹಾಗೆ ಮಾಡಿದರೆ ಅವರು ನನ್ನ‌ ಗುಪ್ತಾಂಗ‌ ಮುಟ್ಟುತ್ತಿದ್ದರು ಎಂದೆಲ್ಲ ದೂರು ಕೊಟ್ಟಿದ್ದಾರೆ.

  ಸದ್ಯಕ್ಕೆ ಈ ಕುರಿತು ಸ್ಪಷ್ಟನೆ ನೀಡಿರುವ ಮಂಡ್ಯ ರಮೇಶ್, ತಾನು ಅಂತಹ ವ್ಯಕ್ತಿ ಅಲ್ಲ. ಆ ಮಸಾಜ್ ಪಾರ್ಲರ್​ ಉದ್ಘಾಟನೆಗೆ ಹೋಗಿದ್ದುದು ನಿಜ. ಒಮ್ಮೆ ಮಸಾಜ್ ಮಾಡಿಸಿಕೊಂಡಿರುವುದು ಕೂಡಾ ನಿಜ. ಆದರೆ, ತಾವು ಆ ರೀತಿ ವರ್ತಿಸಿಲ್ಲ. ನನಗೆ ಆ ಯುವತಿ ಯಾರೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ. ಆ ಯುವತಿಯನ್ನು ರಕ್ಷಿಸಿದ ಒಡನಾಡಿ ಸಂಸ್ಥೆಗೆ ಧನ್ಯವಾದವನ್ನೂ ತಿಳಿಸಿದ್ದಾರೆ.

 • ಹಕುನಾ ಮಟಾಟಾ.. ಹಕುನಾ ಮಟಾಟಾ..

  shivarjun song specialty

  ಕೆಮ್ ಬಂದ್ರೆ ಕೆಮ್‍ಬೇಕು.. ಕೋಲ್ಡ್ ಆದ್ರೆ ಸೀನ್ಬೇಕು..

  ಅದು ಬೇಕು.. ಇದು ಬೇಕು.. ಇಷ್ಟೇನೇ ಈ ಬದುಕು..

  ಹಂಗಾದ್ರೆ ಬದುಕೋಕೆ ಏನ್ ಬೇಕು..

  ಒಂದ್ ತಟ್ಟೆ.. ಒಂದ್ ಚೊಂಬು..

  ಒಂದ್ ಚಾಪೆ.. ಒಂದ್ ದಿಂಬು..

  ಒಂದ್ ಮುದ್ದೆ.. ಒಂದ್ ನಿದ್ದೆ..

  ಒಂದ್ ಗೂಡು.. ಒಂದ್ ಹಾಡು..

  ಇಷ್ಟೆಲ್ಲ ವೇದಾಂತದ ಸಾಹಿತ್ಯ ಬರೆದಿರುವುದು ನಾಗೇಂದ್ರ ಪ್ರಸಾದ್. ಹಾಡಿಗೆ ಭರ್ಜರಿ ಮ್ಯೂಸಿಕ್ ಕೊಟ್ಟಿರೋದು ಸಾಧು ಕೋಕಿಲ ಪುತ್ರ ಸುರಾಗ್ ಕೋಕಿಲ. ಶಿವತೇಜಸ್ ನಿರ್ದೇಶನದ ಶಿವಾರ್ಜುನ ಚಿತ್ರದ ಹಾಡಿದು. ಹಕುನಾ ಮಟಾಟಾ ಸಾಂಗ್ ಎಂದೇ ಫೇಮಸ್ ಆಗಿರೋ ಹಾಡು ಸಿಕ್ಕಾಪಟ್ಟೆ ಹಿಟ್ಟು.

  ಚಿರಂಜೀವಿ ಸರ್ಜಾ, ಅಮೃತಾ ಅಯ್ಯಂಗಾರ್, ಸಾಧುಕೋಕಿಲ, ತಾರಾ, ಕಿಶೋರ್ ನಟಿಸಿರುವ ಚಿತ್ರ ಮಾರ್ಚ್ ತಿಂಗಳಲ್ಲಿಯೇ ರಿಲೀಸ್ ಆಗುತ್ತಿದೆ. ಎಂ.ಬಿ.ಮಂಜುಳಾ ನಿರ್ಮಾಣದ ಶಿವಾರ್ಜುನ ಚಿತ್ರ, ಚೆಂದದ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery