` sadhu kokila - chitraloka.com | Kannada Movie News, Reviews | Image

sadhu kokila

  • 'Mane Maratakkide' Trailer Released

    mane maratakkide trailer released

    S V Babu's new productional venture 'Mane Maratakkide' is all set to release across Karnataka on the 15th of November. Meanwhile, the trailer of the film was released on the D Beats channel of You Tube on Saturday.

    'Mane Maratakkide' stars  Sadhu Kokila, Ravishankar Gowda, Kuri Pratap and Chikkanna in prominent roles and they play the role of Raghupathi, Raghava, Raja and Ram in the film. Apart from the four, Shurthi Hariharan, Shivaramanna, Giri and others also has important roles.

    'Mane Maratakkide' is directed by Manju Swaraj. Manju's last film was 'Pataki' for S V Babu. Now both S V Babu and Manju Swaraj are back with 'Mane Maratakkide'. Abhiman Roy is the music director, while S V Babu is the cinematographer

  • Athiratha Audio On August 15

    suraj in athiratha

    The audio of Athiratha, starring Chetan Ahimsa and directed by Mahesh Babu is releasing on August 15. The guest list is being finalized and based on that the date of the audio launch is being planned.

    As of now, the plan is to release it on August 15. Sadhu Kokila's son Suraag is finally making a debut with this film. It was announced twice earlier that Suraag was making his debut but both the times the film projects were dropped. This time however, everything has fallen in place and Suraag's debut is confirmed.

    The film has camerawork by Jai Anand. After 60 days of shooting the film's dubbing is in process. Sources say that the film will be released in September but the final date is not yet finalized

  • Father - Son Duo Musical For Shivarjuna

    suraag, sadhu kokila image

    A father directing his own son/daughter or father/mother acting alongside their own son/daughter in a same movie is not a new thing in the film industry, but a father and his son, both working as music director in a movie is a first of its kind in the Kannada film industry.

    Well, Shivarjuna film starring Chiranjeevi Sarja in the lead is a witness to one such phenomena wherein the versatile composer Sadhu Kokila has scored the music for the film while his son Suraag has done the background score for it. Suraag has already made his debut as an independent composer for the film Athiratha.

    The film is directed by Shiva Tejas who had previously done Dhairyam. Produced by Manjula Shivarjuna, the film features Chiranjeevi Sarja, Akshata, Amrutha, Avinash, Kuri Prathap, Sadhu Kokila, Thara and others are in the lead.

  • Mastigudi Songs On Feb 24th

    duniya viji image

    The trailer of  Vijay starrer 'Mastigudi' was released on the occasion of Vijay's birthday. Now the songs of the film is all set to be released on the 24th of this month.

    The shooting for 'Mastigudi' is complete and even the dubbing is concluded. Vasishta Simha and Madhu Guruswamy has dubbed for Anil and Uday respectively. With the post production almost complete the film is likely to be released in the month of March.

    'Mastigudi' is based on a real incident which occurred in Biligiri Rangana Thittu in the 90s. The film stars Vijay, Amulya, Kriti Kharabanda, Rangayana Raghu, Devaraj, Suhasini, B Jayasri and others in prominent roles. Satya Hegade is the cameraman, while Sadhu Kokila is the music director.

    Mastigudi Movie Gallery - View

    Related Articles :-

    Mastigudi Trailer Released For Vijay's Birthday

    Mastigudi Team Pressmeet Today At KFCC

    Mastigudi Producer Finally Gets Bail

    Mastigudi Manager Bharath Gets Bail

    KFCC Support To Mastigudi Producer

    No Work For Three Mastigudi Person's Till Further Orders

    Accidents During Shooting not Uncommon – But Mastigudi Is Negligence - KM Veeresh Writes

    Duniya Vijay Safe - Fatal Accident During Mastigudi Shooting

    Kriti Injured; Mastigudi Shooting Postponed

    Amulya Selected Heroine For Mastigudi

    Nagashekhar Vows to Complete Mastigudi by June

    Mastigudi to be Launched in Kanteerava Studio

    Mastigudi to be Launched on January 29th

  • Sadhu Kokila To Campaign This Election

    sadhu kokila to campaign in elections

    Comedy star of Sandalwood Sadhu Kokila will campaign in the upcoming Assembly election. He has made this promise to DK Shivarajkumar the Congress minister. However Sadhu will not contest the election.

    This development comes on the same day that Malashree also decided to join politics through Congress. For a long time BJP was preferred by most actors joining politics. Malashree and Sadhu are however bucking the trend. Sadhu is a popular composer and director apart from an actor in Sandalwood.

    Sources confirmed that he will be only a campaigner in the election and will not take to electrol politics.

     

  • Sadhu Kokila's Car Driver Arrested

    sadhu kokila's driver arrested

    Sandalwood's popular comedy actor-director and composer Sadhu Kokila suffered a theft on April 24. The police have now solved the case and found that his car driver Vijaykumar was the culprit. On April 24, a laptop, Rs 1.5 lakh and $300 american dollars was stolen from Sadhu's car when he was visiting his sister in Chandra Layout.

    He had filed a police complaint. The police investigated the matter and found that Vijaykumar had stolen it and while Sahdu was inside his sister's house taken the valuables and taken it to his home nearby. He has been arrested now.

    Reports suggest that there had been earlier thefts from Sadhu's car and house but there were small amounts and therefore he had not bothered to file a police complaint.

  • Sadhu Kokila's Mother Mangala No More

    sadhu kokila's mother mangala no more

    Sadhu Kokila's mother Mangala died today. Mangala was a singer and it was due to her influence that Sadhu Kokila his sister Usha and brother Layendra are in the entertainment industry. While Layendra is an actor Usha is a singer.

    Sadhu, apart from acting and direction is a well known composer too. All these came from the influence of Mangala who taught them music from a very young age. Usha announed the death of their mother today.

    Mangala was a playback singer and from Bangalore where she married Natesh who was a violin player in the police band. The couple have three children including Sadhu.

  • Sadhu's Son Finally Makes Debut

    sadhu's son finally makes debut

    Sadhu Kokila's son Suraag will finally make his debut as a music composer with the film Mareyuva Munna. The film is directed by Preetham Gubbi and produced by Hombale Films. The film will star Prithvi who is making his debut in Naanu Mattu Varalakshmi.

    Suraag is 21 years old and was to make his deubt when he was a teenager. In 2013, director Nagashekar had roped him for the film Gadiyara. But the project did not take off. Three years later, Suraag is making his debut finally. Suraag has learnt music from his father and also studied classical music since he was a child.

    He started music lessons with the piano. He is also part of a band. Mareyuva Munna is a complete romantic film and Suraag will be one of the youngest music composers in Sandalwood ever. 

  • SPB Inaugurates Sadhu Kokila's 'Loop' Studio

    spb inauurates sadhu kokila's loop studio

    Legendary playback singer, composer, actor and producer S P Balasubramanyam, fondly referred to as SPB, inaugurated the brand new digital studio 'Loop' owned by composer, singer, director and actor Sadhu Kokila.

    The singer who has sung more than 40000 songs in various genres urged Sadhu Kokila to compose more numbers than just limit himself to acting. He also said that he is like a student and obeys whatever the directors asks him to do so.

    Sadhu Kokila recollected his association with the legendary singer, adding that his new studio is built-in with  the advanced digital technology for all kinds of editing, recording and other purposes.

  • Sudeep, Sadhu Kokila in New Ad

    sudeep, sadhu kokila image

    In the last couple of years Kannada film stars are seen more and more in television advertisements. Unlike few years ago when it was dominated by Hindi, Tamil and Telugu stars, now Kannada actors are not far behind.

    Sudeep is leading in this aspect promoting about 10 different products. Puneeth and Shivanna are stars who are also promoting multiple brands. Now both Sudeep and Sadhu Kokila are seen in the advertisement for OLX online used products market.

  • ಅಂಡರ್‍ವಲ್ರ್ಡ್ ಕನೆಕ್ಷನ್.. ಸಾಧು ಕೋಕಿಲಾ ಹೇಳಿದ್ದೇನು..?

    sadhu kokila clarifies about his underworld link

    ಕನ್ನಡ ಚಿತ್ರರಂಗದ ಕಾಮಿಡಿ ನಟ, ಸಂಗೀತ ನಿರ್ದೇಶಕ, ನಿರ್ದೇಶಕ, ನಿರ್ಮಾಪಕ ಸಾಧುಕೋಕಿಲಾಗೆ ಅಂಡರ್‍ವಲ್ರ್ಡ್ ಕನೆಕ್ಷನ್ ಇದೆಯಾ..? ಇತ್ತೀಚೆಗೆ ಅರೆಸ್ಟ್ ಆಗಿರುವ ಸೈಕಲ್ ರವಿ ಎಂಬ ಭೂಗತ ಪಾತಕಿಯ ಜೊತೆ ಸಾಧು ಕೋಕಿಲಾ ಸಂಬಂಧ ಇಟ್ಟುಕೊಂಡಿದ್ದಾರಾ..? ಸಾಧು ಅವರಿಗೆ ಹಲವಾರು ಬೇನಾಮಿ ಆಸ್ತಿಗಳನ್ನು ಸೈಕಲ್ ರವಿ ಮಾಡಿಸಿಕೊಂಡಿದ್ದಾನಂತೆ  ಎಂಬಂತಹ ಸುದ್ದಿಗಳು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಹರಿದಾಡಿದ್ದವು. ಸುದ್ದಿ ಹೊರಬಿದ್ದ ತಕ್ಷಣ ಸಾಧು ಕೋಕಿಲ, ತಾವೇ ನೇರವಾಗಿ ಸಿಸಿಬಿ ಪೊಲೀಸರ ಬಳಿ ಹೋದರು. ಪೊಲೀಸರು ಕರೆಯುವ ಮುನ್ನವೇ ಪೊಲೀಸರನ್ನು ಭೇಟಿ ಮಾಡಿ, ವಿಷಯ ತಿಳಿದುಕೊಂಡು ಈಗ ಅಭಿಮಾನಿಗಳಿಗೆ ಸಂದೇಶ ಕೊಟ್ಟಿದ್ದಾರೆ. 

    ನಾನು ಪೊಲೀಸರ ಬಳಿಯೂ ಕೇಳಿದ್ದೇನೆ. ನನಗೂ ಸೈಕಲ್ ರವಿಗೂ ಯಾವ ಸಂಬಂಧವೂ ಇಲ್ಲ. ಅವನಷ್ಟೇ ಅಲ್ಲ, ಭೂಗತ ಜಗತ್ತಿನ ಯಾರೊಬ್ಬರ ಬಳಿಯೂ ನಾನು ಸಂಬಂಧ ಇಟ್ಟುಕೊಂಡಿಲ್ಲ. ನನಗೆ ಬೇನಾಮಿ ಆಸ್ತಿಗಳೂ ಇಲ್ಲ. ಸೈಕಲ್ ರವಿ ಯಾರೆಂದು ಗೊತ್ತಿಲ್ಲ. ಪೊಲೀಸರ ಬಳಿಯೂ ನನ್ನ ಹೆಸರು ಪ್ರಸ್ತಾಪವಾಗಿಲ್ಲ. ಹೀಗಿರುವಾಗ ಈ ಸುದ್ದಿ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ. ನಾನು ತಪ್ಪು ಮಾಡಿಲ್ಲ. ಮಾಡುವುದೂ ಇಲ್ಲ ಎಂದಿದ್ದಾರೆ ಸಾಧು.

  • ಅತಿರಥನ ಬಗ್ಗೆ ಸಾಧುಗೇ ಜಾಸ್ತಿ ಟೆನ್ಷನ್..ಯಾಕೆ..?

    athiratha movie

    ಅತಿರಥ, ಚೇತನ್ ಅಭಿನಯದ ಮಹೇಶ್ ಬಾಬು ನಿರ್ದೇಶನದ ಈ ಚಿತ್ರಕ್ಕೆ ಮಹೇಶ್ ಬಾಬು ನಿರ್ದೇಶಕ. ಪ್ರೇಮ್, ಡಾ.ವೇಣು ಗೋಪಾಲ್, ಗಂಡಸಿ ಮಂಜುನಾಥ್ ನಿರ್ಮಾಪಕರು. ಆದರೆ, ಚಿತ್ರದ ಬಗ್ಗೆ ಎಲ್ಲರಿಗಿಂತ ಹೆಚ್ಚು ಟೆನ್ಷನ್ ಸಾಧು ಕೋಕಿಲ ಅವರಿಗೆ ಇದೆ.

    ಚಿತ್ರದಲ್ಲಿ ಸಾಧು ಅವರದ್ದು ಪುಟ್ಟ ಪಾತ್ರ. ಅದು ಕಾಮಿಡಿ ಎಂದು ಬೇರೆ ಹೇಳಬೇಕಿಲ್ಲ. ಆದರೂ ಅವರಿಗೆ ಚಿತ್ರ ಸಕ್ಸಸ್ ಆಗಬೇಕೆಂಬ ಟೆನ್ಷನ್ ಇದೆ. ಅದಕ್ಕೆ ಕಾರಣ, ಅವರ ಮಗ ಸುರಾಗ್.

    ಅತಿರಥ ಚಿತ್ರ ಸುರಾಗ್ ಸಂಗೀತ ನೀಡಿರುವ ಮೊದಲ ಚಿತ್ರ. ಹೀಗಾಗಿ ಮಗನ ಸಂಗೀತ ನಿರ್ದೇಶನದ ಮೊದಲ ಚಿತ್ರದ ಕುರಿತು ಸಹಜವಾಗಿಯೇ ತಂದೆಯಾಗಿ ಸಾಧುಕೋಕಿಲ ಅವರಿಗೆ ಆತಂಕ ಇದ್ದೇ ಇದೆ. ಅಂದಹಾಗೆ ಅತಿರಥ ಎಂದರೆ, ಏಕಕಾಲದಲ್ಲಿ 60 ಸಾವಿರ ಸೈನಿಕರನ್ನು ಎದುರಿಸುವ ಮಹಾವೀರ ಎಂದರ್ಥ. 

     

  • ಅಪ್ಪನ ಮ್ಯೂಸಿಕ್ಕು.. ಮಗ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಕು..

    a unique combination of music in shivarjun

    ಇಲ್ಲಿ ಅಪ್ಪ ಸಾಧು ಕೋಕಿಲ. ಮಗ ಸುರಾಗ್ ಸಾಧು ಕೋಕಿಲ. ಇವರಿಬ್ಬರೂ ಒಟ್ಟಿಗೇ ಸಂಗೀತ ನೀಡಿರುವ ಚಿತ್ರ ಶಿವಾರ್ಜುನ. ಹೇಳಿ ಕೇಳಿ ಸಾಧುಕೋಕಿಲ ಅವರದು ಸಂಗೀತ ಕುಟುಂಬ. ಈಗ ಆ ಸಂಗೀತ ಕುಟುಂಬದಿಂದ ಅವರ ಪುತ್ರ ಕೂಡ ಗಾಂಧಿನಗರಕ್ಕೆ ಕಾಲಿಟ್ಟಾಗಿದೆ. ಈಗಾಗಲೇ ಅತಿರಥ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿದ್ದ ಸುರಾಗ್, ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಅಪ್ಪ-ಮಗನ ಜುಗಲ್ ಬಂದಿ ಈ ಚಿತ್ರದ ಪ್ರಮುಖ ಆಕರ್ಷಣೆ.

    ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿರ್ಮಿಸಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ ಸಿನಿಮಾ ಶಿವಾರ್ಜುನ. ಚಿರಂಜೀವಿ ಸರ್ಜಾ ಜೊತೆ ಅಮೃತ, ಅಕ್ಷತ, ತಾರಾ, ಅವಿನಾಶ್, ಕುರಿ ಪ್ರತಾಪ್, ಸಾಧುಕೋಕಿಲ,  ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಮುಂತಾದವರು ನಟಿಸಿದ್ದಾರೆ. ಧೈರ್ಯಂ ಚಿತ್ರದ ಮೂಲಕ ಗಮನ ಸೆಳೆದಿದ್ದ ಶಿವತೇಜಸ್ ಈ ಚಿತ್ರಕ್ಕೆ ನಿರ್ದೇಶಕ.

  • ಒಂದೇ ಚಿತ್ರ.. 17 ಪಾತ್ರ.. ಸಾಧು ಮಹಾರಾಜ್ ದಾಖಲೆ

    sadhu kokila in limca book of record race

    ಒಂದೇ ಚಿತ್ರದಲ್ಲಿ 10 ಪಾತ್ರಗಳಲ್ಲಿ ನಟಿಸಿರುವ ಕಮಲ್‍ಹಾಸನ್ ಚಿತ್ರ ದಶಾವತಾರಂ ನೋಡಿದ್ದೀರಿ. 9 ಪಾತ್ರಗಳಲ್ಲಿ ನಟಿಸಿರುವ ಜಗ್ಗೇಶ್ ಅವರ ಈಶ್ವರ್ ನೋಡಿದ್ದೀರಿ. ಇದು ಅದನ್ನೂ ಮೀರಿಸಿದ ದಾಖಲೆ, ಒಂದೇ ಚಿತ್ರದಲ್ಲಿ 17 ಪಾತ್ರ. ಈ ದಾಖಲೆ ಬರೆಯುತ್ತಿರುವುದು ಸಾಧು ಕೋಕಿಲ.

    ಮುಗಿಲ್ ಪೇಟೆ ಚಿತ್ರದಲ್ಲಿ ಸಾಧು ಈ ದಾಖಲೆ ಬರೆಯುತ್ತಿದ್ದಾರೆ. ಇದು ಲಿಮ್ಕಾ ದಾಖಲೆ ಪುಟಗಳನ್ನು ಸೇರಲಿದೆ. ಸದ್ಯಕ್ಕೆ ಈ ದಾಖಲೆ ಕನ್ನಡದವರೇ ಆದ ಹರೀಶ್ ರಾಜ್ ಹೆಸರಲ್ಲಿದೆ. ಹರೀಶ್ ರಾಜ್ ತಮ್ಮದೇ ನಿರ್ದೇಶನ, ನಿರ್ಮಾಣದ ಶ್ರೀ ಸತ್ಯನಾರಾಯಣ ಚಿತ್ರದಲ್ಲಿ 16 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

    ಮುಗಿಲ್‍ಪೇಟೆ ಚಿತ್ರಕ್ಕೆ ಭರತ್ ನಿರ್ದೇಶಕ. ಮನುರಂಜನ್ ರವಿಚಂದ್ರನ್ ಮತ್ತು ಖಯಾದು ಲೋಹರ್ ನಟಿಸಿರುವ ಚಿತ್ರಕ್ಕೆ ರಕ್ಷಾ ವಿಜಯ್‍ಕುಮಾರ್ ನಿರ್ಮಾಪಕರು.

  • ಕಾಂಗ್ರೆಸ್ ಸೇರಿದ ಸಾಧುಕೋಕಿಲ : ಜವಾಬ್ದಾರಿ ಏನು ಗೊತ್ತಾ?

    ಕಾಂಗ್ರೆಸ್ ಸೇರಿದ ಸಾಧುಕೋಕಿಲ : ಜವಾಬ್ದಾರಿ ಏನು ಗೊತ್ತಾ?

    ಕನ್ನಡ ಚಿತ್ರರಂಗದ ಕಾಮಿಡಿಯ ಅರಸ.. ಸಂಗೀತದಲ್ಲೂ ಮೋಡಿ ಮಾಡಿದ್ದ, ನಿರ್ದೇಶನದಲ್ಲೂ ಸೌಂಡು ಮಾಡಿದ್ದ ಸಾಧುಕೋಕಿಲ ಇದೀಗ ಅಧಿಕೃತವಾಗಿ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಸಾಧುಕೋಕಿಲ ತಮ್ಮ ರಾಜಕೀಯ ಪ್ರವೇಶವನ್ನು ಮುಚ್ಚಿಟ್ಟಿರಲಿಲ್ಲ. ಕಾಂಗ್ರೆಸ್ ಸೇರಲಿದ್ದಾರೆ ಎನ್ನುವುದು ಗೊತ್ತಿತ್ತು. ಕಾಂಗ್ರೆಸ್‍ನ ಹಲವು ಸಮಾರಂಭಗಳಲ್ಲಿ ಭಾಗವಹಿಸಿದ್ದರು ಕೂಡಾ. ಇದೀಗ ಅಧಿಕೃತವಾಗಿದೆ, ಅಷ್ಟೆ.

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಶಲ್ಯವನ್ನು ಹಾಕಿ ಹಾಗೂ ಹೂಗುಚ್ಛ ನೀಡಿ ಸಾಧುಕೋಕಿಲ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಸಾಧು ಕೋಕಿಲ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

     ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ತಾವುಗಳು ತಕ್ಷಣ ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು, ಕೆಪಿಸಿಸಿಯ ಮಾರ್ಗದರ್ಶನದಲ್ಲಿ ಮತ್ತು ರಾಜ್ಯದ ನಾಯಕರ ಸಹಕಾರದೊಂದಿಗೆ ಸಾಂಸ್ಕೃತಿಕ ಘಟಕದ ಮೂಲಕ ಸಂಘಟನೆಗೆ ಮುಂದಾಗಬೇಕು. ಆ ಮೂಲಕ ಪಕ್ಷದ ಬಲವರ್ಧನೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕೋರಿದೆ. ಈ ದಿಸೆಯಲ್ಲಿ ತಮಗೆ ಹೆಚ್ಚಿನ ಯಶಸ್ಸು ಲಭಿಸಲೆಂದು ಶುಭ ಕೋರುತ್ತೇನೆ ಎಂದು ಕೆಪಿಸಿಸಿ ಆದೇಶ ಪತ್ರದಲ್ಲಿದೆ.

    ಅಂದಹಾಗೆ ಸಾಧುಕೋಕಿಲ ಅವರಿಗೆ ಕೋವಿಡ್ ಕುರಿತಂತೆ ರಾಜ್ಯ ಸರ್ಕಾರ ಮಾಡಿದ ಅನಾಹುತಗಳ ಬಗ್ಗೆ ಡಾಕ್ಯುಮೆಂಟರಿ ಮಾಡಬೇಕಿರುವುದು ಮೊದಲ ಟಾಸ್ಕ್. ಆರಂಭದಲ್ಲಿ ಸಿನಿಮಾ ಮಾಡಲು ಉತ್ಸುಕರಾಗಿದ್ದ ಡಿಕೆ ಶಿವಕುಮಾರ್, ರಾಮ್ ಗೋಪಾಲ್ ವರ್ಮಾ ಅವರನ್ನು ಕಾಂಟ್ಯಾಕ್ಟ್ ಮಾಡಿದ್ದರಂತೆ. ಆದರೆ ವರ್ಮಾ ಅವರ ಬಜೆಟ್ ಕೇಳಿ ಸಿನಿಮ ಮಾಡುವ ಇಂಟ್ರೆಸ್ಟ್ ಕೈಬಿಟ್ಟರಂತೆ. ಆದರೆ ಎಲೆಕ್ಷನ್ ವೇಳೆ ಕೋವಿಡ್ ಕುರಿತು ಜನರಿಗೆ ನೆನಪಿಸುವುದರಿಂದ ಕಾಂಗ್ರೆಸ್ಸಿಗೆ ಲಾಭವಿದೆ ಎಂಬ ಕಾರಣಕ್ಕೆ ಡಾಕ್ಯುಮೆಂಟರಿಗಳನ್ನು ಮಾಡಲು ಸಾಧುಕೋಕಿಲ ಅವರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

  • ಕೊನೆಗೂ ರೊಚ್ಚಿಗೆದ್ದರು ಸಾಧು ಕೋಕಿಲ

    sadhu kokila angered over trolls

    ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ನಿರ್ಮಾಪಕ, ಗಾಯಕ ಸಾಧುಕೋಕಿಲ ಕೊನೆಗೂ ಸಿಟ್ಟುಗೊಂಡಿದ್ದಾರೆ. ಈ ಮೊದಲೆಲ್ಲ ಕೇವಲ ಹೇಳಿಕೆಗಳಲ್ಲಿ ಆಕ್ರೋಶ ತೋರಿಸುತ್ತಿದ್ದ ಸಾಧು ಕೋಕಿಲ, ಈ ಬಾರಿ ರೊಚ್ಚಿಗೆದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಷ್ಟಕ್ಕೂ ಆಗಿರೋದೇನಂತ ನೋಡಿದ್ರೆ..

    ನೀವು ಸೋಷಿಯಲ್ ಮೀಡಿಯಾ ನೋಡ್ತಿದ್ರೆ ಸಾಧು ಕೋಕಿಲ ಅವರ ಹೆಸರಲ್ಲಿ ಟ್ರೋಲ್ ಮಾಡೋದನ್ನು ನೋಡಿರ್ತೀರಿ. ಯಾರನ್ನೋ ಕಿಚಾಯಿಸುವ, ಕಾಲೆಳೆಯುವ, ಉಗಿದು ಉಪ್ಪಾಗುವ ಟ್ರೋಲುಗಳಲ್ಲಿ ಸಾಧು ಕೋಕಿಲ ಫೋಟೋ ಯಥೇಚ್ಛವಾಗಿ ಬಳಕೆಯಾಗುತ್ತಿರುತ್ತವೆ. ತಮ್ಮ ಫೇಮಸ್ ಕಾಮಿಡಿ ಡೈಲಾಗುಗಳನ್ನೇ ತಿರುಗಾಮುರುಗಾ ಬಳಸಿಕೊಂಡು ಟ್ರೋಲ್ ಮಾಡುತ್ತಿರುವುದರ ಬಗ್ಗೆ ಸಾಧು ಈ ಹಿಂದೆ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಟ್ರೋಲ್‍ಗಳು ಕಂಟ್ರೋಲಿಗೆ ಬರದ ಹಿನ್ನೆಲೆಯಲ್ಲಿ ಪೊಲೀಸರ ಮೊರೆ ಹೋಗಿದ್ದಾರೆ ಸಾಧು.

    ಅಷ್ಟೇ ಅಲ್ಲ, ಸಾಧು ಕೋಕಿಲ ಅವರ ಹೆಸರನ್ನು ಬಳಸಿಕೊಂಡು ಪೇಯ್ಡ್ ಜಾಹೀರಾತುಗಳೂ ಪ್ರಕಟವಾಗುತ್ತಿವೆ. ಹೀಗಾಗಿ ಸಾಧು, ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ತಮ್ಮ ಹೆಸರನ್ನು ಸೋಷಿಯಲ್ ಮೀಡಿಯಾಗಳಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿತ್ತಿದ್ದಾರೆ.

  • ಜಾನಿ.. ಜಾನಿ.. ಡಾ. ಹಾಲಪ್ಪ ಏನ್ ಮಾಡ್ತಾರೆ..?

    sadhu kokila as dr halappa

    ಜಾನಿ ಜಾನಿ ಯೆಸ್ ಪಪ್ಪಾ ಚಿತ್ರ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಹೀರೋಯಿನ್ ಡಿಂಪಲ್ ಕ್ವೀನ್ ರಚಿತಾ ರಾಮ್. ಉಳಿದಂತೆ ಚಿತ್ರದಲ್ಲಿರುವುದು ಬಹುತೇಕ ಜಾನಿ ಮೇರಾ ನಾಮ್.. ಪ್ರೀತಿ ಮೇರಾ ಕಾಮ್ ಚಿತ್ರತಂಡ. ಹೀಗಾಗಿಯೇ ನಿರ್ದೇಶಕ ಪ್ರೀತಂ ಗುಬ್ಬಿ, ಈ ಚಿತ್ರದಲ್ಲೂ ಡಾ. ಹಾಲಪ್ಪನವರನ್ನ ಕರೆತಂದಿದ್ದಾರೆ. 

    ಮೇರಾ ನಾಮ್‍ನಂತೆಯೇ ಇಲ್ಲಿಯೂ ಡಾ. ಹಾಲಪ್ಪ ಅಲಿಯಾಸ್ ಸಾಧುಕೋಕಿಲ ಇರ್ತಾರೆ. ಅಲ್ಲಿನಂತೆಯೇ ಇಲ್ಲಿಯೂ ಚಿತ್ರ ವಿಚಿತ್ರವಾಗಿ ರೋಗಿಗಳಿಗೆ ತರಲೆ ಪ್ರಶ್ನೆ ಕೇಳ್ತಾರೆ. ಆದರೆ, ಅಲ್ಲಿ ಒಂದು ಡಿಫರೆನ್ಸ್ ಇದೆ ಅಂತಾರೆ ಪ್ರೀತಮ್.

    ಸಾಧು ಅವರ ಪಾತ್ರಕ್ಕೆ ಡೈಲಾಗ್ ಬರೆಯುವಾಗ ನಿಜಕ್ಕೂ ತಲೆ ಕೆಟ್ಟು ಹೋಗಿತ್ತು. ಫನ್ನಿ ಫನ್ನಿ ಡೈಲಾಗ್‍ಗಳು, ಅಸಂಗತವಾಗಿರುವ ಸಂಭಾಷಣೆ ಬರೆಯೋದು ಅಷ್ಟು ಸುಲಭ ಅಲ್ಲ ಅಂತಾರೆ ಪ್ರೀತಮ್. 

    ಸಾಧು ತೆರೆ ಮೇಲೆ ಕಂಡರೆ ಸಾಕು, ಶಿಳ್ಳೆ ಹೊಡೆಯೋ ಅಭಿಮಾನಿಗಳಿದ್ದಾರೆ. ಇನ್ನು ಈ ಬಾರಿ ದುನಿಯಾ ವಿಜಯ್, ಸಾಧು, ರಂಗಾಯಣ ರಘು ಕಾಂಬಿನೇಷನ್. ಹೊಸ ಪದ್ಮಾವತಿ ಗ್ಲ್ಯಾಮರ್ರು.. ಸಿನಿಮಾವೊಂದು ಪ್ರೇಕ್ಷಕರನ್ನು ಸೆಳೆಯೋಕೆ ಏನೆಲ್ಲ ಇರಬೇಕೋ.. ಅದೆಲ್ಲವೂ ಈ ಸಿನಿಮಾದಲ್ಲಿದೆ. 

  • ಪ್ರೇಮ ಬರಹ ಚಿತ್ರಕ್ಕೆ ಸಾಧು ಕೋಕಿಲ  ಮೆಚ್ಚುಗೆ

    sadhu kokila impressed with prema baraha

    ಪ್ರೇಮ ಬರಹ, ಅರ್ಜುನ್ ಸರ್ಜಾ ನಿರ್ದೇಶನದ, ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಸರ್ಜಾ ಅಭಿನಯದ ಚಿತ್ರ. ಮೇಲ್ನೋಟಕ್ಕೆ ಲವ್‍ಸ್ಟೋರಿ ಎನ್ನಿಸಿದರೂ, ಚಿತ್ರದ ಫೀಲ್ ಬೇರೆಯೇ ಇದೆ. ಖಂಡಿತಾ ಇದು ಮಾಮೂಲಿ ಸಿನಿಮಾ ಅಲ್ಲ. ಇದು ಸಂಗೀತ ನಿರ್ದೇಶಕ ಸಾಧು ಕೋಕಿಲ, ಪ್ರೇಮಬರಹಕ್ಕೆ ನೀಡಿರುವ ಮೆಚ್ಚುಗೆ.

    ಕಾಮಿಡಿಯನ್ ಆಗಿ ಬ್ಯುಸಿಯಾಗಿರುವ ಸಾಧು ಅವರ ಹಿನ್ನೆಲೆ ಸಂಗೀತಕ್ಕೆ ಚಿತ್ರರಂಗದಲ್ಲಿ ತುಂಬಾನೇ ಬೇಡಿಕೆ ಇದೆ. ಅವರು ಕನ್ನಡದ ದಿ ಬೆಸ್ಟ್ ಹಿನ್ನೆಲೆ ಸಂಗೀತ ನಿರ್ದೇಶಕರೂ ಹೌದು. ಅಂಥಾ ಸಂಗೀತ ನಿರ್ದೇಶಕರಿಗೂ ರೀ-ರೆಕಾರ್ಡಿಂಗ್‍ಗೆ ಕುಳಿತ ತಕ್ಷಣ ಇದು ಮಾಮೂಲಿ ಸಿನಿಮಾ ಅಲ್ಲ ಅನ್ನಿಸೋಕೆ ಶುರುವಾಗಿದೆ. ಅದು ಸಾಧು ಅವರ ಕೈಗೆ ಬರುವ ಮುನ್ನ, ಮೂರು ಜನ ಟ್ರೈ ಮಾಡಿ ಬಿಟ್ಟುಹೋಗಿದ್ದ ಸಿನಿಮಾ. ಅದನ್ನು ಚಾಲೆಂಜ್ ಆಗಿಯೇ ಸ್ವೀಕರಿಸಿದ ಸಾಧು, ಪ್ರತಿ ದೃಶ್ಯವನ್ನೂ ಇಷ್ಟಪಟ್ಟು ಸಂಗೀತ ಕೊಟ್ಟಿದ್ದೇನೆ. ಅರ್ಜುನ್ ತಮಗೆ ಸರಿ ಎನ್ನಿಸುವ ತನಕ, ಬಿಡುವುದೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ನಾನು ಹಿನ್ನೆಲೆ ಸಂಗೀತ ನೀಡಿರುವ ಚಿತ್ರಗಳಲ್ಲಿ ಇದು ಒಂದು ಬೆಸ್ಟ್ ಸಿನಿಮಾ ಎಂದಿದ್ದಾರೆ.

    ಅಂದಹಾಗೆ ಚಿತ್ರಕ್ಕೆ ಸಂಗೀತ ನಿರ್ದೇಶನ ಜೆಸ್ಸಿ ಗಿಫ್ಟ್ ಅವರದ್ದು. ಹಿನ್ನೆಲೆ ಸಂಗೀತದ ಹೊಣೆಯಷ್ಟೇ ಸಾಧು ಕೋಕಿಲ ಅವರದ್ದು. ಚಿತ್ರದ ಹಾಡುಗಳು ಜನಪ್ರಿಯವಾಗುತ್ತಿವೆ. ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.

     

  • ಮತ್ತೆ ಹಾಡಿದ ಸಾಧು..!

    sadhu kokila to sing for preethiya rayabari

    ಸಾಧುಕೋಕಿಲ, ಕನ್ನಡ ಚಿತ್ರರಸಿಕರಿಗೆ ಹೆಚ್ಚಾಗಿ ಗೊತ್ತಿರುವುದು ಹಾಸ್ಯ ನಟನಾಗಿ. ಸಂಗೀತ ನಿರ್ದೇಶಕರಾಗಿರುವ, ಇವತ್ತಿಗೂ ಕನ್ನಡ ಚಿತ್ರರಂಗದ ನಂಬರ್ ಒನ್ ಹಿನ್ನೆಲೆ ಸಂಗೀತ ನಿರ್ದೇಶಕ. ಈ ಸಾಧು ಅದ್ಭುತ ಗಾಯಕರೂ ಹೌದು. ಮೆಲೋಡಿಗೆ ಹೇಳಿ ಮಾಡಿಸಿದಂತಹಾ ಧ್ವನಿ ಇರುವ ಸಾಧು, ಹಾಡುವುದು ಮಾತ್ರ ಅಪರೂಪ.

    ಈಗ ಪ್ರೀತಿಯ ರಾಯಭಾರಿ ಚಿತ್ರಕ್ಕೆ ಸಾಧು ಹಾಡಿದ್ದಾರೆ. ಎದೆಗಾರಿಕೆ ಚಿತ್ರದಲ್ಲಿ ಹಾಡಿದ ನಂತರ ಸಾಧು ಹಾಡಿರುವುದು ಈ ಚಿತ್ರಕ್ಕೆ. ದೂರ ದೂರನೇ.. ಎಂದು ಶುರುವಾಗುವ ಹಾಡು, ಸಾಧು ಧ್ವನಿಯಲ್ಲಿ ಇಂಪಾಗಿ ಮೂಡಿ ಬಂದಿದೆ. ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲಿ ಕೂಡಾ ಸಾಧು ಒಬ್ಬರು.

  • ಮಸಾಜ್ ಮಸಾಲಾ - ನಟರ ಬೆಂಬಲಕ್ಕೆ ಜಗ್ಗೇಶ್

    jaggesh supports actors

    ಮೈಸೂರು ಮಸಾಜ್ ಪಾರ್ಲರ್ ಯುವತಿಯ ಆರೋಪದಲ್ಲಿ ನಟ ಜಗ್ಗೇಶ್, ಸಹನಟರ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಸುಳ್ಳು ಅಪಾದನೆ.ಕಾನೂನು ದುರ್ಬಳಕೆ ಕೆಲವರಿಂದ ಹೆಚ್ಚಾಗುತ್ತಿದೆ. ನಾನು ಯಾರ ಪರವೂ ಇಲ್ಲ. ಇಂಥ ಸಮಯದಲ್ಲಿ ಕಾನೂನು.ಪೋಲಿಸ್ ಇಲಾಖೆಯ ಪ್ರಾಮಾಣಿಕ ಯತ್ನದಿಂದ ಸತ್ಯಹೊರ ಬರಬೇಕು. ಪ್ರಕರಣ ಸುಳ್ಳಾದರೆ ಸಮಯಸಾಧಕರ ಮೇಲೆ ಕಠಿಣಕ್ರಮ ತೆಗೆದುಕೊಳ್ಳಬೇಕು ಯಾವುದೇ ತಾರತಮ್ಯ ಬೇಡ. ಇದು ಮರ್ಯಾದೆ ಪ್ರಶ್ನೆ ಎಂದಿದ್ದಾರೆ ಜಗ್ಗೇಶ್.

    ಮಂಡ್ಯ ರಮೇಶ್ ಮೇಲಿನ ಆಪಾದನೆ ನೋಡಿ ಧಿಗ್ಭ್ರಾಂತಿಯಾಯಿತು. ನಾನು ಕಂಡಂತೆ ರಮೇಶ್ ಸಭ್ಯಸ್ಥ. ಪಾಪ ತುಂಬಾ ಸಂಕಟವಾಯಿತು. ಪೊಲೀಸರು ಸಮರ್ಪಕವಾಗಿ ವಿಚಾರಣೆ ಮಾಡಿ ರಮೇಶ್ ಅವರ ಗೌರವ ಉಳಿಸಬೇಕು ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ ಜಗ್ಗೇಶ್.

    ಒಂದು ಕೆಟ್ಟ ಮಾತನ್ನೂ ಆಡದ ಮಂಡ್ಯ ರಮೇಶ್, ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದ ನಡೆದುಕೊಳ್ಳುವ ವ್ಯಕ್ತಿ. ಅವರ ಮೇಲೆ ಇಂಥಾ ಆರೋಪ ಬರಬಾರದಿತ್ತು ಎನ್ನು