` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive

ಇದು ಸಿನಿಮಾ ನಿರ್ಮಾಪಕನೊಬ್ಬನ ಕಥೆ. ಹೆಸರು ಮಂಜುನಾಥ್. ಈತ ರಾಜಾಜಿನಗರದ ರಿಯಲ್ ಎಸ್ಟೇಟ್ ಉದ್ಯಮಿ. ಸೈಟು, ಫ್ಲಾಟುಗಳನ್ನು ಸೇಲ್ ಮಾಡುತ್ತೇನೆ ಎಂದು ಕಂಪೆನಿ ನಡೆಸುತ್ತಿದ್ದ. ಇತ್ತೀಚೆಗೆ ಈತ ಸೈಟುಗಳ ಮಾರಾಟದ ಜಾಹೀರಾತು ಕೊಟ್ಟಿದ್ದ. ಅದನ್ನು ನೋಡಿ ಪುಷ್ಪಕುಮಾರ್ ಎಂಬ ವ್ಯಕ್ತಿ ಸಂಪರ್ಕಕ್ಕೆ ಬಂದಿದ್ದ. ಮಾರುಕಟ್ಟೆ ಬೆಲೆಗಿಂತ ಕಡಿಮೆಗೆ ಸೈಟು ಕೊಡಿಸೋದಾಗಿ 2 ಲಕ್ಷ ಪಡೆದಿದ್ದರು. ಆದರೆ, ದಾಖಲೆಗಳನ್ನು ಕೇಳಿದಾಗ ಗೊತ್ತಾಗಿದ್ದೇ ಬೇರೆ.

ಆರೋಪಿ ಮಂಜುನಾಥ್ ಯಾರದ್ದೋ ಸೈಟಿನ ದಾಖಲೆಗಳನ್ನು ಕೊಟ್ಟು ಯಾಮಾರಿಸಲು ಹೊರಟಿದ್ದ. ಇದು ಗೊತ್ತಾಗಿದ್ದೇ ತಡ, ಪುಷ್ಪಕುಮಾರ್ ನೇರ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಈಗ ಒಂದು ಕಾಲದ ಸಿನಿಮಾ ನಿರ್ಮಾಪಕ ಮಂಜುನಾಥ್ ಹಾಗೂ ಆತನ ಸಹಚರರಾದ ಶಿವಕುಮಾರ್, ಗೋಪಾಲ್, ಚಂದ್ರಶೇಖರ್‍ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ಮಂಜುನಾಥ್ 2015ರಲ್ಲಿ ಲೊಡ್ಡೆ ಅನ್ನೋ ಸಿನಿಮಾ ನಿರ್ಮಾಣ ಮಾಡಿದ್ದರು. ಕೋಮಲ್ ಹೀರೋ ಆಗಿದ್ದ ಸಿನಿಮಾ ಅದು. ಆ ಸಿನಿಮಾ ಕೂಡಾ 2013ರಲ್ಲಿ ಶುರುವಾಗಿ 2015ರಲ್ಲಿ ಕಂಪ್ಲೀಟ್ ಆಗಿ ರಿಲೀಸ್ ಆಗಿತ್ತು. ಸಿನಿಮಾ ಫ್ಲಾಪ್ ಆಗಿ ಕೋಟ್ಯಂತರ ಲಾಸ್ ಆಗಿತ್ತು. ಆ ಸಿಮಾ ಲಾಸ್ ನಂತರವೇ ಮಂಜುನಾಥ್ ಮೋಸದ ಬಿಸಿನೆಸ್ಸಿಗೆ ಇಳಿದರು ಅನ್ನೋದು ಒಂದು ಆರೋಪ. ಆದರೆ, ಮಂಜುನಾಥ್ ಅವರು ಮೊದಲಿನಿಂದಲೂ ಇಂತಹ ಚೀಟಿಂಗ್ ಮಾಡುತ್ತಿದ್ದರು ಎನ್ನುವುದು ಇನ್ನೊಂದು ಆರೋಪ.

User Rating: 0 / 5

Star inactiveStar inactiveStar inactiveStar inactiveStar inactive

ಕೆಜಿಎಫ್ ಚಾಪ್ಟರ್ ಬರ್ತಿರೋದೇ ದಾಖಲೆ ಮಾಡೋಕೆ ಅನ್ನೋ ಹಾಗೆ ಮುನ್ನುಗ್ತಾನೇ ಇದೆ. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ನಾಗಾಭರಣ, ವಸಿಷ್ಠ ಸಿಂಹ ನಟಿಸಿರೋ ಚಿತ್ರವಿದು. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಆಗಿರೋ ಕಾರಣ ನಿರೀಕ್ಷೆಯೂ ಭಯಂಕರ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಎಂದ ಮೇಲೆ ಭರ್ಜರಿ ಪ್ರಚಾರವೂ ಸಹಜ. ಹೀಗಾಗಿಯೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ ಕೆಜಿಎಫ್ ಚಾಪ್ಟರ್ 2.

ರಿಲೀಸ್ ಆಗುವ ಮೊದಲೇ ವಿದೇಶದಲ್ಲಿ ಅತೀ ಹೆಚ್ಚು ಬುಕ್ಕಿಂಗ್ ಆದ ಸಿನಿಮಾ ಎಂಬ ದಾಖಲೆ ಬರೆದಿರೋದು ಕೆಜಿಎಫ್. ಅಮೆರಿಕವೊಂದರಲ್ಲೇ ವಾರಕ್ಕೂ ಮೊದಲೇ 2 ಕೋಟಿ ಬಿಸಿನೆಸ್ ಆಗಿದೆ.

ವರ್ಸ್ ಮೂಲಕ ಚಿತ್ರದ ಪ್ರಚಾರ ಮಾಡುತ್ತಿರೋ ಮೊದಲ ಸಿನಿಮಾ ಕೆಜಿಎಫ್ ಚಾಪ್ಟರ್ 2. ಹೊಂಬಾಳೆಯವರು ವರ್ಸ್‍ಗಳನ್ನು ರಿಲೀಸ್ ಮಾಡಿದ್ದು, 10 ಸಾವಿರ ಟೋಕನ್ ಬಿಟ್ಟಿದ್ದಾರೆ. ದಾಖಲೆ ವೇಗದಲ್ಲಿ ಎಲ್ಲ ವರ್ಸ್‍ಗಳ ಟೋಕನ್‍ಗಳೂ ಸೇಲ್ ಆಗಿಬಿಟ್ಟಿವೆ.

ಗಗನ ನೀ.. ಭುವನ ನೀ.. ಶಿಖರ ನೀ.. ಹಾಡು 35 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದೂ ದಾಖಲೆಯೇ.

ಇನ್ನು ಯಶ್ & ಟೀಂ ಹೋದಲ್ಲಿ ಬಂದಲ್ಲಿ ಸೇರುತ್ತಿರೋ ಅಭಿಮಾನಿಗಳ ಸೈನ್ಯವನ್ನು ನೋಡೋದೇ ಚೆಂದ.

ಇದರ ಜೊತೆಗೆ ಒಂದು ಸೀಕ್ರೆಟ್ ಏನಂದ್ರೆ ಧೀರ ಧೀರ ಧೀರ ಈ ಸುಲ್ತಾನಾ ಟ್ರ್ಯಾಕ್ ಕೆಜಿಎಫ್ ಚಾಪ್ಟರ್ 2 ಉದ್ದಕ್ಕೂ ಇರಲಿದೆ. ಥೀಮ್ ಸಾಂಗ್ ಹಾಗೂ ಮ್ಯೂಸಿಕ್ ಆಗಿ ಚಿತ್ರದುದ್ದಕ್ಕೂ ಪ್ರಶಾಂತ್ ನೀಲ್ ಬಳಸಿಕೊಂಡಿದ್ದಾರೆ.

User Rating: 0 / 5

Star inactiveStar inactiveStar inactiveStar inactiveStar inactive

ಪುಷ್ಪ ಚಿತ್ರ ರಿಲೀಸ್ ಆಗಿ ಚೆನ್ನಾಗಿ ದುಡ್ಡನ್ನೂ ಮಾಡುತ್ತಿದೆ. ಆದರೆ, ಪುಷ್ಪ ಚಿತ್ರತಂಡ ಕನ್ನಡಿಗರ ಪ್ರೀತಿಗೆ ಘಾಸಿ ಮಾಡಿದ್ದಂತೂ ಸತ್ಯ. ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತೇವೆ ಎಂದ ಪುಷ್ಪ ಚಿತ್ರತಂಡ, ಅದನ್ನು ಕಾಟಾಚಾರಕ್ಕಷ್ಟೇ ಮಾಡಿತ್ತು ಅನ್ನೋದು ಸಾಬೀತಾಗಿತ್ತು. ಪುಷ್ಪ ಚಿತ್ರದ ಪ್ರಚಾರಕ್ಕೆ ಕೊಟ್ಟ ಆಸಕ್ತಿಯನ್ನು ಕನ್ನಡದ ಪುಷ್ಪದ ಬಗ್ಗೆ ನೀಡದೇ ಹೋದಾಗಲೇ ಇದು ಅರ್ಥವಾಗಬೇಕಿತ್ತು.

ಈಗ 83 ಬರುತ್ತಿದೆ. ಸುಮಾರು 50 ಕಡೆ ಕನ್ನಡದ 83 ರಿಲೀಸ್ ಆಗುತ್ತಿದೆ. ಬೆಂಗಳೂರಿನಲ್ಲಿ ಕಡಿಮೆ ಶೋಗಳಿವೆ. ಆದರೆ, ವಿತರಕ ಜಾಕ್ ಮಂಜು ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಡಬ್ಬಿಂಗ್ ಆಗಿ ಬಂದ ಚಿತ್ರಗಳ ಬಗ್ಗೆ ಚಿತ್ರಮಂದಿರದವರೇ ಒಲವು ತೋರಿಸುತ್ತಿಲ್ಲ. ಹೀಗಾಗಿ ಡಬ್ಬಿಂಗ್ ಚಿತ್ರಗಳನ್ನೂ ದೊಡ್ಡ ಮಟ್ಟಕ್ಕೆ ರಿಲೀಸ್ ಮಾಡೋಕೆ ಸ್ವಲ್ಪ ಸಮಯ ಬೇಕು. ಜನ ಮತ್ತು ಮಾಲೀಕರು ಇನ್ನೂ ಒಗ್ಗಿಕೊಂಡಿಲ್ಲ. ಆದರೆ ಜಿಲ್ಲಾ ಮಟ್ಟದಲ್ಲಿ ಒಂದು ಹಿಂದಿ ಮತ್ತು ಒಂದು ಕನ್ನಡ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ. ಅತ್ತ ಆರ್‍ಆರ್‍ಆರ್ ಚಿತ್ರತಂಡ ಕರ್ನಾಟಕದಲ್ಲಿ ಸುಮಾರು 200 ಕಡೆ ಕನ್ನಡದ ಆರ್‍ಆರ್‍ಆರ್ ಬಿಡುಗಡೆಗೆ ಚಿಂತನೆ ಮಾಡಿದೆ.

ಡಬ್ಬಿಂಗ್ ಮಾಡುವುದಷ್ಟೇ ಅಲ್ಲ, ಡಬ್ ಆದ ಚಿತ್ರಗಳ ಕನ್ನಡ ಅವತರಣಿಕೆಯ ಪ್ರಚಾರವನ್ನೂ ಮಾಡಬೇಕು. ಮೂಲ ಚಿತ್ರಗಳನ್ನಷ್ಟೇ ಪ್ರಚಾರ ಮಾಡಿ, ಕನ್ನಡ ಅವತರಣಿಕೆಗೆ ಜನ ಬರಲಿಲ್ಲ ಎಂದರೆ ಏನು ಪ್ರಯೋಜನ? ಪ್ರೆಸ್ ಮೀಟ್ ಮಾಡುವುದಷ್ಟೇ ಪ್ರಚಾರ ಅಲ್ಲವಲ್ಲ...

User Rating: 0 / 5

Star inactiveStar inactiveStar inactiveStar inactiveStar inactive

ಕಿರಿಕ್ ಪಾರ್ಟಿಯಿಂದ ಬೆಳ್ಳಿತೆರೆಗೆ ಬಂದ ರಶ್ಮಿಕಾ ಮಂದಣ್ಣ, ಕನ್ನಡದಲ್ಲಿ ನಟಿಸಿದ್ದು 5 ಸಿನಿಮಾ. ತೆಲುಗಿನಲ್ಲಿ 7 ಹಾಗೂ ತಮಿಳಿನಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಒಟ್ಟಾರೆಯಾಗಿ ನಟಿಸಿರುವುದು 13 ಸಿನಿಮಾ. ಕೈಲಿ ಹಿಂದಿಯ 2 ಹಾಗೂ ತೆಲುಗಿನ 2 ಚಿತ್ರಗಳಿವೆ. ಆದರೆ ಆಕೆಯೀಗ ದ.ಭಾರತದ ಟಾಪ್ 5 ನಟಿಯರಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ಅವರ ಸಂಭಾವನೆ 3 ಕೋಟಿ ದಾಟಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಗೀತ ಗೋವಿಂದಂ ಹಿಟ್ ಆದಾಗಲೂ ಇಂತಹುದೇ ಸುದ್ದಿ ಹರಿದಾಡಿತ್ತು. ಅದೇ ವೇಳೆ ರಶ್ಮಿಕಾ ಮನೆ ಮೇಲೆ ಐಟಿ ರೇಡ್ ಆಗಿತ್ತು. ಆದರೆ ಅಷ್ಟು ದುಬಾರಿ ಸಂಭಾವನೆಯನ್ನು ರಶ್ಮಿಕಾ ನಿರಾಕರಿಸಿದ್ದರು.

ಈಗ ಪುಷ್ಪ ಸೂಪರ್ ಡ್ಯೂಪರ್ ಹಿಟ್ ಆಗಿದೆ. ಹಿಂದೆ ಸರಿಲೇರು ನೀಕೆವ್ವರು ಚಿತ್ರವೂ ಹಿಟ್ ಆಗಿತ್ತು. ಅತ್ತ ತಮಿಳಿನಲ್ಲಿ ಸುಲ್ತಾನ್ ಹಿಟ್ ಆಗಿತ್ತು. ಇದೆಲ್ಲದರಿಂದಾಗಿ ರಶ್ಮಿಕಾ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅನ್ನೋ ಸುದ್ದಿ ಇದೆ.

ಸದ್ಯಕ್ಕೆ ದ.ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವವರ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರೋದು ನಯನತಾರಾ. ಅವರ ಸಂಭಾವನೆ 5 ಕೋಟಿ ದಾಟಿದೆ. ಉಳಿದಂತೆ ಅನುಷ್ಕಾ ಶೆಟ್ಟಿ ರೇಸ್‍ನಲ್ಲಿದ್ದರೂ ಅವರು ರೆಗ್ಯುಲರ್ ಆಗಿ ನಟಿಸುತ್ತಿಲ್ಲ. ಕಾಜಲ್ ಅಗರವಾಲ್ ಮದುವೆಯಾಗಿದ್ದಾರೆ. ತಮನ್ನಾ ಭಾಟಿಯಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ, ಪೂಜಾ ಹೆಗಡೆ ರೇಸ್‍ನಲ್ಲಿದ್ದಾರೆ. ಸದ್ಯಕ್ಕೆ ತೆಲುಗಿನ ಮಟ್ಟಿಗೆ ಪೂಜಾ ಹೆಗಡೆ ಮತ್ತು ರಶ್ಮಿಕಾ ಮಂದಣ್ಣ ನಡುವೆ ಸಂಭಾವನೆ ವಿಚಾರದಲ್ಲಿ ಪೈಪೋಟಿ ಇದೆ.

User Rating: 0 / 5

Star inactiveStar inactiveStar inactiveStar inactiveStar inactive

ಭಜರಂಗಿ 2 ಚಿತ್ರ ರಿಲೀಸ್ ಆದ ದಿನವೇ ಶಿವಣ್ಣ ಎದುರಿಸಿದ ಜೀವನದ ಅತಿ ದೊಡ್ಡ ಆಘಾತ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ. 2020ರ ಬಹುನಿರೀಕ್ಷಿತ ಚಿತ್ರವಾಗಿದ್ದ ಭಜರಂಗಿ 2, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಅಪ್ಪು ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದು ಶೋ ನಿಲ್ಲಿಸಿತು. ಅಂತ್ಯ ಸಂಸ್ಕಾರ ಮುಗಿದ ನಂತರ ಶೋಗಳು ಮತ್ತೆ ಶುರುವಾಗಿ ಚಿತ್ರವೀಗ 3ನೇ ವಾರಕ್ಕೆ ಕಾಲಿಟ್ಟಿದೆ. ಅಪ್ಪು ನಿಧನದ ನಂತರ ಚೇತರಿಸಿಕೊಂಡಿರೋ ಶಿವಣ್ಣ, ಭಜರಂಗಿ 2 ಚಿತ್ರವನ್ನು ಅಭಿಮಾನಿಗಳ ಜೊತೆ ವೀಕ್ಷಿಸಿದ್ದಾರೆ.

ಅನುಪಮಾ ಚಿತ್ರಮಂದಿರದಲ್ಲಿ ಸಿನಿಮಾ ನೋಡುವಾಗ ಶಿವಣ್ಣಗೆ ಚಿತ್ರ ರಿಲೀಸ್ ಆಗುವುದಕ್ಕೆ ಎರಡು ದಿನ ಮುಂಚೆ ಭಜರಂಗಿ 2 ಚಿತ್ರದ ಈವೆಂಟ್‍ನಲ್ಲಿಯೇ ತಮ್ಮೊಂದಿಗೆ ಹಾಡಿ ಕುಣಿದಿದ್ದ ತಮ್ಮ ನೆನಪಾದರೇನೋ.. ಶೋ ಮುಗಿದ ಮೇಲೆ ಮಾತನಾಡಿದ ಶಿವಣ್ಣ, ಅಪ್ಪುಗೆ ಈ ಚಿತ್ರವನ್ನು ನೋಡಬೇಕು ಎಂಬ ಆಸೆಯಿತ್ತು ಎಂದು ಹೇಳಿಕೊಂಡರು. ಮೃತಪಟ್ಟ ಆ ದಿನ.. ಅಕ್ಟೋಬರ್ 29ರಂದೇ ಸಿನಿಮಾ ನೋಡುವ ಸಲುವಾಗಿ ಚಿತ್ರವನ್ನು ಮನೆಯಲ್ಲಿಯೇ ಅಪ್‍ಲೋಡ್ ಮಾಡಿಸಿಕೊಂಡಿದ್ದರಂತೆ. ಚಿತ್ರದ ಮೇಕಿಂಗ್‍ನ್ನು ಅಪ್ಪು ಬಹಳ ಇಷ್ಟಪಟ್ಟಿದ್ದರಂತೆ.

ಚಿತ್ರದಲ್ಲಿ ಶಿವಣ್ಣಗೆ ಇಷ್ಟವಾಗಿದ್ದು ಚಿತ್ರದ ಮೇಕಿಂಗ್ ಮತ್ತು ತಾಂತ್ರಿಕತೆ. ನಟನೆಯಲ್ಲಿ ಲೋಕಿ, ಚೆಲುವರಾಜು ಸೇರಿದಂತೆ ಎಲ್ಲ ವಿಲನ್‍ಗಳ ನಟನೆ. ಸಿನಿಮಾ ನೋಡುವಾಗ ಚಿತ್ರಮಂದಿರದಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳು ಶಿವಣ್ಣಗೆ ಸಾಂತ್ವನ ಹೇಳಿದ್ದು ಹೃದಯ ಕಲಕುವಂತಿತ್ತು.