ನಿಖಿಲ್ ಕುಮಾರಸ್ವಾಮಿ ಮದುವೆ ಬಗ್ಗೆ ಎದ್ದಿರುವ ಗಾಸಿಪ್ಪುಗಳಿಗೆ ಸ್ವತಃ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಹುಟ್ಟುಹಬ್ಬದ ದಿನವೇ ಎದುರಾದ ಪ್ರಶ್ನೆಗೆ ನೇರಾನೇರವಾಗಿ ಉತ್ತರ ಕೊಟ್ಟಿದ್ದಾರೆ ನಿಖಿಲ್.
ಮದುವೆ ಸುದ್ದಿಯನ್ನು ಸದ್ಯದಲ್ಲೇ ಹೇಳುತ್ತೇವೆ. ಈಗ ಹಬ್ಬಿರುವ ಸುದ್ದಿಗಳೆಲ್ಲ ಸುಳ್ಳು. ಒಂದು ವರ್ಷದಿಂದ ಮನೆಯಲ್ಲಿ ಸೀರಿಯಸ್ ಅಗಿ ಹುಡುಗಿಯನ್ನು ನೋಡುತ್ತಿದ್ದಾರೆ ಎನ್ನುವ ನಿಖಿಲ್, ನಾನು ಮದುವೆಯಾಗುವ ಹುಡುಗಿ ಕನ್ನಡದವಳು. ಸಂಸ್ಕøತಿ, ಆಚಾರ ವಿಚಾರ ತಿಳಿದುಕೊಂಡಿರುವ ಹುಡುಗಿ. ಆಕೆಗೂ ಸಿನಿಮಾ ಇಂಡಸ್ಟ್ರಿಗೂ ಪರಿಚಯವೇ ಇಲ್ಲ ಎನ್ನುತ್ತಾರೆ.
ಒಟ್ಟಿನಲ್ಲಿ ನಾನು ಸಿನಿಮಾ ಹುಡುಗಿಯನ್ನು ಮದುವೆಯಾಗುತ್ತಿಲ್ಲ ಎಂದಿರುವ ನಿಖಿಲ್, ಈ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.