` ರಾಜಾಹುಲಿ ಹರ್ಷನ ಹೀರೋಯಿಸಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rajahuli fame harsha
Raghuveer Movie Poster

ಹರ್ಷ. ಹಾಗೆಂದರೆ ಯಾರು ಅನ್ನೋವ್ರಿಗೆ ರಾಜಾಹುಲಿಯ ಯಶ್ ಸ್ನೇಹಿತ ಹರ್ಷ ಎಂದರೆ ಕಣ್ಣರಳಿಸ್ತಾರೆ. ಅದೇ.. ಮೇಘನಾ ರಾಜ್‍ಗೆ ಕಾಳ್ ಹಾಕ್ತಾ ಇರ್ತಾನಲ್ಲ.. ಅವನು ತಾನೇ ಅಂತಾರೆ. ಅಷ್ಟರಮಟ್ಟಿಗೆ ರಾಜಾಹುಲಿಯಿಂದ ವಿಶೇಷ ಇಮೇಜ್ ಗಿಟ್ಟಿಸಿಕೊಂಡವರು ಹರ್ಷ. ಈ ವಾರ ಅವರೇ ನಾಯಕರಾಗಿರುವ ರಘುವೀರ ತೆರೆಗೆ ಬರುತ್ತಿದೆ.

ನಾಯಕನಾಗಿ ಈಗಾಗಲೇ ಗಜಪಡೆ ಅನ್ನೋ ಸಿನಿಮಾದಲ್ಲಿ ನಟಿಸಿರುವ ಹರ್ಷ ಅವರಿಗೆ ಇದು ವಿಭಿನ್ನ ಪ್ರಯತ್ನ. ಮಂಡ್ಯದ ಲವ್‍ಸ್ಟೋರಿಯ ಸಿನಿಮಾ ಮೂಲಕವೇ ಚಿತ್ರರಂಗದಲ್ಲಿ ಗುರುತಿಸಿಕೊಂಡ ಹರ್ಷ, ಈ ಬಾರಿ ಜಿಮ್ ರಘುವಿನ ದುರಂತ ಪ್ರೇಮಕಥೆಗೆ ಹೀರೋ ಆಗಿದ್ದಾರೆ. 

ಪ್ರೇಯಸಿಯ ಮದುವೆಗೆ ಶುಭ ಕೋರಲು ಹೋಗಿ, ಹುಡುಗಿಯವರ ಮನೆಯವರ ದಾಳಿಗೆ ಕಣ್ಣು ಕಳೆದುಕೊಂಡಿದ್ದ ಜಿಮ್ ರಘುವಿನ ಕಥೆಯೇ ರಘುವೀರ ಸಿನಿಮಾ. ಚಿತ್ರಕ್ಕೆ ನಾಯಕಿಯಾಗಿರೋದು ಧೇನು ಅಚ್ಚಪ್ಪ. ಅವರೇ ಚಿತ್ರದ ನಿರ್ಮಾಪಕಿಯೂ ಹೌದು. ಹೊಸಬರ ಈ ಪ್ರಯತ್ನಕ್ಕೆ ಪ್ರೇಕ್ಷಕರ ಆಶೀರ್ವಾದ ಎದುರು ನೋಡುತ್ತಿದೆ ರಘುವೀರ ಟೀಂ

16 Years To Majestic Gallery

Valentine Special Gallery