` ಅನುಪಮಾ ಗೌಡಗೆ ಆಫರ್‍ಗಳ ಸುರಿಮಳೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
big boss contestant anupama gowda
Anupama Gowda Image

`ಅಕ್ಕ' ಧಾರಾವಾಹಿ ಖ್ಯಾತಿಯಿಂದ ಬಿಗ್‍ಬಾಸ್‍ಗೆ ಹೋದ ಅನುಪಮಾ ಗೌಡ, ಬಿಗ್‍ಬಾಸ್‍ನಿಂದ ಹಿರಿತೆರೆಯಲ್ಲಿ ರಾಜ್ಯಭಾರವನ್ನೇ ಮಾಡುವಷ್ಟು ಬ್ಯುಸಿಯಾಗುತ್ತಿದ್ದಾರೆ. ಬಿಗ್‍ಬಾಸ್ ಮನೆಯಿಂದ ಹೊರಬಂದಿದ್ದ ನಿರ್ದೇಶಕ ದಯಾಳ್, ಮೊದಲೇ ಪ್ರಕಟಿಸಿದ್ದಂತೆ ತಮ್ಮ `ಆ ಕರಾಳ ರಾತ್ರಿ' ಸಿನಿಮಾಗೆ ಅನುಪಮಾ ಗೌಡರನ್ನು ನಾಯಕಿಯನ್ನಾಗಿಸಿದ್ದಾರೆ. ಜೆಕೆ ಅಲಿಯಾಸ್ ಜಯಕಾರ್ತಿಕ್ ಚಿತ್ರದ ಹೀರೋ. ಹೆಸರಿಗೆ ತಕ್ಕಂತೆ ಅದು ಹಾರರ್ ಸಿನಿಮಾ.

ಇದರ ಜೊತೆಗೆ ಕನ್ನಡದ ಸ್ಟಾರ್ ನಟರೊಬ್ಬರ ಚಿತ್ರ ಹಾಗೂ ತಮಿಳು ಚಿತ್ರರಂಗದ ಸ್ಟಾರ್ ನಟರೊಬ್ಬರ ಚಿತ್ರಕ್ಕೆ ಆಫರ್ ಬಂದಿದೆಯಂತೆ. ಸ್ಟಾರ್ ನಟರ ಚಿತ್ರಗಳೇ ಆದ್ದರಿಂದ ತಾವು ಇನ್ನೂ ಒಂದಷ್ಟು ಕಾಲ ಸಿನಿಮಾದಲ್ಲಿ ಬ್ಯುಸಿ ಎಂದು ಹೇಳಿಕೊಂಡಿದ್ದಾರೆ ಅನುಪಮಾ ಗೌಡ. ಹಾಗೆಂದು ಕಿರುತೆರೆಯನ್ನೇನೂ ಬಿಡುವುದಿಲ್ಲ. ಒಳ್ಳೆಯ ಆಫರ್ ಬಂದರೆ, ಕಿರುತೆರೆಯಲ್ಲೂ ನಟಿಸುತ್ತೇನೆ ಎಂದಿದ್ದಾರೆ.

16 Years To Majestic Gallery

Valentine Special Gallery